| |

ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

1. ಮೈಸೂರು ಸಂಸ್ಥಾನ ಕಮಿಷನರ್ ಆಳ್ವಿಕೆಗೆ ಒಳಪಟ್ಟ ಅವಧಿ – 1831-1881
2. ಮೈಸೂರಿನ ಪ್ರಥಮ ಕಮಿಷನರ್ ಕರ್ನಲ್ ಬ್ರಿಕ್ಸ್
3. ಕರ್ನಲ್ ಬ್ರಿಕ್ಸ ಜೊತೆಗಿದ್ದ ಜೂನಿಯರ್ ಕಮಿಷನರ್ ಲುಸಿಂಗ್ಟನ್
4. 1834 ರಲ್ಲಿ ಮೈಸೂರಿನ ಕಮಿಷನರಾಗಿ ಬಂದವರು ಮಾರ್ಕ್ ಕಬ್ಬನ್
5. ಮೈಸೂರಿನ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದ ಕಮಿಷನರ್ ಮಾರ್ಕ್ ಕಬ್ಬನ್

6. ಹಠಾರ್ ಕಚೇರಿಯನ್ನು ರದ್ದುಗೊಳಿಸಿದ ಕಮಿಷನರ್ ಮಾರ್ಕ್ ಕಬ್ಬನ್
7. ಮೈಸೂರಿನ ಆಡಳಿತ ವಿಭಾಗಗಳ ಸಂಖ್ಯೆಯನ್ನು 6ರಿಂದ 4 ಕ್ಕೆ ಇಳಿಸಿದ ಕಬ್ಬನ್ ಮೈಸೂರಿನ ಆಡಳಿತ ವಿಭಾಗಗಳ ಸಂಖ್ಯೆಯನ್ನು4ಕ್ಕೆ ಇಳಿಸಲು ಮುಖ್ಯಕಾರಣ ಆಡಳಿತ ವೆಚ್ಚ ಕಡಿಮೆ ಮಾಡುವುದು
8. ಮಾರ್ ಕಬ್ಬನ್ನು ಕಾಲದಲ್ಲಿದ್ದ 4 ಆಡಳಿತ ವಿಭಾಗಗಳು ಬೆಂಗಳೂರು, ಅಷ್ಟಗ್ರಾಮ, ಚಿತ್ರದುರ್ಗ, ನಗರ
9. ಮೈಸೂರು ಸಂಸ್ಥಾನದಲ್ಲಿ ರೆಸಿಡೆಂಟ್ ಹುದ್ದೆ ರದ್ದು ಮಾಡಿದ ವರ್ಷ1843
10. ಮೈಸೂರು ಸಂಸ್ಥಾನದಲ್ಲಿ ಒಂದು ಪ್ರತ್ಯೇಕ ನ್ಯಾಯಂಗ ಕಮಿಷನರ್ ಅನ್ನು ನೇಮಿಷದ ಕಮಿಷನರ್ ಮಾರ್ಕ್ ಕಬ್ಬನ್( ಲಾರ್ಡ್ ಡಾಲ್ ಹೌಸಿ ಸಲಹೆ ನೀಡಿದರು)

11. ಲೋಕೋಪಯೋಗಿ ಇಲಾಖೆಯನ್ನು ಸ್ಥಾಪಿಸಿದ ಮೈಸೂರಿನ ಕಮಿಷನರ್ ಮಾರ್ಕ್ ಕಬ್ಬನ್
12. ಪ್ರಥಮ ರೈಲು ಮಾರ್ಗ ಹಾಕಲು ಕಾರಣರಾದ ಮೈಸೂರಿನ ಕಮಿಷನರ್ ಮಾರ್ಕ್ ಕಬ್ಬನ್
13. ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗ ಬೆಂಗಳೂರು to ಜೋಲಾರ್ ಪೇಟೆ(1859)
14. ಮೈಸೂರು ಸಂಸ್ಥಾನದ ಆದಾಯವನ್ನು 68 ಲಕ್ಷದಿಂದ 84 ಲಕ್ಷಕ್ಕೆ ಹೆಚ್ಚಿಸಿದ ಕಮಿಷನರ್ ಮಾರ್ಕ್ ಕಬ್ಬನ್
15. ಮೈಸೂರು ಸಂಸ್ಥಾನದಲ್ಲಿ ಭೂ ಕಂದಾಯ ವಸೂಲಿಗೆ ರೈತವಾರಿ ಪದ್ಧತಿಯನ್ನು ಜಾರಿಗೆ ತಂದ ಕಮಿಷನರ್ ಮಾರ್ಕ್ ಕಬ್ಬನ್

16. ಕಂದಾಯ ಆಡಳಿತ ನಿರ್ವಹಣೆಯಲ್ಲಿ ಮಾರ್ಕ್ ಕಬ್ಬನಿಗೆ ನೆರವಾದ ದಕ್ಷ ಅಧಿಕಾರಿವೆಂಕಟರಾವ್
17. ಮೈಸೂರು ಸಂಸ್ಥಾನದಲ್ಲಿ ಅಂಕಿಅಂಶ ಇಲಾಖೆಯನ್ನು ತೆರೆದ ಕಮಿಷನರ್ ಮಾರ್ಕ್ ಕಬ್ಬನ್
18. ಅರಣ್ಯ ಇಲಾಖೆಯನ್ನು ಸ್ಥಾಪಿಸಿದ ಮೈಸೂರಿನ ಕಮಿಷನರ್ ಮಾರ್ಕ್ಸ್ ಕಬ್ಬನ್
19. ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಥಾಪಿಸಿದ ಮೈಸೂರಿನ ಕಮಿಷನರ್ ಮಾರ್ಕ್ ಕಬ್ಬನ್
20. 1840 ರಲ್ಲಿ ಪ್ರಥಮ ಬಾರಿಗೆ ಮುದ್ರಣಾಲಯವನ್ನು ಸ್ಥಾಪಿಸಿದ ಮೈಸೂರಿನ ಕಮಿಷನರ್ ಮಾರ್ಕ್ಸ್ ಕಬ್ಬನ್

21. ಪರಿವರ್ತನೆಯ ಕಾಲ ಎಂದು ಮೈಸೂರಿನ ಇತಿಹಾಸದಲ್ಲಿ ಹೆಸರಾದ ಕಾಮಾರ್ಕ್ ಕಬ್ಬನ್ ನ ಕಾಲ
22. ಮಾರ್ಕ್ ಕಬ್ಬನ್ ಅನಂತರ ಮೈಸೂರಿನ ಕಮಿಷನರ್ ಆದವರು ಲೂಯಿ ಬೆಂಥಾಮ್ ಬೌರಿಂಗ್(1861-1870)
23. ಮೈಸೂರು ಸಂಸ್ಥಾನದ ಆಡಳಿತ ವಿಭಾಗಗಳ ಸಂಖ್ಯೆಯನ್ನು “ನಾಲ್ಕರಿಂದ ಮೂರಕ್ಕೆ” ಇಳಿಸಿದ ಕಮಿಷನರ್ ಬೌರಿಂಗ್
24. ಬೌರಿಂಗ್ ಮೂರು ಆಡಳಿತ ವಿಭಾಗಗಳುಅಷ್ಟಗ್ರಾಮ, ನಂದಿ ದುರ್ಗ. ಹೈದರ್ ನಗರ
25. ಮೈಸೂರು ಸಂಸ್ಥಾನದಲ್ಲಿ ಹೈಕೋರ್ಟನ್ನು ಸ್ಥಾಪಿಸಿದ ಕಮಿಷನರ್ ಬೌರಿಂಗ್

26. ಬೌರಿಂಗ್ ಅವರು ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪಿಸಿದ ವರ್ಷ 1864
27. ಮೈಸೂರಿನಲ್ಲಿ ಪ್ರಥಮಬಾರಿಗೆ “ಇಂಡಿಯನ್ ಪಿನಲ್ ಕೋಡ್ ಮತ್ತು ಕೋಡ್ ಆಫ್ ಕ್ರಿಮಿನಲ್ procedure” ಗಳನ್ನು ಜಾರಿಗೆ ತಂದ ಕಮಿಷನರ್ಬೌರಿಂಗ್ (1862 ರಲ್ಲಿ ಜಾರಿಗೆ ತಂದನು)
28. ಮೈಸೂರು ಸಂಸ್ಥಾನದಲ್ಲಿCommissioner for Settlement ನ್ನು ನೇಮಿಷದ ಕಮಿಷನರ್ ಬೌರಿಂಗ್
29. ಮೈಸೂರಿನಲ್ಲಿ Registration Act ಜಾರಿಗೆತಂದ ಕಮಿಷನರ್ ಬೌರಿಂಗ್
30. ಮೈಸೂರು ಸಂಸ್ಥಾನದಲ್ಲಿ ಬಜೆಟ್ ಅನ್ನು ಜಾರಿಗೆ ತಂದ ಕಮಿಷನರ್ಬೌರಿಂಗ್

31. ಪೊಲೀಸ್ ಇಲಾಖೆಯಲ್ಲಿ, D.I.G. I.G.P .S.P ಹುದ್ದೆಗಳನ್ನು ಸೃಷ್ಟಿಸಿದ ಮೈಸೂರಿನ ಕಮಿಷನರ್ ಬೌರಿಂಗ್
32. ಕಂದಾಚಾರಿ ಪೊಲೀಸ್ ವ್ಯವಸ್ಥೆಯನ್ನು ರದ್ದುಪಡಿಸಿದ ಮೈಸೂರಿನ ಕಮಿಷನರ್ ಬೌಲಿಂಗ್
33. ಮೈಸೂರಿನಲ್ಲಿ ಪೊಲೀಸ್ ಕಾಯ್ದೆ ಜಾರಿಗೊಳಿಸಿದ ಕಮಿಷನರ್ ಬೌರಿಂಗ್(1861)
34. ಬೆಂಗಳೂರಿನಲ್ಲಿ ಕೇಂದ್ರ ಸೆರೆಮನೆಯನ್ನು ತೆರೆದ ಕಮಿಷನರ್ ಬೌರಿಂಗ್
35. ಪೊಲೀಸರಿಗೆ ಸಮವಸ್ತ್ರ ನೀಡುವ ವ್ಯವಸ್ಥೆ ಜಾರಿಗೊಳಿಸಿದ ಮೈಸೂರಿನ ಕಮಿಷನರ್ ಬೌರಿಂಗ್

36. ಬೌರಿಂಗ್ ಕೇಂದ್ರ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದ ವರ್ಷ 1861
37. ಬೆಂಗಳೂರಿನಲ್ಲಿ ಹಠಾರ್ ಕಚೇರಿ (ಹೈಕೋರ್ಟ್ ಬಿಲ್ಡಿಂಗ್) ಅನ್ನು ನಿರ್ಮಿಸಿದ ಕಮಿಷನರ್ ಬೌರಿಂಗ್
38. ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜನ್ನು ಆರಂಭಿಸಿದ ಕಮಿಷನರ್ ಬೌರಿಂಗ್
39. ಬೆಂಗಳೂರು ಮ್ಯೂಸಿಯo ಆರಂಭಿಸಿದ ಕಮಿಷನರ್ ಬೌರಿಂಗ್
40. ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಿದ ಕಮಿಷನರ್ಬೌರಿಂಗ್
41. ಬೌರಿಂಗ್ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದ ವರ್ಷ 1870
42. ಮೈಸೂರಿನ ಕೊನೆಯ ಕಮಿಷನರ್ ಜೆಡಿ ಗೋರ್ಡನ್

Similar Posts

Leave a Reply

Your email address will not be published. Required fields are marked *