Brahmaputra River

ಬ್ರಹ್ಮಪುತ್ರ ಮತ್ತು ಸಿಂಧೂ ನದಿ ಬಗ್ಗೆ ಸಂಕ್ಷಿಪ್ತ ಮಾಹಿತಿ

ಬ್ರಹ್ಮಪುತ್ರನದಿ
✦ನದಿಯ ಉಗಮ ಸ್ಥಾನ : (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್
✦ಕೊನೆಗೆ ಸೇರುವ ಪ್ರದೇಶ      : ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
✦ವ್ಯಾಪ್ತಿ ರಾಜ್ಯಗಳು : ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
✦ಪ್ರಮುಖ ಉಪನದಿಗಳು : ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್
✦ಪ್ರಮುಖ ಅಣೆಕಟ್ಟುಗಳು : ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)
✦ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)

ವಿಶೇಷತೆಗಳು :
1.ಈ ನದಿಗೆ ಟಿಬೆಟಿನಲ್ಲಿ ‘ಸಾಂಗ್ ಪೋ’, ‘ಯಾರ್ಲುಂಗ್ ಜಾಂಗ್ಬೋ ಜಿಯಾಂಗ್’ ಹೆಸರಿನಿಂದ ಕರೆಯುತ್ತಾರೆ.
2.ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು ‘ಡಿಹಾಂಗ್ ಕಂದರ’ ಎನ್ನುವರು.
3.ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ‘ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.

ಸಿಂಧೂ (ಇಂಡಸ್ ನದಿ)
✦ನದಿಯ ಉಗಮ ಸ್ಥಾನ : ಮಾನಸ ಸರೋವರ, ಟಿಬೆಟ್
✦ಕೊನೆಗೆ ಸೇರುವ ಪ್ರದೇಶ (ಆಡಿಚಿiಟಿ Iಟಿಣo) :— ಪಾಕಿಸ್ತಾನ, ಅರಬ್ಬೀ ಸಮುದ್ರ
✦ವ್ಯಾಪ್ತಿ ರಾಜ್ಯಗಳು : (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
✦ಪ್ರಮುಖ ಉಪನದಿಗಳು : ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ
✦ಪ್ರಮುಖ ಅಣೆಕಟ್ಟುಗಳು : ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
✦ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.

ವಿಶೇಷತೆಗಳು :
1.ಟಿಬೆಟ್ ನಲ್ಲಿ ಸಿಂಧೂ ನದಿಗೆ ‘ಸಿಂಘೆ ಕಂಬಾಬ್’ ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ ‘ಜೋದಾಲ್, ಕಾಬೂಲ್, ತಾಚಿ’ ಪ್ರಮುಖವಾದವುಗಳು.

Comments

No comments yet. Why don’t you start the discussion?

Leave a Reply

Your email address will not be published. Required fields are marked *