( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1. ತಂದೆಯ ರಕ್ತದ ಗುಂಪು ‘ಎ’ ಆಗಿದ್ದು, ತಾಯಿಯ ರಕ್ತದ ಗುಂಪು ‘ಒ’ ಆಗಿದ್ದಲ್ಲಿ ಅವರ ಮಗುವಿನಲಿ ಈ ಕೆಳಗಿನ ಯಾವ ರಕ್ತದ ಗುಂಪನ್ನು ಕಾಣಬಹುದು?
ಎ. ಬಿ ಬಿ. ಎಬಿ
ಸಿ. ಒ ಡಿ. ಎ
2. ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ ಯಾರು?
ಎ. ಯುವರಾಜ ಸಿಂಗ್ ಬಿ. ಹರ್ಷಲ್ ಗಿಬ್ಸ್.
ಸಿ. ರವಿಶಾಸ್ತ್ರೀ ಡಿ. ಕ್ರಿಸ್ ಗೇಯ್ಲ್.
3. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಯಾವುದು?
ಎ. ನಳಂದಾ ವಿಶ್ವವಿದ್ಯಾಲಯ.
ಬಿ. ಕಂಚಿ ವಿಶ್ವವಿದ್ಯಾಲಯ.
ಸಿ. ವಿಕ್ರಮಶೀಲ ವಿಶ್ವವಿದ್ಯಾಲಯ.
ಡಿ. ತಕ್ಷಶೀಲ ವಿಶ್ವವಿದ್ಯಾಲಯ.
4. ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿತು ?
ಎ. ಕದಂಬರು ಬಿ. ಗಂಗರು
ಸಿ. ರಾಷ್ಟ್ರಕೂಟರು ಡಿ. ಚಾಲುಕ್ಯರು
5. ಹರಿಹರ,ರಾಘವಾಂಕರು ಯಾವ ದೊರೆಗಳ ಕಾಲದವರು ?
ಎ. ರಾಷ್ಟ್ರಕೂಟರು ಬಿ. ಹೊಯ್ಸಳರು
ಸಿ. ಕದಂಬರು ಡಿ. ಗಂಗರು
6. ವಿಜಯನಗರ ಸಾಮ್ರಾಜ್ಯದ ಪ್ರಥಮ ದೊರೆ ಯಾರು ?
ಎ. ಕೃಷ್ಣದೇವರಾಯ ಬಿ. ವಿಜಯರಾಜ
ಸಿ. ಅಚ್ಯುತರಾಯ ಡಿ. ಹರಿಹರ
7. ಮಳೆ ಹನಿಯು ಗೋಲಾಕಾರವಾಗಿರಲು ಕಾರಣವೇನು?
ಎ. ವಾತಾವರಣದ ಒತ್ತಡ
ಬಿ. ಮೇಲ್ಮೈ ಬಿಗಿತ
ಸಿ. ಗುರುತ್ವಾಕರ್ಷಣ ಶಕ್ತಿ
ಡಿ. ಅಂಟುಕೊಳ್ಳುವಿಕೆ
8. ಸೂರ್ಯನು ಹುಟ್ಟುವಾಗ ಮತ್ತು ಮುಳುಗುವಾಗ ಕೆಂಪುಬಣ್ಣದಿಂದ ಕೂಡಿರಲು ಕಾರಣ ಏನು?
ಎ. ಬೆಳಕಿನ ಚದುರುವಿಕೆ
ಬಿ. ಬೆಳಕಿನ ಫ್ರತಿಫಲನ
ಸಿ. ವ್ಯತೀಕರಣ
ಡಿ. ಬೆಳಕಿನ ವಕ್ರೀಭವನ
9. ಪಕ್ಷಿಯೂ ಆಕಾಶದಲ್ಲಿ ಹಾರುತ್ತಿರುವಾಗ ಈ ಕೆಳಗಿನ ಯಾವುದನ್ನು ಹೊಂದಿರುತ್ತದೆ.?
ಎ.ಚಲನಶಕ್ತಿಯನ್ನು ಹೊಂದಿರುತ್ತದೆ.
ಬಿ. ಪ್ರಚ್ಛನ್ನಶಕ್ತಿಯನ್ನು ಹೊಂದಿರುತ್ತದೆ
ಸಿ. ಎರಡು ತಪ್ಪು
ಡಿ. ಎರಡು ಸರಿ
10. ಕುಕ್ಕರ್‍ನಲ್ಲಿ ನೀರಿನ ಕುದಿಯುವ ಬಿಂದು
ಎ. ಕಡಿಮೆಯಾಗುತ್ತದೆ
ಬಿ. ಹೆಚ್ಚಾಗುತ್ತದೆ.
ಸಿ. ಅಷ್ಟೇ ಇರುತ್ತದೆ.
ಖ ಏನು ಆಗುವುದಿಲ್ಲ
11. ಕೆಲಸದ ಮೂಲಮಾನ ಯಾವುದು?
ಎ. ಓಮ್ ಬಿ. ಔನ್ಸ್
ಸಿ. ಜೌಲ್ ಡಿ. ಕಿಲೋಗ್ರಾಂ
12. ಮರಳುಗಾಡಿನಲ್ಲಿ ಮರೀಚಿಕೆ ಕಂಡುಬರುವುದು?
ಎ. ಬೆಳಕಿನ ವಕ್ರೀಭವನ
ಬಿ. ಚದುರುವಿಕೆ
ಸಿ. ವರ್ಣವಿಭಜನೆ
ಡಿ. ಪೂರ್ಣಾತರಿಕ ಪ್ರತಿಫಲನ
13. ಜಲಜನಕವನ್ನು ಕಂಡುಹಿಡಿದವರು ಯಾರು?
ಎ. ರುದರ್‍ಪೋರ್ಡ್
ಬಿ. ಮೇಡಂ ಕ್ಯೂರಿ
ಸಿ. ಹೆನ್ರಿ ಕ್ವಾವೆಂಡಿಷ್
ಡಿ. ಐನ್‍ಸ್ಟೈನ್
14. ಸಮಸ್ಥಾನಿಗಳನ್ನು ಹೇಗೆ ಬೇರ್ಪಡಿಸುವರು?
ಎ. ಹರಳೀಕರಣ
ಬಿ. ಶೋಧಿಸುವಿಕೆ
ಸಿ. ಭಾಷೀಕರಣ
ಡಿ. ಭಟ್ಟಿ ಇಳಿಸುವಿಕೆ
15. ಗೋವಾ ರಾಜ್ಯದ ಮುಖ್ಯ ನದಿ ಯಾವುದು?
ಎ. ಮಾಂಡೋವಿ ಬಿ. ಕೃಷ್ಣ
ಸಿ. ಕಾಳಿ ನದಿ ಡಿ. ರಾಜೋಲ್
16. ಸೂಪ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಎ. ಶರಾವತಿ ಬಿ. ಕಾಳಿ
ಸಿ. ನೇತ್ರಾವತಿ ಡಿ. ಪೆರಿಯಾರ್
17. ಚಳಿಗಾಲದಲ್ಲಿ ಅತ್ಯಂತ ಹೆಚ್ಚು ಮಳೆಯನ್ನು ಪಡೆಯುವ ರಾಜ್ಯ ಯಾವುದು?
ಎ. ಆಂಧ್ರಪ್ರದೇಶ ಬಿ. ತಮಿಳುನಾಡು
ಸಿ. ಕರ್ನಾಟಕ ಡಿ. ಮಹಾರಾಷ್ಟ್ರ
18. ನೈರುತ್ಯ ಮಾರುತಗಳಿಂದ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ ಭಾರತದಲ್ಲಿ ಯಾವುದು?
ಎ. ಪೂರ್ವ ಬೆಟ್ಟಗಳು
ಬಿ. ಪಶ್ಚಿಮ ಘಟ್ಟಗಳು
ಸಿ. ಸಾತ್ಪುರ್ ಘಟ್ಟಗಳು
ಡಿ. ಅರಾವಳಿ ಪರ್ವತಗಳು
19. ಪಾಮ್ ಎಣ್ಣೆ ಯಾವುದರಿಂದ ಸಿಗುತ್ತದೆ?
ಎ. ತೆಂಗು ಬಿ. ತಾಳೆ
ಸಿ. ಹರಳು ಡಿ. ಸೂರ್ಯಕಾಂತಿ
20. ಟ್ಯೋಮೆಟೋ ಮತ್ತು ಆಲೂಗಡ್ಡೆಯನ್ನು ಸಂಕರಗೊಳಿಸಿ ಪಡೆದ ಸಸ್ಯದ ಹೆಸರೇನು?
ಎ.ಟೋಮ್ಯಾಟೋ
ಬಿ. ಪೊಟೋಮ್ಯಾಡೋ
ಸಿ.ಪೊಟ್ಯಾಟೋ
ಡಿ. ಯಾವುದೂ ಅಲ್ಲ
21. ದ್ರಾಕ್ಷಿಯಲ್ಲಿ ಬೀಜವಿಲ್ಲದಂತೆ ಮಾಡಲು ಬಳಸುವ ಹಾರ್ಮೋನ್ ಯಾವುದು?
ಎ. ಅಸಿಟಿಕ್ ಆಮ್ಲ
ಬಿ. ರೈನೋಟಿಸ್
ಸಿ. ಜಿಟರೆಲ್ಲಿಕ ಆಮ್ಲ
ಡಿ. ಬ್ಯುಟರಿಕ್ ಆಮ್ಲ
22. ‘ರಾಜಗೀರಾ’ ಎನ್ನುವ ಮಾವಿನ ತಳಿ ಯಾವ ಜಿಲ್ಲೆಯದು?
ಎ. ಕೋಲಾರ ಬಿ. ತುಮಕೂರು
ಸಿ. ಬೆಂಗಳೂರು ಡಿ. ಧಾರವಾಡ
23. ರೈಜೋಟಿಯಮ್ ಜೀವಾಣುವನ್ನು ಯಾವ ಬೆಳೆಗಳಲ್ಲಿ ಉಪಯೋಗಿಸುತ್ತಾರೆ.?
ಎ. ಏಕದಳ ಬಿ. ದ್ವಿದಳ
ಸಿ. ಬಹುವಾರ್ಷಿಕ ಡಿ. ಎ ಮತ್ತು ಬಿ
24. ಪಾರ್ಥೆನಿಯಂನ್ನು ತಿನ್ನುವ ಕಿಟದ ಹೆಸರೇನು?
ಎ. ನಾಯಿ ಜೀರಂಗಿ
ಬಿ. ಕಂಬಳಿಹುಳ
ಸಿ. ಮೆಕ್ಸಿಕನ್ ದುಂಬಿ
ಡಿ. ತೊಂಡಲಿಹುಳು
25. ಗಂಧಕದ ಮುಖ್ಯ ಅದಿರು ಯಾವುದು?
ಎ. ಸಿನ್ನಬಾರ್ ಬಿ. ಬ್ಲೆಂಡ್
ಸಿ. ಜಿಪ್ಸಂ ಡಿ. ಗೆಲೀನಾ
ಉತ್ತರಗಳು:-
1. ಸಿ. ಒ
2. ಬಿ. ಹರ್ಷಲ್ ಗಿಬ್ಸ್.
3.ಎ. ನಳಂದಾ ವಿಶ್ವವಿದ್ಯಾಲಯ.
4. ಬಿ. ಗಂಗರು
5. ಬಿ. ಹೊಯ್ಸಳರು
6. ಡಿ. ಹರಿಹರ
7. ಬಿ. ಮೇಲ್ಮೈ ಬಿಗಿತ
8.ಎ. ಬೆಳಕಿನ ಚದುರುವಿಕೆ
9.ಡಿ. ಎರಡು ಸರಿ
10.ಬಿ. ಹೆಚ್ಚಾಗುತ್ತದೆ.
11.ಸಿ. ಜೌಲ್
12.ಡಿ. ಪೂರ್ಣಾತರಿಕ ಪ್ರತಿಫಲನ
13.ಸಿ. ಹೆನ್ರಿ ಕ್ವಾವೆಂಡಿಷ್
14.ಡಿ. ಭಟ್ಟಿ ಇಳಿಸುವಿಕೆ
15.ಎ. ಮಾಂಡೋವಿ
16.ಬಿ. ಕಾಳಿ
17.ಬಿ. ತಮಿಳುನಾಡು
18.ಬಿ. ಪಶ್ಚಿಮ ಘಟ್ಟಗಳು
19.ಬಿ. ತಾಳೆ
20.ಬಿ. ಪೊಟೋಮ್ಯಾಡೋ
21.ಸಿ. ಜಿಟರೆಲ್ಲಿಕ ಆಮ್ಲ
22.ಎ. ಕೋಲಾರ
23.ಬಿ. ದ್ವಿದಳ
24.ಸಿ. ಮೆಕ್ಸಿಕನ್ ದುಂಬಿ
25.ಡಿ. ಗೆಲೀನಾ