1. ಯುನೈಟೆಡ್ ಸ್ಟೇಟ್ಸ್ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ವಿಶ್ವದ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ ಯಾವ ದೇಶದ ಯಾವ ನಗರ ಮೊದಲ ಸ್ಥಾನದಲ್ಲಿದೆ..?
1) ನವದೆಹಲಿ, ಭಾರತ
2) ಲಾಹೋರ್, ಪಾಕಿಸ್ತಾನ
3) ಕಠ್ಮಂಡು, ನೇಪಾಳ
4) ಬೀಜಿಂಗ್, ಚೀನಾ
2. ಭ್ರಷ್ಟಾಚಾರದ ವಾಚ್‌ಡಾಗ್ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ “ಗ್ಲೋಬಲ್ ಭ್ರಷ್ಟಾಚಾರ ಮಾಪಕ (ಜಿಸಿಬಿ) -ಏಷ್ಯಾ 2020” ವರದಿಯ 10ನೇ ಆವೃತ್ತಿಯ ಪ್ರಕಾರ ಸಾರ್ವಜನಿಕ ಸೇವೆ ಪಡೆಯಲು ಹೆಚ್ಚು ಲಂಚ ಪಡೆಯುವ ಪಟ್ಟಿಯಲ್ಲಿ ಏಷ್ಯಾದ ಯಾವ ದೇಶ ಅಗ್ರಸ್ಥಾನದಲ್ಲಿದೆ..?
1) ಪಾಕಿಸ್ತಾನ
2) ಬಾಂಗ್ಲಾದೇಶ
3) ನೇಪಾಳ
4) ಭಾರತ
3. ಹೊಸ ಸಂಸತ್ ಭವನ ನಿರ್ಮಾಣದ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ಎಷ್ಟು ಜನ ಸದಸ್ಯರಿದ್ದಾರೆ..?
1) ಐದು
2) ನಾಲ್ಕು
3) ಎಂಟು
4) ಆರು
4. 11ನೇ ರಾಷ್ಟ್ರೀಯ ‘ಅಂಗ ದಾನ ದಿನಾಚರಣೆ’ (National Organ Donation Day )ಯ ಸಂದರ್ಭದಲ್ಲಿ ಈ ರಾಜ್ಯದಲ್ಲಿ ಮೊದಲ “ಅಂಗ ದಾನಿ ಸ್ಮಾರಕ” ವನ್ನು ಉದ್ಘಾಟಿಸಲಾಗಿದೆ..?
1) ಗುಜರಾತ್
2) ಮಹಾರಾಷ್ಟ್ರ
3) ರಾಜಸ್ಥಾನ
4) ಪಂಜಾಬ್
5. ದೀರ್ಘಾವಧಿಯ ಬಾಕಿ ಇರುವ ವಿದ್ಯುತ್ ಬಾಕಿ ಮರುಪಾವತಿಗಾಗಿ ಯಾವ ರಾಜ್ಯ ಸರ್ಕಾರವು ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆ 2020 ಅನ್ನು ಪ್ರಾರಂಭಿಸಿತು..?
1) ಉತ್ತರ ಪ್ರದೇಶ
2) ಉತ್ತರಾಖಂಡ
3) ಹಿಮಾಚಲ ಪ್ರದೇಶ
4) ಗೋವಾ
6. ನೇಪಾಳದ ಗೂರ್ಖಾ ಜಿಲ್ಲೆಯಲ್ಲಿ (ನವೆಂಬರ್ 27, 2020) ಭಾರತೀಯ ನೆರವಿನಡಿಯಲ್ಲಿ ನಿರ್ಮಿಸಲಾದ ಮೂರು ಶಾಲೆಗಳನ್ನು ಉದ್ಘಾಟನೆ ಮಾಡಿದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಯಾರು..?
1) ರಾಜೀವ್ ಗೌಬಾ
2) ಟಿ ಎಸ್ ತ್ರಿಮೂರ್ತಿ
3) ಅನಿಲ್ ಕುಮಾರ್ ಗುಪ್ತಾ
4) ಹರ್ಶ್ ವರ್ಧನ್ ಶ್ರೀಂಗ್ಲಾ
7. ಕರ್ನಾಟಕದ ಬೆಂಗಳೂರಿನ ಹೊರವಲಯದಲ್ಲಿರುವ ರಾಜಂಕುಂಟೆ ಬಳಿ ಬಂಜರು ಭೂಮಿಯಲ್ಲಿ ಪತ್ತೆಯಾದ ಸ್ಪೇರೋಥೆಕಾ ಬೆಂಗಳೂರು (Sphaerotheca Bengaluru ) ಯಾವ ಜೀವಿಯ ಹೊಸ ಪ್ರಭೇದ ..?
1) ಮೀನು
2) ಹಲ್ಲಿ
3) ಕಪ್ಪೆ
4) ಹಾವು
8. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ( NDDB – National Dairy Development Board) ಹಂಗಾಮಿ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
1) ದಿಲೀಪ್ ರಾಥ್
2) ಟಿ ನಂದ ಕುಮಾರ್
3) ವರ್ಷಾ ಜೋಶಿ
4) ರೇಣು ದೇವಿ
9. ಸಂದೀಪ್ ಕಟಾರಿಯಾ (ಜಾಗತಿಕ ಸಿಇಒ ಆಗಿರುವ ಮೊದಲ ಭಾರತೀಯ) ಸಿಇಒ ಆಗಿರುವ ಸಂಸ್ಥೆ ಯಾವುದು..?
1) ರೆಡ್ ಚೀಫ್
2) ಪಾರ್ಲೆ ಆಗ್ರೋ
3) ಬಾಟಾ
4) ಪತಂಜಲಿ
10. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬಿಡುಗಡೆ ಮಾಡಿದ “ವಿಶ್ವ ಮಲೇರಿಯಾ ವರದಿ 2020” ಪ್ರಕಾರ ಆಗ್ನೇಯ ಏಷ್ಯಾದಲ್ಲಿ ಮಲೇರಿಯಾ ಪ್ರಕರಣಗಳು 2000 ರಲ್ಲಿ 20 ದಶಲಕ್ಷದಿಂದ 2019 ರಲ್ಲಿ ಸುಮಾರು 5.6 ದಶಲಕ್ಷಕ್ಕೆ ಇಳಿದ ದೇಶ ಯಾವುದು..?
1) ಬಾಂಗ್ಲಾದೇಶ
2) ಭಾರತ
3) ಇಂಡೋನೇಷ್ಯಾ
4) ಮಲೇಷ್ಯಾ
# ಉತ್ತರಗಳು :
1. 2) ಲಾಹೋರ್, ಪಾಕಿಸ್ತಾನ
2. 4) ಭಾರತ
3. 1) ಐದು
4. 3) ರಾಜಸ್ಥಾನ
5. 4) ಗೋವಾ
6. 4) ಹರ್ಷ ವರ್ಧನ್ ಶ್ರೀಂಗ್ಲಾ
7. 3) ಕಪ್ಪೆ
8. 3) ವರ್ಷಾ ಜೋಶಿ
9. 3) ಬಾಟಾ
10. 2) ಭಾರತ