Indian Constitution – Current Affairs Kannada https://currentaffairskannada.com Current Affairs Kannada Mon, 03 Mar 2025 02:59:44 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png Indian Constitution – Current Affairs Kannada https://currentaffairskannada.com 32 32 Rajya Sabha : ರಾಜ್ಯಸಭೆ ಬಗ್ಗೆ ಮಾಹಿತಿ https://currentaffairskannada.com/rajya-sabha/ https://currentaffairskannada.com/rajya-sabha/#respond Wed, 28 Aug 2024 06:39:37 +0000 https://www.spardhatimes.com/?p=8704 Rajya Sabha : ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. (ಭಾರತದ ರಾಜ್ಯಸಭೆಯು 250 ಸದಸ್ಯರ ಅನುಮೋದಿತ ಬಲವನ್ನು ಹೊಂದಿದೆ, ಆದರೆ ಆಗಸ್ಟ್…

The post Rajya Sabha : ರಾಜ್ಯಸಭೆ ಬಗ್ಗೆ ಮಾಹಿತಿ appeared first on Current Affairs Kannada.

]]>
Rajya Sabha : ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. (ಭಾರತದ ರಾಜ್ಯಸಭೆಯು 250 ಸದಸ್ಯರ ಅನುಮೋದಿತ ಬಲವನ್ನು ಹೊಂದಿದೆ, ಆದರೆ ಆಗಸ್ಟ್ 28, 2024 ರಂತೆ, ಪ್ರಸ್ತುತ ಬಲವು 245 ಆಗಿದೆ. ಜನರ ಪ್ರಾತಿನಿಧ್ಯ ಕಾಯಿದೆ, 1951 ಸದಸ್ಯರ ಸಂಖ್ಯೆಯನ್ನು 245 ಕ್ಕೆ ಸೀಮಿತಗೊಳಿಸುತ್ತದೆ, ಆದರೆ ಸಂವಿಧಾನವು ಈ ಸಂಖ್ಯೆಯನ್ನು ತಿದ್ದುಪಡಿ ಮೂಲಕ ಹೆಚ್ಚಿಸಬಹುದು. )

ರಾಜ್ಯಸಭೆಯಲ್ಲಿ ಸದಸ್ಯತ್ವವು 250 ಸದಸ್ಯರಿಗೆ ಸೀಮಿತವಾಗಿದೆ. 238 ಸದಸ್ಯರನ್ನು ಎಲ್ಲಾ ವಿಧಾನ ಸಭೆಗಳ (ವೈಯಕ್ತಿಕ ರಾಜ್ಯ ಶಾಸಕಾಂಗಗಳು) ಸದಸ್ಯರು ಆಯ್ಕೆ ಮಾಡುತ್ತಾರೆ. ಉಳಿದ 12 ಸದಸ್ಯರನ್ನು ಕಲೆ, ಸಾಹಿತ್ಯ, ಸಾಮಾಜಿಕ ಸೇವೆಗಳು ಹಾಗು ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ಸದಸ್ಯರ ಸಂಖ್ಯೆ 250 ಕ್ಕಿಂತ ಕಡಿಮೆಯಿರಬಹುದು: ಪ್ರಸ್ತುತ 245 ನಲ್ಲಿದೆ.

*ಈ 12 ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ.

*ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ.

*ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ.

*ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು . ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ 13, 1952ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ :
1) ಭಾರತದ ಪ್ರಜೆಯಾಗಿರಬೇಕು
2) 30 ವರ್ಷ ವಯೋಮಿತಿ ಹೊಂದಿರಬೇಕು
3) ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು
4) ಮತಿಭ್ರಮಣೆಯುಳ್ಳವರಾಗಿರಬಾರದು
5) ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.

*ಸದಸ್ಯರ ಜವಾಬ್ದಾರಿಗಳು :
*ಶಾಸಕಾಂಗ ಜವಾಬ್ದಾರಿ: ರಾಜ್ಯಸಭೆಯಲ್ಲಿ ಭಾರತದ ಕಾನೂನುಗಳನ್ನು ಅಂಗೀಕರಿಸುವುದು.
*ಉಸ್ತುವಾರಿ ಜವಾಬ್ದಾರಿ: ಕಾರ್ಯನಿರ್ವಾಹಕ (ಅಂದರೆ ಸರ್ಕಾರ) ತನ್ನ ಕರ್ತವ್ಯಗಳನ್ನು ತೃಪ್ತಿಕರವಾಗಿ ನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು.
*ಪ್ರತಿನಿಧಿ ಜವಾಬ್ದಾರಿ: ಭಾರತದ ಸಂಸತ್ತಿನಲ್ಲಿ (ರಾಜ್ಯಸಭೆ) ತಮ್ಮ ಕ್ಷೇತ್ರದ ಜನರ ಅಭಿಪ್ರಾಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸಲು.
*ಹಣಕಾಸಿನ ಶಕ್ತಿಯ ಜವಾಬ್ದಾರಿ : ಸರ್ಕಾರವು ಪ್ರಸ್ತಾಪಿಸಿದ ಆದಾಯ ಮತ್ತು ವೆಚ್ಚಗಳನ್ನು ಅನುಮೋದಿಸಲು ಮತ್ತು ಮೇಲ್ವಿಚಾರಣೆ ಮಾಡಲು.
ಸಂಸತ್ತಿನ ಸದಸ್ಯರೂ ಆಗಿರುವ ಯೂನಿಯನ್ ಕೌನ್ಸಿಲ್ ಆಫ್ ಮಿನಿಸ್ಟರ್ಸ್, ಮಂತ್ರಿ ಮಂಡಳಿಯಲ್ಲಿಲ್ಲದವರಿಗೆ ಹೋಲಿಸಿದರೆ ಕಾರ್ಯಾಂಗದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುತ್ತಾರೆ.

*ವಿಶೇಷ ಅಧಿಕಾರಗಳು :
ರಾಜ್ಯಸಭೆಯಲ್ಲಿ ಸಂಸತ್ತಿನ ಸದಸ್ಯರು ವಿಶೇಷ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಅನುಭವಿಸುತ್ತಾರೆ:
*ರಾಜ್ಯಗಳ ಪಟ್ಟಿಯಲ್ಲಿರುವ ಯಾವುದೇ ವಿಷಯದ ಮೇಲೆ ಕಾನೂನುಗಳನ್ನು ರಚಿಸುವುದು;
*ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಸೇವೆಗಳುನ್ನ ರಚಿಸಲು ಕಾನೂನುಗಳನ್ನು ರಚಿಸುವುದು.
*ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧಿಕಾರಾವಧಿಯ ವಿಸ್ತರಣೆ

*ಅಧಿಕಾರಾವಧಿ :
ಲೋಕಸಭೆಯಂತೆ, ರಾಜ್ಯಸಭೆಯನ್ನು ವಿಸರ್ಜಿಸಲಾಗುವುದಿಲ್ಲ ಮತ್ತು ಇದು ಶಾಶ್ವತ ಸಂಸ್ಥೆಯಾಗಿದೆ, ಆದ್ದರಿಂದ ಸದಸ್ಯರು ಸಾಮಾನ್ಯವಾಗಿ ತಮ್ಮ ಸಂಪೂರ್ಣ ಅಧಿಕಾರಾವಧಿಯನ್ನು ಪೂರೈಸುವ ಅವಕಾಶವನ್ನು ಪಡೆಯುತ್ತಾರೆ. ಇದನ್ನ ಹೊರತುಪಡಿಸಿ ಅವರು ರಾಜೀನಾಮೆ ಅಥವಾ ಸದಸ್ಯರು ಮೃತರಾದಾಗ ಸ್ಥಾನವು ಖಾಲಿಯಗುತ್ತದೆ. ಇದಲ್ಲದೆ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯನ ಅವಧಿಯು ಆರು ವರ್ಷಗಳು.

The post Rajya Sabha : ರಾಜ್ಯಸಭೆ ಬಗ್ಗೆ ಮಾಹಿತಿ appeared first on Current Affairs Kannada.

]]>
https://currentaffairskannada.com/rajya-sabha/feed/ 0
Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1 https://currentaffairskannada.com/constitution-of-india-top-20-series/ https://currentaffairskannada.com/constitution-of-india-top-20-series/#respond Tue, 19 Mar 2024 04:49:54 +0000 http://www.spardhatimes.com/?p=1250 Constitution of India 01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ —– ನ್ಯಾಯಾಲಯಗಳಿವೆ?✦ಉಚ್ಚ. 02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.✦30 03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?✦157. 04) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?✦ಮುಖ್ಯಮಂತ್ರಿ /…

The post Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1 appeared first on Current Affairs Kannada.

]]>
Constitution of India

01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ —– ನ್ಯಾಯಾಲಯಗಳಿವೆ?
✦ಉಚ್ಚ.

02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
✦30

03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
✦157.

04) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
✦ಮುಖ್ಯಮಂತ್ರಿ / ಪ್ರಧಾನಮಂತ್ರಿ.

05) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
✦ರಾಷ್ಟ್ರಪತಿಗಳು.

06) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
✦ಆಸ್ಟ್ರೇಲಿಯಾ.

07) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
✦ಬ್ರಿಟನ್.

08) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
✦ಅಮೆರಿಕಾ.

09) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
✦ರಷ್ಯಾ ಕ್ರಾಂತಿ (1917).

10) ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
✦ಕಲ್ಕತ್ತ ಹೈಕೋರ್ಟ್

11) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
✦ಹರಿಯಾಣ

12) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?

13) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
✦ಮಂಜುಳಾ ಚೆಲ್ಲೂರ್.

14) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
✦1884

15) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
✦217

16) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
✦61 ನೇ ವಿಧಿ.

17) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
✦ಲೋಕಸಭೆಯ ಸ್ಪಿಕರ್

18) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
✦3 ಸಲ

19) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
✦ಅರ್ಟಾನಿ ಜನರಲ್

20) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
✦ಅರ್ಟಾನಿ ಜನರಲ್

The post Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1 appeared first on Current Affairs Kannada.

]]>
https://currentaffairskannada.com/constitution-of-india-top-20-series/feed/ 0
ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ : (Human Rights and their Implementation) https://currentaffairskannada.com/human-rights-and-their-implementation/ https://currentaffairskannada.com/human-rights-and-their-implementation/#respond Tue, 20 Feb 2024 06:47:31 +0000 http://www.spardhatimes.com/?p=44 ✦ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. ಉದಾಹರಣೆಗೆ ಒಬ್ಬ ಪ್ರಜೆಗೆ ಇರುವಂತಹ ವಾಕ್ ಸ್ವಾತಂತ್ರ್ಯ. ಇದು ಸಂವಿಧಾನದಲ್ಲಿ ಒಬ್ಬ ಪ್ರಜೆಗೆ ಇರುವ ಮಾನವ…

The post ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ : (Human Rights and their Implementation) appeared first on Current Affairs Kannada.

]]>
✦ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. ಉದಾಹರಣೆಗೆ ಒಬ್ಬ ಪ್ರಜೆಗೆ ಇರುವಂತಹ ವಾಕ್ ಸ್ವಾತಂತ್ರ್ಯ. ಇದು ಸಂವಿಧಾನದಲ್ಲಿ ಒಬ್ಬ ಪ್ರಜೆಗೆ ಇರುವ ಮಾನವ ಹಕ್ಕು. ಮಾನವನ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಒಬ್ಬ ವ್ಯಕ್ತಿಯ ಸಂವಿಧಾನದ ಹಕ್ಕು.

✦ಒಬ್ಬ ವ್ಯಕ್ತಿಗೆ ಬದುಕುವ ಹಕ್ಕಿರುವಾಗ ನ್ಯಾಯಯುತವಾಗಿ ಬದುಕಲು ಸಂಪಾದಿಸುವ ಹಕ್ಕು ಇರುತ್ತದೆ. ಯಾಕೆಂದರೆ ಯಾವ ವ್ಯಕ್ತಿಯೂ ಸಂಪಾದನೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು ಹಾಗೂ ಶಿಕ್ಷಣ ಪಡೆಯುವ ಹಕ್ಕು ಇವು ಒಬ್ಬ ಪ್ರಜೆಯ ಮೂಲಭೂತ ಹಕ್ಕುಗಳು.

✦ ದಸ್ತಗಿರಿ ಹಾಗೂ ಬಂಧನದಿಂದ ರಕ್ಷಣೆ ಪಡೆಯುವುದು ಸಹಾ ಮಾನವನ ಮೂಲಭೂತ ಹಕ್ಕು.

✦ಬಲಾತ್ಕಾರವಾಗಿ ಒಬ್ಬ ವ್ಯಕ್ತಿಯಿಂದ ಕೆಲಸ ಮಾಡಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಮಾನವ ಹಕ್ಕನ್ನು ರಕ್ಷಣೆ ಮಾಡುವಂತಹ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ.

✦ಬಾಲ ಕಾರ್ಮಿಕರಾಗಿ 14 ವರ್ಷಕ್ಕಿಂತಲೂ ಕೆಳಗಿನ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದೂ ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

✦ಹಿಂದೂ, ಮುಸಲ್ಮಾನ, ಕ್ರೈಸ್ತ ಅಥವಾ ಬೇರೆ ಯಾವುದೇ ಧರ್ಮದವರಿಗೆ ತಮ್ಮ ಧರ್ಮಕ್ಕೆ ನಿಷ್ಠೆ ತೋರುವುದು ಹಾಗೂ ಅದನ್ನು ಪಾಲಿಸಿಕೊಂಡು ಹೋಗುವುದು ಅವರ ಮಾನವ ಹಕ್ಕು. ಅವರ ಈ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

✦ಒಬ್ಬ ಪ್ರಜೆಯ ಮೂಲಭೂತ ಹಕ್ಕನ್ನು ಸರಕಾರ ಅಥವಾ ಸರಕಾರಿ ನೌಕರರು ಉಲ್ಲಂಘಿಸಿದಾಗ ಮೂಲಭೂತ ಹಕ್ಕಿನಿಂದ ವಂಚಿಸಲ್ಪಟ್ಟ ವ್ಯಕ್ತಿಗೆ ನ್ಯಾಯಾಲಯ ಸರಕಾರದಿಂದ ಪರಿಹಾರ ಕೊಡಿಸಬಹುದು.

✦ಇತ್ತೀಚೆಗೆ ಕಾರಾಗೃಹದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉದಾಹರಣೆಗೆ, ಜೈಲಿನ ಅನುಕೂಲತೆಗಿಂತಲೂ ಹೆಚ್ಚಿನ ಸಂಖ್ಯೆಯ ಖೈದಿಗಳ ಸೇರ್ಪಡೆ, ಖೈದಿಗಳ ಕೇಸುಗಳ ವಿಚಾರಣೆಯಲ್ಲಾಗುವ ವಿಳಂಬ, ಕಾರಾಗೃಹದಲ್ಲಿ ಖೈದಿಗಳು ಅನುಭವಿಸುತ್ತಿರುವ ಹಿಂಸೆ, ಕಿರುಕುಳ, ಖೈದಿಗಳ ಆರೋಗ್ಯದ ಬಗ್ಗೆ ಅಸಡ್ಡೆ, ಇತ್ಯಾದಿಗಳು ಮಾನವ ಹಕ್ಕನ್ನು ಕಸಿದುಕೊಂಡಂತೆ. ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಾನವ ಹಕ್ಕಿನ ಆಯೋಗ (Human Rights C✦mmissi✦n) ವಿಚಾರಣೆ ನಡೆಸಿ ಸರಕಾರಕ್ಕೆ ಸೂಕ್ತ ನಿರ್ದೇಶನ ಕೊಡಬಹುದು.

✦ಒಬ್ಬ ಪ್ರಜೆಗೆ ಬದುಕಲು ಹೇಗೆ ಅಧಿಕಾರವಿರುತ್ತದೋ, ಅದೇ ರೀತಿ ತನ್ನ ಆರೋಗ್ಯವನ್ನು ಕಾಪಾಡಲು ಹಕ್ಕಿರುತ್ತದೆ. ಒಬ್ಬ ಪ್ರಜೆಯ ಆರೋಗ್ಯ ಕಾಪಾಡುವ ಸಲುವಾಗಿ ಮೂಲಭೂತ ಅನುಕೂಲತೆಗಳನ್ನು ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಇಂತಹ ಅನುಕೂಲತೆಯನ್ನು ಪಡೆಯುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವುದರಿಂದ ಈ ಅನುಕೂಲದ ವಂಚನೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಿನ ವಂಚನೆ ಆಗುತ್ತದೆ. ಖೈದಿಗಳಿಗೆ, ಕಾರ್ಮಿಕರಿಗೆ ಸರಕಾರವು ಉಚಿತವಾಗಿ ಈ ಅನುಕೂಲತೆಯನ್ನು ಒದಗಿಸಬೇಕು. ಯಾಕೆಂದರೆ, ಇದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು.

✦ಪೋಲೀಸರ ಬಂಧನದಲ್ಲಿ ಹಿಂಸೆ, ಕಿರುಕುಳ, ಅತ್ಯಾಚಾರ, ಕೊಲೆ ಇತ್ಯಾದಿ ಸಂಭವಿಸಿದಲ್ಲಿ ಇದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕಾರಾಗೃಹದಲ್ಲಿ ಒಬ್ಬ ವಿಚಾರಣಾ ಖೈದಿ ಅಥವಾ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ಜೀವ ರಕ್ಷಣೆ ಮತ್ತು ಆತನ ಆರೋಗ್ಯ ಕಾಪಾಡುವುದು ಕಾರಾಗೃಹದ ಅಧಿಕಾರಿಗಳ ಕರ್ತವ್ಯ. ಸೂಕ್ತ ಸಮಯದಲ್ಲಿ ಅಂತಹ ಖೈದಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸವಲತ್ತು ಒದಗಿಸದೇ ಇರುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

✦ಮಾನವ ಹಕ್ಕು ರಕ್ಷಣಾ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು :
ಅ) ರಾಷ್ಟ್ರೀಯ ಮಾನವ ಹಕ್ಕು ಆಯೋಗ
ಆ) ರಾಜ್ಯ ಮಾನವ ಹಕ್ಕು ಆಯೋಗ
ಅ) ಮಾನವ ಹಕ್ಕುಗಳ ನ್ಯಾಯಾಲಯಗಳು ಅಸ್ಥಿತ್ವಕ್ಕೆ ಬಂದಿರುತ್ತದೆ.

✦ರಾಷ್ಟ್ರೀಯ ಮಾನವ ಹಕ್ಕು ಆಯೋಗ
✦ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ
1.ಒಬ್ಬರು ಅಧ್ಯಕ್ಷರಿದ್ದು, ಅವರು ಸರ್ವೋಚ್ಛ ನ್ಯಾಯಾಲಯದ (Supreme C✦urt) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರತಕ್ಕದ್ದು.
2.ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು
3.ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು ಸದಸ್ಯರುಗಳಾಗಿರುತ್ತಾರೆ.
4.ಅಲ್ಲದೇ ಇನ್ನಿಬ್ಬರು ಸದಸ್ಯರಿದ್ದು, ಅವರು ಮಾನವ ಹಕ್ಕಿನ ಬಗ್ಗೆ ಹೆಚ್ಚಿನ ಪರಿಣತಿ ಉಳ್ಳವರಾಗಿರತಕ್ಕದ್ದು.
5.ಒಬ್ಬ ಮಹಾಕಾರ್ಯದರ್ಶಿ ಇದ್ದು ಅವರು ಆಯೋಗದ ನಡವಳಿಕೆಗಳನ್ನು ನೋಡಿಕೊಳ್ಳುವವರಾಗಿರುತ್ತಾರೆ.

✦ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕಸಭಾ ಸ್ಪೀಕರ್, ಗೃಹಮಂತ್ರಿ, ವಿರೋಧ ಪಕ್ಷದ ನಾಯಕರು ಸಮಾಲೋಚನೆ ಮಾಡಿ ನೇಮಕ ಮಾಡುತ್ತಾರೆ.
ಆಯೋಗದ ಅವಧಿ ಐದು ವರ್ಷಗಳಿದ್ದು, ಇದರ ಮುಖ್ಯ ಕಛೇರಿ ನವದೆಹಲಿಯಲ್ಲಿರುತ್ತದೆ.

ರಾಜ್ಯ ಮಾನವ ಹಕ್ಕು ಆಯೋಗ:
✦ಅದೇ ರೀತಿ, ರಾಜ್ಯ ಮಾನವ ಹಕ್ಕು ಆಯೋಗ ಸ್ಥಾಪನೆಯಾಗುತ್ತದೆ. ರಾಜ್ಯ ಮಟ್ಟದ ಆಯೋಗಕ್ಕೆ ಉಚ್ಛ ನ್ಯಾಯಾಲಯದ (High C✦urt) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು ಹಾಗೂ ಇತರ ಸದಸ್ಯರು ಇರುತ್ತಾರೆ.

✦ಮಾನವ ಹಕ್ಕು ನ್ಯಾಯಾಲಯ:
✦ಜಿಲ್ಲೆಗೊಂದರಂತೆ ರಾಜ್ಯ ಸರಕಾರವು ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಒಪ್ಪಿಗೆ ಮೇರೆಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರನ್ನು ಮಾನವ ಹಕ್ಕಿನ ಪ್ರಕರಣದ ತನಿಖೆಯ ಶೀಘ್ರ ಇತ್ಯರ್ಥಕ್ಕೆ ನೇಮಕ ಮಾಡಬಹುದು. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣಗಳನ್ನು ಈ ನ್ಯಾಯಾಲಯವು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ, ಸೂಕ್ತ ಕಂಡಲ್ಲಿ ತಪ್ಪಿತಸ್ಥರನ್ನು ದಂಡಿಸಲು ಕ್ರಮ ಕೈಗೊಳ್ಳಬಹುದು ಮತ್ತು ನೊಂದವರಿಗೆ ಪರಿಹಾರ ಕೊಡಲು ಆದೇಶಿಸಬಹುದು.

✦ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಮತೀಯ ಭಾವನೆಗಳನ್ನು ಕದಡಿಸುವ ಪ್ರಕರಣಗಳು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ತನ್ನ ಧರ್ಮದ ಬಗ್ಗೆ ನಿಷ್ಢೆಯಿಂದ ಇದ್ದು ಅದನ್ನು ಪಾಲಿಸಿಕೊಂಡು ಹೋಗುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ಆಸೆ, ಅಮಿಷ ಒಡ್ಡಿ ಮತಾಂತರ ಗೊಳಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದೇ ರೀತಿ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವುದು, ಮೂರ್ತಿಗಳನ್ನು ಪುಡಿ ಮಾಡುವುದು, ಪವಿತ್ರ ಸ್ಥಳಗಳನ್ನು ಅಪವಿತ್ರ ಮಾಡಿ ಮತೀಯ ಭಾವನೆಗಳಿಗೆ ಧಕ್ಕೆ ತರುವುದು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ನಡೆದ ದುರ್ಘಟನೆಗಳ ಬಗ್ಗೆ ರಾಜ್ಯ ಮಾನವ ಹಕ್ಕಿನ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಹಾಗೂ ಸದಸ್ಯರು ಘಟನಾ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲಿಸಿದ ಬಗ್ಗೆ ನಮಗೆ ತಿಳಿದಿರುತ್ತದೆ.

ಮಾನವ ಹಕ್ಕು ಆಯೋಗದ ಕಾರ್ಯ ಕಲಾಪ:
1.ಸರಕಾರಿ ಅಧಿಕಾರಿಯಿಂದ ಮಾನವ ಹಕ್ಕಿನ ಉಲ್ಲಂಘನೆಯಿಂದ ನೊಂದ ವ್ಯಕ್ತಿಯ ದೂರಿನ ಮೇರೆಗೆ ಅಥವಾ ಸ್ವಪ್ರೇರಣೆಯಿಂದ (Su✦ M✦t✦) ಸಂಬಂಧ ಪಟ್ಟ ಮಾನವ ಹಕ್ಕಿನ ಉಲ್ಲಂಘನೆಯ ವಿಚಾರವಾಗಿ ತನಿಖೆ ಮಾಡುವುದು.
2.ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣ ಯಾವುದಾದರೂ ನ್ಯಾಯಾಲಯದಲ್ಲಿ ತನಿಖೆಯಾಗುತ್ತಿದ್ದಲ್ಲಿ ಸದ್ರಿ ನ್ಯಾಯಾಲಯದ ಅನುಮತಿ ಪಡೆದು ತನಿಖೆಯಲ್ಲಿ ಭಾಗಿಯಾಗುವುದು.
3.ಜೈಲುಗಳಲ್ಲಿ ಅಥವಾ ಸರಕಾರಿ ಸ್ವಾಮ್ಯದ ಸಂಘ ಸಂಸ್ಥೆಗಳಲ್ಲಿ ಬಂಧಿಯಾಗಿರುವ ಅಥವಾ ಇರಿಸಲ್ಪಟ್ಟ, ವ ಚಿಕಿತ್ಸೆಗೊಳಪಡುತ್ತಿರುವ ಸ್ಥಳಗಳಿಗೆ ಸರಕಾರಕ್ಕೆ ಮುನ್ಸೂಚನೆ ಕೊಟ್ಟು ಭೇಟಿ ಕೊಡುವುದು. ಮತ್ತು ಸದ್ರಿ ವ್ಯಕ್ತಿಗಳ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡುವುದು ಹಾಗೂ ಆ ಸ್ಥಳಗಳಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗದಂತೆ ಸರಕಾರಕ್ಕೆ ಸಲಹೆ ಸೂಚನೆ ಕೊಡುವುದು.
4.ಮಾನವ ಹಕ್ಕಿನ ವಿಚಾರಗಳಿಗೆ ಸಂಬಂಧ ಪಟ್ಟಂತೆ ಸಂಶೋಧನೆ ನಡೆಸುವುದು ಹಾಗೂ ಮಾನವ ಹಕ್ಕನ್ನು ಪರಿಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮಾಧ್ಯಮಗಳ ಮುಖಾಂತರ ಜನಸಾಮಾನ್ಯರಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಆ ವಿಚಾರಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು.
5.ಸರಕಾರೇತರ ಸಂಘ ಸಂಸ್ಥೆಗಳಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಪ್ರೋತ್ಸಾಹ ಕೊಡುವುದು ಇತ್ಯಾದಿ.

✦ಆಯೋಗಕ್ಕೆ ತನಿಖಾ ವಿಚಾರದಲ್ಲಿರುವ ಅಧಿಕಾರಗಳು:
6.ದೂರನ್ನು ವಿಚಾರ ಮಾಡುವ ಕಾಲಕ್ಕೆ ಆಯೋಗಕ್ಕೆ ಸಿವಿಲ್ ನ್ಯಾಯಾಲಯಕ್ಕೆ ವ್ಯಾಜ್ಯ ತನಿಖೆ ಮಾಡಲು ಇರುವ ಎಲ್ಲಾ ಅಧಿಕಾರಗಳು ಇರುತ್ತವೆ. ಅಂದರೆ:-
a)ಸಂಬಂಧ ಪಟ್ಟ ವಿಚಾರದಲ್ಲಿ ತನಿಖೆಗಾಗಿ ಯಾರನ್ನಾದರೂ ಕರೆಸಿ ಪ್ರಮಾಣ ವಚನ ಬೋಧಿಸಿ ವಿಚಾರಣೆ ಮಾಡುವುದು.
b)ವಿಚಾರಣೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಪತ್ತೆ ಹಚ್ಚಿ ಹಾಜರು ಪಡಿಸುವುದು.
c)ಅಫಿದಾವಿತ್ ಮೂಲಕ ಸಾಕ್ಷ್ಯವನ್ನು ಸ್ವೀಕರಿಸುವುದು.
d)ಸರಕಾರಿ ಕಛೇರಿ ಅಥವಾ ನ್ಯಾಯಾಲಯದಿಂದ ತನಿಖೆಗೆ ಸಂಬಂಧಿತ ಸಾರ್ವಜನಿಕ ದಾಖಲೆ (Public Servant) ಗಳನ್ನು ಆಯೋಗದ ಮುಂದೆ ಹಾಜರು ಪಡಿಸಲು ಕೋರುವುದು.
e)ಸಾಕ್ಷಿಗಳನ್ನು ಅಥವಾ ದಾಖಲೆಗಳನ್ನು ತನಿಖೆ ಮಾಡಲು ಕಮಿಷನ್ ನೇಮಕ ಮಾಡುವುದು.
f)ಒಬ್ಬ ವ್ಯಕ್ತಿಯಿಂದ ತನಿಖೆಗೆ ಅವಶ್ಯಕವಾದ ಮಾಹಿತಿಯನ್ನು ಆಯೋಗದ ಮುಂದೆ ಒದಗಿಸಲು ಆದೇಶಿಸುವುದು.
g)ಯಾವುದೇ ಕಟ್ಟಡ ಅಥವಾ ಸ್ಥಳದಲ್ಲಿ ತನಿಖೆಗೆ ಸಂಬಂಧ ಪಟ್ಟ ದಾಖಲೆಗಳು ಇದ್ದಲ್ಲಿ ಅಂತಹ ಸ್ಥಳಗಳಿಗೆ ಪ್ರವೇಶಿಸಿ ಸದ್ರಿ ದಾಖಲೆಗಳನ್ನು ಪರಿಶೀಲಿಸುವುದು ಅಥವಾ ವಶಪಡಿಸಿಕೊಳ್ಳುವುದು.
h)ಆಯೋಗದ ಸರಹದ್ದಿನಲ್ಲಿ ಅಥವಾ ಸಮ್ಮುಖದಲ್ಲಿ ಅಪರಾಧ ಸಂಭವಿಸಿದ್ದಲ್ಲಿ ಅಪರಾಧ ಸಂಭವಿಸಿದ ಬಗ್ಗೆ ಹೇಳಿಕೆಗಳನ್ನು ಬರೆದುಕೊಂಡು ಸಂಬಂಧಪಟ್ಟ ದಂಡಾಧಿಕಾರಿಯವರಿಗೆ (Judicial Magistrate) ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ನಿರ್ದೇಶನ ಕೊಡುವುದು.
i)ತನಿಖಾ ಕಾಲದಲ್ಲಿ ಅವಶ್ಯಕತೆ ಇದ್ದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಅಧಿಕಾರಿಯನ್ನು ಅನುಮತಿ ಪಡೆದು ತನಿಖೆಗೆ ಬಳಸಿಕೊಳ್ಳುವುದು.

✦ತನಿಖಾ ಕಾಲದಲ್ಲಿ ಆಯೋಗವು ಬರೆದುಕೊಂಡ ಹೇಳಿಕೆಯನ್ನು ಯಾವುದೇ ವ್ಯಕ್ತಿಯ ವಿರುದ್ಧ ಸಿವಿಲ್ ಅಥವಾ ಕೋರ್ಟಿನಲ್ಲಿ ಆತನ ವಿರುದ್ಧ ಬಳಸಿಕೊಳ್ಳಲು ಬರುವುದಿಲ್ಲ. ಆದರೆ ಸದ್ರಿ ವ್ಯಕ್ತಿ ಉದ್ದೇಶ ಪೂರ್ವಕ ಸುಳ್ಳು ಹೇಳಿಕೆ ನೀಡಿದ್ದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರವಿರುತ್ತದೆ.

✦ಆಯೋಗದ ತನಿಖೆಯಿಂದ ಯಾವುದೇ ಒಬ್ಬ ವ್ಯಕ್ತಿಯ ಘನತೆ ಗೌರವಕ್ಕೆ ಧಕ್ಕೆಯಾದಲ್ಲಿ ಅಂತಹ ವ್ಯಕ್ತಿಯಿಂದ ಆಯೋಗವು ವಿವರಣೆಯನ್ನು ಪಡೆಯಬಹುದಾಗಿದೆ ಹಾಗೂ ಆತನಿಗೆ ಆತನ ಪರವಾದ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಕಷ್ಟು ಕಾಲಾವಕಾಶವನ್ನು ಒದಗಿಸಬಹುದಾಗಿದೆ.

ದೂರು ತನಿಕೆ ಮಾಡುವ ಕ್ರಮ:
✦ಮಾನವ ಹಕ್ಕಿನ ಉಲ್ಲಂಘನೆಯ ಬಗೆಗಿನ ದೂರು ದಾಖಲಾದ ನಂತರ ಆಯೋಗವು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಂದ ಇಂತಿಷ್ಟೇ ಸಮಯದೊಳಗೆ ಈ ಕುರಿತು ವಿವರಣೆಯನ್ನು ಕೊಡತಕ್ಕದ್ದೆಂದು ತಾಖೀತು ಮಾಡತಕ್ಕದ್ದು. ನಿಯಮಿತ ಕಾಲಾವಧಿಯಲ್ಲಿ ವಿವರಣೆ ಬಾರದಿದ್ದಲ್ಲಿ ಆಯೋಗವು ತನಿಖೆಯನ್ನು ಸ್ವತಃ ಮುಂದುವರಿಸಿಕೊಂಡು ಹೋಗಬಹುದು.

The post ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ : (Human Rights and their Implementation) appeared first on Current Affairs Kannada.

]]>
https://currentaffairskannada.com/human-rights-and-their-implementation/feed/ 0
‘ಮಹಾಭಿಯೋಗ’ ಎಂದರೇನು..? https://currentaffairskannada.com/impeachment-2/ https://currentaffairskannada.com/impeachment-2/#respond Mon, 05 Feb 2024 10:02:32 +0000 http://www.spardhatimes.com/?p=977 ಅನುಚ್ಛೇದ 124 ರ ಉಪಖಂಡ(4) ರಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳ ಪದಚ್ಯುತಿ ಅಥವಾ ‘ಮಹಾಭಿಯೋಗದ’ ಬಗ್ಗೆ ಹೇಳಲಾಗಿದೆ. ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯ ಮೂರ್ತಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ದುರ್ವರ್ತನೆ ಮಾಡಿದರೇ , ಭ್ರಷ್ಟಾಚಾರದಲ್ಲಿ ಭಾಗಿಯಾದರೆ, ಕರ್ತವ್ಯ ನಿರ್ವಹಣೆಯಲ್ಲಿ…

The post ‘ಮಹಾಭಿಯೋಗ’ ಎಂದರೇನು..? appeared first on Current Affairs Kannada.

]]>
ಅನುಚ್ಛೇದ 124 ರ ಉಪಖಂಡ(4) ರಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳ ಪದಚ್ಯುತಿ ಅಥವಾ ‘ಮಹಾಭಿಯೋಗದ’ ಬಗ್ಗೆ ಹೇಳಲಾಗಿದೆ. ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯ ಮೂರ್ತಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ದುರ್ವರ್ತನೆ ಮಾಡಿದರೇ , ಭ್ರಷ್ಟಾಚಾರದಲ್ಲಿ ಭಾಗಿಯಾದರೆ, ಕರ್ತವ್ಯ ನಿರ್ವಹಣೆಯಲ್ಲಿ ಅಸಮರ್ಥರಾಗಿದ್ದಾರೆಂದು ದೋಷಾರೋಪ ಬಂದರೆ ಮಹಾಭಿಯೋಗಕ್ಕೆ ಯಾವುದೇ ಸದನದ ಸದಸ್ಯರು ಕೋರಿಕೆ ಸಲ್ಲಿಸಬಹುದು.

ಯಾವುದೇ ಸದನ ದೋಷಾರೋಪಣೆ ಮಾಡಿದಾಕ್ಷಣ ಪದಚ್ಯುತಿ ಮಾಡಲಾಗುವುದಿಲ್ಲ.ರಾಷ್ಟ್ರಪತಿಗಳ ಪದಚ್ಯುತಿಗೆ ಅನುಸರಿಸುವ ನಿಯಮಗಳನ್ನು ಅನುಸರಿಸಿ ಪದಚ್ಯುತಿಗೊಳಿಸಬೇಕು. ಯಾವುದೇ ಸದನ ಆರೋಪ ಮಾಡಿ ಒಟ್ಟು ಸದಸ್ಯರ1/4 ಭಾಗ  ಸಹಿ ಹಾಕಿದ ಪತ್ರದೊಂದಿಗೆ ಸಭಾಧ್ಯಕ್ಷರು ಮನವಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿ ಪರಿಶೀಲನೆ ನಡೆಸಿದ ತರುವಾಯ ತನಿಖಾ ಸಮಿತಿ ನೇಮಕಗೊಳಿಸಬೇಕು.

ನ್ಯಾಯ ಮೂರ್ತಿಗೆ ನಿರ್ಣಯ ಮಂಡಿಸುವುದಕ್ಕೆ ಕನಿಷ್ಟ 14 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು.ಅಗತ್ಯವಾಗಿದೆ ಎಂದು ಕಂಡುಬಂದರೆ ದೋಷಾರೋಪ ಹೊಂದಿದ ನ್ಯಾಯಮೂರ್ತಿ ಹಾಜರಾಗಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಲು ಅಥವಾ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಅವಕಾಶವಿದೆ.

ತನಿಖೆಯಲ್ಲಿ ಭ್ರಷ್ಟಾಛಾರದಲ್ಲಿ ಭಾಗಿಯಾಗಿದ್ದು ಅಥವಾ ಕಾರ್ಯ ಸಮರ್ಥತೆ ಮಾಡಿರುವುದು ಕಂಡು ಬಂದಲ್ಲಿ ಸದನದ 2/3 ನೇ ಭಾಗ ಸದಸ್ಯರು ಬಹುಮತದ ಮೇಲೆ ನಿರ್ಣಯ ಕೈಗೊಂಡು ಮತ್ತೊಂದು ಸದನಕ್ಕೆ ಕಳಿಹಿಸಲಾಗುತ್ತದೆ. ಮತ್ತೊಂದು ಸದನದಲ್ಲಿ 2/3 ಎಷ್ಟು ಬಹುಮತ ಪಡೆದರೆ ರಾಷ್ಟ್ರಪತಿಗಳು ಆದೇಶದ ಮೂಲಕ ಆರೋಪಿತ ನ್ಯಾಯಮೂರ್ತಿಯನ್ನು ತೆಗೆದು ಹಾಕಬಹುದು.

ಕರ್ನಾಟಕದ ಕೆಲವು ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ

The post ‘ಮಹಾಭಿಯೋಗ’ ಎಂದರೇನು..? appeared first on Current Affairs Kannada.

]]>
https://currentaffairskannada.com/impeachment-2/feed/ 0
ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು https://currentaffairskannada.com/indian-acts/ https://currentaffairskannada.com/indian-acts/#respond Fri, 02 Feb 2024 10:44:41 +0000 http://www.spardhatimes.com/2020/03/06/%e0%b2%87%e0%b2%b2%e0%b3%8d%e0%b2%b2%e0%b2%bf%e0%b2%b5%e0%b3%86-%e0%b2%a8%e0%b3%8b%e0%b2%a1%e0%b2%bf-%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%87%e0%b2%a4%e0%b2%bf%e0%b2%b9%e0%b2%be/ 1.  1773 ರ ರೆಗ್ಯುಲೇಟಿಂಗ್ ಆಕ್ಟ್• ರೇಗ್ಯುಲೇಟಿಂಗ್ ಆಕ್ಟ್‍ನ್ನು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಶಿಶ್ತುಬದ್ದಗೊಳಿಸಲು ಜಾರಿಗೆ ತರಲಾಯಿತು.• ರೆಗ್ಯುಲೇಟಿಂಗ್ ಆಕ್ಟ್ ‘ಬಂಗಾಳದ ಗವರ್ನರ್’ ಅನ್ನು ‘ಭಾರತದ ಗವರ್ನರ್ ಜನರಲ್’ ಎಂದು ಪರಿವರ್ತಿಸಿತು. ಮದ್ರಾಸ್, ಬೊಂಬಾಯಿ ಪ್ರಾಂತ್ಯಗಳು ಗವರ್ನರ್ ಜನರಲ್ ಅಧೀನವಾದವು.•…

The post ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು appeared first on Current Affairs Kannada.

]]>
1.  1773 ರ ರೆಗ್ಯುಲೇಟಿಂಗ್ ಆಕ್ಟ್
• ರೇಗ್ಯುಲೇಟಿಂಗ್ ಆಕ್ಟ್‍ನ್ನು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಶಿಶ್ತುಬದ್ದಗೊಳಿಸಲು ಜಾರಿಗೆ ತರಲಾಯಿತು.
• ರೆಗ್ಯುಲೇಟಿಂಗ್ ಆಕ್ಟ್ ‘ಬಂಗಾಳದ ಗವರ್ನರ್’ ಅನ್ನು ‘ಭಾರತದ ಗವರ್ನರ್ ಜನರಲ್’ ಎಂದು ಪರಿವರ್ತಿಸಿತು. ಮದ್ರಾಸ್, ಬೊಂಬಾಯಿ ಪ್ರಾಂತ್ಯಗಳು ಗವರ್ನರ್ ಜನರಲ್ ಅಧೀನವಾದವು.
• ಕಲ್ಕತ್ತಾದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಸ್ಥಾಪಿಸಲಾಯಿತು.
• ರಾಬರ್ಟ್ ಕ್ಲೈವ್‍ನು ಪ್ರಾರಂಭಿಸಿದ ದ್ವಿಮುಖ ಸರ್ಕಾರ ಪದ್ದತಿಯನ್ನು ರೆಗ್ಯುಲೇಟಿಂಗ್ ಆಕ್ಟ್ ಶಾಸನವು ರದ್ದುಗೊಳಿಸಿತು.


2.    1784 ರ ಪಿಟ್ಸ್ ಇಂಡಿಯಾ ಆಕ್ಟ್
ರೆಗ್ಯುಲೇಟಿಂಗ್ ಶಾಸನದ ದೋಷಗಳನ್ನು ಸರಿಪಡಿಸಲು ಪಿಟ್ಸ್ ಇಂಡಿಯಾ ಶಾಸನವನ್ನು ಜಾರಿಗೆ ತರಲಾಯಿತು.
ಇದರ ಪ್ರಮುಖ ಅಂಶಗಳು
• ಲಂಡನ್‍ನಲ್ಲಿ ‘ಆರು ಜನ’ ಸದಸ್ಯರ ಒಂದು ಬೋರ್ಡ್ ಆಫ್ ಕಂಟ್ರೋಲ್ ಸ್ಥಾಪನೆಯಾಗಿ ಕಂಪೆನಿಯ ಆಡಳಿತದ ಮೇಲೆ ಹತೋಟಿ ಹೊಂದಿತು.
• ಗವರ್ನರ್ ಜನರಲ್‍ನ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಯಿತು.
• ಈಸ್ಟ್ ಇಂಡಿಯಾ ಕಂಪೆನಿಯನ್ನು ಬ್ರಿಟಿಷ್ ಸರಕಾರದ ನಿಯಮಗಳಿಗೆ ಒಳಪಡಿಸಿ, ಹೆಚ್ಚಿನ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು.


3.   1813 ರ ಚಾರ್ಟ್‍ರ್ ಆಕ್ಟ್ ಶಾಸನ
• ಭಾರತದ ಬ್ರಿಟಿಷ್ ಸಾಮ್ರಾಜ್ಯವು ಬ್ರಿಟಿಷ್ ಸಾರ್ವಭೌಮರ ಅಧೀನಕ್ಕೆ ಒಳಪಟ್ಟಿದೆ ಎಂದು ತಿಳಿಸಿತು.
• ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲೆ ಇದ್ದ ಪ್ರತಿಬಂಧಕವನ್ನು ತೆಗೆದುಹಾಕಿ ಇಲ್ಲಿ ಶಾಲೆ ಕಾಲೇಜುಗಳನ್ನು ತೆರೆಯಲು ಅವರಿಗೆ ಅನುವು ಮಾಡಲಾಯಿತು.
• ಒಂದು ಲಕ್ಷ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಲಾಯಿತು. ಶಿಕ್ಷಣದ ಬೆಳವಣಿಗೆಗೆ ಪ್ರೋತ್ಸಾಹ ನೀಡಿತು.


4.   1833 ರ ಶಾಸನ
• ಕಂಪೆನಿಯ ವ್ಯಾಪಾರ ಮಾಡದಂತೆ ನಿಷೇಧಿಸಲಾಯಿತು. ಅದು ಭಾರತದಲ್ಲಿ ಆಡಳಿತವನ್ನು ಮಾತ್ರ ನೋಡಿಕೊಳ್ಳುವಂತೆ ಸೂಚಿಸಲಾಯಿತು.
• ಸರ್ಕಾರಿ ಉದ್ಯೋಗಗಳನ್ನು ವ್ಯಕ್ತಿಯ ಅರ್ಹತೆ ಮತ್ತು ಯೋಗ್ಯತೆಯ ಆಧಾರದಲ್ಲಿ ನೀಡಬೇಕಾಯಿತು.
• ಗವರ್ನರ್ ಜನರಲ್ ಸಲಹಾ ಸಮಿತಿಗೆ ಕಾನೂನು ಸದಸ್ಯನ ಸೇರ್ಪಡೆಯಾಯಿತು. ಮತ್ತು ಇದರಿಂದ ಈ ಸಲಹಾ ಸಮಿತಿಯಲ್ಲಿ ನಾಲ್ಕು ಜನ ಸದಸ್ಯರಿರುವಂತಾಯಿತು.


5.   1853 ಶಾಸನ
* ಈ ಶಾಸನವನ್ನು ಭಾರತೀಯ ಇತಿಹಾಸದಲ್ಲೊಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಭಾರತದಲ್ಲಿ ಇಂದಿನ ಪಾರ್ಲಿಮೆಂಟ್‍ನ ಮೂಲ ಎಂದು ಕರೆಯಲ್ಪಡುವ ಶಾಸನವಾಗಿದೆ.
• ಕೆಂದ್ರದಲ್ಲಿ ಶಾಸನ ಸಭೆಯ ಸ್ಥಾಪನೆಯಾಯಿತು. ಇದರಿಂದ ಯಶಸ್ವಿ ಶಾಸಕಾಂಗದ ರಚನೆಯಾಯಿತು. ಗವರ್ನರ್ ಜನರಲ್‍ನ ಸಲಹಾ ಮಂಡಳಿಗೆ ಆರು ಜನ ಶಾಸಕರ ಸೇರ್ಪಡೆಯಾಯಿತು. ಪರಿಣಾಮಾಕಾರಿ ಶಾಸಕಾಂಗವನ್ನು ರಚಿಸಿತು. ಇದು ನಮ್ಮ ಸಂವಿಧಾನದ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲಾಯಿತು.
• ಸರ್ಕಾರಿ ಸೇವೆಗಾಗಿ (ಸಿವಿಲ್ ಸರ್ವಿಸ್) ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ನೀಡಲಾಯಿತು.


6.  1858 ರ ಭಾರತ ಸರ್ಕಾರದ ಕಾನೂನು
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದ ಆಡಳಿತ ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು. ಹೊಸ ಆಡಳಿತ ವ್ಯವಸ್ಥೆಯನ್ನು ರಚಿಸಲು ಈ ಕಾನೂನನ್ನು ತರಲಾಯಿತು.
• ಭಾರತದ ವ್ಯವಹಾರಗಳ ಕಾರ್ಯದರ್ಶಿಯ ನೆರವಿಗೆ 15 ಜನ ಸದಸ್ಯನ್ನೊಳಗೊಂಡ ಸಮಿತಿಯ ಸ್ಥಾಪನೆಯಾಯಿತು.
• ಗವರ್ನರ್ ಜನರಲನು ‘ವೈಸರಾಯ್’ ಎಂಬ ಪದನಾಮವನ್ನು ಹೊಂದಿ ಬ್ರಿಟಿಷ್ ರಾಣಿಯ ಅಧಿಕಾರದ ಪ್ರತಿನಿಧಿಯಾದನು.
• 1858ರಲ್ಲಿ ಬ್ರಿಟನ್‍ನ ವಿಕ್ಟೋರಿಯಾ ರಾಣಿ ಒಂದು ಘೋಷಣೆ ಹೊರಡಿಸಿ ದೇಶೀಯ ರಾಜರಿಗೆ ಮತ್ತು ಭಾರತದ ಜನರಿಗೆ ಬ್ರಿಟಿಷ್ ಸರ್ಕಾರದಿಂದ ನಿಷ್ಪಕ್ಷ ನಡಾವಳಿಯ ಆಶ್ವಾಸನೆ ಇತ್ತಳು.


7.   1909 ರ ಭಾರತದ ಕೌನ್ಸಿಲ್ ಆಕ್ಟ್
1909 ರ ಭಾರತದ ಕೌನ್ಸಿಲ್ ಆಕ್ಟ್‍ನ್ನು ‘ಮಾರ್ಲೆ- ಮಿಂಟೋ ಸುಧಾರಣೆಗಳು’ ಎಂದು ಕರೆಯುತ್ತಾರೆ. ಕಾರಣ ಈ ಶಾಸನವನ್ನು ಆಗಿನ ‘ಭಾರತ ವ್ಯವಹಾರಗಳ ಕಾರ್ಯದರ್ಶಿ ಮಾರ್ಲೆ ಮತ್ತು ವೈಸರಾಯ್ ಮಿಂಟೋ’ ಅವರ ಸಲಹೆಗಳ ಆಧಾರದಲ್ಲಿ ರೂಪಿಸಲಾಗಿತ್ತು.
ಇದರ ಪ್ರಮುಖ ಅಂಶಗಳು
• ಇದು ಕೇಂದ್ರ ಶಾಸಕಾಂಗದ ವಿಸ್ತರಣೆಗೆ ಅವಕಾಶ ನೀಡಿತು. ಇದರ ಸದಸ್ಯರ ಸಂಖ್ಯೆ 16 ರಿಂದ 60 ಕ್ಕೆ ಏರಿತು.
• ಪ್ರಾಂತ್ಯಗಳ ಶಾಸನಸಭೆಯ ವಿಸ್ತಾರವಾಯಿತು. ಇಲ್ಲಿ ಚುನಾಯಿತರಿಗು ಅವಕಾಶವಾಯಿತು.
• ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಎರ್ಪಡಿಸಿ ಪರಿಚಯಿಸಲಾಯಿತು.


8.   1919 ರ ಭಾರತ ಸರ್ಕಾರ ಶಾಸನ
ಈ ಶಾಸನವನ್ನು ‘ಮಾಂಟೆಗ್ಯೂ ಮತ್ತು ಚೆಮ್ಸ್‍ಫರ್ಡ್ ಸುಧಾರಣೆಗಳೆಂದೂ’ ಕರೆಯುತ್ತಾರೆ.
ಇದರ ಪ್ರಮುಖ ಅಂಶಗಳು
• ಭಾರತಕ್ಕೆ ಕ್ರಮೇಣ ಜವಾಬ್ದಾರಿ ಸರ್ಕಾರ ನೀಡುವುದು.
• ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಆಶ್ವಾಸನೆ.
• ಭಾರತದ ವ್ಯವಹಾರಗಳ ಕಾರ್ಯದರ್ಶಿಯ ಅಧಿಕಾರ ಮೊಟಕುಗೊಳಿಸಿ ಭಾರತಕ್ಕೆ ಒಬ್ಬ ‘ಹೈಕಮೀಷನರ್’ ನೇಮಕ ಮಾಡಲಾಯಿತು.
• ವೈಸರಾಯರ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯ ಸದಸ್ಯರ ಸಂಖ್ಯೆ ಹೆಚ್ಚಿಸಲಾಯಿತು.
• ಕೇಂದ್ರದಲ್ಲಿ ‘ದ್ವಿ ಸದನಗಳ ಶಾಸನಸಭೆ’ ರಚಿಸಲಾಯಿತು. ಅವೆಂದರೆ ಮೇಲ್ಮನೆ(ಕೌನ್ಸಿಲ್ ಆಫ್ ಸ್ಟೇಟ್ಸ್) ಇದರ ಅವಧಿ ಮೂರು ವರ್ಷ. ಕೆಳಮನೆ(ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ) ಇದರ ಅವಧಿ ಐದು ವರ್ಷ.
• ಈ ಶಾಸನವು ಆಡಳಿತ ವಿಷಯಗಳನ್ನು ಪ್ರತ್ಯೇಕವಾಗಿ ಕೇಂದ್ರದ ಪಟ್ಟಿ ಮತ್ತು ಪ್ರಾಂತಗಳ ಪಟ್ಟಿಗಳಾಗಿ ವಿಂಗಡಿಸಿತು.
• ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರ ಜಾರಿಗೆಗೊಳಿಸಲಾಯಿತು. ಇದರಂತೆ ಆಡಳಿತ ಇಲಾಖೆಯಲ್ಲಿ ಮೀಸಲು ವಿಷಯ ಮತ್ತು ವರ್ಗಾಯಿತ ವಿಷಯ ಎಂಬ ವಿಂಗಡನೆಯಾಯಿತು. ಹಣಕಾಸು, ಪೋಲಿಸ್ ಇತ್ಯಾದಿ ಮೀಸಲು ವಿಷಯಗಳಾದರೆ, ಅರಣ್ಯ , ವಿದ್ಯಾಭ್ಯಾಸ, ಆರೋಗ್ಯ, ಭೂಕಂದಾಯ ಇತ್ಯಾದಿ ವರ್ಗಾಯಿತ ವಿಷಯಗಳಾದವು. ಗವರ್ನರ್ ಮತ್ತು ಆತನ ಕಾರ್ಯಕಾರಿ ಸಮಿತಿಗೆ ಮೀಸಲು ವಿಷಯಗಳ ಜವಾಬ್ದಾರಿ ಇದ್ದಿತು. ಚುನಾಯಿತ ಸಚಿವರು ವರ್ಗಾಯಿತ ವಿಷಯಗಳ ಜವಾಬ್ದಾರಿ ಹೊಂದಿದ್ದರು.


9.   1935 ರ ಭಾರತ ಸರಕಾರದ ಶಾಸನ
ಇದರ ಪ್ರಮುಖ ಅಂಶಗಳು
• ಈ ಶಾಸನವು ಬ್ರಿಟಿಷ್ ಇಂಡಿಯಾ ಹಾಗೂ ದೇಶೀಯ ಸಂಸ್ಥಾನಗಳನ್ನೊಳಗೊಂಡ ಒಂದು ಒಕ್ಕೂಟ ಸ್ಥಾಪಿಸುವಂತೆ ಸೂಚಿಸಿತು.
• ದೇಶೀಯ ಸಂಸ್ಥಾನ ಮತ್ತು ಪ್ರಾಂತ್ಯಗಳ ಪರಿಮಿತಿಗೆ ಒಳಪಟ್ಟ ಒಂದು ಫೆಡರಲ್ ನ್ಯಾಯಾಲಯವನ್ನು ಸ್ಥಾಪಿಸಿತು.
• ಪ್ರಾಂತ್ಯಗಳಿದ್ದ ದ್ವಿಮುಖ ಸರ್ಕಾರ ವ್ಯವಸ್ಥೆಯನ್ನು ಕೊನೆಗೊಳಿಸಿತು. ಪ್ರಾಂತ್ಯಗಳಿಗೆ ಸ್ವಾಯತ್ತತೆಯನ್ನು ನೀಡಿತು.
• ಈ ಶಾಸನವು ಆಡಳಿತ ಇಲಾಖೆಗಳನ್ನು ಕೇಂದ್ರಪಟ್ಟಿ , ರಾಜ್ಯಪಟ್ಟಿ ಮತ್ತು ಸಮವರ್ತಿ ಪಟ್ಟಿಗಳಾಗಿ ವಿಂಗಡಿಸಿತು. ಆದರೆ ‘ದ್ವಿಮುಖ ವ್ಯವಸ್ಥೆ’ಯನ್ನು ‘ಕೇಂದ್ರ’ದಲ್ಲಿ ಪ್ರಾರಂಭಿಸಿತು.
• ಭಾರತದಲ್ಲಿ ರಿಸರ್ವ್ ಬ್ಯಾಂಕನ್ನು ಸ್ಥಾಪಿಸಲಾಯಿತು.


10.    1947 ರ ಭಾರತ ಸ್ವಾತಂತ್ರ್ಯದ ಶಾಸನ
ಇದರ ಪ್ರಮುಖ ಅಂಶಗಳು
• ಭಾರತ ದೇಶವು ಸ್ವತಂತ್ರ್ಯವಾಯಿತು. ಅನ್ನು ಇಬ್ಬಾಗವಾಗಿ ಮಾಡಿ ಆಭರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ್ಯ ದೇಶಗಳನ್ನು ರಚಿಸಲಾಯಿತು.
• ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಕೊನೆಗೊಂಡಿತು.
• ಪ್ರಾಂತ್ಯಗಳು ಮತ್ತು ದೇಶೀಯ ಸಂಸ್ಥಾನಗಳಿಗೆ ಭಾರತ ಮತ್ತು ಪಾಕಿಸ್ತಾನಗಳಿಗೆ ಸೇರಲು ಅವಕಾಶವಾಯಿತು.
• ಸಂವಿಧಾನ ರಚನೆಗೆ ಸಂವಿಧಾನ ಸಭೆಯನ್ನು ರಚಿಸಲಾಯಿತು.


40 ಸಾಮಾನ್ಯ ಜ್ಞಾನ ಪ್ರಶ್ನೆಗಳು : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

The post ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು appeared first on Current Affairs Kannada.

]]>
https://currentaffairskannada.com/indian-acts/feed/ 0
ರಾಜ್ಯಸಭೆ ಕುರಿತ ಸಂಕ್ಷಿಪ್ತ ಮಾಹಿತಿ https://currentaffairskannada.com/brief-information-about-rajya-sabha/ https://currentaffairskannada.com/brief-information-about-rajya-sabha/#respond Tue, 30 Jan 2024 07:32:30 +0000 http://www.spardhatimes.com/?p=843 ✦   ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ.✦   ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250 , ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ  ಮಾಡುತ್ತಾರೆ. ಈ 12 ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ,…

The post ರಾಜ್ಯಸಭೆ ಕುರಿತ ಸಂಕ್ಷಿಪ್ತ ಮಾಹಿತಿ appeared first on Current Affairs Kannada.

]]>
  ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ.
  ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250 , ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ  ಮಾಡುತ್ತಾರೆ. ಈ 12 ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ  ಸೇವೆ,  ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ  ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ.
✦   ರಾಜ್ಯ ಸಭೆಯ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3 ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ.

✦   ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ.
  ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ.

  ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು ಆಗಿರುತ್ತಾರೆ.
  ಪ್ರಸ್ತುತ ಎಂ.ವೆಂಕಯ್ಯ ನಾಯ್ಡು ರಾಜ್ಯಸಭೆಯ ಅಧ್ಯಕ್ಷರು.( ಆಗಸ್ಟ್ 11, 2017)
  ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ    ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ.
  ಪ್ರಸ್ತುತ ಉಪಾಧ್ಯಕ್ಷರು -ಹರಿವಂಶ್ ನಾರಾಯಣ್ ಸಿಂಗ್( 9 ಅಗಸ್ಟ್, 2018)
  ಮೇ 13 1952ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

✦   ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ
1.ಭಾರತದ ಪ್ರಜೆಯಾಗಿರಬೇಕು
2.30 ವರ್ಷ ವಯೋಮಿತಿ ಹೊಂದಿರಬೇಕು
3.ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು
4.ಮತಿಭ್ರಮಣೆಯುಳ್ಳವರಾಗಿರಬಾರದು
5.ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.

ಲೋಹಗಳಿಗೆ ಸಂಬಂಧಿಸಿದ 35 ಸಾಮಾನ್ಯ ಪ್ರಶ್ನೆಗಳು

The post ರಾಜ್ಯಸಭೆ ಕುರಿತ ಸಂಕ್ಷಿಪ್ತ ಮಾಹಿತಿ appeared first on Current Affairs Kannada.

]]>
https://currentaffairskannada.com/brief-information-about-rajya-sabha/feed/ 0
ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ https://currentaffairskannada.com/constitutional-development-of-india-1773-to-1947/ https://currentaffairskannada.com/constitutional-development-of-india-1773-to-1947/#respond Tue, 23 Jan 2024 07:20:25 +0000 http://www.spardhatimes.com/?p=808 ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು. ಸಾಮ್ರಾಜ್ಯ ವಿಸ್ತಾರವಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿತ್ತು. ಭಾರತೀಯರ ಬೇಡಿಕೆಗಳಿಗೂ ಸ್ಪಂದಿಸಬೇಕಾಗಿತ್ತು. ಬ್ರಿಟಿಷರು…

The post ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ appeared first on Current Affairs Kannada.

]]>
ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು. ಸಾಮ್ರಾಜ್ಯ ವಿಸ್ತಾರವಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿತ್ತು. ಭಾರತೀಯರ ಬೇಡಿಕೆಗಳಿಗೂ ಸ್ಪಂದಿಸಬೇಕಾಗಿತ್ತು. ಬ್ರಿಟಿಷರು ಹೀಗೆ ಕಾಲಕಾಲಕ್ಕೆ ಕೈಗೊಂಡ ಕಾನೂನು ಮತ್ತು ನಿಯಮಗಳು ಇಂದಿನ ಭಾರತೀಯ ಸಂವಿಧಾನದ ಬೆಳವಣಿಗೆಗೆ ಹಿನ್ನಲೆಯಾದವು.

# ರೆಗ್ಯುಲೇಂಟಿಂಗ ಶಾಸನ (1773) : 

ಕ್ರಿ.ಶ. 1773 ರಲ್ಲಿ ಜಾರಿಗೆ ಬಂದ ಈ ಶಾಸನದಿಂದ ರಾಬರ್ಟ ಕ್ಲೈವ್ ಜಾರಿಗೊಳಿಸಿದ ದ್ವಿಮುಖ ಸರ್ಕಾರ ಪದ್ದತಿ ರದ್ದಾಯಿತು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ನಿಯಂತ್ರಿಸಲು ಅನೇಕ ನಿಬಂಧನೆಗಳನ್ನು ಜಾರಿಗೊಳಿಸಿತು.
(1) ಬಂಗಾಳದ ಗವರ್ನರ್ ಅನ್ನು ಭಾರತದ ಗವರ್ನರ್ ಜನರಲ್ ಎಂದು ಕರೆಯಲಾಯಿತು ಮದ್ರಾಸ್, ಬೊಂಬಾಯಿ, ಪ್ರಾಂತಗಳು ಇವನ ಅದೀನವಾದವು, ವಾರನ್ ಹೇಸ್ಟಿಂಗ್ ಭಾರತದ ಮೊದಲ ಗವರ್ನರ್ ಜನರಲ್ ಆದನು.
(2) ಗವರ್ನರ್ ಜನರಲ್‍ನ ಸಹಾಯಕ್ಕಾಗಿ ಸಲಹಾ ಸಮಿತಿಯಲ್ಲಿ 4 ಜನ ಸದಸ್ಯರನ್ನು ನೇಮಿಸಲಾಯಿತು.
(3) ಸರ್ವೋಚ್ಚ ನ್ಯಾಯಾಲಯವನ್ನು ಕಲ್ಕತ್ತೆಯಲ್ಲಿ ಸ್ಥಾಪಿಸಲಾಯ್ತು. (1773)
(4) ಸೆಕ್ರಟರಿ ಆಫ್ ಸ್ಟೇಟ್ ಎಂಬ ಭಾರತ ಮಂತ್ರಿಯನ್ನು ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಜವಾಬ್ದಾರನಾಗಿರುವಂತೆ ಕಂಪನಿಯ ಉಸ್ತುವಾರಿಗೆ ನೇಮಿಸಿತು.

# ಕ್ರಿ.ಶ. 1784ರ ಪಿಟ್ಸ್ ಇಂಡಿಯಾ ಶಾಸನ:

(1) ಇಂಗ್ಲೇಂಡ್‍ನಲ್ಲಿ ಆರು ಜನ ಸದಸ್ಯರ ಒಂದು ಬೋರ್ಡ್ ಆಫ್ ಕಂಟ್ರೋಲ್ ಸ್ಥಾಪನೆಯಾಗಿ ಕಂಪನಿಯ ಆಡಳಿತದ ಮೇಲೆ ಹತೋಟಿ ಹೊಂದಿತು.
(2) ಗರ್ವನರ್ ಜನರಲ್‍ನ ಸಲಹಾ ಸಮಿತಿಯ ಸದಸ್ಯರನ್ನು ಮೂರಕ್ಕೆ ಇಳಿಸಲಾಯಿತು.
(3) ಈಸ್ಟ್ ಇಂಡಿಯಾ ಕಂಪನಿ ಬ್ರಿಟಿಷ್ ಸರ್ಕಾರದ ನಿಯಮಗಳಿಗೆ ಒಳಪಡುವಂತಾಯಿತು.

# ಕ್ರಿ..ಶ. 1813 ರ ಶಾಸನ:

ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಬ್ರಿಟಿಷ್ ಸರ್ಕಾರ ನೀಡಿದ್ದ ಸನ್ನದನ್ನು ಆಗಾಗ ನವೀಕರಿಸುತಿತದ್ದರು. ಇದರಿಂದ ಕ್ರಿ.ಶ. 1813ರಲ್ಲಿ ಸನ್ನದನು ನವೀಕರಿಸಿದಾಗ ಹೊಸ ನಿಯಮಗಳನ್ನು ರೂಪಿಸಿದರು.
(1) ಭಾರತ ಬ್ರಿಟಿಷ್ ಸಾಮ್ರಾಜ್ಯವು ಬ್ರಿಟಿಷ್ ಸಾರ್ವಭೌಮರ ಅದೀನಕ್ಕೆ ಒಳಪಟ್ಟಿದೆ ಎಂದು ತಿಳಿಸಿತು.
(2) ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲೆ ಇದ್ದ ಪ್ರತಿಬಂಧವನ್ನು ತೆಗೆದು ಹಾಕಿ ಇಲ್ಲಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಲು ಮತ ಪ್ರಚಾರಕರಿಗೆ ಸಾಧ್ಯವಾಯಿತು.
(3) ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಭಾರತದಲ್ಲಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಿತು.

# ಕ್ರಿ.ಶ. 1833ರ ಶಾಸನ;

(1) ಕಂಪನಿಯು ವ್ಯಾಪಾರ ಮಾಡದಂತೆ ನಿಷೀಧಿಸಲಾಯಿತು. ಕಂಪನಿಯು ರಾಜಕೀಯ ಅಧಿಕಾರವನ್ನು ಮಾತ್ರ ಚಲಾಯಿಸುವಂತಾಯಿತು
(2) ಸರ್ಕಾರಿ ಸೇವೆಯಲ್ಲಿ ವ್ಯಕ್ತಿಯ ಯೋಗ್ಯತೆ ಮತ್ತು ಅರ್ಹತೆಗನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸುವ ಅವಕಾಶ ನೀಡಿತು.
(3) ಗರ್ವನರ್ ಜನರಲ್‍ನ ಸಲಹಾ ಸಮಿತಿಗೆ ಕಾನೂನು ಸದಸ್ಯನ ಸೇರ್ಪಡೆಯಾಯಿತು. ಥಾಮಸ್ ಬ್ಯಾಂಟಿಂಗ್‍ಟನ್ ಮೆಕಾಲೆ ಮೊದಲ ಕಾನೂನು ಸಲಹೆಗಾರನಾದನು. ಹೀಗೆ ಸದಸ್ಯರ ಸಂಖ್ಯೆ ಮತ್ತೆ ನಾಲ್ಕಾಯಿತು.

# ಕ್ರಿ.ಶ. 1853 ರ ಶಾಸನ;

ಈ ಶಾಸನ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಪರಿಣಾಮಕಾರಿ ಶಾಸಕಾಂಗವನ್ನು ಸೃಷ್ಟಿಸಿತು.
(1) ಕೆಂದ್ರದಲ್ಲಿ ಶಾಸನ ಸಭೆಯ ಸ್ಥಾಪನೆಯಾಯಿತು. ಗವರ್ನರ್ ಜನರಲ್‍ನ ಸಲಹಾ ಮಂಡಳಿಗೆ ಆರು ಜನ ಶಾಸಕ ಸದಸ್ಯರ ಸೇರ್ಪಡೆಯಾಯಿತು.(ಇದು ಇಂದಿನ ಪಾರ್ಲಿಮೆಂಟಿನ್ ಮೂಲ ರೂಪವಾಯಿತು)
(2) ಸರ್ಕಾರಿ ಸೇವೆ (ಸಿವಿಲ್ ಸರ್ವೀಸ್)ಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ನೀಡಲಾಯಿತು.

# ಕ್ರಿ.ಶ. 1858 ರ ಭಾರತ ಸರ್ಕಾರದ ಕಾನೂನು:

ಕ್ರಿ.ಶ. 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದ ಆಡಳಿತ ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು. ಈ ಶಾಸನ ಭಾರತದ ಉತ್ತಮ ಆಳ್ವಿಕೆಗೆ ಮಹತ್ವದ ಕೊಡುಗೆ ನೀಡಿದೆ.
(1) ಭಾರತದ ವ್ಯವಹಾರಗಳ ಕಾರ್ಯದರ್ಶಿಯ ನೆರವಿಗೆ 15 ಜನ ಸದಸ್ಯರನ್ನೊಳಗೊಂಡ ಭಾರತೀಯ ಸಮಿತಿಯ ಸ್ಥಾಪನೆಯಾಯಿತು.
(2) ಗವರ್ನರ್ ಜನರಲ್‍ನು ವೈಸರಾಯ್ ಎಂಬ ಪದನಾಮವನ್ನು ಹೊಂದಿ ರಾಣಿಯ ಅಧಿಕಾರದ ಪ್ರತಿನಿದಿಯಾದನು.
(3) ಕ್ರಿ.ಶ. 1858 ರಲ್ಲಿ ಬ್ರಿಟನ್ ವಿಕ್ಟೋರಿಯಾ ರಾಣಿ ಒಂದು ಗೋಷಣೆ ಹೊರಡಿಸಿ ದೇಶೀಯ ರಾಜರಿಗೆ ಮತ್ತು ಭಾರತದ ಜನತೆಗೆ ಬ್ರಿಟಿಷ್ ಸರ್ಕಾರದಿಂದ ನಿಷ್ಪಕ್ಷಪಾತ ನಡಾವಳಿಯ ಆಶ್ವಾಸನೆ ಇತ್ತಳು.

# ಕ್ರಿ.ಶ. 1909 ರ ಭಾರತದ ಕೌನ್ಸಿಲ್ ಆಕ್ಟ್(ಮಿಂಟೋ-ಮಾರ್ಲೆ ಸುಧಾರಣೆ) :

ಕ್ರಿ.ಶ. 1861 ಮತ್ತು ಕ್ರಿ.ಶ. 1891 ರ ಕೌನ್ಸಿಲ್ ಆಕ್ಟ್‍ಗಳು ಶಾಸಕಾಂಗದ ಅಧಿಕಾರವನ್ನು ಹೆಚ್ಚಿಸಿದವು ಸ್ಥಳೀಯ ಮಟ್ಟದಲ್ಲಿ ಚುನಾಯಿತ ನಗರಸಭೆಗಳನ್ನು ಆರಂಭಿಸಿವದವು. ಬ್ರಿಟಿಷ್ ಸರ್ಕಾರವು ಚುನಾಯಿತ ಭಾರತೀಯರಿಗೆ ಶಾಸನ ಸಭೆಗಳಲ್ಲಿ ಅವಕಾಶ ನೀಡಲು ಕ್ರಿ.ಶ. 1909 ರ ಶಾಸನ ಜಾರಿಗೆ ತಂದಿತು. ಭಾರತದ ವೈಸರಾಯ್ ಮಿಂಟೋ ಹಾಗೂ ಭಾರತ ವ್ಯವಹಾರಗಳ ಕಾರ್ಯದರ್ಶಿ ಮಾರ್ಲೆ ಈ ಶಾಸನವನ್ನು ರೂಪಿಸಿದರು. ಆಗ ಭಾರತದಲ್ಲಿ ನಡೆದಿದ್ದ ಚಳವಳಿಗಳಿಂದಾಗಿ ಈ ಬದಲಾವಣೆ ಬಂದಿತು.
1. ಇದು ಕೇಂದ್ರ ಶಾಸಕಾಂಗದ ವಿಸ್ತರಣೆಗ ಅವಕಾಶ ನೀಡಿತು. ಇದರ ಸದಸ್ಯರ ಸಂಖ್ಯೆ 16 ರಿಂದ 60 ಕ್ಕೆ ಏರಿತು.
2. ಪ್ರಾಂತಗಳ ಶಾಸನಸಬೆಯ ವಿಸ್ತಾರವಾಯಿತು. ಇಲ್ಲಿ ಚುನಾಯಿತರಿಗೂ ಅವಕಾಶವಾಯಿತು.
3. ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಏರ್ಪಡಿಸಿ ಪರಿಚಯಿಸಲಾಯಿತು.

# ಕ್ರಿ.ಶ 1919 ರ ಭಾರತ ಸರ್ಕಾರದ ಶಾಸನ : 

ಭಾರತದ ಗನರ್ನರ್ ಜನರಲ್ ಚೆಮ್ಸಫರ್ಡ ಮತ್ತು ಭಾರತ ವ್ಯವಹಾಅಗಳ ಕಾರ್ಯದರ್ಶಿ ಮಾಟೆಂಗೂ ಇವರು ರೂಪಿಸಿದ ಸುಧಾರಣೆಗಳು ಇವಾಗಿವೆ.
1. ಭಾರತಕ್ಕೆ ಕ್ರಮೇಣ ಜವಾಬ್ದಾರಿ ಸರ್ಕಾರ ನೀಡುವುದು
2. ಸ್ವಯಂಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಯ ಆಶ್ವಾಸನೆ
3. ಭಾರತದ ವ್ಯವಹಾರಗಳ ಕಾರ್ಯದರ್ಶಿಯ ಅಧಿಕಾಅ ಮೊಟುಕುಗೊಳಿಸಿ ಭಾರತಕ್ಕೆ ಒಬ್ಬ ಹೈ ಕಮೀಷನರ್ ನೇಮಕ ಮಾಡಲಾಯಿತು.
4. ವೈಸರಾಯರ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯ ಸದಸ್ಯರ ಸಂಖ್ಯೆ ಹೆಚ್ಚಿಸಲಾಯಿತು.
5. ಕೇಂಧ್ರದಲ್ಲಿ ಎರಡು ಸದನಗಳ ಶಾಸನ ಸಭೆ ರಚಿಸಿತು. ಅವೆಂದರೆ, ಮೇಲ್ಮನೆ(ಕೌನ್ಸಿಲ್ ಆಫ್ ಸ್ಟೇಟ್).ಇದರ ಅವದೀ ಮೂರು ವರ್ಷ, ಕೆಳಮನೆ ಅಥವಾ ಲೆಜಿಸ್ಲೇಟಿವ್ ಅಸೆಂಬ್ಲಿ, ಇದರ ಅವಧಿ ಐದು ವರ್ಷ (ಇವು ಕ್ರಮವಾಗಿ ರಾಜ್ಯಸಭೆ ಮತ್ತು ಲೋಕಸಭೆಗಳಿಗೆ ತಳಹದಿ ಹಾಕಿದವು)
6. ಆಡಳಿತ ಇಲಾಖೇಯಲ್ಲಿ ವಿಷಯಗಳನ್ನು ಕೇಂದ್ರಪಟ್ಟಿ (ರಕ್ಷಣೆ, ಅಂಚೆ ಮತ್ತು ತಂತಿ) ಮತ್ತು ರಾಜ್ಯಪಟ್ಟಿ(ಭೂ ಕಂದಾಯ, ಸ್ಥಳೀಯ ಸಂಸ್ಥೆ, ಅರಣ್ಯ ಇತ್ಯಾದಿ) ಎಂದು ವಿಂಗಡಿಸಲಾಯಿತು.
7. ಪ್ರಾತ್ಯಗಳಲ್ಲಿ ದ್ವಿಮುಖ ಸರ್ಕಾರ ಜಾರಿಗೊಳಿಸಲಾಯಿತು ಇದರಂತೆ ಆಡಳತ ಇಲಾಖೆಗಳಲ್ಲಿ ಮೀಸಲು ವಿಷಯ(ಹಣಕಾಸು ಪೋಲೀಸ್) ವರ್ಗಯಿತ ವಿಷಯ(ಅರಣ್ಯ ಶಿಕ್ಷಣ ಕಂದಾಯ, ಆರೋಗ್ಯ) ಜಾರಿಗೆ ಬಂದಿತು. ಗವರ್ನರ್ ಮತ್ತು ಆತನ ಕಾರ್ಯಕಾರಿ ಸಮಿತಿಗೆ ಮೀಸಲು ವಿಷಯಗಳ ಜವಾಬ್ದಾರಿ ಇತ್ತು. ಗವರ್ನರ್ ಮತ್ತು ಆತನ ಸಚಿವರು ವರ್ಗಾಯಿಸಲ್ಪಟ್ಟ ವಿಷಯಗಳ ಜವಾಬ್ದಾರಿ ಹೊಂದಿದ್ದರು. ಇದು ಭಾಗಶಃ ಜವಾಬ್ದಾರಿ ಸರಕಾರದ ಆರಂಭವಾಗಿತ್ತು.

# ಕ್ರಿ.ಶ. 1935 ರ ಭಾರತ ಸರ್ಕಾರದ ಶಾಸನ : 

ಈ ಶಾಸನವು ಭಾರತದ ಸಂವಿಧಾನ ಅಚನೆಯಲ್ಲಿ ಬಹುಮುಖ್ಯವಾದ ದಾಖಲೆಯಾಗಿದೆ. ಇದು ಒಕ್ಕೂಟ ಪದ್ದತಿಗೆ ಅವಕಾಶ ಮಾಡಿತು. ಪ್ರಾಂತ್ಯಗಳ ಸ್ವಾಯತ್ತತೆಗೆ ಪ್ರಾಮುಖ್ಯತೆ ಕೊಟ್ಟಿತು. ಇದು ಸ್ವತಂತ್ರ ಭಾರತದ ರಾಜ್ಯಾಂಗಕ್ಕೆ ಆಧಾರವಾಗಿ ಪರಿಣಮಿಸಿದೆ.
1. ಈ ಶಾಸನವು ಬ್ರಿಟಿಷ್ ಇಂಡಿಯಾ, ರಾಜರುಗಳ ಆಳ್ವಿಕೆಗೆ ಒಳಪಟ್ಟ ಸಂಸ್ಥಾನಗಳು ಸೇರಿ ಒಂದು ಅಖಿಲ ಭಾರತ ಫೆಡರೇಷನ್ ರಚಿಸಲು ಸಹಾಯವಾಯಿತು.
2. ದೇಶೀಯ ಸಂಸ್ಥಾನ ಮತ್ತು ಪ್ರಾಂತಗಳ ಪರಿಮಿತಿಗೆ ಒಳಪಟ್ಟು ಒಂದು ಫೆಡರಲ್ ನ್ಯಾಯಾಲಯಕ್ಕೆ ಅನುಮತಿ ನೀಡಿತು.
3. ರಾಜ್ಯದಲ್ಲಿ ಜಾಡಿಯಲ್ಲಿದ್ದ ದ್ವಿಮುಖ ಸರ್ಕಾರ ರದ್ದುಗೊಳಿಸಿತು. (ದ್ವಿಮುಖ ಸರ್ಕಾರವನ್ನು ಕೇಂಧ್ರದಲ್ಲಿ ಜಾರಿಗೆ ತರಲಾಯಿತು). ಪ್ರಾಂತ ಸರಕಾರಗಳು ಸ್ವಾಯತ್ತವಾದವು.
4. ಈ ಶಾಸನವು ಆಡಳಿತದ ಇಲಾಖೆಗಳನ್ನು ಕೇಂಧ್ರಪಟ್ಟಿ, ರಾಜ್ಯಪಟ್ಟಿ ಮತ್ತು ಸಮವರ್ತಿ ಅಟ್ಟಿ ಎಂದು ಮುರು ಪಟ್ಟಿಗಳಿಗೆ ಅವಕಾಶ ನೀಡಿತು.
5. ಭಾರತದಲ್ಲಿ ರಿಸರ್ವ ಬ್ಯಾಂಕ್‍ನ್ನು ಸ್ಥಾಪಿಸಲಾಯಿತು.

# ಕ್ರಿ.ಶ. 1947 ರ ಭಾರತ ಸ್ವಾತಂತ್ರ್ಯದ ಶಾಸನ : 

1. ಭಾರತ ದೇಶವು ಸ್ವತಂತ್ರವಾಯಿತು. ಆದರೆ ಅದು ಇಬ್ಬಾಗವಾಗಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ದೇಶಗಳು ಆಸ್ತಿತ್ವಕ್ಕೆ ಬಂದವು.
2. ಬ್ರಿಟಿಷ್ ಸರ್ಕಾರದ ಆಡಳಿತ ಭಾರತದಲ್ಲಿ ಅಂತ್ಯಗೊಂಡು ಭಾರತ ಅಥವಾ ಪಾಕಿಸ್ತಾನಕ್ಕೆ ಪ್ರಾಂತಗಳು ಸೇರಲು ಅವಕಾಶವಾಯಿತು.
3. ಭಾರತದ ಸಂವಿಧಾನ ರಚನೆಗೆ ಒಂದು ಸಭೆಯು ರೂಪುಗೊಂಡಿತು.
ಸಂವಿಧಾನ ಸಿದ್ದವಾಗುವ ತನಕ ಕ್ರಿ. ಶ 1947 ಆಗಸ್ಟ 15 ರಿಂದ ಕ್ರಿ.ಶ 1948 ರ ಜೂನ್‍ವರಗೆ ಮೌಂಟ್‍ಬ್ಯಾಟನ್ ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆದರು. ಮುಂದೆ ಕ್ರಿ.ಶ 1950 ಜನವರಿ 25 ರ ವರಗೆ ಚಕ್ರವರ್ತಿ ರಾಜಗೋಪಾಲಾಚಾರಿ ಭಾರತದ ಗವರ್ನಲ್ ಜನರಲ್ ಆಗಿದ್ದರು. ಆನವರಿ 26 ಕ್ಕೆ ಭಾರತವು ಗಣರಾಜ್ಯವಾಯಿತು. ಹೀಗಿದ್ದರೂ ಭಾರತವೂ ಕಾಮನ್‍ವೆಲ್ತಅ ಎಂಬ ಬ್ರಿಟನ್ನಿನ ಆಳ್ವಿಕೆಗೆ ಒಳಪಟ್ಟ ವಸಾಹತು ದೇಶಗಳ ಒಕ್ಕೂಟದಲ್ಲಿ ಸದಸ್ಯತ್ವ ಹೊಂದಿದೆ.

# ಸಂವಿಧಾನ ರಚನೆ : 
ಸೆಪ್ಟಂಬರ್ ಕ್ರಿ.ಶ. 1946 ರಲ್ಲಿ ಪಂಡಿತ ನೆಹರೂರವರ ನೇತೃತ್ವದಲ್ಲಿ ಮಾಧ್ಯಮಾವಧಿ ಸರಕಾರದ ಸ್ಥಾಪನೆಯಾಯಿತು ಹಾಗೂ 308 ಸದಸ್ಯರಿರುವ ಸಂವಿಧಾನ ರಚಿಸಿಕೊಳ್ಳುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿತು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಡಾ|| ಬಾಬು ರಾಜೇಂದ್ರ ಪ್ರಸಾದರು ನೇಮಕವಾದರು. ಡಾ|| ಬಿ.ಆರ್. ಅಂಬೇಡ್ಕರ್ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕರಡು ಸಂವಿಧಾನಕ್ಕೆ ಸಂವಿಧಾನ ಸಮಿತಿ ನವೆಂಬರ್ 26. ಕ್ರಿ.ಶ. 1949 ರಂದು ತನ್ನ ಅನುಮೋದನೆ ನೀಡಿತು. ಜನವರಿ 26 ಕ್ರಿ.ಶ. 1950 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದ ಧ್ಯೇಓದ್ದೇಶಗಳು ಸಂವಿಧಾನದ ರೂಪುರೇಷೆ, ಸೈದ್ದಾಂತಿಕ ಗೊತ್ತುಗುರಿಗಳನ್ನು ರೂಪಿಸುವಲ್ಲಿ ತಳಹದಿಯಾಗಿವೆ.

# ಮುಖ್ಯ ಅಂಶಗಳು:
1. ಕ್ರಿ.ಶ. 1773 ರಲ್ಲಿ ಜಾರಿಗೆ ಬಂದ ರೆಗ್ಯುಲೇಟೀಂಗ್ ಶಾಸನದಿಂದ ರಾಬರ್ಟಕ್ಲೈವ್ ಜಾರಿಗೊಳಿಸಿದ ದ್ವಿಮುಖ ಸರ್ಕಾರ ಪದ್ದತಿ ರದ್ದಾಯಿತು.
2. ಕ್ರಿ.ಶ. 1784 ರ ಪಿಟ್ಸಸ ಇಂಡಿಯಾ ಶಾಸನದ ಪ್ರಕಾರ ಈಸ್ಟ ಇಂಡಿಯಾ ಕಂಪೆನೆ ಬ್ರಿಟಿಷ್ ಸರ್ಕಾರದ ನಿಯಮಗಳಿಗೆ ಒಳಪಡುವಂತಾಯಿತು.
3. ಕ್ರಿ. ಶ. 1813 ರ ಶಾಸನವು ಒಂದು ಲಕ್ಷ ರೂಪಾಯಿಗಳನ್ನು ಭಾರತದಲ್ಲಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಿತು.
4. ಕ್ರಿ. ಶ.1853 ರ ಶಾಸನ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಪರಿಣಾಮಕಾರಿ ಶಾಸಕಾಂಗವನ್ನು ಸೃಷ್ಟಿಸಿತು.
5. ಕ್ರಿ. ಶ. 1858ರ ಭಾರತದ ಸರ್ಕಾರದ ಕಾನೂನು ಶಾಸನದ ಪ್ರಕಾರ ಭಾರತದ ಆಡಳಿತವು ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು.
6. ಕ್ರಿ. ಶ. 1909ರ ಭಾರತದ ಕೌನ್ಸಿಲ್ ಆಕ್ಟ್ ಶಾಸನಸಭೆಗಳ ವಿಸ್ತರಣೆ ಮತ್ತು ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ಪರಿಚಯಿಸಿತು.
7. 1919 ರ ಭಾರತದ ಸರ್ಕಾರದ ಶಾಸನ ಪ್ರಾಂತಗಳಲ್ಲಿ ದ್ವಿಮುಖ ಸರ್ಕಾರವನ್ನು ಜಾರಿಗೊಳಿಸಿತು.
8. 1935 ರ ಭಾರತ ಸ್ವಾತಂತ್ರ್ಯ ಶಾಸನದ ಪ್ರಕಾರ ಭಾರತ ಸ್ವತಂತ್ರಗೊಂಡು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ದೇಶಗಳು ಆಸ್ತಿತ್ವಕ್ಕೆ ಬಂದವು.
9. ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಭಾರತವು ಗಣರಾಜ್ಯವಾಯಿತು.

ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು

The post ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ appeared first on Current Affairs Kannada.

]]>
https://currentaffairskannada.com/constitutional-development-of-india-1773-to-1947/feed/ 0
ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು https://currentaffairskannada.com/indian-constitution-parts-schedules-and-articles-at-a-glance/ https://currentaffairskannada.com/indian-constitution-parts-schedules-and-articles-at-a-glance/#respond Fri, 19 Jan 2024 07:49:41 +0000 http://www.spardhatimes.com/2020/03/30/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%b8%e0%b2%82%e0%b2%b5%e0%b2%bf%e0%b2%a7%e0%b2%be%e0%b2%a8-%e0%b2%ad%e0%b2%be%e0%b2%97%e0%b2%97%e0%b2%b3%e0%b3%81-%e0%b2%85%e0%b2%a8%e0%b3%81/ ಸಂವಿಧಾನದ ಭಾಗಗಳು, ಸಂಬಂಧಿಸಿದ ವಿಷಯ ಮತ್ತು ವಿಧಿಗಳ ವ್ಯಾಪ್ತಿ ✦ ಸಂವಿಧಾನದಲ್ಲಿರುವ 24 ಭಾಗಗಳು : ಭಾಗ -1 ಒಕ್ಕೂಟ ಮತ್ತು ಅದರ ಪ್ರದೇಶಭಾಗ-2 ಭಾರತದ ಪೌರತ್ವ ವಿಧಿ ವಿಧಾನಭಾಗ-3 ಮೂಲಭೂತ ಹಕ್ಕುಗಳುಭಾಗ-4 ರಾಜ್ಯ ನೀತಿ ನಿರ್ದೇಶಕ ತತ್ವಗಳುಭಾಗ-5 ಮೂಲಭೂತ ಕರ್ತವ್ಯಭಾಗ-6 ಕೇಂದ್ರ…

The post ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು appeared first on Current Affairs Kannada.

]]>
ಸಂವಿಧಾನದ ಭಾಗಗಳು, ಸಂಬಂಧಿಸಿದ ವಿಷಯ ಮತ್ತು ವಿಧಿಗಳ ವ್ಯಾಪ್ತಿ

✦ ಸಂವಿಧಾನದಲ್ಲಿರುವ 24 ಭಾಗಗಳು : 
ಭಾಗ -1 ಒಕ್ಕೂಟ ಮತ್ತು ಅದರ ಪ್ರದೇಶ
ಭಾಗ-2 ಭಾರತದ ಪೌರತ್ವ ವಿಧಿ ವಿಧಾನ
ಭಾಗ-3 ಮೂಲಭೂತ ಹಕ್ಕುಗಳು
ಭಾಗ-4 ರಾಜ್ಯ ನೀತಿ ನಿರ್ದೇಶಕ ತತ್ವಗಳು
ಭಾಗ-5 ಮೂಲಭೂತ ಕರ್ತವ್ಯ
ಭಾಗ-6 ಕೇಂದ್ರ ಸರ್ಕಾರದ ಕಾರ್ಯವೈಖರಿ
ಭಾಗ-7 ರಾಜ್ಯ ಸರ್ಕಾರದ ಕಾರ್ಯವೈಖರಿ
ಭಾಗ-8 ಕೇಂದ್ರಾಡಳಿತ ಪ್ರದೇಶ ವಿವರ
ಭಾಗ-9 ಪಂಚಾಯತ್ ಸಂಸ್ಥೆಗಳು
ಭಾಗ-9ಎ ಮುನಿಸಿಪಾಲಿಟಿಗಳು
ಭಾಗ-10 ಅನುಸೂಚಿತ ಜಾತಿ ಅನುಸೂಚಿತ ವರ್ಗ ಪ್ರದೇಶ
ಭಾಗ-11 ಕೇಂದ್ರ ರಾಜ್ಯ ಸಂಬಂಧ
ಭಾಗ-12 ಹಣಕಾಸು ಆಸ್ತಿ ಮುಂತಾದ ವಿಚಾರ
ಭಾಗ-13 ಆಂತರಿಕ ದೇಶಿ ವ್ಯಾಪಾರ
ಭಾಗ-14 ಕೇಂದ್ರ-ರಾಜ್ಯ ಆಡಳಿತ ಸೇವೆಗಳು
ಭಾಗ-14ಎ ಟ್ರಿಬ್ಯುನಲ್‍ಗಳು
ಭಾಗ-15 ಚುನಾವಣಾ ಆಯೋಗ ಅದರ ಕಾರ್ಯ
ಭಾಗ-16 ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳು
ಭಾಗ-17 ಅಧಿಕೃತ ಅಂಗೀಕೃತ ಭಾಷೆಗಳು
ಭಾಗ-18 ತುರ್ತು ಪರಿಸ್ಥಿತಿ
ಭಾಗ-19 ಮಿಸಲೇನಿಯಸ್
ಭಾಗ-20 ಸಂವಿಧಾನ ತಿದ್ದುಪಡಿ
ಭಾಗ-21 ತಾತ್ಕಾಲಿಕ ಮತ್ತು ವಿಶೇಷ ನಿಯಮ ವಿವರ
ಭಾಗ-22 ಸಂಕ್ಷಿಪ್ತ, ಶೀರ್ಷಿಕೆ ಹಿಂದಿಯಲ್ಲಿ ಸಂವಿಧಾನದ ಪ್ರಕಟಣೆ ರದ್ದು

✦ ಅನುಸೂಚಿಗಳು  : 
ಅ:1 ರಾಜ್ಯಗಳ ಮತ್ತು ಕೇಂದ್ರಾಡಳಿತದ ಪ್ರದೇಶ ವಿವರ
ಅ:2 ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಮುಖ್ಯ ನ್ಯಾಯಾಮೂರ್ತಿಗಳು, ಕಂಟ್ರೋಲರ್ ಅಡಿಟರ್ ಜನರಲ್ ಮುಂತಾದವರ ವೇತನ -ಭತ್ಯೆ ಮತ್ತು ಸವಲತ್ತು
ಅ:3 ವಿವಿಧ ಸಂವಿಧಾನಿಕ ಹುದ್ದೆಗಳಿಸಿದವರ ಪ್ರಮಾಣ ವಚನ ವಿವರಣೆ
ಅ:4 ರಾಜ್ಯ- ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ ಸಭಾ ಸ್ಥಾನ ಹಂಚಿಕೆ ಕುರಿತು ವಿವರಣೆ
ಅ:5 ಅನುಸೂಚಿತ ಜಾತಿ, ವರ್ಗ ಪ್ರದೇಶಗಳ ಆಡಳಿತ ಕುರಿತ ವಿವರಣೆ
ಅ:6 ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ವಿಶೇಷ ಸವಲತ್ತು ವಿವರ
ಅ:7 ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆ ಕುರಿತು
ಅ:8 ಸಂವಿಧಾನ ಮಾನ್ಯತೆ ಪಡೆದ 22 ಅಧಿಕೃತ ಭಾಷೆಗಳ ವಿವರ
ಅ:9 ಸರ್ಕಾರ ಜಾರಿಗೆ ತಂದಿರುವ ಭು ಸುಧಾರಣೆ ಹಾಗೂ ಜಮೀನ್ದಾರಿ ಪದ್ದತಿ ನಿರ್ಮೂಲನೆಯ ಅಧಿನಿಯಮ ಕುರಿತ ವಿವರಣೆ
ಅ:10 ಪಕ್ಷಾಂತರ ನಿಷೇಧ ಕಾಯ್ದೆ
ಅ:11 ಪಂಚಾಯತ್ ಸಂಸ್ಥೆಗಳ ರಚನೆ, ಅಧಿಕಾರ ಮತ್ತು ಕಾರ್ಯಗಳ ವಿವರ
ಅ:12 ನಗರ ಸ್ಥಳೀಯ ಸರ್ಕಾರ ರಚನೆ, ಅಧಿಕಾರ ಮತ್ತು ಕಾರ್ಯಗಳು

✦ ಭಾರತದ ಸಂವಿಧಾನ ಮೂಲಗಳು : 
1. ಸಂಯಕ್ತ ರಾಜ್ಯ ಪದ್ದತಿ : ಕೆನಡಾ ದೇಶದ ಸಂಯಕ್ತ ಪದ್ದತಿ
2. ಮೂಲಭುತ ಹಕ್ಕು : ಅಮೆರಿಕಾದಿಂದ
3. ನಿರ್ದೇಶಕ ತತ್ವಗಳು : ಐರ್ಲೆಂಡ್‍ನಿಂದ
4. ಸಂಸತ್ ರಚನೆ : ಬ್ರಿಟನ್ ಮಾದರಿ
5. ಮೂಲಭೂತ ಕರ್ತವ್ಯ : ರಾಷ್ಯಾ
6. ತುರ್ತು ಪರಿಸ್ಥಿತಿ : ಜರ್ಮನಿ

ಗಾಂಧೀಜಿ ಹೆಜ್ಜೆಗುರುತುಗಳು (1919 -1947)

The post ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು appeared first on Current Affairs Kannada.

]]>
https://currentaffairskannada.com/indian-constitution-parts-schedules-and-articles-at-a-glance/feed/ 0
ಭಾರತದ ಸಂವಿಧಾನದಲ್ಲಿ ‘ವಿಪ್’ (WHIP) ಎಂದರೇನು..? ಎಷ್ಟು ವಿಧಗಳು..? https://currentaffairskannada.com/whip/ https://currentaffairskannada.com/whip/#respond Sat, 30 Dec 2023 09:44:36 +0000 http://www.spardhatimes.com/2020/05/07/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%b8%e0%b2%82%e0%b2%b5%e0%b2%bf%e0%b2%a7%e0%b2%be%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%aa%e0%b3%8d/ ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ. ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು…

The post ಭಾರತದ ಸಂವಿಧಾನದಲ್ಲಿ ‘ವಿಪ್’ (WHIP) ಎಂದರೇನು..? ಎಷ್ಟು ವಿಧಗಳು..? appeared first on Current Affairs Kannada.

]]>
ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ. ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್‌ ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್‌ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ.

ಪಕ್ಷದ ಮುಖ್ಯ ಸಚೇತಕರು ವಿಪ್‌ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್‌ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ. ಪಕ್ಷದ ‘ಬಿ’ ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ದೇಶದ ಪ್ರಮುಖ ಆಯೋಗ ಮತ್ತು ಸಮಿತಿಗಳು

ವಿಪ್‌ನಲ್ಲಿ ಮೂರು ವಿಧಗಳು :
1.ಸಿಂಗಲ್ ಲೈನ್/ ಒನ್‌ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್​
2.ಒನ್‌ಲೈನ್‌ ವಿಪ್‌: ವಿಶ್ವಾಸ ಮತ ಸಂದರ್ಭದಲ್ಲಿ ಸರಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್‌ ಅನ್ನು ಒನ್‌ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.
3.ಟೂ ಲೈನ್‌ ವಿಪ್‌: ಬಜೆಟ್‌ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ಜಾರಿ ಮಾಡಲಾಗುವ ವಿಪ್‌ ಅನ್ನು ಟೂ ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.
4.ತ್ರೀ ಲೈನ್‌ ವಿಪ್‌: ಅಧಿವೇಶನದಲ್ಲಿ ಹಾಜರಾತಿ, ವಿತ್ತೀಯ ಕಾರ‍್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್‌, ಅನುಮೋದನೆ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್‌.

ವಿಪ್‌ ಕುರಿತು ಮಹತ್ವದ ವಿಷಯಗಳು:
ಸಿಂಗಲ್ ಲೈನ್ ವಿಪ್​ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟೀಸ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನೂ ಇರುವುದಿಲ್ಲ.

ಡಬಲ್ ಲೈನ್ ವಿಪ್​ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರು ಉಳಿಯುವ ಸ್ವಾತಂತ್ರ್ಯವನ್ನ ಕೊಟ್ಟಿರಲಾಗುತ್ತದೆ. ಇನ್ನು, ಮೂರನೇಯದಾದ ಥ್ರೀಲೈನ್ ವಿಪ್​ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ.

ಥ್ರೀಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಪಕ್ಷಗಳು ಕೊಡುವ ವಿಪ್ ಸಾಮಾನ್ಯವಾಗಿ ಥ್ರೀ ಲೈನ್ ವಿಪ್ ಆಗಿರುತ್ತದೆ. ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್‌ ಕ್ರಮ ಕೈಗೊಳ್ಳಬಹುದು.

ವಿಪ್ ಯಾವಾಗ ಪ್ರಯೋಗಿಸಬಹುದು?
ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಮ್‌ನಲ್ಲಿ ವಿಪ್‌ ಜಾರಿ ಮಾಡಲಾಗುತ್ತದೆ. ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದಾದರೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.

ಪ್ರಚಲಿತ ವಿದ್ಯಮಾನಗಳು (29-12-2023)

The post ಭಾರತದ ಸಂವಿಧಾನದಲ್ಲಿ ‘ವಿಪ್’ (WHIP) ಎಂದರೇನು..? ಎಷ್ಟು ವಿಧಗಳು..? appeared first on Current Affairs Kannada.

]]>
https://currentaffairskannada.com/whip/feed/ 0
ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆಯಲ್ಲಿ ಏನೇನಿದೆ..? https://currentaffairskannada.com/what-is-in-the-bill-on-the-appointment-of-election-commissioner/ https://currentaffairskannada.com/what-is-in-the-bill-on-the-appointment-of-election-commissioner/#respond Tue, 26 Dec 2023 08:52:46 +0000 https://www.spardhatimes.com/?p=7477 ಡಿಸೆಂಬರ್ 12ರಂದು ರಾಜ್ಯಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅಂಗೀಕಾರಗೊಂಡಿತು. ಆ.10 ರಂದು ಈ ಮಸೂದೆಯನ್ನು ಇಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್…

The post ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆಯಲ್ಲಿ ಏನೇನಿದೆ..? appeared first on Current Affairs Kannada.

]]>
ಡಿಸೆಂಬರ್ 12ರಂದು ರಾಜ್ಯಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅಂಗೀಕಾರಗೊಂಡಿತು. ಆ.10 ರಂದು ಈ ಮಸೂದೆಯನ್ನು ಇಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯ ಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಯು ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರ (EC)ಗಳ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಕಾರ್ಯವಿಧಾನವನ್ನು ಇದು ವಿವರಿಸುತ್ತದೆ.

ರಾಜ್ಯಸಭೆಯು ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರು (hief Election Commissioner )ಮತ್ತು ಇತರ ಚುನಾವಣಾ ಆಯುಕ್ತರ ( Election Commissioner) (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅನ್ನು ಅನುಮೋದಿಸಿತು, ಇದು ಮುಖ್ಯ ಚುನಾವಣಾ ಆಯುಕ್ತ (CEC) ಮತ್ತು ಚುನಾವಣಾ ಆಯುಕ್ತರನ್ನು (EC) ನೇಮಕ ಮಾಡುವ ಕಾರ್ಯವಿಧಾನಗಳನ್ನು ವಿವರಿಸುತ್ತದೆ.

ಪ್ರಮುಖ ಲಕ್ಷಣಗಳು:
👉
ಪ್ರಧಾನ ಮಂತ್ರಿ, ಕೇಂದ್ರ ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ನೇಮಿಸಲಿದ್ದಾರೆ. ಪೂರ್ಣ ಸಮಿತಿಯ ಅನುಪಸ್ಥಿತಿಯಲ್ಲಿಯೂ ಈ ಸಮಿತಿಯ ಶಿಫಾರಸುಗಳು ಮಾನ್ಯವಾಗಿರುತ್ತವೆ.

👉ಕಾನೂನು ಸಚಿವರ ನೇತೃತ್ವದ ಶೋಧನಾ ಸಮಿತಿಯು ಆಯ್ಕೆ ಸಮಿತಿಗೆ ಹೆಸರುಗಳನ್ನು ಪ್ರಸ್ತಾಪಿಸುತ್ತದೆ. ಅರ್ಹತಾ ಮಾನದಂಡಗಳೊಂದಿಗೆ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಕಾರ್ಯದರ್ಶಿಗೆ ಸಮಾನವಾದ ಸ್ಥಾನವನ್ನು ಹೊಂದಿರಬೇಕು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳಿಗೆ ವೇತನ ಮತ್ತು ಸೇವಾ ಷರತ್ತುಗಳನ್ನು ಸಂಪುಟ ಕಾರ್ಯದರ್ಶಿಗೆ ಸಮನಾಗಿ ಹೊಂದಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನಕ್ಕೆ ಸಮಾನಾಗಿ ಇದ್ದ ನಿಯಮವನ್ನು ಬದಲಿಸಲಿದೆ.

👉ಹೊಸ ಮಸೂದೆಯು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಹೊರಗಿಡಲಿದೆ. ಈ ವರ್ಷದ ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಸಂಸತ್ತು ಕಾನೂನು ರೂಪಿಸುವವರೆಗೆ ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡುತ್ತದೆ ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪೀಠವು ಚುನಾವಣಾ ಆಯುಕ್ತರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಮಸೂದೆ ಮಂಡಿಸಿ ಕಾನೂನು ರೂಪಿಸಲು ಮುಂದಾಗಿದೆ.

👉ಈ ಮಸೂದೆಯು ಚುನಾವಣಾ ಆಯೋಗದ (ಚುನಾವಣಾ ಆಯುಕ್ತರ ಸೇವೆಯ ನಿಯಮಗಳು ಮತ್ತು ವ್ಯವಹಾರದ ವಹಿವಾಟು) ಕಾಯಿದೆ, 1991 ಅನ್ನು ಬದಲಿಸುತ್ತದೆ.
👉ಇದು CEC ಮತ್ತು EC ಗಳ ನೇಮಕಾತಿ, ಸಂಬಳ ಮತ್ತು ತೆಗೆದುಹಾಕುವಿಕೆಯನ್ನು ತಿಳಿಸುತ್ತದೆ.
👉ನೇಮಕಾತಿ ಪ್ರಕ್ರಿಯೆ: CEC ಮತ್ತು EC ಗಳನ್ನು ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಅಧ್ಯಕ್ಷರು ನೇಮಕ ಮಾಡುತ್ತಾರೆ.
👉ಆಯ್ಕೆ ಸಮಿತಿಯು ಪ್ರಧಾನಮಂತ್ರಿ, ಕೇಂದ್ರ ಸಂಪುಟ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ/ನಾಯಕರನ್ನು ಒಳಗೊಂಡಿರುತ್ತದೆ.
👉ಈ ಸಮಿತಿಯಲ್ಲಿ ಖಾಲಿ ಇರುವಾಗಲೂ ಆಯ್ಕೆ ಸಮಿತಿಯ ಶಿಫಾರಸುಗಳು ಮಾನ್ಯವಾಗಿರುತ್ತವೆ.
👉ಸಂಬಳ ಮತ್ತು ಷರತ್ತುಗಳಲ್ಲಿನ ಬದಲಾವಣೆಗಳು: CEC ಮತ್ತು ECಗಳ ವೇತನ ಮತ್ತು ಸೇವಾ ಷರತ್ತುಗಳು ಕ್ಯಾಬಿನೆಟ್ ಕಾರ್ಯದರ್ಶಿಗೆ ಸಮನಾಗಿರುತ್ತದೆ. 1991 ರ ಕಾಯಿದೆಯ ಪ್ರಕಾರ, ಇದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನಕ್ಕೆ ಸಮನಾಗಿತ್ತು.

The post ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆಯಲ್ಲಿ ಏನೇನಿದೆ..? appeared first on Current Affairs Kannada.

]]>
https://currentaffairskannada.com/what-is-in-the-bill-on-the-appointment-of-election-commissioner/feed/ 0