ಇಂದಿನ ಪ್ರಚಲಿತ ವಿದ್ಯಮಾನಗಳ ಹೈಲೈಟ್ಸ್ / 30-05-2021

ಇಂದಿನ ಪ್ರಚಲಿತ ವಿದ್ಯಮಾನಗಳ ಹೈಲೈಟ್ಸ್ / 30-05-2021

# ಮೇರಿ ಕೋಮ್ ಗೆ ಬೆಳ್ಳಿ :
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆಜಿ) ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಮೇರಿ ಫೈನಲ್ಸ್ ನಲ್ಲಿ ಕಝಕಿಸ್ಥಾನದ ನಾಜಿಮ್ ಕಿಜೈಬೇ ವಿರುದ್ಧ ಸೋಲುಂಡು ರಜತ ಪದಕ ಗಳಿಸಿಕೊಂಡಿದ್ದಾರೆ. ಅವರು 2-3 ತೀರ್ಪಿನಿಂದ ಸೋಲುಂಡರು. ಇದು ಪಂದ್ಯಾವಳಿಯಲ್ಲಿ ಮೇರಿ ಪಾಲಿಗೆ ಏಳನೇ ಪದಕವಾಗಿದೆ, 2003ರ ಆವೃತ್ತಿಯಲ್ಲಿ ಬಂದ ಚಿನ್ನದ ಪದಕ ಇವರ ಮೊದಲ ಪದಕವಾಗಿತ್ತು.

# ಕೇರಳ ಮೂಲದ ವಿದ್ಯಾರ್ಥಿಗೆ ಯುಎಇ ಗೋಲ್ಡನ್‌ ವೀಸಾ
ಕೇರಳ ಮೂಲದ ತಸ್ನೀಮ್‌ ಅಸ್ಲಾಂ ಎಂಬ ವಿದ್ಯಾರ್ಥಿಗೆ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ಸರ್ಕಾರ ನೀಡುವ ಗೋಲ್ಡನ್‌ ವೀಸಾ ಸಿಕ್ಕಿದೆ. ಅದರ ಅವಧಿ ಹತ್ತು ವರ್ಷಗಳು. ಹೀಗಾಗಿ, ಅವರಿಗೆ 2031ರ ವರೆಗೆ ಕೊಲ್ಲಿ ರಾಷ್ಟ್ರದಲ್ಲಿ ವಾಸ್ತವ್ಯ ಹೂಡಲು ಅವಕಾಶ ಸಿಕ್ಕಿದೆ. ಅಲ್‌ ಖಾಸಿಮಿಯಾ ವಿವಿಯಲ್ಲಿ ತಸ್ನೀಮ್‌ ಅವರು ಇಸ್ಲಾಮಿಕ್‌ ಶರಿಯಾವನ್ನು ಅಧ್ಯಯನ ಮಾಡಿ, ತರಗತಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು.

72 ರಾಷ್ಟ್ರಗಳ ವಿದ್ಯಾರ್ಥಿಗಳ ಪೈಕಿ ಕೇರಳ ಮೂಲದ ವಿದ್ಯಾರ್ಥಿಗೆ 4ರ ಪೈಕಿ 3.94 ಶ್ರೇಯಾಂಕ ಬಂದಿದೆ. ಜಗತ್ತಿನ ಪ್ರಮುಖ ವ್ಯಕ್ತಿಗಳು, ಉದ್ಯಮಪತಿಗಳು, ರಾಜತಾಂತ್ರಿಕರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ವೈದ್ಯರಿಗೆ, ಸಂಶೋಧಕರಿಗೆ, ಕಲಾವಿದರಿಗೆ ಇಂಥ ಸವಲತ್ತು ನೀಡಲಾಗುತ್ತದೆ. ಅತ್ಯುತ್ತಮ ಸಾಧನೆ ಮಾಡಿದ ಶಾಲೆ ಮತ್ತು ವಿವಿ ವಿದ್ಯಾರ್ಥಿಗಳಿಗೆ ಐದು ವರ್ಷಗಳ ಅವಧಿಯ ವೀಸಾ ನೀಡಲಾಗುತ್ತದೆ. ಬಾಲಿವುಡ್‌ ನಟ ಸಂಜಯ ದತ್‌ಗೆ ಇದೇ ಸೌಲಭ್ಯ ನೀಡಲಾಗಿತ್ತು. ಆಟೋಮ್ಯಾಟಿಕ್​ ಆಗಿ ನವೀಕರಿಸಲ್ಪಡುವ 5 ಅಥವಾ 10 ವರ್ಷಗಳ ಗೋಲ್ಡನ್ ವೀಸಾವನ್ನು 2019 ರಿಂದ ಯುಎಇ ಸರ್ಕಾರ ಪ್ರದಾನಿಸುತ್ತಿದೆ. ಈ ದೀರ್ಘಕಾಲೀನ ವಸತಿ ವೀಸಾಗಳು ವಿದೇಶೀಯರು ನ್ಯಾಷನಲ್ ಸ್ಪಾನ್ಸರ್​ ಇಲ್ಲದೆ ಯುಎಇಯಲ್ಲಿ ನೆಲೆಸಲು, ಕೆಲಸ ಮಾಡಲು ಮತ್ತು ಅಧ್ಯಯನ ಕೈಗೊಳ್ಳಲು ಅವಕಾಶ ನೀಡುತ್ತವೆ. ಹೆಚ್ಚಾಗಿ ಯುಎಇಯಲ್ಲಿ ವಾಸಿಸುವ ಅವಕಾಶಕ್ಕೆ ಬದಲಿಯಾಗಿ ಭಾರೀ ಹೂಡಿಕೆ ಮಾಡುವಂಥ ಶ್ರೀಮಂತರಿಗೇ 10 ವರ್ಷದ ಗೋಲ್ಡನ್​ ವೀಸಾ ನೀಡಲಾಗುತ್ತದೆ.

# ಜಗತ್ತಿನ ಅತಿ ದೊಡ್ಡ ಭೂಬರಹ ಪತ್ತೆ :
ಜಗತ್ತಿನಲ್ಲೇ ಅತಿ ದೊಡ್ಡ ಭೂಬರಹ ಎನ್ನಲಾದ ರಚನೆಯೊಂದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ನೆಲದ ಮೇಲೆ ಮಾನವನ ಕೈಗಳಿಂದ ರಚಿತವಾದ ಚಿತ್ರಗಳು ಅಥವಾ ಲಿಪಿಗಳನ್ನು ಭೂಬರಹಗಳು ಎನ್ನಬಹುದಾಗಿದೆ. ಥಾರ್‌ ಮರುಭೂಮಿಯಲ್ಲಿ ಪತ್ತೆ ಮಾಡಲಾದ ನಿಗೂಢ ಭೂಚಿತ್ರವೊಂದು 1,00,000 ಚದರ ಮೀಟರ್‌ ವಿಸ್ತಾರವಿದೆ. ಈ ರಚನೆಯು ಪೆರುವಿನ ನಜ್ಕಾ ಮರುಭೂಮಿಯಲ್ಲಿರುವ ಭೂಬರಹಕ್ಕಿಂತ ಬಹಳ ದೊಡ್ಡದಾಗಿದೆ.

ಈ ಭಾರೀ ರಚನೆಗಳನ್ನು ಫ್ರಾನ್ಸ್‌ನ ಲಾರಿಕ್‌ನಲ್ಲಿ ನೆಲೆಸಿರುವ ಕಾರ್ಲೋ ಹಾಗೂ ಅವರ ಪುತ್ರ ಯೋಹಾನ್ ಒಟ್‌ಹೈಮರ್‌ ಶೋಧಿಸಿದ್ದಾರೆ. ಗೂಗಲ್ ಅರ್ತ್‌ ಸಹಾಯದಿಂದ ಈ ಭೂಚಿತ್ರಗಳ ಎಂಟು ನಿವೇಶನಗಳನ್ನು ಪತ್ತೆ ಮಾಡಿರುವ ಕಾರ್ಲೊ, ಸಂಭವನೀಯ ನಿವೇಶನಗಳ ಮೇಲೆ ಡ್ರೋನ್ ಹಾರಿಸಿ ಸ್ಥಳಾಧ್ಯಾಯನ ಮಾಡಿದ್ದಾರೆ. ಬೋಹಾ ಎಂಬ ಊರಿನಲ್ಲಿ ಕಂಡು ಬಂದ ಈ ಭೂಚಿತ್ರಗುಚ್ಛವು ಒಟ್ಟಾರೆ 30 ಮೈಲಿಯಷ್ಟು ಉದ್ದವಿದೆ. ಇವುಗಳ ಪೈಕಿ ಅತಿ ದೊಡ್ಡ ಭೂಚಿತ್ರವೆಂದರೆ ಬೋಹಾ. ಇದೊಂದೇ 7.5 ಮೈಲಿ ಉದ್ದವಿದೆ.

# ಭಾರತಕ್ಕೆ ಆಹಾರ ಉತ್ಪನ್ನ ದೇಣಿಗೆ ನೀಡಿದ ಕೀನ್ಯಾ
ಕೀನ್ಯಾ ತನ್ನ ಕೋವಿಡ್ -19 ಪರಿಹಾರ ಕಾರ್ಯಗಳ ಭಾಗವಾಗಿ ಭಾರತಕ್ಕೆ 12 ಟನ್ ಆಹಾರ ಉತ್ಪನ್ನಗಳನ್ನು ದಾನ ಮಾಡಿದೆ.ಪೂರ್ವ ಆಫ್ರಿಕಾದ ದೇಶವು ಸ್ಥಳೀಯವಾಗಿ ಉತ್ಪಾದಿಸುವ 12 ಟನ್ ಚಹಾ, ಕಾಫಿ ಹಾಗೂ ನೆಲಗಡಲೆಯನ್ನು ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಕಳುಹಿಸಿದ್ದು, ಆಹಾರ ಪ್ಯಾಕೆಟ್‌ಗಳನ್ನು ಮಹಾರಾಷ್ಟ್ರದಾದ್ಯಂತ ವಿತರಿಸಲಾಗುವುದು ಎಂದು ಸೊಸೈಟಿ ಹೇಳಿದೆ.

# ಚಿಂಪಾಂಜಿಗಳ ಕುರಿತ ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ :
ಚಿಂಪಾಂಜಿಗಳು ತಮ್ಮ ಸಮೂಹದಲ್ಲಿ ಇರುವ ವೇಳೆ ಮಾನವರಂತೆಯೇ ಕೈಕುಲುಕುವ ಅಭ್ಯಾಸ ರೂಢಿಸಿಕೊಂಡಿವೆ ಎಂದು 12 ವರ್ಷಗಳ ಮಟ್ಟಿಗೆ ಈ ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನದ ವರದಿಯೊಂದು ತಿಳಿಸಿದೆ. ಚಿಂಪಾಂಜಿಗಳು ಮಾನವರೊಂದಿಗೆ ಬಹಳಷ್ಟು ಸಾಮ್ಯತೆ ಹೊಂದಿರುವ ಜೀವಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸಲಕರಣೆಗಳನ್ನು ಬಳಸುವಂಥ ಕ್ಲಿಷ್ಟಕರ ಕೆಲಸಗಳನ್ನು ಮಾಡುವ ಚಿಂಪಾಂಜಿಗಳು ಮಾನವರನ್ನು ಚೆನ್ನಾಗಿ ಅನುಕರಣೆ ಮಾಡುತ್ತವೆ.

ಇದೀಗ ಈ ಜೀವಿಗಳ ಮೇಲೆ 12 ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿರುವ ಆಂಟ್ವರ್ಪ್ ವಿವಿಯ ಪ್ರಾಣಿ ತಜ್ಞ ಎಡ್ವಿನ್ ವಾನ್ ಲ್ಯೂವೆನ್, “ಭಿನ್ನ ಗುಂಪುಗಳಲ್ಲಿರುವ ಚಿಂಪಾಜಿಗಳು ಭಿನ್ನವಾದ ರೀತಿಯಲ್ಲಿ ಕೈ ಕುಲುಕುವುದನ್ನು ಕಲಿಯುತ್ತವೆ. ತಮ್ಮ ಗುಂಪುಗಳಲ್ಲಿ ಹೀಗೆ ಸೋಷಿಯಲ್ ಆಗಿರುವುದನ್ನು ಚಿಂಪಾಂಜಿಗಳು ಕಲಿಯುತ್ತವೆ” ಎಂದಿದ್ದಾರೆ. “ಕೈಕುಲುಕುವುದು ಇಬ್ಬರು ವ್ಯಕ್ತಿಗಳು ಎಂಗೇಜ್ ಆಗಿ ಸಂವಹನ ಮಾಡುವ ವೇಳೆ ಸೂಕ್ತವಾಗಿ ಕಾಣುತ್ತವೆ. ಚಿಂಪಾಂಜಿಗಳು ಸಹ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುತ್ತವೆ. ಮಾನವರಲ್ಲಿ ಇರುವ ವರ್ತನೆಯು ಸಾಂಸ್ಕೃತಿಕವಾಗಿ ಬಂದಿರುವ ಹಾಗೆಯೇ ಚಿಂಪಾಂಜಿಗಳಲ್ಲೂ ಬಂದಿದೆ” ಎಂದು ಲ್ಯೂವೆನ್ ತಿಳಿಸಿದ್ದಾರೆ.

# ವಿಶ್ವದ ಅತಿದೊಡ್ಡ ಮ್ಯೂಸಿಯಂಗೆ ಮೊದಲ ಮಹಿಳಾ ಅಧ್ಯಕ್ಷರ ನೇಮಕ
228 ವರ್ಷಗಳಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾದ ಮ್ಯೂಸಿ ಡು ಲೌವ್ರೆ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಕಲಾ ಇತಿಹಾಸಕಾರ ಲಾರೆನ್ಸ್ ಡೆಸ್ ಕಾರ್ಸ್ ಅವರನ್ನು ನೇಮಕ ಮಾಡಲಾಗಿದೆ. ಮೇ 28, 2021 ರಂದು ಲಾರೆನ್ಸ್ ಡೆಸ್ ಕಾರ್ಸ್ ಅವರನ್ನು ಮ್ಯೂಸಿ ಡು ಲೌವ್ರೆ ಅವರ ಮೊದಲ ಮಹಿಳಾ ಅಧ್ಯಕ್ಷರಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನೇಮಕ ಮಾಡಿದರು.

ಲಾರೆನ್ಸ್ ಡೆಸ್ ಕಾರ್ಸ್, 54, ಪ್ರಸ್ತುತ 19 ನೇ ಶತಮಾನದ ಕಲೆಗೆ ಮೀಸಲಾಗಿರುವ ಪ್ಯಾರಿಸ್ ಹೆಗ್ಗುರುತು ವಸ್ತುಸಂಗ್ರಹಾಲಯದ ಮ್ಯೂಸಿ ಡಿ’ಓರ್ಸೆಗೆ ಮುಖ್ಯಸ್ಥರಾಗಿದ್ದಾರೆ. ಮ್ಯೂಸಿ ಡು ಲೌವ್ರೆ ಫ್ರೆಂಚ್ ರಾಜ್ಯಕ್ಕೆ ಸೇರಿದೆ. ವಸ್ತುಸಂಗ್ರಹಾಲಯವು 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಮತ್ತು ವಾರ್ಷಿಕ 240 ಮಿಲಿಯನ್ ಯುರೋಗಳಷ್ಟು (1 291 ಮಿಲಿಯನ್) ಬಜೆಟ್ ಹೊಂದಿದೆ.

# ಇವುಗಳನ್ನೂ ಓದಿ…
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 

# ಇತಿಹಾಸದ ಪ್ರಮುಖ ವ್ಯಕ್ತಿಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್

# ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು
# ಕೃತಕ ಉಪಗ್ರಹಗಳು ಮತ್ತು ವಿಧಗಳು
# ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
# ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
# ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ