( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1) ಹರಿಹರ, ರಾಘವಾಂಕರು ಯಾವ ರಾಜರ ಕಾಲದವರು..?
2) ಅಮುಕ್ತ ಮೌಲ್ಯ’ ಎಂಬ ಗ್ರಂಥ ರಚಿಸಿದ ವಿಜಯನಗರದ ದೊರೆ ಯಾರು..?
3) 1792 ರಲ್ಲಿ ನಡೆದ ಮೂರನೇ ಮೈಸೂರು ಯುದ್ಧದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದವರು ಯಾರು..?
4) ಕನ್ನಡದ ಮೊದಲ ವೈದ್ಯಗ್ರಂಥ ‘ಗೋವೈದ್ಯ’ ಕರ್ತೃ ಯಾರು..?
5) ಶ್ರವಣಬೆಳಗೊಳದ ಗೋಮಟೇಶ್ವರ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿತು..?
6) ಗಾಂದೀಜಿಯವರು ಹೊರತರುತ್ತಿದ್ದ ಹರಿಜನ ಪತ್ರಿಕೆಯನ್ನು ಕನ್ನಡದಲ್ಲಿ ಪ್ರಕಟಿಸಿದವರು ಯಾರು..?
7) ‘ಸಮುದ್ರಾಧೀಶ್ವರ’ ಎಂಬ ಬಿರುದು ಹೊಂದಿದ್ದ ವಿಜನಗರ ಸಾಮ್ರಾಜ್ಯದ ಅರಸ ಯಾರು..?
8) ಮೇಲುಕೋಟೆಯ ಚೆಲುವರಾಯ ಸ್ವಾಮಿ ದೇವರಿಗೆ ರತ್ನ ಖಚಿತ ಕೀರಿಟವಾದ ರಾಜಮುಡಿಯನ್ನು ನೀಡಿದವರು ಯಾರು..?
9) ಕುಮಾರವ್ಯಾಸ ಎಂಬ ಕವಿಯು ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು..?
10) ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂದಿತು..?
# ಉತ್ತರಗಳು :
1. ಹೊಯ್ಸಳರು
2. ಕೃಷ್ಣದೇವರಾಯ
3. ಲಾರ್ಡ್ ಕಾರ್ನ್ವಾಲಿಸ್
4. ಕೀರ್ತಿವರ್ಮ
5. ಗಂಗರು
6. ಸಿದ್ದವನಹಳ್ಳಿ ಕೃಷ್ಣಶರ್ಮ
7. ಇಮ್ಮಡಿ ಬುಕ್ಕ
8. ಮೈಸೂರಿನ ರಾಜ ಒಡೆಯರ್
9. ವಿಜಯನಗರದ ದೊರೆಗಳು
10. 16 ನೇ ಶತಮಾನ