1. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು..?
2. ಕ್ಲೋರಿನ್ ಒಂದು ಮೂವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು..?
3. ಬಾಂಗ್ಡಾ ಇದು ಯಾವ ರಾಜ್ಯದ ಜಾನಪದ ನೃತ್ಯ ಶೈಲಿಯಾಗಿದೆ..?
4. ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮ ಯಾವ ಭಾಷೆಯ ಕವಯಿತ್ರಿ..?
5. ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕ ಯಾರು..?
6. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಪ್ರಥಮ ಜಾರಿಗೆಯಾಗಿದ್ದು ಯಾವಾಗ..?
7. 1994ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ..?
8. ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು..?
9. ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾದ ವರ್ಷ ಯಾವುದು..?
10. ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು..?
# ಉತ್ತರಗಳು :
1. ಎಂ.ಪಿ.ಗಣೇಶ್
2. ಹಂಫ್ರಿ ಡೇವಿ
3. ಪಂಜಾಬ್
4. ಹಿಂದಿ
5. ಟಿ.ಎನ್.ವೆಂಕಣ್ಣಯ್ಯ
6. 1971ರಲ್ಲಿ
7. ತಲೆದಂಡ
8. ಪೋಟೋಸೆಲ್
9. 1911
10. ನಿಂಬಸ್ – 7