Important Days – Current Affairs Kannada https://currentaffairskannada.com Current Affairs Kannada Mon, 03 Mar 2025 02:30:11 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png Important Days – Current Affairs Kannada https://currentaffairskannada.com 32 32 National Technology Day : ಮೇ.11 : ರಾಷ್ಟ್ರೀಯ ತಂತ್ರಜ್ಞಾನ ದಿನ https://currentaffairskannada.com/national-technology-day-2/ https://currentaffairskannada.com/national-technology-day-2/#respond Mon, 03 Mar 2025 02:26:09 +0000 https://currentaffairskannada.com/?p=68 National Technology Day : ರಾಜಸ್ತಾನದ ಪೋಖ್ರಾನ್‍ನಲ್ಲಿ 1998ರ ಈ ದಿನ ಭಾರತವು ಕೈಗೊಂಡ ಪ್ರಪ್ರಥಮ ಅಣ್ವಸ್ತ್ರ ಪರೀಕ್ಷೆಗಳ ಮಹಾ ಸಾಧನೆಯ ನೆನೆಪಿಗಾಗಿ ಪ್ರತಿ ವರ್ಷ ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ (National Technology Day) ಆಗಿ ಆಚರಿಸಲಾಗುತ್ತದೆ. 1998…

The post National Technology Day : ಮೇ.11 : ರಾಷ್ಟ್ರೀಯ ತಂತ್ರಜ್ಞಾನ ದಿನ appeared first on Current Affairs Kannada.

]]>
National Technology Day : ರಾಜಸ್ತಾನದ ಪೋಖ್ರಾನ್‍ನಲ್ಲಿ 1998ರ ಈ ದಿನ ಭಾರತವು ಕೈಗೊಂಡ ಪ್ರಪ್ರಥಮ ಅಣ್ವಸ್ತ್ರ ಪರೀಕ್ಷೆಗಳ ಮಹಾ ಸಾಧನೆಯ ನೆನೆಪಿಗಾಗಿ ಪ್ರತಿ ವರ್ಷ ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ (National Technology Day) ಆಗಿ ಆಚರಿಸಲಾಗುತ್ತದೆ.

1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತವು ರಾಜಸ್ಥಾನದ ಪೊಖ್ರಾನ್‌ನಲ್ಲಿ ಸರಣಿ ಅಣುಬಾಂಬ್‌ ಸ್ಫೋಟದ ಪರೀಕ್ಷೆಗಳನ್ನು ಯಸಸ್ವಿಯಾಗಿ ನಡೆಸಿತು. ಅಷ್ಟೇ ಅಲ್ಲದೆ ಅದೇ ದಿನ ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ‘ಹನ್ಸಾ-3’ ಹೆಲಿಕಾಪ್ಟರಿನ ಯಶಸ್ವಿ ಹಾರಾಟ ನಡೆಸಿತು ಹಾಗೂ ಅದೇ ದಿನ ಸಂಪೂರ್ಣ ಸ್ವದೇಶಿ ನಿರ್ಮಿತ ತ್ರಿಶೂಲ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಎಲ್ಲ ತಾಂತ್ರಿಕ ಸಾಧನೆಗಳ ಹಿನ್ನೆಲೆಯಲ್ಲಿ 1998 ಮೇ 11ರಿಂದ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.

ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಘೋಷಿಸಿದರು. ವಿಜ್ಞಾನ , ಸಮಾಜ ಮತ್ತು ಇಂಡಸ್ಟ್ರಿಗಳ ಏಕೀಕರಣದ ಸಂಕೇತವಾಗಿ, ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಸೃಜನಶೀಲತೆಯ ಗೌರವವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.

ಭಾರತವು ಅಣುಬಾಂಬ್‌ ಸ್ಫೋಟ, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡುವ ಮೂಲಕ ಜಗತ್ತಿನ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಎದುರಾಗುವ ಎಲ್ಲ ಅಡ್ಡಿಗಳನ್ನು ಸಮರ್ಥವಾಗಿ ಎದುರಿಸಲು ಸಮರ್ಥವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ನೆನಪಿಗಾಗಿ ಈ ದಿನವನು ಆಚರಿಸಲಾಗುತ್ತದೆ.

ಆ ದಿನದಂದು ಶಾಲಾ ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳಲ್ಲಿ ಹಲವಾರು ಸ್ಪರ್ಧೆಗಳು ಉಪನ್ಯಾಸ, ರಸಪ್ರಶ್ನೆ, ಸಂವಾದ ಸೇರಿದಂತೆ ಹಲವಾರು ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗ್ತುದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉನ್ನತ ಕೊಡುಗೆ ನೀಡಿದವರನ್ನು ಗುರುತಿಸಿ ಅವರಿಗೆ ಭಾರತದ ರಾಷ್ಟ್ರಪತಿಗಳು ರಾಷ್ಟ್ರೀಯ ತಂತ್ರಜ್ಞಾನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.

The post National Technology Day : ಮೇ.11 : ರಾಷ್ಟ್ರೀಯ ತಂತ್ರಜ್ಞಾನ ದಿನ appeared first on Current Affairs Kannada.

]]>
https://currentaffairskannada.com/national-technology-day-2/feed/ 0
World Consumer Day : ಮಾ.15ನ್ನು ‘ವಿಶ್ವ ಗ್ರಾಹಕರ ದಿನ’ ಎಂದು ಆಚರಿಸಲು ಕಾರಣವೇನು..? https://currentaffairskannada.com/why-is-march-15th-celebrated-as-world-consumer-day/ https://currentaffairskannada.com/why-is-march-15th-celebrated-as-world-consumer-day/#respond Sat, 01 Mar 2025 09:47:03 +0000 https://currentaffairskannada.com/?p=65 World Consumer Day : ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದ್ದರೂ ವ್ಯಾಪಾರಿ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಗ್ರಾಹಕನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮಾರ್ಚ್ 15 ರಂದು ಗ್ರಾಹಕನ ಹಕ್ಕುಗಳ ದಿನ ವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. …

The post World Consumer Day : ಮಾ.15ನ್ನು ‘ವಿಶ್ವ ಗ್ರಾಹಕರ ದಿನ’ ಎಂದು ಆಚರಿಸಲು ಕಾರಣವೇನು..? appeared first on Current Affairs Kannada.

]]>
World Consumer Day : ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದ್ದರೂ ವ್ಯಾಪಾರಿ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಗ್ರಾಹಕನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮಾರ್ಚ್ 15 ರಂದು ಗ್ರಾಹಕನ ಹಕ್ಕುಗಳ ದಿನ ವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.  ಪ್ರತಿ ಅರ್ಥವ್ಯವಸ್ಥೆಯಲ್ಲೂ ಗ್ರಾಹಕ ಅತಂತ ಮಹತ್ವದ ಪಾತ್ರ ವಹಿಸುತ್ತಾನೆ.

ಮಾರ್ಚ್ 15 ನ್ನು ಪ್ರತಿ ವರ್ಷವೂ ‘ವಿಶ್ವ ಗ್ರಾಹಕರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಅಮೆರಿಕ ಕಾಂಗ್ರೆಸ್ ನಲ್ಲಿ 1962 ಮಾರ್ಚ್ 15 ರಂದು ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಈ ದಿನವನ್ನು ಆಚರಿಸಲು ಆಗಿನ ಅಧ್ಯಕ್ಷ ಜಾನ್ ಎಫ್.ಕೆನಡಿ ಮುನ್ನುಡಿ ಬರೆದರು. ಆದರೆ ಅಧಿಕೃತವಾಗಿ ಗ್ರಾಹಕರ ದಿನ ಆಚರಣೆಯಾಗುವುದಕ್ಕೆ ಶುರುವಾಗಿದ್ದು 1983 ಮಾರ್ಚ್ 15 ರಿಂದ. ಪ್ರತಿ ವರ್ಷವೂ ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ವಿನೂತನ ಥೀಮ್ ಇಟ್ಟುಕೊಂಡು, ಈ ದಿನ ಆಚರಿಸಲಾಗುತ್ತದೆ. ಈ ವರ್ಷದ ಗ್ರಾಹಕ ದಿನದ ಥೀಮ್, ‘ಡಿಜಿಟಲ್ ಮಾರುಕಟ್ಟೆಯನ್ನು ಸುಂದರಗೊಳಿಸುವುದು'( ‘Making Digital Marketplaces Fairer’).

ಗ್ರಾಹಕರ ಹಿತರಕ್ಷಣಾ ಕಾಯ್ದೆ, 1986 (Consumer Protection Act, 1986)ಈ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ 1986 ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನು ಶೀಘ್ರ ಹಾಗೂ ಮಿತವ್ಯಯಕಾರಿಯಾಗಿ ದೂರುಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ.

ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮಂಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ. ಗ್ರಾಹಕರ ಹಕ್ಕುಗಳು (Rights of Consumers): ಗ್ರಾಹಕರ ಹಿತರಕ್ಷಣಾ ಕಾಯ್ದೆಯ,1986 ಅನ್ವಯ ಕೆಳಕಂಡ ಹಕ್ಕುಗಳು ಗ್ರಾಹಕರಿಗೆ ದೊರೆಯುತ್ತಿವೆ.

The post World Consumer Day : ಮಾ.15ನ್ನು ‘ವಿಶ್ವ ಗ್ರಾಹಕರ ದಿನ’ ಎಂದು ಆಚರಿಸಲು ಕಾರಣವೇನು..? appeared first on Current Affairs Kannada.

]]>
https://currentaffairskannada.com/why-is-march-15th-celebrated-as-world-consumer-day/feed/ 0
International Women Day :ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಏನು..? https://currentaffairskannada.com/international-women-day-history-significance/ https://currentaffairskannada.com/international-women-day-history-significance/#respond Fri, 28 Feb 2025 19:50:31 +0000 https://currentaffairskannada.com/?p=32 International Women Day : 1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ…

The post International Women Day :ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಏನು..? appeared first on Current Affairs Kannada.

]]>
International Women Day : 1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನವು ‘ಅಂತರರಾಷ್ಟ್ರೀಯ ಮಹಿಳಾ ದಿನ’ ಆಚರಣೆಗೆ ಪ್ರೇರಣೆ ನೀಡಿತು.

ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಮಾನ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ‘ಅಂತರರಾಷ್ಟ್ರೀಯ ಮಹಿಳಾ ದಿನ’ ಆಗಿ ಆಚರಿಸಬೇಕೆಂದು 1911ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು.

ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಸ್ಟಿನ ಹಾಲಿ ಚುನಾವಣೆಯಲ್ಲಿ ಆಯ್ಕೆಯಾದ ಮೂವರು ಮಹಿಳೆಯರು ಇದ್ದರು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃದಯದಿಂದ ಸ್ವಾಗತಿಸಿದರು. ಹೀಗೆ ‘ಅಂತರರಾಷ್ಟ್ರೀಯ ಮಹಿಳಾ ದಿನ’ವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.

1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.

1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು.

ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.

ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.

1975ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ 8 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು. ಎರಡು ವರ್ಷದ ನಂತರ,1977 ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನ ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆ ನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನ ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.

The post International Women Day :ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಏನು..? appeared first on Current Affairs Kannada.

]]>
https://currentaffairskannada.com/international-women-day-history-significance/feed/ 0
ಪ್ರಮುಖ ಅಂತರಾಷ್ಟ್ರೀಯ ದಿನಗಳು https://currentaffairskannada.com/important-international-days/ https://currentaffairskannada.com/important-international-days/#respond Sun, 17 Mar 2024 07:40:35 +0000 http://www.spardhatimes.com/?p=1231 1.ಅಂತರಾಷ್ಟ್ರೀಯ ತೆರಿಗೆ ದಿನ =   26 ನೇ ಜನವರಿ2.ಅಂತರಾಷ್ಟ್ರೀಯ ಮಹಿಳಾ ದಿನ =   8 ನೇ ಮಾರ್ಚ್3.ವಿಶ್ವ ಅಂಗವಿಕಲರ ದಿನ =  15 ನೇ ಮಾರ್ಚ್4.ವಿಶ್ವ ಜಲ ದಿನ =           22 ನೇ ಮಾರ್ಚ್5.ವಿಶ್ವ ವಾತಾವರಣ ದಿನ =  23…

The post ಪ್ರಮುಖ ಅಂತರಾಷ್ಟ್ರೀಯ ದಿನಗಳು appeared first on Current Affairs Kannada.

]]>
1.ಅಂತರಾಷ್ಟ್ರೀಯ ತೆರಿಗೆ ದಿನ =   26 ನೇ ಜನವರಿ
2.ಅಂತರಾಷ್ಟ್ರೀಯ ಮಹಿಳಾ ದಿನ =   8 ನೇ ಮಾರ್ಚ್
3.ವಿಶ್ವ ಅಂಗವಿಕಲರ ದಿನ =  15 ನೇ ಮಾರ್ಚ್
4.ವಿಶ್ವ ಜಲ ದಿನ =           22 ನೇ ಮಾರ್ಚ್
5.ವಿಶ್ವ ವಾತಾವರಣ ದಿನ =  23 ನೇ ಮಾರ್ಚ್
6.ವಿಶ್ವ ಕ್ಷಯರೋಗ ದಿನ =   24 ನೇ ಮಾರ್ಚ್
7.ವಿಶ್ವ ಆರೋಗ್ಯ ದಿನ =   7 ನೆ ಏಪ್ರಿಲ್
8.ವಿಶ್ವ ಪಾರಂಪರಿಕ ದಿನ =  18 ನೇ ಏಪ್ರಿಲ್
9.ಅಂತರಾಷ್ಟ್ರೀಯ ಪೃಥ್ವಿ ದಿನ =  22 ನೇ ಏಪ್ರಿಲ್
10.ಅಂತರಾಷ್ಟ್ರೀಯ ಸೂರ್ಯ ದಿನ =   3 ನೇ ಮೇ

11.ವಿಶ್ವ ರೆಡ್ ಕ್ರಾಸ್ ದಿನ =  8 ನೇ ಮೇ
12.ವಿಶ್ವ ಕುಟುಂಬ ದಿನ =   15 ನೇ ಮೇ
13.ವಿಶ್ವ ದೂರ ಸಂಪರ್ಕ ದಿನ =  17 ನೆ ಮೇ
14.ಕಾಮನ್‍ವೆಲ್ತ್ ದಿನ = 24 ನೇ ಮೇ
15.ವಿಶ್ವ ರಕ್ತದಾನಿಗಳ ದಿನ = 14 ನೆ ಜೂನ್
16.ವಿಶ್ವ ಧೂಮಪಾನ ವಿರೋಧಿ ದಿನ =  31 ನೆ ಮೇ
17.ವಿಶ್ವ ಜನಸಂಖ್ಯಾ ದಿನ =   11 ನೇ ಜುಲೈ
18.ಅಂತರಾಷ್ಟ್ರೀಯ ವಿದವೆಯರ ದಿನ = 23 ನೇ ಜೂನ್
19.ವಿಶ್ವ ಕಿವುಡರ ದಿನ =  26 ನೇ ಸೆಪ್ಟೆಂಬರ್
20.ವಿಶ್ವ ಪ್ರಣವಾಯು ದಿನ = 16 ನೇ ಸೆಪ್ಟೆಂಬರ್

21.ವಿಶ್ವ ಪ್ರವಾಸೋದ್ಯಮ ದಿನ = 27 ನೇ ಸೆಪ್ಟೆಂಬರ್
22.ವಿಶ್ವ ಹಿರಿಯರ ದಿನ =  1 ನೇ ಅಕ್ಟೋಬರ್
23.ವಿಶ್ವ ಅಹಿಂಸಾ ದಿನ = 2 ನೇ ಅಕ್ಟೋಬರ್
24.ವಿಶ್ವ ಸಾಕ್ಷರತಾ ದಿನ  = 8 ನೆ ಸೆಪ್ಟೆಂಬರ್
25.ವಿಶ್ವ ಅಂಚೆ ಕಛೇರಿ ದಿನ =  9 ನೆ ಅಕ್ಟೋಬರ್
26.ವಿಶ್ವ ವಾಸ ದಿನ = 3 ನೇ ಅಕ್ಟೋಬರ್
27.ವಿಶ್ವ ಆಹಾರ ದಿನ = 16 ನೆ ಅಕ್ಟೋಬರ್
28.ವಿಶ್ವ ಸಂಸ್ಥೆ ದಿನ = 24 ನೆ ಅಕ್ಟೋಬರ್
29.ವಿಶ್ವ ಮಿತ ದಿನ = 30 ನೆ ಅಕ್ಟೋಬರ್
30.ವಿಶ್ವ ಮಧುಮೇಹ ದಿನ =  14 ನೆ ನವೆಂಬರ್
31.ವಿಶ್ವ ಏಡ್ಸ್ ದಿನ = 1ನೇ ಡಿಸೆಂಬರ್
32.ವಿಶ್ವ ಸಂಸ್ಥೆಯ ಮಾನವ ಹಕ್ಕು ದಿನ = 10 ನೇ ಡಿಸೆಂಬರ್

The post ಪ್ರಮುಖ ಅಂತರಾಷ್ಟ್ರೀಯ ದಿನಗಳು appeared first on Current Affairs Kannada.

]]>
https://currentaffairskannada.com/important-international-days/feed/ 0
ಫೆಬ್ರವರಿ 13 : ರಾಷ್ಟ್ರೀಯ ಮಹಿಳಾ ದಿನ https://currentaffairskannada.com/national-womens-day/ https://currentaffairskannada.com/national-womens-day/#respond Wed, 14 Feb 2024 06:51:08 +0000 https://www.spardhatimes.com/?p=8117 “ಭಾರತದ ನೈಟಿಂಗೇಲ್” ಎಂದು ಕರೆಯಲ್ಪಡುವ ಸರೋಜಿನಿ ನಾಯ್ಡು ಜನ್ಮದಿನವನ್ನು ಭಾರತದಲ್ಲಿ ಫೆಬ್ರವರಿ 13ನ್ನು ‘ರಾಷ್ಟ್ರೀಯ ಮಹಿಳಾ ದಿನ’ವೆಂದು ಆಚರಿಸಲಾಗುತ್ತದೆ. ಫೆಬ್ರವರಿ 13. 2024 ಸರೋಜಿನಿ ನಾಯ್ಡು ಅವರ 145ನೇ ಜನ್ಮ ವಾರ್ಷಿಕೋತ್ಸವ ಆಚರಿಸಲಾಯಿತು. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ…

The post ಫೆಬ್ರವರಿ 13 : ರಾಷ್ಟ್ರೀಯ ಮಹಿಳಾ ದಿನ appeared first on Current Affairs Kannada.

]]>
“ಭಾರತದ ನೈಟಿಂಗೇಲ್” ಎಂದು ಕರೆಯಲ್ಪಡುವ ಸರೋಜಿನಿ ನಾಯ್ಡು ಜನ್ಮದಿನವನ್ನು ಭಾರತದಲ್ಲಿ ಫೆಬ್ರವರಿ 13ನ್ನು ‘ರಾಷ್ಟ್ರೀಯ ಮಹಿಳಾ ದಿನ’ವೆಂದು ಆಚರಿಸಲಾಗುತ್ತದೆ. ಫೆಬ್ರವರಿ 13. 2024 ಸರೋಜಿನಿ ನಾಯ್ಡು ಅವರ 145ನೇ ಜನ್ಮ ವಾರ್ಷಿಕೋತ್ಸವ ಆಚರಿಸಲಾಯಿತು. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು.

1879 ರಲ್ಲಿ ಈ ದಿನ ಭಾರತದಲ್ಲಿ ಪ್ರಸಿದ್ಧ ರಾಜಕೀಯ ಕಾರ್ಯಕರ್ತೆ, ಪ್ರಖ್ಯಾತ ಕವಿ, ಮತ್ತು ಕ್ರಾಂತಿಕಾರಿ ಸರೋಜಿನಿ ನಾಯ್ಡು ಜನಿಸಿದರು. ಈ ದಿನವು ವಾರ್ಷಿಕ ಆಚರಣೆಯಾಗಿದೆ ಮತ್ತು ಮಹಿಳಾ ಹಕ್ಕುಗಳ ಪ್ರಚಾರಕ್ಕಾಗಿ ಅವರ ಅತ್ಯುತ್ತಮ ಪ್ರಯತ್ನಗಳಿಗಾಗಿ ಅವರಿಗೆ ಗೌರವವಾಗಿದೆ. ಸರೋಜಿನಿ ನಾಯ್ಡು ಅವರು ಪ್ರತಿಷ್ಠಿತ ರಾಜಕೀಯ ವ್ಯಕ್ತಿ ಮತ್ತು ಪ್ರತಿಷ್ಠಿತ ಬರಹಗಾರರಾಗಿದ್ದರು. ಮಹಾತ್ಮಾ ಗಾಂಧಿಯವರು “ಭಾರತದ ನೈಟಿಂಗೇಲ್” ಎಂದು ಕರೆಯುವ ಗೌರವವನ್ನು ಅವರಿಗೆ ನೀಡಲಾಯಿತು.

ಭಾರತದಲ್ಲಿ ರಾಷ್ಟ್ರೀಯ ಮಹಿಳಾ ದಿನದ ಆರಂಭವು ದೇಶಾದ್ಯಂತ ಅನೇಕ ಮಹಿಳೆಯರ ಮೇಲೆ ಸರೋಜಿನಿ ನಾಯ್ಡು ಅವರ ಮಹತ್ವದ ಪ್ರಭಾವವನ್ನು ಭಾರತ ಸರ್ಕಾರ ಗುರುತಿಸುವುದರ ಮೂಲಕ ಗುರುತಿಸಬಹುದು. ಮಹಿಳಾ ಹಕ್ಕುಗಳು, ಸ್ವಾತಂತ್ರ್ಯ ಚಳುವಳಿ ಮತ್ತು ಇತರ ಕ್ಷೇತ್ರಗಳಲ್ಲಿ ಅವರ ಅತ್ಯುತ್ತಮ ಸಾಧನೆಗಳನ್ನು ಗೌರವಿಸಲು, ಸರ್ಕಾರವು ಔಪಚಾರಿಕವಾಗಿ ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು.

ಸರೋಜಿನಿ ನಾಯ್ಡು ಬಗ್ಗೆ:
✦ ಸರೋಜಿನಿ ನಾಯ್ಡು ಜನನ: 13ನೇ ಫೆಬ್ರುವರಿ 1879- ಮರಣ: 2ನೇ ಮಾರ್ಚ್ 1949) ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದ ಅಗೋರೆನಾಥ್ ಚಟ್ಟೋಪಾಧ್ಯರು ಮತ್ತು ತಾಯಿ ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡುರವರು ಅವರ ತಂದೆ-ತಾಯಿಯರ ಎಂಟು ಮಕ್ಕಳಲ್ಲಿ ಮೊದಲನೆಯವಾಗಿದ್ದರು.

✦ ಇವರ ಒಬ್ಬ ಸಹೋದರನಾದ ಬಿರೇಂದ್ರನಾಥ್ ಚಳುವಳಿಗಾರರಾಗಿದ್ದವರು ಮತ್ತೊಬ್ಬ ಸಹೋದರ ಹರಿನಾಥ್ ಕವಿ, ನಾಟಕಗಾರ ಮತ್ತು ನಟನೆಯನ್ನು ಮಾಡುತ್ತಿದ್ದವರು. ಸರೋಜಿನಿ ನಾಯ್ಡುರವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು.

✦ ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತಾನಾಡುತ್ತಿದ್ದರು. ಇವರು ಹನ್ನೆರಡನೇ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆ ಯಲ್ಲಿ ಮೇಲ್ದರ್ಜೆಯಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಇವರ ತಂದೆ ಇವರು ಗಣಿತ ತಜ್ಞೆ (ಮ್ಯಾಥಮ್ಯಾಟೀಷಿಯನ್) ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು ಆದರೆ ಸರೋಜಿನಿಯವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು.

✦ ಸರೋಜಿನಿ ನಾಯ್ಡು ಅವರು ಮಹಿಳೆಯರ ಹಕ್ಕುಗಳಿಗಾಗಿ ಪ್ರತಿಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯ್ಡು ಅವರ ಸಾಹಿತ್ಯಿಕ ಪರಾಕ್ರಮವು ಅವರಿಗೆ “ನೈಟಿಂಗೇಲ್ ಆಫ್ ಇಂಡಿಯಾ” ಎಂಬ ಬಿರುದನ್ನು ತಂದುಕೊಟ್ಟಿತು. 1912 ರಲ್ಲಿ ಪ್ರಕಟವಾದ “ಇನ್ ದಿ ಬಜಾರ್ಸ್ ಆಫ್ ಹೈದರಾಬಾದ್” ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.

✦ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಸರೋಜಿನಿ ನಾಯ್ಡು ಪ್ರಮುಖ ಪಾತ್ರ ವಹಿಸಿದರು. ಪ್ರಣಯ, ದೇಶಪ್ರೇಮ ಮತ್ತು ದುರಂತದ ವಿಷಯಗಳ ಮೇಲೆ ಸ್ಪರ್ಶಿಸಿದ ಅವರ ಕಾವ್ಯದ ಕಾರಣದಿಂದ ಅವರು ‘ನೈಟಿಂಗೇಲ್ ಆಫ್ ಇಂಡಿಯಾ’ ಅಥವಾ ‘ಭಾರತ್ ಕೋಗಿಲೆ ‘ ಎಂಬ ಪ್ರೀತಿಯ ಹೆಸರುಗಳನ್ನು ಗಳಿಸಿದರು.

✦ ಅವರ ಜನ್ಮದಿನದಂದು ಭಾರತದಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವುದು ದೇಶದೊಳಗಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳ ಆಚರಣೆಯನ್ನು ಒತ್ತಿಹೇಳುತ್ತದೆ.

✦ ನಾಯ್ಡು ಅವರ ಅಚಲವಾದ ನಂಬಿಕೆಗಳು ಈಗ ಉತ್ತರ ಪ್ರದೇಶ ರಾಜ್ಯ ಎಂದು ಕರೆಯಲ್ಪಡುವ ಯುನೈಟೆಡ್ ಪ್ರಾವಿನ್ಸ್‌ನ ಮೊದಲ ಮಹಿಳಾ ಗವರ್ನರ್ ಆಗಲು ಕಾರಣವಾಯಿತು.

✦ ಅವರ ಶೈಕ್ಷಣಿಕ ಮತ್ತು ರಾಜಕೀಯ ಪರಾಕ್ರಮವು 1925 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನು ಗಳಿಸಿತು. ಮಹಾತ್ಮಾ ಗಾಂಧಿಯವರ ನೇತೃತ್ವದ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ, ಅವರು 21 ತಿಂಗಳ ಕಾಲ ಜೈಲುವಾಸ ಅನುಭವಿಸಿದರು.

✦ಅವರ ದೃಢವಾದ ಪಾತ್ರ ಮತ್ತು ದೃಢವಾದ ನಂಬಿಕೆಗಳಿಗೆ ಧನ್ಯವಾದಗಳು, ಸರೋಜಿನಿ ನಾಯ್ಡು ಅವರು ಅಪ್ರತಿಮ ವ್ಯಕ್ತಿಯಾಗಿ ಉಳಿದಿದ್ದಾರೆ ಮತ್ತು ರಾಷ್ಟ್ರದಾದ್ಯಂತ ಅಸಂಖ್ಯಾತ ಮಹಿಳೆಯರಿಗೆ ಸ್ಫೂರ್ತಿಯ ಮೂಲವಾಗಿದೆ.

ಇವರ ಕೆಲವು ಕವಿತೆಗಳು :
1905- ದಿ ಗೋಲ್ಡನ್ ತ್ರೆಷೋಲ್ಡ್, ಯು.ಕೆ.ಯಲ್ಲಿ ಪಬ್ಲಿಷ್ ಆಯಿತು..
1912- ದಿ ಬರ್ಡ್ ಆಫ್ ಟೈಮ್: ಜೀವನದಲ್ಲುಸಾದ, ಸಾವಿನ ಹಾಡು. ಲಂಡನ್ನಲ್ಲಿ ಪ್ರಕಟಿತವಾಯಿತು.
1917-ದಿ ಬ್ರೋಕನ್ ವಿಂಗ್ – ಜೀವನ ಪ್ರೀತಿಯ, ಸಾವಿನ ಮತ್ತು ಜೀವನದುಲ್ಲಾಸದ ಹಾಡು; ದಿ ಗಿಪ್ಟ್ ಆಫ್ ಇಂಡಿಯಾ (ಮೊದಲ ಬಾರಿಗಜಚಿ 1915ರಲ್ಲಿ ಸಾರ್ವಜನಿಕರಲ್ಲಿ ಓದಲಾಯಿತು).
1916: ಮಹಮದ್ ಜಿನ್ನಃ: ಒಗ್ಗಟ್ಟಿನ ರಾಯಭಾರಿ.
1943- ದಿ ಸೆಪ್ಟ್ರೆಡ್ ಪ್ಲೂಟ್: ಇಂಡಿಯಾದ ಹಾಡುಗಳು, ಇವರ ಮರಣಾನಂತರ ಪ್ರಕಟನೆಗೊಂಡಿತು.
1961- ದಿ ಫೆದರ್ ಆಫ್ ಡಾನ್, ಇವರ ಮರಣಾನಂತರ ಇವರ ಮಗಳಾದ ಪದ್ಮಜ ನಾಯ್ಡುವಿನಿಂದ ಪ್ರಕಟಣೆ ಮತ್ತು ಮುದ್ರಣಗೊಂಡಿತು.
1960 ರಿಂದ 1971- ಇಂಡಿಯನ್ ವೀವರ್.

ಮಾರ್ಚ್‌ 8 : ಅಂತರರಾಷ್ಟ್ರೀಯ ಮಹಿಳಾ ದಿನ
ವಿಶ್ವಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಯು ಎನ್‌ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಅಸಹಕಾರ ಚಳವಳಿ-1920 (ಆಧುನಿಕ ಭಾರತದ ಇತಿಹಾಸ)

The post ಫೆಬ್ರವರಿ 13 : ರಾಷ್ಟ್ರೀಯ ಮಹಿಳಾ ದಿನ appeared first on Current Affairs Kannada.

]]>
https://currentaffairskannada.com/national-womens-day/feed/ 0
ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ – National Girl Child Day https://currentaffairskannada.com/national-girl-child-day/ https://currentaffairskannada.com/national-girl-child-day/#respond Wed, 24 Jan 2024 08:42:42 +0000 https://www.spardhatimes.com/?p=7883 ಭಾರತದಲ್ಲಿ ವಾರ್ಷಿಕವಾಗಿ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಇದನ್ನು 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರವು ಭಾರತೀಯ ಸಮಾಜದಲ್ಲಿ ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹರಡಲು…

The post ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ – National Girl Child Day appeared first on Current Affairs Kannada.

]]>
ಭಾರತದಲ್ಲಿ ವಾರ್ಷಿಕವಾಗಿ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಇದನ್ನು 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರವು ಭಾರತೀಯ ಸಮಾಜದಲ್ಲಿ ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿತು.  ಹೆಣ್ಣು ಮಗುವನ್ನು ಉಳಿಸಿ , ಮಕ್ಕಳ ಲಿಂಗ ಅನುಪಾತಗಳು ಮತ್ತು ಹೆಣ್ಣುಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಒಳಗೊಂಡಂತೆ ಸಂಘಟಿತ ಕಾರ್ಯಕ್ರಮಗಳೊಂದಿಗೆ ದಿನವನ್ನು ಆಚರಿಸಲಾಗುತ್ತದೆ .

ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಮತ್ತು ಸಮಾಜದಲ್ಲಿ ಅವರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.    ಈ ದಿನವು ಲಿಂಗ ಸಮಾನತೆಯನ್ನು ಉತ್ತೇಜಿಸಲು, ಹುಡುಗಿಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಬದ್ಧತೆಯನ್ನು ಸೂಚಿಸುತ್ತದೆ.

ಮೊದಲ NGCD (National Girl Child Day) ಅನ್ನು “ನಮ್ಮ ಹುಡುಗಿಯರನ್ನು ಉಳಿಸುವುದು: ನಮ್ಮ ಹುಡುಗಿಯರಿಗೆ ಶಿಕ್ಷಣ ನೀಡುವುದು” (Saving our Girls: Educating our Girls.) ಎಂಬ ವಿಷಯದೊಂದಿಗೆ ಆಚರಿಸಲಾಯಿತು. ಅಂದಿನಿಂದ, ಇದನ್ನು ವಾರ್ಷಿಕವಾಗಿ ವಿವಿಧ ವಿಷಯಗಳೊಂದಿಗೆ ಆಚರಿಸಲಾಗುತ್ತದೆ, ಪ್ರತಿಯೊಂದೂ ಹುಡುಗಿಯರು ಎದುರಿಸುತ್ತಿರುವ ನಿರ್ದಿಷ್ಟ ಸವಾಲುಗಳನ್ನು ಸಶಕ್ತಗೊಳಿಸುವ ಮತ್ತು ಪರಿಹರಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.

ಜನವರಿ 24 ಏಕೆ.. ?
ಪ್ರತಿ ವರ್ಷ ಜನವರಿ 24 ರಂದು ಹೆಣ್ಣು ಮಕ್ಕಳ ದಿನವನ್ನು ನಿರ್ದಿಷ್ಟ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಇದಕ್ಕೆಲ್ಲ ಕಾರಣ ಇಂದಿರಾ ಗಾಂಧಿ. ಇಂದಿರಾ ಗಾಂಧಿಯವರು 1966 ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜನವರಿ 24 ಭಾರತದ ಇತಿಹಾಸದಲ್ಲಿ ಮತ್ತು ಮಹಿಳಾ ಸಬಲೀಕರಣದಲ್ಲಿ ಮಹತ್ವದ ದಿನಾಂಕವಾಗಿದೆ.

ಜನವರಿ-23 : ಪರಾಕ್ರಮ ದಿನ

The post ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ – National Girl Child Day appeared first on Current Affairs Kannada.

]]>
https://currentaffairskannada.com/national-girl-child-day/feed/ 0
ಜನವರಿ-23 : ಪರಾಕ್ರಮ ದಿನ https://currentaffairskannada.com/parakram-diwas/ https://currentaffairskannada.com/parakram-diwas/#respond Tue, 23 Jan 2024 09:37:11 +0000 https://www.spardhatimes.com/?p=7856 ಪರಾಕ್ರಮ್ ದಿವಸ್(Parakram Diwas) ಅನ್ನು ಜನವರಿ 23, 2024 ರಂದು ಆಚರಿಸಲಾಗುತ್ತದೆ, ಇದು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಅವರ ಅದಮ್ಯ ಚೇತನ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಅಮೂಲ್ಯ ಕೊಡುಗೆಯನ್ನು…

The post ಜನವರಿ-23 : ಪರಾಕ್ರಮ ದಿನ appeared first on Current Affairs Kannada.

]]>
ಪರಾಕ್ರಮ್ ದಿವಸ್(Parakram Diwas) ಅನ್ನು ಜನವರಿ 23, 2024 ರಂದು ಆಚರಿಸಲಾಗುತ್ತದೆ, ಇದು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಅವರ ಅದಮ್ಯ ಚೇತನ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಅಮೂಲ್ಯ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ರಾಷ್ಟ್ರವು ಪರಾಕ್ರಮ್ ದಿವಸ್ 2024ರ ನೇತಾಜಿಯವರ 127ನೇ ಜನ್ಮ ದಿನವಾಗಿದೆ.

2021 ರಿಂದ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅವರ ಜನ್ಮದಿನವನ್ನು ‘ಪರಾಕ್ರಮ ದಿವಸ’ವನ್ನಾಗಿ ಆಚರಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರ ಮಾಡಿತು. ಇದು ನೇತಾಜಿಯವರ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ ಮತ್ತು ಅವರ ಕೆಚ್ಚೆದೆಯ ಪರಂಪರೆಗೆ ಗೌರವವಾಗಿದೆ. ಈ ದಿನವು ಭಾರತದ ಅತ್ಯಂತ ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರ ಧೈರ್ಯ ಮತ್ತು ಸಂಕಲ್ಪವನ್ನು ನೆನಪಿಸುತ್ತದೆ.

ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ

The post ಜನವರಿ-23 : ಪರಾಕ್ರಮ ದಿನ appeared first on Current Affairs Kannada.

]]>
https://currentaffairskannada.com/parakram-diwas/feed/ 0
ಜನವರಿ 9 : ಪ್ರವಾಸಿ ಭಾರತೀಯ ದಿವಸ್ https://currentaffairskannada.com/non-resident-indian-day/ https://currentaffairskannada.com/non-resident-indian-day/#respond Wed, 10 Jan 2024 04:46:00 +0000 https://www.spardhatimes.com/?p=7733 ಜನವರಿ 9 ರಂದು ಆಚರಿಸಲಾಗುವ ಅನಿವಾಸಿ ಭಾರತೀಯ (NRI-Non-Resident Indian) ದಿನ ಎಂದೂ ಕರೆಯಲ್ಪಡುವ ಪ್ರವಾಸಿ ಭಾರತೀಯ ದಿವಸ್(Pravasi Bharatiya Divas)ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಗಳು ಮತ್ತು ಸಾಧನೆಗಳಿಗೆ ಗೌರವವಾಗಿದೆ. 9 ಜನವರಿ, 1915 ರಂದು, ಮಹಾತ್ಮ ಗಾಂಧಿಯವರು…

The post ಜನವರಿ 9 : ಪ್ರವಾಸಿ ಭಾರತೀಯ ದಿವಸ್ appeared first on Current Affairs Kannada.

]]>
ಜನವರಿ 9 ರಂದು ಆಚರಿಸಲಾಗುವ ಅನಿವಾಸಿ ಭಾರತೀಯ (NRI-Non-Resident Indian) ದಿನ ಎಂದೂ ಕರೆಯಲ್ಪಡುವ ಪ್ರವಾಸಿ ಭಾರತೀಯ ದಿವಸ್(Pravasi Bharatiya Divas)ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಗಳು ಮತ್ತು ಸಾಧನೆಗಳಿಗೆ ಗೌರವವಾಗಿದೆ.

9 ಜನವರಿ, 1915 ರಂದು, ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮತ್ತು ಭಾರತವನ್ನು ಬ್ರಿಟಿಷ್ ಅಥವಾ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಗೊಳಿಸಿದ ಮಹಾನ್ ಪ್ರವಾಸಿ ಎನಿಸಿಕೊಂಡರು. ಅವರು ಭಾರತೀಯರ ಜೀವನವನ್ನು ಬದಲಾಯಿಸಿದ್ದು ಮಾತ್ರವಲ್ಲದೆ ವ್ಯಕ್ತಿಯ ಕನಸುಗಳು ಮತ್ತು ಆಸೆಗಳು ಸ್ಪಷ್ಟವಾಗಿದ್ದರೆ, ಅವನು ಅಥವಾ ಅವಳು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯನ್ನು ಸಹ ಸೃಷ್ಟಿಸಿದರು. ಅನಿವಾಸಿ ಭಾರತೀಯ ಅಥವಾ ಪ್ರವಾಸಿಯಾಗಿ, ಅವರನ್ನು ಭಾರತಕ್ಕೆ ತರಬಹುದಾದ ಬದಲಾವಣೆ ಮತ್ತು ಅಭಿವೃದ್ಧಿಯ ಸಂಕೇತವಾಗಿ ಪ್ರಸ್ತುತಪಡಿಸಲಾಗುತ್ತದೆ.

ಪ್ರವಾಸಿ ಭಾರತೀಯ ದಿವಸ್‌ನ ವಾರ್ಷಿಕ ಆಚರಣೆಯು 2003ರಲ್ಲಿ ಆರಂಭವಾಯಿತು. ಸ್ವಮೂಲ ರೂಪವನ್ನು 2015 ರಲ್ಲಿ ಪರಿಷ್ಕರಣೆ ಮಾಡಲಾಯಿತು, ಇದನ್ನು ದ್ವೈವಾರ್ಷಿಕ ಆಚರಣೆಯಾಗಿ ಪರಿವರ್ತಿಸಲಾಯಿತು. ಈ ಪುನರ್ರಚನೆಯು ಮಧ್ಯಂತರ ವರ್ಷಗಳಲ್ಲಿ ವಿಷಯಾಧಾರಿತ ಸಮ್ಮೇಳನಗಳ ಪರಿಚಯವನ್ನು ಒಳಗೊಂಡಿತ್ತು, ಸಾಗರೋತ್ತರ ಡಯಾಸ್ಪೊರಾ ತಜ್ಞರು, ನೀತಿ-ನಿರ್ಮಾಪಕರು ಮತ್ತು ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತದೆ.

ಪ್ರವಾಸಿ ಭಾರತೀಯ ದಿವಸ್ ಸಮಾವೇಶವು ಪ್ರಪಂಚದ ಹಲವಾರು ಭಾಗಗಳಲ್ಲಿ ವಾಸಿಸುವ ಡಯಾಸ್ಪೊರಾ ಸಮುದಾಯದೊಂದಿಗೆ ಸಂವಹನ ನಡೆಸಲು ಸರ್ಕಾರಕ್ಕೆ ಸೂಕ್ತವಾದ ವೇದಿಕೆಯನ್ನು ಒದಗಿಸುತ್ತದೆ.

ಜನವರಿ 8 : ಭೂಮಿಯ ಪರಿಭ್ರಮಣ ದಿನ

The post ಜನವರಿ 9 : ಪ್ರವಾಸಿ ಭಾರತೀಯ ದಿವಸ್ appeared first on Current Affairs Kannada.

]]>
https://currentaffairskannada.com/non-resident-indian-day/feed/ 0
ಜನವರಿ 8 : ಭೂಮಿಯ ಪರಿಭ್ರಮಣ ದಿನ https://currentaffairskannada.com/earths-rotation-day/ https://currentaffairskannada.com/earths-rotation-day/#respond Mon, 08 Jan 2024 11:43:35 +0000 https://www.spardhatimes.com/?p=7720 ಪ್ರತಿ ವರ್ಷ, ಜನವರಿ 8 ರಂದು ಭೂಮಿ ಪರಿಭ್ರಮಣ(ತಿರುಗುವಿಕೆ) ದಿನ (Earth’s Rotation Day (ಪೃಥ್ವಿ ಪರಿಭ್ರಮಣ ದಿನ))ವನ್ನು ಆಚರಿಸಲಾಗುತ್ತದೆ. 1851 ರಲ್ಲಿ ಫ್ರೆಂಚ್‌ ಭೌತಶಾಸ್ತ್ರಜ್ಞ ಲಿಯೋನ್‌ ಫೌಕಲ್ಟ್‌ ಅವರು ಭೂಮಿ ಹೇಗೆ ತಿರುಗುತ್ತದೆ ಎಂಬುದನ್ನು ಹಿತ್ತಾಳೆಯ ಚೆಂಡಿನಂತಿರುವ ಯಂತ್ರವೊಂದರ ಮೂಲಕ…

The post ಜನವರಿ 8 : ಭೂಮಿಯ ಪರಿಭ್ರಮಣ ದಿನ appeared first on Current Affairs Kannada.

]]>
ಪ್ರತಿ ವರ್ಷ, ಜನವರಿ 8 ರಂದು ಭೂಮಿ ಪರಿಭ್ರಮಣ(ತಿರುಗುವಿಕೆ) ದಿನ (Earth’s Rotation Day (ಪೃಥ್ವಿ ಪರಿಭ್ರಮಣ ದಿನ))ವನ್ನು ಆಚರಿಸಲಾಗುತ್ತದೆ. 1851 ರಲ್ಲಿ ಫ್ರೆಂಚ್‌ ಭೌತಶಾಸ್ತ್ರಜ್ಞ ಲಿಯೋನ್‌ ಫೌಕಲ್ಟ್‌ ಅವರು ಭೂಮಿ ಹೇಗೆ ತಿರುಗುತ್ತದೆ ಎಂಬುದನ್ನು ಹಿತ್ತಾಳೆಯ ಚೆಂಡಿನಂತಿರುವ ಯಂತ್ರವೊಂದರ ಮೂಲಕ ತೋರಿಸಿಕೊಟ್ಟರು. ಈಗ ಫೌಕಲ್ಟ್‌ ಪೆಂಡುಲಮ್‌ ಎಂದು ಕರೆಯಲ್ಪಡುವ ಈ ಯಂತ್ರವು ಭೂಮಿಯ ಪರಿಭ್ರಮಣೆಯನ್ನು ವೈಜ್ಞಾನಿಕವಾಗಿ ತೋರಿಸಿಕೊಟ್ಟಿತು.

ಈ ಪೆಂಡುಲಂ ಈಗ ವಿಶ್ವದೆಲ್ಲೆಡೆ ಇರುವ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ನೋಡಲು ಸಿಗುತ್ತದೆ. ಅಲ್ಲದೆ ಭೂಮಿಯ ಗುರುತ್ವಾಕರ್ಷಣೆಗೂ ಈ ಭೂಮಿಯ ಪರಿಭ್ರಮಣೆಯೇ ಕಾರಣ ಎಂದು ಈ ಪೆಂಡುಲಂ ತೋರಿಸಿಕೊಟ್ಟಿದೆ. ಇಂಥದ್ದೊಂದು ಐತಿಹಾಸಿಕ ಅನ್ವೇಷಣೆ ಮಾಡಿದ ನೆನಪಿಗಾಗಿ ಪ್ರತಿವರ್ಷ ಜನವರಿ 8 ಅನ್ನು ಅತ್ಸ್‌ರ್‍ ರೋಟೇಶನ್‌ ಡೇ ಅಥವಾ ಪೃಥ್ವಿ ಪರಿಭ್ರಮಣ ದಿನ ಎಂದು ಆಚರಿಸಲಾಗುತ್ತದೆ.

ತನ್ನ ಅಕ್ಷದ ಮೇಲೆ ಭೂಮಿಯ ತಿರುಗುವಿಕೆಯ ಪ್ರಮುಖ ಆವಿಷ್ಕಾರವನ್ನು ಗುರುತಿಸಲು ಮೀಸಲಾಗಿರುವ ದಿನವಾಗಿದೆ. ಭೂಮಿಯ ತಿರುಗುವಿಕೆಯ ದಿನವು ಶೈಕ್ಷಣಿಕ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಮಕ್ಕಳಿಗೆ, ನಮ್ಮ ಗ್ರಹದ ಡೈನಾಮಿಕ್ಸ್ ಬಗ್ಗೆ ಕಲಿಯಲು ಮತ್ತು ಪ್ರೇರೇಪಿಸಲು. ಹಾಗೂ ಮಕ್ಕಳಲ್ಲಿ  ಕುತೂಹಲ ಮತ್ತು ಭೂಮಿಯ ತಿರುಗುವಿಕೆಯ ವಿದ್ಯಮಾನದ ಆಳವಾದ ತಿಳುವಳಿಕೆಯನ್ನು ಪ್ರೋತ್ಸಾಹಿಸುತ್ತದೆ.

ಲಿಯಾನ್ ಫೌಕಾಲ್ಟ್ (Léon Foucault) ಅವರ ಪ್ರಯೋಗವು ಭೂಮಿಯ ತಿರುಗುವಿಕೆಯನ್ನು ಸಾಬೀತುಪಡಿಸಿತು ಮಾತ್ರವಲ್ಲದೆ ಪರಿಕಲ್ಪನೆಯನ್ನು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಮತ್ತು ಅರ್ಥವಾಗುವಂತೆ ಮಾಡಿದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮ ಹೇಗಿತ್ತು..? ಇಲ್ಲಿದೆ ಸಂಪೂರ್ಣ ಚಿತ್ರಣ

ಭಾರತದ ರಾಷ್ಟ್ರೀಯ ಚಿಹ್ನೆಗಳು : National Symbols of India

The post ಜನವರಿ 8 : ಭೂಮಿಯ ಪರಿಭ್ರಮಣ ದಿನ appeared first on Current Affairs Kannada.

]]>
https://currentaffairskannada.com/earths-rotation-day/feed/ 0
‘ವೀರ್ ಬಾಲ್ ದಿವಸ್’ ಆಚರಣೆ ವಿಶೇಷತೆ ಏನು..? ಇತಿಹಾಸ ಏನು..? https://currentaffairskannada.com/veer-bal-diwas/ https://currentaffairskannada.com/veer-bal-diwas/#respond Wed, 27 Dec 2023 05:33:36 +0000 https://www.spardhatimes.com/?p=7511 2022ರಿಂದ ದೇಶದಲ್ಲಿ ಈ ದಿನವನ್ನು ವೀರ್ ಬಾಲ್ ದಿವಸ್ (ವೀರ ಮಕ್ಕಳ ದಿನ- Veer Bal Diwas) ಎಂದು ಆಚರಿಸಲಾಗುತ್ತದೆ. ವೀರ್ ಬಾಲ್ ದಿವಸ್ ಎಂದರೇನು, ಅದರ ಇತಿಹಾಸವೇನು ಮತ್ತು ಅದರ ಪ್ರಾಮುಖ್ಯತೆ ಏನು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಈ…

The post ‘ವೀರ್ ಬಾಲ್ ದಿವಸ್’ ಆಚರಣೆ ವಿಶೇಷತೆ ಏನು..? ಇತಿಹಾಸ ಏನು..? appeared first on Current Affairs Kannada.

]]>
2022ರಿಂದ ದೇಶದಲ್ಲಿ ಈ ದಿನವನ್ನು ವೀರ್ ಬಾಲ್ ದಿವಸ್ (ವೀರ ಮಕ್ಕಳ ದಿನ- Veer Bal Diwas) ಎಂದು ಆಚರಿಸಲಾಗುತ್ತದೆ. ವೀರ್ ಬಾಲ್ ದಿವಸ್ ಎಂದರೇನು, ಅದರ ಇತಿಹಾಸವೇನು ಮತ್ತು ಅದರ ಪ್ರಾಮುಖ್ಯತೆ ಏನು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ. ಮೊಘಲ್ ಅರಸರಿಂದ ಗಲ್ಲಿಗೇರಿಸಲ್ಪಟ್ಟ 10ನೇ ಸಿಖ್‌ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥವಾಗಿ ಡಿಸೆಂಬರ್ 26ನ್ನು ‘ವೀರ ಬಲ ದಿವಸ’ ಎಂದು ಆಚರಿಸಲಾಗುತ್ತದೆ.

ಮೊಘಲರ ಆಳ್ವಿಕೆಯಲ್ಲಿ ಪಂಜಾಬಿನಲ್ಲಿ ಸಿಖ್ಖರ ನಾಯಕರಾಗಿದ್ದ ಗುರು ಗೋವಿಂದ್ ಸಿಂಗ್ ಅವರಿಗೆ ನಾಲ್ಕು ಗಂಡು ಮಕ್ಕಳಿದ್ದರು. ಅವರನ್ನು ಚಾರ್ ಸಾಹಿಬ್ಜಾದೆ ಖಾಲ್ಸಾ ಎಂದು ಕರೆಯಲಾಯಿತು. ಗೋವಿಂದ್ ಸಿಂಗ್ ಅವರು 1699 ರಲ್ಲಿ ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿತ್ತು.

ಗುರು ಗೋವಿಂದ್ ಸಿಂಗ್ ಮೂರು ಹೆಂಡತಿಯರಿಂದ ನಾಲ್ಕು ಗಂಡು ಮಕ್ಕಳನ್ನು ಹೊಂದಿದ್ದರು: ಅಜಿತ್, ಜುಝಾರ್, ಜೋರಾವರ್ ಮತ್ತು ಫತೇಹ್, ಅವರೆಲ್ಲರೂ ಖಾಲ್ಸಾದ ಭಾಗವಾಗಿದ್ದರು. 19 ವರ್ಷ ತುಂಬುವ ಮುನ್ನವೇ ಆ ನಾಲ್ವರು ಮಕ್ಕಳು ಮೊಘಲ್ ಸೇನೆಯಿಂದ ಕೊಲ್ಲಲ್ಪಟ್ಟರು.

ಖಾಲ್ಸಾದ ನಾಲ್ಕು ಸಾಹಿಬ್ಜಾದಾಗಳ ತ್ಯಾಗವನ್ನು ಗೌರವಿಸಲು ವೀರ್ ಬಾಲ್ ದಿವಾಸ್ ಅನ್ನು ಆಚರಿಸಲಾಗುತ್ತದೆ. ಕೊನೆಯ ಸಿಖ್ ಗುರು ಗೋವಿಂದ್ ಸಿಂಗ್ ಅವರ ಚಿಕ್ಕ ಮಕ್ಕಳು ತಮ್ಮ ನಂಬಿಕೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಜೀವನ ಕಥೆಯನ್ನು ನೆನಪಿಟ್ಟುಕೊಳ್ಳಲು ಮತ್ತು ಅವರು ಹೇಗೆ ಕ್ರೂರವಾಗಿ ಕೊಲ್ಲಲ್ಪಟ್ಟರು ಎಂಬುದನ್ನು ತಿಳಿದುಕೊಳ್ಳಲು ಈ ದಿನವನ್ನು ವಿಶೇಷ ದಿನ ಎಂದು ಪರಿಗಣಿಸಲಾಗಿದೆ.

ವಿಶೇಷವಾಗಿ ಜೋರಾವರ್ (8) ಮತ್ತು ಫತೇ ಸಿಂಗ್ (5) ಸರ್ಸಾ ನದಿಯ ದಡದಲ್ಲಿ ನಡೆದ ಯುದ್ಧದಲ್ಲಿ ಮೊಘಲ್ ಸೈನ್ಯದಿಂದ ಸೆರೆಹಿಡಿಯಲ್ಪಟ್ಟರು. ಇಸ್ಲಾಂಗೆ ಮತಾಂತರವಾಗದ ಕಾರಣ ಅವರನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತದೆ.

ಅವರ ಹುತಾತ್ಮ ದಿನದ ಗೌರವಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಡಿಸೆಂಬರ್ 26 ರಂದು ವೀರ್ ಬಾಲ್ ದಿವಸ್ ಎಂದು ಘೋಷಿಸಿದ್ದರು. ಕಳೆದ ಜನವರಿ 2022 ರಂದು, ಗುರು ಗೋವಿಂದ್ ಸಿಂಗ್ ಅವರ ಜನ್ಮದಿನದಂದು, ಡಿಸೆಂಬರ್ 26 ರಂದು ಸಿಖ್ ಗುರುಗಳ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರ ಹುತಾತ್ಮತೆಯನ್ನು ನೆನಪಿಟ್ಟುಕೊಳ್ಳಲು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು.

ಭಾರತೀಯ ರೈಲ್ವೆ ಕುರಿತ ಸಂಪೂರ್ಣ ಮಾಹಿತಿ

The post ‘ವೀರ್ ಬಾಲ್ ದಿವಸ್’ ಆಚರಣೆ ವಿಶೇಷತೆ ಏನು..? ಇತಿಹಾಸ ಏನು..? appeared first on Current Affairs Kannada.

]]>
https://currentaffairskannada.com/veer-bal-diwas/feed/ 0