Sheikh Hasina

5ನೇ ಬಾರಿಗೆ ಬಾಂಗ್ಲಾ ಪ್ರಧಾನಿಯಾದ ಶೇಖ್ ಹಸೀನಾ

ಬಾಂಗ್ಲಾದೇಶದ ಪ್ರಧಾನಿ (Bangladesh Prime Minister) ಮತ್ತು ಅವಾಮಿ ಲೀಗ್ (Awami League) ಮುಖ್ಯಸ್ಥ ಶೇಖ್ ಹಸೀನಾ (Sheikh Hasina) ಅವರು ಸಾರ್ವತ್ರಿಕ ಚುನಾವಣೆಯಲ್ಲಿ 300 ರಲ್ಲಿ 299 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಅವಾಮಿ ಲೀಗ್ ಪಕ್ಷವು 224 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿದ್ದಾರೆ. ಶೇಖ್ ಹಸೀನಾ ತಮ್ಮ ಕ್ಷೇತ್ರ ಗೋಪಾಲಗಂಜ್-3 (ಗೋಪಾಲಗಂಜ್ ಹಸೀನಾ ಅವರ ಜನ್ಮಸ್ಥಳ. ) ನಲ್ಲಿ ಭಾರಿ ಮತಗಳ (249,965 ಮತ) ಅಂತರದಿಂದ ಅದ್ಭುತ ಗೆಲುವು ದಾಖಲಿಸಿದ್ದಾರೆ. ಈ ಗೆಲುವಿನ ಮೂಲಕ ಶೇಖ್ ಹಸೀನಾ ಅವರು 1986 ರಿಂದ ಸತತ ಎಂಟನೇ ಬಾರಿಗೆ ಗೋಪಾಲಗಂಜ್-3 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 151 ಆಗಿದ್ದು, 224 ಸ್ಥಾನಗಳನ್ನು ಗೆದ್ದಿರುವ ಅವಾಮಿ ಲೀಗ್ ಮತ್ತೊಮ್ಮೆ ಅಧಿಕಾರ ಪಡೆದಿದೆ. 76 ವರ್ಷದ ಶೇಖ್ ಹಸೀನಾ ಅವರು ಸತತ ನಾಲ್ಕನೇ ಬಾರಿಗೆ ಮತ್ತು ಒಟ್ಟು ಐದನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ವಿರೋಧ ಪಕ್ಷಗಳು ಚುನಾವಣೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ಆಯೋಜಿಸಿದ್ದರಿಂದ ಬಾಂಗ್ಲಾದೇಶದಾದ್ಯಂತ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಚುನಾವಣೆಯಲ್ಲಿ ಕೇವಲ ಶೇ.40ರಷ್ಟು ಮತದಾನ ಮಾತ್ರ ದಾಖಲಾಗಿದೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದಿದೆ. ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ BNP ಮತ್ತು ಅದರ ಮಿತ್ರಪಕ್ಷಗಳು ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸಿದವು. ಇದರಿಂದ ಆ ಪಕ್ಷಗಳೆಲ್ಲ ಈ ಬಾರಿಯ ಚುನಾವಣೆಯಿಂದ ದೂರ ಉಳಿದಿವೆ. ಇದರ ಪರಿಣಾಮವಾಗಿ ಅವಾಮಿ ಲೀಗ್ 300 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ.

ಪ್ರಚಲಿತ ವಿದ್ಯಮಾನಗಳು (08-01-2024)

Comments

No comments yet. Why don’t you start the discussion?

Leave a Reply

Your email address will not be published. Required fields are marked *