ಈ ದಿನದ ಪ್ರಮುಖ ಪ್ರಚಲಿತ ಘಟನಾವಳಿಗಳು (06-01-2020)

ಈ ದಿನದ ಪ್ರಮುಖ ಪ್ರಚಲಿತ ಘಟನಾವಳಿಗಳು (06-01-2020)

# ಭಾರತ-ಇಸ್ರೇಲ್ ಅಭಿವೃದ್ಧಿಪಡಿಸಿದ MRSAM ಕ್ಷಿಪಣಿ ಪರೀಕ್ಷೆ ಯಶಸ್ವಿ
ಶತ್ರು ದೇಶಗಳ ಯುದ್ಧ ವಿಮಾನಗಳನ್ನು ಆಗಸದಲ್ಲೇ ತಡೆದು ಅಂತಿಮ ರಕ್ಷಣೆ ನೀಡುವ ಮಧ್ಯಮ ಶ್ರೇಣಿಯ ಭೂ-ಆಕಾಶ (MRSAM – Medium-Range Surface-to-Air Missile) ಕ್ಷಿಪಣಿಯನ್ನು ಭಾರತ ಮತ್ತು ಇಸ್ರೇಲ್ ದೇಶ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ರಕ್ಷಣಾ ವ್ಯವಸ್ಥೆಯಡಿ ಪ್ರಯೋಗಾರ್ಥ ಪರೀಕ್ಷೆಯನ್ನು ಕಳೆದ ವಾರ ಭಾರತೀಯ ಸೌಲಭ್ಯದೊಂದಿಗೆ ಇಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.

ಏನಿದರ ವಿಶೇಷತೆ..?
➤ ಶಸ್ತ್ರಾಸ್ತ್ರ ವ್ಯವಸ್ಥೆಯ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಣನೆಗೆ ತೆಗೆದುಕೊಂಡು ಎಂಆರ್‌ಎಸ್‌ಎಎಂ ಅನ್ನು ಮೌಲ್ಯೀಕರಿಸಲಾಗಿದೆ ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ತಿಳಿಸಿದೆ.
➤ ಎಂಆರ್‌ಎಸ್‌ಎಎಂ ಅತ್ಯಾಧುನಿಕ ಕ್ಷಿಪಣಿ ಗಾಳಿಯಲ್ಲೇ ತಡೆಯುವ ಸಿಸ್ಟಂ ಅಗಿದ್ದು, ಶತ್ರು ವಿಮಾನಗಳು ಗುರಿ ತಲುಪುವ ಮೊದಲೇ ಆಕಾಶದಲ್ಲೇ ಹೊಡೆದುರುಳಿಸುವ ಸಾಮಥ್ರ್ಯವನ್ನು ಹೊಂದಿದೆ. 50 ರಿಂದ 70 ಕಿ.ಮೀ. ದೂರದಲ್ಲಿರುವ ಶತ್ರು ವಿಮಾನವನ್ನು ನಿಖರವಾಗಿ ಪತ್ತೆ ಹಚ್ಚಿ ನಾಶ ಮಾಡಲಿದೆ.
➤ ಡಿಆರ್‍ಡಿಒ ಹಾಗೂ ಇತರ ರಕ್ಷಣಾ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಐಎಐ ಈ ಕ್ಷಿಪಣಿ ಅಭಿವೃದ್ಧಿಪಡಿಸಿದ್ದು, ಎಂಆರ್‌ಎಸ್‌ಎಎಂ ಭಾರತೀಯ ಸೇನೆಯ ಮೂರು ವಿಭಾಗಗಳು ಬಳಸಬಹುದಾಗಿದೆ.
➤ ಈ ಸಿಸ್ಟಂನಲ್ಲಿ ಸುಧಾರಿತ ಅರ್ರೆ-ರೆಡಾರ್, ಕಮಾಂಡ್ ಮತ್ತು ಕಂಟ್ರೋಲ್, ಮೊಬೈಲ್ ಲಾಂಚರ್ ಹಾಗೂ ಅತ್ಯಾಧುನಿಕ ಆರ್‍ಎಫ್ ಒಳಗೊಂಡ ಇಂಟರ್‍ಸೆಪ್ಟರ್ ಅಳವಡಿಸಲಾಗಿದೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ತಿಳಿಸಿದೆ
ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಇಸ್ರೇಲಿ ರಕ್ಷಣಾ ತಜ್ಞರು ಹಾಗೂ ಭಾರತೀಯ ವಿಜ್ಞಾನಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.
➤ ಪ್ರಸ್ತುತ ಭಾರತೀಯ ಸೇನೆಯ ಮೂರೂ ವಿಭಾಗಗಳು ಹಾಗೂ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವೈಮಾನಿಕ ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಡಿಆರ್‌ಡಿಒ ಹಾಗೂ ಇಸ್ರೇಲ್ ನ ಐಎಐ (Israel Aerospace Industries)ಜಂಟಿಯಾಗಿ ಇವುಗಳನ್ನು ಅಭಿವೃದ್ಧಿಪಡಿಸಿವೆ.

# ಪ್ರವಾಸಿತಾಣವಾಗಿ ಬದಲಾಗಲಿದೆ ಅಗುವಾಡ ಜೈಲು  :
ಐತಿಹಾಸಿಕ ಅಗುವಾಡ ಜೈಲನ್ನು ಪ್ರವಾಸಿತಾಣವಾಗಿ ನವೀಕರಿಸಲಾಗುತ್ತಿದೆ . ಇದರ ಅಭಿವೃದ್ಧಿ ಕಾರ್ಯ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಇದನ್ನು ಪ್ರವಾಸಿಗರಿಗಾಗಿ ತೆರೆಯಲು ಗೋವಾ ಸರ್ಕಾರ ನಿರ್ಧರಿಸಿದೆ. 17ನೇ ಶತಮಾನದ ಅಗುವಾಡ ಜೈಲಿನ ‘ಜೈಲಿನ ಎರಡು ಪ್ರಮುಖ ಕೋಣೆಗಳನ್ನು ಸ್ವಾತಂತ್ರ್ಯ ಹೋರಾಟಗಾರ ಟಿ.ಬಿ.ಕುನ್ಹಾ ಮತ್ತು ರಾಮ್ ಮನೋಹರ್ ಲೋಹಿಯಾ ಅವರಿಗೆ ಸಮರ್ಪಿಸಲಾಗುತ್ತಿದೆ. ಅಗುವಾಡ ಕೋಟೆಯನ್ನು ರಾಜ್ಯದ ವಿಮೋಚನಾ ಹೋರಾಟದ ಕುರಿತಾದ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗುವುದು’. ಕೇಂದ್ರ ಸರ್ಕಾರದ ‘ಸ್ವದೇಶ ದರ್ಶನ ಯೋಜನೆ’ಯಡಿ ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಅಗುವಾಡ ಕೋಟೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

# ವಿಶ್ವದ 6ನೇ ಶ್ರೀಮಂತ ಚೀನಾದ ಝೊಂಗ್ ಶನ್ಷನ್ :
ನೊಂಗ್ ಫು ಸ್ಪ್ರಿಂಗ್ ಸ್ಥಾಪಕರಾದ ಝೊಂಗ್ ಶನ್ಷನ್ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಚೀನಾದ ಬಿಲಿಯನೇರ್ ಉದ್ಯಮಿ ಝಾಂಗ್ ಶಾನ್ಷನ್ ಇದೀಗ ಅಮೆರಿಕಾದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್‌ರನ್ನೇ ಮೀರಿಸಿದ್ದಾರೆ. ಝಾಂಗ್ ಶಾನ್ಷನ್ ಅವರ ಒಟ್ಟು ಸಂಪತ್ತು 2021 ರಲ್ಲಿ 13.5 ಬಿಲಿಯನ್ ಹೆಚ್ಚಳಗೊಂಡು 91.7 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಫೆಟ್‌ನ ನಿವ್ವಳ ಮೌಲ್ಯ 86.2 ಬಿಲಿಯನ್ ಡಾಲರ್‌ನಷ್ಟಿದೆ.

ಲಸಿಕೆಗಳು ಮತ್ತು ಹೆಪಟೈಟಿಸ್ ಕಿಟ್‌ಗಳನ್ನು ತಯಾರಿಸುವ ಬಾಟಲ್ ವಾಟರ್ ಕಂಪನಿ ನಾಂಗ್‌ಫು ಸ್ಪ್ರಿಂಗ್ ಮತ್ತು ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್‌ಪ್ರೈಸ್‌ನ ಅಧ್ಯಕ್ಷರು ಆಗಿದ್ದಾರೆ. ನಾಂಗ್‌ಫುವಿನ ಷೇರು ಬೆಲೆ ಅದರ ಐಪಿಒ ಬೆಲೆಗಿಂತ ಶೇಕಡಾ 200 ರಷ್ಟು ಏರಿಕೆಯಾಗಿದೆ. ಅದೇ ಸಮಯದಲ್ಲಿ, ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್‌ಪ್ರೈಸಸ್ ಪಟ್ಟಿಯಿಂದ 25 ಪಟ್ಟು ಗಳಿಸಿದೆ.

# ಚೀನಾದ 8ಮೊಬೈಲ್ ಆಪ್ ಗಳಿಗೆ ನಿಷೇಧ ಹೇರಿದ ಟ್ರಂಪ್ :
ಅಲಿಪೇ ಮೊಬೈಲ್ ಪೇಮೆಂಟ್ ಆಯಪ್ ಸೇರಿದಂತೆ ಚೀನಾ ಮೂಲದ ಎಂಟು ಪ್ರಮುಖ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳ ವಹಿವಾಟುಗಳನ್ನು ನಿಷೇಧಿಸುವ ಎಕ್ಸಿಕ್ಯೂಟಿವ್ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಚೀನಾ ಜೊತೆಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿರುವುದಂತೆ ತಮ್ಮ ಅಧಿಕಾರವಧಿಯ ಕೊನೆಯ ಹಂತದಲ್ಲಿ ಡೊನಾಲ್ಡ್ ಟ್ರಂಪ್, ಎಂಟು ಆಪ್ ‌ಗಳನ್ನು ನಿಷೇಧ ಮಾಡುವ ಮೂಲಕ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿರುವುದು ಹೆಚ್ಚಿನ ಕುತೂಹಲ ಕೆರಳಿಸಿದೆ. ಅಲಿಬಾಬಾ ಗ್ರೂಪ್ ಅಂಗಸಂಸ್ಥೆ ಯುಸಿವೆಬ್‌ನ ಕ್ಯಾಮ್‌ಸ್ಕ್ಯಾನರ್, ಶೇರ್‌ಇಟ್, ಟೆನ್ಸೆಂಟ್ ಕ್ಯೂಕ್ಯೂ, ವಿಮೇಟ್ ಮತ್ತು ಬೀಜಿಂಗ್ ಕಿಂಗ್‌ಸಾಫ್ಟ್ ಆಫೀಸ್‌ನ ಡಬ್ಲ್ಯೂಪಿಎಸ್ ಆಫೀಸ್ ಸಾಫ್ಟ್‌ವೇರ್‌ಗಳು ನಿಷೇಧಿತ ಸಾಫ್ಟ್‌ವೇರ್ ಅಪ್ಲಿಕೇಷನ್ ಪಟ್ಟಿಯಲ್ಲಿ ಸೇರಿವೆ.

# ‘ಹಲಾಲ್’ ಪದ ತೆಗೆದ ಎಪಿಇಡಿಎ : 
ಆಡು, ಕುರಿಯಂತಹ ಪ್ರಾಣಿಗಳ ಮಾಂಸಕ್ಕೆ ಸಂಬಂಧಿಸಿದ ನಿಯಮಗಳ ಕೈಪಿಡಿಯಿಂದ ‘ಹಲಾಲ್’ ಪದವನ್ನು ಕೈಬಿಟ್ಟಿರುವ ‘ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ವು (APEDA : Agricultural and Processed Food Products Export Development Authority), ಮಾಂಸ ಆಮದು ಮಾಡಿಕೊಳ್ಳುವ ದೇಶದ ಅಗತ್ಯಗಳಿಗೆ ಅನುಗುಣವಾಗಿ ಪ್ರಾಣಿಗಳ ವಧೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ‘ಹಲಾಲ್ ಪದವು ಗೊಂದಲ ಸೃಷ್ಟಿಸುತ್ತಿದ್ದ ಕಾರಣ ಅದನ್ನು ತೆಗೆಯಲಾಗಿದೆ. ಮಾಂಸ ಅಥವಾ ಇನ್ಯಾವುದೇ ಉತ್ಪನ್ನವು ಖರೀದಿದಾರ ಅಥವಾ ಆಮದು ಮಾಡಿಕೊಳ್ಳುವ ದೇಶದ ಅಗತ್ಯಗಳಿಗೆ ತಕ್ಕಂತೆ ಇರುತ್ತದೆ’ ಎಂದು ಮೂಲಗಳು ಹೇಳಿವೆ.