ಆರ್ಚರಿ ವಿಶ್ವ​  ರ್‍ಯಾಂಕಿಂಗ್​ನಲ್ಲಿ ಮೊದಲ ಸ್ಥಾನಕ್ಕೇರಿದ ದೀಪಿಕಾ ಮಾರಿ

ಆರ್ಚರಿ ವಿಶ್ವ​ ರ್‍ಯಾಂಕಿಂಗ್​ನಲ್ಲಿ ಮೊದಲ ಸ್ಥಾನಕ್ಕೇರಿದ ದೀಪಿಕಾ ಮಾರಿ

ಭಾರತದ ಸ್ಟಾರ್​ ಆರ್ಚರಿ ​ ಆಟಗಾರ್ತಿ ದೀಪಿಕಾ ಕುಮಾರಿ ಒಂದೇ ದಿನ ಮೂರು ಚಿನ್ನದ ಪದಕಗಳನ್ನ ಗಳಿಸುವ ಮೂಲಕ ಗ್ಲೋಬಲ್​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ರಾಂಚಿಯ 27 ವರ್ಷದ ಈ ಆಟಗಾರ್ತಿ 2012ರಿಂದ ಇದೇ ಮೊದಲ ಬಾರಿ ಗ್ಲೋಬಲ್​ ರ್ಯಾಂಕಿಂಗ್​ ಮೊದಲ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವೈಯಕ್ತಿಕ ಸ್ಪರ್ಧೆ, ಮಹಿಳಾ ತಂಡ ಹಾಗೂ ಮಿಶ್ರ ಫೈನಲ್​ಗಳಲ್ಲಿ ಗೆದ್ದು ಬೀಗಿದ ದೀಪಿಕಾ ಮೂರು ಚಿನ್ನದ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ದೀಪಿಕಾರ ಈ ಸಾಧನೆಯಿಂದಾಗಿಯೇ ಅವರು ಗ್ಲೋಬಲ್​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆಯುವಂತಾಗಿದೆ.

ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ನಡೆದ ಮೆಗಾ-ಈವೆಂಟ್‌ ಅರ್ಚರಿ ವಿಶ್ವಕಪ್ ನ ಹಂತ 3 ರಲ್ಲಿ ದೀಪಿಕಾ ಕುಮಾರಿ. ಭಾನುವಾರ ಒಂದೇ ದಿನ ಮೂರು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ. ಮಹಿಳೆಯರ ವೈಯಕ್ತಿಕಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ ರಷ್ಯಾದ ಎಲೆನಾ ಒಸಿಪೋವಾ ಅವರನ್ನು 6-0 ಅಂತರದಲ್ಲಿ ಸೋಲಿಸಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.