ಗಂಧಕದ ಇತಿಹಾಸ, ಬಹುರೂಪತೆಗಳು ಮತ್ತು ಉಪಯೋಗಗಳು

ಗಂಧಕದ ಇತಿಹಾಸ, ಬಹುರೂಪತೆಗಳು ಮತ್ತು ಉಪಯೋಗಗಳು

• ಪ್ರಾಚೀನ ಕಾಲದಿಂದಲೂ ಜನರಿಗೆ ಗಂಧಕದ ಉಪಯೋಗ ತಿಳಿದಿತ್ತು. ಇದನ್ನು ಬ್ರಿಮ್ ಸ್ಟೋನ್ ( ಬೆಂಕಿಯ ಕಲ್ಲು) ನಎಂದು ಕರೆಯುತ್ತಿದ್ದರು.
• ಇಂಗ್ಲೀಷ್‍ನಲ್ಲಿ ಗಂಧಕವನ್ನು ‘ ಸಲ್ಫರ್’ ಎನ್ನುತ್ತಾರೆ. ಸಲ್ಫರ್ ಎಂಬ ಪದದ ಲ್ಯಾಟಿನ್ ಭಾಷೆಯ “ಸಲ್ಪ್ಯೂರಿಯಮ್” ಎಂಬುದು. ಇದರ ಅರ್ಥವೂ ಸಹ ‘ಬೆಂಕಿಯ ಮೂಲ’ ಆಗಿದೆ. *
• ಆಂಗ್ಲ ಕವಿ ಕ್ರಿಸ್ತಪೂರ್ವದಲ್ಲಿ ಬರೆದ ಒಂದು ಪ್ರಖ್ಯಾತ ನಾಟಕ ಒಡಿಸ್ಸಿ ಎಂಬುದು. ಇದರಲ್ಲಿ ಗಂಧಕದ ಪ್ರಸ್ತಾಪವಿದೆ.
• 12 ನೇ ಶತಮಾನದಲ್ಲಿ ರೋಜರ್ ಬೇಕನ್ ಎಂಬ ವ್ಯಕ್ತಿಯು ಗಂಧಕವನ್ನು ಬಳಸಿ ಬಂದುಕಿನ ಪುಡಿಯನ್ನು ತಯಾರಿಸಿದನು.
• 14 ನೇ ಶತಮಾನದಲ್ಲಿ ಬ್ರಿಟಿಷರು ಗಂಧಕವನ್ನು ಬಳಸಿದ ಬಂದೂಕಿನ ಮದ್ದಿನ ಪುಡಿಯಿಂದ ಗುಂಡುಗಳನ್ನು ತಯಾರಿಸಿ ಯುದ್ಧಗಳಲ್ಲಿ ಬಳಸುತ್ತಿದ್ದರು.
• ಗಂಧಕವು ಕ್ರೀಯಾಶಿಲವಾದ ಧಾತುವಾಗಿದೆ. ಇದು ಶುದ್ಧರೂಪ ಮತ್ತು ಸಂಯುಕ್ತ ರೂಪದಲ್ಲಿಯೂ ದೊರೆಯುತ್ತದೆ. ಭೂ ತೊಗಟೆಯಲ್ಲಿ ಹೆಚ್ಚಿನ ಪ್ರಮಾಣದ ಗಂಧಕ ದೊರೆಯುತ್ತದೆ.
• ಕೆಲವು ಸಸ್ಯದ ಆಹಾರ ಮೂಲಗಳಲ್ಲಿ ಗಂಧಕದ ಅಂಶವಿದೆ. ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆಗಳಲ್ಲಿ ಗಂಧಕದ ಅಂಶವಿದೆ. ಗಂಧಕವು ಒಂದು ಉತ್ತಮ ಶೀಲಿಂಧ್ರನಾಶಕವಾಗಿದೆ. ಆದ್ದರಿಂದ ನಮ್ಮ ದೇಹಕ್ಕೆ ಅಲ್ಪ ಪ್ರಮಾಣದಲ್ಲಿ ಇದರ ಅವಶ್ಯಕತೆಯಿದೆ.
• ಸಾಮಾನ್ಯವಾಗಿ ಈರುಳ್ಳಿಯನ್ನು ಕೊಯ್ದಾಗ ಕಣ್ಣಿರು ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಈರುಳ್ಳಿಯಲ್ಲಿ ಗಂಧಕದ ಕಣಗಳಿವೆ. ಸಿಪ್ಪೆ ಸುಲಿದಾಗ ಅಥವಾ ಕೊಯ್ದಾಗ ಇವು ಸಿಡಿಯುತ್ತದೆ. ಆಗ ಕಣ್ಣಲ್ಲಿ ಬಿದ್ದು, ನೀರಿನಲ್ಲಿ ಕರಗಿದಾಗ ದುರ್ಬಲ ಗಂಧಕಾಮ್ಲ ಉಂಟಾಗುತ್ತದೆ. ಇದು ಕಣ್ಣೀರಿಗೆ ಕಾರಣವಾಗುತ್ತದೆ.

• ಗಂಧಕದ ಪಡೆಯುವಿಕೆ
ಗಂಧಕವು ಭೂ ನಿಕ್ಷೇಪದಲ್ಲಿ ದೊರೆಯುತ್ತದೆ. ಇದನ್ನು ಆಳವಾದ ನಿಕ್ಷೇಪದಿಂದ ಹೊರತೆಗೆಯುವ ವಿಧಾನವನ್ನು ‘ಫ್ರಾಶ್ಚ್’ ಎಂಬ ವಿಜ್ಞಾನಿ ಅಭಿವೃಧ್ದಿ ಪಡಿಸಿದನು. ಆದ್ದರಿಂದ ಈ ವಿಧಾನವನ್ನು ಫ್ರಾಶ್ಚ್ ವಿಧಾನ ಎನ್ನುವರು.
ಫ್ರಾಶ್ಚ್ ವಿಧಾನದಲ್ಲಿ ಗಂಧಕದ ನಿಕ್ಷೇಪವಿರುವ ಜಾಗದಲ್ಲಿ ಭೂಮೇಲ್ಮೈಯಿಂದ ಆಳವಾದ ರಂಧ್ರವನ್ನು ಕೊರೆಯಲಾಗುತ್ತದೆ. ಆ ರಂಧ್ರದ ಮೂಲಕ 3 ವಿವಿಧ ಗಾತ್ರದ ಕಾಂಕ್ರಿಟ್ ಕೊಳವೆಗಳನ್ನು ಜೋಡಿಸಲಾಗುತ್ತದೆ. ಹೊರಗಿನ ಕೊಳವೆಯ ಮೂಲಕ 180 ಡಿಗ್ರಿ ಸೆಲ್ಸಿಯಸ್ ತಾಪದ ಹಬೆಯನ್ನು ಹಾಯಿಸುತ್ತಾರೆ. ಮಧ್ಯದ ಕೊಳವೆಯ ಮೂಲಕ ಹೆಚ್ಚಿನ ಒತ್ತಡಗಳಲ್ಲಿ ಬಿಸಿ ವಾಯುವನ್ನು ಹಾಯಿಸುತ್ತಾರೆ. ಆಗ ಗಂಧಕವು ನೀರಿನಲ್ಲಿ ಕರಗುತ್ತದೆ. ಗಾಳಿಯನ್ನು ಊದುವುದರಿಂದ ನೊರೆಯು ಉಂಟಾಗಿ ಉಳಿದ ಮೂರನೇ ಕೊಳವೆಯ ಮೂಲಕ ಆ ನೊರೆಯು ಮೇಲಕ್ಕೆ ಬರುತ್ತದೆ. ಮೇಲೆ ಬಂದಂತಹ ನೊರೆಯನ್ನು ಬಿಸಿಮಾಡಿದಾಗ ಅದರಲ್ಲಿನ ನೀರಿನ ಅಂಶವು ಆವಿಯಾಗಿ ಗಂಧಕದ ಪುಡಿ ದೊರೆಯುತ್ತದೆ. ಇದು 99.5% ಶುದ್ಧವಾಗಿರುತ್ತದೆ.

• ಗಂಧಕದ ಬಹುರೂಪಗಳು
ಇಂಗಾಲ ಮತ್ತು ರಂಜಕದ ಹಾಗೆ ಗಂಧಕವೂ ಸಹ ಬಹುರೂಪತೆಯನ್ನು ಪ್ರದರ್ಶಿಸುತ್ತದೆ. ಗಂಧಕದ ಪ್ರಮುಖ ಬಹುರೂಪಗಳೆಂದರೆ,
1. ರಾಂಬಿಕ್ ಗಂಧಕ( ಅಷ್ಟಮುಖಿ ಗಂಧಕ)
2. ಮೊನೊಕ್ಲಿನಿಕ್ ಗಂಧಕ( ಸೂಜಿ ಗಂಧಕ)
3. ಪ್ಲಾಸ್ಟಿಕ್ ಗಂಧಕ ( ಮೆದು ಗಂಧಕ)

1. ರಾಂಬಿಕ್ ಗಂಧಕ : ಚೆನ್ನಾಗಿ ಪುಡಿ ಮಾಡಿದ ಗಂಧಕವನ್ನು ಕಾರ್ಬನ್ ಡೈ ಸಲ್ಫೈಡ್‍ನಲ್ಲಿ ವಿಲೀನಗೊಳಿಸಿ, ಬಾಪ್ಪೀಕರಿಸಿದಾಗ ರಾಂಬಿಕ್ ಗಂಧಕ ದೊರೆಯುತ್ತದೆ. ರಾಂಬಿಕ್ ಗಂಧಕದ ಹರಳಿಗೆ ಎಂಟು ಮುಖಗಳಿವೆ. ಆದ್ದರಿಂದ ಇದನ್ನು ‘ಅಷ್ಟಮುಖಿ’ ಗಂಧಕ ಎನ್ನುವರು.
• ರಾಂಬಿಕ್ ಗಂಧಕದ ಲಕ್ಷಣಗಳು
ಬಣ್ಣ: ನಸು ಹಳದಿ
ಆಕಾರ: ಗಟ್ಟಿಯಾದ ಅಷ್ಟಮುಖಿ ಸ್ಫಟಿಕ
ನೀರಿನಲ್ಲಿ ವೀಲಿನತೆ: ಇಲ್ಲ
ಸ್ಥಿರತೆ : 95.5 ಡಿಗ್ರಿ ಸೆಲ್ಸಯಸ್ ತಾಪದ ತನಕ ಸ್ಥಿರ

2. ಮೊನೋಕ್ಲಿನಿಕ್ ಗಂಧಕ : ಸ್ವಲ್ಪ ಗಂಧಕದ ಪುಡಿಯನ್ನು ತೆಗೆದುಕೊಂಡು, ಅದನ್ನು 125 ಸೆಲ್ಸಿಯಸ್ ತಾಪದವರೆಗೂ ಕಾಯಿಸಿದಾಗ ಅದು ದ್ರವರೂಪಕ್ಕೆ ಬರುತ್ತದೆ. ಅನಂತರ ಅದನ್ನು ನಿಧಾನವಾಗಿ ತಂಪು ಮಾಡಿದಾಗ ಅದರ ಮೇಲೆ ಕೆನೆಯ ಪದರ ಉಂಟಾಗುತ್ತದೆ. ಮೇಲ್ಭಾಗದಲ್ಲಿರುವ ಆ ಕೆನೆಯನ್ನು ಒಡೆದು ಒಳಗಿರುವ ದ್ರವವನ್ನು ಹೊರಚೆಲ್ಲಿ, ಪಾತ್ರೆಯ ಬದಿಗಳಲ್ಲಿ, ಸೂಜಿಯಾಕಾರದ ಗಂಧಕದ ಹರಳುಗಳು ಅಂಟಿಕೊಂಡಿರುತ್ತದೆ. ಇದೇ ಮೊನೊಕ್ಲಿನಿಕ್ ಗಂಧಕ. ಇದು ಸೂಜಿಯಾಕಾರದ ರಚನೆಯ ಹರಳುಗಳಾಗಿರುವುದರಿಂದ ಇದನ್ನು ‘ ಸೂಜಿ ಗಂಧಕ’ ಎನ್ನುವರು.
• ಮೊನೋಕ್ಲಿನಿಕ್ ಗಂಧಕದ ಲಕ್ಷಣಗಳು
ಬಣ್ಣ: ದಟ್ಟ ಹಳದಿ
ಆಕಾರ: ಪೆಡುಸಾದ ಸೂಜಿಯಾಕಾರದ ಸ್ಫಟಿಕ
ನೀರಿನಲ್ಲಿ ವೀಲಿನತೆ: ಇಲ್ಲ
ಸ್ಥಿರತೆ: 35.5 ಡಿಗ್ರಿ ಸೆಲ್ಸಿಯಸ್ ಗಿಂತ ಮೇಲಿನ ತಾಪದಲ್ಲಿ ಸ್ಥಿರ

3. ಪ್ಲಾಸ್ಟಿಕ್ ಗಂಧಕ :ಗಂಧಕವನ್ನು ಚೆನ್ನಾಗಿ ಕಾಯಿಸಿ, ಕುದಿಯುತ್ತಿರುವಾಗ ತಣ್ಣೀರಿಗೆ ಸುರಿಯಬೇಕು. ಆಗ ಮೆದುವಾದ ರಬ್ಬರಿನಂತಹ ಮುದ್ದೆ ದೊರೆಯುತ್ತದೆ. ಇದೇ ಪ್ಲಾಸ್ಟಿಕ್ ಅಥವಾ ಮೆದು ಗಂಧಕ. ಇದಕ್ಕೆ ಸ್ಥಿತಿಸ್ಥಾಪಕ ಗುಣವಿದ್ದು, ಕಂದು ಬಣ್ಣದಲ್ಲಿರುತ್ತದೆ.
• ಪ್ಲಾಸ್ಟಿಕ್ ಗಂಧಕದ ಲಕ್ಷಣಗಳು
ಬಣ್ಣ: ಕಂದು
ಆಕಾರ: ರಬ್ಬರಿನಂತಹ ಅಸ್ಫಟಿಕ
ನೀರಿನಲ್ಲಿ ವೀಲಿನತೆ: ಇಲ್ಲ
ಸ್ಥಿರತೆ:ಅಸ್ಥಿರ

• ಸಂಕ್ರಮಣ ತಾಪ : ವಸ್ತುವಿನ ಒಂದು ಸ್ಫಟಿಕೀಯ ರೂಪ ಮತ್ತೊಂದು ರೂಪಕ್ಕೆ ಬದಲಾಗುವ ತಾಪವೇ ಸಂಕ್ರಮಣ ತಾಪ.
ಉದಾ: ಗಂಧಕದ ಸಂಕ್ರಮಣ ತಾಪ 95.5 ಡಿಗ್ರಿ ಸೆಲ್ಸಿಯಸ್

• ಗಂಧಕದ ಉಪಯೋಗಗಳು:
1. ಸಲ್ಫ್ಯೂರಿಕ್ ಆಮ್ಲದ ತಯಾರಿಕೆಯಲ್ಲಿ ಅಧಿಕ ಪ್ರಮಾನದಲ್ಲಿ ಉಪಯೋಗಿಸುತ್ತಾರೆ.
2. ಚರ್ಮದ ಮುಲಾಮುಗಳ ತಯಾರಿಕೆಯಲ್ಲಿ
3. ಸುಣ್ಣ ಮತ್ತು ಗಂಧಕಗಳ ಆವಿ ಮಿಶ್ರಣವನ್ನು ಕ್ರಿಮಿನಾಶಕ ಸಿಂಪರಣೆಗೆ
4. ಸ್ಫೋಟಕ ಮತ್ತು ಸಿಡಿಮದ್ದುಗಳ ತಯಾರಿಕೆಯಲ್ಲಿ
5. ರಬ್ಬರಿನ ವಲ್ಕನೀಕರಣದಲ್ಲಿ ಬಳಸುತ್ತಾರೆ.