Current Affairs Quiz
| | |

▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)

1. ಜನವರಿ, 2021ರ ಹೊತ್ತಿಗೆ ವೈಯಕ್ತಿಕ ರಕ್ಷಣಾ ಸಲಕರಣೆಗಳ ( PPE-Personal Protective Equipment) ಕಿಟ್‌ಗಳು ಮತ್ತು ಸೂಟ್‌ಗಳ ಅತಿದೊಡ್ಡ ಉತ್ಪಾದಕ ದೇಶ ಯಾವುದು..?
1) ಭಾರತ
2) ಚೀನಾ
3) ಯುಎಸ್ಎ
4) ಇಂಗ್ಲೆಂಡ್

2. ಜನವರಿ, 2021ರಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಪರೀಕ್ಷೆಗೆ ಹಾಜರಾಗಲು ಪರಿಷ್ಕರಿಸಲಾದ ವಯಸ್ಸಿನ ಮಿತಿ ಎಷ್ಟು..?
1) 32
2) 40
3) 35
4) 37

3. 30ನೇ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ 2020ರಲ್ಲಿ ತನ್ನ ಪರಿಣಾಮಕಾರಿ ಇಂಧನ ಸಂರಕ್ಷಣಾ ಕಾರ್ಯಕ್ರಮಕ್ಕಾಗಿ ರಾಜ್ಯ ಗೊತ್ತುಪಡಿಸಿದ ಏಜೆನ್ಸಿಗಳ ವಿಭಾಗದಲ್ಲಿ ಮೊದಲನೇ ಬಹುಮಾನವನ್ನು ಪಡೆದ ರಾಜ್ಯ ಯಾವುದು..?
1) ತಮಿಳುನಾಡು
2) ಮಹಾರಾಷ್ಟ್ರ
3) ಪಂಜಾಬ್
4) ಕೇರಳ

4. ಇತ್ತೀಚಿಗೆ ನಿಧನರಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಪ್ರೊಫೆಸರ್ ಶಶಿಕುಮಾರ್ ಮಧುಸೂದನ್ ಚಿತ್ರೇ ಜಾಗತಿಕವಾಗಿ ಖ್ಯಾತಿ ಪಡೆದ ____________.
1) ಮಾನವಶಾಸ್ತ್ರಜ್ಞ
2) ಖಗೋಳ ಭೌತಶಾಸ್ತ್ರಜ್ಞ
3) ಸಸ್ಯಶಾಸ್ತ್ರಜ್ಞ
4) ಪ್ರಾಣಿಶಾಸ್ತ್ರಜ್ಞ

5. ಫ್ರಾನ್ಸ್ ಆಯೋಜಿಸಿದ್ದ ಒನ್ ಪ್ಲಾನೆಟ್ ಶೃಂಗಸಭೆ (One Planet Summit -OPS) 2021ರ 4ನೇ ಆವೃತ್ತಿಯ ಪ್ರಮುಖ ವಿಷಯ ಯಾವುದು..?
1) Attaining the 2030 Agenda: Delivering on our Promise
2) Green Economy towards Poverty Eradication
3) Towards 2030 Goals: Making the Decade Count
4) Let’s act together for nature!

6. ಖ್ಯಾತ ಫ್ಯಾಷನ್ ಡಿಸೈನರ್ ಸತ್ಯ ಪಾಲ್ 2021ರ ಜನವರಿ 6 ರಂದು ನಿಧನರಾದರು. ಯಾವ ಸಾಂಪ್ರದಾಯಿಕ ಉಡುಪಿಗೆ ಆಧುನಿಕ ನೋಟವನ್ನು ನೀಡುವಲ್ಲಿ ಅವರು ಹೆಸರುವಾಸಿಯಾಗಿದ್ದರು..?
1) ಸೀರೆ
2) ಧೋತಿ
3) ಸೂಟ್
4) ಲೆಹೆಂಗಾ

7. ಜನವರಿ 6, 2021 ರಂದು ಪ್ರತಿಭಟನಾಕಾರರು ಯಾವ ರಾಷ್ಟ್ರದ ಕ್ಯಾಪಿಟಲ್ ಕಟ್ಟಡದ ಸುರಕ್ಷತೆಯನ್ನು ಉಲ್ಲಂಘಿಸಿದ್ದಾರೆ..?
1) ಭಾರತ
2) ಫ್ರಾನ್ಸ್
3) ಯುಕೆ
4) ಯುಎಸ್

8. ಯಾವ ಪ್ರದೇಶದ ಭಾಷೆ, ಸಂಸ್ಕೃತಿ ಮತ್ತು ಭೂಮಿಯ ಸಂರಕ್ಷಣೆಗಾಗಿ ಸಮಿತಿಯನ್ನು ರಚಿಸಲು ಕೇಂದ್ರ ನಿರ್ಧರಿಸಿದೆ..?
1) ಜಮ್ಮು ಮತ್ತು ಕಾಶ್ಮೀರ
2) ಲಡಾಖ್
3) ಪುದುಚೇರಿ
4) ಲಕ್ಷದ್ವೀಪ

9. 2023ರ ವೇಳೆಗೆ ವಿಶ್ವದ ಅತಿದೊಡ್ಡ ತೇಲುವ ಸೌರ ಯೋಜನೆ (00 ಮೆಗಾವ್ಯಾಟ್ ಸಾಮರ್ಥ್ಯದ )ಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸುತ್ತಿದೆ..?
1) ಮಹಾರಾಷ್ಟ್ರ
2) ಕರ್ನಾಟಕ
3) ಗುಜರಾತ್
4) ಮಧ್ಯಪ್ರದೇಶ

[ ▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021) ]

# ಉತ್ತರಗಳು :
1. 2) ಚೀನಾ
2. 1) 32
ಕೇಂದ್ರ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ, ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಪರೀಕ್ಷೆಯ ಆಕಾಂಕ್ಷಿಗಳ ವಯೋಮಿತಿಯನ್ನು ಸರ್ಕಾರ 37 ವರ್ಷದಿಂದ 32 ವರ್ಷಕ್ಕೆ ಇಳಿಸಿದೆ. ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ವಯಸ್ಸಿನ ಮಿತಿ 35 ರಿಂದ 40 ವರ್ಷಗಳು ಆದರೆ ಜೆ & ಕೆ ಸರ್ಕಾರವು ಇದನ್ನು 32 ವರ್ಷಕ್ಕೆ ಇಳಿಸಿತು, ಇದು ಆಕಾಂಕ್ಷಿಗಳಿಗೆ ಹಾನಿಕಾರಕವಾಗಿದೆ.
3. 4) ಕೇರಳ
4. 2) ಖಗೋಳ ಭೌತಶಾಸ್ತ್ರಜ್ಞ
5. 4) Let’s act together for nature!
6. 1) ಸೀರೆ
7. 4) ಯುಎಸ್
8. 2) ಲಡಾಖ್
9. 4) ಮಧ್ಯಪ್ರದೇಶ

 

Similar Posts