ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸ್ಥಾನಿಕ ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಇದರೊಂದಿಗೆ ದೇಶದ 8 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸಲಾಗಿದೆ. ಉಳಿದ ನಾಲ್ಕು ರಾಜ್ಯಗಳ ರಾಜ್ಯಪಾಲರನ್ನು ಪರಸ್ಪರ ವರ್ಗಾವಣೆ ಮಾಡಲಾಗಿದೆ.

# ಕೇಂದ್ರ ಸರ್ಕಾರ ಕರ್ನಾಟಕ, ಮಧ್ಯಪ್ರದೇಶ, ಹಿಮಾಚಲಪ್ರದೇಶ ಹಾಗೂ ಮಿರೋರಾಂ ರಾಜ್ಯಗಳಿಗೆ ಹೊಸದಾಗಿ ರಾಜ್ಯಪಾಲರನ್ನು ನೇಮಿಸಿದ್ದು, ತ್ರಿಪುರ, ಹರಿಯಾಣ, ಜಾರ್ಖಂಡ್ ಹಾಗೂ ಗೋವಾ ರಾಜ್ಯಗಳ ರಾಜ್ಯಪಾಲರನ್ನು ಪರಸ್ಪರ ವರ್ಗಾವಣೆ ಮಾಡಲಾಗಿದೆ.

# ಕರ್ನಾಟಕದ ಹಾಲಿ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅವರು ಆಗಸ್ಟ್ ವೇಳೆಗೆ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ 73 ವರ್ಷದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ.

# ಯಾರು ಈ ಥಾವರ್ ಚಂದ್ ಗೆಹ್ಲೋಟ್..?
ಮಧ್ಯಪ್ರದೇಶದ ರುಪೇಟಾ ಗ್ರಾಮದಲ್ಲಿ ದಲಿತ ಕುಟುಂಬವೊಂದರಲ್ಲಿ 1948ರ ಮೇ 18ರಂದು ಜನಿಸಿದ ಥಾವರ್ ಚಂದ್ ಗೆಹ್ಲೋಟ್ ಅವರು ಬಿಜೆಪಿಯ ಹಿರಿಯ ನಾಯಕರಲ್ಲೊಬ್ಬರು. ವಿಕ್ರಂ ವಿಶ್ವವಿದ್ಯಾನಿಲಯದಲ್ಲಿ ಬಿಎ ವ್ಯಾಸಂಗ ಮಾಡಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಯೂನಿವರ್ ಸಿಟಿ ಆಫ್ ಸೋಷಿಯಲ್ ಸೈನ್ಸ್‍ನಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಸಜಾಪುರ್ ಲೋಕಸಭಾ ಕ್ಷೇತ್ರದಿಂದ 1996-2009ರ ನಡುವೆ ಸಂಸದರಾಗಿ ಕೆಲಸ ಮಾಡಿದ್ದರು. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಮಾಜಿಕ ನ್ಯಾಯ ಮತ್ತು ಸ್ಥಾನಿಕ ಸಬಲೀಕರಣ ಸಚಿವರಾಗಿ 2014ರ ಮೇ 24ರಿಂದ ಕೆಲಸ ಮಾಡುತ್ತಿದ್ದರು. ಜತೆಗೆ ರಾಜ್ಯಸಭೆಯ ನಾಯಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಅವರನ್ನು ಸಂಪುಟದಿಂದ ಕೈ ಬಿಟ್ಟು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಮಿರೋರಾಂ ರಾಜ್ಯಗಳಿಗೂ ರಾಜ್ಯಪಾಲರ ನೇಮಕ
# ಆಂಧ್ರಪ್ರದೇಶ ವಿಶಾಖಪಟ್ಟಣಂ ಸಂಸದ ಡಾ.ಹರಿಬಾಬು ಕಂಭಾಪತಿ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಈ ಮೊದಲು ಮಿಜೋರಾಂ ರಾಜ್ಯಪಾಲರಾಗಿದ್ದ ಶ್ರೀಧರನ್ ಪಿಣ್ಣೈ ಅವರನ್ನು ಗೋವಕ್ಕೆ ವರ್ಗಾವಣೆ ಮಾಡಿ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

# ಗೋವಾದ ಬಿಜೆಪಿ ಮುಖಂಡ ರಾಜೇಂದ್ರ ವಿಶ್ವನಾಥ್ ಅರ್ಲೆಕ್ಕರ್ ಅವರನ್ನು ಹಿಮಾಚಲಪ್ರದೇಶಕ್ಕೆ, ಗುಜರಾತ್‍ನ ಮಾಜಿ ಸಚಿವ ಮಂಗೂಭಾಯಿ ಛಗನ್‍ಭಾಯ್ ಪಟೇಲ್ ಅವರನ್ನು ಮಧ್ಯಪ್ರದೇಶಕ್ಕೆ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

# ಉಳಿದಂತೆ ಮಿಜೋರಾಂನ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಣ್ಣೈ ಅವರನ್ನು ಗೋವಾಕ್ಕೆ , ಹರಿಯಾಣದ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯಾ ಅವರನ್ನು ತ್ರಿಪುರಾಕ್ಕೆ, ತ್ರಿಪುರಾದ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಜಾರ್ಕಂಡ್‍ಗೆ, ಹಿಮಾಚಲಪ್ರದೇಶದ ರಾಜ್ಯಪಾಲ ಬಂಡಾರುದತ್ತಾತ್ರೇಯ ಅವರನ್ನು ಹರಿಯಾಣದ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಗುತ್ತಿದೆ.