ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ.ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಸ್ರೋದ 11ನೇ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. . ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಇಸ್ರೋ ಮುಖ್ಯಸ್ಥ ಕೆ ಶಿವನ್ ಅವರ ಅಧಿಕಾರಾವಧಿ ಜನವರಿ 14,2022 ರಂದು ಕೊನೆಗೊಳ್ಳಲಿದೆ.
# ಯಾರು ಈ ಎಸ್.ಸೋಮನಾಥ್..?
ಕೇರಳದ ಎರ್ನಾಕುಲಂನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಕೇರಳ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಐಐಎಸ್‌ಸಿಯಲ್ಲಿ ಎರೋಸ್ಪೇಸ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದ ನಂತರ ಇಸ್ರೋದಲ್ಲಿ ಕೆಲಸ ಮಾಡಲು ಆರಂಭಿಸಿದರು. ಕೆಲಸಕ್ಕೆ ಸೇರಿದಾಗಿನಿಂದಲೂ ಉಡಾವಣಾ ವಾಹನಗಳ ಕುರಿತು ಅನೇಕ ಸಂಶೋಧನೆಗಳನ್ನು ನಡೆಸಿದರು. ಇಸ್ರೋದ ಬಹುದೊಡ್ಡ ಯೋಜನೆಯಾದ ಮೂರು ಹಂತದ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್-3ರ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಅವರ ಆರಂಭಿಕ ವರ್ಷಗಳಲ್ಲಿ, ಅವರು ಪೋಲಾರ್ ಸ್ಪೇಸ್ ಲಾಂಚ್ ವೆಹಿಕಲ್‌ನ ಏಕೀಕರಣಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಕೆಲಸ ಮಾಡಿದರು.(PSLV) ಮತ್ತು 1995 ಮತ್ತು 2002 ರ ನಡುವೆ PSLV ಯ ಯೋಜನಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದರು. 2003 ರಲ್ಲಿ, ಅವರು GSLV ಮಾರ್ಕ್ III ಯೋಜನೆಯ ಉಪ ಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು ಮತ್ತು ವಾಹನದ ವಿನ್ಯಾಸ, ಅದರ ರಚನೆ ಮತ್ತು ಸೇರಿದಂತೆ ಒಟ್ಟಾರೆ ಮಿಷನ್‌ನ ವಿನ್ಯಾಸಕ್ಕೆ ಸಂಭವಿಸಿದಂತೆ ಮಹತ್ವದ ಕಾರ್ಯವನ್ನು ನಿರ್ವಹಿಸಿದ್ದಾರೆ.ಚಂದ್ರಯಾನ-2, GSAT-9 ಯೋಜನೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಸೋಮನಾಥ್ ಅವರನ್ನು ರಾಕೆಟ್ ವಿಜ್ಞಾನಿ ಎಂದು ಕರೆಯಲಾಗುತ್ತದೆ.
# ISRO ಅಧ್ಯಕ್ಷರ ಪಟ್ಟಿ :
1963 ರಿಂದ ಇಲ್ಲಿಯವರೆಗೆ ಇಸ್ರೋದಲ್ಲಿ 10 ಅಧ್ಯಕ್ಷರು ನೇಮಕಗೊಂಡಿದ್ದಾರೆ. ಇಸ್ರೊ ಪ್ರಸಕ್ತ ಅಧ್ಯಕ್ಷರಾದ ಕೆ. ಶಿವನ್ 2018 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡರು ಇಸ್ರೋದ ಮೊದಲ ಅಧ್ಯಕ್ಷರು ವಿಕ್ರಮ್ ಸಾರಾಭಾಯ್.
1)ವಿಕ್ರಮ್ ಸಾರಾಭಾಯ್
*1963 ರಿಂದ 1972 ರವರೆಗೆ
*9 ವರ್ಷಗಳು
2) ಎಂ. ಜಿ. ಕೆ. ಮೆನನ್
* ಜನವರಿ 1972 ರಿಂದ ಸೆಪ್ಟೆಂಬರ್ 1972 ವರೆಗೆ
* 9 ತಿಂಗಳು
3) ಸತೀಶ್ ಧವನ್
* 1972 ರಿಂದ 1984 ರವರೆಗೆ
* 12 ವರ್ಷಗಳು
4) ಪ್ರೊಫೆಸರ್ ಯು ಆರ್ ರಾವ್
* 1984 ರಿಂದ 1994 ರವರೆಗೆ
* 10 ವರ್ಷಗಳು
5) ಕೆ. ಕಸ್ತೂರಿರಂಗನ್
* 1994 ರಿಂದ 2003 ರವರೆಗೆ
* 9 ವರ್ಷಗಳು
6) ಜಿ ಮಾಧವನ್ ನಾಯರ್
* 2003 ರಿಂದ 2009 ರವರೆಗೆ
* 6 ವರ್ಷಗಳು
7) ಕೆ. ರಾಧಾಕೃಷ್ಣನ್
* 2009 ರಿಂದ 2014 ರವರೆಗೆ
* 5 ವರ್ಷಗಳು
8) ಶೈಲೇಶ್ ನಾಯಕ್
* 1 ಜನವರಿ 2015 ರಿಂದ 2015 ಜನವರಿ 12 ರವರೆಗೆ
* 12 ದಿನಗಳು
9) ಎ. ಎಸ್. ಕಿರಣ್ ಕುಮಾರ್
* 2015 ರಿಂದ 2018 ವರೆಗೆ
* 3 ವರ್ಷಗಳು*
10) 10. ಕೆ. ಶಿವನ್
* ಜನವರಿ 2018 ರಿಂದ ಪ್ರಸ್ತುತ ಅಧ್ಯಕ್ಷರು
# ಇಸ್ರೋ ಸಂಸ್ಥೆ ಬಗ್ಗೆ :
# ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಭಾರತದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ 1969 ರ ಆಗಸ್ಟ್ 15 ರಂದು ಸ್ಥಾಪಿಸಲಾಯಿತು.
# ಇದರ ಕೆಂದ್ರ ಕಛೇರಿಯು ಬೆಂಗಳೂರಿನಲ್ಲಿದೆ.
# ಇಸ್ರೋದ ಮುಖ್ಯ ಕೇಂದ್ರಗಳು ತಿರುವನಂತಪುರ, ಅಹಮಾದಾಬಾದ್, ಮಹೇಂದ್ರಗಿರಿ, ಹಾಸನ ಮತ್ತು ಶ್ರೀಹರಿಕೋಟಗಳಲ್ಲಿವೆ.
# ಇಸ್ರೋದ ಮುಖ್ಯ ಉದ್ದೇಶವೆಂದರೆ -ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ.
# ಇಸ್ರೋ ಉಪಗ್ರಹಗಳನ್ನು ತಯಾರಿಸುವುದಲ್ಲದೆ, ಉಪಗ್ರಹ ವಿಹಾರಗಳನ್ನು ತಯಾರಿಸುತ್ತದೆ.
# ಪ್ರಸ್ತುತ “ಡಾ. ಕೆ. ಸಿವನ್” ರವರು ಇಸ್ರೋದ ಅಧ್ಯಕ್ಷರಾಗಿದ್ದಾರೆ.
# ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹಾರೆನಿಸಿದ ಡಾ. ವಿಕ್ರಂಸಾರಾಬಾಯಿಯವರು ಇಸ್ರೋ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ.
# ಭಾರತದ ಮೊದಲ ಉಪಗ್ರಹವಾದ “ಆರ್ಯಭಟವನ್ನು” 1975ರಲ್ಲಿ ರಷ್ಯಾದಿಂದ ಉಡಾವಣೆ ಮಾಡಲಾಯಿತು.
# ಇಸ್ರೋದ ಪ್ರಮುಖ ಸಂಶೋಧನಾ ಮತ್ತು ಉಪಗ್ರಹ ನಿರ್ಮಾಣ ಮತ್ತು ಉಡ್ಡಯನ ಕೇಂದ್ರಗಳು
1. ಅಹಮದಾಬಾದ್ – ಇಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯವಿದೆ.
2. ಚಂಡೀಗಢ – ಅರೆವಾಹಕಗಳ ಪ್ರಯೋಗಾಲಯವಿದೆ.
3. ಚಿತ್ತೂರು – ರಾಷ್ಟ್ರೀಯ ಹವಾಮಾನ ಸಂಶೋಧನಾ ಪ್ರಯೊಗಾಲಯವಿದೆ.
4. ಬೆಂಗಳೂರು – ಇಸ್ರೋ ಉಪಗ್ರಹ ಕೇಂದ್ರ
5. ಆಂಧ್ರಪ್ರದೇಶ – ಸತೀಶ ಧವನ್ ಬಾಹ್ಯಾಕಾಶ ಕೇಂದ್ರವಿದೆ.( ಶ್ರೀಹರಿಕೋಟಾದಿಂದ ರಾಕೆಟ್‍ಗಳನ್ನು ಉಡಾಯಿಸಲಾಗುತ್ತದೆ.)
6. ತಿರವನಂತಪುರ – ಇಲ್ಲಿ ವಿಕ್ರಂಸಾರಾಬಾಯಿ ಬಾಹ್ಯಾಕಾಶ ಕೇಂದ್ರವಿದೆ.
7. ಕೇರಳದ ತುಂಬಾ – ಧ್ರೂವೀಯ ರಾಕೆಟ್ ಉಡ್ಡಯನ ಕೇಂದ್ರವಿದೆ. ( ಇಲ್ಲಿಂದ ಶಬ್ದೀಯ ರಾಕೆಟ್‍ಗಳನ್ನು ಉಡಾವಣೆ ಮಾಡಳಾಗುತ್ತದೆ.)
8. ಹಾಸನ – ಮಾಸ್ಟ್‍ರ್ ಫಿಸಿಲಿಟಿ ಕೇಂದ್ರ – ಉಪಗ್ರಹಗಳನ್ನು ನಿಯಂತ್ರಿಸಲಾಗುತ್ತದೆ.
# ಇಸ್ರೋದ ಪ್ರಮುಖ ಸಾಧನೆಗಳು
1. 1972 ಅಂತರಿಕ್ಷ ಇಲಾಖೆಯ ಸ್ಥಾಪನೆ
2. 1975, ಏಪ್ರಿಲ್ 19 ,ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ “ಆರ್ಯಭಟ” ಉಡಾವಣೆ
3. 1980 – ಮೊದಲ ದೇಶೀಯ ನಿರ್ಮಿತ “ರೋಹಿಣಿ” ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾಯಿಸಲಾಯಿತು.
4. 1984 – ಇಂಡೋ- ರಷ್ಯನ್ ಅಂತರಿಕ್ಷಯಾನ, ರಾಕೇಶಶರ್ಮ ಅಂತರಿಕ್ಷಕ್ಕೆ ಸ0ಚರಿಸಿದ ಮೊದಲ ಭಾರತೀರಾದರು.
5. 1993 – ಪಿಎಸ್‍ಎಲ್‍ವಿ ರಾಕೆಟ್‍ನ ಉಡಾವಣೆ ವಿಫಲ
6. 1998 – ಪಿಎಸ್‍ಎಲ್‍ವಿ ರಾಕೆಟ್‍ನ ಎರಡನೇ ಉಡಾವಣೆ ಯಶಸ್ವಿಯಾಯಿತು.
7. 2004 – ಶೈಕ್ಷಣಿಕ ಉಪಗ್ರಹ “ ಎಜುಸ್ಯಾಟ್” ಅನ್ನು ಹೊತ್ತ ಜಿಎಸ್‍ಎಲ್‍ವಿ ರಾಕೆಟ್‍ನ ಉಡಾವಣೆ ಯಶಸ್ವಿ.
8. 2013, ನವೆಂಬರ್ 5 ರಂದು ಆಂದ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರ್ರುವಗಾಮಿ ರಾಕೆಟ್ ಮೂಲಕ “ಮಂಗಳಯಾನ”( ಮಾರ್ಸ್ ಒರ್ಬಿಟರ್ ಮಿಷನ್) ನೌಕೆಯನ್ನು ಉಡಾವಣೆ ಮಾಡಲಾಯಿತು. ಇದನ್ನು ಭಾರತವು ಮಂಗಳಗ್ರಹದ ಅನ್ವೆಷಣೆಗೆ ಕಳುಹಿದ ಉಪಗ್ರಹ. 2014 ಸೆಪ್ಟೆಂಬರ್ 24, ಮಂಗಳನ ಕಕ್ಷೆಗೆ ನೌಕೆ ಪ್ರವೇಶ ಯಶಸ್ವಿ. ಚೊಚ್ಚಲ ಯತ್ನದಲ್ಲಿ ಯಶಸು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ.
9. 2008, ಅಕ್ಟೋಬರ್ 22ರಲ್ಲಿ ಇಸ್ರೋ “ಚಂದ್ರಯಾನ- 1” ಯೋಜನೆಯನ್ನು ಕ್ಯಗೊಂಡಿತು. ಇದನ್ನು ಆಂದ್ರಪ್ರದೇಶಗ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ನವೆಂಬರ್ 8, 2008ರಂದು ಚಂದ್ರಯಾನಕ್ಕೆ ತರಳಿದ ನೌಕೆಯನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು.
10. 2019 ,ಜುಲೈ 22 ರಂದು ಆಂದ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಎಸ್ ಎಲ್‍ವಿ ಎಂಕೆ-3 ರಾಕೆಟ್ ಮೂಲಕ “ಚಂದ್ರಯಾನ -2” ರ ಉಡಾವಣೆ ಮಾಡಲಾಯಿತು. ಇದನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಯೋಜನೆಯಾಗಿತ್ತು. ಚಂದ್ರಯಾನ -2 ರ ಲ್ಯಾಂಡ್‍ರ್ “ವಿಕ್ರಮ್” ಸೆಪ್ಟೆಂಬರ್ 7, 2019 ರಂದು ಚಂದ್ರನ ನೆಲ ಸ್ಫರ್ಶ ಮಾಡುವ ಸಮಯದ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು.