Current Affairs

72ನೇ ಗಣರಾಜ್ಯೋತ್ಸವದಲ್ಲಿ ಸ್ತಬ್ದಚಿತ್ರಗಳ ವಿಶೇಷತೆ

➤ ಪ್ರತಿ ವರ್ಷ ಗಣರಾಜೋತ್ಸವವನ್ನು ಬಾರಿ ವಿಜೃಂಬಣೆಯಿಂದ ಆಚರಿಸಲಾಗುತ್ತಿತ್ತು. ಈ ವರ್ಷ ಸೋಂಕು ಪ್ರಸರಣ ತಡೆಗೆ ಹತ್ತಾರು ನಿರ್ಬಂಧಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಸಂಘಟಿಸಲಾಗಿತ್ತು.
➤  72 ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆಯೊಂದಿಗೆ ಸರ್ಕಾರವು ಕಾರ್ಯಕ್ರಮಗಳನ್ನು ಕೈಗೊಂಡಿತು.
➤  ಗಣರಾಜ್ಯೋತ್ಸವ ದಿನ ( ಜನವರಿ 26, 2021 ) ಹೊಸದಿಲ್ಲಿಯಲ್ಲಿ ನಡೆಯುವ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಹಲವು ರಾಜ್ಯಗಳ ಸ್ತಬ್ದಚಿತ್ರಗಳು ಪಾಲ್ಗೋಂಡವು.

➤  ಕರ್ನಾಟಕ, ಗುಜರಾತ್, ಅಸ್ಸಾಂ, ಉತ್ತರಪ್ರದೇಶ ಮತ್ತು ದಿಲ್ಲಿ ಸೇರಿ ಹಲವು ರಾಜ್ಯಗಳ ಟ್ಯಾಬ್ಲೊಗಳು ಪಾಲ್ಗೊಂಡವು.
➤  ಕರ್ನಾಟಕದ ಪರವಾಗಿ ‘ಹಂಪಿಯ ವಿಜಯನಗರ ಸಾಮ್ರಾಜ್ಯದ’ ವೈಭವ ಪ್ರದರ್ಶನಗೊಂಡಿತು. ಹಂಪಿಯ ಕೇಂದ್ರ ಬಿಂದುವಾದ ಉಗ್ರ ನರಸಿಂಹ, ಹಜಾರರಾಮ ದೇವಾಲಯ, ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಬೆಟ್ಟ , ರಾಜ ಕೃಷ್ಣದೇವ ರಾಯನಿಗೆ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭದ ಶ್ರೀಮಂತಿಕೆಯನ್ನು ಸ್ತಬ್ದಚಿತ್ರದಲ್ಲಿ ಚಿತ್ರಿಸಲಾಗಿತ್ತು.
➤ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಉತ್ತರಪ್ರದೇಶವು “ಅಯೋದ್ಯೆ”  ಕುರಿತ ಸ್ತಬ್ದಚಿತ್ರವನ್ನು ಪ್ರದರ್ಶಿಸಿತು. ಈ ಬಾರಿ ಉತ್ತರ ಪ್ರದೇಶ ಸರಕಾರ ಶ್ರೀರಾಮ ಮಂದಿರದ ಟ್ಯಾಬ್ಲೋ ಪ್ರದರ್ಶಿಸಿತು. ಅದರಲ್ಲಿ ದೀಪೋತ್ಸವ ಹಾಗೂ ರಾಮಾಯಣದ ಕತೆಯನ್ನು ಬಿಂಬಿಸುವ ಬಿಂಬಗಳೂ ಇರುತ್ತವೆ.

➤  ಈ ಬಾರಿ ಸ್ತಬ್ದಚಿತ್ರಗಳ ಸಾಲಿಗೆ ಹೊಸದಾಗಿ ನೂತನ ಕೇಂದ್ರಾಡಳಿತ ಪ್ರದೇಶ ಲಡಾಕ್‍ನಿಂದ ಅಲ್ಲಿನ ಪುರಾತನ ತಿಂಕ್ಸೆ ಬೌದ್ದವಿಹಾರ ಹಾಗೂ ಪ್ರಾಂತ್ಯದ ಸಂಸ್ಕøತಿ ಸೂಚಿಸುವ ಸ್ತಬ್ದಚಿತ್ರ ಪ್ರದರ್ಶಿತವಾಯಿತು.
➤  ಭಾರತೀಯ ವಾಯುಪಡೆಯ ಸ್ತಬ್ಧಚಿತ್ರವನ್ನು ಮುನ್ನಡೆಸುವ ಗೌರವವನ್ನು ಮಹಿಳಾ ಫೈಟರ್ ಪೈಲಟ್ ಭಾವನಾ ಕಾಂತ್ ವಹಿಸಿದ್ದರು. ಇವರು 2019 ರಲ್ಲಿ ಸೇವೆಗೆ ಸೇರಿದ ದೇಶದ ಮೊದಲ ಮೂರು ಫೈಟರ್ ಫೈಲೆಟ್‍ಗಳಲ್ಲಿ ಒಬ್ಬರು. ವಾಯುಪಡೆಯಯ ಟ್ಯಾಬ್ಲೋದಲ್ಲಿ ಹಗುರ ಯುದ್ಧವಿಮಾನ, ಹಗುರ ಯುದ್ಧ ಕಾಪ್ಟರ್, ಸುಖೋಯಿ ಫೈಟರ್ ಜೆಟ್, ಹಾಗೂ ಮೇಡ್ ಇನ್ ಇಂಡಿಯಾ ಕ್ಷಿಪಣಿಗಳು ಇದ್ದವು.

error: Content is protected !!