ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 6

ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 6

1. ಸಂಸತ್ತಿನ ದೋಷಾರೋಪಣೆಯ ಮೂಲಕ ಈ ಕೆಳಗಿನ ಯಾರನ್ನು ಅಧಿಕಾರದಿಂದ ತೆಗೆದುಹಾಕಬಹುದು..?
ಎ. ಲೋಕಸಭಾಧ್ಯಕ್ಷರು
ಬಿ. ಪ್ರಧಾನಮಂತ್ರಿಗಳು
ಸಿ. ರಾಷ್ಟ್ರಪತಿಗಳು
ಡಿ. ಕಾನೂನು ಮಂತ್ರಿಗಳು

2. ಸಂಸತ್ ವ್ಯವಸ್ಥೆಯಲ್ಲಿ ದ್ವಿಸಭೆ ಎಂದು ಯಾವುದನ್ನು ಕರೆಯಲಾಗುತ್ತದೆ..?
ಎ. ಎರಡು ಸದನಗಳಿರುವ ರಾಜ್ಯ ವಿಧಾನಮಂಡಲ
ಬಿ. ಕೇಂದ್ರ ಹಾಗೂ ರಾಜ್ಯಗಳಿಗೆ ಎರಡು ಬೇರೆ ಬೇರೆ ಸಂವಿಧಾನಗಳು
ಸಿ. ದ್ವಿ- ಪಕ್ಷ ಪದ್ಧತಿ
ಡಿ. ದ್ವಿ- ಪೌರತ್ವ ಪದ್ಧತಿ

3. ಯಾವುದೇ ಶಿಕ್ಷೆಗೊಳಗಾದ ಅಪರಾಧಿಗೆ ಕ್ಷಮಾದಾನ ನೀಡುವ ಅಧಿಕಾರ ಯಾರಿಗಿದೆ..?
ಎ. ರಾಷ್ಟ್ರಪತಿ ಮತ್ತು ರಾಜ್ಯಗಳ ರಾಜ್ಯಪಾಲರು
ಬಿ. ಸಂಸತ್ತು
ಸಿ. ಕೇಂದ್ರ ಕಾನೂನು ಸಚಿವರು
ಡಿ. ಅಟಾರ್ನಿ ಜನರಲ್

4. ಕೇಂದ್ರಮಂತ್ರಿಮಂಡಲದ ಗಾತ್ರ ಹಾಗೂ ಸದಸ್ಯತ್ವದ ಕುರಿತು ಯಾರು ತಿರ್ಮಾನಿಸಬಲ್ಲರು..?
ಎ. ಲೋಕಸಭೆ
ಬಿ. ಪ್ರಧಾನಮಂತ್ರಿಗಳು
ಸಿ. ರಾಷ್ಟ್ರಪತಿಗಳು
ಡಿ. ಆಡಳಿತ ಪಕ್ಷದ ಅಧ್ಯಕ್ಷರು

5. ಭಾರತದಲ್ಲಿ ನಾಗರಿಕರ ಹಕ್ಕುಗಳನ್ನು ನಿಯಂತ್ರಿಸುವ ಅಧಿಖಾರ ಯಾರಿಗಿದೆ..?
ಎ. ಕೇಂದ್ರ ಮಂತ್ರಿಮಂಡಲ
ಬಿ. ಸಂಸತ್ತು
ಸಿ. ಸುಪ್ರೀಂ ಕೋರ್ಟ್
ಡಿ. ಕಾನೂನು ಆಯೋಗ

6. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಯನ್ನು ಜಾರಿಗೆಗೊಳಿಸಿದ್ದಾಗ ಭಾರತದ ಮುಖ್ಯ ನ್ಯಾಯಾಧೀಶರು ಯಾರಾಗಿದ್ದರು..?
ಎ. ಪಿ. ಎನ್. ಭಗವತಿ
ಬಿ. ಎಂ. ಹಿದಾಯತುಲ್ಲಾ
ಸಿ. ಎ.ಎಂ. ಅಹ್ಮದಿ
ಡಿ. ಇವರಾರೂ ಅಲ್ಲ

7. ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಪ್ರಪ್ರಥಮವಾಗಿ ಜಾರಿಗೆ ತಂದ ರಾಜ್ಯ ಯಾವುದು..?
ಎ. ರಾಜಸ್ಥಾನ
ಬಿ. ಕರ್ನಾಟಕ
ಸಿ. ಅಸ್ಸಾಂ
ಡಿ. ತಮಿಳುನಾಡು

8. ಭಾರತದ ಚುನಾವಣಾ ಆಯೋಗವು….
ಎ. ಒಂದು ಶಾಸನಾಂಗ ಸಂಸ್ಥೆ
ಬಿ. ಒಂದು ಸಂವಿಧಾನಿಕ ಸಂಸ್ಥೆ
ಸಿ. ಒಂದು ಅನೌಪಚಾರಿಕ ಸಂಸ್ಥೆ
ಡಿ. ಒಂದು ಕಾರ್ಯಾಂಗ ಸಂಸ್ಥೆ

9. ರಾಜ್ಯಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗಿದೆ..?
ಎ. ರಾಷ್ಟ್ರಪತಿಗಳು
ಬಿ. ಲೋಕಸಭೆ
ಸಿ. ರಾಜ್ಯಸಭೆಯ ಸಭಾಪತಿಗಳು
ಡಿ. ಯಾರಿಗೂ ಆ ಅಧಿಕಾರವಿಲ್ಲ.

10. ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಎಷ್ಟು..?
ಎ. 5 ವರ್ಷಗಳು
ಬಿ. 6 ವರ್ಷಗಳು
ಸಿ. 4 ವರ್ಷಗಳು
ಡಿ. 3 ವರ್ಷಗಳು

11. ಕೇಂದ್ರ ಸೂಚಿ, ರಾಜ್ಯ ಸೂಚಿ ಅಥವಾ ಸಮವರ್ತಿ ಸೂಚಿಗಳಲ್ಲಿ ನಮೂದಿತವಾಗಿರದ ಇತರೆ ಅಧಿಕಾರಗಳನ್ನು ಯಾರು ಚಲಾಯಿಸಬಹುದು..?
ಎ. ರಾಷ್ಟ್ರಪತಿಗಳು
ಬಿ. ರಾಜ್ಯಸಭೆ ಹಾಗೂ ಲೋಕಸಭೆಗಳೆರಡೂ
ಸಿ. ರಾಜ್ಯ ಶಾಸಕಾಂಗಗಳು
ಡಿ. ಲೋಕಸಭೆ

12. ಭಾರತದ ಸಂವಿಧಾನ ರಚನಾ ಸಭೆಯನ್ನು ರೂಪಿಸಲು ತಳಹದಿಯಾದ ಅಂಶ ಯಾವುದು..?
ಎ. ಭಾರತ ರಾಷ್ಟ್ರೀಯ ಕಾಂಗ್ರೆಸ್ನ ನಿರ್ಣಯ
ಬಿ. ಭಾರತದ ಸ್ವಾತಂತ್ರ್ಯ ಕಾನೂನು, 1947
ಸಿ. ಕ್ಯಾಬಿನೆಟ್ ಮಿಷನ್ ಪ್ಲಾನ್, 1946
ಡಿ. ಮೇಲಿನ ಯಾವುದೂ ಅಲ್ಲ

13. ಲೋಕಸಭೆಯ ಅವಧಿಯನ್ನು 5 ವರ್ಷದ ನಂತರ ಯಾವ ಸಂದರ್ಭದಲ್ಲಿ ವಿಸ್ತರಿಸಬಹುದು..?
ಎ. ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ
ಬಿ. ರಾಜ್ಯಸಭೆಯು ಸಮ್ಮತಿಸಿದಾಗ
ಸಿ.ಲೋಕಸಭೆಯು ಸಮ್ಮತಿಸಿದಾಗ
ಡಿ. ರಾಷ್ಟ್ರಪತಿಗಳು ಸಮ್ಮತಿಸಿದಾಗ

14. ಭಾರತದ ರಾಷ್ಟ್ರಪತಿ ಮತ್ತು ರಾಜ್ಯದ ರಾಜ್ಯಪಾಲರುಗಳಿಗೆ ನೀಡಬೇಕಾದ ವೇತನ, ಭತ್ಯೆ ವಿವರಗಳು ಸಂವಿಧಾನದ ಯಾವ ಷೆಡ್ಯೂಲ್‍ನಲ್ಲಿ ನಮೂದಿತವಾಗಿವೆ..?
ಎ. ಒಂದನೇ ಷೆಡ್ಯೂಲ್
ಬಿ. ಎರಡನೇ ಷೆಡ್ಯೂಲ್
ಸಿ. 3 ನೇ ಷೆಡ್ಯೂಲ್
ಡಿ. 4 ನೇ ಷೆಡ್ಯೂಲ್

15. ರಾಜ್ಯ ರಾಜ್ಯಪಾಲರು ತನ್ನ ಕ್ರಿಯೆಗಳಲ್ಲಿ ಯಾರಿಗೆ ಜವಾಬ್ದಾರರಾಗಿರುತ್ತಾರೆ..?
ಎ. ರಾಜ್ಯ ವಿಧಾನಸಭೆಗೆ
ಬಿ. ಭಾರತದ ಉಪರಾಷ್ಟ್ರಪತಿಗಳಿಗೆ
ಸಿ. ಭಾರತದ ರಾಷ್ಟ್ರಪತಿಗಳಿಗೆ
ಡಿ. ಭಾರತದ ಪ್ರಧಾನಮಂತ್ರಿಗಳಿಗೆ

16. ರಾಜ್ಯ ಮಂತ್ರಿಮಂಡಲ ಸಾಮೂಹಿಕವಾಗಿ ಯಾರಿಗೆ ಜವಾಬ್ದಾರರಾಗಿರುತ್ತಾರೆ..?
ಎ. ರಾಜ್ಯ ವಿಧಾನಸಭೆಗೆ
ಬಿ. ವಿಧಾನಪರಿಷತ್ತಿಗೆ
ಸಿ. ರಾಜ್ಯಪಾಲರಿಗೆ
ಡಿ. ಲೋಕಸಭೆ

17. ಭಾರತದಲ್ಲಿ ‘ಸಾರ್ವಜನಿಕ ಹಣಕಾಸಿನ ಕಾವಲುಗಾರ ‘ಎಂದು ಯಾರನ್ನು ಕರೆಯುತ್ತಾರೆ..?
ಎ. ಕೇಂದ್ರ ಹಣಕಾಸು ಸಚಿವ
ಬಿ. ಪ್ರಧಾನಮಂತ್ರಿ
ಸಿ. ರಾಷ್ಟ್ರಪತಿ
ಡಿ. ಕಂಟ್ರೋಲರ್ ಮತ್ತು ಅಡಿಟರ್ ಜನರಲ್

18. ರಾಜ್ಯವೊಂದರ ಅಡ್ವೋಕೇಟ್ ಜನರಲ್‍ರವರನ್ನು ಯಾರು ನೇಮಕ ಮಾಡುತ್ತಾರೆ..?
ಎ. ಪ್ರಧಾನಮಂತ್ರಿಗಳು
ಬಿ. ರಾಷ್ಟ್ರಪತಿಗಳು
ಸಿ. ರಾಜ್ಯಪಾಲರು
ಡಿ. ರಾಜ್ಯದ ಲೋಕಸೇವಾ ಆಯೋಗ

19. ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ಸಂವಿಧಾನದ ಯಾವ ವಿಧಿ ನೀಡಿದೆ..?
ಎ. 352 ನೇ ವಿಧಿ
ಬಿ. 346ನೇ ವಿಧಿ
ಸಿ. 356 ನೇ ವಿಧಿ
ಡಿ. 340 ನೇ ವಿಧಿ

20. ಭಾರತದ ಚುನಾವಣಾ ಆಯೋಗವು ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿತರ ಎಷ್ಟು ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ..?
ಎ. ಒಬ್ಬರು
ಬಿ. ಇಬ್ಬರು
ಸಿ. ಮೂವರು
ಡಿ. ನಾಲ್ವರು

# ಉತ್ತರಗಳು :
1. ಸಿ. ರಾಷ್ಟ್ರಪತಿಗಳು
2. ಎ. ಎರಡು ಸದನಗಳಿರುವ ರಾಜ್ಯ ವಿಧಾನಮಂಡಲ
3. ಎ. ರಾಷ್ಟ್ರಪತಿ ಮತ್ತು ರಾಜ್ಯಗಳ ರಾಜ್ಯಪಾಲರು
4. ಬಿ. ಪ್ರಧಾನಮಂತ್ರಿಗಳು
5. ಬಿ. ಸಂಸತ್ತು
6. ಎ. ಪಿ. ಎನ್. ಭಗವತಿ
7. ಎ. ರಾಜಸ್ಥಾನ
8. ಬಿ. ಒಂದು ಸಂವಿಧಾನಿಕ ಸಂಸ್ಥೆ
9. ಡಿ. ಯಾರಿಗೂ ಆ ಅಧಿಕಾರವಿಲ್ಲ.
10. ಬಿ. 6 ವರ್ಷಗಳು
11. ಡಿ. ಲೋಕಸಭೆ
12. ಸಿ. ಕ್ಯಾಬಿನೆಟ್ ಮಿಷನ್ ಪ್ಲಾನ್, 1946
13. ಎ. ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ
14. ಬಿ. ಎರಡನೇ ಷೆಡ್ಯೂಲ್
15. ಸಿ. ಭಾರತದ ರಾಷ್ಟ್ರಪತಿಗಳಿಗೆ
16. ಎ. ರಾಜ್ಯ ವಿಧಾನಸಭೆಗೆ
17. ಡಿ. ಕಂಟ್ರೋಲರ್ ಮತ್ತು ಅಡಿಟರ್ ಜನರಲ್
18. ಸಿ. ರಾಜ್ಯಪಾಲರು
19. ಸಿ. 356 ನೇ ವಿಧಿ
20. ಬಿ. ಇಬ್ಬರು

# ಹಿಂದಿನ ಸಂಚಿಕೆಗಳನ್ನೂ ಓದಿ..
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2 
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 5

# ಇವುಗಳನ್ನೂ ಓದಿ…
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)