ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 4

ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 4

# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಭಾರತದ ಈ ಕೆಳಗಿನ ಯಾವ ರಾಜ್ಯಗಳು ದ್ವಿಸದನ ಶಾಸಕಾಂಗ ಪದ್ಧತಿಯನ್ನು ಹೊಂದಿವೆ.
ಎ. ತಮಿಳುನಾಡು
ಬಿ. ಉತ್ತರ ಪ್ರದೇಶ
ಸಿ. ಒರಿಸ್ಸಾ
ಡಿ. ಬಿಹಾರ
ಇ. ಆಂಧ್ರಪ್ರದೇಶ
ಎಫ್. ಗುಜರಾತ್
ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
1. ಎ, ಬಿ,ಇ
2. ಎ, ಸಿ , ಎಫ್
3. ಬಿ, ಡಿ, ಇ
4. ಬಿ, ಡಿ , ಎಫ್

2. ಭಾರತದ ರಾಜಕೀಯ ಪಕ್ಷಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
ಎ. ಸಿಪಿಐ
ಬಿ. ಬಹುಜನ ಸಮಾಜ ಪಾರ್ಟಿ
ಸಿ. ಅಕಾಲಿದಳ
ಡಿ. ನ್ಯಾಷನಲ್ ಕಾನ್‍ಫೆರೆನ್ಸ್
ಇ. ಬಿಜೆಪಿ
ಎಫ್. ಡಿಎಂಕೆ
ಮೇಲಿನ ರಾಜಕೀಯ ಪಕ್ಷಗಳನ್ನು ‘ ಪ್ರಾದೇಶಿಕ’ ಮತ್ತು ರಾಷ್ಟ್ರೀಯ ಪಕ್ಷಗಳೆಂದು ವರ್ಗೀಕರಿಸಿದ ಗುಂಪು ಕ್ರಮವಾಗಿ
1. ಸಿ, ಡಿ, ಎಫ್ ಮತ್ತು ಎ, ಬಿ, ಸಿ
2. ಎ, ಇ, ಎಫ್ ಮತ್ತು ಬಿ, ಸಿ, ಡಿ
3. ಎ, ಬಿ, ಸಿ ಮತ್ತು ಡಿ, ಇ, ಎಫ್
4. ಎ,ಸಿ, ಇ ಮತ್ತು ಬಿಡಿ ಎಫ್

3. ಕೆಲವು ರಾಷ್ಟ್ರಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.
ಎ. ಶ್ರೀಲಂಕಾ
ಬಿ. ಸಿಂಗಾಪುರ
ಸಿ.ನೇಪಾಳ
ಡಿ. ಥೈಲ್ಯಾಂಡ್
ಇ. ಆಫ್ಘಾನಿಸ್ತಾನ
ಎಫ್. ಮಲೇಷ್ಯಾ
ಮೇಲಿನ ರಾಷ್ಟ್ರಗಳನ್ನು ಸಾರ್ಕ್ ಮತ್ತು ಆಸಿಯಾನ್ ಸಂಘಟನೆಯ ಸದಸ್ಯ ರಾಷ್ಟ್ರಗಳೆಂದು ವರ್ಗೀಕರಿಸಿದ ಗುಂಪು ಕ್ರಮವಾಗಿ
1. ಎ, ಸಿ, ಇ ಮತ್ತು ಬಿ, ಡಿ, ಎಫ್
2. ಎ, ಬಿ, ಸಿ ಮತ್ತು ಎ, ಇ, ಎಫ್
3. ಬಿ, ಸಿ , ಇ ಮತ್ತು ಎ,ಎಫ್ ಡಿ
4. ಎ,ಬಿ, ಡಿ ಮತ್ತು ಸಿ, ಡಿ, ಇ

4. ಕರ್ನಾಟಕದ ಮುಖ್ಯಮಂತ್ರಿಗಳ ಗುಂಪನ್ನು ಈ ಕೆಳಗೆ ನೀಡಲಾಗಿದೆ. ಅವರು ಆಡಳಿತ ನಡೆಸಿದ ಅನುಸಾರವಾಗಿ ಕ್ರಮಾನುಗತಿಯನ್ನು ಹೊಂದಿರುವ ಗುಂಪು
1. ಎಸ್ ನಿಜಲಿಂಗಪ್ಪ, ಕೆ.ಸಿ. ರೆಡ್ಡಿ , ವಿರೇಂಧ್ರ ಪಾಟೀಲ್, ಬಿ.ಡಿ. ಜತ್ತಿ
2. ಆರ್ ಗುಂಡುರಾವ್, ಎಂ.ವೀರಪ್ಪ ಮೊಯಿಲಿ, ಎಸ್. ಆರ್ ಬೊಮ್ಮಾಯಿ, ಡಿ. ದೇವರಾಜ ಅರಸ್
3. ಜೆ.ಹೆಚ್ ಪಟೇಲ್ , ಎಸ್. ಬಂಗಾರಪ್ಪ, ಎನ್ ಧರ್ಮಸಿಂಗ್, ಬಿ.ಎಸ್ ಯಡಿಯೂರಪ್ಪ
4. ಎಸ್ ಬಂಗಾರಪ್ಪ, ಹೆಚ್.ಟಿ. ದೇವೆಗೌಡ, ಎಸ್.ಎಂ.ಕೃಷ್ಣ, ಬಿ.ಎಸ್ ಯಡಿಯೂರಪ್ಪ

5. ಭಾರತದ ಚುನಾವಣೆ ಪ್ರಕ್ರಿಯೆಯ ಹಂತಗಳನ್ನು ಈ ಕೆಳಗೆ ನೀಡಲಾಗಿದೆ.
ಎ. ನಾಮಪತ್ರ ಪರಿಶೀಲನೆ
ಬಿ. ಮತ ಎಣಿಕೆ
ಸಿ. ಅಧಿಸೂಚನೆ
ಡಿ. ಪ್ರಚಾರ
ಇ. ಮತದಾನದ ದಿನ
ಎಫ್. ಉಮೇದುವಾರಿಕೆ ಸಲ್ಲಿಕೆ
ಜಿ. ಉಮೇದುವಾರಿಕೆ ಹಿಂಪಡೆಯುವಿಕೆ
ಚುನಾವಣಾ ಪ್ರಕ್ರಿಯೆಯ ಸರಿಯಾದ ಕ್ರಮಾನುಗಣಿಕೆ
1.ಸಿ, ಎಫ್,ಜಿ,ಎ, ಇ, ಬಿ, ಡಿ
2. ಇ, ಎಫ್, ಎ, ಜಿ, ಡಿ, ಬಿ, ಸಿ
3. ಸಿ, ಎಫ್, ಎ, ಜಿ, ಡಿ, ಇ, ಬಿ
4. ಡಿ, ಎಫ್,ಎ,ಜಿ, ಸಿ, ಬಿ, ಇ

6. ಹೇಳಿಕೆ (ಎ) ಮತ್ತು (ಆರ್) ಎರಡನ್ನೂ ಪರಿಗಣಿಸಿ ನೀಡಿರುವ ಸಂಕೇತಾಕ್ಷರಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
ಪ್ರತಿಪಾದನೆ (ಎ) ಭಾರತದ ಸಂವಿಧಾನವು ಅರೆ ಸಂಯುಕ್ತವಾಗಿದೆ.
ಕಾರಣ ( ಆರ್) ಇದು ರಾಜ್ಯ ಸರ್ಕಾರಗಳಿಗಿಂತಲೂ ಹೆಚ್ಚಿನ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.
ಸಂಕೇತಗಳು
1. ಎ ಮತ್ತು ಆರ್ ಎರಡೂ ಸರಿ ಮತ್ತು ಆರ್, ಎ ನ ಸರಿಯಾದ ವಿವರಣೆಯಾಗಿದೆ
2. ಎ ಮತ್ತು ಆರ್ ಎರಡೂ ಸರಿ ಆದರೆ ಆರ್ , ಎ ನ ಸರಿಯಾದ ವಿವರಣೆಯಲ್ಲ.
3. ಎ ಸರಿ ಆದರೆ ಆರ್ ತಪ್ಪು
4. ಆರ್ ಸರಿ ಆದರೆ ಎ ತಪ್ಪು

7. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
ಹೇಳಿಕೆ ( ಎ) ಭಾರತದಲ್ಲಿ ಸಂಸದೀಯ ಮಾದರಿಯ ಸರ್ಕಾರ ವ್ಯವಸ್ಥೆ ಜಾರಿಯಲ್ಲಿದೆ.
ಹೇಳಿಕೆ ( ಬಿ) ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಕಾರ್ಯಾಂಗದ ನೈಜ ಮುಖ್ಯಸ್ಥರಾಗಿದ್ದಾರೆ
ಈ ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ
1. ಹೇಳಿಕೆ ಎ ಸರಿ
2. ಹೆಳಿಕೆ ಬಿ ಸರಿ
3. ಹೇಳಿಕೆ ಎ ಮತ್ತು ಬಿ ಎರಡೂ ಸರಿ
4. ಹೇಳಿಕೆ ಎ ಮತ್ತು ಬಿ ಎರಡೂ ತಪ್ಪು

8. ಪ್ರತಿಪಾದನೆ (ಎ) ಭಾರತದಲ್ಲಿ ಜನತಾ ನ್ಯಾಯಾಲಯಗಳು 1985ರ ಅವಧಿಯಲ್ಲಿ ಅಸ್ಥಿತ್ವಕ್ಕೆ ಬಂದವು.
ಸಮರ್ಥನೆ (ಆರ್) ಭಾರತದಲ್ಲಿ ನ್ಯಾಯ ವಿತರಣೆಯು ವಿಳಂಬ ಮತ್ತು ವೆಚ್ಚದಾಯಕವಾಗಿದೆ.
1. (ಎ) ಸರಿ (ಆರ್) ತಪ್ಪು
2. (ಎ) ತಪ್ಪು (ಆರ್) ಸರಿ
3. (ಎ) ಮತ್ತು (ಆರ್) ಎರಡೂ ಸರಿ ಹಾಗೂ ( ಆರ್, (ಎ) ನ ಸರಿಯಾದ ವಿವರಣೆಯಾಗಿದೆ.
4. (ಎ) ಮತ್ತು (ಆರ್) ಎರಡೂ ಸರಿ ಆದರೆ (ಆರ್),(ಎ)ನ ಸರಿಯಾದ ವಿವರಣೆಯಲ್ಲ.

9. ಭಾರತೀಯ ಕೇಂದ್ರ ಬ್ಯಾಂಕ್ ಸಾಲ ನಿಯಂತ್ರಣಕ್ಕಾಗಿ ಬಳಸುವ ಕಟ್ಟಕಡೆಯ ಮತ್ತು ಶಿಕ್ಷೆಯ ರೂಪದ ನಿಯಂತ್ರಣ ಕ್ರಮ
1. ಮಾರ್ಜಿನ್ ಪ್ರಮಾಣದ ಬದಲಾವಣೆ
2. ಸಾಲದ ಪಡಿತರ
3. ನೈತಿಕ ಒತ್ತಡ
4. ನೇರ ಕ್ರಮ

10. ಇವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
1. ಸಂಧ್ಯಾ ಸುರಕ್ಷಾ ಯೋಜನೆ
2. ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ
3. ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆ
4. ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆ

11. “ಶ್ರಮ” ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೆಳಿಕೆ ತಪ್ಪಾಗಿದೆ.
1. ಶ್ರಮವನ್ನು ಶ್ರಮಿಕನಿಂದ ಬೇರ್ಪಡಿಸಬಹುದಾಗಿದೆ.
2. ಶ್ರಮವನ್ನು ಸಂಗ್ರಹಿಸಿ ಇಡಲು ಆಗುವುದಿಲ್ಲ
3. ಶ್ರಮದ ವಲಸೆಯ ಪ್ರಮಾಣವು ಕಡಿಮೆ
4. ಶ್ರಮದ ದಕ್ಷತೆಯಲ್ಲಿ ಭಿನ್ನತೆ ಹೊಂದಿದೆ.

12. ಜನಸಂಖ್ಯಾ ಪರಿವರ್ತನಾ ಸಿಧ್ದಾಂತ ವು ವಿವರಿಸುವಂತೆ ದೇಶವು ಆರ್ಥಿಕ ಅಭಿವೃದ್ಧಿ ಹೊಂದಿದಂತೆ,
1. ಜನಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತದೆ.
2. ಜನಸಂಖ್ಯೆಯು ಕಡಿಮೆಯಾಗುತ್ತಾ ಹೋಗುತ್ತದೆ.
3. ಜನಸಂಖ್ಯೆಯು ಸ್ಥಿರವಾಗಿರುತ್ತದೆ.
4. ಜನಸಂಖ್ಯೆಯಲ್ಲಿ ಲಿಂಗಾನುಪಾತ ಅಸಮಾನತೆಯಾಗುತ್ತದೆ.

13. ಆರ್ಥಿಕ ವಲಯಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳೆಂದು ವರ್ಗೀಕರಿಸಿದ ಆಧಾರ
1. ಔದ್ಯೋಗಿಕ ಸ್ಥಿತಿಗತಿಗಳು
2. ಆರ್ಥಿಕ ಚಟುವಟಿಕೆಗಳು ಸ್ವರೂಪ
3. ಸಂಘಟನೆಯ ಮಾಲಿಕತ್ವ
4. ಸಂಘಟನೆಯಲ್ಲಿ ತೊಡಗಿರುವವರ ಕೆಲಸಗಾರರ ಸಂಖ್ಯೆ

14. ಈ ಕೆಳಗಿನವುಗಳಲ್ಲಿ ಯಾವುದು ಪರೋಕ್ಷ ತೆರಿಗೆಗಳ ಗುಂಪಾಗಿದೆ.
1. ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ
2. ವರಮಾನ ತೆರಿಗೆ, ಆಮದು-ರಪ್ತು ತೆರಿಗೆ, ಸ್ಟಾಂಪ್ ಶುಲ್ಕ
3. ಕಂಪನಿ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಸಂಪತ್ತಿನ ತೆರಿಗೆ
4. ಸಂಪತ್ತಿನ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಆಮದು- ರಪ್ತು ತೆರಿಗೆ

15. ಜಿಡಿಪಿ ಎನ್ನುವುದು ಇವುಗಳ ಒಟ್ಟು ಮೌಲ್ಯವಾಗಿದೆ.
1. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಎಲ್ಲಾ ಸರಕು ಮತ್ತು ಸೇವೆಗಳು
2. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಚಿತಿಮ ಸರಕು ಮತ್ತು ಸೇವೆಗಳು
3. ಒಂದು ನಿರ್ದೀಷ್ಟ ಅವಧಿಯಲ್ಲಿ ಉತ್ಪಾದನೆಯಾದ ಮಧ್ಯವರ್ತಿ ಸರಕು ಮತ್ತು ಸೇವೆಗಳು
4. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಚಿತಿಮ ಮತ್ತು ಮಧ್ಯವರ್ತಿ ಸರಕು ಮತ್ತು ಸೇವೆಗಳು

16. “ಡಿಮಾಟ್” ಎನ್ನುವುದು
1. ಹಣ ಉಳಿತಾಯ ಮಾಡಲು ಗ್ರಾಮೀಣ ಜನರು ಅಂಚೆ ಕಚೇರಿಯಲ್ಲಿ ತೆರೆಯುವ ಖಾತೆ
2. ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವ ಸಲುವಾಗಿ ಬ್ಯಾಂಕಿನಲ್ಲಿ ತೆರೆಯುವ ಖಾತೆ
3. ಕೈಗಾರಿಕೊದ್ಯಮಿಗಳು ತಮ್ಮ ವ್ಯವಹಾರಕ್ಕಾಗಿ ಬ್ಯಾಂಕಿನಲ್ಲಿ ತೆರೆಯುವ ವಿಶೇಷ ಖಾತೆ
4. ಷೇರುಗಳನ್ನು ಮಾರಲು ಮತ್ತು ಕೊಳ್ಳಲು ಬ್ಯಾಂಕಿನಲ್ಲಿ ತೆರೆಯುವ ಖಾತೆ

17. ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಕೆಳಗಿನ ಹೆಳಿಕೆಗಳನ್ನು ಪರಿಗಣಿಸಿ.
ಎ. ಇದೊಂದು ಪರೋಕ್ಷ ತೆರಿಗೆ ಪದ್ಧತಿಯಾಗಿದೆ
ಬಿ. ಏಪ್ರಿಲ್ 01, 2017 ರಿಂದ ಇದು ಜಾರಿಗೆ ಬಂದಿದೆ.
ಸಿ. ಐದು ಹಂತಗಳ ತೆರಿಗೆಯ ಶ್ರೇಣಿಯನ್ನು ಹೊಂದಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು
1. ಎ ಮತ್ತು ಬಿ
2. ಬಿ ಮತ್ತು ಸಿ
3. ಎ ಮತ್ತು ಸಿ
4. ಎ, ಬಿ ಮತ್ತು ಸಿ

18. ಭಾರತದ ಹಣದ ಪೂರೈಕೆಯ ಪರಿಕಲ್ಪನೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನಿಡಲಾಗಿದೆ.
ಎ. ವಾಣಿಜ್ಯ ಬ್ಯಾಂಕುಗಳಲ್ಲಿರುವ ಮುದ್ದತ್ತು ಠೇವಣಿಗಳು
ಬಿ. ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು]
ಸಿ. ಅಂಚೆ ಕಚೇರಿಗಳಲ್ಲಿನ ಉಳಿತಾಯ ಠೇವಣಿಗಳು
ಡಿ. ಅಂಚೆ ಕಚೇರಿಗಳಲ್ಲಿರುವ ಒಟ್ಟು ಠೇವಣಿಗಳು
ಇ. ವಾಣಿಜ್ಯ ಬ್ಯಾಂಕುಗಳಲ್ಲಿರುವ ಬೇಡಿಕೆ ಠೇವಣಿಗಳು
ಮೇಲಿನವುಗಳಲ್ಲಿ ಹಣಕಾಸು, ನಿರ್ವಹಣೆಯ ದೃಷ್ಟಿಯಿಂದ ‘ಕಿರಿದಾದ’ ಮತ್ತು ‘ವಿಶಾಲ’ ಹಣ ವೆಂದು ಪರಿಗಣಿತವಾದ ಗುಂಪು ಕ್ರಮವಾಗಿದೆ.
1. ಎ, ಬಿ ಮತ್ತು ಸಿ, ಡಿ, ಇ
2. ಬಿ, ಸಿ, ಇ ಮತ್ತು ಎ, ಡಿ
3. ಎ, ಸಿ, ಇ ಮತ್ತು ಬಿ, ಡಿ
4. ಎ, ಡಿ, ಇ ಮತ್ತು ಬಿ, ಸಿ

19. ಕೊರತೆಯ ಹಣಕಾಸಿನ ಸೂತ್ರಗಳನ್ನು ಈ ಕೆಳಗೆ ನೀಡಲಾಗಿದೆ
ಎ. ಒಟ್ಟು ವರಮಾನ – ಒಟ್ಟು ವೆಚ್ಚ
ಬಿ. ವಿತ್ತೀಯ ಕೊರತೆ – ಬಡ್ಡಿ ಪಾವತಿ
ಸಿ. (ಕಂದಾಯ ವರಮಾನ + ಸಾಲೇತರ ಬಂಡವಾಳ ವರಮಾ) – ಒಟ್ಟು ವೆಚ್ಚ
ಮೇಲಿನ ಸೂತ್ರಗಳಿಗೆ ಸಂಬಂಧಿಸಿದ ಕೊರತೆಯ ಹಣಕಾಸಿನ ವಿಧಗಳು ಕ್ರಮವಾಗಿ
1. ಪ್ರಾಥಮಿಕ ಕೊರತೆ, ವಿತ್ತೀಯ ಕೊರತೆ, ಆಯವ್ಯಯ ಕೊರತೆ
2. ಆಯವ್ಯಯ ಕೊರತೆ, ಪ್ರಾಥಮಿಕ ಕೊರತೆ, ಆಯವ್ಯಯ ಕೊರತೆ
3. ವಿತೀಯ ಕೊರತೆ, ರೆವೆನ್ಯೂ ಕೊರತೆ, ಆಯವ್ಯಯ ಕೊರತೆ
4. ರೆವೆನ್ಯೂ ಕೊರತೆ, ಆಯವ್ಯಯ ಕೊರತೆ, ಪ್ರಾಥಮಿಕ ಕೊರತೆ

20. ಈ ಕೆಳಗಿನ ಕೋಷ್ಠಕವನ್ನು ಗಮನಿಸಿ
ವ್ಯಕ್ತಿಯ ಹೆಸರು                                ವೃತ್ತಿ
• ರಾಜನ್                    –                       ಬ್ಯಾಂಕ್ ವ್ಯವಸ್ಥಾಪಕರು
• ಶೀಲಾ                       –                        ತರಕಾರಿ ಮಾರುವವರು
• ಕೃಷ್ಣ                        –                       ಮಡಿಕೆ ಮಾಡುವವರು
• ಸಂತೋಷ್            –                         ವಕೀಲರು

ಈ ಮೇಲಿನ ಕೋಷ್ಠಕಕ್ಕೆ ಸಂಬಂಧಿಸಿದಂತೆ ಈ ಕೆಳಗಿನವರಲ್ಲಿ ಸಂಘಟಿತ ಕೆಲಸಗಾರರು
1. ರಾಜನ್ ಮತ್ತು ಶೀಲಾ
2. ಶೀಲಾ ಮತ್ತು ಕೃಷ್ಣ
3. ಕೃಷ್ಣ ಮತ್ತು ಸಂತೋಷ
4. ಸಂತೋಷ ಮತ್ತು ರಾಜನ್

21. ರಾಮಪ್ಪ ಪ್ರತಿ ವರ್ಷವೂ ತನ್ನ ಒಂದು ಎಕರೆ ಜಮೀನಿನಲ್ಲಿ 200 ಕೆ.ಜಿ ಗೋಧಿಯನ್ನು ಉತ್ಪಾದನೆ ಮಾಡುತ್ತಿದ್ದಾನೆ. ಒಂದು ವರ್ಷ ಅವನ ಮಗನು ಉತ್ಪಾದನೆಯಲ್ಲಿ ಅವನೊಂದಿಗೆ ಸೇರಿಕೊಂಡನು.
ಮೇಲಿನ ಸನ್ನಿವೇಶಕ್ಕೆ ಸಮಬಂಧಿಸಿದಂತೆ ಈ ಕೆಳಗಿನ ಯಾವ ಸಂದರ್ಭದಲ್ಲಿ ‘ ಮರೆಮಾಡಿದ ನಿರುದ್ಯೋಗ’ ಸನ್ನಿವೇಶ ಉಂಟಾಗುತ್ತದೆ.
1. ಉತ್ಪಾದನೆಯು 200 ಕೆ.ಜಿ. ಯೇ ಆಗಿದ್ದಾಗ
2. ಉತ್ಪಾದನೆಯು 400 ಕೆ. ಜಿ ಗೆ ಏರಿಕೆಯಾಗಿದೆ
3. ಉತ್ಪಾದನೆಯು 300 ಕೆ. ಜಿ ಗೆ ಏರಿಕೆಯಾಗಿದೆ
4. ಉತ್ಪಾದನೆಯು 500 ಕೆ. ಜಿ ಗೆ ಏರಿಕೆಯಾಗಿದೆ

22. ಭಾರತದ ಅತ್ಯಂತ ದಕ್ಷಿಣದ ತುದಿಯಾದ ‘ ಇಂದಿರಾ ಪಾಯಿಂಟ್’ ಇರುವ ಅಕ್ಷಾಂಶ
1. 6 ಡಿಗ್ರಿ- 45’ ಉತ್ತರ ಅಕ್ಷಾಂಶ
2. 8 ಡಿಗ್ರಿ – 4’ ಉತ್ತರ ಅಕ್ಷಾಂಶ
3. 37 ಡಿಗ್ರಿ – 6’ ಉತ್ತರ ಅಕ್ಷಾಂಶ
4. 7 ಡಿಗ್ರಿ – 4’ ಉತ್ತರ ಅಕ್ಷಾಂಶ

23. ಭಾರತದೊಂದಿಗೆ ಪೂರ್ವ ದಿಕ್ಕಿನಲ್ಲಿ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರಗಳು
1. ಮ್ಯಾನ್‍ಮಾರ್ ಮತ್ತು ನೇಪಾಲ
2. ಬಾಂಗ್ಲಾದೇಶ ಮತ್ತು ಭೂತಾನ್
3. ನೇಪಾಳ ಮತ್ತು ಭೂತಾನ್
4. ಬಾಂಗ್ಲಾದೇಶ ಮತ್ತು ಮ್ಯಾನ್‍ಮಾರ್

24. ಈ ಕೆಳಗಿನ ಗಿರಿಶಿಖರಗಳನ್ನು ಅವುಗಳ ಎತ್ತರದ ಆಧಾರದ ಮೇಲೆ ಇಳಿಕೆಯ ಕ್ರಮದಲ್ಲಿ ಜೋಡಿಸಿ
ಎ. ಮೌಂಟ್ ಎವರೆಸ್ಟ್
ಬಿ. ಮೌಂಟ್ ಕಾಂಚನಜುಂಗಾ
ಸಿ. ಮೌಂಟ್ ಎವರೆಸ್ಟ್
ಡಿ. ಮೌಂಟ್ ಗುರು ಶಿಖರ
1. ಡಿ, ಎ, ಬಿ, ಮತ್ತು ಸಿ
2. ಎ, ಸಿ, ಬಿ ಮತ್ತು ಡಿ
3. ಬಿ, ಸಿ, ಡಿ, ಮತ್ತು ಎ
4. ಡಿ, ಬಿ, ಎ ಮತ್ತು ಸಿ

25. ಕೆಳಗಿನವುಗಳನ್ನು ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಹಿಮಾಚಲ                           ಎ. ನಂದಾದೇವಿ
2. ಹಿಮಾದ್ರಿ                                ಬಿ. ಅಣೈ ಮುಡಿ
3. ಪಶ್ಚಿಮ ಘಟ್ಟಗಳು             ಸಿ. ಅರಮಕೊಂಡ
4. ಪೂರ್ವ ಘಟ್ಟಗಳು             ಡಿ. ಡಾರ್ಜಿಲಿಂಗ್
1      2        3          4
1. ಬಿ   ಎ       ಸಿ          ಡಿ
2. ಎ    ಸಿ        ಡಿ         ಬಿ
3. ಡಿ    ಎ        ಬಿ          ಸಿ
4. ಡಿ    ಬಿ       ಎ           ಸಿ

[ ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 3  ]

# ಉತ್ತರಗಳು :
1. 3. ಬಿ, ಡಿ, ಇ
2. 1. ಸಿ, ಡಿ, ಎಫ್ ಮತ್ತು ಎ, ಬಿ, ಸಿ
3. 1. ಎ, ಸಿ, ಇ ಮತ್ತು ಬಿ, ಡಿ, ಎಫ್
4. 4. ಎಸ್ ಬಂಗಾರಪ್ಪ, ಹೆಚ್.ಟಿ. ದೇವೆಗೌಡ, ಎಸ್.ಎಂ.ಕೃಷ್ಣ, ಬಿ.ಎಸ್ ಯಡಿಯೂರಪ್ಪ
5. .
6. 1. ಎ ಮತ್ತು ಆರ್ ಎರಡೂ ಸರಿ ಮತ್ತು ಆರ್, ಎ ನ ಸರಿಯಾದ ವಿವರಣೆಯಾಗಿದೆ
7. 1. ಹೇಳಿಕೆ ಎ ಸರಿ
8. 3. (ಎ) ಮತ್ತು (ಆರ್) ಎರಡೂ ಸರಿ ಹಾಗೂ ( ಆರ್, (ಎ) ನ ಸರಿಯಾದ ವಿವರಣೆಯಾಗಿದೆ.
9. 4. ನೇರ ಕ್ರಮ
10. 1. ಸಂಧ್ಯಾ ಸುರಕ್ಷಾ ಯೋಜನೆ
11. 1. ಶ್ರಮವನ್ನು ಶ್ರಮಿಕನಿಂದ ಬೇರ್ಪಡಿಸಬಹುದಾಗಿದೆ.
12. 2. ಜನಸಂಖ್ಯೆಯು ಕಡಿಮೆಯಾಗುತ್ತಾ ಹೋಗುತ್ತದೆ.
13. 3. ಸಂಘಟನೆಯ ಮಾಲಿಕತ್ವ
14. 1. ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ
15. 2. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಚಿತಿಮ ಸರಕು ಮತ್ತು ಸೇವೆಗಳು
16. 4. ಷೇರುಗಳನ್ನು ಮಾರಲು ಮತ್ತು ಕೊಳ್ಳಲು ಬ್ಯಾಂಕಿನಲ್ಲಿ ತೆರೆಯುವ ಖಾತೆ
17. 3. ಎ ಮತ್ತು ಸಿ
18. 2. ಬಿ, ಸಿ, ಇ ಮತ್ತು ಎ, ಡಿ
19. 2. ಆಯವ್ಯಯ ಕೊರತೆ, ಪ್ರಾಥಮಿಕ ಕೊರತೆ, ಆಯವ್ಯಯ ಕೊರತೆ
20. 4. ಸಂತೋಷ ಮತ್ತು ರಾಜನ್
21. 1. ಉತ್ಪಾದನೆಯು 200 ಕೆ.ಜಿ. ಯೇ ಆಗಿದ್ದಾಗ
22. 1. 6 ಡಿಗ್ರಿ- 45’ ಉತ್ತರ ಅಕ್ಷಾಂಶ
23. 3. ನೇಪಾಳ ಮತ್ತು ಭೂತಾನ್
24. 1. ಡಿ, ಎ, ಬಿ, ಮತ್ತು ಸಿ
25. 3. ಡಿ ಎ ಬಿ ಸಿ

Comments

No comments yet. Why don’t you start the discussion?

Leave a Reply

Your email address will not be published. Required fields are marked *