Oscars 2025

Oscar 2025 : 97ನೇ ಆಸ್ಕರ್ ಪ್ರಶಸ್ತಿ ಪ್ರಧಾನ, ಇಲ್ಲಿದೆ ವಿಜೇತರ ಪಟ್ಟಿ

Oscar Awards 2025 Winner List

Oscar 2025 : Oscar Awards 2025 Winner List: 2025ರ ಆಸ್ಕರ್ ಪ್ರಶಸ್ತಿ ( 97ನೇ ವರ್ಷದ) ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್​ನಲ್ಲಿ (ಮಾರ್ಚ್​ 3 ರಂದು) ಅದ್ದೂರಿಯಾಗಿ ನಡೆಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವಾರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳ ಪಟ್ಟಿಯಲ್ಲಿ ‘ದಿ ಬ್ರೂಟಲಿಸ್ಟ್’ ಚಿತ್ರದ ಅದ್ಭುತ ಅಭಿನಯಕ್ಕಾಗಿ ನಟ ಆಡ್ರಿಯನ್ ಬ್ರಾಡಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ (Oscar Awards) ಸ್ವೀಕರಿಸಿದರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಮೈಕಿ ಮ್ಯಾಡಿಸನ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾದರು.

ದಿ ಬ್ರೂಟಲಿಸ್ಟ್ ಚಿತ್ರದ ಅದ್ಭುತ ಅಭಿನಯಕ್ಕಾಗಿ ನಟ ಆಡ್ರಿಯನ್ ಬ್ರಾಡಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದರು. ಬ್ರಾಡಿ ಅವರಿಗೆ ಇದು ಎರಡನೇ ಆಸ್ಕರ್ ಪ್ರಶಸ್ತಿ. ಇದಕ್ಕೂ ಮೊದಲು ಅವರು ದಿ ಪಿಯಾನಿಸ್ಟ್ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಗೆದ್ದಿದ್ದರು.ಅತ್ಯುತ್ತಮ ನಟಿ ವಿಭಾಗದಲ್ಲಿ ಮೈಕಿ ಮ್ಯಾಡಿಸನ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದರು.

ಮ್ಯಾಡಿಸನ್ ಅವರು ಡೆಮಿ ಮೂರ್, ಫೆರ್ನಾಂಡಾ ಟೊರೆಸ್ ಮತ್ತು ಸಿಂಥಿಯಾ ಎರಿವೊ ಅವರಂತಹ ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ಪಡೆದರು. ಅನೋರಾ ಸಿನಿಮಾದಲ್ಲಿ ತಮ್ಮ ಅದ್ಭುತ ಅಭಿಯನಕ್ಕಾಗಿ ಮ್ಯಾಡಿಸನ್ ಈ ಗೌರವಕ್ಕೆ ಭಾಜನರಾಗಿದ್ದಾರೆ.ನಿರ್ದೇಶಕ, ಬರಹಗಾರ ಮತ್ತು ಸಂಪಾದಕ ಸೀನ್ ಬೇಕರ್ ಅವರು ಅನೋರಾ ಚಿತ್ರದ ಕೆಲಸಕ್ಕಾಗಿ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು.

ಅನುಜಾ ಕೈತಪ್ಪಿದ ಪ್ರಶಸ್ತಿ : Anuja
ಬೆಸ್ಟ್ ಲೈವ್ ಆ್ಯಕ್ಷನ್ ಕಿರುಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಬಾಲಿವುಡ್‌ನ ‘ಅನುಜಾ’ ಚಿತ್ರ, 2025ರ ಆಸ್ಕರ್ ಪ್ರಶಸ್ತಿಯನ್ನು ಕಡೆಗೂ ಕಳೆದುಕೊಂಡಿತು. ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅನಿತಾ ಭಾಟಿಯಾ ನಿರ್ಮಾಣದಲ್ಲಿ ಮೂಡಿಬಂದ ಅನುಜಾ, ‘ಐ ಆಮ್ ನಾಟ್ ಎ ರೋಬೋಟ್’ ಸಿನಿಮಾ ವಿರುದ್ಧ ಸೋಲು ಕಂಡಿತು. ‘ಎ ಲಿಯನ್’, ‘ಐ ಆಮ್ ನಾಟ್ ಎ ರೋಬೋಟ್’, ‘ದಿ ಲಾಸ್ಟ್ ರೇಂಜರ್’ ಮತ್ತು ‘ದಿ ಮ್ಯಾನ್ ಹೂ ಕುಡ್ ನಾಟ್ ರಿಮೇನ್ ಸೈಲೆಂಟ್’ ಜತೆಗೆ ಸ್ಪರ್ಧಿಸಿದ ಹಿಂದಿ ಚಿತ್ರ ಆಸ್ಕರ್ ಪಡೆಯುವಲ್ಲಿ ವಿಫಲಗೊಂಡಿದ್ದು, ಸದ್ಯ ಭಾರತೀಯರಲ್ಲಿ ಬೇಸರ ಮೂಡಿಸಿದೆ.

ಆಡಮ್ ಜೆ. ಗ್ರೇಮ್ಸ್ ನಿರ್ದೇಶಿಸಿದ ‘ಅನುಜಾ’ ಚಿತ್ರ, ಓರ್ವ ಬಡ ಯುವತಿಯ ಕಥೆಯನ್ನು ಹೊತ್ತು ಸಾಗಿದೆ. ದೆಹಲಿಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರದಲ್ಲಿ ನಟಿ ಸಜ್ಜಾ ಪಠಾಣ್ ಅಭಿನಯಿಸಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತ ಒಬ್ಬ ಹೆಣ್ಣುಮಗಳ ಜೀವನ ಎಷ್ಟು ಕಠಿಣ, ಸವಾಲಿನ ಹಾದಿ ಹೇಗಿರುತ್ತದೆ ಎಂಬುದನ್ನು ಅನುಜಾ ಮೂಲಕ ಪ್ರೇಕ್ಷಕರಿಗೆ ಕಟ್ಟುಕೊಡಲಾಗಿದೆ. ಚಿತ್ರಕ್ಕೆ ಸುಚಿತ್ರ ಮಟ್ಟೆ, ಮಿಂಡಿ ಕಾಲಿಂಗ್, ಗುಣೀತ್ ಮೊಂಗಾ ಕಪೂರ್, ಕೃಶನ್ ನಾಯಕ್, ಆರನ್ ಕೊಪ್, ದೇವಾನಂದ ಗ್ರೇಟ್ಸ್, ಮೈಕೆಲ್ ಗ್ರೇಮ್ಸ್, ಕ್ಷೀತಿಜ್ ಸೈನಿ ಮತ್ತು ಅಲೆಕ್ಸಾಂಡ್ರಾ ಬೇನಿ ಜಂಟಿಯಾಗಿ ಬೆಂಬಲ ನೀಡಿರುವುದು ವಿಶೇಷ,

ಹಿಂದಿಯಲ್ಲಿ ಮಾತನಾಡಿದ ನಿರೂಪಕ :
ನಿರೂಪಕ ಕೊನಾನ್ ಒಬ್ರಿಯಾನ್ ಸ್ಪ್ಯಾನಿಷ್, ಹಿಂದಿ ಮತ್ತು ಮ್ಯಾಂಡ್ರಿಯನ್ ಭಾಷೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು. ಬಹುಶಃ ಭಾರತದ ಜನ ಬೆಳಿಗ್ಗೆ ಉಪಹಾರ ಸೇವಿಸುತ್ತಾ ಈ ಕಾರ್ಯಕ್ರಮ ವೀಕ್ಷಿಸುತ್ತಿರಬೇಕು ಎಂದು ಒಬ್ರಿಯಾನ್ ನುಡಿದರು. ಚೀನಾದ ಚಲನಚಿತ್ರಗಳಲ್ಲಿ ತಮಗೆ ಅವಕಾಶ ನೀಡುವ ಮೂಲಕ ‘ಹಣಕಾಸು ನೆರವು’ ಒದಗಿಸುವಂತೆ ಚೀನಾಗೆ ಮನವಿ ಮಾಡಿಕೊಂಡರು.

ಆಸ್ಕ‌ರ್ ವಿಜೇತರ ಪಟ್ಟಿ ಈ ಕೆಳಕಂಡಂತಿದೆ : Academy Awards
*ಅತ್ಯುತ್ತಮ ಪೋಷಕ ನಟ – ಕೀರನ್ ಕಲ್ಕಿನ್ (ಎ ರಿಯಲ್ ಪೇನ್)
*ಅತ್ಯುತ್ತಮ ಅಡಾಪ್ಪೆಡ್ ಸ್ಟ್ರೀನ್‌ಪ್ಲೇ – ಪೀಟ‌ರ್ ಸ್ಕ್ಯಾಘನ್ (ಕಾಶ್ಮೀವ್)
*ಅತ್ಯುತ್ತಮ ಮೂಲ ಚಿತ್ರಕಥೆ – ಸೀನ್ ಬೇಕರ್ (ಅನೋರಾ)
*ಅತ್ಯುತ್ತಮ ವೇಷಭೂಷಣ ವಿನ್ಯಾಸ – ಪಾಲ್ ಟೇಜ್‌ವೆಲ್ (ವಿಕೆಡ್)
*ಅತ್ಯುತ್ತಮ ಅನಿಮೇಟೆಡ್ ಫೀಚರ್ ಫ್ಲೋ
*ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್
*ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ – ದಿ ಸಬ್‌ಸ್ಟೆನ್ಸ್‌
*ಅತ್ಯುತ್ತಮ ಸಂಕಲನ – ಸೀನ್ ಬೇಕರ್ (ಅನೋರಾ)
*ಅತ್ಯುತ್ತಮ ಪೋಷಕ ನಟಿ ಜೋ ಸಲ್ದಾನಾ (ಎಮಿಲಿಯಾ ಪೆರೆಜ್)
*ಅತ್ಯುತ್ತಮ ಮೂಲ ಹಾಡು – ಎಲ್ ಮಾಲ್ (ಎಮಿಲಿಯಾ ಪೆರೆಜ್)
*ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ನಾಥನ್ ಕೌಲಿ, ಲೀ ಸ್ಯಾಂಡಲ್ಸ್ (ವಿಕೆಡ್)
*ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ನೋ ಅದರ್ ಲ್ಯಾಂಡ್
*ಅತ್ಯುತ್ತಮ ಸಾಕ್ಷ್ಯಚಿತ್ರ – ದಿ ಓನ್ದಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
*ಅತ್ಯುತ್ತಮ ಧ್ವನಿ – ಡ್ಯೂನ್ ಭಾಗ 2
*ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ – ಐ ಆಮ್ ನಾಟ್ ಎ ರೋಬೋಟ್
*ಅತ್ಯುತ್ತಮ ಛಾಯಾಗ್ರಹಣ – ಲಾಲ್ ಕ್ರೇಲ್ (ದಿ ಬ್ರೂಟಲಿಸ್ಟ್)
*ಅತ್ಯುತ್ತಮ ನಿರ್ದೇಶಕ – ಸೀನ್ ಬೇಕರ್ (ಅನೋರಾ)
*ಅತ್ಯುತ್ತಮ ನಟ – ಆಡ್ರಿಯನ್ ನಿಕೋಲಸ್ ಬ್ರಾಡಿ (ದಿ ಬೂಟಲಿಸ್ಟ್)
*ಅತ್ಯುತ್ತಮ ಮೂಲ ಸಂಗೀತ – ಡೇನಿಯಲ್ ಬ್ಲೂಂಬರ್ಗ್ (ದಿ ಬ್ರೂಟಲಿಸ್ಟ್)
*ಅತ್ಯುತ್ತಮ ನಟಿ – ಮೈಕಿ ಮ್ಯಾಡಿಸನ್ (ಅನೋರಾ)

Here’s the full list of winners of Oscars 2025:
Best Picture: Anora
Best Actress: Mikey Madison (Anora)
Best Actor: Adrien Brody (The Brutalist)
Best Director: Sean Baker (Anora)
Best Supporting Actress: Zoe Saldana (Emilia Perez)
Best Supporting Actor: Kieran Culkin (A Real Pain)
Best Film Editing: Sean Baker (Anora)
Best Original Song: “El Mal” (Emilia Perez)
Best Sound: Dune: Part Two
Best Adapted Screenplay: Conclave (Peter Straughan)
Best Original Screenplay: Anora (Sean Baker)
Best Visual Effects: Dune: Part Two
Best Documentary Short Film: The Only Girl in the Orchestra
Best Production Design: Wicked (Nathan Crowley)
Best Original Score: The Brutalist (Daniel Blumberg)
Best Live Action Short Film: I’m Not a Robot
Best Animated Short Film: In the Shadow of the Cypress
Best Costume Design: Wicked (Paul Tazewell)
Best International Feature Film: I’m Still Here (Brazil)
Best Makeup and Hairstyling: The Substance
Best Cinematography: The Brutalist (Lol Crawley)
Best Documentary Feature Film: No Other Land
Best Animated Feature Film: Flow

Oscars Awards : ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?