ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

➤ ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
➤ ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
➤ ಕ್ರಿ.ಪೂ.1000 ಕಬ್ಬಿಣದ ಬಳಕೆ.
➤ ಕ್ರಿ.ಪೂ.1000-500 ವೇದಗಳ ಕಾಲ
➤ ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
➤ ಕ್ರಿ.ಪೂ.540-468 ಮಹಾವೀರನ ಕಾಲ
➤ ಕ್ರಿ.ಪೂ.542-490 ಹರ್ಯಂಕ ಸಂತತಿ
➤ ಕ್ರಿ.ಪೂ.413-362 ಶಿಶುನಾಗ ಸಂತತಿ.

➤ ಕ್ರಿ.ಪೂ.362-324 ನಂದ ಸಂತತಿ.
➤ ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
➤ ಕ್ರಿ.ಪೂ.324-183 ಮೌರ್ಯ ಸಂತತಿ.
➤ ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
➤ ಕ್ರಿ.ಪೂ.298-273 ಬಿಂದುಸಾರನ ಕಾಲ.
➤ ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
➤ ಕ್ರಿ.ಪೂ.185-147 ಶುಂಗ ಸಂತತಿ.
➤ ಕ್ರಿ.ಪೂ.73-28 ಕಣ್ವರ ಆಳ್ವಿಕೆ.

➤ ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
➤ ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
➤ ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
➤ ಕ್ರಿ.ಶ.78-101 ಕಾನಿಷ್ಕನ ಕಾಲ.
➤ ಕ್ರಿ.ಶ.78 ಶಕ ಸಂವತ್ಸರ
➤ ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
➤ ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
➤ ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.

➤ ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
➤ ಕ್ರಿ.ಶ.300-888 ಕಂಚಿಯ ಪಲ್ಲವರು.
➤ ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
➤ ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
➤ ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
➤ ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
➤ ಕ್ರಿ.ಶ.760-1142 ಬಂಗಾಳದ ಪಾಲರು.
➤ ಕ್ರಿ.ಶ.800-1036 ಕನೌಜಿನ ಪ್ರತಿಹಾರರು

➤ ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
➤ ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
➤ ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
➤ ಕ್ರಿ.ಶ.974-1233 ಮಾಳ್ವದ ಪಾರಮಾರರು.
➤ ಕ್ರಿ.ಶ. 1118-1190 ಬಂಗಾಳದ ಸೇನರು.
➤ ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
➤ ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
➤ ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.

➤ ಕ್ರಿ.ಶ.1290-1320 ಖಿಲ್ಜಿ ಸಂತತಿ.
➤ ಕ್ರಿ.ಶ.1320-1414 ತುಘಲಕ್ ಸಂತತಿ.
➤ ಕ್ರಿ.ಶ.1414-1451 ಸೈಯದ್ ಸಂತತಿ.
➤ ಕ್ರಿ.ಶ. 1451-1525 ಲೂಧಿ ಸಂತತಿ.
➤ ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
➤ ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
➤ ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
➤ ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
➤ ಕ್ರಿ.ಶ.1627-1680 ಶಿವಾಜಿಯ ಕಾಲ.

➤ ಕ್ರಿ.ಶ.1757 ಪ್ಲಾಸಿ ಕದನ.
➤ ಕ್ರಿ.ಶ.1764 ಬಕ್ಸಾರ ಕದನ.
➤ ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
➤ ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
➤ ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
➤ ಕ್ರಿ.ಶ.1824-ಕಿತ್ತೂರು ದಂಗೆ.
➤ ಕ್ರಿ.ಶ.1857 ಸಿಪಾಯಿ ದಂಗೆ.

➤ ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
➤ ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
➤ 1905- ಬಂಗಾಳ ವಿಭಜನೆ.
➤ 1906-ಮುಸ್ಲಿಂ ಲೀಗ್ ಸ್ಥಾಪನೆ.
➤ 1907- ಸೂರತ್ ಅಧಿವೇಶನ/ಸೂರತ್ ಒಡಕು
➤ 1909- ಮಿಂಟೋ ಮಾಲ್ರೇ ಸುಧಾರಣೆ.
➤ 1911- ಕಲ್ಕತ್ತಾ ಅಧಿವೇಶನ.
➤ 1913 -ಗದ್ದಾರ್ ಪಕ್ಷ ಸ್ಥಾಪನೆ.

➤ 1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
➤ 1916 -ಲಕ್ನೋ ಅಧಿವೇಶನ.
➤ 1917 -ಚಂಪಾರಣ್ಯ ಸತ್ಯಾಗ್ರಹ
➤ 1918 -ಹತ್ತಿ ಗಿರಣಿ ಸತ್ಯಾಗ್ರಹ’
➤ 1919 -ರೌಲತ್ ಕಾಯಿದೆ.
➤ 1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
➤ 1920 -ಖಿಲಾಪತ್ ಚಳುವಳಿ.
➤ 1922 -ಚೌರಾಚೌರಿ ಘಟನೆ.

➤ 1923 -ಸ್ವರಾಜ್ ಪಕ್ಷ ಸ್ಥಾಪನೆ.
➤ 1927-ಸೈಮನ್ ಆಯೋಗ.
➤ 1928- ನೆಹರು ವರದಿ.
➤ 1929- ಬಾಡ್ರೋಲೀ ಸತ್ಯಾಗ್ರಹ.
➤ 1930 -ಕಾನೂನ ಭಂಗ ಚಳುವಳಿ.
➤ 1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
➤ 1937 -ಪ್ರಾಂತೀಯ ಚುಣಾವಣೆ
➤ 1939 -ತ್ರೀಪುರಾ ಬಿಕ್ಕಟ್ಟು.
➤ 1940 -ಅಗಷ್ಟ ಕೊಡುಗೆ.

➤ 1942 -ಕ್ರಿಪ್ಸ ಆಯೋಗ
➤ 1945 -ಸಿಮ್ಲಾ ಸಮ್ಮೇಳನ
➤ 1946- ಕ್ಯಾಬಿನೆಟ್ ಆಯೋಗ
➤ 1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
➤ 1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ…
➤ 1973-ಕರ್ನಾಟಕ ಮರುನಾಮಕರಣ.

➤ 1974-ಭಾರತದಿಂದ ಪರಮಾಣು ಸಾಧನದ ಸ್ಪೋಟ ; ಫಕ್ರುದ್ದಿನ ಅಲಿ ಅಹ್ಮದ್ ಐದನೆ ರಾಷ್ಟ್ರಪತಿಯಾಗಿ ಆಯ್ಕೆ. ಸಿಕ್ಕಿಂ ಭಾರತದ ಸಹ ರಾಜ್ಯವಾಯಿತು
➤ 1975-ಭಾರತದಿಂದ ‘ಆರ್ಯ ಭಟ’ ಉಡಾವಣೆ; ಸಿಕ್ಕಿಂ ಭಾರತದ 22ನೆ ರಾಜ್ಯವಾಯಿತು; ತುರ್ತು ಪರಿಸ್ಥಿತಿ ಘೋಷಣೆ
➤ 1976 -ಭಾರತ ಮತ್ತು ಚೀನಾ ರಾಜತಾಂತ್ರಿಕ ಸಂಬಂಧ ಪುನರ್ ಸ್ಥಾಪನೆ
➤ 1977-ಆರನೆ ಸಾಮಾನ್ಯ ಚುನಾವಣೆ ;ಲೋಕಸಭೆಯಲ್ಲಿ ಜನತಾ ಪಕ್ಷಕ್ಕೆ ಬಹುಮತ; ನೀಲಂ ಸಂಜೀವ ರೆಡ್ಡಿಯವರು ಭಾರತದ ಆರನೆ ರಾಷ್ಟ್ರಪತಿಯಾಗಿ ಆಯ್ಕೆ
➤ 1979 -ಮೊರಾರ್ಜಿ ದೇಸಾಯಿ ಅವರಿಂದ ಪ್ರಧಾನಿ ಪದವಿಗೆ ರಾಜಿನಾಮೆ, ಚರಣಸಿಂಗ್ ಪ್ರಧಾನಿ, ಚರಣಸಿಂಗ್ ರಾಜಿನಾಮೆ( ಆಗಷ್ಟ್ 20 ) ಆರನೆ ಲೋಕಸಭೆ ವಿಸರ್ಜನೆ
➤ 1980-ಏಳನೆ ಸಾಮಾನ್ಯ ಚುನಾವಣೆ; ಕಾಂಗ್ರೆಸ್( ಐ) ಅಧಿಕಾರಕ್ಕೆ; ಶ್ರೀಮತಿ. ಇಂದಿರಾ ಗಾಂಧಿಯವರಿಂದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ; ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸಾವು, ಭಾರತದಿಂದ ರೋಹಿಣಿ ಉಪಗ್ರಹ ದಿಂದ ಕೂಡಿದ ಎಸ್ಎಲ್ ವಿಯನ್ನು ಅಕಾಶಕ್ಕೆ ಉಡಾವಣೆ.
➤ 1982-ಏಷಿಯಾದ ಅತಿ ಉದ್ದನೆಯ ಸೇತುವೆಯ ಉದ್ಘಾಟನೆ ( ಮಾರ್ಚ 2 ); ಆಚಾರ್ಯ ಕೃಪಲಾನಿ ನಿಧನ ( ಮಾರ್ಚ 19) ಇನಸಾಟ್ 1 ಎ (INSAT.1A) ಉಡಾವಣೆ, ಗ್ಯಾನಿ ಜೈಲ್ ಸಿಂಗ್ ಭಾರತದ ರಾಷ್ಟ್ರಪತಿಯಾಗಿ ಆಯ್ಕೆ (ಜೂಲೈ 15 ಗುಜರಾತ್ ಚಂಡಮಾರುತ (ಸೈಕ್ಲೋನ್) ನಲ್ಲಿ 500 ಕ್ಕೂ ಹೆಚ್ಚು ಸಾವು ( ನವಂಬರ್ 5); ಆಚಾರ್ಯ ವಿನೋಬಾ ನಿಧನ (ನವಂಬರ್ 15) IXನೇ ಏಷಿಯನ್ ಕ್ರೀಡಾಕೂಟದ ಉದ್ಘಾಟನೆ (ನವಂಬರ್ 19)
➤ 1983-ಹೊಸ ದೆಹಲಿಯಲ್ಲಿ ನಡೆದ ಸಿಎಚ್ಒಗಿಎಮ್( CHOGM)
➤ 1984-ಪಂಜಾಬಿನಲ್ಲಿ ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ; ರಾಕೇಶ್ ಶರ್ಮ ಗಗನ ಯಾನ; ಶ್ರೀಮತಿ. ಇಂದಿರಾಗಾಂಧಿ ಹತ್ಯೆ ಪ್ರಧಾನಿಯಾಗಿ ರಾಜಿವ್ ಗಾಂಧಿ
➤ 1985-ರಾಜೀವ್ –ಲೊಂಗೊವಾಲ್ ಒಪ್ಪಂದಕ್ಕೆ ಸಹಿ; ಸಂತ ಲೊಂಗೊವಾಲ್ ಹತ್ಯೆ.. ಪಂಜಾಬಿನಲ್ಲಿ ಚುನಾವಣೆ; ಅಸ್ಸಾಂ ಒಪ್ಪಂದ ; VII ನೇ ಪಂಚವಾರ್ಷಿಕ ಯೋಜನೆ ಪ್ರಾರಂಭ
➤ 1986-ಮಿಜೊರಂ ಒಪ್ಪಂದ.
➤ 1987-ಆರ್. ವೆಂಕಟರಾಮನ್ ರಾಷ್ಟ್ರಪತಿ ಮತ್ತು ಶಂಕರದಯಾಳ್ ಶರ್ಮ ಉಪರಾಷ್ಟ್ರ ಪತಿಯಾಗಿ ಚುನಾಯಿತರಾದರು.ಬೋಫೋರ್ಸ್ ಗನ್ ಮತ್ತು ಫೇರ್ ಫ್ಯಾಕ್ಸ ಹಗರಣಗಳು
➤ 1989 – ಅಯೋಧ್ಯೆಯಲ್ಲಿ ರಾಮ ಶಿಲಾನ್ಯಾಸ ಪೂಜಾ; ಭಾರತದ ಮೊದಲ ಐ.ಆರ್.ಬಿ.ಎಂ (IRBM ‘ ಅಗ್ನಿ’ ಯಶಸ್ವಿಯಾಗಿ ಒರಿಸ್ಸಾದಿಂದ ಉಡಾವಣೆ (ಮೇ 22); ತ್ರಿಶೂಲ್ ಕ್ಷಿಪಣಿಯ ಪರೀಕ್ಷಾ ಪ್ರಯೋಗ (ಜೂನ್ 5); ಪೃಥ್ವಿ ಯಶಸ್ವಿ ಎರಡನೆ ಉಡಾವಣೆ (ಸೆಪ್ಟಂಬರ್ 27); ರಾಜೀವ್ ಸರ್ಕಾರಕ್ಕೆ ಚುನಾವಣೆಯಲ್ಲಿ ಸೋಲು ಮತ್ತು ರಾಜಿನಾಮೆ (ನವೆಂಬರ್.29); ಜವಾಹರ್ ರೋಜಗಾರ್ ಯೋಜನಾ ಪ್ರಾರಂಭ (ನವಂಬರ್.29); ರಾಷ್ಟ್ರೀಯ ರಂಗದ ನಾಯಕ ವಿ.ಪಿ. ಸಿಂಗ್ ಏಳನೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ, ಹೊಸ ಸಂಪುಟದ ಪ್ರಮಾಣ ವಚನ (ಡಿಸೆಂಬರ್.2), ಒಂಬತ್ತನೆ ಲೋಕಸಭಾ ರಚನೆ
➤ 1990- ಕೊನೆಯ ಕೊನೆಯ ಐ.ಪಿ.ಕೆ.ಎಫ್ (IPKF) ಮನೆಗೆ ವಾಪಸ್ಸು (ಮಾರ್ಚ 25); ಇಂಡಿಯನ್ ಏರ್ ಲೈನ್ ಎ-320 ಏರ್ ಬಸ್ ಅಫಘಾತ (14 ನೇ ಫಬ್ರವರಿ). ಜನತಾದಳ ವಿಭಜನೆ; ಬಿ ಜೆ ಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ಸು , ಅಡ್ವಾನಿಯ ರಥ ಯಾತ್ರೆ ಮತ್ತು ಬಂಧನ. ಮಂಡಲ್ ವರದಿ ಅನುಷ್ಠಾನ, ವಿ. ಪಿ. ಸಿಂಗ್ ಘೋಷಣೆ, ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದಿಂದ ಅಯೋಧ್ಯೆಯಲ್ಲಿ ಹಿಂಸೆ,.
➤ 1991 -ಗಲ್ಫ್ ಯುದ್ಧ ಪ್ರಾರಂಭ (ಜನವರಿ. 17); ರಾಜೀವ ಗಾಂಧಿ ಹತ್ಯೆ(ಮೇ 21); X ಹತ್ತನೆ ಲೋಕಸಭಾ ರಚನೆ (ಜೂನ್ 20); ಪಿ.ವಿ. ನರಸಿಂಹ ರಾವ್ ಪ್ರಧಾನ ಮಂತ್ರಿ ಯಾದರು
➤ 1992.- ಭಾರತವು ಇಸ್ರಾಯಿಲ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಸಿತು (ಜನವರಿ. 29); ಭಾರತ ರತ್ನ ಮತ್ತು ಅಸ್ಕರ್ ವಿಜೇತ ಸತ್ಯಜಿತ್ ರೇ ನಿಧನ (ಏಪ್ರಿಲ್ 23); ಎಸ್ .ಡಿ. ಶರ್ಮ ರಾಷ್ಟ್ರಪತಿಯಾಗಿ ಚುನಾಯಿತರಾದರು (ಜೂಲೈ 25); ಐ ಎನ್ ಎಸ್ ಶಕ್ತಿ ಮೊದಲ ಭಾರತೀಯ ನಿರ್ಮಿತ ಜಲಾಂತರ್ಗಾಮಿ ಫೆಬ್ರವರಿ. 7 ರಂದು ಹೊರಬಂದಿತು
➤ 1993. -ಅಯೋಧ್ಯಯಲ್ಲಿ 67.33 ಎಕರೆ ಭೂಮಿ ಯನ್ನು ಸುಗ್ರೀವಾಜ್ಞೆಯ ಮೂಲಕ ವಶಪಡಿಸಿಕೊಳ್ಳಲಾಯಿತು (ಜನವರಿ 7); ಬೆಜೆಪಿಯ ಸಮಾವೇಶಕ್ಕೆ ಹೆಚ್ಚಿನ ಬಂದೋಬಸ್ತು. ಮುಂಬಯಿಯಲ್ಲಿ ಸರಣಿ ಬಾಂಬ ಸ್ಪೋಟದಿಂದ 300 ಸಾವು; ಇನ್ಸಾಟ್ 2 ಬಿ ಪೂರ್ಣ ಕಾರ್ಯಾರಂಭ; ಮಹರಾಷ್ಟ್ರದಲ್ಲಿ ಭೂಕಂಪ
➤ 1994 -ನಾಗರೀಕ ವಿಮಾನಯಾನದಲ್ಲಿ ಸರ್ಕಾರದ ಏಕಸ್ವಾಮ್ಯಕ್ಕೆ ಕೊನೆ. ಒಪ್ಪಂದದ ಬಗ್ಗೆ ಗದ್ದಲ; ಪ್ಲೇಗು ಕಾಣಿಸಿಕೊಂಡಿತು.; ಸುಷ್ಮಿತ ಸೇನ್ ಭುವನ ಸುಂದರಿ; ಐಶ್ವರ್ಯ ರೈ ವಿಶ್ವಸುಂದರಿ
➤ 1995-ಮಾಯಾವತಿ ಉತ್ತರಪ್ರದೇಶದ ಮೊದಲ ದಲಿತ ಮುಖ್ಯ ಮಂತ್ರಿ. ಬಿ.ಜೆ.ಪಿ ಮಹರಾಷ್ಡ್ರ ಮತ್ತು ಗುಜರಾತನಲ್ಲಿ ಮತ್ತು ಜನತಾದಳ ಕರ್ನಾಟಕದಲ್ಲಿ, ಒರಿಸ್ಸಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಟಿ) ರಚನೆ. ಉತ್ತರಪ್ರದೇಶದಲ್ಲಿ ಮಾಯಾವತಿ ಸರ್ಕಾರದ ಪತನದ ನಂತರ ರಾಷ್ಟ್ರಪತಿ ಆಡಳಿತ ಇನ್ಸಾಟ್2ಸಿ ಮತ್ತು ಐಆರ್ ಎಸ್ ಐ-ಸಿ ಉಡಾವಣೆ
➤ 1996 -ಹವಾಲಾ ಪ್ರಕರಣ, ಅನೇಕ ಮಂತ್ರಿಗಳ ಮತ್ತು ಪ್ರತಿ ಪಕ್ಷ ಧುರೀಣರ ಬಲಿ ತೆಗೆದು ಕೊಂಡಿತು: ಪಿ ಎಸ್ ಎಲ್ ವಿ ಡಿ 3 (PSLV D3) ಮಾರ್ಚ21 ರಂದು ಉಡಾವಣೆ. ಐ.ಆರ್.ಎಸ್.ಪಿ (IRSP-3) ಜೊತೆ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಹೊಸ ಯುಗ ಪ್ರಾರಂಭ; ಹನ್ನೊಂದನೆ ಲೋಕಸಭಾ ಚುನಾವಣೆ ಏಪ್ರಿಲ್ ನಲ್ಲಿ . ಬಿ.ಜೆ.ಪಿ ಅತಿ ದೊಡ್ಡ ಪಕ್ಷ.
➤ 1997-ಭಾರತವು ಆಗಷ್ಟ 15, ರಂದು ತನ್ನ ಐವತ್ತನೆ ಸ್ವಾತಂತ್ರೋತ್ಸವ ಆಚರಿಸಿತು
➤ 1998 – ಮದರ್ ಥೆರೇಸಾ ನಿಧನ; ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನ ಮಂತ್ರಿಯಾದರು. ಭಾರತವು ತನ್ನ ಎರಡನೆ ಪರಮಾಣು ಸಾಧನವನ್ನು ಸ್ಪೋಟಿಸಿತು (ಪೋಕ್ರಾನ್ II)

➤ 1999 -ಇಂಡಿಯನ್ ಏರ್ ಲೈನ್ ವಿಮಾನ IC-814 ಅನ್ನು ಭಯೋತ್ಪಾದಕರು ಅಪಹರಣ ಮಾಡಿ ಅಫ್ಘನಿಸ್ತಾನದ ಕಂದಹಾರ್ ಗೆ ಡಿಸೆಂಬರು 24, 1999.ರಂದು ಒಯ್ದರು, ಒತ್ತೆಯಾಳುಗಳಾಗಿ ಇಟ್ಟುಕೊಂಡ ಪ್ರಯಾಣಿಕರನ್ನು ಬಿಡಿಸಿಕೊಳ್ಳಲು ಮೂವರು ಉಗ್ರಗಾಮಿಗಳನ್ನು ಸರ್ಕಾರವು ಬಿಡುಗಡೆ ಮಾಡಿತು. ಜೂನ್ 1999 ರಲ್ಲಿ ಸೆರೆ ಹಿಡಿದಿದ್ದ ಭಾರತಿಯ ಪೈಲೆಟ್ ಫ್ಲೈಟ್ ಲೆಫ್ಟಿನೆಂಟ್ ಕೆ. ನಚಿಕೇತ ಅವರನ್ನು ಎಂಟು ದಿನಗಳ ಸೆರೆವಾಸದ ನಂತರ ಬಿಡುಗಡೆ ಮಾಡಲಾಯಿತು; ಕಾರ್ಗಿಲ್ ವಿಭಾಗದಲ್ಲಿ ಹತೋಟಿ ಗಡಿರೇಖೆಯೊಳಗೆ ನುಸುಳಿದ ಪಾಕಿಸ್ತಾನಿಗಳನ್ನು ಹೊರ ಹಾಕಲು ಭಾರತಿಯ ಸೇನೆಯು ಆಪರೇಷನ್ ವಿಜಯ ಪ್ರಾರಂಭಿಸಿತು. ಭಾರತ ಕದನದಲ್ಲಿ ಜಯಶಾಲಿಯಾಯಿತು.

➤ 2000-ಅಮೇರಿಕಾದ (ಯೂ.ಎಸ್) ಅಧ್ಯಕ್ಷ ಬಿಲ್ ಕ್ಲಿಂಟನ್ ಮಾರ್ಚ 2000 ರಲ್ಲಿ ಭಾರತಕ್ಕೆ ಭೇಟಿ ನೀಡಿದರು. ಛತ್ತೀಸಘಡ, ಉತ್ತರಾಂಚಲ ಮತ್ತು ಝಾರ್ಖಂಡ್ ಎಂಬ ಮೂರು ಹೊಸ ರಾಜ್ಯಗಳು ರಚನೆಯಾದವು. ಭಾರತದ ಜನಸಂಖ್ಯೆಯು ಒಂದು ಬಿಲಿಯನ್ ಗಿಂತ ಹೆಚ್ಚಾಯಿತು.

➤ 2001 -ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಜೂಲೈ2001 ರಲ್ಲಿ ಶೃಂಗ ಸಭೆ ನಡೆಯಿತು; ಅತ್ಯಂತ ದಾರುಣ ನೈಸರ್ಗಿಕ ವಿಕೋಪವಾದ ಗುಜರಾತ್ ಭೂಕಂಪ ಜನವರಿ 2001 ರಲ್ಲಿ ಆಯಿತು; “ತೆಹಲ್ಕಾ.ಕಾಮ್; ಭಾರತೀಯ ಸೇನಾ ಅಧಿಕಾರಿಗಳು, ಮಂತ್ರಿಗಳು, ಅಧಿಕಾರಿಗಳು ಶಸ್ತ್ರಾಸ್ತ ಖರೀದಿಯಲ್ಲಿ ನಡೆಸುವ ಭ್ರಷ್ಟಾಚಾರವನ್ನು ತೋರಿಸುವ ವಿಡಿಯೋ ಟೇಪುಗಳನ್ನು ಮಾರ್ಚ 2001- ರಲ್ಲಿ ಪ್ರದರ್ಶಿಸಿತು; ಆರನೆ (ಸ್ವಾತಂತ್ರ್ಯ ಬಂದಾಗಿನಿಂದ ) ಭಾರತೀಯ ಜನಗಣತಿ ಮಾರ್ಚ 2001 -ರಂದು ಮಕ್ತಾಯವಾಯಿತು. ಭಾರತದ ವಿದ್ಯುತ್ ಶಕ್ತಿ ವಿಭಾಗಕ್ಕೆ ಎನ್ರಾನ್ ಆಗಷ್ಟ ➤ 2001 ರಲ್ಲಿ ವಿದಾಯ ಹೇಳಿತು; ಜಿ.ಎಸ್.ಎಲ್.ವಿ (GSLV) ಯನ್ನು ಯಶಸ್ವಿಯಾಗಿ l ನೇ ಏಪ್ರಿಲ್ 2001 ರಲ್ಲಿ ಉಡಾವಣೆ ಮಾಡಲಾಯಿತು ಮತ್ತು ಪಿಎಸ್ ಎಲ್ ಸಿ-ಸಿ3 ಉಡಾವಣೆಯನ್ನು ಅಕ್ಟೋಬರ್ 2001 ರಲ್ಲಿ ಮಾಡಲಾಯಿತು.

➤ 2002 – ಕ್ಷಿಪಣಿ ವಿಜ್ಞಾನಿ, ಅವುಲ್ ಪಕೀರ್ ಜೈನುಲ್ಲಬ್ದಿನ್ ಅಬ್ದುಲ್ ಕಲಾಂ ಭಾರತದ ರಾಷ್ಟ್ರ ಪತಿಯಾಗಿ ಚುನಾಯಿತರಾದರು; ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ದಾರುಣವಾದ ಗೋಧ್ರಾ ಘಟನೆ, ಕೋಮುಗಲಭೆಯು ಫೆಬ್ರವರಿ 27, 2002 ರಂದು ಗುಜರಾತಿನಲ್ಲಿ ನಡೆಯಿತು; ರಾಷ್ಟ್ರೀಯ ಜಲ ನೀತಿಯನ್ನು ಏಪ್ರಿಲ್ ನಲ್ಲಿ ಷಿಸಲಾಯಿತು. ಇದು ಜಲ ಸಂಪನ್ಮೂಲಗಳನ್ನು ಗರಿಷ್ಟ ಮತ್ತು ಸುಸ್ಥಿರ ಬಳಕೆಗೆ ಅನುವಾಗಿಸಲು ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವ ಗುರಿ ಹೊಂದಿದೆ.
ಭಾರತವು ಸ್ಟ್ರಾಟಿಜಿಕ್ ಫೋರ್ಸಸ್ ಕಮ್ಯಾಂಡ್ (SFC) ಮತ್ತು ನ್ಯುಕ್ಲಿಯರ್ ಕಮ್ಯಾಂಡ್ ಅಥಾರಿಟಿ (NCA) ರಚಿಸಿತು; ಏರ್ ಮಾರ್ಷಲ್ ತೇಜ ಮೋಹನ ಅಸ್ತಾನ ಅವರನ್ನು SFC ಯ ಮೊದಲ ಕಮ್ಯಾಂಡರ್ ಇನ್ ಛೀಫ್ ಆಗಿ ಹೆಸರಿಸಲಾಗಿದೆ; ಆಧುನಿಕ ಬಹು ಉದ್ಧೇಶಿತ ಉಪಗ್ರಹ, ಇನ್ಸಾಟ್-3A (INSAT-3A) ಅನ್ನು ಯಶಸ್ವಿಯಾಗಿ, ಫ್ರೆಂಚ್ ಗಯಾನದ ಕ್ವರೋದಿಂದ ಉಡಾಯಿಸಲಾಗಿದೆ. ಸಿ.ಬಿ.ಐ ಯು ಆರ್ಥಿಕ ಗುಪ್ತಚರವಿಭಾಗವನ್ನು ಬಿಳಿ ಕಾಲರ್ ಅಪರಾಧಗಳನ್ನು ಎದುರಿಸಲು ಜೂನ್ ನಲ್ಲಿ ರಚಿಸಿತು.; ಆಧುನಿಕ ಸಂವಹನ ಉಪಗ್ರಹ ಇನ್ಸಾಟ್-3E (INSAT-3 E) ಯನ್ನು ಯುರೋಪಿಯನ್ ರಾಕೆಟ್ ಮೂಲಕ ಫ್ರೆಂಚ್ ಗಯಾನಾದದಲ್ಲಿನ ಸ್ಪೇಸ್ ಪೋರ್ಟನಿಂದ ಡಿಸೆಂಬರ್ ತಿಂಗಳಲ್ಲಿ ಹಾರಿಸಲಾಯಿತು.

Comments

No comments yet. Why don’t you start the discussion?

Leave a Reply

Your email address will not be published. Required fields are marked *