Kannada Grammar – Current Affairs Kannada https://currentaffairskannada.com Current Affairs Kannada Fri, 02 Feb 2024 10:35:24 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png Kannada Grammar – Current Affairs Kannada https://currentaffairskannada.com 32 32 ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು https://currentaffairskannada.com/kannada-grammar-vibhakti-pratyayagalu/ https://currentaffairskannada.com/kannada-grammar-vibhakti-pratyayagalu/#respond Fri, 02 Feb 2024 10:35:24 +0000 http://www.spardhatimes.com/?p=893 ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.  ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ”

The post ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು appeared first on Current Affairs Kannada.

]]>
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.  ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು”.  ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”  ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ…  ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…

ವಿಭಕ್ತಿ ಪ್ರತ್ಯಯಗಳ ವಿಧಗಳು : ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..
ವಿಭಕ್ತಿಯ ಹೆಸರು ಪ್ರತ್ಯಯ
1)ಪ್ರಥಮವಿಭಕ್ತಿ – ಉ
2)ದ್ವಿತೀಯವಿಭಕ್ತಿ – ಅನ್ನು
3)ತೃತೀಯವಿಭಕ್ತಿ – ಇಂದ
4)ಚತುರ್ಥಿವಿಭಕ್ತಿ-  ಗೆ, ಇಗೆ
5)ಪಂಚಮಿವಿಭಕ್ತಿ – ದೆಸೆಯಿಂದ
6)ಷಷ್ಠಿವಿಭಕ್ತಿ – ಅ
7)ಸಪ್ತಮಿವಿಭಕ್ತಿ – ಅಲ್ಲಿ
8)ಸಂಭೋಧನವಿಭಕ್ತಿ – ಮ ಏ,

ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು, ವಿಭಕ್ತಿಗಳು ಕಾರಕಾರ್ಥಗಳು ಪ್ರತ್ಯಯಗಳು
1)ಪ್ರಥಮ ಕತೃರ್ಥ – ಉ
2)ದ್ವಿತೀಯ ಕರ್ಮಾರ್ಥ – ಅನ್ನು
3)ತೃತೀಯ ಕರಣಾರ್ಥ – ಇಂದ
4)ಚತುರ್ಥೀ ಸಂಪ್ರಧಾನ – ಗೆ
5)ಪಂಚಮಿ ಅಪಧಾನ – ದೆಸೆಯಿಂದ
6)ಷಷ್ಠಿ ಸಂಭಂಧ – ಅ
7)ಅಪ್ತಮಿ ಅಧಿಕರಣ – ಅಲ್ಲಿ
8)ಸಂಬೋಧನ – ಅಭಿಮುಖೀ ಏ. ಆಕರಣಹಳಗನ್ನಡ ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯಗಳ ಬಳಕೆ ಮತ್ತು ಅವು ಕೊಡುವ ಅರ್ಥ’
ಮನೆ ಎಂಬ ನಾಮಪದಕ್ಕೆ ಏ೦ಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.

ಪ್ರಥಮಾ ವಿಭಕ್ತಿ: ಮನೆ + ಉ = ಮನೆಯು
ದ್ವಿತೀಯಾ ವಿಭಕ್ತಿ: ಮನೆ + ಅನ್ನು = ಮನೆಯನ್ನು
ತೃತೀಯಾ ವಿಭಕ್ತಿ: ಮನೆ + ಇಂದ = ಮನೆಯಿಂದ
ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ

1.ಪ್ರಥಮಾ : “ರಾಮನು ಬಂದನು”
ಇಲ್ಲಿ “ಬಂದನು” ಎಂಬ ಕ್ರಿಯೆಯನ್ನು ನಡೆಸಿದ ಹೆಸರುಪದ ‘ರಾಮ'(ಕರ್ತೃ).
ಸಾಮಾನ್ಯವಾಗಿ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯ ಬಳಕೆ ಬಹಳ ಕಡಮೆ. ಹೆಚ್ಚಾಗಿ “ರಾಮನು ಬಂದನು” ಎಂದು ಹೇಳಲು, “ರಾಮ ಬಂದ” ಎಂದು ಹೇಳುವುದು, ಬರೆಯುವುದು ಉಂಟು.

2.ದ್ವಿತೀಯಾ : “ರಾಮನನ್ನು ಕರೆದರು”
ಇಲ್ಲಿ “ಕರೆದರು” ಎಂಬ ಕ್ರಿಯೆಯನ್ನು ‘ರಾಮ’ ಎಂಬ ನಾಮಪದದ ಕುರಿತು( ನಾಮಪದದ ಮೇಲೆ ) ನಡೆಯಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
ಸಂಸ್ಕೃತದಲ್ಲಿ “ಗ್ರಾಮಂ ಗತಃ” ಅಂದರೆ “ಗ್ರಾಮಕ್ಕೆ ಹೋದವನು” ಎಂದು. ಆದರೆ “ಗ್ರಾಮಂ” ದ್ವಿತೀಯಾ ವಿಭಕ್ತಿ, “ಗ್ರಾಮಕ್ಕೆ” ಚತುರ್ಥೀ ವಿಭಕ್ತಿ. ಕನ್ನಡದಲ್ಲಿ ಸಂಸ್ಕೃತದಂತೆ “ಗ್ರಾಮವನ್ನು ಹೋದನು” ಎಂದರೆ ತಪ್ಪು.

3.ತೃತೀಯಾ: “ರಾಮನು ಬಿಲ್ಲಿನಿಂದ ಹೊಡೆದನು”
ಇಲ್ಲಿ ‘ರಾಮ’ ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೊಡೆದನು’ ಎಂಬ ಕ್ರಿಯೆಯನ್ನು ‘ಬಿಲ್ಲು’ ಎಂಬ ನಾಮಪದವನ್ನು ಬಳಸಿ ನಡೆಸಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
1. “ರಾಮೇನ ಸಹ” ಅಂದರೆ “ರಾಮನ ಜೊತೆ” ಎಂದು, ಆದರೆ “ರಾಮೇನ” ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, “ರಾಮನ” ಷಷ್ಠೀ ವಿಭಕ್ತಿ. ಸಂಸ್ಕೃತದಂತೆ “ರಾಮನಿಂದ ಜೊತೆ” ಎಂದು ಕನ್ನಡದಲ್ಲಿ ಹೇಳಿದರೆ ಅದು ತಪ್ಪು.
2. “ಸಂಸ್ಕೃತೇನ ಭಾಷತಿ” ಅಂದರೆ “ಸಂಸ್ಕೃತದಲ್ಲಿ ಮಾತಾಡುತ್ತದೆ” ಎಂದು, ಆದರೆ “ಸಂಸ್ಕೃತೇನ” ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, “ಸಂಸ್ಕೃತದಲ್ಲಿ” ಇದು ಸಪ್ತಮೀ.

4.ಚತುರ್ಥೀ : “ರಾಮನು ಮನೆಗೆ ಹೋದನು”
ಇಲ್ಲಿ ‘ರಾಮ’ ಎಂಬ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೋದನು’ ಎಂಬ ಕ್ರಿಯೆಯನ್ನು ನಡೆಸಿ ತಲುಪಿದ ಜಾಗ ‘ಮನೆ’ ಎಂಬ ನಾಮಪದ ತಿಳಿಸುವ ಜಾಗ.

5.ಪಂಚಮೀ : “ರಾಮನ ದೆಸೆಯಿಂದ ಶಿವ ಹೋದನು”
ಇಲ್ಲಿ ‘ರಾಮ’ ಎಂಬ ನಾಮಪದದ ಪ್ರೇರಣೆಯಿಂದ ‘ಶಿವ’ ಎಂಬ ನಾಮಪದವು(ಪ್ರಥಮಾ ವಿಭಕ್ತಿ) ‘ಹೋದನು’ ಎಂಬ ಕ್ರಿಯೆಯನ್ನು ಮಾಡಿತು.

6.ಷಷ್ಠೀ : “ರಾಮನ ಹೆಂಡತಿ ಸೀತೆ”
ಇಲ್ಲಿ ‘ರಾಮ’ ಎಂದ ನಾಮಪದಕ್ಕೆ ಮತ್ತು ‘ಸೀತೆ’ ಎಂಬ ನಾಮಪದಕ್ಕೆ ಇರುವ ಸಂಬಂಧ/ನಂಟನ್ನು ‘ಹೆಂಡತಿ’ ಎಂಬ ನಾಮಪದವು ತಿಳಿಸುವುದು.

7.ಸಪ್ತಮೀ : “ರಾಮನು ಕಾಡಿನಲ್ಲಿ ಹೊಡೆದನು”
ಇಲ್ಲಿ ‘ರಾಮ’ ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೊಡೆದನು’ ಎಂಬ ಕ್ರಿಯೆಯನ್ನು ನಡೆಸಿದ ಜಾಗವನ್ನು ‘ಕಾಡು’ ಎಂಬ ನಾಮಪದವು ತಿಳಿಸುವುದು.

ವಿಭಕ್ತಿ ಪ್ರತ್ಯಯ ರೂಪಗಳು : 
1)ಪ್ರಥಮಾ ಮ್ ಮ್ ರಾಮಂ
2)ದ್ವಿತೀಯಾ ಅಮ್ ರಾಮನಂ
3)ತೃತೀಯ ಇಮ್ ರಾಮನಿಂ
4)ಚತುರ್ಥೀ ಗೆ ರಾಮಂಗೆ
5)ಪಂಚಮಿ ಅತ್ತಣಿಂ ರಾಮನತ್ತಣಿಂ
6)ಷಷ್ಠಿ ಅ ರಾಮನ
7)ಸಪ್ತಮಿ ಒಳ್ ರಾಮನೊಳ್

The post ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು appeared first on Current Affairs Kannada.

]]>
https://currentaffairskannada.com/kannada-grammar-vibhakti-pratyayagalu/feed/ 0
ಕನ್ನಡದ 100 ಪ್ರಸಿದ್ಧ ಗಾದೆಗಳು https://currentaffairskannada.com/kannada-adverbs/ https://currentaffairskannada.com/kannada-adverbs/#respond Thu, 25 Jan 2024 07:29:31 +0000 http://www.spardhatimes.com/?p=822 ವೇದ ಸುಳ್ಳಾದರೂ ಗಾದೆ ಸುಳ್ಳಾಗದು1 ಹಿತ್ತಲ ಗಿಡ ಮದ್ದಲ್ಲ2 ಮಾಡಿದ್ದುಣ್ಣೋ ಮಹರಾಯ3 ಕೈ ಕೆಸರಾದರೆ ಬಾಯಿ ಮೊಸರು4 ಹಾಸಿಗೆ ಇದ್ದಷ್ತು ಕಾಲು ಚಾಚು5 ಅಂಗೈ ಹುಣ್ಣಿಗೆ ಕನ್ನಡಿ

The post ಕನ್ನಡದ 100 ಪ್ರಸಿದ್ಧ ಗಾದೆಗಳು appeared first on Current Affairs Kannada.

]]>
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
1 ಹಿತ್ತಲ ಗಿಡ ಮದ್ದಲ್ಲ
2 ಮಾಡಿದ್ದುಣ್ಣೋ ಮಹರಾಯ
3 ಕೈ ಕೆಸರಾದರೆ ಬಾಯಿ ಮೊಸರು
4 ಹಾಸಿಗೆ ಇದ್ದಷ್ತು ಕಾಲು ಚಾಚು
5 ಅಂಗೈ ಹುಣ್ಣಿಗೆ ಕನ್ನಡಿ ಬೇಕೆ
6 ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರಂತೆ
7 ಎತ್ತೆಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ
8 ಮನೇಲಿ ಇಲಿ, ಬೀದೀಲಿ ಹುಲಿ
9 ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋದಿಕೊOಡನOತೆ
1O ಕಾರ್ಯಾವಾಸಿ ಕತ್ತೆಕಾಲು ಹಿಡಿ

11 ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು
12 ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
13 ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ
14 ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ
15 ಅಕ್ಕಿ ಮೇಲೆ ಆಸೆ, ನೆಂಟರ ಮೇಲೂ ಪ್ರೀತಿ
16 ಅಜ್ಜಿಗೆ ಅರಿವೆ ಚಿಂತೆ , ಮಗಳಿಗೆ ಗಂಡನ ಚಿಂತೆ
17 ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದನಂತೆ
18 ಅತ್ತೆಗೊOದು ಕಾಲ ಸೊಸೆಗೊOದು ಕಾಲ
19 ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ
2O ಬೇಲೀನೆ ಎದ್ದು ಹೊಲ ಮೆಯ್ದಂತೆ

21 ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ
22 ಅಂತೂ ಇಂತೂ ಕುಂತಿ ಮಕ್ಕಳಿಗೆ ಇಂತೂ ರಾಜ್ಯವಿಲ್ಲ
23 ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
24 ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ
25 ದೇವರು ವರ ಕೊಟ್ರು ಪೂಜಾರಿ ಕೊಡ
26 ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
27 ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು
28 ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎಂದರಂತೆ
29 ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ
3O ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

31 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
32 ಗೆದ್ದೆತ್ತಿನ ಬಾಲ ಹಿಡಿದ ಹಾಗೆ
33 ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನಂತೆ
34 ಭಂಗೀದೇವರಿಗೆ ಹೆಂದುಗುಡುಕ ಪೂಜಾರಿ
35 ಕಾಸಿಗೆ ತಕ್ಕ ಕಜ್ಜಾಯ
36 ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
37 ಕೂಸು ಹುಟ್ಟುವ ಮುಂಚೆ ಕುಲಾವಿ
38 ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಲಗೆ ತೂರು
39 ಇಬ್ಬರ ಜಗಳ ಮೂರನೆಯವನಿಗೆ ಲಾಭ
4O ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ

41 ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು
42 ಉಚ್ಚೇಲಿ ಮೀನು ಹಿಡಿಯೋ ಜಾತಿ
43 ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು
44 ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ
45 ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ
46 ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ
47 ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅಂದ ಹಾಗೆ
48 ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
49 ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
5O ಕಜ್ಜಿ ಹೋದರೂ ಕಡಿತ ಹೋಗಲಿಲ್ಲ

51 ಮಾತು ಬೆಳ್ಳಿ, ಮೌನ ಬಂಗಾರ
52 ಎಲ್ಲಾರ ಮನೆ ದೋಸೆನೂ ತೂತೆ
53 ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು
54 ಅಡುಗೆ ಮಾಡಿದವಳಿಗಿಂತ ಬಡಿಸಿದವಲೇ ಮೇಲು
55 ತಾಯಿಯಂತೆ ಮಗಳು ನೂಲಿನಂತೆ ಸೀರೆ
56 ಅನುಕೂಲ ಸಿಂಧು, ಅಭಾವ ವೈರಾಗ್ಯ
57 ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ
58 ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ
59 ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
6O ಮನೆಗೆ ಮಾರಿ, ಊರಿಗೆ ಉಪಕಾರಿ

61 ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
62 ಅಲ್ಪರ ಸಂಘ ಅಭಿಮಾನ ಭಂಗ
62 ಸಗಣಿಯವನ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
63 ಮಾಡಿದವರ ಪಾಪ ಆಡಿದವರ ಬಾಯಲ್ಲಿ
64 ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
65 ಗೋರ್ಕಲ್ಲ ಮೇಲೆ ನೀರು ಸುರಿದOತೆ
66 ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
67 ಗಾಳಿ ಬಂದಾಗ ತೂರಿಕೋ
68 ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ
69 ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು
7O ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ

71 ದುಡ್ಡೇ ದೊಡ್ಡಪ್ಪ ವಿದ್ಯೆಯೇ ಅದರಪ್ಪ
72 ಬರಗಾಲದಲ್ಲಿ ಅಧಿಕ ಮಾಸ
73 ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
74 ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ ಹಾಗೆ
75 ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
76 ಮಂತ್ರಕ್ಕಿಂತ ಉಗುಳೇ ಜಾಸ್ತಿ
77 ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
78 ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
79 ಕಂತೆಗೆ ತಕ್ಕ ಬೊಂತೆ
😯 ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ

81 ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
82 ಓದಿ ಓದಿ ಮರುಳಾದ ಕೂಚಂಭಟ್ಟ
83 ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ
84 ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
86 ಬೆಟ್ಟ ಅಗೆದು ಇಲಿ ಹಿಡಿದ ಹಾಗೆ
87 ಓದುವಾಗ ಓದು, ಆಡುವಾಗ ಆಡು
88 ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
89 ಸಂಸಾರ ಗುಟ್ಟು, ವ್ಯಾಧಿ ರಟ್ಟು
9O ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರಂತೆ
91 ಕೊಟ್ಟವನು ಕೋಡಂಗಿ , ಇಸ್ಕೊಂಡೋನು ಈರಭದ್ರ
92 ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
93 ಮುಖ ನೋಡಿ ಮಣೆ ಹಾಕು
94 ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ
95 ಮಂತ್ರಕ್ಕೆ ಮಾವಿನಕಾಯಿ ಉದುರತ್ಯೇ ?
96 ತುಂಬಿದ ಕೊಡ ತುಳುಕುವುದಿಲ್ಲ
97 ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ
98 ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
99 ಇರಲಾರದೆ ಇರುವೆ ಬಿಟ್ಟುಕೊಂಡ ಹಾಗೆ
1OO ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
1O1 ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರು

ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು

The post ಕನ್ನಡದ 100 ಪ್ರಸಿದ್ಧ ಗಾದೆಗಳು appeared first on Current Affairs Kannada.

]]>
https://currentaffairskannada.com/kannada-adverbs/feed/ 0
ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು https://currentaffairskannada.com/kannada-grammar-chandas/ https://currentaffairskannada.com/kannada-grammar-chandas/#respond Thu, 25 Jan 2024 07:10:48 +0000 http://www.spardhatimes.com/2020/03/30/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b5%e0%b3%8d%e0%b2%af%e0%b2%be%e0%b2%95%e0%b2%b0%e0%b2%a3-%e0%b2%9b%e0%b2%82%e0%b2%a6%e0%b2%b8%e0%b3%8d%e0%b2%b8%e0%b3%81-%e0%b2%ae%e0%b2%a4/ ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ

The post ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು appeared first on Current Affairs Kannada.

]]>
ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.

✦ ಕನ್ನಡ ಛಂದಸ್ಸನ್ನು ಕುರಿತ ಗ್ರಂಥಗಳು :

ಕಾವ್ಯಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿಯೇ (ಪ್ರ.ಶ.ಸು. 850) ಕನ್ನಡ ಛಂದಸ್ಸಿಗೆ ಸಂಬಂಧಿಸಿದ ವಿಷಯಗಳಾದ ಯತಿ, ಛಂದೋಭಂಗ, ಗುರುಲಘುದೋಷಗಳು, ಪ್ರಾಸ-ಇವುಗಳ ಪ್ರಸ್ತಾಪವಿದೆ. ಕನ್ನಡ ಕವಿಗಳು ಮುಖ್ಯವಾಗಿ ಸಂಸ್ಕೃತ ಛಂದಸ್ಸಿನಲ್ಲಿ ಸ್ವಾತಂತ್ರ್ಯವಹಿಸಿ ಮಾಡಿಕೊಂಡ ಮಾರ್ಪಾಡುಗಳು, ಅವುಗಳಿಂದಾದ ಪರಿಣಾಮಗಳು-ಇವುಗಳ ಸ್ವರೂಪ ಸ್ಪಲ್ಪಮಟ್ಟಿಗೆ ಆ ವಿಷಯಗಳಿಂದ ತಿಳಿಯುತ್ತದೆ. ತಮಿಳು ಭಾಷೆಯ ಯಾಪ್ಪರುಂಗಲಕ್ಕಾರಿಹೈ ಎಂಬ ಪ್ರಾಚೀನ ಛಂದೋಗ್ರಂಥದ ವ್ಯಾಖ್ಯಾನದಲ್ಲಿ ಗುಣಗಾಂಕಿಯಂ ಎಂಬ ಕನ್ನಡ ಛಂದೋಗ್ರಂಥದ ಉಲ್ಲೇಖವಿದೆ.

ಇದು ಈವರೆಗೆ ದೊರೆತಿಲ್ಲ. ಅಲ್ಲದೆ ಈ ಗ್ರಂಥದ ಅಸ್ತಿತ್ವ, ಕರ್ತೃತ್ವ, ಕಾಲ ಎಲ್ಲವೂ ತೀರ ಅನಿಶ್ಚಿತವೂ ವಿವಾದಾಸ್ಪದವೂ ಆಗಿವೆ. ಮೂರನೆಯ ವಿಜಯಾದಿತ್ಯನೆಂಬ ಪುರ್ವಚಾಳುಕ್ಯ ರಾಜನಿಗೆ ಅಂಕಿತ ಮಾಡಿರಬಹುದಾದ, ಸು, 9ನೆಯ ಶತಮಾನದ ಕೃತಿಯಿದು ಎಂಬುದಾಗಿ ಊಹಿಸಲಾಗಿದೆ. 1ನೆಯ ನಾಗವರ್ಮನ (ಪ್ರ.ಶ.ಸು. 990) ಛಂದೋಂಬುಧಿ ಉಪಲಬ್ಧವಾದ ಕನ್ನಡ ಛಂದೋಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು; ಪ್ರಮಾಣಭೂತವೂ ಪ್ರಸಿದ್ಧವೂ ಆದುದು.

ಇದರಲ್ಲಿ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳು ಸ್ವತಂತ್ರವಾಗಿಯೂ ತಕ್ಕಮಟ್ಟಿಗೆ ವಿಸ್ತಾರವಾಗಿಯೂ ಪ್ರತಿಪಾದಿತವಾಗಿವೆ. ಈ ಗ್ರಂಥದಲ್ಲಿ ಆರು ಅಧಿಕಾರಿಗಳಿದ್ದು, ಅವುಗಳಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಛಂದಸ್ಸುಗಳಲ್ಲಿ ಕನ್ನಡ ಕಾವ್ಯಾಭ್ಯಾಸಿಗಳು ತಿಳಿಯಬೇಕಾಗಿರುವ ಅತ್ಯಗತ್ಯವಾದ ಎಲ್ಲ ಅಂಶಗಳೂ ಸಂಗ್ರಹಿತವಾಗಿವೆ. ಐದನೆಯ ಅಧಿಕಾರ ಅಚ್ಚ ಕನ್ನಡ ಛಂದಸ್ಸಿಗೆ ಮೀಸಲಾಗಿದ್ದು, ಅದು ಆ ವಿಷಯದ ವಿವೇಚನೆಗೆ ಬಹು ಉಪಯುಕ್ತವಾದ ಮೂಲಭೂತವಾದ ಸಾಮಗ್ರಿಯನ್ನೊದಗಿಸುತ್ತದೆ.

ಪ್ರಸಿದ್ಧ ಶಾಸ್ತ್ರಜ್ಞನಾದ ಇಮ್ಮಡಿ ನಾಗವರ್ಮ (ಸು. 1145) ಛಂದೋವಿಚಿತಿ ಎಂಬೊಂದು ಗ್ರಂಥವನ್ನು ಅಥವಾ ಛಂದಶ್ಶಾಸ್ತ್ರವನ್ನು ಕುರಿತ ಗ್ರಂಥವೊಂದನ್ನು ಬರೆದಿದ್ದಂತೆ ಕಾವ್ಯಾವಲೋಕದಲ್ಲಿ ದೊರೆಯುವ ಒಂದು ಆಧಾರದಿಂದ ತಿಳಿಯುತ್ತದೆ. ಇದು ಈವರೆಗೆ ದೊರೆತಿಲ್ಲ. ಈಶ್ವರ ಕವಿಯ (ಪ್ರ.ಶ. ಸು. 1500) ಕವಿಜಿಹ್ವಾಬಂಧನಂ ಒಂದು ರೀತಿಯ ಸಮ್ಮಿಶ್ರ ಗ್ರಂಥವಾದರೂ ಮುಖ್ಯವಾಗಿ ಛಂದಶ್ಶಾಸ್ತ್ರವನ್ನು ಕುರಿತದ್ದು.

ಈ ಗ್ರಂಥದ ಮೊದಲ ಮೂರು ಆಶ್ವಾಸಗಳಲ್ಲಿ ಪ್ರಧಾನವಾಗಿ ಛಂದಶ್ಶಾಸ್ತ್ರದ ಸಂಜ್ಞಾಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಮಾತ್ರ ಬಂದಿವೆ. ಅಲ್ಲಲ್ಲಿ ತೆಲುಗು ಛಂದೋಗ್ರಂಥಗಳ ಪ್ರತಿಪಾದನ ರೀತಿಯನ್ನೂ ವಿಷಯಗಳನ್ನೂ ಒಳಗೊಂಡಿರುವುದು ಈ ಕೃತಿಯ ವೈಶಿಷ್ಟ್ಯ. ಛಂದೋಂಬುಧಿಯ ತರುವಾಯದಲ್ಲಿ ತಕ್ಕಮಟ್ಟಿಗೆ ಗಣ್ಯವಾದ ಛಂದೋಗ್ರಂಥವೆಂದರೆ ಗುಣಚಂದ್ರನೆಂಬ ಜೈನಕವಿಯ (ಪ್ರ.ಶ. ಸು. 1650) ಛಂದಸ್ಸಾರ. ಇದರಲ್ಲಿ ಐದು ಆಧಿಕಾರಗಳಿದ್ದು, ಸಂಸ್ಕೃತ ಛಂದಸ್ಸಿನ ವಿಷಯಕ್ಕೆ ಪ್ರಮುಖವೆನಿಸಿದೆ.

ಮಾತ್ರಾಷಟ್ಪದಿಗಳು, ತಾಳಗಳು, ರಗಳೆಯ ಪ್ರಭೇದಗಳು ಈ ಮುಂತಾದವನ್ನು ಪ್ರಾಯಶಃ ಇಲ್ಲಿ ಮೊದಲ ಬಾರಿಗೆ ಪ್ರಸ್ತಾಪ ಮಾಡಿರುವುದು ಗಮನಾರ್ಹವಾಗಿದೆ. ಆದರೆ ಅಂಶವೃತ್ತಗಳ ವಿಚಾರವೇ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಶಾಲ್ಯದ ಕೃಷ್ಣರಾಜನ (ಪ್ರ.ಶ. 1748) ಷಟ್ಪ್ರತ್ಯಯವೆಂಬುದು ಪ್ರಸ್ತಾರ ಮೊದಲಾದ ಆರು ಪ್ರತ್ಯಯಗಳನ್ನು ವಿವರಿಸುವ ಛಂದೋಗ್ರಂಥ. ಕೇದಾರಭಟ್ಟನ ವೃತ್ತಿರತ್ನಾಕರದ ಅಜ್ಞಾತ ಕರ್ತೃಕವಾದ ಕನ್ನಡ ವೃತ್ತಿಯೊಂದು ಸು. ಇದೇ ಕಾಲಕ್ಕೆ (ಸು. 1775) ರಚಿತವಾದಂತೆ ತೋರುತ್ತದೆ. ಇವಕ್ಕೆ ಈಚಿನದಾದ ನಂದಿ ಛಂದಸ್ಸು (ಸು. 19ನೆಯ ಶ.) ಕರ್ತೃ ನಿಶ್ಚಿತವಾಗಿ ತಿಳಿಯದ, ಈಗ ವರ್ಣವೃತ್ತಗಳ ಭಾಗವಷ್ಟೇ ಉಳಿದಿರುವ ಒಂದು ಅಸಮಗ್ರ ಛಂದೋಗ್ರಂಥ.

ಕನ್ನಡ ಛಂದಸ್ಸಿನ ಗಣಸ್ವರೂಪವನ್ನು ಪ್ರಸಿದ್ಧವಾದ ಪದ್ಯಜಾತಿಗಳನ್ನೂ ಕೆಲವು ಸಂಸ್ಕೃತ ಲಕ್ಷಣ ಗ್ರಂಥಗಳಲ್ಲಿ ಕೂಡ ಪ್ರಾಸಂಗಿಕವಾಗಿ ವಿವೇಚಿಸಿರುವುದು ಕಂಡುಬರುತ್ತದೆ. ಜಯಕೀರ್ತಿಯ (ಸು. 1050) ಛಂದೋನುಶಾಸನಮ್ ಎಂಬ ಗ್ರಂಥದಲ್ಲಿ ಅಲ್ಲಲ್ಲಿ ಕನ್ನಡ ಛಂದಸ್ಸಿನ ಸಂಗತಿಗಳು ಕ್ವಚಿತ್ತಾಗಿ ಉಕ್ತವಾಗಿರುವುದಲ್ಲದೆ, ಕರ್ಣಾಟಕ ವಿಷಯಭಾಷಾಜಾತ್ಯಧಿಕಾರವೆಂಬ 6ನೆಯ ಅಧಿಕಾರದಲ್ಲಿ ಪುರ್ತಿಯಾಗಿ ಕನ್ನಡ ಛಂದಸ್ಸಿನ ವಿವೇಚನೆ ಲಕ್ಷಣ-ಲಕ್ಷ್ಯ ಸಮನ್ವಿತವಾಗಿ ಬಂದಿದೆ.

ಈ ಗ್ರಂಥದಲ್ಲಿ ನಾಗವರ್ಮನ ಛಂದೋಂಬುಧಿಯ ಪ್ರಭಾವವನ್ನು ಕಾಣಬಹುದಾಗಿದೆ. 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿ (ಪ್ರ.ಶ. 1129), ಅದರ ಚತುರ್ವಿಂಶತಿಯ 16ನೆಯ ಅಧ್ಯಾಯದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಪಟ್ಟಂತೆ, ಅಂಶಗಣಗಳ ಸ್ವರೂಪವನ್ನೂ ತ್ರಿಪದಿ ಷಟ್ಪದಿ ಹಾಗೂ ಕಂದಪದ್ಯ ಇವುಗಳ ಸ್ವರೂಪವನ್ನೂ ಲಕ್ಷಣ-ಲಕ್ಷ್ಯಗಳೊಂದಿಗೆ ವಿವರಿಸಿದೆ.

ಶಾಙರ್ಗ್‌ದೇವನ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ, ಅದರ 4ನೆಯ ಪ್ರಬಂಧಾಧ್ಯಾಯದಲ್ಲಿ, ಕನ್ನಡ ಛಂದಸ್ಸಿನ ಏಳೆ, ತ್ರಿಪದಿ ಮತ್ತು ಷಟ್ಪದಿಗಳ ಲಕ್ಷಣವನ್ನು ನಿರೂಪಿಸಿದೆ. ಕನ್ನಡ ಭಾಷಾಸಾಹಿತ್ಯಗಳ ಪರಿಚಯವಿದ್ದಂತೆ ತೋರುವ ಈ ಲಾಕ್ಷಣಿಕರ ವಿವರಣೆಗಳಿಂದ ಕನ್ನಡ ಛಂದಸ್ಸಿನ ಸ್ವರೂಪ ಜ್ಞಾನಕ್ಕೆ ತುಂಬ ಉಪಕಾರವಾಗಿದೆ.

ಪ್ರಾಸ : ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ. ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ. ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.
✦ ಯತಿ : ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.
✦ ಗಣ : ಗಣ ಎಂದರೆ ಗುಂಪು.ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪು. ಈ ಗಣಗಳನ್ನು ಕಟ್ಟುವ ಘಟಕಗಳು ಎಂದರೆ ಹ್ರಸ್ವ ದೀರ್ಘಾಕ್ಷರಗಳು .ಇದರಲ್ಲಿ ‘ವರ್ಣಗಣ’ ಅಥವಾ’ಅಕ್ಷರಗಣ’,’ಮಾತ್ರಾಗಣ’ ಮತ್ತು ‘ಅಂಶಗಣ’ಗಳೆಂಬ ಮೂರು ವಿಧದ ಗಣಗಳಿವೆ.ಅಕ್ಷರಗಳನ್ನು ಆಧರಿಸಿ ಮಾಡಿದ ಗುಂಪು ವರ್ಣಗಣ /ಅಕ್ಷರಗಣವೆನಿಸುತ್ತದೆ. ಈ ಅಕ್ಷರಗಳನ್ನು ಸಂಸ್ಕೃತ ಛಂದಸ್ಸಿನಿಂದ ಕನ್ನಡವು ಪಡೆದುಕೊಂಡಿದೆ.ಮೂರು ಮೂರು ಅಕ್ಷರಗಳನ್ನು ಎಣಿಸಿ ಗಣವಿಭಾಗಿಸಲಾಗುವುದು.
✦ ಮಾತ್ರಾಗಣ : ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
✦ ಮಾತ್ರೆ : ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.
✦ ಲಘು : ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.
ಗುರು : ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( – ) ಎಂದು ಕರೆಯುವರು.
ಪ್ರಸ್ತಾರ : ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.

ಛಂದಸ್ಸಿನ ಕೃತಿಗಳು : 
1) 1ನೇ ನಾಗವರ್ಮ ಛಂದೋಬುದಿ
2) 2ನೇ ನಾಗವರ್ಮ ಛಂದೋವಿಚಿತಿ
3) ಜಯಕೀರ್ತಿ ಛಂದೋನುಶಾಸನಂ
4) 2ನೇ ಸೋಮೇಶ್ವರ ಮನಸೊಲ್ಲಾಸ
5) ಶಾಙ್ರ್ಗದೇವ ಸಂಗೀತ ರತ್ನಾಕರ
6) ಈಶ್ವರ ಕವಿ ಕವಿಜಿಹ್ವಾಬಂಧನ
7) ಗುಣಚಂದ್ರ ಛಂದಸ್ಸಾರ
8) ನಂದಿ ನಂಧಿಛಂದಸ್ಸು
9) ಖ)ಎಸ್)ಕರ್ಕಿ ಕನ್ನಡ ಛಂದೋವಿಕಾಸ
10) ಓ)ವಿ)ಚೆಂಕಟಛಲಶಾಸ್ತ್ರಿ ಕನ್ನಡ ಛಂದಸ್ಸು : ಸ್ವರೂಪ
11) ತೀ)ನಂ)ಶ್ರೀ ಹೊಸಗನ್ನಡ ಛಂದಸ್ಸು
12) ಬಿ)ಎಂ)ಶ್ರೀ ಕನ್ನಡ ಛಂದಸ್ಸಿನ ಚರಿತ್ರೆ

The post ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು appeared first on Current Affairs Kannada.

]]>
https://currentaffairskannada.com/kannada-grammar-chandas/feed/ 0
ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..? https://currentaffairskannada.com/kannada-grammar-samasagalu/ https://currentaffairskannada.com/kannada-grammar-samasagalu/#respond Wed, 10 Jan 2024 06:35:59 +0000 http://www.spardhatimes.com/2020/08/26/%e0%b2%b8%e0%b2%ae%e0%b2%be%e0%b2%b8-%e0%b2%8e%e0%b2%82%e0%b2%a6%e0%b2%b0%e0%b3%87%e0%b2%a8%e0%b3%81-%e0%b2%b8%e0%b2%ae%e0%b2%be%e0%b2%b8%e0%b2%97%e0%b2%b3-%e0%b2%b5%e0%b2%bf%e0%b2%a7%e0%b2%97/ ಸಮಾಸಗಳು :  ಸಮಾಸ ಎಂದರೇನು ? ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು

The post ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..? appeared first on Current Affairs Kannada.

]]>
ಸಮಾಸಗಳು :  ಸಮಾಸ ಎಂದರೇನು ? ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು ‘ಸಮಾಸ’ ವೆನ್ನಲಾಗುತ್ತದೆ. ಉದಾ: ‘ಕೆಂಪಾದ ತಾವರೆ’ ಎಂಬಲ್ಲಿ, ಕೆಂಪು – ತಾವರೆ ಪದಗಳು ಕೂಡಿ, ‘ಕೆಂದಾವರೆ’ ಎಂಬ ಸಮಸ್ತ ಪದವಾಗುತ್ತದೆ.

ಸಮ್ + ಆಸ= ಸಮಾಸ. ಸಮಾಸವೆಂದರೆ ಕೂಡುನುಡಿ. ಅಥವಾ ಪದವಿಧಿ. ಎರಡು ವರ್ಣಗಳು ಪರಸ್ಪರ ಕೂಡಿದರೆ ಸಂಧಿಯಾಗುವಂತೆ, ಎರಡು ಪದಗಳು ಪರಸ್ಪರ ಕೂಡಿದರೆ ಸಮಾಸವಾಗುತ್ತದೆ. ನಾಗವರ್ಮನ ಪ್ರಕಾರ, ‘ನಾಮವಾಚಿನಾಂ ಶಬ್ದನಾಂ ಪರಸ್ಪರಮನ್ವಯ ಸಿದ್ಧೋರ್ಥಸ್ಸಮಾಸ ಸಂಜ್ಞಸ್ಸ್ಯಾತ್’ (ಸೂತ್ರ : 131). ಎಂದರೆ ನಾಮವಾಚಿಯಾದ ಶಬ್ದಗಳೆರಡರ ಅನ್ವಯ ಸಿದ್ಧವಾದ ಅರ್ಥ.

ನಾಮಪದಗಳು ಕೂಡಿ ನುಡಿಯುವ ಸರ್ಥವೇ ಸಮಾಸ. ಈ ಕೂಡು ನುಡಿಯನ್ನವನು ಪದವಿಧಿ ಯೆಂದೂ ಕರೆದಿದ್ದಾನೆ. ಕೇಶಿರಾಜನ ಸೂತ್ರದ ಪ್ರಕಾರ, “ಕರು ತಾಯ ಬಳಿಯನುಳಿಯದ ತೆರದಿಂದಂ ನಾಮಪದ ಮದರ್ಥಾನುಗಮಾ ಗೆರಿಗೆ ಸಮಾಸಂ ನೆಗಳ್ಗುಂ”. ಅಂದರೆ, ನಾಮಪದವು ಅರ್ಥಾನುಗತವಾಗುವುದೇ ಸಮಾಸ. ಹೀಗೆ ಅರ್ಥವನ್ನುಂಟು ಮಾಡುವ ಪರಸ್ಪರ ನಾಮಪದಗಳು ಅನ್ಯೋನ್ಯವಾಗಿ ಕೂಡಿರಬೇಕು. ಈ ಅನ್ಯೋನ್ಯವನ್ನು ಅವನು ‘ತಾಯ ಬಳಿಯ ಕರುವಿನಂತೆ’ಯೆಂದು ವರ್ಣಿಸುವನು. ಕೈಪಿಡಿಕಾರರ ಪ್ರಕಾರ, “ಎರಡು ಅಥವಾ ಹೆಚ್ಚು ಪ್ರಕೃತಿಗಳು ಕೂಡಿ ಒಂದು ಶಬ್ದವಾದಾಗ ಸಮಾಸವಾಗುತ್ತದೆ”.

ಸೂತ್ರ : “ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ದವಾಗುವುದಕ್ಕೆ ಸಮಾಸ ಎಂದು ಹೆಸರು”
ಉದಾ:  1. ತಲೆಯಲ್ಲಿ (ಅಲ್ಲಿ) + (ನೋವು) ನೋವು = ತಲೆನೋವು  2. ಕಣ್ಣಿನಿಂದು (ಇಂದ) +(ಕುರುಡ) ಕುರುಡ = ಕಣ್ಣುಕುರುಡ

ವಿಗ್ರಹ ವಾಕ್ಯ : “ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.
ಉದಾ: ಸಮಸ್ತಪದ = ಪೂರ್ವಪದ + ಉತ್ತರ ಪದ
1. ದೇವಮಂದಿರ= ದೇವರ + ಮಂದಿರ    2. ಹೆಜ್ಜೇನು=ಹಿರಿದು + ಜೇನು    3. ಮುಂಗಾಲು= ಕಾಲಿನ + ಮುಂದು
(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ)

ಸಮಾಸ ಪದಗಳಾಗುವ ಸನ್ನಿವೇಶಗಳು : 
1. ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ    2. ಕನ್ನಡ – ಕನ್ನಡ ಶಬ್ದಗಳು ಸೇರಿ    ತದ್ಭವ-ತದ್ಭವ ಶಬ್ದಗಳು ಸೇರಿ  3. ಅಚ್ಚಗನ್ನಡ ಶಬ್ದ– ತದ್ಭವ ಶಬ್ದಗಳು ಸೇರಿ ಸಮಾಸಪದಗಳಾಗುತ್ತವೆ. ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಲಾರದು.

ಸಮಾಸದ ವಿಧಗಳು : ಸಮಾಸದಲ್ಲಿಯ ಎರಡೂ ಪದಗಳು ಸಂಸ್ಕೃತ +ಸಂಸ್ಕೃತ ಶಬ್ದಗಳಿದ್ದರೆ, ಅಥವಾ ಎರಡೂ ಪದಗಳು ಕನ್ನಡ+ಕನ್ನಡ ಶಬ್ದಗಳಿದ್ದರೆ ಸಮಾಸ ಮಾಡಲು ಬರುತ್ತದೆ. ಒಂದು ಪದ ಸಂಸ್ಕೃತ ಇನ್ನೊಂದು ಪದ ಕನ್ನಡ (ಸಂಸ್ಕೃತ +ಕನ್ನಡ) ಶಬ್ದಗಳನ್ನು ಕೂಡಿಸಿ ಸಮಾಸ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ಎನ್ನವರು. ಮತ್ತು ಅದು ದೋಷಯುಕ್ತ ಸಮಾಸ ವೆನ್ನಿಸುವುದು. ಕೇಶಿರಾಜನು ಸಮಾಸಗಳಲ್ಲಿ ‘ಸಂಸ್ಕೃತ ಸಮಾಸ’ ಮತ್ತು ‘ಕನ್ನಡ ಸಮಾಸ’ವೆಂದು ಒಂಭತ್ತು ವಿಧಗಳನ್ನು ಮಾಡಿದ್ದಾನೆ.

ಕೇಶಿರಾಜ ಸಮಾಸಗಳನ್ನು ಐದು ರೀತಿಯಲ್ಲಿ ವರ್ಗೀಕರಿಸಿದ್ದಾನೆ.(ಒಟ್ಟು 9 ವಿಧದ ಸಮಾಸಗಳು)

ಉತ್ತರಪದ ಮುಖ್ಯ ಸಮಾಸ : 1. ತತ್ಪುರುಷ ಸಮಾಸ 2. ಕರ್ಮಧಾರೆಯ ಸಮಾಸ 3. ದ್ವಿಗು ಸಮಾಸ 4. ಕ್ರಿಯಾ ಸಮಾಸ 5. ಗಮಕ ಸಮಾಸ
ಪೂರ್ವಪದ ಮುಖ್ಯ ಸಮಾಸ : 6. ಅವ್ಯಯೀಭಾವ ಸಮಾಸ (ಅಂಶೀ ಸಮಾಸ).
ಎರಡೂ ಪದ ಮುಖ್ಯ ಸಮಾಸ : 7. ದ್ವಂದ್ವ ಸಮಾಸ
ಎರಡೂ ಪದ ಅಮುಖ್ಯ ಸಮಾಸ : 8. ಬಹುವ್ರೀಹಿ ಸಮಾಸ.
ವಿರುದ್ಧ ಪದ ಸಮಾಸ : 9 . ಅರಿಸಮಾಸ.

1. ತತ್ಪುರುಷ ಸಮಾಸ : “ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು”. ಉದಾ:
1. ಮರದ + ಕಾಲ = ಮರಗಾಲ    2. ಬೆಟ್ಟದ + ತಾವರೆ = ಬೆಟ್ಟದಾವರೆ    3. ಕೈ + ತಪ್ಪು = ಕೈತಪ್ಪು    4. ಹಗಲಿನಲ್ಲಿ + ಕನಸು = ಹಗಲುಗನಸು Etc..ಅರಮನೆ, ಎದೆಗುಹೆ, ಜಲರಾಶಿ, ತಲೆನೋವು

2. ಕರ್ಮಧಾರೆಯ ಸಮಾಸ : “ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”.  ಉದಾ:
1. ಹೊಸದು + ಕನ್ನಡ = ಹೊಸಗನ್ನಡ    2. ಹಿರಿದು + ಜೇನು = ಹೆಜ್ಜೇನು    3. ಕಿರಿಯ + ಗೆಜ್ಜೆ = ಕಿರುಗೆಜ್ಜೆ Etc. ಕೆಂದುಟಿ, ಚಿಕ್ಕಮಗು, ಸಿಡಿಮದ್ದು, ಪಂದತಿ

3. ದ್ವಿಗು ಸಮಾಸ : “ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ”  ಉದಾ:  1. ಒಂದು + ಕಣ್ಣು = ಒಕ್ಕಣ್ಣು    2. ಎರಡು + ಬಗೆ = ಇಬ್ಬಗೆ  3. ಸಪ್ತ + ಸ್ವರ = ಸಪ್ತಸ್ವರ  Etc. ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು

4. ಅಂಶಿ ಸಮಾಸ : “ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು”  ಅಂಶವೆಂದರೆ ‘ಭಾಗ’ ಅಥವಾ ‘ಅವಯವ’.  ಉದಾ:   1. ತಲೆಯ + ಮುಂದು = ಮುಂದಲೆ    2. ಬೆರಳಿನ + ತುದಿ = ತುದಿಬೆರಳು    3. ಕರೆಯ + ಒಳಗು = ಒಳಗೆರೆ  Etc. ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ

5. ದ್ವಂದ್ವ ಸಮಾಸ :  “ಎರಡು ಅಥವಾ ಹೆಚ್ಚು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು” ಉದಾ:
1. ಕೆರೆಯೂ + ಕಟ್ಟಿಯೂ + ಬಾವಿಯೂ = ಕೆರೆ ಕಟ್ಟೆ ಬಾವಿಗಳು
2. ಕಾಫಿಯೂ + ತಿಂಡಿಯೂ = ಕಾಫಿ-ತಿಂಡಿ
3. ಬೆಟ್ಟವೂ + ಗುಡ್ಡವೂ = ಬೆಟ್ಟಗುಡ್ಡಗಳು
4. ಅಣ್ಣನು + ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ

ಪ್ರಚಲಿತ ವಿದ್ಯಮಾನಗಳು (09-01-2024)

6. ಬಹುವ್ರೀಹಿ ಸಮಾಸ :   “ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು”. ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ

7. ಕ್ರಿಯಾ ಸಮಾಸ : “ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ”. ಉದಾ:    ಸುಳ್ಳನ್ನು +ಆಡು=ಸುಳ್ಳಾಡು  / ಕಣ್ಣನ್ನು +ತೆರೆ=ಕಣ್ದೆರೆ  /  ವಿಷವನ್ನು +ಕಾರು =ವಿಷಕಾರು  / ಕೈಯನ್ನು +ಮುಗಿ=ಕೈಮುಗಿ  / Etc. ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು

8. ಗಮಕ ಸಮಾಸ : “ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು”. ಉದಾ:
* ಸರ್ವನಾಮಕ್ಕೆ:
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
* ಕೃಂದತಕ್ಕೆ:
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
* ಗುಣವಾಚಕಕ್ಕೆ:
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
* ಸಂಖ್ಯೆಗೆ:
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು.

The post ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..? appeared first on Current Affairs Kannada.

]]>
https://currentaffairskannada.com/kannada-grammar-samasagalu/feed/ 0
ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ https://currentaffairskannada.com/kannada-adverbs-collection/ https://currentaffairskannada.com/kannada-adverbs-collection/#respond Tue, 26 Dec 2023 11:40:11 +0000 http://www.spardhatimes.com/?p=1564 👉 ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ👉 ಹಿತ್ತಲ ಗಿಡ ಮದ್ದಲ್ಲ.👉 ಮಾಡಿದ್ದುಣ್ಣೋ ಮಹರಾಯ.👉 ಕೈ ಕೆಸರಾದರೆ ಬಾಯಿ ಮೊಸರು.👉 ಹಾಸಿಗೆ ಇದ್ದಷ್ತು ಕಾಲು ಚಾಚು.👉 ಅ0ಗೈ ಹುಣ್ಣಿಗೆ

The post ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ appeared first on Current Affairs Kannada.

]]>
👉 ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ
👉 ಹಿತ್ತಲ ಗಿಡ ಮದ್ದಲ್ಲ.
👉 ಮಾಡಿದ್ದುಣ್ಣೋ ಮಹರಾಯ.
👉 ಕೈ ಕೆಸರಾದರೆ ಬಾಯಿ ಮೊಸರು.
👉 ಹಾಸಿಗೆ ಇದ್ದಷ್ತು ಕಾಲು ಚಾಚು.
👉 ಅ0ಗೈ ಹುಣ್ಣಿಗೆ ಕನ್ನಡಿ ಬೇಕೆ.
👉 ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ0ತೆ.
👉 ಎತ್ತೆಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ .
👉 ಮನೇಲಿ ಇಲಿ, ಬೀದೀಲಿ ಹುಲಿ.
👉 ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋದಿಕೊ0ಡನ0ತೆ.

👉 ಕಾರ್ಯಾವಾಸಿ ಕತ್ತೆಕಾಲು ಹಿಡಿ.
👉 ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
👉 ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
👉 ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
👉 ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
👉 ಅಕ್ಕಿ ಮೇಲೆ ಆಸೆ, ನೆಂಟರ ರ ಮೇಲೂ ಪ್ರೀತಿ.
👉 ಅಜ್ಜಿಗೆ ಅರಿವೆ ಚಿಂತೆ , ಮಗಳಿಗೆ ಗ0ಡನ ಚಿ0ತೆ.
👉 ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದನ0ತೆ.
👉 ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.
👉 ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
👉 ಬೇಲೀನೆ ಎದ್ದು ಹೊಲ ಮೆಯ್ದಂತೆ .
👉 ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

👉 ಅಂತೂಇಂತು ಕುಂತಿ ಮಕ್ಕಳಿಗೆ ಇಂತೂ ರಾಜ್ಯವಿಲ್ಲ.
👉 ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
👉 ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.
👉 ದೇವರು ವರ ಕೊಟ್ರು ಪೂಜಾರಿ ಕೊಡ.
👉 ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
👉 ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
👉 ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎಂದರಂತೆ .
👉 ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
👉 ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
👉 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

👉 ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
👉 ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ0ತೆ.
👉 ಭಂಗಿ ದೇವರಿಗೆ ಹೆಂಡುಗುಡುಕ ಪೂಜಾರಿ.
👉 ಕಾಸಿಗೆ ತಕ್ಕ ಕಜ್ಜಾಯ.
👉 ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
👉 ಕೂಸು ಹುಟ್ಟುವ ಮುಂಚೆ ಕುಲಾವಿ.
👉 ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಳಗೆ ತೂರು.
👉 ಇಬ್ಬರ ಜಗಳ ಮೂರನೆಯವನಿಗೆ ಲಾಭ.
👉 ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
👉 ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.

👉 ಉಚ್ಚೇಲಿ ಮೀನು ಹಿಡಿಯೋ ಜಾತಿ.
👉 ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು.
👉 ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
👉 ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
👉 ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ
👉 ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅಂದ ಹಾಗೆ.
👉 ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
👉 ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
👉 ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
👉 ಮಾತು ಬೆಳ್ಳಿ, ಮೌನ ಬಂಗಾರ

👉 ಎಲ್ಲಾರ ಮನೆ ದೋಸೆನೂ ತೂತೆ.
👉 ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು.
👉 ಅಡುಗೆ ಮಾಡಿದವಳಿಗಿಂತ ಬಡಿಸಿದವಲೇ ಮೇಲು.
👉 ತಾಯಿಯಂತೆ ಮಗಳು ನೂಲಿನಂತೆ ಸೀರೆ.
👉 . ಅನುಕೂಲ ಸಿಂಧು , ಅಭಾವ ವೈರಾಗ್ಯ.
👉 ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
👉 ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
👉 ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
👉 ಮನೆಗೆ ಮಾರಿ, ಊರಿಗೆ ಉಪಕಾರಿ.
👉 ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

👉 ಅಲ್ಪರ ಸಂಗ ಅಭಿಮಾನ ಭಂಗ .
👉 ಸಗಣಿಯವನ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು.
👉 ಮಾಡಿದವರ ಪಾಪ ಆಡಿದವರ ಬಾಯಲ್ಲಿ.
👉 ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
👉 ಗೋರ್ಕಲ್ಲ ಮೇಲೆ ನೀರು ಸುರಿದಂತೆ
👉 ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
👉 ಗಾಳಿ ಬಂದಾಗ ತೂರಿಕೋ.
👉 ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
👉 ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
👉 ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ.

👉 ದುಡ್ಡೇ ದೊಡ್ಡಪ್ಪ.
👉 ಬರಗಾಲದಲ್ಲಿ ಅಧಿಕ ಮಾಸ.
👉 ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
👉 ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ ಹಾಗೆ
👉 ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
👉 ಮಂತ್ರಕ್ಕಿಂತ ಉಗುಳೇ ಜಾಸ್ತಿ.
👉 ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
👉 ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
👉 ಕಂತೆಗೆ ತಕ್ಕ ಬೊಂತೆ .
👉 ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

👉 ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.
👉 ಓದಿ ಓದಿ ಮರುಳಾದ ಕೋಚಂಭಟ್ಟ .
👉 ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
👉 ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು.
👉 ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
👉 ಓದುವಾಗ ಓದು, ಆಡುವಾಗ ಆಡು.
👉 ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
👉 ಸ0ಸಾರ ಗುಟ್ಟು, ವ್ಯಾಧಿ ರಟ್ಟು.
👉 ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರಂತೆ .
👉 ಕೊಟ್ಟವನು ಕೋಡಂಗಿ , ಇಸ್ಕೊಂಡೋನು ಈರಭದ್ರ.

👉 ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
👉 ಮುಖ ನೋಡಿ ಮಣೆ ಹಾಕು.
👉 ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ0ತೆ.
👉 ಮಂತ್ರಕ್ಕೆ ಮಾವಿನಕಾಯಿ ಉದುರತ್ಯೇ ?
👉 ತುಂಬಿದ ಕೊಡ ತುಳುಕುವುದಿಲ್ಲ.
👉 ಉಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ.
👉 ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
👉 ಇರಲಾರದೆ ಇರುವೆ ಬಿಟ್ಟುಕೊಂಡ ಹಾಗೆ.
👉 ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
👉 ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ0ಡರು.

👉 ದುಡಿಮೆಯೇ ದುಡ್ಡಿನ ತಾಯಿ.
👉 ಇಲಿ ಬಂತು ಅಂದರೆ ಹುಲಿ ಬಂತು ಎಂದರು .
👉 ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ
👉 ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳೆಯೇ ?
👉 ಇರುಳು ಕಂಡ ಭಾವೀಲಿ ಹಗಲು ಬಿದ್ದರಂತೆ
👉 ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
👉 ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
👉 ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.
👉 ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
👉 ಹೊರಗೆ ಥಳಕು ಒಳಗೆ ಹುಳಕು.

👉 ಸಂಕಟ ಬಂದಾಗ ವೆಂಕಟರಮಣ
👉 ಯಥಾ ರಾಜ ತಥಾ ಪ್ರಜಾ.
👉 ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
👉 ಬೆರಳು ತೋರಿಸಿದರೆ ಹಸ್ತ ನುಂಗಿದಂತೆ .
👉 ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ .
👉 ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
👉 ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ.
👉 ಬಡವನ ಕೋಪ ದವಡೆಗೆ ಮೂಲ.
👉 ಒಪ್ಪೋತ್ತುಂಡವ ಯೋಗಿ, ಎರಡೊತ್ತುತಂದವ ಭೋಗಿ, ಮೂರೊತ್ತುಂಡವ ರೋಗಿ, ನಾಲ್ಕೊತ್ತುಂಡವನ ಹೊತ್ಕೊಂಡ್ಹೋಗಿ.

👉 ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
👉 ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
👉 ಶರಣರ ಬದುಕು ಅವರ ಮರಣದಲ್ಲಿ ನೋಡು.
👉 ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
👉 ಕಳ್ಳನ ಮನಸ್ಸು ಹುಳಿ-ಹುಳಿಗೆ.
👉 ಕೋತಿಗೆ ಹೆಂಡ ಕುಡಿಸಿದ ಹಾಗೆ.
👉 ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
👉 ಹಾಲಿನಲ್ಲಿ ಹುಳಿ ಹಿಂಡಿದಂತೆ .
👉 ಮಳ್ಳಿ ಮಳ್ಳಿ ಮಂಚಕ್ಕೆ ಎಷ್ತು ಕಾಲು ಎಂದರೆ , ಮೂರು ಮತ್ತೊಂದು ಅಂದಳಂತೆ .
👉 ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.

👉 ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ ಹಾಗೆ.
👉 ನಾರಿ ಮುನಿದರೆ ಮಾರಿ.
👉 ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು.
👉 ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ.
👉 ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
👉 ಹರೆಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ.
👉 ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು.
👉 ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
👉 ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು.
👉 ಬೆಳ್ಳಗಿರುವುದೆಲ್ಲಾ ಹಾಲಲ್ಲ.
👉 ಹೊಸ ವೈದ್ಯನಿಗಿಂತ ಹಳೇ ರೋಗೀನೇ ಮೇಲು.

👉 ಬಡವರ ಮನೆ ಊಟ ಚೆನ್ನ, ಶ್ರೀಮಂತರ ಮನೆ ನೋಟ ಚೆನ್ನ.
👉 ತೋಟ ಶೃಂಗಾರ , ಒಳಗೆ ಗೋಣಿ ಸೊಪ್ಪು.
👉 ಬಾಯಿ ಬಿಟ್ಟರೆ ಬಣ್ಣಗೇಡು.
👉 ಸಂಕಟ ಬಂದಾಗ ವೆಂಕಟರಮಣ .
👉 ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದನಂತೆ
👉 ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ.
👉 ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು.
👉 ಮನೆ ತುಂಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊಂಡರಂತೆ .
👉 ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
👉 ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದಂತೆ

👉 ಮೀಸೆ ಬಂದವನಿಗೆ ದೇಶ ಕಾಣಲ್ಲ
👉 ಊರು ಸುಟ್ಟರೂ ಹನುಮಂತರಾಯ ಹೊರಗೆ.
👉 ಆಕಳು ಕಪ್ಪಾದರೆ ಹಾಲು ಕಪ್ಪೆ.
👉 ಕಬ್ಬು ಡೊಂಕಾದರೆ ಸಿಹಿ ಡೊಂಕೇ .
👉 ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
👉 ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ
👉 ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
👉 ನರಿ ಕೂಗು ಗಿರಿ ಮುಟ್ಟುತ್ಯೇ ?
👉 ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
👉 ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ

👉 ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.
👉 ತಂಗನ ಮುಂದೆ ಸಿಂಗವೇ? ಸಿಂಗನ ಮುಂದೆ ಮಂಗನೇ ?
👉 ಕಾಸಿದ್ದರೆ ಕೈಲಾಸ.
👉 ಕಂಕುಳದಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
👉 ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.
👉 ಕೆಲಸವಿಲ್ಲದ ಕುಂಬಾರ ಮಗನ ಮುಕಳಿ ಕೆತ್ತಿದನಂತ .
👉 ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
👉 ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ .
👉 ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ.
👉 ಹೂವಿನ ಜೊತೆ ದಾರ ಮುಡಿಯೇರಿತು.

👉 ಮಳೆ ಹುಯ್ದರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ.
👉 ಐದು ಬೆರಳು ಒಂದೇ ಸಮ ಇದುವುದಿಲ್ಲ.
👉 ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವುದಿಲ್ಲ.
👉 ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
👉 ದೀಪದ ಕೆಳಗೆ ಯಾವತ್ತೂ ಕತ್ತಲೆ.
👉 ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯ್ತು ಎಂದುಕೊಂಡರು
👉 ಅತ್ತ ದರಿ, ಇತ್ತ ಪುಲಿ.
👉 ಬಿಸಿ ತುಪ್ಪ, ನುಂಗೋಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
👉 ಆಪತ್ತಿಗಾದವನೇ ನೆಂಟ .
👉 ಶಂಖದಿಂದ ಬಂದರೇನೇ ತೀರ್ಥ.

👉 ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
👉 ಎಲ್ಲಾ ಜಾಣ, ತುಸು ಕೋಣ.
👉 ಇಟ್ಟುಕೊಂಡವಳು ಇರೋ ತನಕ, ಕಟ್ಟಿಕೊಂಡವಳು ಕೊನೇ ತನಕ.
👉 ಮೂಗಿಗಿಂತ ಮೂಗುತ್ತಿ ಭಾರ.
👉 ನವಿಲನ್ನು ನೋಡಿ ಕೆಂಭೂತ ಪುಕ್ಕ ಕೆದರಿದಂತೆ .
👉 ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ .
👉 ಕಣ್ಣರಿಯದಿದ್ದರೂ ಕರುಳರಿಯುತ್ತದೆ.
👉 ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.
👉 ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.
👉 ಇರೋ ಮೂವರಲ್ಲಿ ಕದ್ದೋರು ಯಾರು ?

👉 ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.
👉 ತೋಳ ಬಿದ್ದರೆ ಆಳಿಗೊಂದು ಕಲ್ಲು.
👉 ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು.
👉 ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
👉 ಮುಸುಕಿನೊಳಗೆ ಗುದ್ದಿಸಿಕೊಂಡಂತೆ .
👉 ತನ್ನ ಓಣಿಯಲ್ಲಿ ನಾಯಿಯೂ ಸಿಂಹ .
👉 ಹೆದರುವವರ ಮೇಲೆ ಕಪ್ಪೆ ಎಸೆದಂತೆ .
👉 ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ
👉 ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?
👉 ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.

👉 ಯುದ್ಧ ಕಾಲೇ ಶಸ್ತ್ರಾಭ್ಯಾಸ.
👉 ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
👉 ನಾಯಿ ಬಾಲ ಇಂದಿಗೂ ಡೊಂಕು .
👉 ಮಹಾಜನಗಳು ಹೋದದ್ದೇ ದಾರಿ.
👉 ಅರವತ್ತಕ್ಕೆ ಅರಳು ಮರಳು.
👉 ಜನ ಮರುಳೋ ಜಾತ್ರೆ ಮರುಳೋ.
👉 ಕುಂಟನಿಗೆ ಎಂಟು ಚೇಶ್ಟೆ.
👉 ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
👉 ಬೊಗಳುವ ನಾಯಿ ಕಚ್ಚುವುದಿಲ್ಲ.
👉 ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.

👉 ಕೈಗೆಟುಕದ ದ್ರಾಕ್ಷಿ ಹುಳಿ.
👉 ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು .
👉 ದುಷ್ಟರ ಕಂಡರೆ ದೂರ ಇರು.
👉 ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ.
👉 ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.
👉 ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
👉 ಹಂಗಿನ ನೆರೆಮನೆಗಿಂತ ಗುಡಿಸಲೇ ಮೇಲು.
👉 ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎಂದೂ ಅಳಬೇಡ.
👉 ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ, ಎಂದೂ ಹೆಚ್ಚು ರುಚಿ.
👉 ಕುದಿಯುವ ಎಣ್ಣೆಯಿಂದ ಕಾದ ತವಾದ ಮೇಲೆ ಬಿದ್ದ ಹಾಗೆ.

👉 ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.
👉 ಹಳೆ ಚಪ್ಪಲಿ, ಹೊಸ ಹೆಂಡತಿ ಕಚ್ಚೂಲ್ಲ.
👉 ರವಿ ಕಾಣದ್ದನ್ನು ಕವಿ ಕಂಡ .
👉 ಕೆಟ್ಟು ಪಟ್ಟಣ ಸೇರು.
👉 ಕಾಲಿನದು ಕಾಲಿಗೆ, ತಲೆಯದು ತಲೆಗೆ.
👉 ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.
👉 ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
👉 ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.
👉 ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.
👉 ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

👉 ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿದಂತೆ .
👉 ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
👉 ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
👉 ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.
👉 ಮದುವೆಯಾಗೋ ಗಂಡ ಅಂದರೆ ನೀನೆ ನನ್ನ ಹೆಂಡತಿಯಾಗು ಅಂದ ಹಾಗೆ.
👉 ಕೈಗೆ ಬಂಡ ತುತ್ತು ಬಾಯಿಗೆ ಬರಲಿಲ್ಲ.
👉 ತಾನೂ ತಿನ್ನ, ಪರರಿಗೂ ಕೊಡ.
👉 ಗಂಡಸಿಗೇಕೆ ಗೌರಿ ದುಃಖ ?
👉 ನಗುವ ಹೆಂಗಸು , ಅಳುವ ಗಂಡಸು ಇಬ್ಬರನ್ನೂ ಸಂಬಾಬಾರದು .
👉 ನೂರು ಜನಿವಾರ ಒಟ್ಟಿಗಿರಬಹುದು, ಮೂರು ಜಡೆ ಒಟ್ಟಿಗಿರುವುದಿಲ್ಲ.

👉 ಗಾಯದ ಮೇಲೆ ಬರೆ ಎಳೆದ ಹಾಗೆ.
👉 ಗುಡ್ಡ ಕಡಿದು, ಹಳ್ಳ ತುಂಬಿಸಿ , ನೆಲ ಸಮ ಮಾಡಿದ ಹಾಗೆ.
👉 ಅತಿ ಆಸೆ ಗತಿ ಕೇಡು.
👉 ವಿನಾಶ ಕಾಲೇ ವಿಪರೀತ ಬುದ್ಧಿ.
👉 ಅತಿಯಾದರೆ ಆಮೃತವೂ ವಿಷವೇ.
👉 ಬಡವ, ನೀ ಮಡಿಗಿದಾಂಗ ಇರು.
👉 ಆತುರಗಾರನಿಗೆ ಬುದ್ಧಿ ಮಟ್ಟ.
👉 ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದ ಹಾಗೆ.
👉 ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.
👉 ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ.

👉 ಉಂಡೂ ಹೋದ, ಕೊಂಡೂ ಹೋದ.
👉 ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಅಂದರಂತೆ
👉 ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರಸಿದ ಹಾಗೆ.
👉 ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.
👉 ಹಸಿ ಗೋಡೆ ಮೇಲೆ ಹರಳು ಎಸೆದಂತೆ .
👉 ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.
👉 ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
👉 ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

The post ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ appeared first on Current Affairs Kannada.

]]>
https://currentaffairskannada.com/kannada-adverbs-collection/feed/ 0