GKLatest UpdatesMultiple Choice Questions SeriesQUESTION BANKQuizScience

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17

1. ಅಣುಬಾಂಬ್‍ನ್ನು ಕಂಡುಹಿಡಿದ ವಿಜ್ಞಾನಿ ಯಾರು..?
ಎ. ರುದರ್ ಪೋರ್ಡ್
ಬಿ. ಕಾರ್ಲ್ ಬೆಂಜ್
ಸಿ. ರಾಬರ್ಟ್ ಒಪ್ಪನ್‍ಹೈಮರ್
ಡಿ. ಮ್ಯಾಕ್‍ಮಿಲನ್

2. ವಾತಾವರಣದಲ್ಲಿ ಅಲ್ಟ್ರಾವಯಲೆಟ್ ಕಿರಣಗಳನ್ನು ಯಾವುದು ಹೀರಿಕೊಳ್ಳುತ್ತದೆ..?
ಎ. ಹೀಲಿಯಂ
ಬಿ. ಓಝೋನ್
ಸಿ. ಸಾರಜನಕ
ಡಿ. ಆಮ್ಲಜನಕ

3. ಯಾವ ವಿಧಧ ಗಾಜು ಶಾಖ ನಿರೋಧಕವಾಗಿದೆ..?
ಎ. ಬಾಟಲ್ ಗಾಜು
ಬಿ. ಫೈರೆಕ್ಸ್ ಗಾಜು
ಸಿ. ಗಟ್ಟಿ ಗಾಜು
ಡಿ. ಫ್ಲಿಂಟ್ ಗಾಜು

4. ಡೈನಮೋ ಯಾವ ಕ್ರಿಯೆಯನ್ನು ಮಾಡುತ್ತದೆ..?
ಎ. ಮ್ಯಾಗ್ನೆಟಿಕ್ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
ಬಿ. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ.
ಸಿ. ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
ಡಿ. ಶಾಖ ಶಕ್ತಿಯನ್ನು ವಿದ್ಯುತ್ ಶಕ್ತಯನ್ನಾಗಿ ಪರಿವರ್ತಿಸುತ್ತದೆ.

5. ಸೋಲಾರ್ ಶಕ್ತಿಯನ್ನು ಪರಿವರ್ತಿಸಲು ಬೇಕಾಗುವ ಲೋಹ ಯಾವುದು..?
ಎ. ಟಂಟಾಲಂ
ಬಿ. ಸಿಲಿಕಾನ್
ಸಿ. ಬೆರೆಲ್ಲಿಯಂ
ಡಿ. ಶುದ್ಧ ಇಂಗಾಲ

6. ಹಿಂದಿನ ದೃಶ್ಯಗಳನ್ನು ವೀಕ್ಷಿಸಲು ವಾಹನಗಳಲ್ಲಿ ಬಳಸುವ ಮಸೂರ ಯಾವುದು..?
ಎ. ನಿಮ್ನ ಮಸೂರ
ಬಿ. ಬಾಹ್ಯ ಮಸೂರ
ಸಿ. ಸಮತಟ್ಟು ಮಸೂರ
ಡಿ. ಇವು ಯಾವುದೂ ಅಲ್ಲ

7. ನಾಟ್ ಎಂಬುದು ಯಾವುದರ ವೇಗವನ್ನು ಅಳೆಯುವ ಮಾನವಾಗಿದೆ..?
ಎ. ವಾಹನಗಳು
ಬಿ. ವಿಮಾನಗಳು
ಸಿ. ಹಡಗುಗಳು
ಡಿ. ಕ್ಷಿಪಣಿಗಳು

8. ಶಬ್ದವನ್ನು ತನ್ನ ಕಣ್ಣನ್ನಾಗಿ ಉಪಯೋಗಿಸುವ ಪ್ರಾಣಿ ಯಾವುದು..?
ಎ. ಹಾವು
ಬಿ. ನಾಯಿ
ಸಿ. ಬಾವಲಿ
ಡಿ. ಬೆಕ್ಕು

9. ಈ ಕೆಳಗಿನವರಲ್ಲಿ ಹೈಡ್ರೋಜನ್ ಬಾಂಬ್‍ನ ಜನಕ ಯಾರು..?
ಎ. ರುದರ್ ಪೋರ್ಡ್
ಬಿ. ಒಟ್ಟೋಹಾನ್
ಸಿ. ಆಲ್ಪ್ರೆಡ್ ನೊಬೆಲ್
ಡಿ. ಎಡ್ವರ್ಡ್ ಟೆಲ್ಲರ್

10. ಅಣುವೊಂದರ ರಾಸಾಯನಿಕ ಗುಣಗಳನ್ನು ಬದಲಾಯಿಸದೆ ಅದರ ಕೇಂದ್ರಕ್ಕೆ ಈ ಕೆಳಗಿನ ಯಾವ ಅಂಶವನ್ನು ಸೇರಿಸಬಹುದು..?
ಎ. ನ್ಯೂಟ್ರಾನ್‍ಗಳು
ಬಿ. ಪ್ರೋಟಾನ್‍ಗಳು
ಸಿ. ಎಲೆಕ್ಟ್ರಾನ್‍ಗಳು
ಡಿ. ಇವು ಯಾವುದೂ ಅಲ್ಲ

11. ಹಾಲಿನ ಸಾಂದ್ರತೆಯನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು..?
ಎ. ಲ್ಯಾಕ್ಟೋಮೀಟರ್
ಬಿ. ಮಾನೋಮೀಟರ್
ಸಿ. ಹೈಡ್ರೋಮೀಟರ್
ಡಿ. ಮೈಕ್ರೋಮೀಟರ್

12. ಭೂಮಿ ಗೋಳಾಕಾರವಿದೆ ಮತ್ತು ಅದು ತನ್ನ ಅಕ್ಷದ ಮೇಲೆ ಸುತ್ತುತ್ತದೆ ಎಂದು ಮೊದಲು ಘೋಷಿಸಿದ ವಿಜ್ಞಾನಿ ಯಾರು..?
ಎ. ಐಸಾಕ್ ನ್ಯೂಟನ್
ಬಿ. ಹ್ಯೂಜಿನ್ಸ್
ಸಿ. ಈ. ಬ್ರಾಡ್‍ಶಾ
ಡಿ. ಆರ್ಯಭಟ

13. ಪ್ರತಿಧ್ವನಿ ಹೇಗೆ ಉತ್ಪತ್ತಿಯಾಗುತ್ತದೆ..?
ಎ. ಸಂವಹನ
ಬಿ. ವಕ್ರೀಭವನ
ಸಿ. ಪ್ರತಿಫಲನ
ಡಿ. ಇವು ಯಾವುದೂ ಅಲ್ಲ

14. ಹಗಲಿನಲ್ಲಿ ಸಸ್ಯಗಳು ಏನನ್ನು ಉತ್ಪತ್ತಿ ಮಾಡುತ್ತವೆ..?
ಎ. ಕಾರ್ಬನ್ ಡೈ ಆಕ್ಸೈಡ್
ಬಿ. ಸಾರಜನಕ
ಸಿ. ಆಮ್ಲಜನಕ
ಡಿ. ರಂಜಕ

15. ಭೋಪಾಲ್ ಅನಿಲ ದುರಂತದಲ್ಲಿ ಸೋರಿಕೆಯಾದ ಅನಿಲ ಯಾವುದು..?
ಎ. ಕಾರ್ಬನ್ ಮಾನಾಕ್ಸೈಡ್
ಬಿ. ಮೀಥೈಲ್ ಐಸೋಸೈನೇಟ್
ಸಿ. ಈಥೈಲ್ ಸಯನೈಡ್
ಡಿ. ಇವು ಯಾವುದು ಅಲ್ಲ

# ಉತ್ತರಗಳು :
1. ಸಿ. ರಾಬರ್ಟ್ ಒಪ್ಪನ್‍ಹೈಮರ್
2. ಬಿ. ಓಝೋನ್
3. ಬಿ. ಫೈರೆಕ್ಸ್ ಗಾಜು
4. ಬಿ. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ.
5. ಬಿ. ಸಿಲಿಕಾನ್
6. ಬಿ. ಬಾಹ್ಯ ಮಸೂರ
7. ಸಿ. ಹಡಗುಗಳು
8. ಸಿ. ಬಾವಲಿ
9. ಡಿ. ಎಡ್ವರ್ಡ್ ಟೆಲ್ಲರ್
10. ಎ. ನ್ಯೂಟ್ರಾನ್‍ಗಳು
11. ಎ. ಲ್ಯಾಕ್ಟೋಮೀಟರ್
12. ಡಿ. ಆರ್ಯಭಟ
13. ಸಿ. ಪ್ರತಿಫಲನ
14. ಸಿ. ಆಮ್ಲಜನಕ
15. ಬಿ. ಮೀಥೈಲ್ ಐಸೋಸೈನೇಟ್

# ಇದನ್ನೂ ಓದಿ :
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05

# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10

# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15

# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16

 

error: Content is protected !!