1.ಸರ್ ಚಾರಲ್ಸಸ್‍ವುಡ್ ಆಯೋಗ 1854
ಭಾರತದಲ್ಲಿ ಶಿಕ್ಷಣದ ಪ್ರಗತಿಗೆ ಅಗತ್ಯ ಅಂಶಗಳನ್ನು ಶಿಪಾರಸ್ಸು ಮಾಡಲು ನೇಮಿಸಲಾಯಿತು. ಇದನ್ನು ಭಾರತದ ಶಿಕ್ಷಣದ ‘ ಮ್ಯಾಗ್ನಕಾರ್ಟ್’
( ಮಹಾಸನ್ನದು) ಎಂದು ಕರೆಯುತ್ತಾರೆ. ಇದು ದೇಶದ ಮೊಟ್ಟ ಮೊದಲ ಶಿಕ್ಷಣ ಆಯೋಗವಾಗಿದೆ.
2.ಹಂಟರ್ ಆಯೋಗ 1882
ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪ್ರಗತಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಖಾಸಗಿಯವರಿಗೆ ಪ್ರಾಥಮಿಕ ಶಿಕ್ಷಣ ಸಂಸ್ಥೆ ನಡೆಸುವ ಬಗ್ಗೆ ಅಗತ್ಯ ಅಂಶಗಳನ್ನು ಶಿಫಾರಸ್ಸು ಮಾಡುತ್ತದೆ.
3.ಭಾರತ ಸರ್ಕಾರದ ಗೊತ್ತುವಳಿ ( ರಾಯಲೆ ವಿಸ್ತರಣೆ ಆಯೋಗ) 1904
ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮತ್ತು ಪ್ರಾಥಮಿಕ ಶಿಕ್ಷಣ ಅಗತ್ಯ ಶಿಫಾರಸ್ಸು ಮಾಡಲು ಸ್ಥಾಪಿಸಲಾಯಿತು.
4.ಹರ್ಟಾಗ ಸಮಿತಿ 1929
ದೇಶದ ಶಕ್ಷಣ ಉನ್ನತಿಕರಣಕ್ಕೆ ಅಗತ್ಯವಾದ ಅಂಶ ಶಿಫಾರಸ್ಸು ಮಾಡಲು ಸ್ಥಾಪಿಸಲಾಯಿತು.
5.ಕಲ್ಕತ್ತಾ ವಿಶ್ವವಿದ್ಯಾಲಯ ಆಯೋಗ – 1917
( ಸ್ಯಾಡ್ಲರ್ ಆಯೋಗ)
ದೇಶದಲ್ಲಿ ಉನ್ನತ ಶಿಕ್ಷಣದ ಸ್ಥಿತಿಗತಿ ಹಾಗೂ ಬೆಳವಣಿಗೆಗೆ ಅಗತ್ಯ ಅಂಶ ತಿಳಿಸಲು ಈ ಆಯೋಗವನ್ನು ಸ್ಥಾಪಿಸಲಾಯಿತು.
6.ಗೋಖಲೆ ಬಿಲ್ – 1912
ದೇಶದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ತರಬೇಕೆಂದು ಸಲಹೆ ನೀಡಿತು.
7.ಸರ್ಜೆಂಟೆ ವರದಿ – 1944
ಹೊಸ ಶಿಕ್ಷಣ ಯೋಜನೆಯನ್ನು ಸರ್ಕಾರದ ಮುಂದಿಟ್ಟಿತು. 40 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡಿನಲ್ಲಿ ಸಾಧಿಸಲಾದ ಸಾಧನೆಯನ್ನು ಸಾಧಿಸಲು ಅಗತ್ಯ ಅಂಶಗಳನ್ನು ಶಿಫಾರಸ್ಸು ಮಾಡಲು ಸ್ಥಾಪಿಸಲಾಗಿತ್ತು.
8.ವಿಶ್ವವಿದ್ಯಾಲಯ ಶಿಕ್ಷಣ ಆಯೋಗ ( ರಾಧಾಕೃಷ್ನ ಆಯೋಗ) – 1948 -1949
ಸ್ವತಂತ್ರ ನಂತರದ ದೇಶದ ಮೊಟ್ಟ ಮೊದಲ ಉನ್ನತ ಶಿಕ್ಷಣದ ಅಭಿವೃದ್ದಿಗೆ ಅಗತ್ಯ ಅಂಶಗಳನ್ನು ಶಿಫಾರಸ್ಸು ಮಾಡಲು ಸ್ಥಾಪಿಸಲಾಯಿತು.
9.ಮಾಧ್ಯಮಿಕ ಶಿಕ್ಷಣ ( ಮೊದಲಿಯರ್) – 1952 -1953
ದೇಶದ ಮಾಧ್ಯಮಿಕ ಶಿಕ್ಷಣದ ಬೆಳವಣಿಗೆ ಹಾಗೂ ವಿಸ್ತರಣೆಗೆ ಆಯೋಗ ಅಗತ್ಯ ಅಂಶಗಳನ್ನು ಶಿಫಾರಸ್ಸು ಮಾಡಲು ಸ್ಥಾಪಿಸಲಾಗಿತ್ತು.
10.ಭಾರತೀಯ ಶಿಕ್ಷಣ ಆಯೋಗ ( ಕೊಠಾರಿ ಶಿಕ್ಷಣ ಆಯೋಗ )– 1964 -65
ಪ್ರಾಥಮಿಕ ಶಿಕ್ಷಣ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಮಾಡಲು ಅಗತ್ಯ ಅಂಶಗಳ ಶಿಪಾರಸ್ಸಿಗೆ ಸ್ಥಾಪಿಸಲಾಯಿತು.
11.ರಾಷ್ಟ್ರೀಯ ಶಿಕ್ಷಣ ನೀತಿ – 1986
ತಾಂತ್ರಿಕ ಶಿಕ್ಷಣ , ರಾಷ್ಟ್ರೀಯ ಸಮಗ್ರತೆ, ರಾಷ್ಟ್ರ ಪ್ರಜ್ಞೆಯ ಬೋಧನಾ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು 21 ನೇ ಶತಮಾನಕ್ಕೆ ರಾಷ್ಟ್ರ ನಿರ್ಮಿಸುವುದು.
ಭಾರತದ ಮೊದಲ AI ನಗರ ಎಲ್ಲಿ ನಿರ್ಮಾಣವಾಗಲಿದೆ..?