1. ಭಾರತದಲ್ಲಿ ಪ್ರಮುಖ ಸೂಫಿ ಮಂದಿರ ಎಲ್ಲಿದೆ..?
ಎ. ಅಜ್ಮೀರ್
ಬಿ. ಶಹಜಾನಾಬಾದ್
ಸಿ. ಬೀದರ್
ಡಿ. ಪಾಂಡುವಾ
2. ಈ ಕೆಳಗಿನ ಯಾವ ಘಟನೆಯ ನಂತರ ಭಾರತವು ಪಾರ್ಲಿಮೆಂಟಿನ ನೇರ ಆಡಳಿತಕ್ಕೆ ಒಳಪಟ್ಟಿತು..?
ಎ. 1764 ರ ಬಕ್ಸಾರ್ ಕದನ
ಬಿ. 1857 ರ ಸಿಪಾಯಿ ದಂಗೆ
ಸಿ. 1757 ರ ಪ್ಲಾಸಿ ಕದನ
ಡಿ. 1765 ರ ಅಲಹಾಬಾದ್ ಒಪ್ಪಂದ
3. ಭಾರತದಲ್ಲಿ ವಿಶ್ವ ವಿದ್ಯಾಲಯಗಳು ಯಾರ ಕಾಲದಲ್ಲಿ ಮೊದಲಿಗೆ ಪ್ರಾರಂಭವಾದವು..?
ಎ. ಲಾರ್ಡ್ ಕ್ಯಾನಿಂಗ್
ಬಿ. ಲಾರ್ಡ್ ಮೆಕಾಲೆ
ಸಿ. ಲಾರ್ಡ್ ವಾರನ್ ಹೇಸ್ಟಿಂಗ್ಸ್
ಡಿ. ಲಾರ್ಡ್ ವಿಲಿಯಂ ಬೆಂಟಿಂಕ್
4. ಈ ಕೆಳಗಿನ ಯಾವ ಘಟನೆಯಿಂದ ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಪಾರಕ್ಕೆ ರಹದಾರಿ ದೊರಕಿತು..?
ಎ. ಪ್ಲಾಸಿ ಕದನ, 1757
ಬಿ. ಬಕ್ಸಾರ್ ಕದನ, 1764
ಸಿ. ಇಬ್ರಾಹಿಂ ಖಾನನ ಫರ್ಮಾನು, 1690
ಡಿ. ಫರೂಕ್ ಸಿಯಾರ್‍ನ ಫರ್ಮಾನು, 1717
5. ಆಗಸ್ಟ್ 1942 ರ ಕ್ವಿಟ್ ಇಂಡಿಯಾ ಚಳುವಳಯಲ್ಲದೆ, ಅದೇ ದಿನ ಸ್ವಾತಂತ್ರ್ಯ ಚಳುವಳಿಗಾರರಿಂದ ಇನ್ನಾವ ಪ್ರಮುಖ ಘಟನೆ ನಡೆಯಿತು..?
ಎ. ಚಂಪಾರಣ್ ಸತ್ಯಾಗ್ರಹ
ಬಿ. ಕಕೋರಿ ಮೇಲ್ ರೈಲು ದರೋಡೆ
ಸಿ. ಉಪ್ಪಿನ ಸತ್ಯಾಗ್ರಹ
ಡಿ. ಸೈಮನ್ ಆಯೋಗಕ್ಕೆ ಬಹಿಷ್ಕಾರ
6. ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೋಟೆ ಯಾವುದು..?
ಎ. ಸೇಂಟ್ ಜಾರ್ಜ್ ಕೋಟೆ
ಬಿ.ಪೋರ್ಟ್ ವಿಲಿಯಂ, ಕಲ್ಕತ್ತಾ
ಸಿ. ಬಾಂಬೆ ಕೋಟೆ
ಡಿ. ಇವು ಯಾವುದೂ ಅಲ್ಲ
7. ಸತ್ಯಾಗ್ರಹವನ್ನು ಈ ಕೆಳಗಿನ ಯಾವ ರೀತಿಯಲ್ಲಿ ವ್ಯಕ್ತಪಡಿಸಬಹುದಾಗಿದೆ..?
ಎ. ಶಸ್ತ್ರಾಸ್ತ್ರ ಹೋರಾಟ
ಬಿ. ಮತೀಯ ಕಲಹ
ಸಿ. ಅಸಹಕಾರ
ಡಿ. ತಕ್ಷಣ ಹೊರ ಬೀಳುವ ಹಿಂಸಾತ್ಮಕ
8. ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ರಾಜ್ಯವನ್ನು ಎಲ್ಲಿ ಪ್ರತಿಪಾದಿಸಿತು..?
ಎ. 1906 ರಲ್ಲಿ ಅದರ ಸ್ಥಾಪನಾ ಸಮಯದಲ್ಲಿ
ಬಿ. ಖಿಲಾಫತ್ ಚಳುವಳಿಯ ಸಮಯದಲ್ಲಿ
ಸಿ. 1940 ರ ಲಾಹೋರ್ ಅಧಿವೇಶನದಲ್ಲಿ
ಡಿ. 1930 ರ ಕಾನೂನುಭಂಗ ಚಳುವಳಿಯನ್ನು ವಿರೊಧಿಸಿದ ಸಮಯದಲ್ಲಿ
9. ಈ ಕೆಳಗಿನ ಯಾವ ಕಾಯ್ದೆಯ ಪ್ರಪ್ರಥಮ ಬಾರಿಗೆ ಭಾರತೀಯರಿಗೆ ಶಾಸಕಾಂಗದಲ್ಲಿ ಪ್ರಾತಿನಿಧ್ಯ ಕಲ್ಪಿಸಿತು..?
ಎ. ಇಂಡಿಯನ್ ಕೌನ್ಸಿಲ್ ಆಕ್ಟ್, 1909
ಬಿ. ಗೌವರ್ನ್‍ಮೆಂಟ್ ಆಫ್ ಇಂಡಿಯಾ ಆಕ್ಟ್
ಸಿ.ಇಂಡಿಯನ್ ಕೌನ್ಸಿಲ್ ಆಕ್ಟ್, 1919
ಡಿ. ಗೌವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ , 1935
10. ಅಕ್ಬರನು ಈ ಕೆಳಗಿನ ಯಾವ ಸೂಫಿ ಸಂತರ ಸಮಾಧಿ ಸೌಧವನ್ನು ಕಟ್ಟಿಸಿದನು..?
ಎ. ಶೇಕ್ ಸಲೀಂ ಚಿಸ್ಟಿ
ಬಿ. ನಿಜಾಮುದ್ದೀನ್ ಔಲಿಯ
ಸಿ. ಕ್ವಾಜಾ ಮೈನುದ್ದಿನ್
ಡಿ. ಇವರು ಯಾರೂ ಅಲ್ಲ
11. ಮಹಾತ್ಮಾಗಾಂಧಿಯವರು ‘ ಮಾಡು ಇಲ್ಲವೆ ಮಡಿ’ ಎಂಬ ಕರೆಯನ್ನು ಯಾವ ನಗರದಲ್ಲಿ ನೀಡಿದರು..?
ಎ.ಕಾನ್ಪುರ
ಬಿ. ಮದ್ರಾಸ್
ಸಿ. ಮುಂಬಯಿ
ಡಿ. ಕಲ್ಕತ್ತಾ
12. ಗೌತಮ ಬುದ್ಧನು ತನ್ನ ಮೊದಲ ಪ್ರವಚನವನ್ನು ಎಲ್ಲಿ ನೀಡಿದನು..?
ಎ. ಸಾರನಾಥ
ಬಿ. ಗಯಾ
ಸಿ. ಸಾಂಚಿ
ಡಿ. ಪಾಟಲೀಪುತ್ರ
13. ಗಾಂಧಾರ ಕಲಾ ಶಾಲೆಯೊಂದಿಗೆ ಸಂಬಂಧಿಸಿದ ಸಂತತಿ ಯಾವುದು..?
ಎ. ಕುಶಾನರು
ಬಿ. ಮೌರ್ಯರು
ಸಿ. ಚಾಲುಕ್ಯರು
ಡಿ. ಗುಪ್ತರು
14. 11 ನೇ ಶತಮಾನದಲ್ಲಿ ಅತುಲನು ಬರೆದ ‘ ಮೂಶಿಕ ವಂಶವು” ಆಧುನಿಕ ಭಾರತದ ರಾಜ್ಯವೊಂದರ ಭಾಗವನ್ನು ಆಳಿದ ಸಂತತಿಯ ಕುರಿತಂತೆ ವಿವರ ನೀಡುತ್ತದೆ. ಯಾವುದು ಆ ರಾಜ್ಯ..?
ಎ. ಮಹಾರಾಷ್ಟ್ರ
ಬಿ. ಒರಿಸ್ಸಾ
ಸಿ. ಆಂಧ್ರಪ್ರದೇಶ
ಡಿ. ಕೇರಳ
15. ನಾಲ್ಕು ವೇದಗಳಲ್ಲಿ ಮೊದಲನೆಯ ವೇದ ಯಾವುದು..?
ಎ. ಋಗ್ವೇದ
ಬಿ. ಸಾಮವೇದ
ಸಿ. ಯಜುರ್‍ವೇದ
ಡಿ. ಅಥರ್ವಣವೇದ
16. ವರ್ಧಮಾನ ಮಹಾವೀರನು ಜೈನರ ಎಷ್ಟನೇ ತೀರ್ಥಂಕರನಾಗಿದ್ದನು..?
ಎ. ಮೊದಲನೇ
ಬಿ. ಇಪ್ಪತ್‍ನಾಲ್ಕನೇ
ಸಿ. ಮೂರನೇ
ಡಿ. ಹತ್ತನೇ
17. ವೈಹಾಂಡ್ ಕದನವು ಯಾರ ನಡುವೆ ನಡೆಯಿತು..?
ಎ. ಆನಂದಪಾಲ ಮತ್ತು ಮಹಮದ್ ಘಜ್ನಿ
ಬಿ. ಜಯಪಾಲ ಮತ್ತು ಮಹಮ್ಮದ್ ಘೋರಿ
ಸಿ. ಪೃಥ್ವಿರಾಜ್ ಚೌಹಾಣ್ ಮತ್ತು ಮಹಮ್ಮದ್ ಘೋರಿ
ಡಿ. ಜಯಚಂದ್ರ ಮತ್ತು ಭಕ್ತಿಯಾರ್ ಖಿಲ್ಜಿ
18. ಈ ಕೆಳಗಿನವರಲ್ಲಿ 1926 ರಲ್ಲಿ ಪಂಜಾಬ್ ನವಜಾಣ್ ಭಾರತ್ ಸಭಾ’ವನ್ನು ಸ್ಥಾಪಿಸಿದವರು ಯಾರು..?
ಎ. ಸರ್ದಾರ್ ಸಿಂಗ್
ಬಿ. ಲಾಲಾ ಲಜಪತ್‍ರಾಯ್
ಸಿ. ಸೋಹನ್‍ಸಿಂಗ್ ಬಖ್ನಾ
ಡಿ. ಲಾಲಾ ಹರ್ದಯಾಳ್
19. ಭಾರತದಲ್ಲಿ ಫ್ರೇಂಚರ ಅಧಿಪತ್ಯಕ್ಕೆ ಕೊನೆ ಹಾಡಿದ ಯುದ್ಧ ಯಾವುದು..?
ಎ. ಮೊದಲನೆಯ ಕರ್ನಾಟಿಕ್ ಯುದ್ಧ
ಬಿ. ವಾಂಡಿವಾಷ್ ಕದನ
ಸಿ. ಎರಡನೇ ಕರ್ನಾಟಿಕ್ ಯುದ್ಧ
ಡಿ. ಬಕ್ಸಾರ್ ಕದನ
20. ಭಾರತದಲ್ಲಿ ಬ್ರಿಟಿಷರು ತಮ್ಮ ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಸ್ಥಾಪಿಸಿದರು..?
ಎ. ಆಗ್ರಾ
ಬಿ.ಮದ್ರಾಸ್
ಸಿ. ಮುಂಬಯಿ
ಡಿ. ಸೂರತ್
# ಉತ್ತರಗಳು :
1. ಎ. ಅಜ್ಮೀರ್
2. ಬಿ. 1857 ರ ಸಿಪಾಯಿ ದಂಗೆ
3. ಎ. ಲಾರ್ಡ್ ಕ್ಯಾನಿಂಗ್
4. ಎ. ಪ್ಲಾಸಿ ಕದನ, 1757
5. ಬಿ. ಕಕೋರಿ ಮೇಲ್ ರೈಲು ದರೋಡೆ
6. ಎ. ಸೇಂಟ್ ಜಾರ್ಜ್ ಕೋಟೆ
7. ಸಿ. ಅಸಹಕಾರ
8. ಸಿ. 1940 ರ ಲಾಹೋರ್ ಅಧಿವೇಶನದಲ್ಲಿ
9. ಎ. ಇಂಡಿಯನ್ ಕೌನ್ಸಿಲ್ ಆಕ್ಟ್, 1909
10. ಎ. ಶೇಕ್ ಸಲೀಂ ಚಿಸ್ಟಿ
11. ಸಿ. ಮುಂಬಯಿ
12. ಎ. ಸಾರನಾಥ
13. ಎ. ಕುಶಾನರು
14. ಡಿ. ಕೇರಳ
15. ಎ. ಋಗ್ವೇದ
16. ಬಿ. ಇಪ್ಪತ್ನಾಲ್ಕನೇ
17. ಎ. ಆನಂದಪಾಲ ಮತ್ತು ಮಹಮದ್ ಘಜ್ನಿ
18. ಎ. ಸರ್ದಾರ್ ಸಿಂಗ್
19. ಬಿ. ವಾಂಡಿವಾಷ್ ಕದನ
20. ಡಿ. ಸೂರತ್
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)