ಕೇವಲ ಕಟ್ಟಡಗಳನ್ನಷ್ಟೇ ಅಲ್ಲದೇ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಭಾರತದ ಖ್ಯಾತ ವಾಸ್ತುಶಿಲ್ಪ ತಜ್ಞ ಪುಣೆ ಮೂಲದ ಬಾಲಕೃಷ್ಣ ದೋಶಿ, ವಾಸ್ತುಶಿಲ್ಪ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿದ ‘ಪ್ರಿಟ್ಸ್ಕೆರ್’ ವಾಸ್ತುಶಿಲ್ಪ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಾಸ್ತುಶಿಲ್ಪ ಕ್ಷೇತ್ರದ ನೊಬೆಲ್ ಎಂದೇ ಈ ಪ್ರಶಸ್ತಿಯನ್ನುಗುತ್ತದೆ. ಈ ಗೌರವಕ್ಕೆ ಪಾತ್ರರಾದ ಮೊಟ್ಟಮೊದಲ ಭಾರತೀಯ ಎಂಬ ಖ್ಯಾತಿಗೆ ದೋಶಿ(90) ಪಾತ್ರರಾಗಿದ್ದಾರೆ. ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿ ಗೌರವಕ್ಕೆ ಪಾತ್ರರಾದವರೆಂದರೆ ವಿಶ್ವವಿಖ್ಯಾತ ವಾಸ್ತುಶಿಲ್ಪಿ ಝಹಾ ಹದೀದ್, ಫ್ರಾಂಕ್ ಗೆಹ್ರಿ, ಐ.ಎಂ.ಪೀ ಮತ್ತು ಶಿಗೇರು ಬಾನ್.
“ಹಲವು ವರ್ಷಗಳಲ್ಲಿ ಬಾಲಕೃಷ್ಣ ದೋಶಿ, ಗಂಭೀರವಾದ ವಾಸ್ತುಶಿಲ್ಪವನ್ನು ಸೃಷ್ಟಿಸಿದ್ದಾರೆ. ಕ್ಷೇತ್ರದಲ್ಲಿ ಯಾವ ಪ್ರವೃತ್ತಿಯನ್ನೂ ಅನುಕರಿಸದೇ ವಿಶಿಷ್ಟ ವಾಸ್ತುಶಿಲ್ಪಗಳನ್ನು ನೀಡಿದ್ದಾರೆ. ಗಂಭೀರವಾದ ಹೊಣೆಗಾರಿಕೆಯ ಪ್ರಜ್ಞೆ ಹಾಗೂ ದೇಶಕ್ಕಾಗಿ ಮತ್ತು ಜನರಿಗಾಗಿ ಕೊಡುಗೆ ನೀಡಬೇಕು ಎಂಬ ಅಭಿಲಾಷೆಯಿಂದ ಉನ್ನತ ಗುಣಮಟ್ಟದ, ಅಧಿಕೃತ ವಾಸ್ತುಶಿಲ್ಪವನ್ನು ನೀಡುತ್ತಾ ಬಂದಿದ್ದಾರೆ. ಸಾರ್ವಜನಿಕ ಸಂಸ್ಥೆಗಳಿಗೆ ಹಾಗೂ ಬಳಕೆಗಳಿಗೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ, ಮನೆಗಳು ಮತ್ತು ಖಾಸಗಿ ಕಕ್ಷಿದಾರರಿಗೆ ಸರ್ವಶ್ರೇಷ್ಠ ವಾಸ್ತುಶಿಲ್ಪಗಳನ್ನು ಸೃಷ್ಟಿಸಿದ್ದಾರೆ” ಎಂದು ತೀರ್ಪುರಾರರ ಮಂಡಳಿ ಶ್ಲಾಘಿಸಿದೆ.
➤ ಜೆಜೆ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಹಳೆ ವಿದ್ಯಾರ್ಥಿಯಾಗಿರುವ ದೋಶಿ, ವಾಸ್ತುಶಿಲ್ಪ ಕ್ಷೇತ್ರದ ದಂತಕಥೆ ಎನಿಸಿದ ಲೇ ಕೋರ್ಬಶನ್ ಜತೆಗೆ ಪ್ಯಾರೀಸ್ನಲ್ಲಿ 1950ರಲ್ಲಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಭಾರತದಲ್ಲಿ ವಾಸ್ತುಶಿಲ್ಪ ಯೋಜನೆಗಳ ಮೇಲ್ವಿಚಾರಣೆಗಾಗಿ ಸ್ವದೇಶಕ್ಕೆ ಆಗಮಿಸಿದರು.
➤ ವಾಸ್ತು- ಶಿಲ್ಪ ಎಂಬ ಸಂಸ್ಥೆಯನ್ನು 1955ರಲ್ಲಿ ಆರಂಭಿಸಿ, ಲೌಯಿಸ್ ಖಾನ್ ಹಾಗೂ ಅನಂತ್ ರಾಜೇ ಜತೆ ಅಹ್ಮದಾಬಾದ್ನ ಐಐಎಂಬಿ ಕ್ಯಾಂಪಸ್ ವಿನ್ಯಾಸಗೊಳಿಸಿದರು.
➤ ಬೆಂಗಳೂರು ಐಐಎಂ ಕ್ಯಾಂಪಸ್ ಹಾಗೂ ಲಕ್ನೋ ಐಐಎಂ ಕ್ಯಾಂಪಸ್ಗಳೂ ಇವರ ಪರಿಕಲ್ಪನೆಯವು.
➤ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಟ್ಯಾಗೋರ್ ಮೆಮೋರಿಯಲ್ ಹಾಲ್, ಅಹ್ಮದಾಬಾದ್ನ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಲಜಿ ಸೇರಿದಂತೆ ದೇಶದ ಉದ್ದಗಲಕ್ಕೆ ಅದ್ಭುತ ವಿನ್ಯಾಸಗಳನ್ನು ಅವರು ನೀಡಿದ್ದಾರೆ. ಜತೆಗೆ ಹಲವು ಅಗ್ಗದ ಮನೆ ಯೋಜನೆಗಳನ್ನೂ ನೀಡಿದ ಹೆಮ್ಮೆ ಇವರದ್ದು.
➤ ಸಂಸ್ಥೆಗಳ ನಿರ್ಮಾಣಕಾರ ಎಂದೇ ಖ್ಯಾತರಾಗಿರುವ ಇವರು ಅಹ್ಮದಾಬಾದ್ನ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಸಂಸ್ಥಾಪಕ ನಿರ್ದೇಶಕ. ಅಂತೆಯೇ ಸೆಂಟರ್ ಫಾರ್ ಎನ್ಮಿರಾನ್ಮೆಂಟಲ್ ಪ್ಲಾನಿಂಗ್ ಆಯಂಡ್ ಟೆಕ್ನಾಲಜಿಯ ಸಂಸ್ಥಾಪಕ ನಿರ್ದೇಶಕ ಹಾಗೂ ಡೀನ್ ಆಗಿಯೂ ಕಾರ್ಯನಿರ್ವಹಿಸಿದ್ದರು.
➤ ಅಹ್ಮದಾಬಾದ್ನ ವಿಷ್ಯುವಲ್ ಆರ್ಟ್ಸ್ ಸೆಂಟರ್ನ ಸಂಸ್ಥಾಪಕ ಸದಸ್ಯರಾಗಿ, ಕನೋರಿಯಾ ಕಲಾ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.