ಮಧ್ಯಕಾಲೀನ ಭಾರತ
➤ ಮಹಮದ್ ಘಜ್ನಿ( ಕ್ರಿ.ಶ 997- 1030)
ಕ್ರಿ.ಶ 997 ರಲ್ಲಿ ಮಹಮದನು ಘಜ್ನಿಯು ಸಿಂಹಾಸನವೇರಿದನು. ಅವನು ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದ ಭರತದ ಮೇಲೆ 17 ಬಾರಿ ದಾಳಿ ಮಾಡಿದನು. ಅವನು ಕ್ರಿ.ಪೂ 1025ರಲ್ಲಿ ಗುಜರಾತ್‍ನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು. ‘ಶಹನಾಮ’ ವನ್ನು ಬರೆದ ಫಿರ್ಧೂಸಿಯು ಇವನ ಆಸ್ಥಾನದಲ್ಲಿದ್ದನು. ಘಜ್ನಿಯ ಮಹಮದನು ಂಧ್ಯ ಏಷ್ಯಾದ ವಿದ್ವಾಂಸ ಆಲ್ಬೆರೂನಿಯನ್ನು ಭಾರತಕ್ಕೆ ಕಳುಹಿದ್ದನು. ಮಹಮದನು ಕ್ರಿ.ಶ 1030 ರಲ್ಲಿ ಘಜ್ನಿಯಲ್ಲಿ ಮರಣ ಹೊಂದಿದನು.
➤ ಮಹಮದ್ ಘೋರಿ ( ಕ್ರಿ.ಶ. 1173 – ಕ್ರಿ.ಶ 1206)
ಮಹಮದ್ ಘೋರಿಯು ಉತ್ತರ ಭಾರತವನ್ನು ಗೆದ್ದು ತನ್ನ ಸಂಸ್ಥಾನಕ್ಕೆ ಖಾಯಂ ಆಗಿ ಸೇರಿಕೊಳ್ಳುವ ಆಸೆ ಹೊಂದಿದ್ದನು. ಕ್ರಿ.ಶ. 1191 ರಲ್ಲಿ ಅವನು ಭಾರತದ ಮೇಲೆ ದಾಳಿ ಮಾಡಿ ದೆಹಲಿ ಹಾಗೂ ಅಜ್ಮೀರ್‍ನ ದೊರೆ ಪೃಥ್ವಿರಾಜ್ ಚೌಹಾನನಿಂದ ತರೈನ್‍ನಲ್ಲಿ ಸೋಲುಂಡನು. ಪುನ: ಕ್ರಿ.ಶ 1192 ರಲ್ಲಿ ದಾಳಿ ಮಾಡಿದ ಮಹಮದ್ ಘೊರಿಯು ಎರಡನೇ ತರೈನ್ ಕದನದಲ್ಲಿ ಪೃಥ್ವರಾಜ ಚೌಹಾನ್‍ನನ್ನು ಸೋಲಿಸಿ ಸಾಯಿಸಿದನು.
ಕ್ರಿ.ಶ 1194ರಲ್ಲಿ ಅವನು ಕನೂಜ್‍ನ ದೊರೆ ಜಯಚಂದ್ರನನ್ನು ಸೋಲಿಸಿದನು. ಮಹಮದ್ ಘೋರಿಯು ಲಾಹೋರ್, ದೆಹಲಿ, ಕನೂಜ್, ಬನಾರಸ್, ಗ್ವಾಲಿಯರ್ ಇತ್ಯಾದಿ ಭೂ ಭಾಗಗಳನ್ನು ವಶಪಡಿಸಿಕೊಂಡು ತನ್ನ ಸೈನ್ಯಾಧಿಕಾರಿ ಕುತುಬ್ – ಉದ್-ದಿನ್- ಐಬಕ್‍ನನ್ನು ಗವರ್ನರ್ ಆಗಿ ನೇಮಿಸಿ ಘಜ್ನಿಗೆ ಹಿಂದಿರುಗಿದನು. ಹೀಗೆ ಮಹಮದ್ ಘೋರಿಯು ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ತಳಪಾಯ ಹಾಕಿದನು.
➤ ದೆಹಲಿಯ ಸುಲ್ತಾನರು ( ಕ್ರಿ.ಶ. 1206- 1526)
ಮಹಮದ್ ಘೋರಿಯಿಂದ ಭಾರತದಲ್ಲಿ ಮುಸ್ಲಿಂರ ಆಳ್ವಿಕೆಗೆ ತಳಪಾಯ ಹಾಕಲ್ಪಟ್ಟು, ಕುತುಬ್- ಉದ್- ದಿನ್- ಐಬಕ್‍ನನ್ನು ದೆಹಲಿಯಲ್ಲಿ ಪ್ರತಿಷ್ಠಾಪಿಸಿದುದು, ದೆಹಲಿ ಸುಲ್ತಾನರ ಆಲ್ವಿಕೆಯ ಅವಧಿ ಪ್ರಾರಂಭವಾಗಲು ಕಾರಣವಾಯ್ತು. ಈ ದೆಹಲಿ ಸುಲ್ತಾನರ ಅವಧಿಯನ್ನು ಐದು ವಿಭಿನ್ನ ಆಳ್ವಿಕೆಯ ಅವಧಿಗಳನ್ನಾಗಿ ವಿಂಗಡಿಸಬಹುದು. ಅವೆಂದರೆ,
1. ಗುಲಾಮಿ ಸಂತತಿ( ಕ್ರಿ.ಶ 1206- 1290)
2. ಖಿಲ್ಜಿ ಸಂತತಿ( ಕ್ರಿ.ಶ 1290- 1320)
3. ತುಘಲಕ್ ಸಂತತಿ( ಕ್ರಿ.ಶ 1320 – 1414)
4. ಸಯ್ಯಿದ್ ಸಂತತಿ( ಕ್ರಿ.ಶ 1414- 1450)
5. ಲೋಧಿ ಸಂತತಿ( ಕ್ರಿ.ಶ 1451- 1526)
# 1. ಗುಲಾಮಿ ಸಂತತಿ
ಕುತುಬ್- ಉದ್- ದಿನ್- ಐಬಕನು ಗುಲಾಮಿ ಸಂತತಿಯ ಸ್ಥಾಪಕ. ಇವನು ಮಹಮದ್ ಘೋರಿಯ ಸಾವಿನ ನಂತರ ದೆಹಲಿಯ ಸುಲ್ತಾನನಾದನು. ದೆಹಲಿಯ “ಖುತುಬ್ ಮಿನಾರ್”ನ ನಿರ್ಮಾಣ ಇವನ ಅವಧಿಯಲ್ಲಿ ಪ್ರಾರಂಭವಾಯಿತು.
* ಶಮಸ್- ಉದ್- ದಿನ್- ಅಲ್ತಮಸ್( ಕ್ರಿ.ಶ 1211- 1236)
ಅಲ್ತಮಸನು ಹಲವಾರು ಭೂಭಾಗಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಉದಾರ ದೊರೆಯಾಗಿದ್ದ ಈತನು, ಗುಲಾಮಿ ದೊರೆಗಳಲ್ಲಿ ಮಹಾನ್ ದೊರೆ ಎನಿಸಿಕೊಂಡನು.
* ರಜಿಯಾ ಸುಲ್ತಾನ ( ಕ್ರಿ.ಶ 1236- 1239)
ಅಲ್ತಮಸನು ತನ್ನ ಉತ್ತರಾಧಿಕಾರಿಯಾಗಿ ತನ್ನ ಮಗಳು, ರಜಿಯಾಳನ್ನು ನಾಮಕರಣ ಮಾಡಿದನು. ಇವಳು ಭಾರತವನ್ನಾಳಿದ ಮೊದಲ ಹಾಗೂ ಏಕೈಕ ಮುಸ್ಲಿಂ ಮಹಿಳೆ. ಇವಳು ತನ್ನ ಸೈನ್ಯದಿಂದಲೇ ಹತಳಾದಳು.
* ನಾಸಿರ್- ಉದ್- ದಿನ್- ಮಹಮದ್ (ಕ್ರಿ.ಶ. 1246- 1266)
ಇವನು ಅಲ್ತಮಸನ ಮಗನಾಗಿದ್ದನು. ತನ್ನ ಮಂತ್ರಿಯಾದ ಬಲ್ಬಾನ್‍ನಿಗೆ ಸಿಂಹಾಸನವನ್ನು ಬಿಟ್ಟು ಇವನು ಕ್ರಿ.ಶ 1266 ರಲ್ಲಿ ಮರಣ ಹೊಂದಿದನು.
* ಘಿಯಾಸ್- ಉದ್- ದಿನ್- ಬಲ್ಬಾನ್
ಬಲ್ಬಾನನು ತುಂಬಾ ಧೈರ್ಯಶಾಲಿ ಹಾಗೂ ಕ್ರೂರ ದೊರೆಯಾಗಿದ್ದನು. ಇವನು ಮಂಗೋಳರ ದಾಳಿಯನ್ನು ಸಮರ್ಥವಾಗಿ ಎದುರಿಸಿದನು. ಉರ್ದು ಹಾಗೂ ಪರ್ಷಿಯನ್ ಭಾಷೆಯ ಮಹಾನ್ ಕವಿಯಾಗಿದ್ದ ಅಮಿರ್ ಖಸ್ರೋನು ಇವನ ಆಸ್ಥಾನದಲ್ಲಿದ್ದನು.
➤ 2. ಖಿಲ್ಜಿ ಸಂತತಿ
ಸುಲ್ತಾನ್ ಜಲಾಲ್- ಉದ್-ದಿನ್ ಖಿಲ್ಜಿಯು ಖಿಲ್ಜಿ ಸಂತಿತಯ ಸ್ಥಾಪಕ. ಇವನು ಎಲ್ಲಾ ರಜಪೂತ ಸಂಸ್ಥಾನಗಳನ್ನು ತನ್ನ ಅಧೀನಕ್ಕೆ ತಂದನು. ಸುಲ್ತಾನ್ ಜಲಾಲ್- ಉದ್- ದಿನ್ ಖಿಲ್ಜಿಯ ದಾಯಾದಿಯಾಗಿದ್ದ ಅಲಾಲ್ – ಉದ್- ದಿನ್ ಖಿಲ್ಜಿಯು ಜಲಾಲನ್ನು ಸಾಯಿಸಿ ಕ್ರಿ.ಶ 1296 ರಲ್ಲಿ ಅಧಿಕಾರಕ್ಕೆ ಬಂದನು. ಇವನು, ಖಿಲ್ಜಿ ಸಂತತಿಯ ಸಮರ್ಥ ದೊರೆ. ಖುಸ್ರೋ ಖಿಲ್ಜಿ ಸಂತತಿಯ ಕೊನೆಯ ದೊರೆ.
➤ 3. ತುಘಲಕ್ ಸಂತತಿ
ಘಿಯಾಸ್-ಉದ್- ದಿನ್ ತುಘಲಕ್ ( ಕ್ರಿ.ಶ 1320- 1325)ನು ತುಘಲಕ್ ಸಂತತಿಯ ಸ್ಥಾಪಕ. ಅವನ ನಂತರ ಅವನ ಮಗ ಮಹಮದ್- ಬಿನ್- ತುಘಲಕನು ಅಧಿಕಾರಕ್ಕೆ ಬಂದನು. ಅವನು ಕ್ರಿ.ಶ 1320 ರಿಂದ 1351 ರವರೆಗೆ ರಾಜ್ಯಭಾರ ಮಾಡಿದನು. ಅವನು ಕಂಚಿನ ಮತ್ತು ತಾಮ್ರದ ನಾಣ್ಯಗಳನ್ನು ಜಾರಿಗೆ ತಂದನು. ಮಹಮದ್- ಬಿನ್- ತುಘಲಕನ ನಂತರ ಫಿರೋಜ್ ಶಾ ತುಘಲಕನು ಕ್ರಿ.ಶ 1351 ರಿಂದ 1388 ರವರೆಗೆ ಅಧಿಕಾರ ನಡೆಸಿದನು. ಕ್ರಿ.ಶ 1398 ರಲ್ಲಿ ಟರ್ಕಿಯ ತೈಮೂರನ ದಾಳಿಯಿಂದಾಗಿ ತುಘಲಕ್ ಸಂತತಿಯು ಅವನತಿ ಹೊಂದಿತು.
➤ 4. ಸಯ್ಯಿದ್ ಸಂತತಿ
ಟರ್ಕಿಯ ತೈಮೂರನ ಪ್ರತಿನಿಧಿ ಖಿಜರ್ ಖಾನನು ದೆಹಲಿ ಸಿಂಹಾಸನವನ್ನು ವಶಪಡಿಸಿಕೊಂಡು ಅಲ್ಲಿಯ ಸುಲ್ತಾನನಾಗಿ ಸಯ್ಯಿದ್ ಸಂತತಿಯನ್ನು ಸ್ಥಪಿಸಿದನು. ಖಿಜರ್ ಖಾನನ ನಂತರ ಅವನ ಮಗ ಮುಬಾರಕ್ ಖಾನನು ಕ್ರಿ.ಶ. 1421 ರಲ್ಲಿ ಅಧಿಕಾರಕ್ಕೆ ಬಂದನು. ಅಲಮ್ ಶಾಹನು ಸಯ್ಯಿದ್ ಸಂತತಿಯ ಕೊನೆಯ ದೊರೆ.
➤ 5. ಲೋಧಿ ಸಂತತಿ
ಆಫ್‍ಘನ್‍ನ ಲೋಧಿ ಬುಡಕಟ್ಟಿಗೆ ಸೇರಿದ ಬಾಹ್ಲಲ್ ಕಾನನು 1451 ರಲ್ಲಿ ದೆಹಲಿಯಲ್ಲಿ ಸಯ್ಯಿದ್ ಸಂತತಿಯನ್ನು ಸೋಲಿಸಿ ಲೋಧಿ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಸಿಖಂದರ್ ಲೋಧಿ ಮತ್ತು ಇಬ್ರಾಹಿಂ ಲೋಧಿ ಲೋಧಿ ಸಂತತಿಯ ಪ್ರಮುಖ ದೊರೆಗಳು.
# ಮೊಘಲ್ ಸಾಮ್ರಾಜ್ಯ
ಭಾರತದ ಇತಿಹಾಸದಲ್ಲಿ ಮೊಘಲರ ಅವಧಿಯು ಅತ್ಯಂತ ಪ್ರಮುಖವಾದದ್ದು. ಮೊಘಲ್ ಸಂತತಿಯ ಭಾರತದಲ್ಲಿ ಸುಮಾರು 200 ವರ್ಷಗಳ ಕಾಲ ಆಳಿ ಸಮರ್ಥವಾದ ಸರ್ಕಾರವನ್ನು ನೀಡಿತು.
ಬಾಬರ್- ಬಾಬರನು ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ. ಅವನು 1526 ರಲ್ಲಿ ಮದಲನೇ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋಧಿಯನ್ನು ಸೊಲಿಸಿ ಭಾರತದಲ್ಲಿ ಮೊಘಲರ ಆಡಳತಕ್ಕೆ ತಳಪಾಯ ಹಾಕಿ ದೆಹಲಿಯ ಚಕ್ರವರ್ತಿಯಾದನು. ಅವನು 1530 ರಲ್ಲಿ ಆಗ್ರಾದಲ್ಲಿ ನಿಧನ ಹೊಂದಿದನು.
ಹುಮಾಯೂನ್ -ಬಾಬರನ ನಂತರ ಅವನ ಮಗ ಹುಮಾಯೂನನು ಮೊಗಲ್ ಸಾಮ್ರಾಜ್ಯದ ಸಿಂಹಾಸನವೇರಿದನು. ಹುಮಾಯೂನನು 1540 ರಲ್ಲಿ ಆಫ್‍ಘನ್ನರ ಶೇರ್‍ಶಾಹನಿಗೆ ಸೋತು ಸಿಂಹಾಸನವನ್ನು ಕಳೆದುಕೊಂಡನು. ಶೇರ್‍ಶಾಹನ ಸಾವಿನ ನಂತರ ದೆಹಲಿ ಸಿಂಹಾಸನವನ್ನು 1555 ರಲ್ಲಿ ಹುಮಾಯೂನ್‍ನು ಮರಳಿ ಗೆದ್ದನು.
* ಶೇರ್ ಶಾಹ ಸೂರಿ
ಹುಮಾಯೂನನ್ನು ಸೋಲಿಸಿ ದೆಹಲಿಯ ಗದ್ದುಗೆ ಏರಿದ ಈತ 1545 ರವರೆಗೆ ರಾಜ್ಯಭಾರ ಮಾಡಿದನು. ಇವನು ತನ್ನ ಸಾಮ್ರಾಜ್ಯದ ಆರ್ಥಿಕತೆಯನ್ನು ಉತ್ತಮಪಡಿಸಲು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನು. ದೆಹಲಿ ಮತ್ತು ಪೇಷಾವರ್ ನಡುವೆ ಗ್ರಾಂಡ್ ಟ್ರಂಕ್ ರಸ್ತೆಯನ್ನು ನಿರ್ಮಿಸಿದವನು ಇವನೇ.
* ಅಕ್ಬರ್ (1556- 1605)
ಅಕ್ಬರನು ಹುಮಾಯೂನ್‍ನ ಹಿರಿಯ ಮಗ. ಇವನು ತನ್ನ ತಂದೆಯ ಸಾವಿನ ನಂತರ 1556 ರಲ್ಲಿ ತನ್ನ 13 ನೆ ವಯಸ್ಸಿನಲ್ಲಿ ಸಿಂಹಾಸನವೇರಿದನು. ಅಕ್ಬರನು ಆಢಳಿತ ನಡೆಸಲು ಸಮರ್ಥನಾಗುವವರೆಗೆ ಬೈರಾಮಖಾನನೆಂಬುವನು ಸಾಮ್ರಾಜ್ಯದ ಆಡಳಿತವನ್ನು ನೋಡಿಕೊಂಡನು. ಅಕ್ಬರನ ಸೈನ್ಯವು 1556 ರಲ್ಲಿ ಎರಡನೇ ಪಾಣಿಪತ್ ಕದನದಲ್ಲಿ ಹೇಮುವನ್ನು ಸೋಲಿಸಿತು. 1576 ರಲ್ಲಿ ಅಕ್ಬರನು ಹಾಲ್ಡಿಘಾಟಿ ಕದನದಲ್ಲಿ ರಾಣಾಪ್ರತಾಪನನ್ನು ಸೋಲಿಸಿದನು. ಅಕ್ಬರನು ಮೊಘಲ್ ಸಾಮ್ರಾಜ್ಯದವನ್ನು ಬೇರೆಲ್ಲಾ ಮೊಘಲ್ ದೊರೆಗಳಿಗಿಂತ ಗಟ್ಟಿ ನೆಲೆಯ ಮೇಲೆ ನಿಲ್ಲಿಸಿದನು. ಹಾಗಾಗಿ ಅವನೇ ಮೊಘಲ್ ಸಾಮ್ರಾಜ್ಯದ ನೈಜ ಸ್ಥಾಪಕ ಎನಿಸಿಕೊಂಡಿದ್ದಾನೆ. ಇವನ ಆಸ್ಥಾನದಲ್ಲಿ ಹಲವಾರು ಕವಿಗಳು, ವಿದ್ವಾಂಸರು ಇದ್ದರು.
* ಜಹಾಂಗೀರ್ ( 1605- 1627)
ಅಕ್ಬರನ ಮಗನಾದ ಇವನ ಹೆಸರು ಸಲೀಂ ಎಂದು. ಇವನು ಅಕ್ಬರನ ಸಾವಿನ ನಂತರ 1605 ರಲ್ಲಿ ಸಿಂಹಾಸನವೇರಿದನು. ಅವನ ಪತ್ತನಿಯಾದ ನೂರ್‍ಜಹಾನ್ ಅಥವಾ ಮೆಹರುನ್ನೀಸಳು ಜಹಾಂಗೀರನ ಜೀವನ ಹಾಗೂ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದಳು. ಜಹಾಂಗೀರನು ನಿಸರ್ಗ ಪ್ರೇಮಿಯಾಗಿದ್ದನು. ಹಾಗಾಗಿ ಹಲವಾರು ಉದ್ಯಾನವನಗಳನ್ನು ನಿರ್ಮಿಸಿದನು. ಅವನು 1627 ರಲ್ಲಿ ನಿಧನ ಹೊಂದಿದನು.
* ಶಹಜಹಾನ್( 1627- 1659)
ಜಹಾಂಗೀರ£ ಸಾವಿನ ನಂತರ ಶಹಜಹಾನನು 1627 ರಲ್ಲಿ ಗದ್ದುಗೆ ಏರಿದನು. ಅವನು ಕಲೆ, ಸಂಸ್ಕøತಿಯ ಪ್ರೇಮಿಯಾಗಿದ್ದನು. ದೆಹಲಿಯ ಕೆಂಪುಕೋಟೆ, ಜಾಮ ಮಸೀದಗಳು ಇವನ ಕಾಲದಲ್ಲಿ ಕಟ್ಟಲ್ಪಟ್ಟವು. 1631 ರಲ್ಲಿ ಅವನ ಪತ್ನಿ ಮುಮ್ತಾಜ್ ಮಹಲಳು ತೀರಿಕೊಂಡಳು. ಅವಳ ನೆನಪಿಗಾಗಿ ಶಹಜಹಾನನು ಆಗ್ರಾದಲ್ಲಿ ತಾಜಮಹಲನ್ನು ಕಟ್ಟಿಸಿದನು. ಅವನು ದೆಹಲಿಯ ಸಮೀಪ ಶಹಜಾನ್‍ಬಾದ್ ಎಂಬ ನೂತನ ನಗರವನ್ನು ನಿರ್ಮಿಸಿದನು. ಶಹಜಹಾನನ ಜೀವಿತದ ಕಡೆಯ ಕಾಲದಲ್ಲಿ 1658 ರಲ್ಲಿ ಅವನ ಮಗ ಔರಂಗಜೇಬನು ಇವನನ್ನು ಸೆರೆಮನೆಗೆ ನೂಕಿ ಸಿಂಹಾಸನವೇರಿದನು. ಸೆರೆಮನೆಯಲ್ಲೇ ಶಹಜಹಾನನು 1666 ರಲ್ಲಿ ತೀರಿಕೊಂಡನು.
* ಔರಂಗಜೇಬ( 1659- 1707)
ಔರಂಗಜೇಬನು ಮೊಘಲ್ ಸಾಮ್ರಾಜ್ಯವನ್ನು ಸುಮಾರು 50 ವರ್ಷಗಳ ಕಾಲ ಆಳಿದನು. ತೀವ್ರ ಹಿಂದು ದ್ವೇಷಿಯಾಗಿದ್ದ ಔರಂಗಜೇಬನು ಹಲವಾರು ಹಿಂದೂ ದೇವಾಲಯಗಳನ್ನು ದ್ವಂಸ ಮಾಡಿದನು. ಅವನು ಸಿಖ್ಖರ 9 ನೇ ಗುರುವಾಗಿದ್ದ ಗುರು ತೇಗ್ ಬಹದೂರನನ್ನು ಮರಣದಂಡನೆಗೆ ಗುರಿ ಮಾಡಿದನು.
• ಮೊಘಲ್ ಸಾಮ್ರಾಜ್ಯದ ಪತನ
ಔರಂಗಜೇಬನ ಸಾವಿನ ನಂತರ ಅವನ ಮಕ್ಕಳೆಲ್ಲಾ ಸಿಂಹಾಸನಕ್ಕಾಗಿ ಹೋರಾಟವಾಗಿ ಬಹದ್ದೂರ್‍ಶಾಹನು ಗದ್ದುಗೆ ಏರಲು ಯಶಸ್ವಿಯಾದನು. ಬಹದ್ದೂರ್ ಶಹನು 1712 ರಲ್ಲಿ ಮರಣ ಹೊಂದಿದನು. ಮಹಮದ್ ಶಾಹನೆಂಬ ಮೊಘಲ್ ದೊರೆಯ ಕಾಲದಲ್ಲಿ ಪರ್ಷಿಯಾದ ದೊರೆ ನಾದಿರ್ ಶಹನು 1739 ರಲ್ಲಿ ಭಾರತದ ಮೇಲೆ ದಾಳಿ ಮಾಡಿ ಮೊಘಲ್ ಸಾಮ್ರಾಜ್ಯವನ್ನು ಛಿದ್ರ ಮಾಡಿದನು.
# ಮರಾಠರು :
ಔರಂಜೇಬನ ಕಾಲದಲ್ಲಿ ದಕ್ಷಿಣದಲ್ಲಿ ಮರಾಠರು ಪ್ರಬಲರಾಗಲು ಪ್ರಾರಂಭಿಸಿದರು. ಶಿವಾಜಿಯು ಮರಾಠ ಸಂಸ್ಥಾನದ ಸ್ಥಾಪಕ. ಶಿವಾಜಿಯ ಮೇಲೆ ಅವನ ತಾಯಿ ಜೀಜಾಬಾಯಿಯು ಅಪಾರ ಪ್ರಭಾವ ಬೀರಿದಳು. ಅವನು ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪರಿಣಿತನಾಗಿದ್ದನು. ಅವನು ಭಾರತವನ್ನು ಮುಸ್ಲಿಂರ ಹಿಡಿತದಿಂದ ಪಾರು ಮಡುವ ಗುರಿ ಹೊಂದಿದ್ದನು. ಶಿವಾಜಿಯು 1680 ರಲ್ಲಿ ಮರಣ ಹೊಂದಿದನು. ಶಿವಜಿಯ ನಂತರ ಅವನ ಮಗ ಶಾಂಬಾಜಿಯು ಅಧಿಕಾರಕ್ಕೆ ಬಂದನು. ಅವನು ಅಷ್ಟು ಪ್ರಬಲನಾಗಿರಲಿಲ್ಲ. ಶಾಂಬಾಜಿಯನ್ನು ಔರಂಗಜೇಬನು ಸೆರೆ ಹಿಡಿದು 1689 ರಲ್ಲಿ ಮರಣ ದಂಡನೆಗೆ ಗುರಿ ಮಾಡಿದನು. ಅನಂತರ ಸಾಮ್ರಾಜ್ಯವು ಸತತವಾಗಿ ಅವನತಿ ಹೊಂದಲು ಪ್ರಾರಂಭಿಸಿತು.
# ಸಿಖ್ಖರು
ಸಿಖ್ ಧರ್ಮದ ಸ್ಥಾಪಕ ಗುರುನಾನಕ್. ಅವರು ಭಾರತದಾದ್ಯಂತ ಪ್ರವಾಸ ಮಾಡಿದ್ದಲ್ಲದೆ ಹಲವಾರು ವಿದೆಶಿ ರಾಷ್ಟ್ರಗಳಿಗೂ ಭೇಟಿ ನೀಡಿದರು. ತಾನು ಹೋದಲ್ಲೆಲ್ಲಾ ಗುರುನಾನಕರು ಮಾನವ ಜೀವಿಗಳ ಪ್ರೀತಿ ಮತ್ತು ಸಹೋದರತ್ವದ ಮಹತ್ವದ ಬಗೆಗೆ ಬೋಧನೆ ಮಾಡಿದರು. ಅವರು ಜಾತಿ ವ್ಯವಸ್ಥೆ, ಮೂರ್ತಿ ಪೂಜೆ, ಕುರುಡು ಮೂಢನಂಬಿಕೆಗಳು ಹಾಗೂಬ್ರಾಹ್ಮಣರ ಶ್ರೇಷ್ಠತೆಯನ್ನು ಮಾನ್ಯ ಮಾಡಲಿಲ್ಲ. ಸಿಖ್ಖರ್ 5 ನೇ ಗುರುವಾದ ಗುರು ಅರ್ಜುನದೇವನು ಅಮೃತಸರದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಲು ಪ್ರಾರಂಭಿಸಿದನು.
ಅವನು ಸಿಖ್ಖರ ಪವಿತ್ರ ಗ್ರಂಥವಾದ “ ಆದಿ ಗ್ರಂಥ” ವನ್ನು ರಚಿಸಿದನು.1606 ರಲ್ಲಿ ಜಹಾಂಗೀರನು ಗುರು ಅರ್ಜುನ ದೇವನನ್ನು ಸಾಯಿಸಿದನು. ಸಿಖ್ಖರ 9 ನೇ ಗುರುವಾದ ತೇಗ್ ಬಹದ್ದೂರ್‍ನ ತಲೆಯನ್ನು 1675 ರಲ್ಲಿ ಔರಂಗಜೇಬನು ಕಡಿಸಿದನು. ಗುರು ತೆಗ ಬಹದೂರನ ಮಗನಾದ ಗುರು ಗೋವಿಂದಸಿಂಗನು ಆನಂದ್‍ಪುರ್ ಸಾಹಿಬ್‍ನಲ್ಲಿ ಖಾಲ್ಸಾವನ್ನು ಸ್ಥಾಪಿಸಿದನು.
ಪ್ರಬಲರಾಗುತ್ತ ಬಂದ ಸಿಖ್ಖರು ನಂತರ ಬಂದ ಅಸಮರ್ಥ ದೊರೆಗಳು ಹಾಗೂ ತಮ್ಮಲ್ಲೇ ಉಂಟಾದ ಆಂತರಿಕ ಕಚ್ಚಾಟದಿಂದ 1845 ರಲ್ಲಿ ಮೊದಲ ಆಂಗ್ಲ- ಸಿಖ್ ಯುದ್ಧದಲ್ಲಿ ಇಂಗ್ಲೀಷರನ್ನು ಸೋಲಿಸಿದ್ದ ಅವರು 1848-49 ರಲ್ಲಿ ನಡೆದ ಎರಡನೇ ಆಂಗ್ಲೋ- ಸಿಖ್ ಯುದ್ಧದಲ್ಲಿ ಸೋತು ಹೋಗಿ ಪಂಜಾಬನ್ನು ಇಂಗ್ಲೀಷರ ವಶಕ್ಕೆ ನೀಡಿದರು.
# ಇದನ್ನೂ ಓದಿ..
[ ಭಾರತದ ಇತಿಹಾಸ – ಭಾಗ -1 : ಪ್ರಾಚೀನ ಭಾರತ ]
[ ಭಾರತದ ಇತಿಹಾಸ – ಭಾಗ – 3 : ಆಧುನಿಕ ಭಾರತ ]