101. 1757 : ಪ್ಲಾಸಿ ಕದನ
102. 1760 : ವಾಂಡಿವಾಷ್ ಕದನ
103. 1761 : ಮೈಸೂರಿನ ಅರಸನಾಗಿ ಹೈದರಾಲಿ
104. 1769 : ಮೊದಲ ಮೈಸೂರು ಯುದ್ಧ
105. 1770 : ಬಂಗಾಳದಲ್ಲಿ ಕ್ಷಾಮ
106. 1773 : ರೆಗ್ಯುಲೇಟಿಂಗ್ ಕಾಯ್ದೆಯ ಜಾರಿ, ಈ ಕಾಯ್ದೆ ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸುತ್ತದೆ.
107. 1775-82 : ಪ್ರಥಮ ಆಂಗ್ಲ- ಮರಾಠ ಯುದ್ಧ
108. 1780-84 : ಎರಡನೆ ಮೈಸೂರು ಯುದ್ಧ
109. 1784 : ಪಿಟ್ಸ್ ಇಂಡಿಯಾ ಕಾಯ್ದೆ ಜಾರಿ
110. 1790-92 : ಮೂರನೆ ಮೈಸೂರು ಯುದ್ಧ
111. 1793 : ಲಾರ್ಡ್ ಕಾರ್ನ್‍ವಾಲಿಸ್‍ನಿಂದ ಬಂಗಾಳದಲ್ಲಿ ಖಾಯಂ ಭೂಕಂದಾಯ ವ್ಯವಸ್ಥೆಯ ಜಾರಿ
112. 1799 : ನಾಲ್ಕನೆ ಮೈಸೂರು ಯುದ್ಧ, ಟಿಪ್ಪು ಸುಲ್ತಾನನ ಸಾವು, ಮೈಸೂರು ರಾಜ್ಯದ ವಿಭಜನೆ
113. 1803-1805 : ಎರಡನೇ ಆಂಗ್ಲ- ಮರಾಠ ಯುದ್ಧ
114. 1806 : ವೆಲ್ಲೂರು ದಂಗೆ
115. 1817- 1819 : ಕೊನೆಯ ಆಂಗ್ಲ- ಮರಾಠ ಯುದ್ಧ
116. 1820 : ಮದ್ರಾಸಿನ ಗವರ್ನರ್ ಆಗಿ ಸರ್. ಥಾಮಸ್ ಮನ್ರೋ
117. 1828 : ಗವರ್ನರ್ ಜನರಲ್ ಆಗಿ ಲಾರ್ಡ್‍ವಿಲಿಯಂ ಬೆಂಟಿಂಕ್
118. 1829 : ಗವರ್ನರ್ ಜನರಲ್ ಲಾರ್ಡ್‍ವಿಲಿಯಂ ಬೆಂಟಿಂಕ್‍ನಿಂದ ಸತಿ ಪದ್ಧತಿ ನಿಷೇಧ
119. 1834 : ಕೊಡಗಿನ ವಶ
120. 1835 : ಹೊಸ ಶಿಕ್ಷಣ ಮಸೂದೆಯಿಂದಾಗಿ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗುತ್ತದೆ.
121. 1837-38 : ಉತ್ತರಾಭಾರತದಲ್ಲಿ ಕ್ಷಾಮ
122. 1856 : ಬಾಲಗಂಗಾಧರ ತಿಲಕರ ಜನನ
123. 1845-46 : ಮೊದಲ ಆಂಗ್ಲ- ಸಿಕ್ ಯುದ್ಧ
124. 1857 : ಸಿಪಾಯಿ ದಂಗೆ – ಮೊದಲ ಭಾರತ ಸ್ವಾತಂತ್ರ ಸಂಗ್ರಾಮ
125. 1858 : ಈಸ್ಟ್ ಇಂಡಿಯಾ ಕಂಪನಿಯ ರದ್ದು, ಭಾರತದ ಆಡಳಿತ ಬ್ರಿಟಿಷ್ ಸಕಾರದ ನೇರ ವಶಕ್ಕೆ
126. 1861 : ರವೀಂದ್ರನಾಥ ಟಾಗೋರರ ಜನನ
127. 1863 : ಸ್ವಾಮಿ ವಿವೇಕಾನಂದರ ಜನನ
128. 1869 : ಮಹಾತ್ಮಾ ಗಾಂಧಿಯವರ ಜನನ
129. 1875 : ದಯಾನಂದರಿಂದ ಆರ್ಯ ಸಮಾಜದ ಸ್ಥಾಪನೆ
130. 1885 : ಎ.ಓ. ಹ್ಯೂಮ್‍ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ
131. 1889 : ಜವಾಹರ್ ಲಾಲ ನೆಹರೂರವರ ಜನನ
132. 1892 : ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿ
133. 1897 : ಸುಭಾಷ್ ಚಂದ್ರ ಭೋಸರ ಜನನ
134. 1905 : ಲಾರ್ಡ್ ಕರ್ಜನನಿಂದ ಬಂಗಾಳ ವಿಭಜನೆ
135. 1906 : ಸರ್.ಸೈಯದ್ ಅಹಮದ್ ಖಾನ್‍ರಿಂದ ಮುಸ್ಲಿಂ ಲೀಗ್ ಸ್ಥಾಪನೆ
136. 1909 : ಮಿಂಟೋ -ಮಾರ್ಲೆ ಸುಧಾರಣೆ ಜಾರಿ
137. 1911 : ಬ್ರಿಟಿಷ್ ಆಡಳಿತವು ಕಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸುತ್ತದೆ. ಬಂಗಾಳದ ವಿಭಜನೆಯ ಹಿಂತೆಗೆತ
138. 1914 : ಮೊದಲ ಮಹಾಯುದ್ಧದ ಪ್ರಾರಂಭ
139. 1916 : ಹೋಂ ರೂಲ್ ಲೀಗ್ ಸ್ಥಾಪನೆ
140. 1918 : ಮೊದಲ ಮಹಾಯುದ್ಧ ಮುಕ್ತಾಯ
141. 1919 : ಜಲಿಯನ್ ವಾಲಾಬಾಗ್ ಹತ್ಯಾಕಾಂಡ
142. 1920 : ಅಸಹಕಾರ ಚಳುವಳಿಯ ಪ್ರಾರಂಭ, ಬಾಲಗಂಗಾಧರ ತಿಲಕರ ನಿಧನ
143. 1922 : ಚೌರಿಚೌರಾ ಘಟನೆ
144. 1927 : ಸೈಮನ್ ಕಮೀಷನ್ ನೇಮಕ
145. 1928 : ಭಾರತೀಯರಿಂದ ಭಾರತಕ್ಕೆ ಬಂದ ಸೈಮನ್ ಕಮೀಷನ್‍ಗೆ ಬಹಿಷ್ಕಾರ, ಲಾಲಾ ಲಜಪತ್‍ರಾಯರ ನಿಧನ
146. 1930 : ಮಹಾತ್ಮಗಾಂಧಿಯವರಿಂದ ದಂಡಿ ಉಪ್ಪಿನ ಚಳುವಳಿ
147. 1931 : ಗಾಂಧಿ – ಇರ್ವಿನ್ ಒಪ್ಪಂದ
148. 1931 : ಲಂಡನ್‍ನಲ್ಲಿ ಎರಡನೇ ದುಂಡುಮೇಜಿನ ಪರಿಷತ್ತು
149. 1932 : 3 ನೇ ದುಂಡು ಮೇಜಿನ ಪರಿಷತ್ತು
150. 1935 : ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಜಾರಿ , ಭಾರತದಿಂದ ಬರ್ಮಾ ಬೇರ್ಪಡೆ
151. 1937 : ಪ್ರಾಂತೀಯ ಸ್ವಾತಂತ್ರ್ಯ ಕಾಂಗ್ರೆಸ್‍ನಿಂದ ಸರ್ಕಾರ ರಚನೆ
152. 1939 : ಎರಡನೇ ಮಹಾಯುದ್ಧ ಪ್ರಾರಂಭ
153. 1941 : ರವೀಂದ್ರನಾಥ ಟಾಗೋರರ ಸಾವು
154. 1942 : ಕಾಂಗ್ರೆಸ್‍ನಿಂದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ
155. 1943 : ಸುಭಾಷ್‍ಚಂದ್ರ ಬೋಸ್‍ರಿಂದ ಸಿಂಗಪೂರ್‍ನಲ್ಲಿ ಭಾರತ ರಾಷ್ಟ್ರೀಯ ಸೇನೆ ಯ ರಚನೆ
156. 1945 : ಸಿಮ್ಲಾ ಸಮ್ಮೇಳನ, ಎರಡನೇ ಮಹಾಯುದ್ಧ ಮುಕ್ತಾಯ
157. 1946 : ಕೇಂದ್ರದಲ್ಲಿ ಜವಾಹರ್‍ಲಾಲ್ ನೇತೃತ್ವದ ತಾತ್ಕಾಲಿಕ ಸರ್ಕಾರ ರಚನೆ
158. 1947 : ಭಾರತ ವಿಭಜನೆ ಮತ್ತು ಭಾರತದ ಸ್ವಾತಂತ್ರದ ಗಳಿಕೆ
159. 1948 : ಜನವರಿ 30 ರಂದು ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಗಾಂಧಿಯವರ ಕಗ್ಗೋಲೆ, ರಾಜಗೋಪಾಲಾಚಾರಿಯವರು ಗವರ್ನರ್ ಜನರಲ್ ಆಗಿ ನೇಮಕ
160. 1949 : ಭಾರತದ ಹೊಸ ಸಂವಿಧಾನಕ್ಕೆ ಸಹಿ ಮತ್ತು ಅಳವಡಿಕೆ
161. 1950 : ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಘೋಷಣೆ ( ಜನವರಿ 26) ಮತ್ತು ಹೊಸ ಸಂವಿಧಾನದ ಜಾರಿ, ಡಾ. ಬಾಬು ರಾಜೇಂದ್ರ ಪ್ರಸಾದ್ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರಾಗಿ ನೇಮಕ
162. 1951 : ಪ್ರಥಮ ಪಂಚವಾರ್ಷಿಕ ಯೋಜನೆ ಜಾರಿ, ದೆಹಲಿಯಲ್ಲಿ ಪ್ರಥಮ ಏಷಿಯನ್ ಕ್ರೀಡೆಗಳ ಆರಂಭ
163. 1952 : ಪ್ರಥಮ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ.
164. 1953 : ತೇನ್‍ಸಿಂಗ್ ಮತ್ತು ಸರ್, ಎಡ್ಮಂಡ್ ಹಿಲರಿಯಿಂದ ಎವರೆಸ್ಟ್ ಪರ್ವತ ಏರಿಕೆ
165. 1954 : ಭಾರತ – ಚೀನಾ ನಡುವೆ ಪಂಚಶೀಲ ಒಪ್ಪಂದ
166. 1955 : ಹಿಂದೂ ವಿವಾಹ ಖಾಯ್ದೆ -1955
167. 1956 : ಎರಡನೇ ಪಂಚವಾರ್ಷಿಕ ಯೋಜನೆಯ ಜಾರಿ, ಭಾಷಾ ಆಧಾರದಲ್ಲಿ ರಾಜ್ಯಗಳ ಪುನರ್ವಿಂಗಡನೆ
168. 1957 : ಎರಡನೇ ಸಾರ್ವತ್ರಿಕ ಚುನಾವಣೆಗಳು
169. 1958 : ಮೆಟ್ರಿಕ್ ವ್ಯವಸ್ಥೆ ಭಾರತದಲ್ಲಿ ಅಳವಡಿಕೆ
170. 1960 : ಭಾರತ- ಪಾಕಿಸ್ತಾನ ನಡುವೆ ನೀರಿನ ಹಂಚಿಕೆ ಕುರಿತ ಒಪ್ಪಂದ
171. 1961 : 3 ನೇ ಪಂಚವಾರ್ಷಿಕ ಯೋಜನೆಯ ಜಾರಿ
172. 1962 : ಭಾರತದ ಮೇಲೆ ಚೀನಾದ ಆಕ್ರಮಣ
173. 1962 : ಮೂರನೇ ಸಾರ್ವತ್ರಿಕ ಚುನಾವಣೆ
174. 1963 : ಭಾರತ – ಪಾಕಿಸ್ತಾನ ನಡುವೆ ಕಾಶ್ಮೀರ ಕುರಿತ ಮಾತುಕತೆ
175. 1964 : ನೆಹರೂರವರ ನಿಧನ, ಲಾಲಬಹದ್ದೂರ್ ಶಾಸ್ತ್ರೀ ನೂತನ ಪ್ರಧಾನಿ ಆಯ್ಕೆ
176. 1965 : ಭಾರತ- ಪಾಕಿಸ್ತಾನ ಯುದ್ಧ
177. 1966 : ಭಾರತ – ಪಾಕಿಸ್ತಾನ ನಡುವೆ ತಾಷ್ಕೆಂಟ್ ಒಪ್ಪಂದ, ಇಂದಿರಾಗಾಂಧಿ ನೂತನ ಪ್ರಧಾನಿ ಆಯ್ಕೆ
178. 1967 : 4ನೇ ಸಾರ್ವತ್ರಿಕ ಚುನಾವಣೆಗಳು
179. 1970 : ಅವಧಿಗೆ ಮುನ್ನ ಲೋಕಸಭೆ ವಿಸರ್ಜನೆ
180. 1971 : 5ನೇ ಸಾರ್ವತ್ರಿಕ ಚುನಾವಣೆಗಳು
180. 1972 : ಭಾರತ- ಪಾಕಿಸ್ತಾನ ನಡುವೆ ಸಿಮ್ಲಾ ಒಪ್ಪಂದ, ಸಿ. ರಾಜಗೋಪಾಲಾಚಾರಿಯವರ ನಿಧನ
181. 1973 : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ, ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣ
182. 1974 : ರಾಜಸ್ಥಾನದ ಪೋಕ್ರಾನ್‍ನಲ್ಲಿ ಭಾರತದ ಪ್ರಥಮ ಅಣು ಸ್ಫೋಟ
183. 1975 : ಭಾರತದ ಪ್ರಥಮ ಉಪಗ್ರಹ ‘ಆರ್ಯಭಟ’ ಉಡಾವಣೆ
184. 1976 : ಪಾಕಿಸ್ತಾನ, ಚೀನಾ ನಡುವೆ ಭಾರತದ ರಾಜತಾಂತ್ರಿಕ ಸಂಬಂಧಗಳ ಪುನ: ಏರ್ಪಡೆ
185. 1977 : 6 ನೇ ಸಾರ್ವತ್ರಿಕ ಚುನಾವಣೆಗಳು
186. 1979 : ಭಾರತದ 2 ನೇ ಉಪಗ್ರಹ ‘ಭಾಸ್ಕರ’ ಉಡಾವಣೆ
187. 1980 : 7 ನೇ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ- ಇಂದಿರಾಗಾಂಧಿ ಪುನ: ದೇಶದ ಪ್ರಧಾನಿ, ಭಾರತದ ತನ್ನದೇ ಉಡಾವಣಾ ವಾಹನ ಉಪಯೋಗಿಸಿ ‘ ರೋಹಿಣಿ’ ಉಪಗ್ರಹ ಉಡಾವಣೆ
188. 1981 : ಭಾರತದ ಆಪಲ್ ಉಪಗ್ರಹ ಕಕ್ಷೆಗೆ
189. 1983 : ಸರ್ಕಾರಿಯಾ ಆಯೋಗ ನೇಮಕ, ವಿಶ್ವಕಪ್ ಕ್ರಿಕೆಟ್ ಭಾರತದ ಮಡಿಲಿಗೆ, ಮದ್ರಾಸ್ ಅಣು ಶಕ್ತಿ ಕೇಂದ್ರ ಚಾಲನೆ
190. 1984 : ಪ್ರಥಮ ಭಾರತೀಯ ರಾಕೇಶ್ ಶರ್ಮ ಕಕ್ಷೆಗೆ, ಭೋಪಾಲ್ ಅನಿಲ ದುರಂತ, ಇಂದಿರಾಗಾಂಧಿಯವರ ಕಗ್ಗೋಲೆ, ರಾಜೀವ್‍ಗಾಂಧಿ ನೂತನ ಪ್ರಧಾನಿ, 8 ನೇ ಸಾರ್ವತ್ರಿಕ ಚುನಾವಣೆಗಳು
191. 1985 : ಪಕ್ಷಾಂತರ ನಿರೋಧ ಕಾನೂನಿಗೆ ಲೋಕಸಭೆಯಲ್ಲಿ ಅಂಗೀಕಾರ, 7 ನೇ ಪಂಚವಾರ್ಷಿಕ ಯೋಜನೆಯ ಜಾರಿ
192. 1986 : ಮಿಜೋರಾಂ ಒಪ್ಪಂದ, ನೂತನ ಶಿಕ್ಷಣ ನೀತಿಯ ಘೋಷಣೆ, ಬೆಂಗಳೂರಿನಲ್ಲಿ 2ನೇ ಸಾರ್ಕ್ ಸಮ್ಮೇಳನ, ವರದಕ್ಷಿಣೆ ವಿರೋಧ ಕಾನೂನಿನ ಅಂಗೀಕಾರ
193. 1988 : ಭೂಮಿಯಿಂದ ಭೂಮಿಗೆ ಹಾರಿಸುವ ‘ಪೃಥ್ವಿ’ ಮಿಸೈಲ್‍ನ ಯಶಸ್ವಿ ಪರೀಕ್ಷಾ ಉಡಾವಣೆ, ಬೆಂಗಳೂರಿನಲ್ಲಿ ಜನತಾದಳದ ಉದಯ, ಸಂವಿಧಾನ ತಿದ್ದುಪಡಿಯಿಂದ ಮತದಾನದ ವಯಸ್ಸು 21 ರಿಂದ 18 ಕ್ಕೆ ಇಳಿಕೆ
194. 1989 : 9ನೇ ಸಾರ್ವತ್ರಿಕ ಚುನಾವಣೆಗಳು, ಅಗ್ನಿ ಮತ್ತು ತ್ರಿಶೂಲ್ ಮಿಸೈಲ್‍ಗಳ ಪರೀಕ್ಷಾ ಉಡಾವಣೆ
195. 1990 : ವಿ.ಪಿ ಸಿಂಗ್ ಸರ್ಕಾರದಿಂದ ಮಂಡಲ್ ವರದಿ ಜಾರಿ,
196. 1991 : ರಾಜೀವ್‍ಗಾಂಧಿಯವರ ಹತ್ಯೆ, ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
197. 1992 : ಎಚಿಟನೇ ಪಂಚವಾರ್ಷಿಕ ಯೋಜನೆ ಜಾರಿ, ಅಯೋಧ್ಯಯಲ್ಲಿ ಬಾಬ್ರಿ ಮಸೀದಿ ದ್ವಂಸ( ಡಿ. 5)
198. 1993 : ಜೆ.ಆರ್.ಡಿ ಟಾಟಾರವರ ನಿಧನ, ರಷ್ಯಾ ಸ್ನೇಹ ಒಪ್ಪಂದ ನವೀಕರಣ
199. 1994 : ಎ.ಎಸ್.ಎಲ್.ವಿ ಯಶಸ್ವಿ ಉಡಾವಣೆ, ಸೂರತ್ ಮತ್ತು ಇತರೆ ಕಡೆಗಳಲ್ಲಿ ಪ್ಲೇಗ್ ರೋಗ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳು
200. 1996 : ಹನ್ನೊಂದನೆ ಸಾರ್ವತ್ರಿಕ ಚುನಾವಣೆಗಳು, ವಾಜಪೇಯಿಯವರಿಂದ ಸರ್ಕಾರ ರಚನೆ – 13 ದಿನಗಳಲ್ಲೇ ರಾಜೀನಾಮೆ. ಕರ್ನಾಟಕದ ಹೆಚ್.ಡಿ ದೇವೆಗೌಡರಿಂದ ಕಾಂಗ್ರೆಸ್ ಬೆಂಬಲ ಪಡೆದು ಕೇಂದ್ರದಲ್ಲಿ ಸರ್ಕಾರ ರಚನೆ, ಭಾರತ -ಬಾಂಗ್ಲಾದೇಶ ನಡುವೆ ಗಂಗಾ ನೀರಿನ ಕುರಿತ ಒಪ್ಪಂದಕ್ಕೆ ಸಹಿ