Stephen Hawking

ಅಸಾಮಾನ್ಯ ವಿಜ್ಞಾನಿ ಸ್ಟೀಫನ್ ಹಾಕಿಂಗ್ , ಅವರ ಸಾಧನೆಗಳೇನು ಗೊತ್ತೇ..?

ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಆಧುನಿಕ ವಿಶ್ವ ವಿಜ್ಞಾನದ ಉಜ್ವಲ ತಾರೆ ಎಂದೇ ಚಿರಪರಿಚಿತರಾಗಿದ್ದ ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) 14/03/2018  ನಿಧನರಾಗಿದ್ದಾರೆ.  ಅಂಗವೈಕಲ್ಯವನ್ನು ಮೆಟ್ಟಿ ನಿಂತು ಅಸಾಮಾನ್ಯ ಜ್ಞಾನದೊಂದಿಗೆ ವಿಶ್ವದ ಶ್ರೇಷ್ಠ ವಿಜ್ಞಾನಿ.

ಅವರು ಅದ್ಭುತ ವಿಜ್ಞಾನಿ ಹಾಗೂ ಅಸಾಧಾರಣ ವ್ಯಕ್ತಿಯಾಗಿದ್ದರು. ತಮ್ಮ ಅಪಾರ ಜ್ಞಾನ, ಬುದ್ಧಿವಂತಿಕೆ ಹಾಗೂ ಹಾಸ್ಯಪ್ರಜ್ಞೆಯಿಂದ ವಿಶ್ವದ ಅನೇಕರಿಗೆ ಅವರು ಸ್ಪೂರ್ತಿಯ ಚಿಲುಮೆಯಾಗಿದ್ದರು. ನೀವು ಜನರನ್ನು ಪ್ರೀತಿಸಿ ಅವರೊಂದಿಗೆ ಸಹಬಾಳ್ವೆ ನಡೆಸದಿದ್ದರೆ ಈ ಭೂಮಿಯು ತುಂಬಾ ದಿನ ಉಳಿಯುವುದಿಲ್ಲ ಎಂಬ ಅರ್ಥಗರ್ಭಿತ ಸಂದೇಶದ ಮೂಲಕ ಅವರು ಇತ್ತೀಚೆಗೆ ವಿಶ್ವದ ಗಮನ ಸೆಳೆದಿದ್ದರು.

ಸ್ಟೀಫನ್ ಹಾಕಿಂಗ್ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು :

* 1963ರಲ್ಲಿ ಮೋಟಾರ್ ನ್ಯೂರೋನ್ ಎಂಬ ಕಾಯಿಲೆಗೆ ಒಳಗಾದ ಹಾಕಿಂಗ್ ಇನ್ನೆರಡು ವರ್ಷಗಳಲ್ಲಿ ಮೃತಪಡುತ್ತಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ವಿಕಲಾಂಗತೆ ಮತ್ತು ಸಾವನ್ನೇ ಗೆದ್ದು ಅತ್ಯಂತ ಉಜ್ವಲ ಭೌತ ವಿಜ್ಞಾನಿ ಎಂದು ಅವರು ಗುರುತಿಸಿಕೊಂಡಿದ್ದರು.

* ಈ ವಿಶ್ವ ಕಂಡ ಸರ್ವಶ್ರೇಷ್ಠ ವಿಜ್ಞಾನಿ ಮತ್ತು ಸಂಶೋಧಕ ಆಲ್ಬರ್ಟ್ ಐನ್‍ಸ್ಟೀನ್ ಅವರಿಗಿಂತಲೂ ಅಪಾರ ಜನಪ್ರಿಯತೆ ಪಡೆದಿದ್ದ ಇವರು ಗಣಿತ, ಭೌತ ವಿಜ್ಞಾನ, ಖಗೋಳ ಶಾಸ್ತ್ರ, ಸಾಪೇಕ್ಷತಾ ಸಿದ್ಧಾಂತ, ಕ್ವಾಟಂ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಮೇಲೆ ಸಂಶೋಧನೆ ನಡೆಸಿ ವಿಶ್ವಮಾನ್ಯರಾಗಿದ್ದರು.

* ಇವರು 1988ರಲ್ಲಿ ಬರೆದ ಎ ಬ್ರೀಪ್ ಹಿಸ್ಟರಿ ಆಫ್ ಟೈಮ್ ಎಂಬ ಪುಸ್ತಕವು 10 ದಶಲಕ್ಷ ಪ್ರತಿಗಳು ಮಾರಾಟವಾಗಿ ವಿಶ್ವವಿಖ್ಯಾತಿ ಗಳಿಸಿ ಪ್ರಪಂಚದ 40ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಯಾಗಿ ಗಿನ್ನಿಸ್ ದಾಖಲೆ ನಿರ್ಮಿಸಿದೆ.

* ಹಾಕಿಂಗ್ ಅವರು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ, ಅಲ್ಬರ್ಟ್ ಐನ್‍ಸ್ಟೀನ್ ಪ್ರಶಸ್ತಿ, ವುಲ್ಫ್ ಪ್ರಶಸ್ತಿ, ಕೊಪ್ಲೆ ಮೆಡಲ್, ಫಂಡಮೆಂಟಲ್ ಫಿಸಿಕ್ಸ್ ಪ್ರಶಸ್ತಿ ಇತ್ಯಾದಿ ಪುರಸ್ಕಾರ-ಸನ್ಮಾನಗಳನ್ನು ಗಳಿಸಿದ್ದಾರೆ.

* ಸ್ಪೀಫನ್ ಹಾಕಿಂಗ್ ನಿಧನಕ್ಕೆ ಇಡೀ ವಿಶ್ವವೇ ಸಂತಾಪ ಸೂಚಿಸಿದ್ದು, ಬ್ರಿಟನ್ ಪ್ರಧಾನಿ ಥರೇಸಾ ಮೇ. ಬ್ರಿಟಿಷ್ ರಾಜಮನೆತನ, ಅನೇಕ ದೇಶಗಳ ಮುಖಂಡರು, ಖ್ಯಾತ ವಿಜ್ಞಾನಿಗಳು ಸೇರಿದಂತೆ ಖ್ಯಾತನಾಮರು ಇವರ ಸಾಧನೆಯ ಗುಣಗಾನ ಮಾಡಿದ್ದಾರೆ.

* ವಿಜ್ಞಾನ ಕ್ಷೇತ್ರಕ್ಕೆ ಹಾಕಿಂಗ್ ಇಷ್ಟೊಂದು ಕೊಡುಗೆ ನೀಡಿದರೂ ಅವರಿಗೆ ನೊಬೆಲ್ ಪ್ರಶಸ್ತಿ ಸಿಗದಿರುವುದು ವಿಪರ್ಯಾಸ.

* ಕಪ್ಪುರಂದ್ರ, ಕ್ವಾಂಟಮ್​ ಗುರುತ್ವಾಕರ್ಷಣೆ ವಿಚಾರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಆಲ್ಬರ್ಟ್ ಐನ್​ಸ್ಟೀನ್​ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಬಗ್ಗೆ ಅಧ್ಯಯನ ನಡೆಸಿದ್ದರು. ಬಳಿಕ ತನ್ನ ವಿಶಿಷ್ಟ ಸಿದ್ಧಾಂತಗಳ ಮೂಲಕ ವಿಶ್ವಪ್ರಸಿದ್ಧಿ ಪಡೆದರು. ಕಪ್ಪು ರಂಧ್ರ ಬಗ್ಗೆ ಸೃಷ್ಟಿಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಿದ್ದರು. ಮಹಾವಿಸ್ಫೋಟದಿಂದ ಕಪ್ಪು ರಂದ್ರ ಸೃಷ್ಟಿ ಎಂಬುದನ್ನು ತೋರಿಸಿದ್ದರು ವಿಲಿಯಂ ಹಾಕಿಂಗ್!

* 1942, ಜನವರಿ 8ರಂದು ಇಂಗ್ಲೆಂಡ್​ನ ಆಕ್ಸಫಡ್​​​ನಲ್ಲಿ ಸ್ಫೀಫನ್ ಜನಿಸಿದರು. ಯುವಕನಾಗಿದ್ದಾಗ ಸ್ಪೀಫನ್ ಹಾಕಿಂಗ್​ ನರರೋಗಕ್ಕೆ ತುತ್ತಾಗಿದ್ದರು. ಅಮಿಯೊಟ್ರೋಫಿಕ್​ ಲ್ಯಾಟರಲ್​ ಸ್ಕ್ಲೆರೋಸಿಸ್​ ಎಂಬ ರೋಗಕ್ಕೆ ತುತ್ತಾಗಿದ್ದರು. ಬಳಿಕ ವ್ಹೀಲ್ ಚೇರ್’​​ನಲ್ಲೇ ಕುಳಿತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.

ಸಂಶೋಧಕ ಪ್ರಾಧ್ಯಾಪಕ ಸ್ಟೀಫನ್‌ ವಿಲಿಯಂ ಹಾಕಿಂಗ್ :

ಸ್ಟೀಫನ್‌ ವಿಲಿಯಂ ಹಾಕಿಂಗ್ ರವರು, CH, CBE, FRS, FRSA (೮ ಜನವರಿ ೧೯೪೨ – ೧೪ ಮಾರ್ಚ್ ೨೦೧೮) ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, 40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದವರು. ಅವರ ಪುಸ್ತಕಗಳು ಹಾಗೂ ಸಾರ್ವಜನಿಕ ಸ್ವರೂಪಗಳು ಅಧ್ಯಯನ ಕ್ಷೇತ್ರದಲ್ಲಿ ಅವರನ್ನೊಬ್ಬ ಪ್ರಖ್ಯಾತ ತಾರೆಯನ್ನಾಗಿ ಹಾಗೂ ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ಫೆಲೋವನ್ನಾಗಿ ಮಾಡಿತು, ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದಾರೆ,ಹಾಗೂ 2009ನೇ ಇಸವಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶ್ರೇಷ್ಠ ಪ್ರಶಸ್ತಿಯಾದಪ್ರೆಸಿಡೆಂಟಲ್ ಮೆಡಲ್ ಆಫ್ ಫ್ರೀಡಂ ನೀಡಿ ಅವರನ್ನು ಗೌರವಿಸಲಾಗಿದೆ. ಗಾನ್‌ವಿಲ್ಲೆ ಅಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ, ಕೇಂಬ್ರಿಡ್ಜ್‌ ಹಾಗೂಒಂಟಾರಿಯೊದ ವಾಟರ್‌ಲೂನ, ಪೆರಿಮೀಟರ್ ಇನ್ಸ್‌ಟಿಟ್ಯೂಟ್‌ ಫಾರ್ ಥಿಯೊರೆಟಿಕಲ್ ಫಿಸಿಕ್ಸ್‌ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಕೂಡ ಅಲಂಕರಿಸಿದ್ದರು.

ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆಯಲ್ಲಿ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರ/ಕೃಷ್ಣ ವಿವರಗಳನ್ನು ಕುರಿತು ನೀಡಿದ ತನ್ನ ಕೊಡುಗೆಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ.ಸುಪ್ರಸಿದ್ಧ ವೈಜ್ಞಾನಿಕ ಕೃತಿಗಳಾದ ತನ್ನ ಸ್ವಂತ ಸಿದ್ಧಾಂತಗಳು ಹಾಗೂ ಸಾಮಾನ್ಯ ವಿಶ್ವವಿಜ್ಞಾನದಲ್ಲಿ ಅವರು ಯಶಸ್ಸನ್ನೂ ಗಳಿಸಿದ್ದಾರೆ; ಅವುಗಳಲ್ಲಿ ಪ್ರಮುಖವಾಗಿ ಮಾರಾಟವಾಗಲ್ಪಟ್ಟ ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‌ ದಾಖಲೆಯಾಗಿ 237 ವಾರಗಳ ಕಾಲ ಬ್ರಿಟೀಷ್‌ ಸಂಡೇ ಟೈಮ್ಸ್‌ನ ಅತ್ಯಂತ ಯಶಸ್ವಿ ಮಾರಾಟದ ಪುಸ್ತಕಗ ಳ ಪಟ್ಟಿಯಲ್ಲಿ ಉಳಿದುಕೊಂಡಿದೆ.

ಹಾಕಿಂಗ್‌ರ, ರೋಜರ್ ಪೆನ್‌ರೋಸ್‌ ಜೊತೆಗೂಡಿ ಇಂದಿನ ತನಕ ಮಾಡಿದ ಪ್ರಮುಖ ವೈಜ್ಞಾನಿಕ ಸಾಧನೆಗಳು,ವೈಶಿಷ್ಟ್ಯತೆಗಳಾದ ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತಗಳು, ಹಾಗೂ ಸೈದ್ಧಾಂತಿಕವಾಗಿ ಊಹಿಸಲಾದ ಕಪ್ಪು ರಂಧ್ರ/ಕೃಷ್ಣ ವಿವರಗಳು ವಿಕಿರಣವನ್ನು ಹೊರಸೂಸುತ್ತದೆ ಎಂಬುದನ್ನು ತಿಳಿಸಿದ್ದು, ಇದೇ ಹಾಕಿಂಗ್ ವಿಕಿರಣ ಹೊರಸೂಸುವಿಕೆ (ಅಥವಾ ಕೆಲವು ಬಾರಿ ಬೆಕೆನ್ಸ್‌ಟೀನ್‌-ಹಾಕಿಂಗ್ ವಿಕಿರಣ ಹೊರಸೂಸುವಿಕೆ) ಎಂದು ಇಂದು ಪ್ರಸಿದ್ಧವಾಗಿದೆ. ಹಾಕಿಂಗ್, ಹಲವಾರು ವರ್ಷಗಳ ಕಾಲ ಬೆಳವಣಿಗೆ ಹೊಂದಿದ್ದು ಅವರನ್ನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಡಿಸಿದ ಸ್ಥಿತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್‌ಗೆ (ALS) ಸಂಬಂಧಿಸಿದ ನರ-ಸ್ನಾಯು ಕ್ಷಯಕ್ಕೆ ಒಳಗಾದರು.

ಪ್ರಶಸ್ತಿಗಳು ಮತ್ತು ಗೌರವಗಳು : 
1975ರ ಎಡ್ಡಿಂಗ್‌ಟನ್ ಪದಕ
1976ರ ರಾಯಲ್ ಸೊಸೈಟಿಯ ಹ್ಯೂಜಸ್‌ ಪದಕ
1979ರ ಆಲ್ಬರ್ಟ್ ಐನ್‌ಸ್ಟೀನ್‌ ಪದಕ
1982ರ ಆರ್ಡರ್ ಆಫ್ ದಿ ಬ್ರಿಟೀಷ್‌ ಎಂಪೈರ್‌ (ಕಮ್ಯಾಂಡರ್)
1985ರ ರಾಯಲ್ ಖಗೋಳೀಯ ಸಂಸ್ಥೆಯ ಚಿನ್ನದ ಪದಕ (1872)
1986ರ ಪೊಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯ
1988ರ ಭೌತಶಾಸ್ತ್ರದಲ್ಲಿ ವುಲ್ಫ್ ಪ್ರಶಸ್ತಿ
1989ರ ಕಾನ್‌ಕಾರ್ಡ್‌ನಲ್ಲಿ ಪ್ರಿನ್ಸ್ ಆಫ್ ಆಸ್ಟುರಿಯಾಸ್ ಅವಾರ್ಡ್ಸ್
1989ರ ಕಂಪ್ಯಾನಿಯನ್‌ ಆಫ್‌ ಆನರ್‌
1999ರ ಅಮೇರಿಕನ್ ಫಿಸಿಕಲ್ ಸೊಸೈಟಿಯವರ ಜೂಲಿಯಸ್ ಎಡ್ಜರ್ ಲಿಲಿಯನ್‌ಫೀಲ್ಡ್ ಪ್ರಶಸ್ತಿ
2003ರ ಕೇಸ್ ವೆಸ್ಟ್ರನ್ ರಿಸರ್ವ್ ವಿಶ್ವವಿದ್ಯಾಲಯದ ಮೈಕಲ್‌ಸನ್ ಮೊರ್ಲೆ ಪ್ರಶಸ್ತಿ
2006ರ ರಾಯಲ್ ಸೊಸೈಟಿಯವರ ಕೊಪ್ಲಿ ಮೆಡಲ್
2008ರ ಸ್ಯಾಂಟಿಯಾಗೊ ಡಿ ಕಂಪೋಸ್ಟೆಲಾ ವಿಶ್ವವಿದ್ಯಾಲಯದ ಫೋನ್ಸೆಕಾ ಪ್ರೈಸ್‌
2009ರ ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಾಗರೀಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ

ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 2

Comments

No comments yet. Why don’t you start the discussion?

Leave a Reply

Your email address will not be published. Required fields are marked *