Nobel Prize Winners – Current Affairs Kannada https://currentaffairskannada.com Current Affairs Kannada Thu, 14 Mar 2024 07:16:44 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png Nobel Prize Winners – Current Affairs Kannada https://currentaffairskannada.com 32 32 ನೊಬೆಲ್ ಪ್ರಶಸ್ತಿ https://currentaffairskannada.com/nobel-awards/ https://currentaffairskannada.com/nobel-awards/#respond Thu, 14 Mar 2024 07:16:44 +0000 http://www.spardhatimes.com/?p=830 ✦ನೊಬೆಲ್ ಪ್ರಶಸ್ತಿ ವಿಶ್ವದ ಒಂದು ಸರ್ವಶ್ರೇಷ್ಠ ಪ್ರಶಸ್ತಿಯಾಗಿದೆ.✦ಡೈನಮೈಟ್ ಸಂಶೋಧಕ, ವಿಖ್ಯಾತ ವಿಜ್ಞಾನಿ ಸ್ವೀಡನ್ನಿನ “ಆಲ್ಪ್ರೇಡ್ ನೋಬೆಲ್” ಹೆಸರಿನಲ್ಲಿ ಆತನು ಬರೆದಿಟ್ಟ ಉಯಿಲಿನಂತೆ ವಿಜ್ಞಾನ, ಸಾಹಿತ್ಯ, ಮತ್ತು ಶಾಂತಿ ವಿಭಾಗಗಳಲ್ಲಿನ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಲಾಗುತ್ತಿದೆ.✦ಶಾಂತಿ , ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರಗಳಿಗೆ 1901…

The post ನೊಬೆಲ್ ಪ್ರಶಸ್ತಿ appeared first on Current Affairs Kannada.

]]>
✦ನೊಬೆಲ್ ಪ್ರಶಸ್ತಿ ವಿಶ್ವದ ಒಂದು ಸರ್ವಶ್ರೇಷ್ಠ ಪ್ರಶಸ್ತಿಯಾಗಿದೆ.
✦ಡೈನಮೈಟ್ ಸಂಶೋಧಕ, ವಿಖ್ಯಾತ ವಿಜ್ಞಾನಿ ಸ್ವೀಡನ್ನಿನ “ಆಲ್ಪ್ರೇಡ್ ನೋಬೆಲ್” ಹೆಸರಿನಲ್ಲಿ ಆತನು ಬರೆದಿಟ್ಟ ಉಯಿಲಿನಂತೆ ವಿಜ್ಞಾನ, ಸಾಹಿತ್ಯ, ಮತ್ತು ಶಾಂತಿ ವಿಭಾಗಗಳಲ್ಲಿನ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಲಾಗುತ್ತಿದೆ.
✦ಶಾಂತಿ , ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರಗಳಿಗೆ 1901 ರಿಂದ ನೊಬೆಲ್ ಪುರಸ್ಕಾರ ನೀಡಲಾಗುತ್ತಿದೆ.
✦ಅರ್ಥಶಾಸ್ತ್ರಕ್ಕಾಗಿ 1969ರಿಂದ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.
✦ಪ್ರಶಸ್ತಿಯ ಮೊತ್ತ 250 ಸ್ವೀಡಿಷ್ ಕ್ರೋನರ್( 6.5 ಕೋಟಿ) ನಗದು, ಬಹುಮಾನದ ಮೊತ್ತವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತದೆ.

✦ಪ್ರಶಸ್ತಿಯ ಹಿನ್ನೆಲೆ
ಆಲ್ಫ್ರೇಡ್ ನೊಬೆಲ್ “ಡೈನಮೈಟ್” ಎಂಬ ವಿಸ್ಫೋಟಕದ ಜನಕ. ಈ ವಿಸ್ಫೋಟಕವು ಯುದ್ಧಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು-ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ಥಾಪನೆಗೆ ಉಯಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
✦ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು – ಮೇಡಂ ಕ್ಯೂರಿ
✦ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ -ಮದರ್ ಥೆರೆಸಾ

✦ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು :
1.ರವೀಧ್ರನಾಥ ಟ್ಯಾಗೋರ್ – ಸಾಹಿತ್ಯ 1913
2.ಡಾ. ಸಿ.ವಿ. ರಾಮನ್ – ಭೌತಶಾಸ್ತ್ರ -1930
3.ಡಾ. ಹರಗೋವಿಂದ ಖುರಾನಾ – ವೈದ್ಯಕೀಯ 1968
4.ಮದರ್ ತೆರೆಸಾ – ಶಾಂತಿ 1979
5.ಡಾ. ಎಸ್. ಚಂದ್ರಶೇಖರ್ – ಭೌತಶಾಸ್ತ್ರ -1983
6.ಅಮತ್ರ್ಯ ಸೇನ್ – ಅರ್ಥಶಾಸ್ತ್ರ – 1998
7.ವೆಂಕಟರಮಣ ರಾಮಕೃಷ್ಣನ್ – ರಸಾಯನಶಾಸ್ತ್ರ – 2009
8.ಕೈಲಾಶ ಸತ್ಯಾರ್ಥಿ ಪ್ರಕಾಶ – ಶಾಂತಿ – 2014
9.ಅಭಿಜಿತ್ ಬ್ಯಾನರ್ಜಿ – ಅರ್ಥಶಾಸ್ತ್ರ -2019

ಭಾರತೀಯ ಮೂಲದ ಸಾಗರೋತ್ತರ ನಾಗರಿಕರು :
ಹರ್ ಗೋಬಿಂದ್ ಖೊರಾನ – ಜೀವಶಾಸ್ತ್ರ ಅಥವಾ ಶರೀರಶಾಸ್ತ್ರ- 1968
ಸುಬ್ರಹ್ಮಣ್ಯನ್ ಚಂದ್ರಶೇಖರ್ – ಭೌತಶಾಸ್ತ್ರ – 1983
ವೆಂಕಟರಾಮನ್ ರಾಮಕೃಷ್ಣನ್ – ರಸಾಯನಶಾಸ್ತ್ರ – 2009

ಭಾರತೀಯ ಸಂಪರ್ಕ ಹೊಂದಿರುವ ನೊಬೆಲ್ ಪ್ರಶಸ್ತಿ ವಿಜೇತರು :
ರೊನಾಲ್ಡ್ ರೋಸ್ – ಜೀವಶಾಸ್ತ್ರ-1902
ರುಡ್ಯಾರ್ಡ್ ಕಿಪ್ಲಿಂಗ್ – ಸಾಹಿತ್ಯ – 1907
14ನೇ ದಲೈ ಲಾಮಾ – ಶಾಂತಿ- 1989
ವಿ.ಎಸ್.ನೈಪಾಲ್ – ಸಾಹಿತ್ಯ- 2001

The post ನೊಬೆಲ್ ಪ್ರಶಸ್ತಿ appeared first on Current Affairs Kannada.

]]>
https://currentaffairskannada.com/nobel-awards/feed/ 0
ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌ ಪ್ರಶಸ್ತಿ https://currentaffairskannada.com/crispr-scientists-win-nobel-prize-in-chemistry/ https://currentaffairskannada.com/crispr-scientists-win-nobel-prize-in-chemistry/#respond Thu, 08 Oct 2020 08:16:00 +0000 http://www.spardhatimes.com/?p=1195 ರಸಾಯನಶಾಸ್ತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿದ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ 2020ನೇ ಸಾಲಿನ ನೊಬೆಲ್ ಪುರಸ್ಕಾರ ಲಭಿಸಿದೆ. ಜೀನೋಮ್‌ ಎಡಿಟಿಂಗ್‌ ವಿಧಾನದ ಅಭಿವೃದ್ಧಿಗಾಗಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನಿಫರ್‌ ಎ.ಡೌಡ್ನ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಮಾನ್ಯುಯೆಲ್‌ ಅವರು ಜರ್ಮನಿಯ ಬರ್ಲಿನ್‌ನ…

The post ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌ ಪ್ರಶಸ್ತಿ appeared first on Current Affairs Kannada.

]]>
ರಸಾಯನಶಾಸ್ತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿದ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ 2020ನೇ ಸಾಲಿನ ನೊಬೆಲ್ ಪುರಸ್ಕಾರ ಲಭಿಸಿದೆ. ಜೀನೋಮ್‌ ಎಡಿಟಿಂಗ್‌ ವಿಧಾನದ ಅಭಿವೃದ್ಧಿಗಾಗಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನಿಫರ್‌ ಎ.ಡೌಡ್ನ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಎಮಾನ್ಯುಯೆಲ್‌ ಅವರು ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್‌ ಬ್ಲ್ಯಾಂಕ್‌ ಯೂನಿಟ್‌ ಫಾರ್‌ ದಿ ಸೈನ್ಸ್‌ ಆಫ್‌ ಪ್ಯಾಥೊಜೆನ್ಸ್‌ನ ವಿಭಾಗದ ನಿರ್ದೇಶಕಿಯಾಗಿದ್ದಾರೆ. ಜೆನಿಫರ್‌ ಎ.ಡೌಡ್ನ ಅಮೆರಿಕದ ಬರ್ಕ್ಲಿಯ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್‌ ಆಗಿದ್ದಾರೆ.

ತಳಿಗುಣ(ಜೀನ್‌) ತಂತ್ರಜ್ಞಾನದಲ್ಲಿ ಅತ್ಯಂತ ತೀಕ್ಷ್ಣವಾದ ತಂತ್ರಗಳ(ಟೂಲ್ಸ್‌) ಅನ್ವೇಷಣೆಯನ್ನು ಎಮಾನ್ಯುಯೆಲ್‌ ಮತ್ತು ಜೆನಿಫರ್‌ ಮಾಡಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್‌ಪರ್‌(CRISPR/Cas9) ಕತ್ತರಿಗಳನ್ನು (ಜೆನೆಟಿಕ್‌ ಸಿಸರ್ಸ್) ಈ ಇಬ್ಬರು ಮಹಿಳೆಯರು ಅಭಿವೃದ್ಧಿ ಪಡಿಸಿದ್ದಾರೆ.

ಎಮ್ಯಾನುಯೆಲ್‌ ಚಾರ್ಪೆಂಟಿಯರ್‌ ಅವರು ಬ್ಯಾಕ್ಟಿರಿಯಾರಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದ ವೇಳೆ ಹೊಸ ಕಣವೊಂದು ಪತ್ತೆಯಾಗಿತ್ತು. ವೈರಸ್‌ನ ಡಿಎನ್‌ಎಯ ಕೆಲವು ಭಾಗಗಳನ್ನು ಕತ್ತರಿಸಿಹಾಕಿ ಅದನ್ನು ನಿಷ್ಪ್ರಯೋಜಕ ಯೋಜಕವನ್ನಾಗಿ ಮಾಡುತ್ತಿತ್ತು ಈ ಬ್ಯಾಕ್ಟಿರಿಯಾದ ಕಣ. ಇದರ ಮೇಲೆ ಸಂಶೋಧನೆ ನಡೆಸಿ 2011ರಲ್ಲಿಅವರು ಪ್ರಬಂಧ ಮಂಡಿಸಿದ್ದರು. ನಂತರ ಜೆನ್ನಿಫರ್‌ ಎ.ಡೌಡ್ನ ಅವರ ಜತೆಗೂಡಿ ಜೀನ್‌ ಎಡಿಟಿಂಗ್‌ ವಿಧಾನ ರೂಪಿಸಿದ್ದರು. ವಿಭಾಗವೊಂದರ ನೊಬೆಲ್‌ ಪ್ರಶಸ್ತಿ ಜಂಟಿಯಾಗಿ ಮಹಿಳಾ ತಂಡದ ಪಾಲಾಗಿದ್ದು ಇದೇ ಮೊದಲು ಎನ್ನಲಾಗಿದೆ.

The post ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌ ಪ್ರಶಸ್ತಿ appeared first on Current Affairs Kannada.

]]>
https://currentaffairskannada.com/crispr-scientists-win-nobel-prize-in-chemistry/feed/ 0