highest remittance recipient

ವಿದೇಶಗಳಿಂದ ಅತಿಹೆಚ್ಚು ಹಣ ಸ್ವೀಕರಿಸುವ ದೇಶವಾಗಿ ಮುಂದುವರಿದ ಭಾರತ

ವಿಶ್ವಬ್ಯಾಂಕ್​ನ ವಲಸೆ ಮತ್ತು ಅಭಿವೃದ್ಧಿ ಸಾರಾಂಶ ವರದಿಯ ಪ್ರಕಾರ, ಭಾರತವು ಜಾಗತಿಕವಾಗಿ ವಿದೇಶಗಳಿಂದ ಅತಿ ಹೆಚ್ಚು ಹಣ ಸ್ವೀಕರಿಸುವ ದೇಶವಾಗಿ ಮುಂದುವರೆದಿದೆ. 2023ರಲ್ಲಿ ವಿದೇಶಗಳಿಂದ ಭಾರತಕ್ಕೆ ಒಳಬರುವ ಹಣದ ಪ್ರಮಾಣ ಶೇ 12.3ರಷ್ಟು ಏರಿಕೆಯಾಗಿ 125 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.ವಿದೇಶಗಳಿಂದ ಹಣ ಸ್ವೀಕರಿಸುವ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದಾರೆ, ನಂತರದದ ಸ್ಥಾನದಲ್ಲಿ ಕ್ರಮವಾಗಿ ಮೆಕ್ಸಿಕೊ (USD 67 ಶತಕೋಟಿ), ಚೀನಾ (USD 50 ಶತಕೋಟಿ), ಫಿಲಿಪೈನ್ಸ್ (USD 40 ಶತಕೋಟಿ), ಮತ್ತು ಈಜಿಪ್ಟ್ (USD 24 ಶತಕೋಟಿ) ಸೇರಿವೆ.

ದಕ್ಷಿಣ ಏಷ್ಯಾಕ್ಕೆ ಬರುವ ಒಟ್ಟು ವಿದೇಶಿ ಹಣದಲ್ಲಿ ಶೇಕಡಾ 66 ರಷ್ಟು ಭಾರತಕ್ಕೆ ಬರುತ್ತಿದೆ. 2022ರಲ್ಲಿ ಈ ಪ್ರಮಾಣ ಶೇಕಡಾ 63ರಷ್ಟಿತ್ತು. 2022ರಲ್ಲಿ ಈ ಪ್ರಮಾಣ 111.22 ಬಿಲಿಯನ್ ಡಾಲರ್ ಆಗಿತ್ತು. ಭಾರತದ ಒಳಬರುವ ಹಣದ ಪ್ರಮಾಣ ಈಗ ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 3.4 ರಷ್ಟಿದೆ ಎಂದು ತಿಳಿಸಿದೆ.ಪ್ರತಿಭಾವಂತ ಭಾರತೀಯರು ಕೆಲಸ ಮಾಡುತ್ತಿರುವ ಪ್ರಮುಖ ದೇಶಗಳಾದ ಯುಎಸ್, ಯುಕೆ ಮತ್ತು ಸಿಂಗಾಪುರಗಳಲ್ಲಿನ ಹಣದುಬ್ಬರ ಇಳಿಕೆ ಮತ್ತು ಆದಾಯದಲ್ಲಾದ ಹೆಚ್ಚಳದಿಂದ ಅವರು ಭಾರತಕ್ಕೆ ಕಳುಹಿಸುತ್ತಿರುವ ಹಣದ ಪ್ರಮಾಣ ಹೆಚ್ಚಾಗಿದೆ.

ಹಸುವಿನ ಸಗಣಿಯಿಂದಲೇ ರಾಕೆಟ್ ಉಡಾವಣೆ ಮಾಡಿದ ಜಪಾನ್

ಈ ಮೂರು ದೇಶಗಳು ಭಾರತಕ್ಕೆ ಒಟ್ಟು ಹಣ ರವಾನೆಯ ಹರಿವಿನ ಶೇಕಡಾ 36 ರಷ್ಟನ್ನು ಹೊಂದಿವೆ. ಗಲ್ಫ್ ಸಹಕಾರ ಮಂಡಳಿ (GCC-Gulf Cooperation Council) ಯಿಂದ ಹೆಚ್ಚಿನ ಒಳಹರಿವಿನಿಂದ ಕೂಡ ಭಾರತಕ್ಕೆ ಹಣ ರವಾನೆ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇದಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಭಾರತಕ್ಕೆ ಬರುವ ಒಟ್ಟು ವಿದೇಶಿ ಹಣದ ಪೈಕಿ ಶೇಕಡಾ 18ರಷ್ಟು ಯುಎಇ ಯಿಂದಲೇ ಬರುತ್ತಿದೆ. ಯುಎಸ್ ನಂತರದ ಸ್ಥಾನದಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂಕಿಅಂಶಗಳ ಪ್ರಕಾರ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಶೇಕಡಾ 8, ದಕ್ಷಿಣ ಏಷ್ಯಾ ಶೇಕಡಾ 7.2 ಮತ್ತು ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಶೇಕಡಾ 3ರಷ್ಟು ವಿದೇಶಿ ಹಣದ ಒಳಹರಿವು ಹೊಂದಿವೆ.ಮತ್ತೊಂದು ಪ್ರಮುಖ ಅಂಶವೆಂದರೆ ದಕ್ಷಿಣ ಏಷ್ಯಾಕ್ಕೆ 200 ಡಾಲರ್ ಕಳುಹಿಸಲು ಪಾವತಿಸಬೇಕಾದ ವೆಚ್ಚವು 2023ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಸರಾಸರಿ ಶೇಕಡಾ 6.2 ಕ್ಕಿಂತ ಶೇಕಡಾ 30 ರಷ್ಟು ಕಡಿಮೆಯಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ (ಎಲ್ಎಂಐಸಿ) ಒಟ್ಟು ರವಾನೆಗಳು 2023 ರಲ್ಲಿ ಅಂದಾಜು ಶೇಕಡಾ 3.8 ರಷ್ಟು ಹೆಚ್ಚಾಗಿವೆ.

ಪ್ರಚಲಿತ ಘಟನೆಗಳ ಕ್ವಿಜ್ – 15 ಮತ್ತು 19-12-2023

ಕುತೂಹಲಕಾರಿಯಾಗಿ, ಭಾರತವು ತಮ್ಮ ಅನಿವಾಸಿ ನಾಗರಿಕರಿಂದ ವಿದೇಶಿ ಕರೆನ್ಸಿ ಠೇವಣಿಗಳನ್ನು ಆಕರ್ಷಿಸಲು ಉಳಿತಾಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಂತಹ ಠೇವಣಿಗಳು ಸಾಮಾನ್ಯವಾಗಿ ಸ್ವದೇಶಕ್ಕೆ ಹಿಂದಿರುಗಿಸಲ್ಪಡುತ್ತವೆ, ಇದರಿಂದ ಅಂತರರಾಷ್ಟ್ರೀಯ ಬಡ್ಡಿದರಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ ಮತ್ತು ತೆರಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ. ಭಾರತದಲ್ಲಿ ಅನಿವಾಸಿ ಭಾರತೀಯರ ಠೇವಣಿ 143 ಬಿಲಿಯನ್ ಡಾಲರ್ ಆಗಿದ್ದು, ಒಂದು ವರ್ಷದಲ್ಲಿ 10 ಶತಕೋಟಿಯಷ್ಟು ಹೆಚ್ಚಳ ದಾಖಲಿಸಿದೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *