ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 4
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾ ಟೈಮ್ಸ್ ಪ್ರತಿ ಶುಕ್ರವಾರ ಕೆಲವು ಸಂಭವನೀಯ ಪ್ರಶ್ನೆಗಳನ್ನು ಆಯ್ದು ನಿಮ್ಮ ಮುಂದಿಡುತ್ತಿದೆ. ಎಸ್‌ಡಿಎ-ಎಫ್‌ಡಿಎ, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿ ಇತರೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳಬಹುದಾಗಿದ್ದು ಪ್ರತಿ ಶುಕ್ರವಾರ ನಮ್ಮ ವೆಬ್ಸೈಟ್ www.spardhatimes.com ಅಥವಾ Daily Hunt ನಲ್ಲಿ ಓದಬಹುದು. ವಿವಿಧ ಕ್ಷೇತ್ರಗಳ ಮೇಲೆ ನುರಿತ ಉಪನ್ಯಾಸಕರು ಈ ಪ್ರಶ್ನೆಗಳನ್ನು ಆಯ್ಕೆ ಮಾಡಿರುತ್ತಾರೆ.
( NOTE : ಉತ್ತರಗಳು ಹಾಗೂ ವಿವರಣೆಯನ್ನು ಪ್ರಶ್ನೆಗಳ ಕೊನೆಯಲ್ಲಿ ನೀಡಲಾಗಿದೆ)
1. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಮುಖ ಗೋಧಿ ಬೆಳೆಯುವ ರಾಜ್ಯವಲ್ಲ..?
ಎ. ಹರಿಯಾಣ
ಬಿ. ತಮಿಳುನಾಡು
ಸಿ. ಪಂಜಾಬ್
ಡಿ. ಮಧ್ಯಪ್ರದೇಶ
2. ಈ ಕೆಳಗಿನವುಗಳಲ್ಲಿ ಮಹಾರಾಷ್ಟ್ರದಲ್ಲಿರುವ ಬೀಚ್ ಯಾವುದು..?
ಎ. ಎರಂಗಾಲ್ ಬೀಚ್
ಬಿ. ಗೋರೈಬೀಚ್
ಸಿ. ಆಲಿಬಾಂಗ್ ಬೀಚ್
ಡಿ. ದೇವಬಾಗ್ ಬೀಚ್
3. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಮುಖ ರಬ್ಬರ್ ಉತ್ಪಾದಿಸುವ ರಾಜ್ಯವಾಗಿದೆ..?
ಎ. ಕೇರಳ
ಬಿ. ಅಸ್ಸಾಂ
ಸಿ. ಪಶ್ಚಿಮ ಬಂಗಾಳ
ಡಿ. ಒರಿಸ್ಸಾ
4. ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ..?
ಎ. ಗಂಗಾ
ಬಿ. ಗೋದಾವರಿ
ಸಿ. ಮಹಾನದಿ
ಡಿ. ಬ್ರಹ್ಮಪುತ್ರ
5. ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರಾಡಳಿತ ಪ್ರದೇಶವಲ್ಲ..?
ಎ. ಪುದುಚೇರಿ
ಬಿ. ಗೋವಾ
ಸಿ. ಚಂಡೀಗಢ
ಡಿ. ಲಕ್ಷದ್ವೀಪ
6. ಕಾಂಚನಾಗುಂಗಾ ರಾಷ್ಟ್ರೀಯ ಉದ್ಯಾನವು ಎಲ್ಲಿದೆ..?
ಎ. ಮಧ್ಯಪ್ರದೇಶ
ಬಿ. ನಾಗಲ್ಯಾಂಡ್
ಸಿ. ಸಿಕ್ಕಿಂ
ಡಿ. ಮೇಘಾಲಯ
7. ಭಾರತದ ಪ್ರಮುಖ ನೀರಾವರಿ ಮೂಲ ಯಾವುದು..?
ಎ. ಕಾಲುವೆ ನೀರಾವರಿ
ಬಿ. ಕೆರೆ ನೀರಾವರಿ
ಸಿ. ಬಾವಿ ಮತ್ತು ಕೊಳವೆ ಬಾವಿ ನೀರಾವರಿ
ಡಿ. ಇತರೆ ಮೂಲಗಳು
8. ಉತ್ತರದ ಮೈದಾನ ಪ್ರದೇಶದಲ್ಲಿ ಅತೀ ಸಾಮಾಣ್ಯವಾಘಿ ಕಂಡು ಬರುವ ಮಣ್ಣು ಯಾವುದು..?
ಎ. ರೇಗಾರ್ ಮಣ್ಣು
ಬಿ. ಕೆಂಪು ಮಣ್ಣು
ಸಿ. ಮೆಕ್ಕಲು ಮಣ್ಣು
ಡಿ.ಜಂಬಿಟ್ಟಿಗೆ ಮಣ್ಣು
9. ಜಾರವಾಸ್ ಬುಡಕಟ್ಟು ಜನಾಂಗವು ಎಲ್ಲಿ ಕಂಡು ಬರುತ್ತವೆ..?
ಎ. ಅಸ್ಸಾಂ
ಬಿ. ಬಿಹಾಋ
ಸಿ. ಅಂಡಮಾನ್ ಮತ್ತು ನಿಕೋಬಾರ್
ಡಿ. ಸಿಕ್ಕಿಂ
10. ನೀಲಗಿರಿ ಪರ್ವತ ಈ ಕೆಳಗಿನ ಯಾವ ವಿದಕ್ಕೆ ಸೇರಿದ ಪರ್ವತವಾಗಿದೆ..?
ಎ. ಮಡಿಕೆ ಪರ್ವತಗಳು
ಬಿ. ಸ್ತರಭಂಗ ಪರ್ವತಗಳು
ಸಿ. ಜ್ವಾಲಾಮುಖಿ ಪರ್ವತಗಳು
ಡಿ. ಅವಶೇಷ ಪರ್ವತಗಳು
11. ಈ ಕೆಳಗಿನವುಗಳಲ್ಲಿ ಉತ್ತರಕ್ಕೆ ಹರಿಯುವ ನದಿ ಯಾವುದು..?
ಎ. ತಪತಿ
ಬಿ. ಕೃಷ್ಣ
ಸಿ. ನರ್ಮಾದಾ
ಡಿ. ಚಂಬಲ್
12. ಈ ಕೆಳಗಿನ ಯಾವ ರೇಖೆಯು ಭಾರತದ ಯಾವುದೇ ಅಂತರಾಷ್ಟ್ರೀಯ ಗಡಿ ರೇಖೆಯಾಗಿಲ್ಲ..?
ಎ. ರ್ಯಾಡ್‍ಕ್ಲಿಫ್ ಲೈನ್
ಬಿ. ಡುರಾಂಡ್ ಲೈನ್
ಸಿ. ಮ್ಯಾಕ್ ಮೋಹನ್ ಲೈನ್
ಡಿ. ಸರ್ ಕ್ರೀಕ್ ಲೈನ್
13. ಭಾರತದ ನೆರೆಯಲ್ಲಿರುವ ಕುದುರೆ ಲಾಳಾಕಾರಾದ ಹವಳದ ದ್ವೀಪಕ್ಕೆ ಉದಾಹರಣೆಯೆಂದರೆ..
ಎ. ಮಾಲ್ಡೀವ್ಸ್
ಬಿ. ಅಂಡಮಾನ್ ಮತ್ತು ನಿಕೋಬಾರ್
ಸಿ. ಶ್ರೀಲಂಕ
ಡಿ. ಲಕ್ಷದ್ವೀಪ
14. ಸರ್ದಾರ್ ಸರೋವರ ಅಣೆಕಟ್ಟು ಯಾವ ರಾಜ್ಯದಲ್ಲಿದೆ..?
ಎ. ಗುಜರಾತ್
ಬಿ. ಕರ್ನಾಟಕ
ಸಿ. ಮಧ್ಯಪ್ರದೇಶ
ಡಿ. ಉತ್ತರಪ್ರದೇಶ
15. ಪಶ್ಚಿಮ ಬಂಗಾಳವು ಎಷ್ಟು ಪರ ರಾಷ್ಟ್ರಗಳೊಂದಿಗೆ ಗಡಿಯನ್ನು ಹೊಂದಿದೆ..?
ಎ. ಒಂದು
ಬಿ. ಎರಡು
ಸಿ. ಮೂರು
ಡಿ. ನಾಲ್ಕು
16. ಈ ಕೆಳಗಿನವುಗಳಲ್ಲಿ ಚಳಿಗಾಲದಲ್ಲಿ ಅಧಿಕ ಪ್ರಮಾಣದ ಮಳೆ ಬೀಳುವ ರಾಜ್ಯ ಯಾವುದು..?
ಎ. ಬಿಹಾರ
ಬಿ. ಒರಿಸ್ಸಾ
ಸಿ. ತಮಿಳುನಾಡು
ಡಿ. ಪಂಜಾಬ್
17. ಹರಿಯಾಣದಲ್ಲಿರುವ ಪ್ರಖ್ಯಾತ ಪಕ್ಷಿಧಾಮ ಯಾವುದು..?
ಎ. ಸುಲ್ತಾನಪುರ್
ಬಿ. ಭರತ್‍ಪುರ್
ಸಿ. ರಾಜಾಜಿ
ಡಿ. ಸಾರಿಸ್ಕ್
18. ಯಾವ ರಾಜ್ಯವು ಬಾಂಗ್ಲಾದೇಶದಿಂದ ಮೂರು ಬದಿಗಳಲ್ಲಿ ಸುತ್ತುವರೆದಿದೆ..?
ಎ. ಮಿಜೋರಾಂ
ಬಿ. ಮೇಘಾಲಯ
ಸಿ. ಪಶ್ಚಿಮ ಬಂಗಾಳ
ಡಿ. ತ್ರಿಪುರ
19. ಭಾರತದಲ್ಲಿ ಅತೀ ಹರಚ್ಚು ಕಾಲುವೆ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ರಾಜ್ಯ ಯಾವುದು..?
ಎ. ಪಂಜಾಬ್
ಬಿ. ಮಧ್ಯಪ್ರದೇಶ
ಸಿ. ಆಂಧ್ರಪ್ರದೇಶ
ಡಿ. ಉತ್ತರಪ್ರದೇಶ
20. ಜೇಮ್‍ಷೆಡ್‍ಪುರ ಯಾವ ನದಿಯ ದಡದ ಮೇಲಿದೆ..?
ಎ. ದಾಮೋದರ
ಬಿ. ಗಂಗಾ
ಸಿ. ಮೂಸಿ
ಡಿ. ಸುವರ್ಣರೇಖ
# ಉತ್ತರಗಳು :
1. ಬಿ. ತಮಿಳುನಾಡು
2. ಡಿ. ದೇವಬಾಗ್ ಬೀಚ್
3. ಎ. ಕೇರಳ
4. ಎ. ಗಂಗಾ
5. ಬಿ. ಗೋವಾ
6. ಸಿ. ಸಿಕ್ಕಿಂ
7. ಸಿ. ಬಾವಿ ಮತ್ತು ಕೊಳವೆ ಬಾವಿ ನೀರಾವರಿ
8. ಸಿ. ಮೆಕ್ಕಲು ಮಣ್ಣು
9. ಸಿ. ಅಂಡಮಾನ್ ಮತ್ತು ನಿಕೋಬಾರ್
10. ಡಿ. ಅವಶೇಷ ಪರ್ವತಗಳು
11. ಡಿ. ಚಂಬಲ್
12. ಬಿ. ಡುರಾಂಡ್ ಲೈನ್
13. ಡಿ. ಲಕ್ಷದ್ವೀಪ
14. ಎ. ಗುಜರಾತ್
15. ಸಿ. ಮೂರು
16. ಸಿ. ತಮಿಳುನಾಡು
17. ಎ. ಸುಲ್ತಾನಪುರ್
18. ಡಿ. ತ್ರಿಪುರ
19. ಡಿ. ಉತ್ತರಪ್ರದೇಶ
20. ಡಿ. ಸುವರ್ಣರೇಖ
➤ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 1
➤ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 2
➤ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 3