ಫೋರ್ಬ್ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 13ನೇ ವರ್ಷವೂ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ ಹಿಂದಿನ ವರ್ಷಕ್ಕಿಂತ ಶೇ. 14ರಷ್ಟು ಏರಿಕೆಯಾಗಿದ್ದು, 517. 5 ಬಿಲಿಯನ್ ಡಾಲರ್ ಗೆ ತಲುಪಿಸಿದೆ.ಈ ವರ್ಷ ಅವರು ತಮ್ಮ ಆಸ್ತಿಗೆ 37.3 ಬಿಲಿಯನ್ ಹೆಚ್ಚುವರಿ ಸೇರಿಸಿದ್ದಾರೆ.ಈ ಮೂಲಕ ಅವರ ಒಟ್ಟು ಮೌಲ್ಯ ಶೇ. 73 ರಷ್ಟು ಏರಿಕೆಯಾಗಿದೆ ಎಂದು ಫೋರ್ಬ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಗಣನೀಯ ಹೆಚ್ಚಳವಾಗಿದೆ. ಅದಾನಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು 25.2 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.ಜುಲೈನಲ್ಲಿ ಎಚ್ಸಿಎಲ್ ಟೆಕ್ನಾಲಜೀಸ್ನ ಅಧ್ಯಕ್ಷ ಹುದ್ದೆಯನ್ನು ತಮ್ಮ ಮಗಳು ರೋಶ್ನಿ ನಾಡರ್ ಮಲ್ಹೋತ್ರಾ ಅವರಿಗೆ ವಹಿಸಿದ್ದ ಟೆಕ್ ಉದ್ಯಮಿ ಶಿವ ನಾಡರ್, 20.4 ಬಿಲಿಯನ್ ಒಟ್ಟಾರೇ ಆಸ್ತಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಅವಿನ್ಯೂ ಸೂಪರ್ ಮಾರ್ಟ್ಸ್ ನ ರಾಧಾಕೃಷ್ಣನ್ ದಾಮಾನಿ 15.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಹಿಂದೂಜಾ ಸಹೋದರರು 12. 8 ಬಿಲಿಯನ್ ಡಾಲರ್ ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಸೈಕ್ರಸ್ ಪೂನಾವಾಲಾ 11. 5 ಬಿಲಿಯನ್ ಡಾಲರ್ ನೊಂದಿಗೆ ನಂಬರ್ 6, ಪಾಲೊಂಜಿ ಮಿಸ್ತ್ರೀ, ಉದಯ್ ಕೊಟಕು, ಗೋದ್ರೆಜ್ ಕುಟುಂಬ ಮತ್ತು ಲಕ್ಷ್ಮಿ ಮಿತ್ತಲ್ ಕ್ರಮವಾಗಿ 7,8,9 ಮತ್ತು 10ನೇ ಸ್ಥಾನದಲ್ಲಿದ್ದಾರೆ.
ಭಾರತದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ.
1.ಮುಖೇಶ್ ಅಂಬಾನಿ (88.7 ಶತಕೋಟಿ ಡಾಲರ್)
2.ಗೌತಮ್ ಅದಾನಿ (25.2 ಶತಕೋಟಿ ಡಾಲರ್)
3.ಶಿವ್ ನಾಡಾರ್ (20.4 ಶತಕೋಟಿ ಡಾಲರ್)
4.ರಫಾಕಿಷನ್ ದಮನಿ (15.4 ಶತಕೋಟಿ ಡಾಲರ್)
5.ಹಿಂದೂಜಾ ಸಹೋದರರು (12.8 ಶತಕೋಟಿ ಡಾಲರ್)
6.ಸೈರಸ್ ಪೂನಾವಾಲಾ (11.5 ಶತಕೋಟಿ ಡಾಲರ್)
7.ಪಲ್ಲಂಜಿ ಮಿಸ್ತ್ರಿ (11.4 ಶತಕೋಟಿ ಡಾಲರ್)
8.ಉದಯ್ ಕೊಟಕ್ (11.3 ಶತಕೋಟಿ ಡಾಲರ್)
9.ಗೋದ್ರೇಜ್ ಕುಟುಂಬ (11 ಶತಕೋಟಿ ಡಾಲರ್)
10.ಲಕ್ಷ್ಮಿ ಮಿತ್ತಲ್ (10.3 ಶತಕೋಟಿ ಡಾಲರ್)
11.ಸುನಿಲ್ ಮಿತ್ತಲ್ (10.2 ಶತಕೋಟಿ ಡಾಲರ್)
12.ದಿಲೀಪ್ ಶಾಂಘ್ವಿ (9.5 ಶತಕೋಟಿ ಡಾಲರ್)
13.ಬರ್ಮನ್ ಕುಟುಂಬ (9.2 ಶತಕೋಟಿ ಡಾಲರ್)
14.ಕುಮಾರ್ ಬಿರ್ಲಾ (8.5 ಶತಕೋಟಿ ಡಾಲರ್)
15.ಅಜೀಂ ಪ್ರೇಮ್ ಜಿ (7.9 ಶತಕೋಟಿ ಡಾಲರ್)
16.ಬಜಾಜ್ ಕುಟುಂಬ (7.4 ಶತಕೋಟಿ ಡಾಲರ್)
17.ಮಧುಕರ್ ಪಾರೇಖ್ (7.2 ಶತಕೋಟಿ ಡಾಲರ್)
18.ಕುಲ್ದೀಪ್ ಮತ್ತು ಗುರ್ಬಚನ್ ಸಿಂಗ್ ಧಿಂಗ್ರಾ (6.8 ಶತಕೋಟಿ ಡಾಲರ್)
19.ಸಾವಿತ್ರಿ ಜಿಂದಾಲ್ (6.6 ಶತಕೋಟಿ ಡಾಲರ್)
20.ಮುರಳಿ ದಿವಿ (6.5 ಶತಕೋಟಿ ಡಾಲರ್)