France – Current Affairs Kannada https://currentaffairskannada.com Current Affairs Kannada Wed, 10 Jan 2024 16:00:53 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png France – Current Affairs Kannada https://currentaffairskannada.com 32 32 ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಸಲಿಂಗಕಾಮಿ ಗೇಬ್ರಿಯಲ್ ಅಟ್ಟಲ್ ಆಯ್ಕೆ https://currentaffairskannada.com/gabriel-attal-becomes-frances-youngest-prime-minister/ https://currentaffairskannada.com/gabriel-attal-becomes-frances-youngest-prime-minister/#respond Wed, 10 Jan 2024 16:00:53 +0000 https://www.spardhatimes.com/?p=7750 ಪ್ರಾನ್ಸ್‌ನ ನೂತನ ಪ್ರಧಾನಿಯಾಗಿ 34 ವರ್ಷದ ಗೇಬ್ರಿಯಲ್‌ ಅಟ್ಟಲ್(Gabriel Attal) ನೇಮಕವಾಗಿದ್ದಾರೆ. ಅಧ್ಯಕ್ಷ ಇಮ್ಯಾನುವಲ್ ಮಾಕ್ರೋನ್ ಗೇಬ್ರಿಯಲ್‌ ಅವರನ್ನು ನೇಮಿಸಿದ್ದು, ಫ್ರಾನ್ಸ್‌ನ ಅತೀ ಕಿರಿಯ ಹಾಗೂ ಬಹಿರಂಗವಾಗಿ ಹೇಳಿಕೊಂಡ ಮೊದಲ ಲಿಂಗತ್ವ ಅಲ್ಪಸಂಖ್ಯಾತ(ಸಲಿಂಗಕಾಮಿ) ಪ್ರಧಾನಿ ಎಂಬ ಹೆಗ್ಗಳಿಕೆ ಗೇಬ್ರಿಯಲ್ ಅವರದು. 62…

The post ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಸಲಿಂಗಕಾಮಿ ಗೇಬ್ರಿಯಲ್ ಅಟ್ಟಲ್ ಆಯ್ಕೆ appeared first on Current Affairs Kannada.

]]>
ಪ್ರಾನ್ಸ್‌ನ ನೂತನ ಪ್ರಧಾನಿಯಾಗಿ 34 ವರ್ಷದ ಗೇಬ್ರಿಯಲ್‌ ಅಟ್ಟಲ್(Gabriel Attal) ನೇಮಕವಾಗಿದ್ದಾರೆ. ಅಧ್ಯಕ್ಷ ಇಮ್ಯಾನುವಲ್ ಮಾಕ್ರೋನ್ ಗೇಬ್ರಿಯಲ್‌ ಅವರನ್ನು ನೇಮಿಸಿದ್ದು, ಫ್ರಾನ್ಸ್‌ನ ಅತೀ ಕಿರಿಯ ಹಾಗೂ ಬಹಿರಂಗವಾಗಿ ಹೇಳಿಕೊಂಡ ಮೊದಲ ಲಿಂಗತ್ವ ಅಲ್ಪಸಂಖ್ಯಾತ(ಸಲಿಂಗಕಾಮಿ) ಪ್ರಧಾನಿ ಎಂಬ ಹೆಗ್ಗಳಿಕೆ ಗೇಬ್ರಿಯಲ್ ಅವರದು. 62 ವರ್ಷ ವಯಸ್ಸಿನ ಪ್ರಧಾನಿ ಎಲಿಜಬೆತ್ ಬೋರ್ನ್ ರಾಜೀನಾಮೆ ಬಳಿಕ, ಗೇಬ್ರಿಯಲ್ ಅಟ್ಟಲ್ ಅವರನ್ನು ಘೋಷಿಸಲಾಗಿದೆ.

34ನೇ ವಯಸ್ಸಿನಲ್ಲಿ, ಅಟಲ್ ಅವರು ದೇಶದ ಇತಿಹಾಸದಲ್ಲಿ ಅತ್ಯಂತ ಕಿರಿಯ ಪ್ರಧಾನಿಯಾಗುತ್ತಾರೆ ಮಾತ್ರವಲ್ಲದೆ ಈ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸಿದ ಮೊದಲ ಬಹಿರಂಗ ಸಲಿಂಗಕಾಮಿ ಅಧಿಕಾರಿಯಾಗಿದ್ದಾರೆ.

ಪ್ರಮುಖ ಗ್ರಂಥಗಳು ಮತ್ತು ರಚನಕಾರರು – Famous Books and Authors

ಗೇಬ್ರಿಯಲ್‌ ಅಟ್ಟಲ್ ಅವರು ಇಮ್ಯಾನುವಲ್ ಮಾಕ್ರೋನ್ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದರು. 1984ರಲ್ಲಿ ಲಾರೆಂಟ್ ಫೇಬಿಯಸ್ ಫ್ರಾನ್ಸ್‌ನ ಪ್ರಧಾನಿಯಾಗಿದ್ದಾಗ ಅವರಿಗೆ 37 ವರ್ಷ ವಯಸ್ಸಾಗಿತ್ತು. ಗೇಬ್ರಿಯಲ್‌ ಅವರು ಲಾರೆಂಟ್ ದಾಖಲೆ ಸರಿಗಟ್ಟಿ ಅತೀ ಕಿರಿಯ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚಿನ ದೇಶದ ಜನಾಭಿಪ್ರಾಯ ಸಮೀಕ್ಷೆಯಲ್ಲಿ ನೂತನ ಪ್ರಧಾನಿ ಗೇಬ್ರಿಯಲ್‌ ಅಟ್ಟಲ್ ಫ್ರಾನ್ಸ್‌ನ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಇವರು ಮಾಡಿದ ಕೆಲಸ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು. ಫ್ರಾನ್ಸ್‌ನ ಶಿಕ್ಷಣ ಸಚಿವರಾಗಿದ್ದ ವೇಳೆ ಗೇಬ್ರಿಯಲ್ ಅಟಲ್ ಅವರು ಮುಸ್ಲಿಂ ಮಹಿಳೆಯರು ಮತ್ತು ಯುವತಿಯರು ಧರಿಸುತ್ತಿದ್ದ ಅಬಯಾ ಉಡುಪನ್ನು ಫ್ರೆಂಚ್ ಸರ್ಕಾರಿ ಶಾಲೆಗಳಲ್ಲಿ ಧರಿಸುವಂತಿಲ್ಲ ಎಂದು ವಿವಾದಾತ್ಮಕ ಆದೇಶ ಹೊರಡಿಸಿದ್ದರು. ಇದರಿಂದಲೂ ಕೂಡ ವಿಶ್ವದಾದ್ಯಂತ ಸುದ್ದಿಯಾಗಿದ್ದರು. ನೂತನ ಪ್ರಧಾನಿಯ ಆಯ್ಕೆಯಿಂದ ದೇಶದ ಆಡಳಿತ ಸುಧಾರಣೆಯಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

The post ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಸಲಿಂಗಕಾಮಿ ಗೇಬ್ರಿಯಲ್ ಅಟ್ಟಲ್ ಆಯ್ಕೆ appeared first on Current Affairs Kannada.

]]>
https://currentaffairskannada.com/gabriel-attal-becomes-frances-youngest-prime-minister/feed/ 0