Municipal Corporations in Karnataka

ಕರ್ನಾಟಕದ ಮಹಾನಗರ ಪಾಲಿಕೆಗಳು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ 2 ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ 1 ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ 3 ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ 6 ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ 3000 ಮಿಕ್ಕಿರಬೇಕು.

ಕರ್ನಾಟಕದಲ್ಲಿ 2011ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ 11 ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ. ರಾಯಚೂರು, ಬೀದರ್ ,ಮಂಡ್ಯ ನಗರಗಳು 2 ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ 5 ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ 10 ರಿಂದ 20 ವರ್ಷಗಳಲ್ಲಿ ಹೊಸಪೇಟೆ, ಹಾಸನ, ಉಡುಪಿ, ಭದ್ರಾವತಿ ರಾಮನಗರಮುಂತಾದ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ.

✦ ಪಂಚಾಯತ್ ರಾಜ್ಯದ ಪ್ರಕಾರ 3 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರ “ ಮಹಾನಗರ ಪಾಲಿಕೆ” ( ಕಾರ್ಪೋರೇಶನ)ಯಾಗುತ್ತದೆ. ಮಹಾನಗರ ಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ.

✦ ಮಹಾನಗರ ಪಾಲಿಕೆಯ ಪ್ರಮುಖ ಹುದ್ದೆಗಳು ಮೇಯರ್, ಉಪಮೇಯರ್, ಆಯುಕ್ತರು.

✦ ರಾಜ್ಯ ಸರ್ಕಾರ ನೀಡುವ ಸಹಾಯಧನ ವಿಧಿಸುವ ತೆರಿಗೆ, ಬಾಡಿಗೆ, ದಂಡ, ಸಾರ್ವಜನಿಕರಿಂದ ಎತ್ತುವ ಸಾಲ, ಮೊದಲಾದವುಗಳು ಮಹಾನಗರ ಪಾಲಿಕೆಯ ಹಣಕಾಸಿನ ಮೂಲಗಳು ಜೊತೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ರಸ್ತೆ, ಸಾರಿಗೆ, ವಿದ್ಯುತ್, ನೀರು ಸಮಗ್ರ ಅಭಿವೃದ್ದಿ ಇದರ ಪ್ರಮುಖ ಕಾರ್ಯಗಳು.

✦ ಜನಸಂಖ್ಯೆ ಆಧಾರದ ಮೇಲೆ ನಗರಪಾಲಿಕೆಯ ವ್ಯಾಪ್ತಿಯ ಪ್ರದೇಶವನ್ನು ಅನೇಕ ವಿಭಾಗಗಳಾಗಿ (ವಾರ್ಡಗಳಾಗಿ) ವಿಂಗಡಿಸಲಾಗಿರುತ್ತದೆ.

✦ ಕರ್ನಾಟಕದ ಮಹಾನಗರ ಪಾಲಿಕೆಗಳು
1.ಬೆಂಗಳೂರು ಮಹಾನಗರ ಪಾಲಿಕೆ
2.ಮೈಸೂರು ಮಹಾನಗರ ಪಾಲಿಕೆ
3.ಬೆಳಗಾವಿ ಮಹಾನಗರ ಪಾಲಿಕೆ
4.ಧಾರವಾಡ ಮಾಹಾನಗರ ಪಾಲಿಕೆ
5.ಗುಲ್ಬರ್ಗ ಮಹಾನಗರ ಪಾಲಿಕೆ
6.ಬಳ್ಳಾರಿ ಮಹಾನಗರ ಪಾಲಿಕೆ
7.ಮಂಗಳೂರು ಮಹಾನಗರ ಪಾಲಿಕೆ
8.ಬಿಜಾಪುರ ಮಹಾನಗರ ಪಾಲಿಕೆ
9.ತುಮಕೂರು ಮಾಹಾನಗರ ಪಾಲಿಕೆ
10.ದಾವಣೆಗೆರೆ ಮಹಾನಗರ ಪಾಲಿಕೆ
11.ಶಿವಮೊಗ್ಗ ಮಾಹಾನಗರ ಪಾಲಿಕೆ

ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

Comments

No comments yet. Why don’t you start the discussion?

Leave a Reply

Your email address will not be published. Required fields are marked *