| | | |

ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

1. ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ರಾಷ್ಟ್ರೀಯ ಸಮಿತಿಯು ಯಾವಾಗ ರಚಿಸಲ್ಪಟ್ಟಿತು?
ಎ. 1960
ಬಿ. 1966
ಸಿ. 1962
ಡಿ. 1965

2. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ( ಇಸ್ರೋ) ಸ್ಥಾಪಿಸಿದ್ದು ಯಾವಾಗ?
ಎ. 1969
ಬಿ. 1962
ಸಿ. 1965
ಡಿ. 1956

3. ಇಸ್ರೋದ ಮುಖ್ಯ ಕಛೇರಿ ಎಲ್ಲಿದೆ?
ಎ. ತಿರುವನಂತಪುರಂ
ಬಿ. ಶ್ರೀಹರಿಕೋಟಾ
ಸಿ. ಬೆಂಗಳೂರು
ಡಿ. ಅಹಮದಾಬಾದ್

4. ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಎಲ್ಲದೆ?
ಎ. ಶ್ರೀಹರಿಕೋಟಾ
ಬಿ. ತಿರುವನಂತಪುರ
ಸಿ. ಬೆಂಗಳೂರು
ಡಿ. ಕೊಲ್ಕತ್ತಾ

5. ಇಸ್ರೋದ ಮೊದಲ ಸ್ಥಾಪಕ ಅಧ್ಯಕ್ಷರಾರು?
ಎ. ಡಾ. ವಿಕ್ರಮ್ ಸಾರಾಭಾಯಿ
ಬಿ. ಡಾ. ಯು. ಆರ್. ರಾವ್
ಸಿ. ಡಾ. ಕಸ್ತೂರಿರಂಗನ್
ಡಿ. ಡಾ. ಹೋಮಿ . ಜೆ. ಭಾಭಾ

6. ಭಾರತದ ಮೊದಲ ಕೃತಕ ಉಪಗ್ರಹ ಯಾವುದು?
ಎ. ಆರ್ಯಭಟ
ಬಿ. ಭಾಸ್ಕರ
ಸಿ. ಆಪಲ್
ಡಿ. ರೋಹಿಣಿ

7. ‘ ಆರ್ಯಭಟವನ್ನು ಕಕ್ಷೆಗೆ ಹಾರಿಸಿದ್ದು ಯಾವಾಗ?
ಎ. ಏಪ್ರಿಲ್ 19, 1974
ಬಿ. ಏಪ್ರಿಲ್ 19, 1975
ಸಿ. ಏಪ್ರಿಲ್ 29, 1974
ಡಿ. ಏಪ್ರಿಲ್ 29, 1975

8. 1979 ರಲ್ಲಿ ಕಕ್ಷೆಗೆ ಹಾರಿಸಲಾದ ಭಾರತದ ಎರಡನೇ ಕೃತಕ ಉಪಗ್ರಹ ಯಾವುದು?
ಎ. ಭಾಸ್ಕರ್-1
ಬಿ. ಆಪಲ್
ಸಿ. ಅಪ್ಸರ
ಡಿ. ಇನ್ಸಾಟ್- 1

9. 1984 ರಲ್ಲಿ ಗಗನಯಾತ್ರೆ ನಡೆಸಿದ ಮೊದಲ ಭಾರತೀಯ ಯಾರು?
ಎ. ರಾಕೇಶಶರ್ಮ
ಬಿ. ವಿಕ್ರಮ್ ಸಾರಾಭಾಯಿ
ಸಿ. ಕಸ್ತೂರಿ ರಂಗನ್
ಡಿ. ಮೇಲಿನ ಯಾರೂ ಅಲ್ಲ

10. ಬಾಹ್ಯಾಕಾಶವನ್ನು ತಲುಪಿದ ಮೊದಲ ಭಾರತೀಯ ಮಹಿಳೆ ಯಾರು?
ಎ. ಡಾ. ಹೇಮಲತ
ಬಿ. ಅಶ್ವಿನಿ ಚಾವ್ಲ
ಸಿ. ಡಾ. ಕಲ್ಪನಾ ಚಾವ್ಲ
ಡಿ. ಮೇಲಿನ ಯಾರೂ ಅಲ್ಲ

11. ಇಸ್ರೋ ಶ್ರೀಹರಿಕೋಟಾದಿಂದ ಮಾಣವರಹಿತ ಗಗನನೌಕೆಯನ್ನು ಚಂದ್ರನತ್ತ ಯಶಸ್ವಿಯಾಗಿ ಉಡಾಯಿಸಿತು. ಅದು ಯಾವಾಗ?
ಎ. ಸೆಟ್ಟೆಂಬರ್ 22, 2008
ಬಿ. ಅಕ್ಟೋಬರ್ 22, 2008
ಸಿ. ಸೆಪ್ಟೆಂಬರ್ 12, 2008
ಡಿ. ಅಕ್ಟೋಬರ್ 12, 2008

12. ಭಾರತವು ತನ್ನ ಮೊದಲ ಉಪಗ್ರಹ ಆರ್ಯಭಟವನ್ನು ಕಕ್ಷೆಗೆ ಹಾರಿಸಿದ್ದು ಯಾವ ದೇಶದಿಂದ?
ಎ. ಭಾರತ
ಬಿ. ಅಮೇರಿಕ
ಸಿ. ಸೋವಿಯತ್ ರಷ್ಯಾ
ಡಿ. ಫ್ರಾನ್ಸ್

13. ಪ್ರಪಂಚದಲ್ಲಿ ಕಕ್ಷೆಗೆ ಹಾರಿಸಲಾದ ಮೊದಲ ಕೃತಕ ಉಪಗ್ರಹ ಯಾವುದು?
ಎ. ಎಕ್ಸಪ್ಲೋರರ್-1
ಬಿ. ಸ್ಪುಟ್ನಿಕ್- 1
ಸಿ. ವೇಗಾ- 1
ಡಿ. ಮೇಲಿನ ಯಾವುದೂ ಅಲ್ಲ

14. 2003 ರಲ್ಲಿ ಸ್ಫೋಟಗೊಂಡು ಎಲ್ಲಾ ಏಳು ಜನ ಗಗನಯಾತ್ರಿಗಳನ್ನು ಬಲಿ ತೆಗೆದುಕೊಂಡ ಅಮೇರಿಕಾದ ಗಗನನೌಕೆ ಯಾವುದು?
ಎ. ಕೊಲಂಬಿಯಾ
ಬಿ. ಡಿಸ್ಕ್‍ವರಿ
ಸಿ. ಅಪೊಲೊ
ಡಿ. ಮೇಲಿನ ಯಾವುದೂ ಅಲ್ಲ

15. ಭಾರತದ ‘ಎಜುಸ್ಯಾಟ್’ ಎಂಬ ಶೈಕ್ಷಣಿಕ ಉದ್ದೇಶದ ಉಪಗ್ರಹವನ್ನು ಕಕ್ಷೆಗೆ ಹಾರಿಸಿದ್ದು ಯಾವಾಗ?
ಎ. 1980
ಬಿ. 1982
ಸಿ. 2004
ಡಿ. 1984

# ಉತ್ತರಗಳು :
1. ಸಿ. 1962
2. ಎ. 1969
3. ಸಿ. ಬೆಂಗಳೂರು
4. ಬಿ. ತಿರುವನಂತಪುರ
5. ಎ. ಡಾ. ವಿಕ್ರಮ್ ಸಾರಾಭಾಯಿ
6. ಎ. ಆರ್ಯಭಟ
7. ಬಿ. ಏಪ್ರಿಲ್ 19, 1975
8. ಎ. ಭಾಸ್ಕರ್-1
9. ಎ. ರಾಕೇಶ ಶರ್ಮ
10. ಸಿ. ಡಾ. ಕಲ್ಪನಾ ಚಾವ್ಲ
11. ಬಿ. ಅಕ್ಟೋಬರ್ 22, 2008
12. ಸಿ. ಸೋವಿಯತ್ ರಷ್ಯಾ
13. ಬಿ. ಸ್ಪುಟ್ನಿಕ್- 1
14. ಎ. ಕೊಲಂಬಿಯಾ
15. ಸಿ. 2004

# ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
# ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು

Similar Posts