Captain Vijayakanth

ತಮಿಳು ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ ನಿಧನ

ನಟ ಮತ್ತು ರಾಜಕಾರಣಿ ಸೂಪರ್ ಸ್ಟಾರ್ ವಿಜಯಕಾಂತ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರಿಗೆ ಕರೊನಾ ಪಾಸಿಟಿವ್ ದೃಢವಾಗಿತ್ತು. ಇದಾದ ಬಳಿಕ ಉಸಿರಾಟದ ತೊಂದರೆಯಿಂದಾಗಿ ಚೆನ್ನೈನ ಆಸ್ಪತ್ರೆಯಲ್ಲಿ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳಿದಿದ್ದಾರೆ. ಕಳೆದ ಡಿಸೆಂಬರ್ 18 ರಂದು ಡಿಎಂಡಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು ಕೊನಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಸಿನಿಮಾ ಪಯಣ :
ವಿಜಯಕಾಂತ್ 11 ವರ್ಷಗಳಲ್ಲಿ 92 ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ರೆಡ್ಡಿ ಮಲ್ಲಿ ನೆಂಚಿಲ್, ತಡವಿಲ್ದ, ವೈದೇಗಿ ವೈತಾಳ್, ಅಮ್ಮನ್ ಕೊಯಿಲ್ ಪಿಷ್ಕಾಳೆ ಮುಂತಾದ ಹಲವು ಚಿತ್ರಗಳು ವಿಜಯಕಾಂತ್ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದವು. 1952ರಲ್ಲಿ ಆಗಸ್ಟ್ 25 ರಂದು ಜನಿಸಿದ ವಿಜಯಕಾಂತ್ ಮೂಲ ಹೆಸರು ನಾರಾಯಣ ವಿಜಯರಾಜ ಅಲಗರಸ್ವಾಮಿ, ಮುಂದೆ ವಿಜಯಕಾಂತ್ ಹೆಸರಿನಿಂದಲೇ ಫೇಮಸ್ ಆಗಿದ್ದರು. ಮಧುರೈನಲ್ಲಿ ಬೆಳೆದ ವಿಜಯಕಾಂತ್ ಅವರಿಗೆ ಸಿನಿಮಾ ಕನಸು ಇತ್ತು.

ಇಂದಿನ ಪ್ರಚಲಿತ ವಿದ್ಯಮಾನಗಳು (27-12-2023)

ಅವರ ಯೌವನದಲ್ಲಿ ಅವರು ತಮ್ಮ ತಂದೆ ನಡೆಸುತ್ತಿದ್ದ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡಿದರು. ಮೊದಲ ಬಾರಿಗೆ 1979 ರಲ್ಲಿ ಗಜ ನಿರ್ದೇಶನದ ಇನಿಕ್ಕುಮ್ ಇಹಲಾ ಚಿತ್ರದ ಮೂಲಕ ತೆರೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ನಿರ್ದೇಶಕರು ತಮ್ಮ ಮೂಲ ಹೆಸರನ್ನು ವಿಜಯರಾಜ್ ಎಂದು ವಿಜಯಕಾಂತ್ ಎಂದು ಬದಲಾಯಿಸಿದ್ದಾರೆ. ವಿಜಯಕಾಂತ್ 11 ವರ್ಷಗಳಲ್ಲಿ 92 ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ರೆಡ್ಡಿ ಮಲ್ಲಿ ನೆಂಚಿಲ್, ತಡವಿಲ್ದ, ವೈದೇಗಿ ವೈತಾಳ್, ಅಮ್ಮನ್ ಕೊಯಿಲ್ ಪಿಷ್ಕಾಳೆ ಮುಂತಾದ ಹಲವು ಚಿತ್ರಗಳು ವಿಜಯಕಾಂತ್ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದವು. ಬರೀ ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಕೆಲಸ ಮಾಡಿದ್ದರು.

ರಾಜಕೀಯ ಪಯಣ :
ನಟ ವಿಜಯಕಾಂತ್ 2005 ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ(ಡಿಎಂಡಿಕೆ)ವನ್ನು ಸ್ಥಾಪಿಸಿದರು. 2011ರಿಂದ 2016ರವರೆಗೆ ತಮಿಳುನಾಡಿನಲ್ಲಿ ಡಿಎಂಡಿಕೆ ಪ್ರಮುಖ ವಿರೋಧ ಪಕ್ಷವಾಗಿದ್ದು, ವಿಜಯಕಾಂತ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಯುವನಿಧಿ ಯೋಜನೆಗೆ ಯಾರು ಅರ್ಹರು..? ನೋಂದಣಿ ಹೇಗೆ..?

Comments

No comments yet. Why don’t you start the discussion?

Leave a Reply

Your email address will not be published. Required fields are marked *