1.ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕಶಕ್ತಿ ಇರುವ ವಸ್ತು ಯಾವುದು?
✦ ನೀರು
2.ನಿಸರ್ಗದಲ್ಲಿ ದೊರೆಯುವ ಶುದ್ಧನೀರು ಯಾವುದು?
✦ ಮಳೆ ನೀರು
3.ನೀರಿನ ರೂಪಗಳು ಯಾವುವು?
✦ ಬಾವಿಗಳಲ್ಲಿ, ನದಿಗಳಲ್ಲಿ, ಸಾಗರದ ನೀರು, ಸಮುದ್ರದ ನೀರು, ಕೆರೆಗಳಲ್ಲಿ, ಅಂತರ್ಜಲ, ಆಕಾಶದಲ್ಲಿ ನೀರಾವಿ,ಮಂಜುಗಡ್ಡಗಳ ರೂಪದಲ್ಲಿ ಇತ್ಯಾದಿ.
4.ಶುದ್ದ ನೀರಿನ ಲಕ್ಷಣಗಳು ಯಾವುವು?
✦ ಶುದ್ದ ನೀರಿಗೆ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿ ಇಲ್ಲ.
✦ ಸಾಮಾನ್ಯ ವಾತಾವರಣದ ಒತ್ತಡದಲ್ಲಿ 100ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಕುದಿಯುತ್ತದೆ.
✦ ನೀರಿನ ಘನೀಭವನ ಬಿಂದು 0 ಡಿಗ್ರಿ ಸೆಲ್ಸಿಯಸ್
✦ ಶುದ್ಧನೀರು ಉಷ್ಣ ಅವಾಹಕ ಮತ್ತು ವಿದ್ಯುತ್ ಅವಾಹಕ.
✦ ನೀರಿನ ಗರಿಷ್ಠ ಸಾಂದ್ರತೆ 4 ಡಿಗ್ರಿ ಸೆಲ್ಸಿಯಸ್ನಲ್ಲಿ ಕಂಡುಬರುತ್ತದೆ.
5.ನೀರಿನ ‘ಅಸಂಗತ ವ್ಯಕೋಚನ’ ಎಂದರೇನು?
✦ ಸಾಮಾನ್ಯವಾಗಿ ಶಾಖವನ್ನು ಕೊಟ್ಟಾಗ ವಸ್ತುಗಳು ಹಿಗ್ಗುತ್ತವೆ.ಮತ್ತು ತಾಪ ಕಡಿಮೆ ಆದಾಗ ಕುಗ್ಗುತ್ತವೆ.ಆದರೆ ನೀರಿನ ತಾಪ 4 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಆದಂತೆಲ್ಲ ನೀರಿನ ಗಾತ್ರ ಕಡಿಮೆ ಆಗುತ್ತದೆ.ತದನಂತರ ತಾಪ 4 ಡಿಗ್ರಿ ಸೆಲ್ಸಿಯಸ್ ಗಂತ ಕಮ್ಮಿ ಆದಂತೆಲ್ಲ ಅದರ ಗಾತ್ರ ಹೆಚ್ಚುತ್ತದೆ..ಶಾಖವನ್ನು ಕೊಟ್ಟಾಗ 4 ಡಿಗ್ರಿ ಸೆಲ್ಸಿಯಸ್ನವರೆಗೆ ನೀರು ಹಿಗ್ಗುವ ಬದಲು ಕುಗ್ಗುತ್ತವೆ.4 ಡಿಗ್ರಿ ಸೆಲ್ಸಿಯಸ್ ನಂತರ ಹಿಗ್ಗುತ್ತವೆ.ನೀರಿನ ಈ ವಿಶೇಷ ವಿದ್ಯಮಾನಕ್ಕೆ “ನೀರಿನ ಅಸಂಗತ ವ್ಯಾಕೋಚನ” ಎಂದು ಹೆಸರು.
6.ಮೀನು ಮತ್ತು ಇತರ ಜಲಚರಗಳು ಮಂಜುಗಡ್ಡೆಯ ಕೆಳಗಿನ ನೀರಿನೊಳಗೆ ಜೀವಿಸಲು ಕಾರಣÀವಾದ ನೀರಿನ ಗುಣ ಯಾವುದು?
✦ ನೀರಿನ ಅಸಂಬದ್ಧ ವಿಕಾಸ ಅಥವಾ ನೀರಿನ ಅಸಂಗತ ವ್ಯಾಕೋಚನ
7.ನೀರಿನ ರಾಸಾಯನಿಕ ಸಂಯೋಜನೆಯನ್ನು ವಿವರಿಸಿ.
✦ ನೀರು ಒಂದು ಧಾತು ಅಲ್ಲ.ಇದು ಒಂದು ಸಂಯುಕ್ತ.
✦ ಇದು ಬಣ್ಣವಿಲ್ಲದ ಎರಡು ಅನಿಲಗಳಾದ “ಹೈಡ್ರೋಜನ್”(ಜಲಜನಕ)ಮತ್ತು ಆಕ್ಸಿಜನ್( ಆಮ್ಲಜನಕ) ಗಳ ಸಂಯುಕ್ತವಾಗಿದೆ.
✦ ನೀರು ಹೈಡ್ರೋಜನ್ ಮತ್ತು ಆಕ್ಸಿಜನಗಳ ಅನುಪಾತ 2:1 ಎಂದು ಸಾಬೀತು ಮಾಡಿದವರು ಯಾರು?
✦ ಹೆನ್ರಿ ಕ್ಯಾವೆಂಡಿಸ್( 1781)
8.ಯಾವ ಉಪಕರಣ ಸಹಾಯದಿಂದ ನೀರನ್ನು ಕೃತಕವಾಗಿ ಪ್ರಯೋಗಶಾಲೆಯಲ್ಲಿ ತಯಾರಿಸಬಹುದು?
✦ ಯೂಡಿಯೋ ಮೀಟರ್
9.ನೀರಿನ ಘಟಕಗಳನ್ನು ಪತ್ತೆ ಹಚ್ಚುವ ಪ್ರಯೋಗ ಉಪಕರನ ಯಾವುದು?
✦ ನೀರಿನ ವೋಲ್ಟಾಮೀಟರ್
10.ನೀರಿನ ರಾಸಾಯನಿಕ ಸೂತ್ರವನ್ನು (ಹೆಚ್2ಒ)ಖಚಿತವಾಗಿ ನಿರೂಪಿಸಿದವರು ಯಾರು?
✦ ಕ್ಯಾನಿ ಜಾರೋ(1860)
11.ಕಾಯಿಸಿ ಆರಿಸಿದ ನೀರಿಗೆ ರುಚಿ ಇರದೆ ಇರಲು ಕಾರಣವೇನು?
✦ ನೀರನ್ನು ಕಾಯಿಸಿದಾಗ ನೀರಿನಲ್ಲಿ ವೀಲಿನವಾಗಿರುವ ಆಕ್ಸಿಜನ್ ಇಲ್ಲವಾಗುತ್ತದೆ.
12.ಜಲಚಕ್ರ ಎಂದರೇನು?
✦ ಭೂಮಿಯ ಮೇಲಿನ ನೀರು ಆವಿಯಾಗಿ ವಾಯುಮಂಡಲವನ್ನು ಸೇರಿ ಬಳಿಕ ಪುನ: ಸಾಂದ್ರಿಕರಿಸಲ್ಪಟ್ಟು ಮಳೆ, ಹಿಮ ಮೊದಲಾದ ರೀತಿಯಲ್ಲಿ ಭೂಮಿಯನ್ನು ಸೇರುವ ಪ್ರಕ್ರಿಯೆಗೆ “ಜಲಚಕ್ರ” ಎಂದು ಹೆಸರು.
13.ಅಸವಿತ ನೀರು ಎಂದರೇನು?
✦ ಸಂಪೂರ್ಣ ಶುದ್ಧವಾದ ನೀರನ್ನು ‘ಅಸವಿತ ನೀರು’ ಎನ್ನುವರು.
14.ಅಸವಿತ ನೀರನ್ನು ಕುಡಿಯಲು ಬಳಸಲು ಬಳಸಬಾರದು, ಯಾಕೆ?
✦ ಅಸವಿತ ನೀರನ್ನು ಕುಡಿಯಲು ಬಳಸಬಾರದು ಏಕೆಂದರೆ, ಇದರಲ್ಲಿ ಯಾವುದೇ ಲವಣಗಳು ಇರುವುದಿಲ್ಲ.ಇದನ್ನು ಕುಡಿದಾಗ ಇದು ನಮ್ಮ ದೇಹದಲ್ಲಿರುವ ಲವಣಗಳನ್ನು ಹೀರಿಕೊಂಡು ತನ್ನಲ್ಲಿ ಕರಗಿಸಿಕೊಳ್ಳುತ್ತದೆ.ಇದರಿಂದ ದೇಹದಲ್ಲಿ ಲವಣಗಳ ಪ್ರಮಾಣ ಕಡಿಮೆಯಾಗುತ್ತದೆ.
15.ದ್ವಿಧ್ರುವೀಯತೆ ಎಂದರೇನು?
✦ ಒಂದೇ ಅಣುವಿನಲ್ಲಿ ಧನ ಮತ್ತು ಋಣ ಆವೇಶಗಳ ತುದಿಗಳು ಇರುವುದನ್ನು “ದ್ವಿಧ್ರುವೀಯತೆ” ಎನ್ನುತ್ತಾರೆ.
ಉದಾ- ನೀರಿನ ಅಣುವಿನಲ್ಲಿ ಋಣ ಆವೇಶವನ್ನು ಹೊಂದಿರುವ ಆಮ್ಲಜನಕ ತುದಿ ಮತ್ತು ಧನ ಆವೇಶವನ್ನು ಹೊಂದಿರುವ ಜಲಜನಕ ತುದಿ ಎರಡು ಇರುತ್ತವೆ.
16.ನೀರು ಹರಿಯುವ ಪ್ರಮಾಣದ ದರ ಸೂಚಿಸುವ ಮಾನ ಯಾವುದು?
✦ ಕ್ಯೂಸೆಕ್
17.ಥೌಸಂಡ್ ಮಿಲಿಯನ್ ಕ್ಯೂಬಿಕ್ ಫೀಟ್ ಎಂಬುದರ ಸಂಕ್ಷಿಪ್ತ ರೂಪವೇನು?
✦ ಟಿ.ಎಂ.ಸಿ
18.ನೀರಿನ ಅಣುವಿನಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನಗಳ ನಡುವೆ ಯಾವ ವಿಧಧ ಬಂಧವಿದೆ?
✦ ಸಹ ವೇಲೆನ್ಸಿಯ ಬಂಧ
19.ನೀರನ್ನು ಸಾರ್ವತ್ರಿಕ ದ್ರಾವಕ ಎನ್ನಲು ಕಾರಣವೇನು?
✦ ಬೆರೆಲ್ಲಾ ದ್ರಾವಕಗಳಿಗಿಮತ ತನ್ನಲ್ಲಿ ನೀರು ಹೆಚ್ಚು ವಸ್ತುಗಳನ್ನು ಕರಗಿಸಿಕೊಳ್ಳುತ್ತದೆ.
20.ಗಡಸು ನೀರು ಮತ್ತು ಮೆದು ನೀರು ಎಂದರೇನು?
✦ ಸಾಬೂನಿನೊಂದಿಗೆ ತಟ್ಟನೆ ಮತ್ತು ಸರಾಗವಾಗಿ ವರ್ತಿಸಿ ನೊರೆಯನ್ನು ಕೊಡುವ ನೀರನ್ನು “ಮೆದು ನೀರು” ಎಂದು ಕರೆಯುತ್ತಾರೆ.
✦ ಸಾಬೂನಿನೊಂದಿಗೆ ವರ್ತಿಸಿ ಸರಾಗವಾಗಿ ಮತ್ತು ಥಟ್ಟನೆ ನೊರೆ ಕೊಡದಿದ್ದಲ್ಲಿ ಅಂತಹ ನೀರನ್ನು “ ಗಡಸುನೀರು” ಎನ್ನುವರು.
21.ನೀರಿನ ಗಡಸುತನಕ್ಕೆ ಕಾರಣವಾದ ಲವಣಗಳು ಯಾವುವು?
✦ ಕ್ಯಾಲ್ಸಿಯಂ ಬೈಕಾಬೋನೆಟ್, ಕ್ಯಾಲ್ಸಿಯಂ ಸಲ್ಫೇಟ್, ಕ್ಯಾಲ್ಸಿಯಂ ಕ್ಲೋರೈಡ್, ಮೇಗ್ನಿಷಿಯಂ ಬೈಕಾಬೋನೇಟ್, ಮೇಗ್ನಿಷಿಯಂ ಸಲ್ಫೇಟ್, ಮೇಗ್ನೀಷಿಯಂ ಕ್ಲೋರೈಡ್
22.ನೀರಿನ ತಾತ್ಕಾಲಿಕ ಗಡಸುತನಕ್ಕೆ ಕಾರಣವಾದ ಲವಣಗಳು ಯಾವುವು?
✦ ಕ್ಯಾಲ್ಸಿಯಂ ಮತ್ತು ಮೇಗ್ನಿಷಿಯಂ ಬೈಕಾರ್ಬೋನೇಟ್ಗಳು
23.ನೀರಿನ ಶಾಶ್ವತ ಗಡಸುತನಕ್ಕೆ ಕಾರನವಾದ ಲವಣಗಳು ಯಾವುವು?
✦ ಕ್ಯಾಲ್ಸಿಯಂ ಮತ್ತು ಮೇಗ್ನಿಷಿಯಂ ಕ್ಲೋರೈಡ್ಗಳು ಮತ್ತು ಸಲ್ಪೈಡ್ಗಳು.
24.ಇತ್ತೀಚೆಗೆ ನೀರಿನ ತಾತ್ಕಾಲಿಕ ಗಡಸುತನವನ್ನು ಏನೆಮದು ಕರೆಯುತ್ತಾರೆ?
✦ ಕಾರ್ಬೋನೇಟ್ ಗಡಸುತನ
25.ಇತ್ತೀಚೆಗೆ ನೀರಿನ ಶಾಶ್ವತ ಗಡಸುತನವನ್ನು ಢನೆಂದು ಕರೆಯುತ್ತಾರೆ?
✦ ಅಕಾರ್ಬೋನೇಟ್ ಗಡಸುತನ
26.ಅಡುಗೆ ಮಾಡಲು ಗಡಸುನೀರು ಅಷ್ಟು ಯೋಗ್ಯವಲ್ಲ, ಕಾರಣವೇನು?
✦ ತರಕಾರಿ ಮತ್ತು ಬೇಳೆಕಾಳುಗಳು ಸರಿಯಾಗಿ ಬೇಯುವುದಿಲ್ಲ.
27.ಗಡಸು ನೀರು ಸ್ನಾನಕ್ಕೆ ಯೋಗ್ಯವಲ್ಲ , ಕಾರಣವೆನು?
✦ ಇದರಿಂದ ಚರ್ಮ ಶುಷ್ಕವಾಗಿ ಚರ್ಮದ ಮೇಲೆ ಬೆಳ್ಳನೆಯ ಬೂದಿ ಉಳಿದುಕೊಳ್ಳುತ್ತದೆ.
28.ಗಡಸು ನೀರು ಪಾತ್ರೆ ತೊಳೆಯಲು ಯೋಗ್ಯವಲ್ಲ, ಕಾರಣವೇನು?
✦ ಏಕೆಂದರೆ ಇದರಿಂದ ಪಾತ್ರೆಗಳು ಹೊಳಪನ್ನು ಕಳೆದುಕೊಳ್ಳುವುದಲ್ಲದೆ ಪಾತ್ರೆಗಳ ಮೇಲೆ ಕಲೆ ಉಂಟಾಗುತ್ತದೆ.
29.ಬಟ್ಟೆ ಒಗೆಯಲು ಗಡಸುನೀರು ಯೋಗ್ಯವಲ್ಲ ಕಾರಣವೇನು?
✦ ಏಕೆಂದರೆ, ಗಡಸು ನೀರಿನಲ್ಲಿ ಬಟ್ಟೆಗಳು ಶುಭ್ರವಾಗುವುದಿಲ್ಲ.ಸಾಬೂನು ವ್ಯರ್ಥವಾಗುತ್ತದೆ.ಗಡಸು ನೀರಿನಲ್ಲಿ ಇರುವ ಕಬ್ಬಿಣದ ಲವಣಗಳು ಬಟ್ಟೆಗಳ ಮೇಲೆ ಹಳದಿ ಕಲೆಗಳನ್ನು ಉಂಟುಮಾಡುತ್ತದೆ.
30.ನೀರಿನ ತಾತ್ಕಾಲಿಕ ಗಡಸುತನವನ್ನು ನಿವಾರಿಸುವ ಉತ್ತಮ ವಿಧಾನ ಯಾವುದು?
✦ ನೀರನ್ನು ಕುದಿಸುವಿಕೆ- ನೀರನ್ನು ಕುದಿಸುವುದರಿಂದ ನೀರಿನ ತಾತ್ಕಾಲಿಕ ಗಡಸುತನಕ್ಕೆ ಕಾರಣವಾದ ಬೈ ಕಾರ್ಬೋನೇಟ್ಗಳು ಕಾರ್ಬೋನೇಟ್ಗಳಾಗುತ್ತವೆ.ಇದರಿಂದ ನೀರಿನ ತಾತ್ಕಾಲಿಕ ಗಡಸುತನ ನಿವಾರಣೆಯಾಗುತ್ತದೆ.
31.ಗಡಸುನೀರನ್ನು ಮೆದುಗೊಳಿಸುವ ಅತ್ಯುತ್ತಮ ವಿಧಾನಗಳು ಯಾವುದು?
1.ಆಸವನ ವಿಧಾನ- ನೀರು ಎಷ್ಟೇ ಗಡುಸಾಗಿದ್ದರೂ, ಎಷ್ಟೇ ಕಲ್ಮಶಗಳಿದ್ದರೂ ಈ ವಿಧಾನದಿಂದ ಸಂಪೂರ್ಣ ಶುದ್ಧ ನೀರು ದೊರೆಯುತ್ತದೆ.ಶುದ್ಧ ನಿರಿನಲ್ಲಿ ಯಾವುದೇ ಲವಣಗಳು ಇಲ್ಲದೇ ಇರುವುದರಿಂದ ಇದು ಯಾವಾಗಲು ಮೆದುವಾಗಿರುತ್ತದೆ.ಆದರೆ ಈ ವಿಧಾನವೂ ಸಹ ದುಬಾರಿ.
2.ಸೋಡಾ ವಿಧಾನ- ಗಡಸುನೀರಿಗೆ ವಾಷಿಂಗ್ಸೊಡಾ (ಸೋಡಿಯಂ ಕಾರ್ಬೋನೆಟ್) ಸೇರಿಸುವುದರಿಂದ ಅದು ಗಡಸುತನ ಉಂಟುಮಾಡುವ ಲವಣಗಳೊಂದಿಗೆ ಪ್ರತಿವರ್ತಿಸಿ ಆಯಾ ಕಾರ್ಬೋನೆಟ್ಗಳನ್ನು ಕೊಡುತ್ತವೆ.ನೀರಿನ ಗಡಸುತನಕ್ಕೆ ಕಾರಣವಾದ ಕ್ಯಾಲ್ಸಿಯಂ ಮತ್ತು ಮೇಗ್ನಿಷಿಯಂ ಬೈಕಾರ್ಬೋನೇಟ್ಗಳು, ಸಲ್ಫೇಟ್ಗಳು ಮತ್ತು ಕ್ಲೋರೈಡ್ಗಳು ಕ್ಯಾಲ್ಸಿಯಂ ಮೇಗ್ನಿಷಿಯಂ ಕಾರ್ಬೋನೆಟ್ಗಳಾಗುತ್ತವೆ.ಇದರಿಂದ ನೀರಿನ ಗಡಸುತನ ನಿವಾರಣೆಯಾಗುತ್ತದೆ.
3.ಪಮ್ರ್ಯುಟಿಟ್ ವಿಧಾನ( ನೀರನ್ನು ಮೆದುಗೊಳಿಸುವ ಪ್ರತ್ಯಾಮ್ಲ ವಿನಿಮಯ ವಿಧಾನ)-
ಕೃತಕವಾಗಿ ತಯಾರಿಸುವ “ಸೋಡಿಯಂ ಅಲ್ಯೂಮಿನಿಯಂ ಸಿಲಿಕೇಟ್”ನ್ನು “ ಪಮ್ರ್ಯುಟಿಟ್” ಎನ್ನುವರು.ಗಡಸುನೀರನ್ನು ಪಮ್ರ್ಯುಟಿವ್ ಮೂಲಕ ಹಾಯಿಸಿದಾಗ ನೀರಿನ ಗಡಸುತನಕ್ಕೆ ಕಾರಣವಾದ ಮೇಗ್ನಿಷಿಯಂ ಲವಣಗಳು ಮತ್ತು ಕ್ಯಾಲ್ಸಿಯಂ ಲವಣಗಳು ಕ್ರಮವಾಗಿ ಈ ವಿಧಾನದಲ್ಲಿ ಮೆಗ್ನೀಷಿಯಂ ಪಮ್ರ್ಯುಟಿಟ್ ಹಾಗೂ ಕ್ಯಾಲ್ಸಿಯಂ ಪಮ್ಯುಟಿಟ್ಗಳಾಗುತ್ತವೆ.
32.ಗಡಸು ನೀರನ್ನು ಮೆದುಗೊಳಿಸುವ ವಿಧಾನಗಳಲ್ಲಿ “ಪಮ್ರ್ಯುಟಿಟ್” ವಿಧಾನವು ಒಂದು ಅತ್ಯುತ್ತಮ ವಿಧಾನ ಯಾಕೆ?
✦ ಏಕೆಂದರೆ ಇದು ಕಡಿಮೆ ವೆಚ್ಚದಲ್ಲಿ ಆಗುತ್ತದೆ.ಮತ್ತು ಈ ವಿಧಾನದಲ್ಲಿ ನೀರಿನ ಗಡಸುತನ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
33.ಪಮ್ರ್ಯುಟಿಟ್ ವಿಧಾನ ಯಾವಾಗ ನಿಷ್ಪಲವಾಗುತ್ತದೆ?
✦ ನೀರಿನಲ್ಲಿ ‘ಕಬ್ಬಿಣ’ ಅಥವಾ ‘ಮ್ಯಾಂಗನೀಸ್’ ಕಶ್ಮಲಗಳು ಇದ್ದಲ್ಲಿ ಈ ವಿಧಾನ ನಿಷ್ಪಲವಾಗುತ್ತದೆ.
34.ಭಾರ ಜಲ ಎಂದರೇನು? ಅದರ ಉಪಯೋಗವೇನು?
✦ ಭಾರಜಲವನ್ನು “ಡ್ಯುಟೇರಿಯಂ ಆಕ್ಸೈಡ್” ಎನ್ನುವರು.
✦ ಡ್ಯುಟೇರಿಯಮ್ ಎನ್ನುವುದು ಹೈಡ್ರೋಜನ್ನ ಸಮಸ್ಥಾನಿ.ಇದರ ರಾಶಿ ಸಂಖ್ಯೆ 2, ರಾಸಾಯನಿಕ ಸಂಕೇತ ಆ.
✦ ಭಾರಜಲವನ್ನು ಸಾಮಾನ್ಯವಾಗಿ ‘ಬೈಜಿಕ ಕ್ರಿಯಾಕಾರಿಗಳಲ್ಲಿ ಮಂದಕ’ವಾಗಿ ಉಪಯೋಗಿಸುತ್ತಾರೆ.
35.ಮಳೆ ನೀರಿನ ಕೊಯಿಲು ಎಂದರೇನು?
✦ ಮಳೆ ನೀರನ್ನು ಹೆಚ್ಚು ಹೆಚ್ಚು ಸಮಗ್ರಹಿಸಿ, ಶೇಖರಿಸಿಟ್ಟು ಕೊಂಡು ಬಳಕೆ ಮಾಡುವುದೇ ‘ಮಳೆ ನೀರಿನ ಕೊಯಿಲು’.
36.ಸಂಪೂರ್ಣ ಶುದ್ದ ಅಥವಾ ಅಸವಿತ ನೀರಿನ ಉಪಯೋಗಗಳೇನು.?
✦ ಔಷಧಗಳ ತಯಾರಿಕೆಯಲ್ಲಿ
✦ ವೈದ್ಯಕೀಯ ಕ್ಷೇತ್ರಗಳಲ್ಲಿ
✦ ರಾಸಾಯನಿಕಗಳ ತಯಾರಿಕೆಯಲ್ಲಿ
✦ ಕೈಗಾರಿಕೆಗಳಲ್ಲಿ
✦ ವಿದ್ಯುತ್ ಬ್ಯಾಟರಿಗಳಲ್ಲಿ
37.ಅಸವಿತ ನೀರು ಅಥವಾ ಸಂಪೂರ್ಣ ಶುದ್ಧ ನೀರನ್ನು ಪಡೆಯುವ ವಿಧಾನಗಳಾವುವು?
✦ ನೀರಿನ ಆಸವನ ಮತ್ತು ಸಾಂದ್ರಿಕರಣದಿಂದ
✦ ನೀರನ್ನು ಭಾಗಶ: ಘನೀಕರಣ, ಶುದ್ಧ ಬರ್ಪವನ್ನು ಪ್ರತ್ಯೇಕಿಸಿ ದ್ರವೀಕರಿಸುವುದರಿಂದ
✦ ಆಕ್ಸಿಜನ್ನಲ್ಲಿ ಹೈಡ್ರೋಜನ್ನ್ನು ಅನ್ನು ದಹಿಸಿ, ಅಥವಾ ಚೆನ್ನಾಗಿ ಕಾಯಿಸಿದ ಆಕ್ಸೈಡ್ಗಳನ್ನು ಹೈಡ್ರೋಜನ್ನಿಂದ ಅಪಕರ್ಷಿಸಿ ಉತ್ಪನ್ನವನ್ನು ಸಂಗ್ರಹಿಸುವುದರಿಂದ
38.ನೀರಿನಲ್ಲಿರುವ ಅನಪೇಕ್ಷಿತ ವಾಸನೆಯನ್ನು ತೊಲಗಿಸುವ ವಿಧಾನ ಯಾವುದು?
✦ ವಾತಪೂರಣ
39.ವಾತಪೂರಣಕ್ಕೆ ಬದಲಾಗಿ ನೀರಿನಲ್ಲಿರುವ ಅನಪೇಕ್ಷಿತ ವಾಸನೆಯನ್ನು ತೊಲಗಿಸಲು ಎನನ್ನು ಬಳಸುತ್ತಾರೆ?
✦ ಆಕ್ಟಿವೇಟೆಡ್ ಕಾರ್ಬನ್
40.ದ್ರವದ ಸಾಪೇಕ್ಷತಾ ಸಾಂದ್ರತೆಯನ್ನು ಅಳೆಯುವ ಉಪಕರಣ ಯಾವುದು?
✦ ಹೈಡ್ರೋಮೀಟರ್