Mahatma Gandhi

ಗಾಂಧೀಜಿ ಹೆಜ್ಜೆಗುರುತುಗಳು (1919 -1947)

ಮಹಾತ್ಮ ಗಾಂಧೀಜಿಯವರನ್ನು ನಾವು ಪ್ರೀತಿಯಿಂದ ‘ ಬಾಪು’ ಎಂದು ಸ್ಮರಿಸಿಕೊಳ್ಳುತ್ತೇವೆ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಅವರು ಮಹಾನ್ ನಾಯಕರಾಗಿದ್ದರು.
✦ ಆರಂಭಿಕ ಜೀವನ :
ಗಾಂಧೀಜಿಯವರು 1869 ರ ಅಕ್ಟೋಬರ್ 2 ರಂದು ಗುಜರಾತ್‍ನ ಪೋರಬಂದರ್ ಎಂಬಲ್ಲಿ ಕರಮಚಂದ ಗಾಂಧಿ ಮತ್ತು ಪುತಲಿಬಾಯಿಯವರ ಮಗನಾಗಿ ಜನಿಸಿದರು.ಅವರ ತಂದೆ ಪೋರಬಂದರ್ ಮತ್ತು ರಾಜಕೋಟ್ ಸಂಸ್ಥಾನಗಳಲ್ಲಿ ದಿವಾನ್ ಆಗಿದ್ದರು. ತಾಯಿ ಆಳವಾದ ಧಾರ್ಮಿಕ ನಂಬಿಕೆಯವರಾಗಿದ್ದರು. ಗಾಂಧೀಜಿಯವರ ನೈತಿಕ ಮೌಲ್ಯಗಳು ಮತ್ತು ಬದ್ಧತೆ ಅವರ ತಾಯಿಯಿಂದ ಬಳುವಳಿಯಾಗಿ ಬಂದಿದವು. ಗಾಂಧೀಜಿಯವರ ಪೂರ್ತಿ ಹೆಸರು “ ಮೋಹನದಾಸ್ ಕರಮಚಂದ್ ಗಾಂಧೀ”. ಅವರು “ಕಸ್ತೂರಿಬಾ” ಅವರನ್ನು ಮದುವೆಯಾಗಿದ್ದರು.

✦ ಶಿಕ್ಷಣ :
ಗಾಂಧೀಜಿಯವರ ಆರಂಬಿಕ ಶಿಕ್ಷಣ ಪೋರಬಂದರನಲ್ಲಾಯಿತು. ಉನ್ನತ ಶಿಕ್ಷಣಕ್ಕಾಗಿ ಅವರು ಇಂಗ್ಲೆಂಡಿಗೆ ತೆರಳಿದರು. ಅವರು ಬ್ರಿಟನ್‍ನಲ್ಲಿ ಕಾನೂನು ಪದವಿ ಪಡೆದರು.1891ರಲ್ಲಿ ಭಾರತಕ್ಕೆ ಹಿಂದುರುಗಿ ರಾಜ್‍ಕೋಟ್ ಮತ್ತು ಮುಂಬೈಯಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿದರು. ಆರಂಭದಲ್ಲಿ ವಕೀಲಿ ವೃತ್ತಿಯಲ್ಲಿ ಅವರು ಯಶಸ್ವಿಯಾಗಲಿಲ್ಲ. ಕೆಲಕಾಳದ ನಂತರ ದಾದಾ ಅಬ್ದೂಲ್ಲಾ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ  :
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿರುವಾಗ, ಭಾರತೀಯರು ಅಲ್ಲಿ ಕೆಳದರ್ಜೆಯವರಾಗಿ ಬಾಳುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ಬಿಳಿ ಸರ್ಕಾರದ ಜನಾಂಗೀಯ ನೀತಿಯನ್ನು ಅವರು ವಿರೋಧಿಸಿದರು. ಅವರು ಸತ್ಯಾಗ್ರಹ ಮತ್ತು ಅಹಿಂಸೆಗಳೆಂಬ ಅಸ್ತ್ರಗಳ ಮೂಲಕ ಅನ್ಯಾಯದ ವಿರುದ್ದ ಹಾಗೂ ‘ವರ್ಣಭೇದ ನೀತಿಯನ್ನು’ ಅಳಿಸಲು ಹೋರಾಡಿದರು. ದಕ್ಷಿಣ ಆಫ್ರಿಕದಲ್ಲಿ ನಡೆಸಿದ ಹೋರಾಟಗಳು ಹಾಗೂ ಅವುಗಳಿಂದ ದೊರಕಿದ ಯಶಸ್ಸಿನಿಂದ ಗಾಂಧೀಜಿಯವರು ವ್ಯಕ್ತಿತ್ವಕ್ಕೆ ವಿಶೇಷ ಮೆರಗು ಬಂದಿತು.

✦ 1915 ರಲ್ಲಿ ಭಾರತಕ್ಕೆ ಹಿಂತಿರುಗಿದ ನಂತರ ಗಾಂಧೀಜಿಯವರು ಅಹಮದಾಬಾದಿನಲ್ಲಿ ಸಾಬರಮತಿ ಆಶ್ರಮವನ್ನು( 1916) ಸ್ಥಾಪಿಸಿದರು. ತಮ್ಮ ರಾಜಕೀಯ ಗುರು “ಗೋಪಾಲಕೃಷ್ಣ ಗೋಖಲೆ” ಯವರ ಮಾರ್ಗದರ್ಶನದ ಮೇರೆಗೆ ಭಾರತಾದ್ಯಂತ ಪ್ರವಾಸ ಮಾಡಿ ಜನರ ಶೋಚನೀಯ ಸ್ಥಿತಿಯನ್ನು ಕಂಡರು.

✦ ರಾಜಕೀಯ ಜೀವನ :
ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ 1919ರ ಸಂವತ್ಸರವು ಒಂದು ಮಹತ್ವದ ಮೈಲಿಗಲ್ಲಾಗಿದೆ. ಇದು ಗಾಂಧಿಜೀಯವರು ಭಾರತದ ರಾಜಕೀಯ ರಂಗವನ್ನು ಪ್ರವೇಶಿಸಿದ ವರ್ಷ. ಬ್ರಿಟಿಷರನ್ನು ದೈಹಿಕ ಬಲದ ಮೂಲಕ ಹೊರದೂಡಲು ಸಾಧ್ಯವಿಲ್ಲವೆಂಬ ಸತ್ಯವನ್ನು ಅವರು ಮನಗಂಡಿದ್ದರು. 1919ರಲ್ಲಿ ಗಾಂಧೀಜಿಯವರು ರೌಲಟ್ ಕಾಯಿದೆಯ ಜಾರಿ ಮತ್ತು ಜಲಿಯನ್‍ವಾಲಾಬಾಗ್ ಘೋರ ಹಿಂಸಾಕೃತ್ಯದ ವಿರುದ್ಧ ಚಳುವಳಿ ಹೂಡಿದರು.
# ಅಲ್ಲದೆ “ಖಿಲಾಫತ್ ಚಳುವಳಿಯ” ನಾಯಕತ್ವ ವಹಿಸಿದರು. ಈ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ಸಾಮರಸ್ಯ ಏರ್ಪಡಿಸುವುದು ಅವರ ಉದ್ದೇಶವಾಗಿತ್ತು.

✦ ಅಸಹಕಾರ ಚಳುವಳಿ  :
ಗಾಂಧೀಜಿಯವರ ನಾಯಕತ್ವದಲ್ಲಿ 1920- 1922 ರಲ್ಲಿ “ಅಸಹಕಾರ ಚಳುವಳಿಯು” ಆರಂಭವಾಯಿತು. ಅವರು ಸರ್ಕಾರದೊಂದಿಗೆ ಅಸಹಕಾರ ತೋರಬೇಕೆಂದು ಜನತೆಗೆ ಕರೆಕೊಟ್ಟರಲ್ಲದೆ ಸ್ವರಾಜ್ಯಕ್ಕಾಗಿ ಒತ್ತಾಯಿಸಬೇಕೆಂದರು. ಸ್ವಾತಂತ್ರ್ಯ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಡೆಸುವ ಸಲುವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಗಾಂಧೀಜಿ ರೂಪಿಸಿದರು. ಈ ಕಾರ್ಯಕ್ರಮವು ವಿಶೇಷವಾಗಿ ನೂಲುವುದು, ಮತ್ತು ನೇಯುವುದು, ಅಸ್ಪ್ಯಶ್ಯತಾ ನಿವಾರಣೆಗೆ ಒತ್ತು ನೀಡಿತು.

✦ ಸ್ವದೇಶಿ ಚಳುವಳಿ :
ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು ನಿಷೇಧಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನು ತೊಡುವ ಸಂಪ್ರದಾಯ ಜನಪ್ರಿಯವಾಯಿತು.

✦ ಭಾರತ ಬಿಟ್ಟು ತೊಲಗಿ ಚಳುವಳಿ :
ಗಾಂಧೀಜಿಯವರು 1942 ಆಗಸ್ಟ್ 8 ರಂದು ಮುಂಬೈನಲ್ಲಿ ಕಾಂಗ್ರೆಸ್ಸಿನ ಸಭೆ ಕರೆದರು. ಅಲ್ಲಿ ಪ್ರಸಿದ್ಧ “ ಭಾರತ ಬಿಟ್ಟು ತೊಲಗಿ” ಎಂಬ ನಿರ್ಣಯವನ್ನು ಅಂಗೀಕರಿಸಿದರು. ಭಾರತೀಯರಿಗೆ “ ಮಾಡು ಇಲ್ಲವೆ ಮಡಿ” ಎಂಬ ಘೋóಣೆ ಕೂಗಿದರು.

✦ ನಾಗರಿಕ ಕಾನೂನುಭಂಗ ಚಳುವಳಿ ( ಉಪ್ಪಿನ ಸತ್ಯಾಗ್ರಹ) :
ಈ ಚಳುವಳಿಯನ್ನು 1930 ರ ಮಾರ್ಚ್ 12 ರಂದು ಗಾಂಧೀಜಿ ಅವರು ಪ್ರಸಿದ್ದ ದಾಂಡಿಯಾತ್ರೆಯೊಂದಿಗೆ ಆರಂಭಿಸಿದರು. ಆಯ್ದ ಅನುಯಾಯಿಗಳೊಂದಿಗೆ ಗಾಂಧೀಜಿ ಸಾಬರಮತಿ ಆಶ್ರಮದಿಂದ ಗುಜರಾತಿನ ಕಡಲತೀರದ ದಾಂಡಿಯವರೆಗೂ ಸುಮಾರು 375 ಕಿ.ಮೀ ದೂರವನ್ನು ಕ್ರಮಿಸಿದರು. ಆದರಿಂದ ಉಪ್ಪನ್ನು ಉತ್ಪಾದಿಸುವುದರ ಮೂಲಕ ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿತ್ತು.

✦ ಗಾಂದೀಜಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧೀವೇಶನದ ಅಧ್ಯಕ್ಷರಾಗಿದ್ದರು.

✦ ಅವರ ಮುಖ್ಯ ತತ್ವಗಳು ;
ಸತ್ಯ ಮತ್ತು ಅಹಿಂಸೆ. ಮಾರ್ಟಿನ್ ಲೂಥರ್ ಕಿಂಗ್ , ನೆಲ್ಸನ್ ಮಂಡೇಲಾ ಮೊದಲಾದ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹ ತತ್ವದಿಂದ ಆಳವಾಗಿ ಪ್ರಭಾವಿತರಾಗಿದ್ದರು.

✦ ಗಾಂಧೀಜಿಯವರು “ಮಹಾತ್ಮಗಾಂಧೀ” ಎಂದೇ ಚಿರಪರಿಚತರಾಗಿದ್ದರು. “ಮಹಾತ್ಮ” ಎಂಬ ಗೌರವ ಸೂಚಕ ಪದವನ್ನು ಅವರಿಗೆ ಮೊದಲು ನೀಡಿದ್ದು “ ರವೀಂದ್ರನಾಥ ಠಾಗೂರರು.

# ಗಾಂಧೀಜಿಯವರ ಪ್ರಮುಖ ಕೃತಿಗಳು –   “ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ”
“ ಸತ್ಯದೊಂದಿಗೆ ನನ್ನ ಪ್ರಯೋಗಗಳು”, ಹಿಂದ್ ಸ್ವರಾಜ್ಯ, “ಗೀತಾ ದಿ ಮದರ್”.
“ಹರಿಜನ” ಮತ್ತು “ಯಂಗ್ ಇಂಡಿಯಾ” ಇವು ಅವರ ಸಂಪಾದಕರಾಗಿದ್ದ ವೃತ್ತ ಪತ್ರಿಕೆಗಳು.
# ಗಾಂಧೀಜಿಯವರ ಮೇಲೆ ಜೀವನದ ಮೇಲೆ ಪ್ರಭಾವ ಬೀರಿದ ಪ್ರಮುಖ ಕೃತಿಗಳೆಂದರೆ ಭಗವದ್ಗೀತೆ, ಜಾನ್ ರಸ್ಕಿನ್‍ನ- ಅನ್‍ಟೂ ದಿಸ್ ಲಾಸ್ಟ್, ಸತ್ಯಹರಿಶ್ಚಂದ್ರ ನಾಟಕ.
# ಗಾಂಧೀಜಿಯವರು 1948 ಜನವರಿ 30 ರಂದು ನಿಧನರಾದರು.

Comments

No comments yet. Why don’t you start the discussion?

Leave a Reply

Your email address will not be published. Required fields are marked *