ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09

1. ಗ್ರಹಗಳ ಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು..?
ಎ. ಗೆಲಿಲಿಯೋ
ಬಿ. ಕೆಪ್ಲರ್
ಸಿ. ಕೋಪರ್ನಿಕಸ್
ಸಿ. ಐನ್‍ಸ್ಟೀನ್

2. ಈ ಕೆಳಕಂಡ ಪ್ರದೇಶದಲ್ಲಿ ಗುರುತ್ವಾಕರ್ಷಣೆಯಿಂದ ಉಂಟಾದ ವೇಗೋತ್ಕರ್ಷವು ಸೊನ್ನೆಯಾಗಿರುತ್ತದೆ.
ಎ. ಭೂಮಧ್ಯ ರೇಖೆ
ಬಿ. ಉತ್ತರ ಮತ್ತು ದಕ್ಷಿಣ ಧ್ರುವಗಳು
ಸಿ. ಸಮುದ್ರ ಮಟ್ಟ
ಡಿ. ಭೂ ಕೇಂದ್ರ

3. ಒಂದು ವಸ್ತುವಿನ ಉಷ್ಣಾಂಶವು 45 ಡಿಗ್ರಿ ಸೆಂಟಿಗ್ರೇಡ್. ಈ ಉಷ್ಣಾಂಶವನ್ನು ಫ್ಯಾರನ್‍ಹೀಟ್‍ನಲ್ಲಿ ತಿಳಿಸಿ.
ಎ. 113 ಡಿಗ್ರಿ
ಬಿ. 90 ಡಿಗ್ರಿ
ಸಿ. 49 ಡಿಗ್ರಿ
ಡಿ. 81 ಡಿಗ್ರಿ

4. ಒಂದು ವಸ್ತುವಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಕಣಗಳ ಚಲನೆಯಾಗಿದೆ. ಶಾಖವು ಮಾತ್ರ ಪ್ರಸಾರವಾಗುವ ವಿಧಾನ ಯಾವುದು?
ಎ. ಪ್ರೇರಣ
ಬಿ. ಸಂವಹನ
ಸಿ. ವಹನ
ಡಿ. ವಿಕಿರಣ

5. ಚಳಿಗಾಲದಲ್ಲಿ ಮರದ ಕುರ್ಚಿಗಿಂತ ಕಬ್ಬಿಣದ ಕುರ್ಚಿ ತಣ್ಣಗೆ ಕೊರೆದಂತೆ ಅನ್ನಿಸುತ್ತದೆ. ಇದಕ್ಕೆ ಕಾರಣ..

ಎ. ಕಬ್ಬಿಣದ ವಿಶಿಷ್ಠ ತಾಪವು ಮರದ ವಿಶಿಷ್ಟ ತಾಪಕ್ಕಿಂತ ಹೆಚ್ಚಾಗಿರುತ್ತದೆ.
ಬಿ. ಕಬ್ಬಿಣದ ಸಾಂದ್ರತೆಯು ಮರದ ಸಾಂದ್ರತೆಗಿಂತ ಹೆಚ್ಚಾಗಿರುತ್ತದೆ.
ಸಿ. ಕಬ್ಬಿಣವು ಮಣ್ಣಿಗಿಂತ ಉತ್ತಮ ಉಷ್ಣವಾಹಕ
ಡಿ. ಚಳಿಗಾಲದಲ್ಲಿ ಕಬ್ಬಿಣವು ಮರಕ್ಕಿಂತ ಕಡಿಮೆ ತಾಪಮಾನವನ್ನು ಹೀರಿಕೊಳ್ಳುತ್ತದೆ.

6. ಯಾವುದೇ ಕಾರ್ಯದಲ್ಲಿ ವಸ್ತುವಿನ ಅಣುಗಳ ಮೂಲಕ ನಡೆಯುವ ಉಷ್ಣದ ವರ್ಗಾವಣೆಯು..
ಎ. ವಹನ
ಬಿ. ಸಂವಹನ
ಸಿ. ವಿಕಿರಣ
ಡಿ. ಹೀರುವಿಕೆ

7. ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರಸೂಸುವಿಕೆಯ ವೈಜ್ಞಾನಿಕ. ವಿವರ…
ಎ. ವಿಕಿರಣ
ಬಿ. ವಕ್ರೀಭವನ
ಸಿ. ಬಿಸಿಲಿಗೆ ಒಡ್ಡುವುದು
ಡಿ. ಪ್ರತಿಬಿಂಬ

8. ಅನಿಲ ಜ್ವಾಲೆಯಲ್ಲಿ ಅತ್ಯಧಿಕ ಶಾಖವಿರುವ ಭಾಗವನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.
ಎ. ದೀಪ್ತಿವಲಯ
ಬಿ. ಕತ್ತಲು ವಲಯ
ಸಿ. ನೀಲಿ ವಲಯ
ಡಿ. ಬೆಳಕು ಬೀರದ ವಲಯ

9. ಉಷ್ಣತೆಯು ವಿಕಾಸವಾಗುವುದರಿಂದ ಉಂಟಾಗುವ ರಾಸಾಯನಿಕ ಪ್ರತಿಕ್ರಿಯೆಯನ್ನು ಹೀಗೆಂದು ಕರೆಯುತ್ತಾರೆ..?
ಎ. ಪರಾವತ್ರ್ಯ ಪ್ರತಿಕ್ರಿಯೆ
ಬಿ. ಅಂತರುಷ್ಣಕ ಪ್ರತಿಕ್ರಿಯೆ
ಸಿ. ಉಷ್ಣದ ಪ್ರತಿಕ್ರಿಯೆ
ಡಿ. ಬಹಿರುಷ್ಣಕ ಪ್ರತಿಕ್ರಿಯೆ

10. ಯಾವುದೇ ವಸ್ತುವಿರಲಿ ಅದರ ಸ್ಥಿತಿ ಬದಲಾಗುವ ಸಂದರ್ಭದಲ್ಲಿ ಅದರ ಉಷ್ಣಾಂಶ ಇದ್ದಷ್ಟೇ ಇರುವುದಕ್ಕೆ ಕಾರಣ..
ಎ. ಶಾಖವು ನಷ್ಟವಾಗುವುದು
ಬಿ. ಗುಪ್ತೋಷ್ಣ
ಸಿ. ಕಡಿಮೆ ಶಾಖದ ಸರಬರಾಜು
ಡಿ. ಜಾಲಕಶಕ್ತಿ

11. ಒಂದು ಕಾದ ವಿದ್ಯುತ್ ಒಲೆಯ ಮೇಲೆ ನೀರಿನ ಪಾತ್ರೆ ಇಟ್ಟಾಗ ಆ ನೀರು ಯಾವ ಪ್ರಕ್ರಿಯೆಯ ಮೂಲಕ ಬಿಸಿಯಾಗುತ್ತದೆ..?
ಎ. ವಹನ
ಬಿ. ವಿಕಿರಣ
ಸಿ. ಸಂವಹನ
ಡಿ. ವಿದ್ಯುತ್ ಪ್ರತಿರೋಧ

12. ಮಧ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ ಪ್ರಸಾರವಾಗುವ ಬಗ್ಗೆ..
ಎ. ಉಷ್ಣವಹನ
ಬಿ. ಉಷ್ಣವಿಕಿರಣ
ಸಿ.ಉಷ್ಣನಿರೋಧಕ
ಡಿ. ಉಷ್ಣಸಂವಹನ

13. ಘನ ವಸ್ತುವಿನಲ್ಲಿ ಪ್ರಧಾನವಾಗಿ ಉಷ್ಣ ಪ್ರಸರಣವು ಯಾವ ಮಾರ್ಗದಿಂದ ಜರುಗುತ್ತದೆ.
ಎ. ಉಷ್ಣನಯನ
ಬಿ. ರಶ್ಮಿ ಪ್ರಸಾರ
ಸಿ. ವಿದ್ಯುದ್ವಿಭಜನೆ
ಡಿ. ಉಷ್ಣವಹನ

14. ಸೂರ್ಯನ ಬೆಳಕಿನ ವರ್ಣಪಟಲದಲ್ಲಿ ಏಳು ಬಣ್ಣಗಳಿವೆ ಎನ್ನುವುದಾದರೆ ಮಧ್ಯದಲ್ಲಿರುವ ಬಣ್ಣ….
ಎ. ನೀಲಿ
ಬಿ. ಹಸಿರು
ಸಿ. ಹಳದಿ
ಡಿ. ನೇರಳೆ

15. ಇದರಲ್ಲಿ ಪ್ರಾಥಮಿಕ ಬಣ್ಣಗಳ ಸರಿಯಾದ ಪಟ್ಟಿಯನ್ನು ಗುರುತಿಸಿ.
ಎ. ನೀಲಿವರ್ಣ, ಕಡುಗೆಂಪು, ಹಳದಿ, ಕಪ್ಪು
ಬಿ.ಕೆಂಪು, ನೀಲಿ, ಹಳದಿ
ಸಿ. ಕೆಂಪು, ಹಸಿರು, ನೀಲಿ
ಡಿ. ಗುಲಾಬಿ, ಕಂದು, ಕಪ್ಪು

16. ಈ ಕೆಳಕಂಡ ವಿದ್ಯಮಾನದಿಂದಾಗಿ ಮರುಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ….
ಎ. ಬೆಳಕಿನ ವ್ಯತೀಕರಣ
ಬಿ. ಬೆಳಕಿನ ಚದುರುವಿಕೆ
ಸಿ. ಬೆಳಕಿನ ದುಪ್ಪಟ್ಟು ವಕ್ರೀಭವನ
ಡಿ. ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ

17. ಸಿ.ವಿ. ರಾಮನ್‍ರಿಗೆ ನೊಬೆಲ್ ಪ್ರಶಸ್ತಿ ದೊರೆಯಲು ಕಾರಣ..
ಎ. ಸಾಪೇಕ್ಷ ಸಿದ್ದಾಂತ
ಬಿ. ನ್ಯೂಕ್ಲಿಯರ್ ಬಿರಿತ
ಸಿ. ಗುರುತ್ವಾಕರ್ಷಣಾ ನಿಯಮಗಳು
ಡಿ. ಪರಮಾಣುಗಳಿಂದ ಬೆಳಕಿನ ಚದುರುವಿಕೆ

18. ಸಮನಾಂತರವಾದ ಎರಡು ಕನ್ನಡಿಗಳ ನಡುವೆ ಒಂದು ವಸ್ತುವನ್ನು ಇರಿಸಿದಾಗ ಉಂಟಾಗುವ ಪ್ರತಿಬಿಂದುಗಳ ಸಂಖ್ಯೆ ಎಷ್ಟು?
ಎ. ಎಂಟು
ಬಿ. ಎರಡು
ಸಿ. ಅಪರಿಮಿತ
ಡಿ. ಮೂವತ್ತೆರಡು

19. ಕಣ್ಣಿನ ಸಮೀಪದೃಷ್ಟಿ ತೊಂದರೆಯನ್ನು —- ಬಳಕೆಯಿಂದ ಸರಿಪಡಿಸಬಹುದು….
ಎ. ಪೀನಮಸೂರ
ಬಿ. ನಿಮ್ಮಮಸೂರ
ಸಿ.ಉರುಳೆಯಾಕಾರದ ಮಸೂರ
ಡಿ.ಸಮತಲ ಗಾಜು

20. ಬೆಳಕಿನ ವೇಗ ಈ ಕೆಳಗಿನ ಯಾವುದರಲ್ಲಿ ಹಾಯ್ದು ಹೋಗುವಾಗ ಕಡಿಮೆ ಇರುತ್ತದೆ…
ಎ. ಗಾಜು
ಬಿ. ನೀರು
ಸಿ. ಖಾಲಿ ಪ್ರದೇಶ
ಡಿ. ವಾಯು

# ಉತ್ತರಗಳು :
1. ಬಿ. ಕೆಪ್ಲರ್
2. ಎ. ಭೂಮಧ್ಯ ರೇಖೆ
3. ಎ. 113 ಡಿಗ್ರಿ
4. ಬಿ. ಸಂವಹನ
5. ಡಿ. ಚಳಿಗಾಲದಲ್ಲಿ ಕಬ್ಬಿಣವು ಮರಕ್ಕಿಂತ ಕಡಿಮೆ ತಾಪಮಾನವನ್ನು ಹೀರಿಕೊಳ್ಳುತ್ತದೆ.
6. ಎ. ವಹನ
7. ಎ. ವಿಕಿರಣ
8. ಎ. ದೀಪ್ತಿವಲಯ
9. ಡಿ. ಬಹಿರುಷ್ಣಕ ಪ್ರತಿಕ್ರಿಯೆ
10. ಬಿ. ಗುಪ್ತೋಷ್ಣ

11. ಸಿ. ಸಂವಹನ
12. ಬಿ. ಉಷ್ಣವಿಕಿರಣ
13. ಡಿ. ಉಷ್ಣವಹನ
14. ಬಿ. ಹಸಿರು
15. ಸಿ. ಕೆಂಪು, ಹಸಿರು, ನೀಲಿ
16. ಡಿ. ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
17. ಡಿ. ಪರಮಾಣುಗಳಿಂದ ಬೆಳಕಿನ ಚದುರುವಿಕೆ
18. ಸಿ. ಅಪರಿಮಿತ
19. ಬಿ. ನಿಮ್ನ ಮಸೂರ
20. ಬಿ. ನೀರು

# ಇದನ್ನೂ ಓದಿ :
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08