ಮಂದಗಾಮಿಗಳ ಯುಗ – ತೀವ್ರಗಾಮಿಗಳ ಯುಗ

ಮಂದಗಾಮಿಗಳ ಯುಗ – ತೀವ್ರಗಾಮಿಗಳ ಯುಗ

   ಮಂದಗಾಮಿಗಳ ಯುಗ (1885- 1905)
#  ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಆರಂಭಿಕ ನಾಯಕರುಗಳನ್ನು ಮಂದಗಾಮಿಗಳು (ಸೌಮ್ಯವಾದಿಗಳು) ಎಂದು ಕರೆಯಲಾಗಿದೆ. ಅವರು ಸಂವಿಧಾನಾತ್ಮಕ ನೀತಿಯಲ್ಲಿ ನಂಬಿಕೆಯಿರಿಸಿದ್ದರು. ಬ್ರಿಟಿಷ್ ಆಳ್ವಿಕೆಗೆ ನಿಷ್ಠಾವಂತರಾದ ಅವರು ಪ್ರಾರ್ಥನೆ, ಬಿನ್ನಹ ಮತ್ತು ಪ್ರತಿಭಟನೆಯ ನೀತಿಯನ್ನು ಅನುಸರಿಸಿದರು. ಜೊತೆಗೆ ಬ್ರಿಟಿಷರ ಮನವೊಲಿಸಲು ಪ್ರಯತ್ನಿಸಿದರು.

#  ಪ್ರಮುಖ ಮಂದಗಾಮಿ ನಾಯಕರೆಂದರೆ- ದಾದಾಬಾಯ್ ನವರೋಜಿ, ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ ಮತ್ತು ಇನ್ನಿತರರು.
#  ಮಂದಗಾಮಿಗಳ ಹೋರಾಟದ ಫಲವಾಗಿ ಭಾರತೀಯರು ಶಾಸನಸಭೆಗಳನ್ನು ಪ್ರವೇಶಿಸಲು ಸಾಧ್ಯವಾಯಿತು.
#  ಮಂದಗಾಮಿಗಳ ಬೇಡಿಕೆ ಏನೆಂದರೆ ವಾಕ್ ಮತ್ತು ಮುದ್ರಣ ಸ್ವಾತಂತ್ರ್ಯ, ಕಾರ್ಯಾಂಗದಿಂದ ನ್ಯಾಯಾಂದ ಬೇರ್ಪಡೆ, ಸೈನಿಕ ವೆಚ್ಚದ ಕಡಿತ, ಪ್ರಾಥಮಿಕ ಮತ್ತು ಫ್ರೌಢ ತಾಂತ್ರಿಕ ಶಿಕ್ಷಣದ ಅನುಷ್ಠಾನ, ಉನ್ನತ ಹುದ್ದೆಗಳಲ್ಲಿ ಭಾರತೀಯರನ್ನು ನೇಮಿಸುವುದು, ಬ್ಯಾಕಿಂಗ್, ನೀರಾವರಿ, ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು .

     ತೀವ್ರಗಾಮಿಗಳ ಯುಗ (1905- 1919)
ಮಂದಗಾಮಿಗಳು ಸಾಮಾನ್ಯ ಜನತೆಯನ್ನು ತಲುಪಲಿಲ್ಲ. ಅವರು ಅನುಸರಿಸಿದ ಪ್ರಾರ್ಥನೆ ಮತ್ತು ಮನವಿ ನೀತಿಗಳನ್ನು “ತಿರುಪೆಯ ನೀತಿ” (ಫಾಲಿಸಿ ಆಫ್ ಮೆಂಡಿಕೆನ್ಸಿ) ಎಂದು ತೀವ್ರವಾದಿಗಳು ವ್ಯಂಗ್ಯವಾಡಿದರು. ಯುವವರ್ಗ ಅವರ ನೀತಿಗಳಿಂದ ಆಕರ್ಷಿತರಾಗಿರಲಿಲ್ಲ.

#  ಲಾಲಾ ಲಜಪತ್‍ರಾಯ್, ಬಾಲಗಂಗಾಧರ್ ತಿಲಕ್, ಬಿಪಿನ್‍ಚಂದ್ರಪಾಲ್, ಇವರು ತೀವ್ರಗಾಮಿ ಗುಂಪಿನ ನಾಯಕರಾಗಿದ್ದು, ಅವರು ಲಾಲ್- ಬಾಲ್- ಪಾಲ್” ಎಂದು ಜನಪ್ರಿಯರಾಗಿದ್ದರು.
#  ಬಾಲಗಂಗಾಧರ ತಿಲಕರು ಒಬ್ಬ ಅಪ್ರತಿಮ ದೇಶಭಕ್ತ. “ಸ್ವರಾಜ್ಯ ನ್ನ ಜನ್ಮ ಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ” ಎಂಬ ಅವರ ಘೋಷಣೆಯನ್ನು ಕೂಗಿದರು.ಜನರನ್ನು ಒಗ್ಗೂಡಿಸುವ ದೃಷ್ಟಿಯಿಂದ ತಿಲಕರು ‘ಗಣೇಶ’ ಮತ್ತು ‘ಶಿವಾಜಿಯ’ ಉತ್ಸವಗಳನ್ನು ಪರಿಚಯಿಸಿದರು. ಮರಾಠ ಮತ್ತು ‘ಕೇಸರಿ’ ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಜನರನ್ನು ಪ್ರೇರೆಪಿಸಿದರು.

#  ಬಿಪಿನ್‍ಚಂದ್ರಪಾಲರು ‘ ನ್ಯೂಇಂಡಿಯಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.ಇವರು ಬಂಗಾಲದಲ್ಲಿ ಸಾಮೂಹಿಕ ಪ್ರತಿಭಟನೆಯನ್ನು ಸಂಘಟಿಸಿದರು.
#  ಲಾಲಾ ಲಜಪತ್ ರಾಯ್ ಅವರು “ ಪಂಜಾಬಿನ ಸಿಂಹ” ಎಂದೇ ಜನಪ್ರಿಯರಾಗಿದ್ದರು. ಅವರು ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆಯೇ ಹೊರತು ಭಿಕ್ಷಾರೂಪದಲ್ಲಿ ಅಲ್ಲ ಎಂದು ಹೇಳಿದರು.
ತೀವ್ರವಾದವನ್ನು ಪ್ರತಿನಿಧಿಸಿದ ಮತ್ತೊಬ್ಬ ನಾಯಕ “ ಅರವಿಂದ ಘೋಷ್”. ಅವರು “ವಂದೇ ಮಾತರಂ” ಪತ್ರಿಕೆಯನ್ನು ಪ್ರಾರಂಬಿಸಿದರು.

#  ವಿದೇಶಿ ವಸ್ತುಗಳ ಬಹಿಷ್ಕಾರ, ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು, ಸ್ವದೇಶಿ ವಸ್ತುಗಳನ್ನು ಬಳಸುವುದು ಅವರ ಧ್ಯೇಯವಾಗಿತ್ತು. ತೀವ್ರಗಾಮಿಗಳು ರಾಷ್ಟ್ರೀಯ ಹೋರಾಟಕ್ಕೆ ತೀವ್ರತೆಯನ್ನು ತಂದುಕೊಟ್ಟರು. ತೀವ್ರವಾದಿಗಳ ಹೋರಾಟವನ್ನು ಪ್ರೇರೇಪಿಸಿದ ಪ್ರಮುಖ ಘಟನೆಯೆಂದರೆ – 1905 ರ ಬಂಗಾಲದ ವಿಭಜನೆ.

 

 

Comments

No comments yet. Why don’t you start the discussion?

Leave a Reply

Your email address will not be published. Required fields are marked *