ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವವರ್ಷವೆಂದು ಹೆಸರು. ಜ್ಯೋತಿರ್ವರ್ಷ ಪದದಲ್ಲಿ ತುದಿಗೆ ‘ವರ್ಷ’ವೆಂದಿದ್ದರೂ ಅದು ‘ಕಾಲ’ ಸೂಚಕ ಪದವಲ್ಲ; ದೂರದ ಅಳತೆ. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಆಯಸ್ಕಾನ್ಟ್ ಕ್ಷೇತ್ರಗಳಿಂದ ದೂರವಿರುವಾಗ ಒಂದು ವರ್ಷದಲ್ಲಿ ಸಾಗುವ ದೂರ. ಇಂತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು 2.99 ಲಕ್ಷ ಕಿಮೀ. ಹಾಗಾಗಿ ಒಂದು ಜ್ಯೋತಿವರ್ಷ ಸುಮಾರು 9.4 ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ.
ಸರಳವಾಗಿ ಹೇಳಬೇಕೆಂದರೆ ಜ್ಯೋತಿರ್ವರ್ಷ ಎಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ಒಟ್ಟು ದೂರವಾಗಿದ್ದು, ಈ ದೂರವನ್ನು ಅಳೆಯುವ ಮೂಲಕ ಮತ್ತೊಂದು ನಕ್ಷತ್ರ ಅಥವಾ ಬೇರೆ ಗ್ರಹಕಾಯ ನಮ್ಮಿಂದ ಎಷ್ಟು ದೂರ ಇದೆ ಎಂಬುದನ್ನು ತಿಳಿಯಬಹುದಾಗಿದೆ.
ಬೆಳಕು ಅತ್ಯಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಅದು ಒಂದು ಸೆಕೆಂಡ್‌ಗೆ ಬರೋಬ್ಬರಿ ಮೂರು ಲಕ್ಷ ಕಿ.ಮೀ. ದೂರ ಕ್ರಮಿಸುತ್ತದೆ. ಈ ಮೇಲೆ ಹೇಳಿದಂತೆ ಬೆಳಕು ಒಂದು ಸೆಕೆಂಡ್‌ಗೆ 3 ಲಕ್ಷ ಕಿ.ಮೀ. ದುರ ಕ್ರಮಿಸುತ್ತದೆ. ಹೀಗೆ ಬೆಳಕು ಒಂದು ವರ್ಷದ ಅವಧಿಯಲ್ಲಿ ಕ್ರಮಿಸುವ ದೂರವನ್ನು ಒಂದು ಜ್ಯೋತಿರ್ವರ್ಷ ಎಂದು ಕೆಯುತ್ತಾರೆ.
ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆ0ದರೆ “ಜ್ಯೋತಿರ್ನಿಮಿಷ” ಮತ್ತು “ಜ್ಯೋತಿರ್ಕ್ಷಣ”
➤ 1 ಲೈಟ್ ಸೆಕೆಂಡ್ : 186,000 ಮೈಲು(300,000 ಕಿ.ಮೀ)
➤ 1 ಲೈಟ್ ಮಿನಟ್: 11,160,000 ಮೈಲು(18,000,000 ಕಿ.ಮೀ).
ಸೂರ್ಯನ ಬೆಳಕು ಭೂಮಿಯನ್ನು ತಲುಪಲು 8.3 ಲೈಟ್ ಮಿನಟ್ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸೂರ್ಯ ಮತ್ತು ಭೂಮಿಯ ದೂರವನ್ನ ಕರಾರುವಕ್ಕಾಗಿ ಅಳೆಯಬಹುದಾಗಿದೆ.
➤ 1 ಲೈಟ್ ಆವರ್: 671 ಮಿಲಿಯಮ್ ಮೈಲು(1.08 ಬಿಲಿಯನ್ ಕಿ.ಮೀ).
ಸೂರ್ಯನ ಬೆಳಕು ನೆಪ್ಚೂನ್ ಗ್ರಹವನ್ನು ತಲುಪಲು 4.1 ಲೈಟ್ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸೂರ್ಯ ಮತ್ತು ನೆಪ್ಚೂನ್ ಗ್ರಹದ ದೂರವನ್ನು ಕರಾರುವಕ್ಕಾಗಿ ಅಳೆಯಬಹುದಾಗಿದೆ.
➤ 1 ಲೈಟ್ ಡೇ: 16.1 ಬಿಲಿಯನ್ ಮೈಲು(25.09 ಬಿಲಿಯನ್ ಕಿ.ಮೀ).
➤ 1 ಲೈಟ್ ಇಯರ್: (ಒಂದು ಜ್ಯೋತಿರ್ವರ್ಷ) 5.8 ಟ್ರಿಲಿಯನ್ ಮೈಲು(9.4 ಟ್ರಿಲಿಯನ್ ಕಿ.ಮೀ) ನಮ್ಮ ಸೌರಮಂಡಲದ ಅತ್ಯಂತ ಹತ್ತಿರದ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟಾರಿ ಮತ್ತು ಪ್ರಾಕ್ಸಿಮಾ ಬಿ ನಮ್ಮಿಂದ 4.25 ಜ್ಯೋತಿರ್ವರ್ಷ ದೂರದಲ್ಲಿದೆ.
➤ 100 ಲೈಟ್ ಇಯರ್ಸ್: 588 ಟ್ರಿಲಿಯನ್ ಮೈಲು(946 ಟ್ರಿಲಿಯನ್ ಕಿ.ಮೀ).
ಇನ್ನು ನಮ್ಮ ಹಾಲು ಹಾದಿ ಗ್ಯಾಲಕ್ಸಿ ಒಟ್ಟು 100,000 ಜ್ಯೋತಿರ್ವರ್ಷ ಸುತ್ತಳತೆ ಹೊಂದಿದೆ.
➤ 100,000 ಲೈಟ್ ಇಯರ್: 588 ಕ್ವಾಡ್ರಿಲಿಯನ್ ಮೈಲು(946 ಕ್ವಾಡ್ರಿಲಿಯನ್ ಕಿ.ಮೀ).
# ಗಣಿತಶಾಸ್ತ್ರದ ಪ್ರಕಾರ :
➤ 3,00,000 ಕಿ.ಮೀ.(ಬೆಳಕಿನ ವೇಗ ಪ್ರತಿ ಸೆಕೆಂಡಿಗೆ)x 365 (ಒಂದು ವರುಷ)x 24 (ದಿನ)x 60(ನಿಮಿಷ)x 60 (ಸೆಕೆಂಡು)= 94,60,80,00,00,000 ಕಿ.ಮೀ.
➤ ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ.
➤ ಬೆಳಕಿನ ವೇಗ 1 ಕ್ಷಣಕ್ಕೆ 3,00,000 ಕಿ.ಮೀ.
1 ನಿಮಿಷ = 60 ಕ್ಷಣ = 60 x 300000 = 1,80,00,000 ಕಿ.ಮೀ.
1 ಘಂಟೆ = 60 ನಿಮಿಷ = 60 x 18000000 = 108,00,00,000 ಕಿ.ಮೀ.
1 ದಿನ = 24 ಘಂಟೆ = 24 x 1080000000 = 2,592,00,00,000 ಕಿ.ಮೀ.
1 ವರ್ಷ = 365 ದಿನ = 365 x 25920000000 = 9,46,080,00,00,000 ಕಿ.ಮೀ.
ಹಾಗಾಗಿ 1 ಜ್ಯೋತಿರ್ವರ್ಷವೆಂದರೆ 9 ಲಕ್ಷದ 46 ಸಾವಿರದ 80 ಕೋಟಿ ಕಿ.ಮೀ.ಗಳು (ಸುಮಾರು).
ನಿಖರವಾಗಿ
➤ ಜ್ಯೋತಿರ್ವರ್ಷ ಪದದಲ್ಲಿ ತುದಿಗೆ ‘ವರ್ಷ’ವೆಂದಿದ್ದರೂ ಅದು ‘ಕಾಲ’ ಸೂಚಕ ಪದವಲ್ಲ; ದೂರದ ಅಳತೆ
ಬೆಳಕಿನ ವೇಗ (299792458 ಮೀಟರ್ /ಸೆಕೆಂಡಿಗೆ) // (365.25 ದಿನಗಳಲ್ಲಿ ಕ್ರಮಿಸುವ ದೂರ.
1 ಜ್ಯೋತಿರ್ವರ್ಷ = 946073047,25,80,800 ಮೀಟರ್ /9,46,073,04,72,580.8 ಕಿ. ಮೀಟರ್ (ನಿಖರವಾಗಿ)
1 ಜ್ಯೋತಿರ್ವರ್ಷ= 9 ಕೋಟಿ 46 ಲಕ್ಷ 073 ಕೋಟಿ, 04 ಲಕ್ಷದ,72 ಸಾವಿರದ 580.8 ಕಿ. ಮೀಟರ್.(ನಿಖರವಾಗಿ)