GK – Current Affairs Kannada https://currentaffairskannada.com Current Affairs Kannada Mon, 03 Mar 2025 02:59:44 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png GK – Current Affairs Kannada https://currentaffairskannada.com 32 32 Mixtures – ಮಿಶ್ರಣಗಳು https://currentaffairskannada.com/mixtures-study/ Sun, 02 Mar 2025 17:58:29 +0000 http://www.spardhatimes.com/?p=2689 Mixtures : ಎರಡು ಅಥವಾ ಹೆಚ್ಚಿನ ಮೂಲವಸ್ತುಗಳು ಭೌತಿಕವಾಗಿ ಬೆರೆಯುವುದರಿಂದ ಮಿಶ್ರಣಗಳು ಉಂಟಾಗುತ್ತವೆ. ಆದರೆ ಮಿಶ್ರಣದಲ್ಲಿರುವ ವಸ್ತುಗಳು ತಮ್ಮ ಗುಣಗಳನ್ನು ಕಳೆದುಕೊಂಡಿರುವುದಿಲ್ಲ.ಉದಾ : ಧಾನ್ಯಗಳು ಸಸ್ಯಗಳಲ್ಲಿದ್ದಾಗ ಶುದ್ಧವಾಗಿರುತ್ತದೆ. ಆದರೆ ಇವುಗಳನ್ನು ಹುಲ್ಲಿನಿಂದ ಬೇರ್ಪಡಿಸುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಧೂಳು,…

The post Mixtures – ಮಿಶ್ರಣಗಳು appeared first on Current Affairs Kannada.

]]>
Mixtures : ಎರಡು ಅಥವಾ ಹೆಚ್ಚಿನ ಮೂಲವಸ್ತುಗಳು ಭೌತಿಕವಾಗಿ ಬೆರೆಯುವುದರಿಂದ ಮಿಶ್ರಣಗಳು ಉಂಟಾಗುತ್ತವೆ. ಆದರೆ ಮಿಶ್ರಣದಲ್ಲಿರುವ ವಸ್ತುಗಳು ತಮ್ಮ ಗುಣಗಳನ್ನು ಕಳೆದುಕೊಂಡಿರುವುದಿಲ್ಲ.
ಉದಾ : ಧಾನ್ಯಗಳು ಸಸ್ಯಗಳಲ್ಲಿದ್ದಾಗ ಶುದ್ಧವಾಗಿರುತ್ತದೆ. ಆದರೆ ಇವುಗಳನ್ನು ಹುಲ್ಲಿನಿಂದ ಬೇರ್ಪಡಿಸುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಧೂಳು, ಮಣ್ಣು, ಕಸ, ಕಲ್ಲು, ಕ್ರಿಮಿ- ಕೀಟಗಳು ಮಿಶ್ರಣಗೊಂಡಿರುತ್ತವೆ.

• ಮಿಶ್ರಣದ ಘಟಕಗಳನ್ನು ಬೇರ್ಪಡಿಸುವ ವಿಧಾನಗಳು

1. ಕೈಗಳಿಂದ ಆರಿಸುವುದು :
ಈ ವಿಧಾನದಲ್ಲಿ ವಸ್ತುಗಳನ್ನು ಅವುಗಳ ಬಣ್ಣ, ಆಕಾರ ಮತ್ತು ಗಾತ್ರಗಳ ಆಧಾರದಿಂದ ಬೇರ್ಪಡಿಸಲಾಗುತ್ತದೆ. ಉದಾ: ಪ್ರತಿದಿನ ನಾವು ಅಕ್ಕಿ, ರಾಗಿ, ಜೋಳ, ಗೋಧಿ ಮುಂತಾದ ಆಃಆರ ಪದಾರ್ಥಗಳಲ್ಲಿರುವ ಕಲ್ಲು, ಮಣ್ಣಿನ ಹೆಂಟೆಗಳು, ಹುಲ್ಲಿನ ಬೀಜಗಳು , ಕಡ್ಡಿಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ.

2. ಜರಡಿ ಹಿಡಿಯುವುದು :
ಈ ವಿಧಾನದಲ್ಲಿ ಜರಡಿಯನ್ನು ಬಳಸಲಾಗುತ್ತದೆ. ಜರಡಿಗಳ ಬಳಕೆಯಿಂದ ಆಹಾರದಾನ್ಯಗಳನ್ನು ಶುದ್ಧಗೊಳಿಸಬಹುದು. ಜರಡಿಗಳ ಬಳಕೆಯಿಂದ ಸಣ್ಣ ದಪ್ಪ ಕಾಳುಗಳನ್ನು ಬೇರ್ಪಡಿಸಬಹುದು. ಸಣ್ಣ ಸಣ್ಣ ಕಲ್ಲು ಹಾಗೂ ಹೊಟ್ಟನ್ನೂ ಬೇರ್ಪಡಿಸಬಹುದು.

3. ಬಡಿಯುವುದು :
ಈ ವಿಧಾನವನ್ನು ಆಹಾರ ಪದಾರ್ಥಗಳನ್ನು ಅವುಗಳ ಸಸ್ಯಗಳಿಂದ ಬೇರ್ಪಡಿಸಲು ಬಳಸುತ್ತಾರೆ. ಉದಾ : ರಾಗಿ, ಭತ್ತ, ಗೋಧಿ, ಧನಿಯಾ, ತೊಗರಿ ಕಾಳು, ಅವರೆ ಕಾಳು ಮುಂತಾದ ಆಹಾರ ಪದಾರ್ಥಗಳನ್ನು ಅವುಗಳ ಕಾಯಿ ಸಸ್ಯಗಳಿಂದ ಬೇರ್ಪಡಿಸಲು ಈ ವಿಧಾನ ಸೂಕ್ತವಾಗಿದೆ. ಚೆನ್ನಾಗಿ ಒಣಗಿಸಿದ ನಂತರ ಬಡಿಯುವದರಿಂದ ಕಾಳುಗಳು ಅವುಗಳ ತೆನೆ, ಕಾಯಿಗಳಿಂದ ಬೇರ್ಪಡುತ್ತವೆ. ಇದಲ್ಲದೆ ಕೆಲವು ಕಡೆ ಕೊಯ್ದ ಪೈರಿನ ಮೇಲೆ ಭಾರವಾದ ಗುಂಡು ಕಲ್ಲನ್ನು ಸತತವಾಗಿ ಓಡಿಸುವುದರಿಂದಲೂ ಧಾನ್ಯಗಳನ್ನು ಬೇರ್ಪಡಿಸುವರು.

4. ತೂರುವುದು :
ಈ ವಿಧಾನವನ್ನು ಹಗುರ ಮತ್ತು ಭಾರವಾದ ಕಣಗಳನ್ನು ಬೇರ್ಪಡಿಸಲು ಬಳಸುತ್ತಾರೆ. ಉದಾ: ಧಾನ್ಯಗಳನ್ನು, ಕಾಳುಗಳನ್ನು ಬಡಿಯುವುದರ ಮೂಲಕ ಸಸ್ಯದಿಂದ ಬೇರ್ಪಡಿಸುತ್ತಾರೆ. ಆದರೆ ಆ ಕಾಳುಗಳಲ್ಲಿ ಹುಲ್ಲಿನ ಗರಿಗಳು, ಹೊಟ್ಟು, ಕಾಳುಗಳು ಇರುತ್ತವೆ. ಇದನ್ನು ಗಾಳಿಗೆ ತೂರಿದಾಗ ಭಾರವಾದ ಗಟ್ಟಿ ಕಾಳುಗಳು ಅಲ್ಲಿಯೇ ಬೀಲುತ್ತವೆ. ಆದರೆ ಹಗುರವಾದ ಜೊಳ್ಳು ಕಾಳುಗಳು ಹುಲ್ಲಿನ ಗರಿಗಳು, ಹೊಟ್ಟು ಮುಂತಾದವು ಗಾಳಿಯೊಂದಿಗೆ ಮುಂದೆ ಹೋಗುತ್ತವೆ.

5. ಬಸಿಯುವಿಕೆ :
ದ್ರವದಲ್ಲಿ ಇರುವ ಕರಗದ ಭಾರವಾದ ಕಣಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ಉದಾ : ಟೀ ಮತ್ತು ಕಾಫಿ ತಯಾರಿಸುವಾಗ ಅವುಗಳನ್ನು ಬಸಿಯಲಾಗುತ್ತದೆ. ಅಡಿಗೆ ಮಾಡುವಾಗ ತರಕಾರಿ ಮತ್ತು ಧಾನ್ಯಗಳನ್ನು ತೊಳೆಯುವುದರಿಂದ ಹಗುರವಾದ ಕಶ್ಮಲಗಳನ್ನು ಬೇರ್ಪಡಿಸುವರು.

6. ಶೋಧಿಸುವುದು :
ಕರಗದಿರುವ ಸಣ್ಣ ಕಣಗಳನ್ನು ಶೋಧಿಸುವುದರಿಂದ ಬೇಪ್ಡಿಸಬಹುದು,. ಕೆಲವು ಬಾರಿ ನೀರಿನಲ್ಲಿ ಮರಳು, ಧೂಳು ಸೇರಿರುವ ಸಂಭವವಿರುತ್ತವೆ. ಇದರಿಂದಾಗಿ ನೀರನ್ನು ಶುದ್ಧೀಕರಿಸಲು ಪ್ರಯೋಗಶಾಲೆಯಲ್ಲಿ ಶೋಧನಾ ಪತ್ರ ಉಪಯೋಗಿಸಿ ಶುದ್ಧ ನೀರನ್ನು ಪಡೆಯಬಹುದಾಗಿದೆ.

7. ಇಂಗಿಸುವುದು :
ಈ ವಿಧಾನವನ್ನು ಕರಗುವಿಕೆಯ ಆಧಾರದ ಮೇಲೆ ಅಳವಡಿಸಲಾಗಿದೆ. ನೀರಿನಲ್ಲಿ ಸಕ್ಕರೆ, ಉಪ್ಪು, ಬೆಲ್ಲ ಮುಂತಾದ ವಸ್ತುಗಳು ಕರಗಿದಾಗ ದ್ರಾವಣ ಉಂಟಾಗುತ್ತದೆ. ಇಂತಹ ದ್ರಾವಣದಲ್ಲಿ ಕರಗಿರುವ ವಸ್ತುವನ್ನು ಅದರಲ್ಲಿರುವ ನೀರನ್ನು ಆವಿಯಾಗಿಸುವ ಮೂಲಕ ಬೇರ್ಪಡಿಸಬಹುದು. ಈ ವಿಧಾನಕ್ಕೆ ‘ಬಾಷ್ಪೀಭವನ ಅಥವಾ ಇಂಗಿಸುವುದು’ ಎಂದು ಕರೆಯುತ್ತಾರೆ, ಸಮುದ್ರದ ನೀರಿನಿಂದ ಉಪ್ಪನ್ನು ಪಡೆಯಲು ಇದೇ ವಿಧಾನವನ್ನು ಅನುಸರಿಸುತ್ತಾರೆ.

8. ಭಟ್ಟಿಇಳಿಸುವುದು :
ಅತ್ಯಂತ ಶುಧ್ಧವಾದ ನೀರನ್ನು ಪಡೆಯುವ ವಿಧಾನವಾಗಿದೆ. ನೀರಿನಲ್ಲಿ ಕರಗಿರುವ ಎಲ್ಲಾ ಕಶ್ಮಲಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ನೀರನ್ನು ಕಾಯಿಸಿದಾಗ ಅದು ಕುದಿದು ಆವಿಯಾಗುತ್ತದೆ. ಆವಿಯನ್ನು ತಂಪುಮಾಡಿದಾಗ ದ್ರವರೂಪಕ್ಕೆ ಬರುತ್ತದೆ. ಈ ನೀರು ಅತ್ಯಂತ ಶುದ್ಧವಾಗಿರುತ್ತದೆ. ನೀರಿನಲ್ಲಿ ಕರಗಿದ ಮತ್ತು ಕರಗದಿರುವ ಎಲ್ಲಾ ರೀತಿಯ ಕಶ್ಮಲಗಳು ಅಲ್ಲಿಯೇ ಉಳಿದು ಶುದ್ಧ ನೀರು ಮಾತ್ರ ಆವಿಯಾಗುತ್ತದೆ.

9. ಉತ್ಪತನ :
ಘನವಸ್ತುಗಳಿಗೆ ಶಾಖ ಕೊಟ್ಟಾಗ ಅವು ದ್ರವರೂಪಕ್ಕೆ , ದ್ರವವನ್ನು ತಂಪುಮಾಡಿದಾಗ ಘನರೂಪಕ್ಕೆ ಬದಲಾಗುತ್ತದೆ. ಆದರೆ ,ಏಲಿನ ಕ್ರಿಯೆಗೆ ಅಪವಾದವಾಗಿ ಕೆಲವು ಘನ ವಸ್ತುಗಳು ಶಾಖದಿಂದ ದ್ರವರೂಪಕ್ಕೆ ಬಾರದೆ ನೇರವಾಗಿ ಅನಿಲರೂಪಕ್ಕೆ ಬರುತ್ತವೆ. ಇಂತಹ ಅನಿಲವಸ್ತುಗಳನ್ನು ತಂಪು ಮಾಡಿದಾಗ ದ್ರವರೂಪಕ್ಕೆ ಬಾರದೆ ನೇರವಾಗಿ ಘನರೂಪಕ್ಕೆ ಬರುತ್ತವೆ. ಈ ಕ್ರಿಯೆಯನ್ನು ‘ ಉತ್ಪತನ’ ಎನ್ನುವರು. ಇಂತಹ ವಸ್ತುಗಳಿಗೆ ಉತ್ಪತನ ಹೊಂದುವ ವಸ್ತುಗಳು ಎನ್ನುತ್ತಾರೆ.
ಉದಾ: ಕರ್ಪೂರ, ಅಯೋಡಿನ್,ನುಸಿಗುಳಿಗೆ, ಒಣಹಿಮ ಇತ್ಯಾದಿ.

10. ಸಾಂದ್ರತೆ ಆಧಾರದ ಮೇಲೆ ದ್ರವಗಳನ್ನು ಬೇರ್ಪಡಿಸುವಿಕೆ :
ಎಣ್ಣೆಯೊಂದಿಗೆ ನೀರು ಬೆರೆತಿದ್ದರೆ ಅಂತಹ ಮಿಶ್ರಣವನ್ನು ಸಾಂದ್ರತೆ ಆಧಾರದಲ್ಲಿ ಬೇರ್ಪಡಿಸಲಾಗುತ್ತದೆ. ಎಣ್ಣೆ ಮತ್ತು ನೀರಿನ ಮಿಶ್ರಣದಲ್ಲಿ ಎಣ್ಣೆ ಸಾಂದ್ರತೆ ನೀರಿಗಿಂತ ಕಡಿಮೆ ಇರುವುದರಿಂದ ಎಣ್ಣೆ ನೀರಿನ ಮೇಲೆ ತೇಲುತ್ತದೆ. ಈ ವಿಧಾನದಲ್ಲಿ ಇದನ್ನು ಬೇರ್ಪಡಿಸಬಹುದು.

11. ಕಾಂತ ಶಕ್ತಿಯಿಂದ ಬೇರ್ಪಡಿಸುವಿಕೆ :
ಮಿಶ್ರಣವೊಂದರಲ್ಲಿ ಕಾಂತದಿಂದ ಆಕರ್ಷಿಸಲ್ಪಡುವ ಕಬ್ಬಿಣ, ನಿಕ್ಕಲ್, ಕೋಬಾಲ್ಟ್, ಆಲ್ನೀಕೋ ಮುಂತಾದ ಕಾಂತೀಯ ವಸ್ತುಗಳಿದ್ದರೆ ಅದನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ.
ಉದಾ: ಮಣ್ಣಿನಲ್ಲಿರುವ ಕಬ್ಬಿಣದ ಚೂರುಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ಕಾಂತದಿಂದ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಟ್ಟು ಮಣ್ಣಿನಿಂದ ಬೇರ್ಪಡುತ್ತವೆ.

12. ಆಂಶಿಕ ಆಸವನ ( ಭಟ್ಟಿ ಇಳಿಸುವಿಕೆ) :
ದ್ರಾವಣವೊಂದರಲ್ಲಿ ಬೇರೆ ಬೇರೆ ಕುದಿಬಿಂದುಗಳನ್ನು ಹೊಂದಿರುವ ವಿವಿಧ ಘಟಕಗಳನ್ನು ಬೇರ್ಪಡಿಸಲು ಈ ವಿಧಾನವನ್ನು ಬಳಸುತ್ತಾರೆ.
ಉದಾ: ಪೆಟ್ರೋಲಿಯಂ ( ಕಚ್ಚಾತೈಲ)ವನ್ನು ಕಾಯಿಸಿದಾಗ ಅದರಲ್ಲಿಯ ಪೆಟ್ರೋಲ್, ಡೀಸಲ್ ಸೀಮೆಎಣ್ಣೆ ಘಟಕಗಳು ವಿವಿಧ ಉಷ್ಣತೆಗಳಲ್ಲಿ ಆವಿಯಾಗುತ್ತದೆ. ನೀರು ಮತ್ತು ಮಧ್ಯಸಾರವನ್ನು ಬೇರ್ಪಡಿಸುವ ವಿಧಾನವಾಗಿದೆ.

The post Mixtures – ಮಿಶ್ರಣಗಳು appeared first on Current Affairs Kannada.

]]>
Fathers of Biology : ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು https://currentaffairskannada.com/list-of-different-branches-and-their-fathers-of-biology/ https://currentaffairskannada.com/list-of-different-branches-and-their-fathers-of-biology/#respond Sun, 02 Mar 2025 07:12:25 +0000 https://currentaffairskannada.com/?p=83 Fathers of Biology 1.ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ – ಎಂಪೇಡೋಕಲ್ಸ್2.ಮೆಡಿಸಿನ್ ತಂದೆ – ಹಿಪ್ಪೊಕ್ರೇಟ್ಸ್3.ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ – ಅರಿಸ್ಟಾಟಲ್4.ಬಾಟನಿ ಮತ್ತು ಪರಿಸರವಿಜ್ಞಾನದ ತಂದೆ – ಥಿಯೋಫ್ರಾಸ್ಟಸ್5.ಅನ್ಯಾಟಮಿಯ ತಂದೆ – ಆಂಡ್ರಿಯಾಸ್ ವೆಸಲಿಯಸ್ (1514 -1564)6.ತುಲನಾತ್ಮಕ ಅಂಗರಚನಾಶಾಸ್ತ್ರದ ಪಿತಾಮಹ…

The post Fathers of Biology : ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು appeared first on Current Affairs Kannada.

]]>
Fathers of Biology

1.ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ – ಎಂಪೇಡೋಕಲ್ಸ್
2.ಮೆಡಿಸಿನ್ ತಂದೆ – ಹಿಪ್ಪೊಕ್ರೇಟ್ಸ್
3.ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ – ಅರಿಸ್ಟಾಟಲ್
4.ಬಾಟನಿ ಮತ್ತು ಪರಿಸರವಿಜ್ಞಾನದ ತಂದೆ – ಥಿಯೋಫ್ರಾಸ್ಟಸ್
5.ಅನ್ಯಾಟಮಿಯ ತಂದೆ – ಆಂಡ್ರಿಯಾಸ್ ವೆಸಲಿಯಸ್ (1514 -1564)
6.ತುಲನಾತ್ಮಕ ಅಂಗರಚನಾಶಾಸ್ತ್ರದ ಪಿತಾಮಹ – ಜಾರ್ಜ್ ಕುವಿಯರ್ (1769-1832)
7.ಸೂಕ್ಷ್ಮ ಅಂಗರಚನಾಶಾಸ್ತ್ರದ ತಂದೆ – ಮೊರ್ಸೆಲ್ಲೋ ಮಾಲ್ಪಿಘಿ (1628-1694)
8.ಪ್ಲಾಂಟ್ ಅಂಗರಚನಾಶಾಸ್ತ್ರದ ತಂದೆ – ಎನ್.ಗ್ರೂ (1641-1712)
9.ತಂದೆ / ಹಿಸ್ಟಾಲಜಿ ಸಂಸ್ಥಾಪಕ – ಫ್ರಾಂಕೋಯಿಸ್ ಬಿಚಾಟ್ (1717-1802)
10.ಮೈಕ್ರೋಸ್ಕೋಪಿ ಪಿತಾಮಹ – ಆಂಟನಿ ವಾನ್ ಲೀವೆನ್ಹೋಕ್ (1632-1723)

11.ಸೈಟೋಲಜಿ ತಂದೆ – ರಾಬರ್ಟ್ ಹುಕ್ (1635-1703)
12.ಆಧುನಿಕ ಸೈಟೋಲಜಿ ಪಿತಾಮಹ – ಸ್ವಾನ್ಸನ್
13.ಜೀವಿವರ್ಗೀಕರಣ ಶಾಸ್ತ್ರ ಮತ್ತು ನಾಮಕರಣದ ಪಿತಾಮಹ – ಕ್ಯಾರೊಲಸ್ ಲಿನ್ನಿಯಸ್ (1707-1778)
14.ಭ್ರೂಣಶಾಸ್ತ್ರದ ಸ್ಥಾಪಕರು – ಅ.ಈ.ವೋಲ್ಫ್ (1738-1794)
15.ಆಧುನಿಕ ಭ್ರೂಣಶಾಸ್ತ್ರದ ತಂದೆ – ವಾನ್ ಬೇರ್ (1792-1876)
16.ಪ್ರತಿರಕ್ಷಾ ಪಿತಾಮಹ – ಎಡ್ವರ್ಡ್ ಜೆನ್ನರ್ (1749-1823)
17.ಎಪಿಡೆಮಿಯಾಲಜಿ ತಂದೆ – ಜಾನ್ ಸ್ನೋ
18.ಬಯೋಕೆಮಿಸ್ಟ್ರಿ ತಂದೆ – ಲೈಬಿಗ್
19.ಸಸ್ಯ ಶರೀರವಿಜ್ಞಾನದ ತಂದೆ – ಸ್ಟೀಫನ್ ಹೇಲ್ಸ್ (1677-1761)
20.ಪ್ರಾಯೋಗಿಕ ಶರೀರಶಾಸ್ತ್ರದ ತಂದೆ – ಗ್ಯಾಲೆನ್

21.ಮೈಕೋಲಜಿ ಪಿತಾಮಹ – ಮೈಕೆಲಿ
22.ಬ್ರಯೋಲಜಿ ತಂದೆ – ಹೆಡ್ವಿಗ್
23.ಪ್ಲಾಂಟ್ ಪ್ಯಾಥಾಲಜಿ ಪಿತಾಮಹ – ಡಿ ಬ್ಯಾರಿ
24.ಆಧುನಿಕ ಸರ್ಜರಿಯ ತಂದೆ – ಪಾರೆ.
25.ಪ್ಯಾರಾಸಿಟಾಲಜಿ ಪಿತಾಮಹ – ಪ್ಲ್ಯಾಟರ್.
26.ಎಟಿಪಿ ಸೈಕಲ್ನ ತಂದೆ – ಲಿಪ್ಮನ್.
27.ಅಂಟಿಸ್ಪ್ಟಿಕ್ ಸರ್ಜರಿಯ ತಂದೆ – ಜೋಸೆಫ್ ಲಿಸ್ಟರ್.
28.ಬ್ಯಾಕ್ಟೀರಿಯಾಶಾಸ್ತ್ರದ ತಂದೆ – ಕೋಚ್
29.ಸೂಕ್ಷ್ಮ ಜೀವವಿಜ್ಞಾನದ ತಂದೆ – ಪಾಶ್ಚರ್
30.ಪಾಲಿನೋಲಜಿ ಪಿತಾಮಹ – ಎರ್ಡ್ಮ್ಯಾನ್.

31.ಎಂಡೋಕ್ರೈನಾಲಜಿ ಪಿತಾಮಹ – ಥಾಮಸ್ ಅಡಿಸನ್
32.ಒತ್ತಡದ ಶರೀರಶಾಸ್ತ್ರದ ಪಿತಾಮಹ – ಹ್ಯಾನ್ಸ್ ಸೆಲೀ
33.ಕಂಡೀಶನಲ್ ರೆಫ್ಲೆಕ್ಸಸ್ನ ಪಿತಾಮಹ- ಪಾವ್ಲೋವ್.
34.ಇಸಿಜಿ ತಂದೆ – ಎಂಟೊವೆನ್
35.ಜೆರೋಂಟೊಲಜಿ ಪಿತಾಮಹ – ಕೊರೆನ್ಚೆಸ್ಕ್
36.ಪ್ಯಾಲೇಯೊಂಟೊಲಜಿ ಪಿತಾಮಹ – ಲಿಯೊನಾರ್ಡೊ ಡಾ ವಿನ್ಸಿ
37.ಮಾಡರ್ನ್ ಪ್ಯಾಲೇಯೊಂಟೊಲಜಿ ಪಿತಾಮಹ – ಕುವಿಯರ್
38.ಎಥಾಲಜಿ ಪಿತಾಮಹ – ಕೊನ್ರಾಡ್ ಲೋರೆಂಟ್ಜ್
39.ಆಂಟಿಬಯಾಟಿಕ್ಗಳ ತಂದೆ – ಅಲೆಕ್ಸಾಂಡರ್ ಫ್ಲೆಮಿಂಗ್ (1881-1955)
40.ರಕ್ತ ಪರಿಚಲನೆ ಪಿತಾಮಹ – ವಿಲಿಯಂ ಹಾರ್ವೆ (1578-1657)

41.ರಕ್ತ ಗುಂಪುಗಳ ತಂದೆ – ಲ್ಯಾಂಡ್ಸ್ಟೈನರ್
42.ಚೆಮೊಥೆಫೀಯ ತಂದೆ – ಪಾಲ್ ಎಹ್ಲಿಹಿಚ್
43.ಹಸಿರು ಕ್ರಾಂತಿಯ ಪಿತಾಮಹ – ನಾರ್ಮನ್ ಇ.ಬೋರ್ಲಾಗ್
44.ಭಾರತೀಯ ಹಸಿರು ಕ್ರಾಂತಿಯ ತಂದೆ – ಎಂ.ಎಸ್.ಸ್ವಾನಿನಾಥನ್
45.ಟಿಶ್ಯೂ ಸಂಸ್ಕೃತಿಯ ತಂದೆ – ಹ್ಯಾರಿಸನ್
46.ಪ್ಯಾರಾಸಿಟಾಲಜಿ ಪಿತಾಮಹ – ಪ್ಲ್ಯಾಟರ್
47.ಭಾರತದ ಬರ್ಡ್ಮನ್ – ಸಲೀಂ ಅಲಿ
48.ಭಾರತೀಯ ಪಾಲಿಯೊಬೊಟನಿ ತಂದೆ – ಬಿರ್ಬಾಲ್ ಸಾಹ್ನಿ
49.ವಿಕಿರಣ ಜೀವಶಾಸ್ತ್ರದ ತಂದೆ – ಮುಲ್ಲರ್
50.ಜೀನ್ ಥೆರಪಿ ತಂದೆ – ಆಂಡರ್ಸನ್

51.ಜೆನೆಟಿಕ್ಸ್ ಪಿತಾಮಹ – ಗ್ರೆಗರ್ ಜೋಹಾನ್ ಮೆಂಡೆಲ್
52.ಮಾಡರ್ನ್ ಜೆನೆಟಿಕ್ಸ್ ಪಿತಾಮಹ – ಬೇಟ್ಸನ್
53.ಪಾಲಿಜೆನಿಕ್ ಇನ್ಹೆರಿಟೆನ್ಸ್ನ ತಂದೆ- ಕೊಲ್ಯೂಟರ್.
54.ಯುಜೆನಿಕ್ಸ್ ಪಿತಾಮಹ – ಫ್ರಾನ್ಸಿಸ್ ಗಾಲ್ಟನ್
55.ಬಯೋಕೆಮಿಕಲ್ / ಹ್ಯೂಮನ್ ಜೆನಿಟಿಕ್ಸ್ನ ತಂದೆ – ಆರ್ಚಿಬಾಲ್ಡ್ ಗ್ಯಾರೋಡ್
56.ಪ್ರಾಯೋಗಿಕ ಜೆನೆಟಿಕ್ಸ್ನ ತಂದೆ – ಖಿ.ಊ.ಮಾರ್ಗನ್
57.ಜೆನೆಟಿಕ್ ಇಂಜಿನಿಯರಿಂಗ್ನ ತಂದೆ – ಪಾಲ್ ಬರ್ಗ್
58.ಡಿಎನ್ಎ ಪ್ರಿಂಟಿಂಗ್ನ ತಂದೆ – ಅಲೀ ಜೆಫ್ರೀಸ್
59.ಮಾಡರ್ನ್ ಬಾಟನಿ ಪಿತಾಮಹ – ಕೆ.ಬಾಹಿನ್ (1560-1624)
60.ವೈರಾಲಜಿ ಪಿತಾಮಹ – ಸ್ಟಾನ್ಲಿ
61.ವರ್ಣಶಾಸ್ತ್ರದ ಪಿತಾಮಹ – ಮೈಕೆಲ್ ಟ್ವೆಟ್

The post Fathers of Biology : ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು appeared first on Current Affairs Kannada.

]]>
https://currentaffairskannada.com/list-of-different-branches-and-their-fathers-of-biology/feed/ 0
Geography of Karnataka : ಕರ್ನಾಟಕದ ಭೌಗೋಳಿಕ ಸನ್ನಿವೇಶ https://currentaffairskannada.com/geography-of-karnataka/ Wed, 26 Feb 2025 19:35:24 +0000 https://www.spardhatimes.com/?p=5987 Geography of Karnataka : ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ. ಕರ್ನಾಟಕವು ಭಾರತದ ನೈರುತ್ಯ ಭಾಗದಲ್ಲಿದೆ. ಭಾರತದ ರಾಜ್ಯಗಳಲ್ಲಿ ಇದು 8 ನೇಯ ದೊಡ್ಡ ರಾಜ್ಯವಾಗಿದೆ. ಇದು 11 ಡಿಗ್ರಿ ಮತ್ತು 18 ಡಿಗ್ರಿ…

The post Geography of Karnataka : ಕರ್ನಾಟಕದ ಭೌಗೋಳಿಕ ಸನ್ನಿವೇಶ appeared first on Current Affairs Kannada.

]]>
Geography of Karnataka : ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ. ಕರ್ನಾಟಕವು ಭಾರತದ ನೈರುತ್ಯ ಭಾಗದಲ್ಲಿದೆ. ಭಾರತದ ರಾಜ್ಯಗಳಲ್ಲಿ ಇದು 8 ನೇಯ ದೊಡ್ಡ ರಾಜ್ಯವಾಗಿದೆ. ಇದು 11 ಡಿಗ್ರಿ ಮತ್ತು 18 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 74 ಡಿಗ್ರಿ ಮತ್ತು 78 ಡಿಗ್ರಿ ಪೂರ್ವ ರೇಖಾಂಶ ನಡುವೆ ವಿಸ್ತಿರಿಸಿದೆ. ಕರ್ನಾಟಕದ ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ, ನೈರುತ್ಯದಲ್ಲಿ ಕೇರಳ ರಾಜ್ಯಗಳಿವೆ. ಪಶ್ಚಿಮದಲ್ಲಿ ಸಮುದ್ರವಿದೆ. ರಾಜ್ಯದಲ್ಲಿ 310 ಜಿಲ್ಲೆಗಳು ಮತ್ತು 227 ತಾಲ್ಲೂಕುಗಳಿವೆ.

ಕರ್ನಾಟಕ : ಪ್ರಾಕೃತಿಕ ವಿಭಾಗಗಳು
ಕರ್ನಾಟಕವು ಭಾರತದ ಪರ್ಯಾಯ ಪ್ರಸ್ಥಭೂಮಿಯ ಒಂದು ಭಾಗವಾಗಿದ್ದು, ವಿವಿಧ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಬಹುದು.
1.ಕರಾವಳಿ ಪ್ರದೇಶ
2.ಮಲೆನಾಡು
3.ಮೈದಾನ

1.ಕರಾವಳಿ ಪ್ರದೇಶ :
ಇದು ಕರ್ನಾಟಕದ ಪಶ್ಚಿಮ ಭಾಗ, ಮಲೆನಾಡು ಮತ್ತು ಅರಬೀ ಸಮುದ್ರಗಳ ನಡುವೆ ಕಂಡುಬರುತ್ತದೆ. ಇದು ಉತ್ತರದಲ್ಲಿ ಗೋವಾ ತೀರದಿಂದ ದಕ್ಷಿಣದಲ್ಲಿ ಕೇರಳ ತೀರದವರೆಗೆ (324 ಕಿ.ಮೀ) ವ್ಯಾಪಿಸಿದೆ. ಇದರಲ್ಲಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಮುದ್ರ ತೀರಗಳು ಸೇರಿವೆ. ರಾಜ್ಯದ ಕರಾವಳಿ ಉತ್ತರದಲ್ಲಿ ಕಿರಿದಾಗಿದ್ದು, ದಕಿಣದಲ್ಲಿ ಅಗಲವಾಗಿದೆ. ಈ ಮೂಲಕ ಕರ್ನಾಟಕದ ಪಶ್ಚಿಮಕ್ಕೆ ಹರಿಯುವ ಅನೇಕ ನದಿಗಳು ದಾಟುತ್ತವೆ. ತೀರಕ್ಕೆ ಸಮೀಪದಲ್ಲಿ ದ್ವೀಪಗಳಿವೆ. ಉದಾ: ಸೆಂಟ್‍ಮೇರಿ ದ್ವೀಪ (ಕೋಕನಟ್ ದ್ವೀಪ). ಈ ಕರಾವಳಿಯಲ್ಲಿ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾದ ನವಮಂಗಳೂರು ಬಂದರಿದೆ. ಅದನ್ನು “ ಕರ್ನಾಟಕದ ಹೆಬ್ಬಾಗಿಲು)” ಎನ್ನುವರು.

2.ಮಲೆನಾಡು :
ಇದು ಗುಡ್ಡಗಾಡು ಪ್ರದೇಶವಾಗಿದ್ದು, ಕರಾವಳಿ ಮತ್ತು ಮೈದಾನಗಳ ನಡುವೆ ವಿಸ್ತರಿಸಿದೆ. ಇದನ್ನು “ಸಹ್ಯಾದ್ರಿ ಸರಣಿಗಳು” ಎಂತಲೂ ಕರೆಯಲಾಗುತ್ತದೆ. ಇದು ಕರ್ನಾಟಕದ ಅತಿ ಪ್ರಮುಖ ಪ್ರಾಕೃತಿ ವಿಭಾಗ. ಇಲ್ಲಿ ಹೆಚ್ಚು ಮಳೆ ಬೀಳುವುದರಿಂದ ದಟ್ಟವಾದ ಅರಣ್ಯ ಹಾಗೂ ವನ್ಯಧಾಮಗಳಿವೆ. ಅನೇಕ ನದಿಗಳು ಇಲ್ಲಿ ಉಗಮವಾಗುತ್ತದೆ. ರಾಜ್ಯದಲ್ಲೆ ಅತಿ ಹೆಚ್ಚು ಮಳೆ ಬೀಳುವ “ ಆಗುಂಬೆ” ಈ ವಿಭಾಗದಲ್ಲಿದೆ. ಕೆಲವು ಎತ್ತರವಾದ ಬೆಟ್ಟಗಳೂ ಇವೆ. ಅವುಗಳಲ್ಲಿ ಒಂದಾದ “ಮುಳ್ಳಯ್ಯನಗಿರಿ’ (1913 ಮೀ) ರಾಜ್ಯದಲ್ಲೇ ಎತ್ತರವಾದುದು.

3.ಮೈದಾನ ಪ್ರದೇಶ :
ಇದು ಮಲೆನಾಡಿನಿಂದ ಪೂರ್ವ ಭಾಗದಲ್ಲಿದ್ದು, ಏರುದಿಣ್ಣೆಗಳಿಂದ ಕೂಡಿದ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಇದನ್ನು ಈ ಪ್ರದೇಶದ ಮಧ್ಯ ಭಾಗದಲ್ಲಿ ಹರಿಯುವ ತುಂಗಭಧ್ರಾ ನದಿಯನ್ನಾಧರಿಸಿ ಎರಡು ವಿಭಾಗಗಳಾಗಿ. ಅವುಗಳೆಂದರೆ: ಉತ್ತರ ಮೈಧಾನ ಮತ್ತು ದಕ್ಷಿಣ ಮೈದಾನ

ಎ.ಉತ್ತರ ಮೈಧಾನ ;ಸಮತಟ್ಟಾದ ಮೇಲ್ಮೈವುಳ್ಳ ವಿಶಾಲವಾದ ಪ್ರಸ್ಥಭೂಮಿ. ಅಲ್ಲಲ್ಲಿ ಕೆಲವು ಚಪ್ಪಟೆ ಮೇಲ್ತುದಿಯನ್ನುಳ್ಳ ಬೆಟ್ಟಗಳಿವೆ. ಈ ಮೈಧಾನದ ಬಾಗವು ಬಸಾಲ್ಟ್ ಶಿಲೆಗಳಿಂದ ರಚಿತವಾಗಿದ್ದು, ಕಪ್ಪು ಮಣ್ಣಿನಿಂದ ಆವರಿಸಿದೆ. ಇದು ಪೂರ್ವದ ಕಡೆಗೆ ಇಳಿಜಾರು ಹೊಂದಿದೆ. ಇದನ್ನು ಅನುಸರಿಸಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುತ್ತವೆ. ಉತ್ತರದ ಮೈದಾನವು ಅತಿ ಕಡಿಮೆ ಮಳೆಯನ್ನು ಪಡೆಯುತ್ತದೆ.

ಬಿ.ದಕ್ಷಿಣ ಮೈಧಾನ : ಇದನ್ನು ಮೈಸೂರು ಪ್ರಸ್ಥಭೂಮಿ ಎಂದು ಕರೆಯಲಾಗಿದೆ. ಇದು ಸಾಕಷ್ಟು ಏರುದಿಣ್ಣೆಗಳನ್ನುಳ್ಳ ಮೇಲ್ಮೈ ಲಕ್ಷಣ ಹಾಗೂ ಬೆಟ್ಟಗಳ ಸಾಲುಗಳನ್ನು ಹೊಂದಿದೆ. ಅವುಗಳೆಂದರೆ- ಬಿಳಿಗಿರಿರಂಗನ ಬೆಟ್ಟ, ಮಲೆಮಹಾದೇಶ್ವರ ಬೆಟ್ಟ, ನಂದಿ ಬೆಟ್ಟ, ಚಾಮುಂಡಿ ಬೆಟ್ಟ ಮೊದಲಾದವಿ. ಉತ್ತರದ ಮೈದಾನದಂತೆ ಇದೂ ಸಹ ಪೂರ್ವದ ಕಡೆಗೆ ಇಳಿಜಾರಿದೆ. ಅದನ್ನನುಸರಿಸಿ ‘ಕಾವೇರಿ ನದಿ’ ಹರಿಯುವುದು.ಈ ಪ್ರಾಕೃತಿಕ ವಿಭಾಗದ ಬಹುಭಾಗವು ಕೆಂಪು ಮಣ್ಣಿನಿಂದ ಕೂಡಿದೆ. ಉತ್ತರದ ಮೈದಾನಕ್ಕಿಂತ ಈ ವಿಭಾಗದಲ್ಲಿ ಹೆಚ್ಚು ಮಳೆ ಬೀಳುವುದು.

The post Geography of Karnataka : ಕರ್ನಾಟಕದ ಭೌಗೋಳಿಕ ಸನ್ನಿವೇಶ appeared first on Current Affairs Kannada.

]]>
Rajya Sabha : ರಾಜ್ಯಸಭೆ ಬಗ್ಗೆ ಮಾಹಿತಿ https://currentaffairskannada.com/rajya-sabha/ https://currentaffairskannada.com/rajya-sabha/#respond Wed, 28 Aug 2024 06:39:37 +0000 https://www.spardhatimes.com/?p=8704 Rajya Sabha : ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. (ಭಾರತದ ರಾಜ್ಯಸಭೆಯು 250 ಸದಸ್ಯರ ಅನುಮೋದಿತ ಬಲವನ್ನು ಹೊಂದಿದೆ, ಆದರೆ ಆಗಸ್ಟ್…

The post Rajya Sabha : ರಾಜ್ಯಸಭೆ ಬಗ್ಗೆ ಮಾಹಿತಿ appeared first on Current Affairs Kannada.

]]>
Rajya Sabha : ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. (ಭಾರತದ ರಾಜ್ಯಸಭೆಯು 250 ಸದಸ್ಯರ ಅನುಮೋದಿತ ಬಲವನ್ನು ಹೊಂದಿದೆ, ಆದರೆ ಆಗಸ್ಟ್ 28, 2024 ರಂತೆ, ಪ್ರಸ್ತುತ ಬಲವು 245 ಆಗಿದೆ. ಜನರ ಪ್ರಾತಿನಿಧ್ಯ ಕಾಯಿದೆ, 1951 ಸದಸ್ಯರ ಸಂಖ್ಯೆಯನ್ನು 245 ಕ್ಕೆ ಸೀಮಿತಗೊಳಿಸುತ್ತದೆ, ಆದರೆ ಸಂವಿಧಾನವು ಈ ಸಂಖ್ಯೆಯನ್ನು ತಿದ್ದುಪಡಿ ಮೂಲಕ ಹೆಚ್ಚಿಸಬಹುದು. )

ರಾಜ್ಯಸಭೆಯಲ್ಲಿ ಸದಸ್ಯತ್ವವು 250 ಸದಸ್ಯರಿಗೆ ಸೀಮಿತವಾಗಿದೆ. 238 ಸದಸ್ಯರನ್ನು ಎಲ್ಲಾ ವಿಧಾನ ಸಭೆಗಳ (ವೈಯಕ್ತಿಕ ರಾಜ್ಯ ಶಾಸಕಾಂಗಗಳು) ಸದಸ್ಯರು ಆಯ್ಕೆ ಮಾಡುತ್ತಾರೆ. ಉಳಿದ 12 ಸದಸ್ಯರನ್ನು ಕಲೆ, ಸಾಹಿತ್ಯ, ಸಾಮಾಜಿಕ ಸೇವೆಗಳು ಹಾಗು ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ಸದಸ್ಯರ ಸಂಖ್ಯೆ 250 ಕ್ಕಿಂತ ಕಡಿಮೆಯಿರಬಹುದು: ಪ್ರಸ್ತುತ 245 ನಲ್ಲಿದೆ.

*ಈ 12 ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ.

*ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ.

*ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ.

*ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು . ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ 13, 1952ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ :
1) ಭಾರತದ ಪ್ರಜೆಯಾಗಿರಬೇಕು
2) 30 ವರ್ಷ ವಯೋಮಿತಿ ಹೊಂದಿರಬೇಕು
3) ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು
4) ಮತಿಭ್ರಮಣೆಯುಳ್ಳವರಾಗಿರಬಾರದು
5) ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.

*ಸದಸ್ಯರ ಜವಾಬ್ದಾರಿಗಳು :
*ಶಾಸಕಾಂಗ ಜವಾಬ್ದಾರಿ: ರಾಜ್ಯಸಭೆಯಲ್ಲಿ ಭಾರತದ ಕಾನೂನುಗಳನ್ನು ಅಂಗೀಕರಿಸುವುದು.
*ಉಸ್ತುವಾರಿ ಜವಾಬ್ದಾರಿ: ಕಾರ್ಯನಿರ್ವಾಹಕ (ಅಂದರೆ ಸರ್ಕಾರ) ತನ್ನ ಕರ್ತವ್ಯಗಳನ್ನು ತೃಪ್ತಿಕರವಾಗಿ ನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು.
*ಪ್ರತಿನಿಧಿ ಜವಾಬ್ದಾರಿ: ಭಾರತದ ಸಂಸತ್ತಿನಲ್ಲಿ (ರಾಜ್ಯಸಭೆ) ತಮ್ಮ ಕ್ಷೇತ್ರದ ಜನರ ಅಭಿಪ್ರಾಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸಲು.
*ಹಣಕಾಸಿನ ಶಕ್ತಿಯ ಜವಾಬ್ದಾರಿ : ಸರ್ಕಾರವು ಪ್ರಸ್ತಾಪಿಸಿದ ಆದಾಯ ಮತ್ತು ವೆಚ್ಚಗಳನ್ನು ಅನುಮೋದಿಸಲು ಮತ್ತು ಮೇಲ್ವಿಚಾರಣೆ ಮಾಡಲು.
ಸಂಸತ್ತಿನ ಸದಸ್ಯರೂ ಆಗಿರುವ ಯೂನಿಯನ್ ಕೌನ್ಸಿಲ್ ಆಫ್ ಮಿನಿಸ್ಟರ್ಸ್, ಮಂತ್ರಿ ಮಂಡಳಿಯಲ್ಲಿಲ್ಲದವರಿಗೆ ಹೋಲಿಸಿದರೆ ಕಾರ್ಯಾಂಗದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುತ್ತಾರೆ.

*ವಿಶೇಷ ಅಧಿಕಾರಗಳು :
ರಾಜ್ಯಸಭೆಯಲ್ಲಿ ಸಂಸತ್ತಿನ ಸದಸ್ಯರು ವಿಶೇಷ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಅನುಭವಿಸುತ್ತಾರೆ:
*ರಾಜ್ಯಗಳ ಪಟ್ಟಿಯಲ್ಲಿರುವ ಯಾವುದೇ ವಿಷಯದ ಮೇಲೆ ಕಾನೂನುಗಳನ್ನು ರಚಿಸುವುದು;
*ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಸೇವೆಗಳುನ್ನ ರಚಿಸಲು ಕಾನೂನುಗಳನ್ನು ರಚಿಸುವುದು.
*ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧಿಕಾರಾವಧಿಯ ವಿಸ್ತರಣೆ

*ಅಧಿಕಾರಾವಧಿ :
ಲೋಕಸಭೆಯಂತೆ, ರಾಜ್ಯಸಭೆಯನ್ನು ವಿಸರ್ಜಿಸಲಾಗುವುದಿಲ್ಲ ಮತ್ತು ಇದು ಶಾಶ್ವತ ಸಂಸ್ಥೆಯಾಗಿದೆ, ಆದ್ದರಿಂದ ಸದಸ್ಯರು ಸಾಮಾನ್ಯವಾಗಿ ತಮ್ಮ ಸಂಪೂರ್ಣ ಅಧಿಕಾರಾವಧಿಯನ್ನು ಪೂರೈಸುವ ಅವಕಾಶವನ್ನು ಪಡೆಯುತ್ತಾರೆ. ಇದನ್ನ ಹೊರತುಪಡಿಸಿ ಅವರು ರಾಜೀನಾಮೆ ಅಥವಾ ಸದಸ್ಯರು ಮೃತರಾದಾಗ ಸ್ಥಾನವು ಖಾಲಿಯಗುತ್ತದೆ. ಇದಲ್ಲದೆ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯನ ಅವಧಿಯು ಆರು ವರ್ಷಗಳು.

The post Rajya Sabha : ರಾಜ್ಯಸಭೆ ಬಗ್ಗೆ ಮಾಹಿತಿ appeared first on Current Affairs Kannada.

]]>
https://currentaffairskannada.com/rajya-sabha/feed/ 0
ಭಾರತದ ಸೇನಾ ಮುಖ್ಯಸ್ಥರ ಪಟ್ಟಿ https://currentaffairskannada.com/list-of-indian-chief-of-army-staff/ https://currentaffairskannada.com/list-of-indian-chief-of-army-staff/#respond Sat, 15 Jun 2024 10:55:04 +0000 https://www.spardhatimes.com/?p=8412 ✦ ಸೇನೆಯ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ..?ಸೇನಾ ಮುಖ್ಯಸ್ಥರನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತದ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ಅವರು ಪಡೆಗಳ ಉನ್ನತ ಹುದ್ದೆಗಳ ಎಲ್ಲಾ ನೇಮಕಾತಿಗಳನ್ನು ನಿರ್ವಹಿಸುವರು. ಹೆಚ್ಚಾಗಿ ಈ ನೇಮಕಾತಿಯನ್ನು ಹಿರಿತನ…

The post ಭಾರತದ ಸೇನಾ ಮುಖ್ಯಸ್ಥರ ಪಟ್ಟಿ appeared first on Current Affairs Kannada.

]]>
✦ ಸೇನೆಯ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ..?
ಸೇನಾ ಮುಖ್ಯಸ್ಥರನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತದ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ಅವರು ಪಡೆಗಳ ಉನ್ನತ ಹುದ್ದೆಗಳ ಎಲ್ಲಾ ನೇಮಕಾತಿಗಳನ್ನು ನಿರ್ವಹಿಸುವರು.

ಹೆಚ್ಚಾಗಿ ಈ ನೇಮಕಾತಿಯನ್ನು ಹಿರಿತನ ಮತ್ತು ವಯಸ್ಸಿನ ಆಧಾರದ ಮೇಲೆ ಮಾಡಲಾಗುತ್ತದೆ. ಆದರೆ ಅಧ್ಯಕ್ಷರು ಸೇನೆಯಲ್ಲಿ ಕಡಿಮೆ ಹಿರಿತನ ಹೊಂದಿರುವವರನ್ನು ನೇಮಿಸಿದ ನಿದರ್ಶನಗಳಿವೆ. 2016 ರಲ್ಲಿ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ ಅವರ ಹಿರಿತನವನ್ನು ತೊರೆದು ಹೊಸ ಸೇನಾ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡುವಾಗ ಅಂತಹ ಒಂದು ನಿದರ್ಶನವು ಉದ್ಭವಿಸಿತ್ತು.

1955ರ ಮೊದಲು, ಚೀರ್ಫ್ ಆಫ್ ಆರ್ಮಿ ಸ್ಟಾಫ್ ಹುದ್ದೆಯನ್ನು ಕಮಾಂಡರ್-ಇನ್-ಚೀಫ್ ಎಂದು ಕರೆಯಲಾಗುತ್ತಿತ್ತು. ಹೊಸದಾಗಿ ನೇಮಕಗೊಂಡ ಚೀಫ್ ಆಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಸೇರಿದಂತೆ ಭಾರತವು ಇಲ್ಲಿಯವರೆಗೆ ಒಟ್ಟು 33 ಸೇನಾ ಮುಖ್ಯಸ್ಥರನ್ನು ನೇಮಕ ಮಾಡಿದೆ.

✦ ಸೇನಾ ಮುಖ್ಯಸ್ಥರ ಅಧಿಕಾರಾವಧಿ :
ಸೇನಾ ಸಿಬ್ಬಂದಿಯ ಮುಖ್ಯಸ್ಥರನ್ನು ಮೂರು ವರ್ಷಗಳ ಅವಧಿಗೆ ನೇಮಿಸಲಾಗುತ್ತದೆ, ಅವರು ಅರವತ್ತೆರಡು ವರ್ಷ ವಯಸ್ಸಿನಲ್ಲಿ ನಿವೃತ್ತರಾಗಬೇಕು, ಅಥವಾ ಯಾವುದು ಮೊದಲು ಬರುತ್ತದೆ ಆಗ ನಿವೃತ್ತರಾಗಬೇಕು. ಆದಾಗ್ಯೂ ಭಾರತದ ಸೇನಾ ಮುಖ್ಯಸ್ಥ ಜನರಲ್ ಕೋದಂಡೇರ ಸುಬಯ್ಯ ತಿಮ್ಮಯ್ಯ ಅವರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರು 1957 ರಿಂದ 1961 ರವರೆಗೆ ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು.

ಸ್ವಾತಂತ್ರ್ಯದ ನಂತರ ಭಾರತದ ಸೇನಾ ಮುಖ್ಯಸ್ಥರ ಪಟ್ಟಿ :
1.ಜನರಲ್ ಸರ್ ರಾಬರ್ಟ್ ಮ್ಯಾಕ್ ಗ್ರೇಗರ್ ಮ್ಯಾಕ್ ಡೊನಾಲ್ಡ್ ಲೋಕಾರ್ಟ್ : 15 ಆಗಸ್ಟ್ 1947 – 31 ಡಿಸೆಂಬರ್ 1947
2.ಜನರಲ್ ಸರ್ ಫ್ರಾನ್ಸಿಸ್ ರಾಬರ್ಟ್ ರಾಯ್ ಬುಶರ್ : 01 ಜನವರಿ 1948 – 14 ಜನವರಿ 1949
3.ಫೀಲ್ಡ್ ಮಾರ್ಷಲ್ ಕಾರಿಯಪ್ಪ : 15 ಜನವರಿ 1949 – 14 ಜನವರಿ 1953
4.ಜನರಲ್ ಮಹಾರಾಜ್ ಕುಮಾರ್ ಶ್ರೀ ರಾಜೇಂದ್ರಸಿಂಗ್ ಜೀ : ಜನವರಿ 15, 1953 – ಮೇ 14, 1955
5.ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ : ಮೇ 15, 1955 – ಮೇ 7, 1957
6.ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ, : ಮೇ 8, 1957 ರಿಂದ ಮೇ 7, 1961
7.ಜನರಲ್ ಪ್ರಾಣನಾಥ್ ಥಾಪರ್ : ಮೇ 8, 1961 – ನವೆಂಬರ್ 19, 1962
8.ಜನರಲ್ ಜೊಯಂತೋ ನಾಥ್ ಚೌಧುರಿ : ನವೆಂಬರ್ 20, 1962 – ಜೂನ್ 7, 1966
9.ಜನರಲ್ ಪರಮಶಿವ ಪ್ರಭಾಕರ್ ಕುಮಾರಮಂಗಲಮ್ : ಜೂನ್ 8, 1966 ರಿಂದ ಜೂನ್ 7, 1969
10.ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ : 8 ಜೂನ್ 1969 – 14 ಜನವರಿ 1973
11.ಜನರಲ್ ಗೋಪಾಲ್ ಗುರುನಾಥ ಬೇವೂರ್ : 15 ಜನವರಿ 1973 ರಿಂದ 31 ಮೇ 1975.
12.ಜನರಲ್ ತಾಪಿಶ್ವರ್ ನರೇನ್ ರೈನಾ : 1 ಜೂನ್ 1975 ರಿಂದ 31 ಮೇ 1978 ರವರೆಗೆ
13.ಜನರಲ್ ಓಂ ಪ್ರಕಾಶ್ ಮಲ್ಹೋತ್ರ : 1 ಜೂನ್ 1978 ರಿಂದ 31 ಮೇ 1981 ರವರೆಗೆ
14.ಜನರಲ್ ಕೆ. ವೆಂಕಟ ಕೃಷ್ಣರಾವ್ : 1 ಜೂನ್ 1981 ರಿಂದ 31 ಜುಲೈ 1983 ರವರೆಗೆ
15.ಜನರಲ್ ಅರುಣ್ ಶ್ರೀಧರ್ ವೈದ್ಯ : ಆಗಸ್ಟ್ 1, 1983 ರಿಂದ ಜನವರಿ 31, 1986 ರವರೆಗೆ
16.ಜನರಲ್ ಕೆ. ಸುಂದರ್ ಜಿ : ಫೆಬ್ರವರಿ 1, 1986 ರಿಂದ ಏಪ್ರಿಲ್ 30, 1988 ರವರೆಗೆ
17.ಜನರಲ್ ವಿ. ಎನ್. ಶರ್ಮ : 1 ಮೇ 1988 ರಿಂದ 30 ಜೂನ್ 1990 ರವರೆಗೆ
18.ಜನರಲ್ ಸುನಿತ್ ಫ್ರಾನ್ಸಿಸ್ ರೊಡ್ರಿಗ್ಸ್ : ಜುಲೈ 1, 1990 ರಿಂದ ಜೂನ್ 30, 1993 ರವರೆಗೆ
19.ಜನರಲ್ ಬಿಪಿನ್ ಚಂದ್ರ ಜೋಶಿ : ಜುಲೈ 1, 1993 – ನವೆಂಬರ್ 18, 1994
20.ಜನರಲ್ ಶಂಕರ್ ರಾಯ್ ಚೌಧರಿ : ನವೆಂಬರ್ 22, 1994 ರಿಂದ ಸೆಪ್ಟೆಂಬರ್ 30, 1997 ರವರೆಗೆ
21.ಜನರಲ್ ವೇದ ಪ್ರಕಾಶ್ ಮಲ್ಲಿಕ್ : ಅಕ್ಟೋಬರ್ 1, 1997 ರಿಂದ ಸೆಪ್ಟೆಂಬರ್ 30, 2000 ರವರೆಗೆ
22.ಜನರಲ್ ಸುಂದರ್ ರಾಜನ್ ಪದ್ಮನಾಭನ್ : ಅಕ್ಟೋಬರ್ 1, 2000 ರಿಂದ ಡಿಸೆಂಬರ್ 31, 2002 ರವರೆಗೆ
23.ಜನರಲ್ ನಿರ್ಮಲ್ ಚಂದ್ರ ವಿಜ್ : ಜನವರಿ 1, 2003 – ಜನವರಿ 31, 2005
24.ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ : ಫೆಬ್ರವರಿ 1, 2005 ರಿಂದ ಸೆಪ್ಟೆಂಬರ್ 30, 2007 ರವರೆಗೆ,
25.ಜನರಲ್ ದೀಪಕ್ ಕಪೂರ್ : 30 ಮಾರ್ಚ್ 2010 – 30 ಸೆಪ್ಟೆಂಬರ್ 2007
26.ಜನರಲ್ ವಿಜಯ್ ಕಿಮಾರ್ ಸಿಂಗ್ : ಮಾರ್ಚ್ 31, 2010 – ಮೇ 31, 2012
27.ಜನರಲ್ ಬಿಕ್ರಂ ಸಿಂಗ್ : 1 ಜೂನ್ 2012 ರಿಂದ 31 ಜುಲೈ 2014 ರವರೆಗೆ
28.ಜನರಲ್‌ ದಲಬೀರ್‌ ಸಿಂಗ್‌ ಸುಹಾಗ್‌ : ಜುಲೈ 31, 2014 – ಡಿಸೆಂಬರ್ 31, 2016
29.ಜನರಲ್ ಬಿಪಿನ್‌ ರಾವತ್‌ ಡಿಸೆಂಬರ್ : 31, 2016 – ಡಿಸೆಂಬರ್ 31, 2019
30.ಜನರಲ್‌ ಮನೋಜ್‌ ಮುಕುಂದ್‌ ನರವಾಣೆ, : ಡಿಸೆಂಬರ್ 31, 2019 ರವರೆಗೆ

31.ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ : ಜೂನ್‌ 31, 2024 ರಿಂದ…

The post ಭಾರತದ ಸೇನಾ ಮುಖ್ಯಸ್ಥರ ಪಟ್ಟಿ appeared first on Current Affairs Kannada.

]]>
https://currentaffairskannada.com/list-of-indian-chief-of-army-staff/feed/ 0
List of Firsts in India : ವಿವಿಧ ಕ್ಷೇತ್ರಗಳಲ್ಲಿ ಭಾರತದ ಮೊದಲಿಗರು https://currentaffairskannada.com/list-of-firsts-in-india/ https://currentaffairskannada.com/list-of-firsts-in-india/#respond Tue, 19 Mar 2024 04:58:07 +0000 http://www.spardhatimes.com/?p=1292 List of Firsts in India 1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ▶ ಅನ್ನಾ ರಾಜನ್ ಜಾರ್ಜ್ 2) ಭಾರತದ ಪ್ರಥಮ ರಾಷ್ಟ್ರಪತಿ.▶ ಡಾ. ರಾಜೇಂದ್ರ ಪ್ರಸಾದ್. 3) ಸೇನಾ ಪಡೆಯ ಪ್ರಥಮ ಮುಖಸ್ಥ.▶ ಜನರಲ್ ಮಾಣಿಕ್ ಷಾ 4)ಭಾರತದ…

The post List of Firsts in India : ವಿವಿಧ ಕ್ಷೇತ್ರಗಳಲ್ಲಿ ಭಾರತದ ಮೊದಲಿಗರು appeared first on Current Affairs Kannada.

]]>

List of Firsts in India

1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ
▶ ಅನ್ನಾ ರಾಜನ್ ಜಾರ್ಜ್

2) ಭಾರತದ ಪ್ರಥಮ ರಾಷ್ಟ್ರಪತಿ.
▶ ಡಾ. ರಾಜೇಂದ್ರ ಪ್ರಸಾದ್.

3) ಸೇನಾ ಪಡೆಯ ಪ್ರಥಮ ಮುಖಸ್ಥ.
▶ ಜನರಲ್ ಮಾಣಿಕ್ ಷಾ

4)ಭಾರತದ ಮೊದಲ ಗವರ್ನರ್ ಜನರಲ್.
▶ ಮೌಂಟ್ ಬ್ಯಾಟನ್

5)ಭಾರತದ ಮೊದಲ ಉಪ ರಾಷ್ಟ್ರಪತಿ.
▶ ಡಾ. ಎಸ್. ರಾಧಾಕೃಷ್ಣನ್.

6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
▶ ಸಿ. ರಾಜಗೊಪಾಲಾಚಾರಿ.

7)ಭಾರತದ ಮೊದಲ ಗಗನ ಯಾತ್ರಿ.
▶ ರಾಕೇಶ್ ಶರ್ಮಾ.

8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
▶ ನ್ಯಾಯಮೂರ್ತಿ ಹೀರಾಲಾಲ್ ಕನಿಯಾ.

9)ಭಾರತದ ಮೊದಲ ಪೈಲೆಟ್.
▶ J.R.D.ಟಾಟಾ.

10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
▶ ಶರ್ಪಾ ತೆನ್ನ್ ಸಿಂಗ್.

11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
▶ ಸಿ. ರಾಜಗೊಪಲಾಚಾರಿ.

12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
ವ್ಯಕ್ತಿ.
▶ ಡಾ. ಜಾಕೀರ್ ಹುಸೇನ್.

13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
▶ ಆಚಾರ್ಯ ವಿನೋಬಾ ಭಾವೆ.

14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
▶ ಬಾನು ಅತೀಯಾ.

15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
ಅಧ್ಯಕ್ಷಿಣಿ.
▶ ಅನಿಬೆಸೆಂಟ್.

16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
ಭಾರತದ ಮಹಿಳೆ.
▶ ವಿಜಯಲಕ್ಷ್ಮೀ ಪಂಡಿತ್.

17)ಪ್ರಥಮ ಮಹಿಳಾ ಗವರ್ನರ್.
▶ ಸರೋಜಿನಿ ನಾಯ್ಡು

18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
▶ ಮದರ್ ತೆರೆಸಾ.

19)IPS ಅಧಿಕಾರಿಯಾದ ಮೊದಲ ಮಹಿಳೆ.
▶ ಕಿರಣ್ ಬೇಡಿ.

20)ಭಾರತದ ಪ್ರಥಮ ವಿಮಾನ ಚಾಲಕಿ.
▶ ಪ್ರೇಮಾ ಮಾಥುರ್.

21)ಪ್ರಥಮ ಮಹಿಳಾ ಪ್ರಧಾನಿ.
▶ ಇಂದಿರಾ ಗಾಂಧಿ

22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
▶ ಸುಶ್ಮಿತಾ ಸೇನ್.

23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
▶ ಚಂದ್ರಮುಖಿ ಬೋಸ್.

24)ಭಾರತದ ಪ್ರಥಮ ಮಹಿಳಾ ರಾಯಭಾರಿ.
▶ C.B.ಮುತ್ತಮ್ಮ.

25)ಪ್ರಥಮ ಮಹಿಳಾ ಮುಖ್ಯಮಂತ್ರಿ.
▶ ಸುಚೇತಾ ಕೃಪಾಲಾನಿ.

26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
▶ ಪ್ರತಿಭಾ ಪಾಟೀಲ್.

27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
▶ ಡಾ. ಕಲ್ಪನಾ ಚಾವ್ಲ.

28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
▶ ಪದ್ಮಾವತಿ ಬಂಡಾಪಾಧ್ಯಾಯ.

29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
▶ ಕರಣ್ಮ್ ಮಲ್ಲೇಶ್ವರಿ.

30)ಭಾರತದ ಪ್ರಥಮ ಮಹಿಳಾ ಲಾಕಸಭಾಧ್ಯಕ್ಷರು.
▶ ಶ್ರೀಮತಿ ಮೀರಾ ಕುಮಾರ

The post List of Firsts in India : ವಿವಿಧ ಕ್ಷೇತ್ರಗಳಲ್ಲಿ ಭಾರತದ ಮೊದಲಿಗರು appeared first on Current Affairs Kannada.

]]>
https://currentaffairskannada.com/list-of-firsts-in-india/feed/ 0
Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1 https://currentaffairskannada.com/constitution-of-india-top-20-series/ https://currentaffairskannada.com/constitution-of-india-top-20-series/#respond Tue, 19 Mar 2024 04:49:54 +0000 http://www.spardhatimes.com/?p=1250 Constitution of India 01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ —– ನ್ಯಾಯಾಲಯಗಳಿವೆ?✦ಉಚ್ಚ. 02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.✦30 03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?✦157. 04) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?✦ಮುಖ್ಯಮಂತ್ರಿ /…

The post Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1 appeared first on Current Affairs Kannada.

]]>
Constitution of India

01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ —– ನ್ಯಾಯಾಲಯಗಳಿವೆ?
✦ಉಚ್ಚ.

02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
✦30

03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
✦157.

04) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
✦ಮುಖ್ಯಮಂತ್ರಿ / ಪ್ರಧಾನಮಂತ್ರಿ.

05) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
✦ರಾಷ್ಟ್ರಪತಿಗಳು.

06) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
✦ಆಸ್ಟ್ರೇಲಿಯಾ.

07) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
✦ಬ್ರಿಟನ್.

08) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
✦ಅಮೆರಿಕಾ.

09) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
✦ರಷ್ಯಾ ಕ್ರಾಂತಿ (1917).

10) ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
✦ಕಲ್ಕತ್ತ ಹೈಕೋರ್ಟ್

11) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
✦ಹರಿಯಾಣ

12) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?

13) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
✦ಮಂಜುಳಾ ಚೆಲ್ಲೂರ್.

14) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
✦1884

15) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
✦217

16) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
✦61 ನೇ ವಿಧಿ.

17) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
✦ಲೋಕಸಭೆಯ ಸ್ಪಿಕರ್

18) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
✦3 ಸಲ

19) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
✦ಅರ್ಟಾನಿ ಜನರಲ್

20) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
✦ಅರ್ಟಾನಿ ಜನರಲ್

The post Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1 appeared first on Current Affairs Kannada.

]]>
https://currentaffairskannada.com/constitution-of-india-top-20-series/feed/ 0
ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07 https://currentaffairskannada.com/daily-top-10-questions-series-07-2/ https://currentaffairskannada.com/daily-top-10-questions-series-07-2/#respond Tue, 19 Mar 2024 04:44:25 +0000 http://www.spardhatimes.com/?p=373 1.ಪ್ರಥಮ ತದ್ರೂಪಿ ಮಾನವ..?2.ಇಂಡಿಯಾ ಹೌಸ್ ಎಲ್ಲಿದೆ..?3.ಅಂತರಾಷ್ಟ್ರೀಯ ಯುವ ವರ್ಷ..?4.ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ..?5.ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು..? 6.ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು..?7.ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ..?8.ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ..?9.ನೆಟ್‍ಬಾಲ್…

The post ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07 appeared first on Current Affairs Kannada.

]]>
1.ಪ್ರಥಮ ತದ್ರೂಪಿ ಮಾನವ..?
2.ಇಂಡಿಯಾ ಹೌಸ್ ಎಲ್ಲಿದೆ..?
3.ಅಂತರಾಷ್ಟ್ರೀಯ ಯುವ ವರ್ಷ..?
4.ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ..?
5.ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು..?

6.ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು..?
7.ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ..?
8.ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ..?
9.ನೆಟ್‍ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ..?
10.ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ..?

ಉತ್ತರಗಳು :
1) ಇವ್
2) ಲಂಡನ್
3) 1985
4) ಗುಲ್ಜಾರಿಲಾಲ ನಂದಾ
5) ಯಶೂಪಸರ್ದಾರಬಾನ್
6) ಕ್ಯಾಸಿಯನ್ ಕ್ಲೋ
7) ಮೇ3
8) ವಿಶ್ವ ಅಹಿಂಸಾ ದಿನ
9) 7 ಜನ
10 ) ಕುದುರೆ ಸ್ಪರ್ಧೆ

The post ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07 appeared first on Current Affairs Kannada.

]]>
https://currentaffairskannada.com/daily-top-10-questions-series-07-2/feed/ 0
ಪ್ರಮುಖ ಅಂತರಾಷ್ಟ್ರೀಯ ದಿನಗಳು https://currentaffairskannada.com/important-international-days/ https://currentaffairskannada.com/important-international-days/#respond Sun, 17 Mar 2024 07:40:35 +0000 http://www.spardhatimes.com/?p=1231 1.ಅಂತರಾಷ್ಟ್ರೀಯ ತೆರಿಗೆ ದಿನ =   26 ನೇ ಜನವರಿ2.ಅಂತರಾಷ್ಟ್ರೀಯ ಮಹಿಳಾ ದಿನ =   8 ನೇ ಮಾರ್ಚ್3.ವಿಶ್ವ ಅಂಗವಿಕಲರ ದಿನ =  15 ನೇ ಮಾರ್ಚ್4.ವಿಶ್ವ ಜಲ ದಿನ =           22 ನೇ ಮಾರ್ಚ್5.ವಿಶ್ವ ವಾತಾವರಣ ದಿನ =  23…

The post ಪ್ರಮುಖ ಅಂತರಾಷ್ಟ್ರೀಯ ದಿನಗಳು appeared first on Current Affairs Kannada.

]]>
1.ಅಂತರಾಷ್ಟ್ರೀಯ ತೆರಿಗೆ ದಿನ =   26 ನೇ ಜನವರಿ
2.ಅಂತರಾಷ್ಟ್ರೀಯ ಮಹಿಳಾ ದಿನ =   8 ನೇ ಮಾರ್ಚ್
3.ವಿಶ್ವ ಅಂಗವಿಕಲರ ದಿನ =  15 ನೇ ಮಾರ್ಚ್
4.ವಿಶ್ವ ಜಲ ದಿನ =           22 ನೇ ಮಾರ್ಚ್
5.ವಿಶ್ವ ವಾತಾವರಣ ದಿನ =  23 ನೇ ಮಾರ್ಚ್
6.ವಿಶ್ವ ಕ್ಷಯರೋಗ ದಿನ =   24 ನೇ ಮಾರ್ಚ್
7.ವಿಶ್ವ ಆರೋಗ್ಯ ದಿನ =   7 ನೆ ಏಪ್ರಿಲ್
8.ವಿಶ್ವ ಪಾರಂಪರಿಕ ದಿನ =  18 ನೇ ಏಪ್ರಿಲ್
9.ಅಂತರಾಷ್ಟ್ರೀಯ ಪೃಥ್ವಿ ದಿನ =  22 ನೇ ಏಪ್ರಿಲ್
10.ಅಂತರಾಷ್ಟ್ರೀಯ ಸೂರ್ಯ ದಿನ =   3 ನೇ ಮೇ

11.ವಿಶ್ವ ರೆಡ್ ಕ್ರಾಸ್ ದಿನ =  8 ನೇ ಮೇ
12.ವಿಶ್ವ ಕುಟುಂಬ ದಿನ =   15 ನೇ ಮೇ
13.ವಿಶ್ವ ದೂರ ಸಂಪರ್ಕ ದಿನ =  17 ನೆ ಮೇ
14.ಕಾಮನ್‍ವೆಲ್ತ್ ದಿನ = 24 ನೇ ಮೇ
15.ವಿಶ್ವ ರಕ್ತದಾನಿಗಳ ದಿನ = 14 ನೆ ಜೂನ್
16.ವಿಶ್ವ ಧೂಮಪಾನ ವಿರೋಧಿ ದಿನ =  31 ನೆ ಮೇ
17.ವಿಶ್ವ ಜನಸಂಖ್ಯಾ ದಿನ =   11 ನೇ ಜುಲೈ
18.ಅಂತರಾಷ್ಟ್ರೀಯ ವಿದವೆಯರ ದಿನ = 23 ನೇ ಜೂನ್
19.ವಿಶ್ವ ಕಿವುಡರ ದಿನ =  26 ನೇ ಸೆಪ್ಟೆಂಬರ್
20.ವಿಶ್ವ ಪ್ರಣವಾಯು ದಿನ = 16 ನೇ ಸೆಪ್ಟೆಂಬರ್

21.ವಿಶ್ವ ಪ್ರವಾಸೋದ್ಯಮ ದಿನ = 27 ನೇ ಸೆಪ್ಟೆಂಬರ್
22.ವಿಶ್ವ ಹಿರಿಯರ ದಿನ =  1 ನೇ ಅಕ್ಟೋಬರ್
23.ವಿಶ್ವ ಅಹಿಂಸಾ ದಿನ = 2 ನೇ ಅಕ್ಟೋಬರ್
24.ವಿಶ್ವ ಸಾಕ್ಷರತಾ ದಿನ  = 8 ನೆ ಸೆಪ್ಟೆಂಬರ್
25.ವಿಶ್ವ ಅಂಚೆ ಕಛೇರಿ ದಿನ =  9 ನೆ ಅಕ್ಟೋಬರ್
26.ವಿಶ್ವ ವಾಸ ದಿನ = 3 ನೇ ಅಕ್ಟೋಬರ್
27.ವಿಶ್ವ ಆಹಾರ ದಿನ = 16 ನೆ ಅಕ್ಟೋಬರ್
28.ವಿಶ್ವ ಸಂಸ್ಥೆ ದಿನ = 24 ನೆ ಅಕ್ಟೋಬರ್
29.ವಿಶ್ವ ಮಿತ ದಿನ = 30 ನೆ ಅಕ್ಟೋಬರ್
30.ವಿಶ್ವ ಮಧುಮೇಹ ದಿನ =  14 ನೆ ನವೆಂಬರ್
31.ವಿಶ್ವ ಏಡ್ಸ್ ದಿನ = 1ನೇ ಡಿಸೆಂಬರ್
32.ವಿಶ್ವ ಸಂಸ್ಥೆಯ ಮಾನವ ಹಕ್ಕು ದಿನ = 10 ನೇ ಡಿಸೆಂಬರ್

The post ಪ್ರಮುಖ ಅಂತರಾಷ್ಟ್ರೀಯ ದಿನಗಳು appeared first on Current Affairs Kannada.

]]>
https://currentaffairskannada.com/important-international-days/feed/ 0
ಜೀವಿಗಳ ಪ್ರಮುಖ ಸಾಮ್ರಾಜ್ಯಗಳು https://currentaffairskannada.com/life-kingdoms/ https://currentaffairskannada.com/life-kingdoms/#respond Thu, 14 Mar 2024 11:33:24 +0000 http://www.spardhatimes.com/?p=1021 1.ಮೊನಿರಾ ಸಾಮ್ರಾಜ್ಯಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು 2.ಪ್ರೊಟಿಸ್ಟ ಸಾಮ್ರಾಜ್ಯಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು) 3.ಮೈಕೋಟಾ ಸಾಮ್ರಾಜ್ಯಇದು ಶೀಲಿಂಧ್ರಗಳ ಸಾಮ್ರಾಜ್ಯವಾಗಿದೆ. ಉದಾ- ಯೀಸ್ಟ್, ಅಣಬೆ, ನಾಯಿಕೊಡೆ 4.ಸಸ್ಯಸಾಮ್ರಾಜ್ಯಇದು ಎಲ್ಲ ಹಸಿರು ಸಸ್ಯಗಳನ್ನು…

The post ಜೀವಿಗಳ ಪ್ರಮುಖ ಸಾಮ್ರಾಜ್ಯಗಳು appeared first on Current Affairs Kannada.

]]>
1.ಮೊನಿರಾ ಸಾಮ್ರಾಜ್ಯ
ಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.
ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು

2.ಪ್ರೊಟಿಸ್ಟ ಸಾಮ್ರಾಜ್ಯ
ಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು)

3.ಮೈಕೋಟಾ ಸಾಮ್ರಾಜ್ಯ
ಇದು ಶೀಲಿಂಧ್ರಗಳ ಸಾಮ್ರಾಜ್ಯವಾಗಿದೆ. ಉದಾ- ಯೀಸ್ಟ್, ಅಣಬೆ, ನಾಯಿಕೊಡೆ

4.ಸಸ್ಯಸಾಮ್ರಾಜ್ಯ
ಇದು ಎಲ್ಲ ಹಸಿರು ಸಸ್ಯಗಳನ್ನು ಒಳಗೊಂಡಿದೆ. ಪತ್ರಹರಿತ್ತನ್ನು ಹೊಂದಿದ್ದು, ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳನ್ನು ಈ ಸಾಮ್ರಾಜ್ಯ ಒಳಗೊಂಡಿದೆ. ವಾಹಕ ಅಂಗಾಂಶ ಇರುವಿಕೆಯ ಆಧಾರದ ಮೇಲೆ ಇದನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ.

1.ವಾಹಕ ಅಂಗಾಂಶ ರಹಿತ ಸಸ್ಯಗಳು
✦ಬಹುಕೋಶೀಯ ಶೈವಲಗಳು( ಕೆಂಪು,ಕಂದು, ಹಸಿರು ಶೈವಲಗಳು)
✦ಹಾವಸೆ ಸಸ್ಯಗಳು
2.ವಾಹಕ ಅಂಗಾಂಶ ಸಹಿತ ಸಸ್ಯಗಳು
ಜರಿಗಿಡಗಳು
✦ಅನಾವೃತ ಬೀಜ ಸಸ್ಯಗಳು
✦ಆವೃತ ಬೀಜಸಸ್ಯಗಳು

5.ಪ್ರಾಣಿ ಸಾಮ್ರಾಜ್ಯ
ಇವು ಎರಡು ಪ್ರಮುಖ ಗುಂಪುಗಳನ್ನು ಒಳಗೊಂಡಿದೆ.
1.ಕಶೇರುಕಗಳು -ಮೀನುಗಳು, ಉಭಯವಾಸಿಗಳು, ಸರೀಸೃಪಗಳು, ಪಕ್ಷಿಗಳು, ಸ್ತನಿಗಳು
2.ಅಕಶೇರುಕಗಳು- ಸ್ಪಂಜು ಪ್ರಾಣಿಗಳು, ಕುಟುಕು ಕಣವಂತಗಳು, ಚಪ್ಪಟೆ ಹುಳುಗಳು, ವಲಯ ವಂತಗಳು, ಸಂಧಿಪದಿಗಳು, ಮೃದ್ವಂಗಿಗಳು, ಕಂಟಕ ಚರ್ಮಿಗಳು

✦‘ವೈರಸ್’ಗಳು ಜೀವಿಗಳ ಐದು ಸಾಮ್ರಾಜ್ಯಗಳಿಗೆ ಸೇರದ ಜೀವಿಗಳಾಗಿವೆ.
ಒಂದು ವಸ್ತುವನ್ನು ಸಜೀವಿ ಎಂದು ಕರೆಯಬೇಕಾದರೆ ಅದರ ಅತ್ಯಂತ ಪ್ರಮುಖ ಲಕ್ಷಣವೆಂದರೆ ಜೀವಕೋಶವನ್ನು ಹೊಂದಿರುವುದು. ಆದರೆ ವೈರಸ್‍ನಲ್ಲಿ ಜೀವಕೋಶವಿಲ್ಲ. ಇದು ಕೇವಲ ಆರ್‍ಎನ್‍ಎ ಎಂಬ ನ್ಯೂಕ್ಲಿಕ್ ಆಮ್ಲವನ್ನು ಹೊಂದಿದ್ದು, ಪ್ರೋಟಿನ್ ಕವಚದಿಂದ ಆವೃತ್ತವಾಗಿದೆ. ಇವುಗಳು ಜೀವಿಗಳ ಹೊರಗಡೆ ಸಂತಾನೋತ್ಪತ್ತಿ ಮಾಡಲಾರವು. ಆದರೆ ಪೋಷಕ ಜೀವಿಗಳ ಜೀವಕೋಶಗಳ ಒಳಗಡೆ ಜೈವಿಕ ಲಕ್ಷಣಗಳನ್ನು ತೋರ್ಪಡಿಸುವುವು. ಇವು ಅಂತರ ಕೋಶೀಯ ಅರಾವಂಬಿಗಳು ಅದಕ್ಕಾಗಿ ಇವುಗಳನ್ನು ಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿ ಎಂದು ಕರೆಯಲಾಗುತ್ತದೆ.

The post ಜೀವಿಗಳ ಪ್ರಮುಖ ಸಾಮ್ರಾಜ್ಯಗಳು appeared first on Current Affairs Kannada.

]]>
https://currentaffairskannada.com/life-kingdoms/feed/ 0