ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2

ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.   ನವೆಂಬರ್ 26, 1949 ರಂದು ಸಂವಿಧಾನ ರಚನಾ ಸಭೆಯಿಂದ ಅಂಗೀಕರಿಸಲ್ಪಟ್ಟ ಕರಡು ಸಂವಿಧಾನ ಮತ್ತು ಭಾರತದ ಸಂವಿಧಾನಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿದ್ದವು.
2. ಭಾರತದ ಸ0ವಿಧಾನದ ಪ್ರಕಾರ, ಸಂಸತ್ತು ಬೇರೆ ರೀತಿ ಕಾನೂನು ರೂಪಿಸಿಲ್ಲವಾದರೆ, ಸುಪ್ರೀಂಕೋರ್ಟ್‍ನ ಎಲ್ಲಾ ನಡಾವಳಿಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ನಡೆಯಬೇಕು.
ಮೇಲಿನ ಯಾವ ಹೇಳಿಕೆಗಳು ಸರಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 1 ಅಥವಾ 2 ಯಾವುದೂ ಅಲ್ಲ.

2. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಯಾವುದೇ ರಾಜ್ಯದ ರಾಜ್ಯಪಾಲರು, ಯಾವುದೇ ಒಂದು ಮಸೂದೆಯನ್ನು ರಾಷ್ಟ್ರಪತಿಯವರ ಪರಿಗಣನೆಗಾಗಿ ಕಾಯ್ದಿಡಬಹುದು.
2. ರಾಜ್ಯದಲ್ಲಿ ಹೊರಡಿಸಲ್ಪಡುವ ಸುಗ್ರೀವಾಜ್ಞೆಯೊಂದನ್ನು ರಾಜ್ಯಪಾಲರು ಯಾವುದೇ ಸಂದರ್ಭದಲ್ಲಿ ಹಿಂಪಡೆಯಬಹುದು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 1 ಮತ್ತು 2 ಯಾವೂದು ಅಲ್ಲ

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಭಾರತದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಯಾವುದೇ ಮಸೂದೆಯನ್ನು ಸಂಸತ್ತಿನ ಪುನರ್‍ಪರಿಶೀಲನೆಗೆ ವಾಪಾಸು ಮಾಡಿದ್ದಲ್ಲಿ ಮತ್ತು ಸಂಸತ್ತಿನ ಉಭಯ ಸದನಗಳು ಸದರಿ ಮಸೂದೆಗೆ ಯಾವುದೇ ತಿದ್ದುಪಡಿ ಮಾಡದೆ ಅಂಗೀಕರಿಸಿ, ಪುನ: ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಿದ್ದಲ್ಲಿ, ರಾಷ್ಟ್ರಪತಿಗಳು ಸದರಿ ಮಸೂದೆಯನ್ನು ಅಂಗೀಕರಿಸದಿರುವ ಅಧಿಕಾರವನ್ನು ಹೊಂದಿದ್ದಾರೆ.
2. ಭಾರತದ ಸಂವಿಧಾನದ ಪ್ರಕಾರ, ಕೇಂದ್ರ ಮಂತ್ರಿಮಂಡಲವು ಲೋಕಸಭೆ ಹಾಗೂ ರಾಜ್ಯಸಭೆಗಳೆರಡಕ್ಕೂ ಜವಾಬ್ದಾರಿಯಾಗಿದೆ.
ಮೇಲಿನ ಯಾವ ಹೇಳಿಕೆ ಸರಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 1 ಅಥವಾ 2 ಯಾವುದೂ ಅಲ್ಲ.

4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಭಾರತದ ರಾಷ್ಟ್ರ ಧ್ವಜದ ವಿನ್ಯಾಸವನ್ನು ಸಂವಿಧಾನ ರಚನಾ ಸಭೆಯು ಜುಲೈ 22, 1947 ರಂದು ಅಳವಡಿಸಿಕೊಂಡಿತು.
2. ಭಾರತದ ರಾಷ್ಟ್ರಗೀತೆಯನ್ನು ಜುಲೈ 27, 1911 ರಂದು ಕಲ್ಕತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಹಾಡಲಾಯಿತು.
ಮೇಲಿನ ಯಾವ ಹೇಳಿಕೆಗಳು ಸರಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 1 ಅಥವಾ ಯಾವುದೂ ಅಲ್ಲ.

5. ಭಾರತದ ಸಂವಿಧಾನವನ್ನು ಯಾವಾಗ ಅಳವಡಿಸಿಕೊಳ್ಳಲಾಯಿತು.?
ಎ. ಜನವರಿ 26, 1950
ಬಿ. ನವೆಂಬರ್ 26, 1949
ಸಿ. ಜನವರಿ 26, 1949
ಡಿ. ನವೆಂಬರ್ 26, 1950

6. ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳೆರಡೂ ಸ್ಥಾನಗಳು ಖಾಲಿ ಬಿದ್ದಲ್ಲಿ. ಅವರಿಬ್ಬರ ಕರ್ತವ್ಯಗಳನ್ನು ಯಾರು ನಿರ್ವಹಿಸುತ್ತಾರೆ?
ಎ. ಪ್ರಧಾನಮಂತ್ರಿ
ಬಿ. ಲೋಕಸಭಾಧ್ಯಕ್ಷರು
ಸಿ. ಕೇಂದ್ರ ಕಾನೂನು ಸಚಿವ
ಡಿ. ಭಾರತದ ಮುಖ್ಯ ನ್ಯಾಯಾಧೀಶರು

7. ಸಂವಿಧಾನದ ಯಾವ ವಿಧಿಯು ಮೂಲಭೂತ ಹಕ್ಕುಗಳ ಝಾರಿಗೆಗೆ ರಿಟ್ ಹೊರಡಿಸುವ ಅಧಿಕಾರವನ್ನು ಹೈಕೋರ್ಟ್‍ಗಳಿಗೆ ನೀಡಿದೆ?
ಎ. 227 ನೇ ವಿಧಿ
ಬಿ. 226 ನೇ ವಿಧಿ
ಸಿ. 228 ನೇ ವಿಧಿ
ಡಿ. 230 ನೇ ವಿಧಿ

8. ಸಂವಿಧಾನದ ಯಾವ ವಿಧಿಯನ್ವಯ, ಭಾರತದ ರಾಷ್ಟ್ರಪತಿಯವರನ್ನು ವಾಗ್ದಂಡನೆಗೆಗೊಳಪಡಿಸಬಹುದು?
ಎ. 40 ನೇ ವಿಧಿ
ಬಿ. 61 ನೇ ವಿಧಿ
ಸಿ. 75 ನೇ ವಿಧಿ
ಡಿ. 356 ನೇ ವಿಧಿ

9. ಸಂವಿಧಾನದ 17 ಮತ್ತು 18 ನೇ ವಿಧಿಗಳು ಈ ಕೆಳಗಿನ ಯಾವ ಮೂಲಭೂತ ಹಕ್ಕನ್ನು ಕಲ್ಪಿಸುತ್ತವೆ.?
ಎ. ಸಾಮಾಜಿಕ ಸಮಾನತೆ
ಬಿ. ಆರ್ಥಿಕ ಸಮಾನತೆ
ಸಿ. ರಾಜಕೀಯ ಸಮಾನತೆ
ಡಿ. ಧಾರ್ಮಿಕ ಸಮಾನತೆ

10. ಭಾರತದ ಸಂವಿಧಾನವು ಭಾರತವನ್ನು ಈ ಕೆಳಗಿನ ಏನೆಂದು ಪರಿಗಣಿಸಿದೆ?
ಎ. ರಾಜ್ಯಗಳ ಒಂದು ಕೇಂದ್ರ
ಬಿ. ಒಂದು ಸಂಯುಕ್ತ ರಾಜ್ಯ
ಸಿ. ಅರೆ ಒಕ್ಕೂಟ
ಡಿ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಂದು ಒಕ್ಕೂಟ

11. ಆಡಳಿತಾತ್ಮಕ ಕಾನೂನು ಎಂದರೆ ಯಾವುದು?
ಎ. ಕೇಂದ್ರದಿಂದ ಅನುಮೋದಾದ ಕಾನೂನುಗಳು
ಬಿ. ಕಾರ್ಯಾಂಗದಿಂದ ರೂಪಿತವಾದ ಕಾನೂನುಗಳು ಅಥವಾ ನಿಯಮಗಳು
ಸಿ. ಸರ್ಕಾರೇತರ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದ ಕಾನೂನುಗಳು
ಡಿ. ಮೇಲಿನ ಎಲ್ಲವೂ

12. ವಿಧಾನಸಭೆಯ ಸದಸ್ಯರು..
ಎ. ಪರೋಕ್ಷವಾಗಿ ಚುನಾಯಿತರಾಗುವರು.
ಬಿ. ಜನರಿಂದ ನೇರವಾಗಿ ಚುನಾಯಿತರಾಗುವರು
ಸಿ. ಅರ್ಧ ಭಾಗ ಜನರಿಂದ ಚುನಾಯಿತರಾಗುವರು ಮತ್ತು ಇನ್ನರ್ಧ ಭಾಗ ರಾಜ್ಯಪಾಲರಿಂದ ನಾಮಕರಣಗೊಳ್ಳುವರು
ಡಿ. ಮುಖ್ಯವಾಗಿ ನಾಮಕರಣಗೊಳ್ಳುವರು.

13. ಭಾರತದಲ್ಲಿ ‘ ಕಾನೂನಿನ ಮುಂದೆ ಸಮಾನತೆ’ ಎಂಬುದರ ಮೂಲ ಯಾವುದು?
ಎ. ಹಿಂತಿರ್ಪು ನ್ಯಾಯ ಕಾನೂನು
ಬಿ. ರಾಜಕೀಯ ಒಡಂಬಡಿಕೆಗಳು
ಸಿ. ಸಂವಿಧಾನ
ಡಿ. ಗಾಂಧೀವಾದ ತತ್ವಶಾಸ್ತ್ರ

14. ರಾಜ್ಯವೊಂದರ ರಾಜ್ಯಪಾಲರು ಹೊರಡಿಸಿದ ಸುಗ್ರೀವಾಜ್ಞೆ ಎಷ್ಟು ಕಾಲ ಚಲಾವಣೆಯಲ್ಲಿರುತ್ತದೆ?
ಎ. 3 ತಿಂಗಳು
ಬಿ. 6 ತಿಂಗಳು
ಸಿ. ಒಂದು ವರ್ಷ
ಡಿ. ಶಾಸನಸಭೆಯು ಅಧಿವೇಶನ ಸೇರಿದ ಆರು ವಾರಗಳವರೆಗೆ

25. ಭಾರತದಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ರೂಪಿಸುವ ಅಧಿಕಾರ ಯಾರಿಗಿದೆ?
ಎ. ಸಂಸತ್ತು
ಬಿ. ಕೇಂದ್ರ ವಿದೇಶಾಂಗ ಸಚಿವಾಲಯ
ಸಿ. ಕೇಂದ್ರ ಕಾನೂನು ಸಚಿವಾಲಯ
ಡಿ. ಕೇಂದ್ರ ಗೃಹ ಸಚಿವಾಲಯ

[ ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1 ]

# ಉತ್ತರಗಳು :
1. ಡಿ. 1 ಅಥವಾ 2 ಯಾವುದೂ ಅಲ್ಲ.
2. ಸಿ. 1 ಮತ್ತು 2
3. ಡಿ. 1 ಅಥವಾ 2 ಯಾವುದೂ ಅಲ್ಲ.
4. ಡಿ. 1 ಅಥವಾ ಯಾವುದೂ ಅಲ್ಲ.
5. ಸಿ. ಜನವರಿ 26, 1949
6. ಡಿ. ಭಾರತದ ಮುಖ್ಯ ನ್ಯಾಯಾಧೀಶರು
7. ಬಿ. 226 ನೇ ವಿಧಿ

8. ಬಿ. 61 ನೇ ವಿಧಿ
9. ಎ. ಸಾಮಾಜಿಕ ಸಮಾನತೆ
10. ಎ. ರಾಜ್ಯಗಳ ಒಂದು ಕೇಂದ್ರ
11. ಬಿ. ಕಾರ್ಯಾಂಗದಿಂದ ರೂಪಿತವಾದ ಕಾನೂನುಗಳು ಅಥವಾ ನಿಯಮಗಳು
12. ಬಿ. ಜನರಿಂದ ನೇರವಾಗಿ ಚುನಾಯಿತರಾಗುವರು
13. ಸಿ. ಸಂವಿಧಾನ
14. ಡಿ. ಶಾಸನಸಭೆಯು ಅಧಿವೇಶನ ಸೇರಿದ ಆರು ವಾರಗಳವರೆಗೆ
15. ಎ. ಸಂಸತ್ತು