ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರ ಕಿರು ಚಿತ್ರಣ
ವಿಜಯ ನಗರಕ್ಕೆ ಭೇಟಿ ಇತ್ತ ವಿದೇಶಿ ಪ್ರವಾಸಿಗರ ಕಿರು ಚಿತ್ರಣ
★ ನಿಕೋಲೋ ಕಾಂಟಿ :
ಇಟಲಿಯ ವೇನಿಷಿಯಾದವನು ಇವನು ಒಂದನೇ ದೇವರಾಯನ ಆಸ್ಥಾನಕ್ಕೆ ಕ್ರಿ.ಶ1420 ರಲ್ಲಿ ಭೇಟಿ ನೀಡಿದನು ಇವನು ತನ್ನ ಪುಸ್ತಕದಲ್ಲಿ ವಿಜಯ ನಗರದಲ್ಲಿ ಆಚರಿಸುತ್ತಿದ್ದ ದೀಪಾವಳಿ ಮತ್ತು ಮಹಾ ನವಮಿ ಬಗ್ಗೆ ಬರೆದಿದ್ದಾನೆ
★ ಅಬ್ದುಲ್ ರಜಾಕ್ :
ಅಬ್ದುಲ್ ರಜಾಕ್ ಪರ್ಶಿಯಾದವನು ಎರಡನೇ ದೇವರಾಯನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು ಇವನು “ದಿ ಹಿಸ್ಟರಿ ಆಫ್ ಪರ್ಶಿಯಾ” ಎಂಬ ಪುಸ್ತಕವನ್ನು ರಚಿಸಿದ್ದಾನೆ ಇವನು ವರ್ಣಿಸಿದಂತೆ
“ವಿಜಯನಗರದತಂಹ ಸಾಮ್ರಾಜ್ಯವನ್ನು ಕಣ್ಣು ನೋಡಿಲ್ಲ ಕಿವಿ ಕೇಳಿಲ್ಲ ” ಎಂದು ವರ್ಣಿಸಿದ್ದಾನೆ
★ ನಿಕಟಿನ್ :
ರಷ್ಯಾದ ವರ್ತಕ ನಿಕಟಿನ್ ವಿರೂಪಾಕ್ಷನ ಆಸ್ಥಾನಕ್ಕೆ ಕ್ರಿ.ಶ 1570 ರಲ್ಲಿ ಭೇಟಿ ಕೊಟ್ಟ ಇವನು ಬಹುಮನಿ ಸಾಮ್ರಾಜ್ಯ ಮತ್ತು ವಿಜಯನಗರ ಸಾಮ್ರಾಜ್ಯಗಳ ನಿರಂತರ ಕಲಹಗಳ ಬಗ್ಗೆ ವರ್ಣಿಸಿದ್ದಾನೆ
★ಡುರೇಟ್ ಬಾರ್ಬೋಸ :
ಪೊರ್ಚುಗಲ್ ವರ್ತಕನಾಗಿ ಕ್ರಿ.ಶ 1525 ರಲ್ಲಿ ಶ್ರೀ ಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ಕೊಟ್ಟ
★ ಡೊಮಿಂಗೋ ಪೇಸ್ :
ಕ್ರಿ.ಶ ೧೫೨೬ ರಲ್ಲಿ ಶ್ರೀ ಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ಇತ್ತ ಅವನ ದಾಖಲೆಗಳು ವಿಜಯ ನಗರ ಇತಿಹಾಸವನ್ನು ಅರಿಯಲು ಸಹಾಯಕವಾಗಿವೆ ಅವನು ಅರಸರ ವ್ಯಕ್ತಿತ್ವ ವೇಷ ಭೂಷಣ ಅರಮನೆ ಬಗ್ಗೆ ವರ್ಣಿಸಿದ್ದಾನೆ ಇವನ ರಾಜಧಾನಿ ರೋಮ್ ನ್ನು ಹೋಲುತ್ತದೆ ಎಂದು ವರ್ಣಿಸಿದ್ದಾನೆ
★ ನ್ಯೂನಿಜ್ :
ಪೂರ್ಚುಗಲ್ ಪ್ರವಾಸಿಗ ಕ್ರಿ.ಶ ೧೫೩೫ ರಲ್ಲಿ ಅಚ್ಯುತ ರಾಯನ ಆಸ್ಥಾನಕ್ಕೆ ಭೇಟಿ ನೀಡಿದನು ಇವನು ಮಹಾ ನವಮಿ ಮತ್ತು ಧರ್ಮ ಸಹಿಷ್ಣತೆ ಬಗ್ಗೆ ವರ್ಣಿಸಿದ್ದಾರೆ
★ ಫೆಡ್ರಿಕ್ ಸೀಜರ್ :
ಈತ ಇಟಲಿಯ ಪ್ರವಾಸಿಗ ಕ್ರಿ.ಶ ೧೫೬೭ ರಲ್ಲಿ ಹಂಪಿಗೆ ಭೇಟಿ ನೀಡಿದನು ತಾಳಿಕೋಟೆ ಕದನ ನಂತರ ಭೇಟಿ ನೀಡಿದನು ಯುದ್ದದ ನಂತರ ಹಂಪಿ ಹುಲಿ ಜಿಂಕೆ ಸಿಂಹ ಇತ್ಯಾದಿ ಕಾಡು ಮೃಗಗಳ ವಾಸವಾಗಿದ್ದುವೆಂದು ಅದು ಹಾಳು ಕೊಂಪೆಯಾಗಿತ್ತೆಂದು ವರ್ಣಿಸಿದ್ದಾನೆ