ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

1. ಭಾರತದಲ್ಲಿ ಅಣುಶಕ್ತಿ ಆಯೋಗವನ್ನು ಯಾವಾಗ ಸ್ಥಾಪಿಸಲಾಯಿತು..?
ಎ. 1948
ಬಿ. 1950
ಸಿ. 1947
ಡಿ. 1949

2. ಭಾರತವು ಕಳೆದೆರಡು ಬಾರಿ ಅಣುಸ್ಫೋಟವನ್ನು ನಡೆಸಿದಾಗ ಪ್ರಧಾನಮಂತ್ರಿಗಳಾದ್ದವರು ಯಾರು..?
ಎ. ಇಂದಿರಾಗಾಂಧಿ ಮತ್ತು ರಾಜೀವಗಾಂಧಿ
ಬಿ. ಇಂದಿರಾಗಾಂಧಿ ಮತ್ತು ಎ. ಬಿ. ವಾಜಪೇಯಿ
ಸಿ. ರಾಜೀವಗಾಂಧಿ ಮತ್ತು ವಿ.ಪಿ. ಸಿಂಗ್
ಡಿ. ಮೇಲಿನ ಯಾರೂ ಅಲ್ಲ

3. ಭಾಭಾ ಅಣು ಸಂಶೋದನಾ ಕೇಂದ್ರ ಪ್ರಾರಂಭವಾದದ್ದು ಯಾವಾಗ..?
ಎ. 1957
ಬಿ. 1950
ಸಿ. 1953
ಡಿ. 1948

4. ಭಾಭಾ ಅಣು ಸಂಶೋಧನಾ ಕೇಂದ್ರದ ಮುಖ್ಯ ಕೇಂದ್ರ ಎಲ್ಲಿದೆ..?
ಎ. ಕೊಲ್ಕತ್ತಾ
ಬಿ. ಚೆನ್ನೈ
ಸಿ. ಟ್ರಾಂಬೆ, ಮುಂಬಯಿ
ಡಿ. ಲಕ್ನೋ

5. ಭಾರತವು ತನ್ನ ಮೊದಲ ಅಣುಸ್ಫೋಟವನ್ನು ನಡೆಸಿದ್ದು ಯಾವಾಗ..?
ಎ. ಮೇ 18, 1974
ಬಿ. ಮೇ 1975
ಸಿ. ಮೇ 1976
ಡಿ. ಅಕ್ಟೋಬರ್ 1974

6. ಅಣುಶಕ್ತಿ ಆಯೋಗದ ಮೊದಲ ಅಧ್ಯಕ್ಷರು ಯಾರು..?
ಎ. ರಾಜಾ ರಾಮಣ್ಣ
ಬಿ. ಡಾ. ಹೋಮಿ. ಜೆ. ಭಾಭಾ
ಸಿ. ಡಾ. ಕಸ್ತೂರಿರಂಗನ್
ಡಿ. ಮೇಲಿನ ಯಾವುದೂ ಅಲ್ಲ

7. ಭಾರತದ ಅಣುಶಕ್ತಿ ಇಲಾಖೆಯನ್ನು ಸ್ಥಾಪಿಸಿದ್ದು ಯಾವಾಗ..?
ಎ. 1948
ಬಿ. 1950
ಸಿ. 1954
ಡಿ. 1956

8. 1971 ರಲ್ಲಿ ಸ್ಥಾಪಿಸಲಾದ ಇಂದಿರಾಗಾಂಧಿ ಅಣು ಸಂಶೋಧನಾ ಕೇಂದ್ರ ಎಲ್ಲಿದೆ..?
ಎ. ಮುಂಬಯಿ
ಬಿ. ಹೈದರಾಬಾದ್
ಸಿ. ಕಲ್ಪಾಕಂ
ಡಿ. ಕೊಲ್ಕತ್ತಾ

9. ಏಷ್ಯಾದ ಮೊದಲ ಪರಮಾಣು ರಿಯಾಕ್ಟರ್ ಯಾವುದು..?
ಎ. ಧ್ರುವ
ಬಿ. ಸೈರಸ್
ಸಿ. ಪೂರ್ಣಿಮ
ಡಿ. ಅಪ್ಸರ

10. ಭಾರತದ ಮೊದಲ ಅಣು ವಿದ್ಯುತ್ ಉತ್ಪಾದನಾ ಕೇಂದ್ರ ಯಾವುದು..?
ಎ. ರಾಜಸ್ಥಾನ ಅಣು ವಿದ್ಯುತ್ ಕೇಂದ್ರ
ಬಿ. ತಾರಾಪುರ ಅಣು ವಿದ್ಯುತ್ ಕೇಂದ್ರ
ಸಿ. ಮದ್ರಾಸ್ ಅಣು ವಿದ್ಯುತ್ ಕೇಂದ್ರ
ಡಿ. ನರೋರ ಅಣು ವಿದ್ಯುತ್ ಕೇಂದ್ರ

11. ಭಾರತವು ತನ್ನ ಪರಿಕ್ಷಾರ್ಥ ಅಣುಸ್ಫೋಟಗಳನ್ನು ಎಲ್ಲಿ ನಡೆಸಿತು..?
ಎ. ರಾಜಸ್ಥಾನದ ಪೋಖ್ರಾನ್
ಬಿ. ಧನ್‍ಬಾದ್
ಸಿ. ಸಿರ್ಸಾ
ಡಿ. ಕಕ್ರಾಪರ್

12. ಭಾರತದ ಮೊದಲ ದೇಶಿಯವಾಗಿ ನಿರ್ಮಿತವಾದ ಪರಮಾಣು ರಿಯಾಕ್ಟರ್ ಯಾವುದು..?
ಎ. ಅಪ್ಸರ
ಬಿ. ಧ್ರುವ
ಸಿ. ಪೂರ್ಣಿಮ
ಡಿ. ಮೇಲಿನ ಯಾವುದೂ ಅಲ್ಲ

13. ಭಾರತದ ಅಣು ಶಕ್ತಿ ನಿಯಂತ್ರಣ ಮಂಡಳಿಯನ್ನು ಯಾವಾಗ ಸ್ಥಾಪಿಸಲಾಯಿತು..?
ಎ. 1982
ಬಿ. 1983
ಸಿ. 1984
ಡಿ. 1985

14. ನರೋರ ಅಣುವಿದ್ಯುತ್ ಕೇಂದ್ರ ಯಾವ ರಾಜ್ಯದಲ್ಲಿದೆ..?
ಎ. ಗುಜರಾತ್
ಬಿ. ರಾಜಸ್ಥಾನ
ಸಿ. ಉತ್ತರಪ್ರದೇಶ
ಡಿ. ಮಹರಾಷ್ಟ್ರ

15. ತಮಿಳುನಾಡಿನ ಯಾವ ಸ್ಥಳದಲ್ಲಿ ಪ್ರಮುಖ ಅಣುವಿದ್ಯುತ್ ಕೇಂದ್ರವಿದೆ..?
ಎ. ಮಧುರೈ
ಬಿ. ಕುಂದನ್‍ಕುಲಂ
ಸಿ. ಚೆನ್ನೈ
ಡಿ. ಕೊಯಮತ್ತೂರು

# ಉತ್ತರಗಳು :
1. ಎ. 1948
2. ಬಿ. ಇಂದಿರಾಗಾಂಧಿ ಮತ್ತು ಎ. ಬಿ. ವಾಜಪೇಯಿ
3. ಎ. 1957
4. ಸಿ. ಟ್ರಾಂಬೆ, ಮುಂಬಯಿ
5. ಎ. ಮೇ 18, 1974
6. ಬಿ. ಡಾ. ಹೋಮಿ. ಜೆ. ಭಾಭಾ
7. ಸಿ. 1954
8. ಸಿ. ಕಲ್ಪಾಕಂ
9. ಡಿ. ಅಪ್ಸರ
10. ಬಿ. ತಾರಾಪುರ ಅಣು ವಿದ್ಯುತ್ ಕೇಂದ್ರ
11. ಎ. ರಾಜಸ್ಥಾನದ ಪೋಖ್ರಾನ್
12. ಬಿ. ಧ್ರುವ
13. ಬಿ. 1983
14. ಸಿ. ಉತ್ತರಪ್ರದೇಶ
15. ಬಿ. ಕುಂದನ್ಕುಲಂ

# ಇವುಗಳನ್ನೂ ಓದಿ..
# ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
# ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
# ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ