ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
1. ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರಕ್ಕೆ ಚಳುವಳಿ ಪ್ರಾರಂಭವಾದದ್ದು…
ಎ. 1947 ಬಿ. 1950
ಸಿ. 1920 ಡಿ. 1931
2. ಬ್ರಿಟಿಷರ ವಿರುದ್ಧ ಬಿರ್ಸಾನ ಮುಂದಾಳತ್ವದಲ್ಲಿ ನಡೆದ ದಂಗೆ –
ಎ. ಸಂತಾಲ ದಂಗೆ
ಬಿ. ಮುಂಡ ದಂಗೆ
ಸಿ. ಕಚ್ಚಾನಾಗ ದಂಗೆ
ಡಿ. ರಾಂಪಾ ದಂಗೆ
3. 1946 ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
ಎ. ಮದ್ರಾಸ್
ಬಿ. ಮುಂಬೈ
ಸಿ. ಮಂಗಳೂರು
ಡಿ. ಬೆಂಗಳೂರು
4. ಈ ಕೆಳಗಿನ ಯಾವ ಗುಪ್ತ ಚಕ್ರವರ್ತಿಯನ್ನು ಸಂಗೀತವಾದ್ಯವನ್ನು ನುಡಿಸುತ್ತಿರುವಂತೆ ಆತನ ನಾಣ್ಯಗಳ ಮೇಲೆ ತೋರಿಸಲಾಗಿದೆ?
ಎ. ಚಂದ್ರಗುಪ್ತ 1
ಬಿ. ಅಶೋಕ
ಸಿ. ಸಮುದ್ರಗುಪ್ತ
ಡಿ. ಸ್ಕಂದಗುಪ್ತ
5. ಬಾದಾಮಿಯ ಚಾಲುಕ್ಯರು ಯಾವ ಶೈಲಿಯ ವಾಸ್ತುಶಿಲ್ಪವನ್ನು ಅಭಿವೃಧ್ದಿಪಡಿಸಿದರು?
ಎ. ನಾಗರ ಬಿ. ದ್ರಾವಿಡ
ಸಿ. ಗೋಪುರಂ ಡಿ. ವೇಸರ
6. ಯಾವ ರಾಷ್ಟ್ರಕೂಟ ದೊರೆಯು ತನ್ನ ರಾಜಧಾನಿಯನ್ನು ಎಲ್ಲೋರದಿಂದ ಮಾನ್ಯಖೇಟಕ್ಕೆ ಸ್ಥಳಾಂತರಿಸಿದೆ?
ಎ. 2 ನೇ ಇಂದ್ರ
ಬಿ. 3 ನೇ ಕೃಷ್ಣ
ಸಿ. ಅಮೋಘವರ್ಷ
ಡಿ. 1 ನೇ ಗೋವಿಂದ
7. ಕೃಷ್ಣರಾಜ ಸಾಗರದಲ್ಲಿ ಬೃಂದಾವನ ಉದ್ಯಾನಗಳ ನಿರ್ಮಾಣಕ್ಕೆ ಕಾರಣವಾದ ಮೈಸೂರಿನ ದಿವಾನರು..
ಎ. ಎಂ. ವಿಶ್ವೇಶ್ವರಯ್ಯ
ಬಿ. ಕಂಠರಾಜೇ ಅರಸ್
ಸಿ. ಆಲ್ಬಿಯನ್ ಬ್ಯಾನರ್ಜಿ
ಡಿ. ಮಿರ್ಜಾ ಇಸ್ಮಾಯಿಲ್
8. ಬೆಂಗಳೂರನ್ನು ಮೊಘಲರಿಂದ ಕೊಂಡುಕೊಂಡ ಮೈಸೂರಿನ ದೊರೆ ಯಾರು?
ಎ. ರಾಜ ಒಡೆಯರು
ಬಿ. ಚಿಕ್ಕದೇವರಾಜ ಒಡೆಯರ್
ಸಿ. ದೊಡ್ಡದೇವರಾಜ ಒಡೆಯರ್
ಡಿ. ಮೂರನೆ ಕೃಷ್ಣರಾಜ ಒಡೆಯರ್
9. ಟಿಪ್ಪು ಸುಲ್ತಾನನು ಈ ಕೆಳಕಂಡವರ ವಿರುದ್ಧ ಫ್ರೇಂಚ್ ಮತ್ತು ಟರ್ಕಿಯವರ ಸಹಾಯವನ್ನು ಪಡೆದುಕೊಂಡ..-
ಎ. ಹೈದರಾಬಾದಿನ ನಿಜಾಮ
ಬಿ. ರಣಜಿತ್‍ಸಿಂಗ್
ಸಿ. ಮರಾಠರು
ಡಿ. ಬ್ರಿಟಿಷರು
10. 1876 – 78 ರಲ್ಲಿ ತಲೆದೋರಿದ ಬರಗಾಲದಲ್ಲಿ ಅತಿಹೆಚ್ಚು ಕಷ್ಟಕ್ಕೊಳಗಾದ ಪ್ರದೇಶಗಳು ಯಾವುವು?
ಎ. ಕಾಶ್ಮೀರ ಮತ್ತು ಲಡಾಕ್
ಬಿ. ಸಿಮ್ಲಾ ಮತ್ತು ಲಾಹೋರ್
ಸಿ. ಮೈಸೂರು ಮತ್ತು ಮದ್ರಾಸ್
ಡಿ. ನೇಪಾಳ ಮತ್ತು ಅಜ್ಮೀರ
11. ಕರ್ನಾಟಕದಲ್ಲಿ ಕೆಳಗಿನ ಸ್ಥಳಗಳಲ್ಲಿ ಯಾವುದನ್ನು ವಲ್ರ್ಡ್ ಹೆರಿಟೇಜ್ ನಿವೇಶನವೆಂದು ಘೋಷಿಸಲಾಗಿದೆ?
ಎ. ಶ್ರೀರಂಗಪಟ್ಟಣ
ಬಿ. ಹಳೇಬೀಡು
ಸಿ. ವಿಜಯಪುರ
ಡಿ. ಹಂಪೆ
12. ಪಂಚಪ್ರಧಾನರೆಂಬ ಮಂತ್ರಮಂಡಲ ಇವರ ಆಳ್ವಿಕೆಯಲ್ಲಿತ್ತು…
ಎ. ದ್ವಾರಸಮುದ್ರದ ಹೊಯ್ಸಳರು
ಬಿ. ಮಾನ್ಯಖೇಡದ ರಾಷ್ಟ್ರಕೂಟರು
ಸಿ. ವಿಜಯನಗರದ ರಾಯರು
ಡಿ. ಮೈಸೂರಿನ ಒಡೆಯರ್
13. ಮೈಸೂರಿನ ಈ ಕೆಳಕಂಡ ಯಾವ ದೊರೆಯು ಫ್ರೇಂಚ್ ಕ್ರಾಂತಿಯ ಬಗ್ಗೆ ತೀವ್ರ ಆಸಕ್ತಿ ತಾಳಿದ ಮತ್ತು ಜಕೋಬಿಯನ್ ಕ್ಲಬ್ಬಿನ ಸದಸ್ಯನಾದ?
ಎ. ಹೈದರಾಲಿ
ಬಿ. ಟಿಪ್ಪು ಸುಲ್ತಾನ್
ಸಿ. ನಾಲ್ವಡಿ ಕೃಷ್ಣರಾಜ ಒಡೆಯರ್
ಡಿ. 10 ನೇ ಚಾಮರಾಜ ಒಡೆಯರ್
14. ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಸೋತು ಹತರಾದವರು ಯಾರು?
ಎ. ಟಿಪ್ಪು ಸುಲ್ತಾನ್
ಬಿ. ಹೈದರಾಲಿ
ಸಿ. ನಿಜಾಮ್ ಉದ್‍ದೌಲ
ಡಿ. ಸೈಯದ್ ಸೋದರರು
15. ಉಳ್ಳಾದ ರಾಣಿ ಅಬ್ಬಕ್ಕ ಚೌಟ ಕೆಳಕಂಡವರೊಡನೆ ಯುದ್ಧ ಮಾಡಿದಳು…
ಎ. ಪೋರ್ಚುಗೀಸ್ ಬಿ. ಫ್ರೇಂಚ್
ಸಿ. ಬ್ರಿಟಿಷ್ ಡಿ. ಅಮೆರಿಕನ್ನರು
16. ಯಾರ ಆಳ್ವಿಕೆಯ ಕಾಲದಲ್ಲಿ ಇಟಲಿಯ ಸಂದರ್ಶನಕಾರ ನಿಕೊಲೊ ಡಿ ಕೌಂಟಿ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ?
ಎ. 2 ನೇ ದೇವರಾಯ
ಬಿ. 1 ನೇ ದೇವರಾಯ
ಸಿ. 1 ನೇ ಬುಕ್ಕ
ಡಿ. ಹರಿಹರ
17. ಈ ಕೆಳಗಿನ ಯಾವುದು ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿತ್ತು?
ಎ. ಕೊಂಡವೀಡು ಬಿ. ಅದ್ದಂಕಿ
ಸಿ. ಕಂಪಿಲಿ ಡಿ.ಪೆನುಕೊಂಡ
18. ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆ ಹೊಂದಿದ್ದರು?
ಎ. ರಾಜ ಒಡೆಯರ್
ಬಿ. ಟಿಪ್ಪು ಸುಲ್ತಾನ್
ಸಿ. ಹೈದರಾಲಿ
ಡಿ. ರಾಣಿ ಲಕ್ಷ್ಮಮ್ಮಣ್ಣಿ
19. ವಿಜಯನಗರ ಸಾಮ್ರಾಜ್ಯದ ಅತಿದೊಡ್ಡ ಆಡಳಿತ ವಿಭಾಗ ಯಾವುದಾಗಿತ್ತು?
ಎ. ಕೊಟ್ಟಂ ಬಿ. ನಾಡು
ಸಿ. ಕುರ್ರಂ ಡಿ. ಮಂಡಲಂ
20. ಈ ಕೆಳಗಿನ ಯಾವ ಪ್ರದೇಶವು ಬಹುಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳ ನಡುವೆ ನಿರಂತರವಾದ ವಿವಾದಕ್ಕೆ ಕಾರಣವಾಗಿತ್ತು?
ಎ. ಕೃಷ್ಣ – ಗೋದಾವರಿ ನದಿ ಮುಖಜ ಭೂಮಿ
ಬಿ. ಕಾವೇರಿ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶ
ಸಿ. ಕೃಷ್ಣ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶ
ಡಿ. ಕೃಷ್ಣ ಮತ್ತು ಕಾವೇರಿ ನದಿಗಳ ನಡುವಿನ ಪ್ರದೇಶ
# ಉತ್ತರಗಳು :
1. ಎ. 1947
2. ಬಿ. ಮುಂಡ ದಂಗೆ
3. ಬಿ. ಮುಂಬೈ
4. ಸಿ. ಸಮುದ್ರಗುಪ್ತ
5. ಡಿ. ವೇಸರ
6. ಸಿ. ಅಮೋಘವರ್ಷ
7. ಡಿ. ಮಿರ್ಜಾ ಇಸ್ಮಾಯಿಲ್
8. ಬಿ. ಚಿಕ್ಕದೇವರಾಜ ಒಡೆಯರ್
9. ಡಿ. ಬ್ರಿಟಿಷರು
10. ಸಿ. ಮೈಸೂರು ಮತ್ತು ಮದ್ರಾಸ್
11. ಡಿ. ಹಂಪೆ
12. ಬಿ. ಮಾನ್ಯಖೇಡದ ರಾಷ್ಟ್ರಕೂಟರು
13. ಎ. ಹೈದರಾಲಿ
14. ಎ. ಟಿಪ್ಪು ಸುಲ್ತಾನ್
15. ಸಿ. ಬ್ರಿಟಿಷ್
16. ಬಿ. 1 ನೇ ದೇವರಾಯ
17. ಡಿ.ಪೆನುಕೊಂಡ
18. ಡಿ. ರಾಣಿ ಲಕ್ಷ್ಮಮ್ಮಣ್ಣಿ
19. ಡಿ. ಮಂಡಲಂ
20. ಸಿ. ಕೃಷ್ಣ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶ