GANHRI – Current Affairs Kannada https://currentaffairskannada.com Current Affairs Kannada Sat, 06 Jan 2024 05:45:12 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png GANHRI – Current Affairs Kannada https://currentaffairskannada.com 32 32 ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ – GANHRI https://currentaffairskannada.com/global-alliance-of-national-human-rights-institutions/ https://currentaffairskannada.com/global-alliance-of-national-human-rights-institutions/#respond Sat, 06 Jan 2024 05:45:12 +0000 https://currentaffairskannada.com/global-alliance-of-national-human-rights-institutions/ ✦ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ : (IAS Prelims 2019 ರ ತಯಾರಿಗಾಗಿ) Global Alliance of National Human Rights Institutions (GANHRI)✦ GANHRI ಯು ಯುನೈಟೆಡ್ ನೇಶನ್ಸ್ ಗೆ ಸೇರಿದ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು, ಜಗತ್ತಿನ…

The post ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ – GANHRI appeared first on Current Affairs Kannada.

]]>
✦ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ : (IAS Prelims 2019 ರ ತಯಾರಿಗಾಗಿ) Global Alliance of National Human Rights Institutions (GANHRI)
✦ GANHRI ಯು ಯುನೈಟೆಡ್ ನೇಶನ್ಸ್ ಗೆ ಸೇರಿದ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು, ಜಗತ್ತಿನ ಎಲ್ಲ ಭಾಗಗಳಿಗೆ ಸೇರಿದ ರಾಷ್ಟ್ರೀಯ ಮಾನವ ಹಕ್ಕುಗಳ (NHRIs) ಸಂಸ್ಥೆಗಳನ್ನೊಳಗೊಂಡಿದೆ.
✦ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ವನ್ನು 1993 ರಲ್ಲಿ ಸ್ಥಾಪಿಸಲಾಯಿತು, ಮತ್ತು ಈ ಹಿಂದೆ ಇದನ್ನು (ICC) ಅಂತರರಾಷ್ಟ್ರೀಯ ಸಹಕಾರ ಸಮಿತಿ ಎಂದು ಕರೆಯಲಾಗುತ್ತಿತ್ತು.
✦ GANHRIಯು ವಿಶ್ವದಾದ್ಯಂತ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ (NHRIs) ಪಾತ್ರವನ್ನು ಪ್ರೋತ್ಸಾಹಿಸುತ್ತದೆ. ಅಲ್ಲದೆ NHRIs ನ ಸದಸ್ಯರು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂವಹನ ನಡೆಸಲು ಮತ್ತು ಮಾಹಿತಿ ವಿನಿಮಯದ ಜೊತೆಗೆ ಪರಸ್ಪರ ಒಪ್ಪಂದ, ಸಮಾಲೋಚನೆಗಳನ್ನು ಸುಲಭಗೊಳಿಸುವ ವೇದಿಕೆಯನ್ನು ನಿರ್ಮಿಸುವುದು ಇದನ್ನು ಅಧಿಕೃತವಾಗಿ 22 ಮಾರ್ಚ್ 2016 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ಎಂದು ಹೊಸದಾಗಿ ಹೆಸರಿಡಲಾಯಿತು.
✦ ವಿಶ್ವದಾದ್ಯಂತ ಇರುವ ಎಲ್ಲಾ NHRI ಗಳ ಸಂಯೋಜನೆಯು ಪ್ಯಾರಿಸ್ ಒಡಂಬಡಿಕೆಯ ಮೂಲತತ್ವಗಳಿಗೆ ಬದ್ಧವಾಗಿರುವಂತೆ ಜವಾಬ್ದಾರಿ ವಹಿಸಿಕೊಂಡು ಖಾತ್ರಿಪಡಿಸಿಕೊಳ್ಳುವುದು ಇದರ ಆದ್ಯ ಕರ್ತವ್ಯವಾಗಿದೆ.
GANHRI ಕಾಯಿದೆ ಪ್ರಕಾರ, GHHRI ನಿಂದ ಮಾನ್ಯತೆ ಪಡೆದ NHRI ಗಳನ್ನು ಮಾತ್ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ತಮ್ಮ ದೇಶಗಳನ್ನು ಪ್ರತಿನಿಧಿಸಲು ಅನುಮತಿಸಲಾಗಿದೆ.
✦ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಕಮಿಷನ್ (NHRC) ವು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ದಿಂದ ನಾಲ್ಕನೆಯ ಬಾರಿಗೆ ‘ಎ’ ಸ್ಥಾನಮಾನದ ಮಾನ್ಯತೆಯನ್ನು ಉಳಿಸಿಕೊಂಡಿದೆ.
NHRC 1999 ರಲ್ಲಿ ಮೊದಲ ಬಾರಿಗೆ ‘A’ ಸ್ಥಾನಮಾನವನ್ನು ಪಡೆದುಕೊಂಡಿತು, ಇದು ಮುಂದುವರೆದು 2006 ಮತ್ತು 2011 ರ ವರದಿಗಳಲ್ಲೂ ಉಳಿಸಿಕೊಂಡಿತ್ತು.

ಪ್ಯಾರಿಸ್ ತತ್ವಗಳು (Paris Principles)

✦ಯುನೈಟೆಡ್ ನೇಷನ್ಸ್ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ)ಯಿಂದ 1993 ರಲ್ಲಿ ಅಳವಡಿಸಿಕೊಂಡ ಪ್ಯಾರಿಸ್ ತತ್ವಗಳು NHRIs ಗಳಿಗೆ ಕನಿಷ್ಠ ಅಂತರರಾಷ್ಟ್ರೀಯ ಮಾನದಂಡಗಳನ್ನು ಒದಗಿಸಿವೆ.
✦ಸಂಪೂರ್ಣವಾಗಿ ಯುಎನ್ ನ ಪ್ಯಾರಿಸ್ ತತ್ತ್ವಗಳಿಗೆ ಅನುಗುಣವಾಗಿ ಸಾಧನೆ ಮಾಡಿದ ಆಯಾ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಕಠಿಣ ಅವಲೋಕನ ಪ್ರಕ್ರಿಯೆಯ ನಂತರ ‘A’ ಸ್ಥಾನಮಾನವನ್ನು ನೀಡಲಾಗುತ್ತದೆ,
✦ಪ್ಯಾರಿಸ್ ತತ್ತ್ವಗಳ ಪ್ರಕಾರ ಮಾನವ ಹಕ್ಕು ಆಯೋಗಗಳು ತಮ್ಮ ಸರಕಾರದಿಂದ, ಕಾನೂನು ಅಥವಾ ಸಂವಿಧಾನದಿಂದ, ಸಾಕಷ್ಟು ತನಿಖೆಯ ಅಧಿಕಾರಗಳಿಂದ, ಹಾಗು ಬಹುಸಂಖ್ಯಾತತೆ, ವಿಫುಲ ಸಂಪನ್ಮೂಲಗಳಿಂದ ಸ್ವಾಯತ್ತತೆಯನ್ನು ಹೊಂದಿರಬೇಕು.

ಅಗತ್ಯವಿರುವ ಆರು ಪ್ರಮುಖ ಮಾನದಂಡ (main criteria) ಗಳು ಹೀಗಿವೆ:

1.ಆಜ್ಞೆ (ಆದೇಶ) ಮತ್ತು ಸಾಮರ್ಥ್ಯ: ವಿಶ್ವವ್ಯಾಪಿ ಮಾನವ ಹಕ್ಕುಗಳ ಮಾನದಂಡಗಳ ಆಧಾರದ ಮೇಲೆ ವಿಶಾಲ ಆದೇಶ ಮಾನದಂಡಗಳು;
2.ಸರ್ಕಾರದಿಂದ ಸ್ವಾಯತ್ತತೆ;
3.ಕಾನೂನು ಅಥವಾ ಸಂವಿಧಾನದಿಂದ ಭರವಸೆಯ ಸ್ವಾತಂತ್ರ್ಯ;
4.ಬಹುಸಾಂಸ್ಕೃತಿಕತೆ;
5.ಸಾಕಷ್ಟು ಸಂಪನ್ಮೂಲಗಳು; ಮತ್ತು ಮುಂದಾಳುತನ
6.ತನಿಖೆಯ ಸಾಕಷ್ಟು ಅಧಿಕಾರ.

ಇತರೇ ಸಂಬಂಧಿತ ಅಂಶಗಳು :

✦ 1945 ಜೂ.26ರಂದು ಮೊದಲು ಮಾನವ ಹಕ್ಕಗಳ ಬಗ್ಗೆ ಪ್ರಸ್ತಾಪವಾಯಿತು. ಅಂತಿಮವಾಗಿ 1948 ಅ.10ರಂದು ಯುನೈಟೆಡ್‌ ಡಿಕ್ಲರೇಷನ್‌ ಆಯಿತು.
✦ ದ್ವಿತೀಯ ಮಹಾ ಯುದ್ಧದ ನಂತರ 1948ರ ಡಿಸೆಂಬರ್‌ 10ರಂದು ಸಂಯುಕ್ತ ರಾಷ್ಟ್ರ ಸಂಘದ ಸಭೆಯಲ್ಲಿ ಮಾನವ ಹಕ್ಕುಗಳ ರಕ್ಷ ಣೆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಅಂದಿನಿಂದ ಜಗತ್ತಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತಿದೆ. ಜತೆಗೆ 1993ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು.

✦1948 ರ ಈ ದಿನದಂದು ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟಣೆಯನ್ನು ಹೊರಡಿಸಿತು ಈ ಪ್ರಕಟಣೆಯ ಪ್ರಸ್ತಾವನೆಯಲ್ಲಿ ಮಾನವ ಹಕ್ಕುಗಳ ಮಹತ್ವದ ಬಗ್ಗೆ ಪ್ರಸ್ತಾಪಿಸುತ್ತಾ “ಎಲ್ಲಾ ಜನಗಳಿಗೂ ಎಲ್ಲಾ ಕಾರ್ಯ ಸಿದ್ದಿಯ ಸಾಮಾನ್ಯ ಪ್ರಮಾಣವೆಂದು, ಕೊನೆಯವರೆಗೂ ಪ್ರತಿ ವ್ಯಕ್ತಿಯು, ಸಮಾಜದ ಪ್ರತಿ ಅಂಗವು ಈ ಹಕ್ಕುಗಳನ್ನು ಸ್ವಾತಂತ್ರ್ಯಗಳನ್ನು ಗೌರವಿಸುವುದನ್ನು ಅಭಿವೃದ್ದಿಗೊಳಿಸಲು ಪ್ರಯತ್ನಿಸಬೇಕೆಂದು ಸದಸ್ಯ ರಾಷ್ಟ್ರಗಳ ಪ್ರಜೆಗಳಲ್ಲಿಯೂ, ಅವುಗಳ ಅಧಿಪತ್ಯಕ್ಕೆ ಒಳಪಟ್ಟ ರಾಷ್ಟ್ರಗಳ ಪ್ರಜೆಗಳಲ್ಲಿಯೂ, ರಾಷ್ಟ್ರದ ಮತ್ತು ಅಂತರಾಷ್ಟ್ರೀಯ ಪ್ರಗತಿಶೀಲವಾದ ಸಾಧನಗಳಿಂದ ಈ ಹಕ್ಕು ಸ್ವಾತಂತ್ರ್ಯಗಳ ಸಾರ್ವತ್ರಿಕವೂ ಫಲದಾಯಕವು ಆದ ಅಂಗಿಕಾರವನ್ನು ಅನುಷ್ಠಾನವನ್ನೂ ಪಡೆಯಬೇಕೆಂದು ಈಗ ಸಾರ್ವಜನಿಕ ಸಭೆಯು ಪ್ರಕಟಿಸುತ್ತದೆ” ಎಂದು ವಿಶ್ವಸಂಸ್ಥೆ 71 ವರ್ಷಗಳ ಹಿಂದೆ ಘೋಷಿಸಿತು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ – NGT (National Green Tribunal)

The post ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ – GANHRI appeared first on Current Affairs Kannada.

]]>
https://currentaffairskannada.com/global-alliance-of-national-human-rights-institutions/feed/ 0