1. ಕೈಗಾರಿಕೆಗಳನ್ನು ಅವುಗಳ ರೂಪುರೇಷೆಗಳ ಆಧಾರದಲ್ಲಿ ಯಾವ ಎರಡು ವಿಭಾಗಗಳಾಗಿ ವರ್ಗೀಕರಿಸಬಹುದು?
• ಕೈಗಾರಿಕೆಗಳನ್ನು ಅವುಗಳ ರಚನೆಯ ಆಧಾರದಲ್ಲಿ ವರ್ಗೀಕರಿಸಲಾಗಿದೆ.
1.ಉತ್ಪಾದಕ ಕೈಗಾರಿಕೆಗಳು
2. ಸಣ್ಣ ಪ್ರಮಾಣದ ಕೈಗಾರಿಕೆಗಳು ಅಥವಾ ಗೃಹ ಕೈಗಾರಿಕೆಗಳು
2. ಉತ್ಪಾದಕ ಕೈಗಾರಿಕೆಗಳೆಂದರೇನು?
• ಕಚ್ಚಾವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ ಎಲ್ಲ ಕಾರ್ಯಗಳನ್ನು ಹೊಂದಿರುವ ಕೈಗಾರಿಕೆಗಳನ್ನು ‘ ಉತ್ಪಾದಕ ಕೈಗಾರಿಕೆಗಳು’ ಎನ್ನುತ್ತೇವೆ.
3. ಉತ್ಪಾದಕ ಕೈಗಾರಿಕೆಗಳ ಪ್ರಾಮುಖ್ಯತೆ ಏನು?
• ಅವು ದೇಶದ ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯವನ್ನು ಹೆಚ್ಚಿಸುತ್ತದೆ.
• ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.
• ಅವು ತೃತೀಯ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
4. ಕೈಗಾರಿಕೆಗಳು ಕೃಷಿಯ ಅಭಿವೃದ್ಧಿಗೆ ಹೇಗೆ ಸಹಾಯ ಮಾಡುತ್ತದೆ?
• ಅನೇಕ ಕೈಗಾರಿಕೆಗಳು ಕೃಷಿ ಪ್ರಧಾನ ಕೈಗಾರಿಕೆಗಳಾಗಿದ್ದು, ಕೃಷಿ ಉತ್ಪನ್ನಗಳು ಈ ಕೈಗಾರಿಕೆಗಳ ಕಚ್ಚಾ ವಸ್ತುಗಳಾಗಿವೆ. ಈ ಕೈಗಾರಿಕೆಗಳ ಅಭಿವೃದ್ಧಿ ಕೃಷಿಯಲ್ಲಿ ಉತ್ಪಾದನೆ ಹೆಚ್ಚಾಗಲು ಸಹಾಯ ಮಾಡುತ್ತದೆ.
5. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಆದ ಕೈಗಾರಿಕೆಗಳ ಪರಿಸ್ಥಿತಿ ಹೇಗಿತ್ತು?
• ಬ್ರಿಟಿಷರ ಕಾಲದಲ್ಲಿ ಕರಲವೇ ಕೈಗಾರಿಕೆಗಳು ಮಾತ್ರ ಭಾರತದಲ್ಲಿ ಪ್ರಾರಂಭವಾದವು. 1854 ರಲ್ಲಿ ಮುಂಬಯಿಯಲ್ಲಿ ಒಂದು ಹತ್ತಿಗಿರಣಿ, 1855 ರಲ್ಲಿ ಕಲ್ಕತ್ತಾ ಬಳಿ ಒಂದು ಸೆಣಬು ಕಾರ್ಖಾನೆ ಆರಂಭಿಸಲ್ಪಟ್ಟವು. 1858 ರಲ್ಲಿ ಅಹ್ಮದಾಬಾದ್‍ನಲ್ಲಿ ಇನ್ನೊಂದು ಹತ್ತಿಗಿರಣಿ ಪ್ರಾರಂಭವಾಯಿತು.
6. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಕೈಗಾರಿಕೆಗಳು ನಶಿಸಲು ಕಾರಣವೇನು?
• ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದ ಕೈಗಾರಿಕೆಗಳು ತೀವ್ರ ತೊಂದರೆಗೊಳಗಾದವು. ಬ್ರಿಟಿಷರ ತೆರಿಗೆ ನೀತಿ ಮತ್ತು ವ್ಯಾಪಾರ ನೀತಿಗಳು ಭಾರತೀಯ ಕೈಗಾರಿಕೆಗಳ ಬೆಳವಣಿಗೆಗೆ ಅಡ್ಡಿಯಾದವು. ಇಂಗ್ಲೆಂಡಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತದ ಕೈಗಾರಿಕೆಗಳ ಹಿನ್ನಡೆಯಾಯಿತು.
7. ಛೋಟಾನಾಗಪುರ ಪ್ರಸ್ಥಭೂಮಿಯಲ್ಲಿ ದೊರಕುವ ಖನಿಜಗಳಾವುವು?
• ಕಬ್ಬಿಣದ ಅದಿರು, ಕಲ್ಲಿದ್ದಲು, ಮ್ಯಾಂಗನೀಸ್, ಅಭ್ರಕ ಮತ್ತು ಬಾಕ್ಸೈಟ್‍ನ ಭಾರೀ ನಿಕ್ಷೇಪಗಳಿವೆ.
8. ಮಹಾರಾಷ್ಟ್ರ – ಗುಜರಾತ್ ಪ್ರದೇಶವು ಹತ್ತಿಬಟ್ಟೆ ತಯಾರಿಕೆಗೆ ಪ್ರಸಿದ್ಧಿ ಹೊಂದಿದೆ. ಕಾರಣ ಕೊಡಿ.
• ಮಹಾರಾಷ್ಟ್ರ – ಗುಜರಾತ್ ಪ್ರದೇಶವು ವಿಶಾಲವಾದ ಹತ್ತಿ ಬೆಳೆಯುವ ಪ್ರದೇಶವಾಗಿದೆ. ಹಾಗಾಗಿ ಈ ಪ್ರದೇಶವು ಹತ್ತಿಬಟ್ಟೆ ತಯಾರಿಕೆಯಲ್ಲಿ ಪ್ರಗತಿ ಸಾಧಿಸಿ ಪ್ರಸಿದ್ಧಿ ಪಡೆದಿದೆ.
9. ದಕ್ಷಿಣ ಭಾರತದಲ್ಲಿ ಕೈಗಾಋಇಕೆಗಳ ಬೆಳವಣಿಗೆಗೆ ಯಾವ ಅಂಶಗಳು ಸಹಕಾರಿಯಾಗಿದೆ?
• ದಕ್ಷಿಣ ಭಾರತದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ಕಚ್ಚಾವಸ್ತುಗಳ ಲಭ್ಯತೆ, ಜಲವಿದ್ಯುಚ್ಚಕ್ತಿ, ಮಾರುಕಟ್ಟೆ ಸೌಕರ್ಯ ಇಲ್ಲಿ ಕೈಗಾರಿಕೆಗಳ ಬೆಳವಣಿಗೆ ಸಾಧ್ಯವಾಗಿದೆ.
10. ಉತ್ಪಾದಕ ಕೈಗಾರಿಕೆಗಳ ವಿಧಗಳು ಯಾವುವು?
• ಉತ್ಪಾದಕ ಕೈಗಾರಿಕೆಗಳನ್ನು ಅವುಗಳು ಉಪಯೋಗಿಸುವ ಕಚ್ಚಾವಸ್ತುಗಳ ಆಧಾರದಲ್ಲಿ ‘ವ್ಯವಸಾಯಾಧಾರಿತ ಕೈಗಾರಿಕೆಗಳು’ ಮತ್ತು ‘ಖನಿಜಾಧಾರಿತ ಕೈಗಾರಿಕೆಗಳು’ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
11. ಮುಂಬಯಿಯನ್ನು ‘ಭಾರತದ ಮ್ಯಾಂಚೆಸ್ಟರ್’ ಎಂದು ಕರೆಯಲು ಕಾರಣವೇನು?
• ಮ್ಯಾಂಚೆಸ್ಟರ್ ಇಂಗ್ಲೆಂಡಿನ ಹತ್ತಿಬಟ್ಟೆ ಉದ್ಯಮದ ಮುಖ್ಯ ಕೇಂದ್ರ. ಭಾರತದಲ್ಲಿ ಮುಂಬಯಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಹತ್ತಿಬಟ್ಟೆ ಗಿರಣಿಗಳಿವೆ. ಹಾಗಾಗಿ ಮುಂಬಯಿಯನ್ನು ‘ ಭಾರತದ ಮ್ಯಾಂಚೆಸ್ಟರ್’ ಎಂದು ಕರೆಯುತ್ತಾರೆ. ಇದನ್ನು ‘ ಕಾಟನೋಪೋಲಿಸ್’ ಎಂದು ಕರೆಯುತ್ತಾರೆ.
12. ಭಾರತದ ವಿಭಜನೆ ಸೆಣಬಿನ ಕೈಗಾರಿಕೆಗೆ ಬಲವಾದ ಆಘಾತವನ್ನುಂಟು ಮಾಡಿತು. ಕಾರಣ ಕೊಡಿ.
• ಭಾರತದ ವಿಭಜನೆ ಸೆಣಬಿನ ಕೈಗಾರಿಕೆಗೆ ಬಲವಾದ ಆಘಾತವನ್ನುಂಟು ಮಾಡಿತು. ಏಕೆಂದರೆ ಸೆಣಬು ಬೆಳಡಯುವ ಪ್ರದೇಶಗಳೆಲ್ಲ ಪಾಖಿಸ್ತಾನದಲ್ಲಿ ಸೇರಿಹೋದವು. ಆದರೆ ಸೆಣಬಿನ ಗಿರಣಿಗಳೆಲ್ಲ ಭಾರತದಲ್ಲಿ ಉಳಿದುಕೊಂಡವು.
13. ಸಕ್ಕರೆ ಕಾರ್ಖಾನೆಗಳು ಭಾರತದಲ್ಲಿ ಯಾವ ಪ್ರದೇಶದಲ್ಲಿ ಕೇಂದ್ರಿಕೃತವಾಗಿದೆ?
• ಬಹಳಷ್ಟು ಸಕ್ಕರೆ ಕಾರ್ಖಾನೆಗಳು ಗಂಗಾನದಿಯ (ಉತ್ತರಪ್ರದೇಶ, ಬಿಹಾರ) ಬಯಲಿನಲ್ಲಿ ಕೇಂದ್ರಿಕೃತವಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲೂ ಸಕ್ಕರೆ ಕಾರ್ಖಾನೆಗಳು ಇವೆ.
14. ಉತ್ತರಪ್ರದೇಶದ ಗೋರಖಪುರ ಜಿಲ್ಲೆಯನ್ನು ‘ ಭಾರತದ ಜಾವಾ” ಎಂದು ಏಕೆ ಕರೆಯಲಾಗುತ್ತದೆ?
• ಇಂಡೋನೇಶಿಯಾದ ಜಾವಾದ್ವೀಪವು ಸಕ್ಕರೆ ಕಾರ್ಖಾನೆಗಳಿಗೆ ಪ್ರಸಿದ್ಧವಾಗಿದೆ. ಗೋರಖಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಹೀಘಾಗಿ ಇದನ್ನು “ ಭಾರತದ ಜಾವಾ” ಎಮದು ಕರೆಯಲಾಗುತ್ತಿದೆ.
15. ಭಾರತದಲ್ಲಿ ಕಾಗದದ ಕಾರ್ಖಾನೆಗಳು ಎಲ್ಲಿ ಕೇಂದ್ರಿಕೃತವಾಗಿದೆ?
• ಭಾರತದಲ್ಲಿ ಕಾಗದದ ಕಾರ್ಖಾನೆಗಳು ಪಶ್ಚಿಮ ಬಂಗಾಳದಲ್ಲಿ ಕೇಂದ್ರಿಕೃತವಾಗಿದೆ. ಕಲ್ಕತ್ತಾ, ರಾಣಿಗಂಜ್, ಮತ್ತು ಕಾಕಿನಾಡಗಳು ಮುಖ್ಯ ಕೇಂದ್ರಗಳು.
16. ಕಾಗದದ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಯಾವುವು?
• ಕಾಗದದ ಕೈಗಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳು ಕಾಸ್ಟಿಕ್‍ಸೋಡಾ, ಸೋಡ ಆಶ್, ಸೋಡಿಯಂ ಸಲ್ಪೇಟ್, ಕ್ಲೋರಿನ್ ಮತ್ತು ಸಲ್ಪೂರಿಕ್ ಆಮ್ಲ.
17. ಕರ್ನಾಟಕದಲ್ಲಿ ಕಾಗದದ ಕಾರ್ಖಾನೆಗಳು ಎಲ್ಲೆಲ್ಲಿ ಇವೆ.?
• ಕರ್ನಾಟಕದಲ್ಲಿ ದಾಂಡೇಲಿ, ಭಧ್ರಾವತಿ, ಮತ್ತು ಮಂಡ್ಯಗಳಲ್ಲಿ ಕಾಗದದ ಕಾರ್ಖಾನೆಗಳಿವೆ.
18. ಖನಿಜ ಆಧಾರಿತ ಪ್ರಮುಖ ಕೈಗಾರಿಕೆಗಳು ಯಾವುವು?
• ಭಾರತದ ಪ್ರಮುಖ ಖನಿಜ ಆಧಾರಿತ ಕೈಗಾರಿಕೆಗಳು, ಕಬ್ಬಿಣ ಮತ್ತು ಉಕ್ಕು, ಬಾರೀ ಎಂಜಿನಿಯರಿಂಗ್ ಯಂತ್ರೋಪಕರಣಗಳು, ಸಾರಿಗೆ ಸಾಧನಗಳು, ರಾಸಾಯನಿಕ ವಸ್ತುಗಳು, ರಾಸಾಯನಿಕ ಗೊಬ್ಬರಗಳು, ಮತ್ತು ಸಿಮೆಂಟ್..ಇತ್ಯಾದಿ.
19. 1947 ಕ್ಕಿಂತ ಮೊದಲು ಭಾರತದಲ್ಲಿದ್ದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳನ್ನು ಹೆಸರಿಸಿ.
• ಭಾರತದ ಮೊದಲ ಆಧುನಿಕ ಕಬ್ಬಿಣದ ಕಾರ್ಖಾನೆ 1874 ರಲ್ಲಿ ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಪ್ರಾರಂಭವಾಯಿತು. ಅನಂತರ ನಿಧಾನಗತಿಯಲ್ಲಿ ಈ ಕೈಗಾರಿಕೆ ಬೆಳೆಯಿತು. 1947 ರ ವರೆಗೆ ಮೂರು ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಇವುಗಳು ಜೆಮ್‍ಷೆಡ್‍ಪುರದ ಟಾಟ ಕಬ್ಬಿಣ ಮತ್ತು ಉಕ್ಕಿನ ಕಂಪೆನಿ, ಪಶ್ಚಿಮ ಬಂಗಾಳದ ಬರ್ನ್‍ಪುರದ ಇಂಡಿಯನ್ ಈರನ್ ಅಂಡ್ ಸ್ಟೀಲ್ ಕಂಪೆನಿ, ಮತ್ತು ಭದ್ರಾವತಿಯ ಮೈಸೂರ್ ಐರನ್ ಅಂಡ್ ಸ್ಟೀಲ್ ಕಂಪೆನಿ.
20. ಖಾಸಗಿ ಕ್ಷೇತ್ರದಲ್ಲಿರುವ ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವುದು?
• ಜೆಮ್‍ಷೆಡ್‍ಪುರದ ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
21. ಸ್ವಾತಂತ್ರ್ಯಾ ನಂತರ ಪ್ರಾರಂಭಿಸಲ್ಪಟ್ಟ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಯಾವುವು?
• ಸ್ವಾತಂತ್ರ್ಯಾ ನಂತರದ ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು-ಮಧ್ಯಪ್ರದೇಶದ ಭಿಲಾಯ್( ಈಗ ಛತ್ತಿಸಘಢ), ಒರಿಸ್ಸಾದ ರೂರ್ಕೆಲಾ ಮತ್ತು ಪಶ್ಚಿಮ ಬಂಗಾಳದ ದುರ್ಗಾಪುರ ಗಳಲ್ಲಿ ಸ್ಥಾಪಿಸಲಾಯಿತು. ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಬಿಹಾರದ (ಈಗಿನ ಜಾರ್ಖಂಡ್)ಬೊಕಾರೋದಲ್ಲಿ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪ್ರಾರಂಭವಾಯಿತು. ಅನಂತರ ತಮಿಳುನಾಡಿನ ಸೇಲಂ, ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಕರ್ನಾಟಕದ ವಿಜಯನಗರಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು.
22. ಛೋಟಾನಾಗಪುರ ಪ್ರಸ್ಥಭೂಮಿಯನ್ನು ಭಾರತದ ‘ರ್ಹೂರ್’ ಎಂದು ಕರೆಯುತ್ತಾರೆ. ಏಕೆ?
• ಜರ್ಮನಿಯಲ್ಲಿರುವ ‘ರ್ಹೂರ್’ ಪ್ರದೇಶ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಬಹಳ ಪ್ರಸಿದ್ದಿ ಪಡೆದಿದೆ. ಅದರಂತೆ ಛೋಟಾನಾಗಪುರ ಪ್ರಸ್ಥಭೂಮಿಯಲ್ಲೂ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಬೇಕಾದ ಸಾಮಾನ್ಯ ಎಲ್ಲಾ ಕಚ್ಚಾ ವಸ್ತುಗಳು ದೊರೆಯುವುದೂ ಇದಕ್ಕೆ ಕಾರಣ.
23. ಪ್ರಾಚೀನ ಭಾರತವು ಹೆಸರು ಪಡೆದ ‘ ಮಸ್ಲಿನ್’ ಬಟ್ಟೆಯನ್ನು ಉತ್ಪಾದನೆ ಮಾಡುತ್ತಿದ್ದ ಸ್ಥಳ ಯಾವುದು?
• ಢಾಕಾ
24. ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವ ಉತ್ತರ ಪ್ರದೇಶದ ಜಿಲ್ಲೆ ಯಾವುದು?
• ಗೋರಖಪುರ
25. ರೈಲುಗಾಡಿಗಳ ಗಾಲಿ ಮತ್ತು ಅಚ್ಚು ಕಾರ್ಖಾನೆಯನ್ನು ಬೆಂಗಳೂರಿನ ಯಾವ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.?
• ಯಲಹಂಕ
26. ಸಿಮೆಂಟ್ ಉತ್ಪಾದನೆಯಲ್ಲಿ ಆರಂಭದಲ್ಲಿ ಉಪಯೋಗಿಸಲ್ಪಡುತ್ತಿದ್ದ ಕಚ್ಚಾವಸ್ತು ಯಾವುದು?
• ಸಮುದ್ರದ ಚಿಪ್ಪು
27. ಸಿಮೆಂಟ್ ಉದ್ಯಮಕ್ಕೆ ಬೇಕಾದ ಕಚ್ಚಾವಸ್ತುಗಳು ಯಾವುವು?
• ಸುಣ್ಣದ ಕಲ್ಲು, ಜಿಪ್ಸಂ ಮತ್ತು ಜೇಡಿಮಣ್ಣು
28. ಕಾಗದವನ್ನು ತಯಾರಿಸುವ ಮೊದಲ ಕಾರ್ಖಾನೆ ಕಲ್ಕತ್ತಾ ಬಳಿ ಎಲ್ಲಿ ಸ್ಥಾಪಿತವಾಯಿತು?
• ಬಾಲ್ಲಿ
29. ಉಕ್ಕು ಮತ್ತು ಕಬ್ಬಿಣದ ಕೈಗಾರಿಕೆಯನ್ನು ಸಾರ್ವಜನಿಕ ಮತ್ತು ಖಾಸಗಿ ರಂಗಗಳಲ್ಲಿ ಪ್ರೋತ್ಸಾಹಿಸಲು ಪ್ರಾರಂಭಿಸಿದ ಸಂಸ್ಥೆ ಯಾವುದು?
• ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
30. ಹಿಂದೂಸ್ಥಾನ್ ಮಶಿನ್ ಟೂಲ್ಸ್ ಕಾರ್ಖಾನೆಯನ್ನು ಕರ್ನಾಟಕದ ಯಾವ ಸ್ಥಳದಲ್ಲಿ ಸ್ಥಾಪಿಸಲಾಯಿತು?
• ಬೆಂಗಳೂರು
31. ಭಾರತದ ಮೊದಲ ಸಿಮೆಂಟ್ ಕಾರ್ಖಾನೆ ಸ್ಥಾಪಿತವಾದದ್ದು ಎಲ್ಲಿ?
• ಚೆನ್ನೈ
32. ಭಾರತದ ಮೊದಲ ರಾಸಾಯನಿಕ ಗೊಬ್ಬರ ಕಾರ್ಖಾನೆಯನ್ನು ಮೈಸೂರಿನ ಸಮೀಪ ಎಲ್ಲಿ ಸ್ಥಾಪಿಸಲಾಯಿತು?
• ಬೆಳಗೊಳ
33. ಕೋಕೀಂಗ್ ಇದ್ದಿಲನ್ನು ಯಾವುದನ್ನು ಕರಗಿಸಲು ಉಪಯೋಗಿಸುತ್ತಾರೆ?
• ಕಬ್ಬಿಣ
34. ಮೊಟ್ಟಮೊದಲ ಸೆಣಬಿನ ಕೈಗಾರಿಕೆ ಎಲ್ಲಿ ಸ್ಥಾಪಿತವಾಯಿತು?
• ರಿಶ್ರಾ
35. ಕೈಗಾರಿಕೆಗಳು ಯಾವ ವಲಯದಲ್ಲಿ ಬರುತ್ತವೆ?
• ದ್ವೀತಿಯ ವಲಯ
36. ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದವರು ಯಾರು?
• ಸರ್. ಎಂ. ವಿಶ್ವೇಶ್ವರಯ್ಯನವರು
37. ದಕ್ಷಿಣ ಭಾರತದ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಯಾವುದು?
• ಭಧ್ರಾವತಿಯ ಮೈಸೂರು ಈರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್
38. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಇರುವ ಹೆಸರೇನು?
• ವಿಶ್ವೇಶ್ವರಯ್ಯಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
39. ಕರ್ನಾಟಕದ ಮ್ಯಾಂಚೇಸ್ಟರ್ ಎಂದು ಯಾವ ಸ್ಥಳವನ್ನು ಕರೆಯುತ್ತಾರೆ?
• ದಾವಣಗೆರೆ
40. ಕರ್ನಾಟಕದ ಮೊಟ್ಟ ಮೊದಲ ಕಾಗದ ಕೈಗಾರಿಕೆ ಯಾವುದು?
• ಭದ್ರಾವತಿಯ “ ಮೈಸೂರ್ ಪೇಪರ್ ಮಿಲ್( 1936).
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕರ್ನಾಟಕದ ಮುಖ್ಯ ನದಿಗಳು ಮತ್ತು ಅವುಗಳು ಉಗಮ ಸ್ಥಳ