ಚಿತ್ರದುರ್ಗ ಕೋಟೆಯ ಒಳಗೆ ಏಳು ಬೆಟ್ಟಗಳು ಅಂತರ್ಗತವಾಗಿವೆ. ಏಳುಸುತ್ತಿನ ಈ ಕೋಟೆಯ 3 ಸುತ್ತನ್ನು ನೆಲದ ಮೇಲೂ ಇನ್ನುಳಿದ 4 ಸುತ್ತನ್ನು ಬೆಟ್ಟದ ಮೇಲೂ ನಿರ್ಮಾಣ ಮಾಡಲಾಗಿದೆ. ಈ ಕೋಟೆಗೆ ಒಟ್ಟು 19 ಬಾಗಿಲುಗಳು, 35 ಗುಪ್ತಮಾರ್ಗ, 35 ದಿಡ್ಡಿ ಬಾಗಿಲುಗಳು ಮತ್ತು 4 ಕಳ್ಳಬಾಗಿಲುಗಳೂ ಇವೆ.
ಪೂರ್ವದಿಕ್ಕಿನಿಂದ ಹೊರಟು ಬೆಟ್ಟದ ಅರಮನೆ ಪ್ರದೇಶ ತಲುಪಲು 9 ಬಾಗಿಲುಗಳನ್ನು ದಾಟಬೇಕು. ಈ ಪೂರ್ವದಿಕ್ಕಿನ ಮುಖ್ಯವಾದ ದ್ವಾರವನ್ನು ರಂಗಯ್ಯನ ಬಾಗಿಲು ಎಂದೂ ಸಿರಾದರ್ವಾಜ ಎಂದೂ ಕರೆಯುತ್ತಾರೆ. ಮೊದಲನೆಯ ಸುತ್ತಿನ ಕೋಟೆಯನ್ನು ದಾಟಿದರೆ ಉತ್ಸವಾಂಬಾ ದೇಗುಲ ದೊರೆಯುತ್ತದೆ.
ಇದರ ಪಕ್ಕ ಇರುವ ಬಾಗಿಲು ಗಾರೆಬಾಗಿಲು. ಮೂರನೆಯ ಸುತ್ತಿನ ಬಾಗಿಲಿನ ಹೆಸರು ಕಾಮನ ಬಾಗಿಲು. ಇಲ್ಲಿಯೇ ಎಣ್ಣೆಕೊಳ ಹಾಗೂ ಗವಿಯಿರುವುದು. ಇಲ್ಲಿಂದ ದಕ್ಷಿಣಕ್ಕೆ 4 ದೊಡ್ಡ ಬೀಸುವ ಕಲ್ಲುಗಳಿವೆ. ಮದ್ದನ್ನು ಅರೆಯಲು ಇದನ್ನು ಆನೆಗಳ ಸಹಾಯದಿಂದ ಉಪಯೋಗಿಸುತ್ತಿದ್ದರು ಎನ್ನುವುದು ಐತಿಹ್ಯ.
ನಾಲ್ಕನೆಯ ಬಾಗಿಲು ಬಳಿಯಿರುವ ಕೊತ್ತಳವನ್ನು ವೀರಭದ್ರ ಕೊತ್ತಳ ಎನ್ನುತ್ತಾರೆ. ಇದನ್ನು ದಾಟಿ ಮುಂದೆ ನೆಡೆದರೆ 5ನೆಯ ಬಾಗಿಲು ಸಿಗುತ್ತದೆ. 5 ನೆಯ ಬಾಗಿಲು ಹಾಗೂ 6ನೆಯ ಬಾಗಿಲುಗಳು ಸುಲಭವಾಗಿ ಗೋಚರವಾಗದಂತೆ ನಿರ್ಮಿಸಲಾಗಿದೆ.
ಇದರ ಬಳಿ ಗಣೇಶನ ಗುಡಿಯಿದೆ. 7ನೇ ಬಾಗಿಲನ್ನು ಪ್ರವೇಶಿಸಿದರೆ ಏಕನಾಥೇಶ್ವರಿ ದೇವಾಲಯ ಸಿಗುತ್ತದೆ. ಕಲ್ಲಿನ ಆಯತಾಕಾರದ ಕಣಜವೂ ಇದೆ. 8ನೇ ಬಾಗಿಲು ದಾಟಿದರೆ ವಿಶಾಲವಾದ ಬೃಹನ್ಮಠ, ಸಂಪಿಗೆ ಸಿದ್ದೇಶ್ವರ ದೇವಾಲಯ, ಹಿಡಿಂಬೇಶ್ವರ ದೇವಾಲಯ, ತುಪ್ಪದ ಕೊಳ, ದ್ವಾರ ಗೋಪುರ, ಉಯ್ಯಾಲೆ ಕಂಬ, ದೀಪಸ್ಥಂಭಗಳು ದೊರಕುತ್ತವೆ. ಚಿತ್ರದುರ್ಗದ ಬಹಳ ಮುಖ್ಯವಾದ ರಚನೆಗಳಿವು.
9ನೆಯ ಬಾಗಿಲನ್ನು ದಾಟಿದರೆ ಗೋಪಾಲಕೃಷ್ಣ ದೇಗುಲ ಸಿಗುತ್ತದೆ. ಇಲ್ಲಿ ಮದ್ದಿನಮನೆ, ಗುಪ್ತಗುಹೆ, ಗೋಪಾಲಸ್ವಾಮಿ ಹೊಂಡ, ಅರಮನೆ ಬಯಲುಗಳು ಇವೆ. ಅರಮನೆಯಂತಹ ಅನೇಕ ದೊಡ್ಡ ದೊಡ್ಡ ಕಟ್ಟಡಗಳು ಇಲ್ಲಿವೆ. ಇವುಗಳನ್ನು ಮಣ್ಣಿನಿಂದ ಕಟ್ಟಲಾಗಿದೆ. ಇಲ್ಲಿ ಭಾರೀ ಕಣಜಗಳು ಹಾಗೂ ಮುದ್ರಾಶಾಲೆಗಳಿವೆ.
ಇದು ಚಿತ್ರದುರ್ಗದ ಆತ್ಮಪ್ರದೇಶವಾಗಿದೆ. ಈ ಪ್ರದೇಶದ ಸುತ್ತಲೂ ಬೆಟ್ಟಗಳಿರುವುದರಿಂದ ಸ್ವಾಭಾವಿಕವಾದ ರಕ್ಷಣೆ ಇದ್ದೇ ಇದೆ. ಆದರೂ ಸುತ್ತಲೂ ಇರುವ ಬೆಟ್ಟಗಳ ಮೇಲೆ ಬತೇರಿಗಳನ್ನು ನಿರ್ಮಿಸಿ ಯಾವ ಶತ್ರುವೂ ಒಳನುಸುಳದಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನೆಲ್ಲಿಕಾಯಿ ಸಿದ್ಧೇಶ್ವರ ಬತೇರಿ, ಝಂಡಾ ಬತೇರಿ, ಲಾಲ್ ಬತೇರಿ, ತುಪ್ಪದ ಕೊಳದ ಬತೇರಿ, ಕಹಳೆ ಬತೇರಿ, ಬಸವನ ಬತೇರಿ ಮುಖ್ಯವಾದ ಬತೇರಿಗಳಾಗಿವೆ. ಚಿತ್ರದುರ್ಗದ ಪಾಳೆಯಗಾರರು, ಈ ಕೋಟೆಯನ್ನು ಅತ್ಯಂತ ಸದೃಢವಾಗಿ ಕಟ್ಟಿ ಮೆರೆದರು.
ದೊಡ್ಡ ದೊಡ್ಡ ಭಾರೀ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ಈ ಕೋಟೆಯನ್ನು ನಿರ್ಮಿಸಲಾಗಿದೆ. 14 ದೇವಾಲಯಗಳು ಈ ಕೋಟೆಯಲ್ಲಿವೆ. ಈ ಕೋಟೆಯ ಎತ್ತರ 15ರಿಂದ 40 ಅಡಿಗಳಲ್ಲಿ ಇವೆ. ಕೆಲವು ಕಡೆ ಇಟ್ಟಿಗೆ ಗೋಡೆಗಳನ್ನು ಈ ಕೋಟೆ ಗೋಡೆಯ ಮೇಲೆ ಕಟ್ಟಲಾಗಿದೆ. ಹೊರಗಿನ 3 ಸುತ್ತು ಗೋಡೆಗಳ ಸುತ್ತ ಕಂದಕಗಳಿವೆ.
# ಕೋಟೆಯ ಇತಿಹಾಸ :
ಕೋಟೆಯಲ್ಲಿ ನಡೆದ ಯುದ್ಧದಲ್ಲಿ ಹೈದರಾಲಿಯು ವೀರ ಮದಕರಿ ನಾಯಕನನ್ನು ಸೋಲಿಸಿದ. ಚಿತ್ರದುರ್ಗ ಫೋರ್ಟ್ ಟಿಪ್ಪುವಿನ ಸಾವನದುರ್ಗದ ಕೋಟೆ ಇವುಗಳಲ್ಲಿ ಕೆಲವು. ಈ ಕೋಟೆಯು ಹಂಪಿಯಿಂದ 120 ಕಿ.ಮೀ ಹಾಗು ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿದೆ.ಕೋಟೆಯ ಸುತ್ತ ಚಾಲುಕ್ಯರ ಶಾಸನಗಳನ್ನು ನೋಡಬಹುದು.
ತಿಮ್ಮಪ್ಪ ನಾಯಕ ಎಂಬ ನಾಯಕ ವರ್ಗದವನು ಮೊದಲು ಚಿತ್ರದುರ್ಗದ ಕೋಟೆಯನ್ನು ಆಳುತ್ತಿದ್ದ.ಇವರು ಚಿತ್ರದುರ್ಗದ ಜೊತೆ ಅದ್ರ ಸುತ್ತ ಮುತ್ತ ಪ್ರದೇಶಗಳಾದ ದಾವಣಗೆರೆ,ಜಗ್ಲೂರು,ಹರಿಹರ ಪ್ರದೇಶಗಳ ಉಸ್ತುವಾರಿ ವಹಿಸಿದ್ದರು.ಇವರ ನಂತರ ಇವರ ಮಗನಾದ ಮದಕರಿ ನಾಯಕ ಕೋಟೆಯನ್ನು ಆಳುತ್ತಿದ್ದ.ಇವರ ನಂತರ ಭರಮಪ್ಪ ನಾಯಕ ತುಂಬ ಹೆಸರುವಾಸಿಯಾದ.ಇವನ ಸಮಯದಲ್ಲಿ ಅನೇಕ ಕೋಟೆಗಳು,ಅರಮನೆಗಳು,ದೇವಾಲಯಗಳು ಕಟ್ಟಲಾಗಿತ್ತು.ಮೈಸೂರಿನ ಹೈದರಾಲಿ ಕೋಟೆಯನ್ನು ಅನೇಕ ಬಾರಿ ಬಂಧಿಸಿದ್ದ.ಮೊದಲು 1760 ರಲ್ಲಿ,ಎರಡನೆ ಬಾರಿ 1770 ರಲ್ಲಿ ಹಾಗು ಕೊನೆಯದಾಗಿ 1779 ರಲ್ಲಿ ಬಂಧಿಸಿ ಮದಕರಿ ನಾಯಕನನ್ನು ಸೋಲಿಸಿದ.ಇದಾದ ನಂತರ ಕೋಟೆಯ ಜವಾಬ್ದಾರಿಯನ್ನು ಮೆಸೂರಿನ ಸರ್ಕಾರ ವಹಿಸಿತು.
# ದಂತ ಕಥೆ :
ಜಾನಪದ ದಂತಕಥೆ ಮಹಾಭಾರತ ಕೋಟೆಯಿಂದ ಸುತ್ತಮುತ್ತ ಬೆಟ್ಟಗಳನ್ನು ಸಂಪರ್ಕಿಸುತ್ತದೆ.ಇದು ಹಿಡಿಂಬಸುರ ಎಂಬ ನರಭಕ್ಷಕ ದೈತ್ಯ ಚಿತ್ರದುರ್ಗ ಬೆಟ್ಟದ ಮೇಲೆ ವಾಸಿಸುತ್ತಿದ್ದರು.ಪಾಂಡವರು ತಮ್ಮ ಅಗ್ನಾತವಾಸದ ಸಮಯದಲ್ಲಿ ಅವರ ತಾಯಿ ಕುಂತಿಯ ಜೊತೆ ಬಂದಾಗ ಭೀಮ ಮಧು ನಡೆಸಿದ ದ್ವಂದ್ವ ಯುದ್ಧದ ಸಮಯದಲ್ಲಿಮಧು ಭೀಮ ಹತನಾಗುತ್ತಾನೆ ಹಾಗು ಶಾಂತಿ ಪ್ರದೇಷಕ್ಕೆ ಮರಳಿದರು.
# ಚಲನ ಚಿತ್ರಗಳು :
ಅನೇಕ ಕನ್ನಡ ಸಿನಿಮಗಳ ಚಿತ್ರೀಕರಣ ಇಲ್ಲಿ ನಡೆದಿದೆ.ಈ ಕೋಟೆಯಲ್ಲಿ ಚಿತ್ರೀಕರಿಸಿದ ಪ್ರಮುಖ ಚಿತ್ರಗಳು ನಾಗರ ಹಾವು ಹಾಗು ಹಂಸೆ ಗೀತೆ.ವೀರ ಮದಕರಿ ನಾಯಕ ಎಂಬ ಚಿತ್ರದ ಮೂಲಕ ನಾಯಕರ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು.ವರದಿಯ ಉತ್ಪಾದನೆಯಲ್ಲಿ ಇನ್ನೊಂದು ಚಲನಚಿತ್ರ ನಾಯಕ ಸಾಮ್ರಾಜ್ಯದ ಕೊನೆಯ ದೊರೆ ಬಗ್ಗೆ, ವೀರ ಮದಕರಿ ನಾಯಕ ಆಗಿದೆ.
# ಕನ್ನಡಿಗರ ಹೆಮ್ಮೆಯ ಕೋಟೆ :
ಚಿತ್ರದುರ್ಗದ ಕೋಟೆ ವೇದಾವತಿ ನದಿಯಿಂದ ರೂಪುಗೊಂಡಿದೆ. ಕಣಿವೆಯ ಮಧ್ಯದಲ್ಲಿ ಇರುತ್ತದೆ. ಕೋಟೆಯ ವಾಯವ್ಯದಲ್ಲಿ ತುಂಗಭಧ್ರ ನದಿ ಹರಿಯುತ್ತದೆ. ಬೃಹತ್ ಕಲ್ಲು, ಬೆಟ್ಟಗಳು ಹಾಗು ದೃಶ್ಯ ಕಣಿವೆಗಳು ಸುತ್ತಮುತ್ತಲಿನಿಂದ ಕಂಡು ಬರುತ್ತವೆ. ಬೆಟ್ಟದ ಮೇಲೆ ಕೋಟೆಯ ಪ್ರಮುಖ ಭಾಗವಾಗಿದೆ.
ಈ ಕೋಟೆಯನ್ನು ಕಟ್ಟಲು ರಾಷ್ಟ್ರಕೂಟರು,ಚಾಲುಕ್ಯರು ಹಾಗು ನಾಯಕರು ಸಹಾಯ ಮಾಡಿದ್ದಾರೆ. ನಾಯಕರು ಮುಖ್ಯವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಂತರ ಹೈದರಾಲಿ ಹಾಗು ಅವನ ಮಗ ಟಿಪ್ಪು ಸುಲ್ತಾನ ಕೋಟೆಯ ಆಳ್ವಿಕೆಯನ್ನು ನಡೆಸುತ್ತಿದ್ದರು.ಈ ಕೋಟೆಯನ್ನು ಏಳು ಗೋಡೆಗಳ ನಡುವೆ ಕಟ್ಟಲಾಗಿದೆ.ಈ ಕೋಟೆಯಲ್ಲಿ ಅನೇಕ ಅನುಕೂಲಗಳನ್ನು ಸಹ ಮಾಡಲಾಗಿದೆ.ಇಲ್ಲಿ ಮಸೀದಿ,ಗೋಧಾಮು ಹಾಗು ಹಳೆ ಕಾಲದ ದೇವಸ್ಥಾನಗಳಿವೆ.ಮೇಲಿನ ಕೋಟೆಯಲ್ಲಿ ಹದಿನೆಂಟು ದೇವಸ್ಥಾನಗಳಿವೆ ಹಾಗು ಕೆಳಗಿನ ಕೋಟೆಯಲಿ ಒಂದು ದೊಡ್ದ ದೇವಸ್ಥಾನವಿದೆ.ಹಿಡಿಂಬೇಶ್ವರ ದೇವಸ್ಥಾನ ತುಂಬ ಪ್ರಮುಖವಾದ ಹೆಸರು ಹೊಂದಿದೆ.ಹೈದರಾಲಿಯ ಸಮಯದಲ್ಲಿ ಮಸೀದಿಯನ್ನು ಕಟ್ಟಲಾಗಿತ್ತು.
ಕನ್ನಡದಲ್ಲಿ ಈ ಕೋಟೆಯನ್ನು ಕಲ್ಲಿನ ಕೋಟೆ,ಉಕ್ಕಿನ ಕೋಟೆ ಹಾಗು ಏಳು ಸುತ್ತಿನ ಕೋಟೆ ಎಂದು ಸಹ ಕರೆಯುತ್ತಾರೆ.ಕೋಟೆಯ ವಾಯುವ್ಯ ದಿಕ್ಕಿನಲ್ಲಿ ತುಂಗಭದ್ರ ನದಿ ಹರಿಯುತ್ತದೆ.ಇದು ಒಳ್ಳೆಯ ವೀಕ್ಷಣ ವಿಹಾರ ಸ್ಥಳ ಹಾಗು ದೊಡ್ದ ದೊಡ್ಡ ಕಲ್ಲುಗಳು ಮತ್ತು ಬಂಡೆಗಳನ್ನು ನೋಡಬಹುದು.ಈ ಕೋಟೆಯ ಎತ್ತರದ ಸ್ಥಳ ಅಲ್ಲಿಂದ 5 ಕಿ.ಮೀ ದೂರ ಹಾಗು ದಕ್ಷಿಣ ದಿಕ್ಕಿನಲ್ಲಿರುವ ಜೋಗಿಮಟ್ಟಿಯಲ್ಲಿದೆ.
# ಓಬವ್ವನ ಶೌರ್ಯ :
ಈ ಕೋಟೆಯಲ್ಲಿ ನಡೆದ ಮುಖ್ಯವಾದ ಘಟನೆ ಕೆಚ್ಚೆದೆಯ ಮಹಿಳೆಯಾದ ಓಬವ್ವನ ಘಟನೆ.ಇವಳು ಮಹಿಳಾ ಹೋರಾಟಗಾರ್ತಿಯಾಗಿದ್ದಳು.[5]ಒಂದು ದಿನ ಊಟದ ಸಮಯದಲ್ಲಿ ಮದ್ದ ಹನುಮಪ್ಪ ಎಂಬ ಸೈನಿಕನ ಹೆಂಡತಿಯಾದ ಓಬವ್ವ ಗೋಪುರವನ್ನು ಕಾವಲು ಕಾಯುತ್ತಿದ್ದಳು.ಅವಳು ಕೋಟೆಯ ಬಿರುಕು ಆರಂಭವನ್ನು ಕಾವಲು ಕಾಯುತ್ತಿದ್ದಳು.
ಇಲ್ಲಿ ಒಬ್ಬರು ಮಾತ್ರ ರಹಸ್ಯವಾಗಿ ಬರುವಷ್ಟು ಸ್ಥಳವಿತ್ತು.ಇವಳ ಸಾಹಸ ಇಂದು ಒಂದು ಇತಿಹಾಸವಾಗಿ ಜನರ ಮನಸೆಳೆದಿದೆ.ಓಬ್ಬವ್ವ ನೀರು ತರಲು ಹೋದಾಗ ಕೆಲವು ಶತ್ರು ಸೈನಿಕರ ಕೆಳ ಧ್ವನಿಯಲ್ಲಿ ಮಾತಾಡುತ್ತಿರುವುದು ಅವಳಿಗೆ ಕೇಳಿಸಿತು.ಇದನ್ನು ಅರಿತ ಅವಳು ತಕ್ಷಣ ರಹಸ್ಯ ದಾರಿಯಿಂದ ಯಾರಿಗೂ ಕಾಣದ ಹಾಗೆ ಮರೆಯಾದಳು,ಮರೆಯಾಗಿ ಒಂದು ಒನಕೆಯನ್ನು ಕೈಯಲ್ಲಿ ಹಿದಿದು ನಿಂತಳು.ಈ ಸಂಧರ್ಭದಲ್ಲಿ ಅವಳು ಅನೇಕ ಸೈನಿಕರನ್ನು ಸಾಯಿಸಿದಳು.
ಮದ್ದ ಹನುಮಪ್ಪನು ಊಟ ಮುಗಿಸಿ ಬರುವಷ್ಟರಲ್ಲಿ ಅನೇಕ ಶತ್ರು ಸೈನಿಕರನ್ನು ಕೊಂದು ರಕ್ತದ ಒಣಕೆಯನ್ನು ಕೈಯಲ್ಲಿ ಹಿಡಿದು ಸತ್ತ ಹೆಣಗಳ ಸುತ್ತ ನಿಂತಿದ್ದಳು.ಮದ್ದಪ್ಪ ನಾಯಕ ತುತ್ತೂರಿ ಊದಿ ಎಲ್ಲ ಸೈನಿಕರನ್ನು ಕರೆದನು ನಂತರ ಉಳಿದ ಶತ್ರು ಸೈನಿಕರನ್ನು ಕೊಲ್ಲಲಾರಂಭಿಸಿದರು.ಇವಳ ಈ ಸಾಹಸ ಆ ದಿನ ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ಸೈನಿಕರ ದಾಳಿಯಿಂದ ನಿಷೇಧಿಸಿತು.
ಅವಳ ಈ ಸಾಹಸಕ್ಕೆ ಚಿತ್ರದುರ್ಗದ ಅಧಿಕಾರಿಗಳ ಕಛೇರಿಯ ಮುಂದೆ ಅವಳ ಪ್ರಭಾವಶಾಲಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.ಚಿತ್ರದುರ್ಗದ ಕ್ರೀಡಾಂಗಣಕ್ಕೆ ಅವಳ ಹೆಸರು ಹಿಡಲಾಗಿತ್ತು.ಇವಳ ಈ ಸಾಹಸ ಇತಿಹಾಸದಲ್ಲಿ ಒಣಕೆ ಓಬವ್ವನ ಘಟನೆಯೆಂದು ಹೆಸರುವಾಸಿಯಾಗಿದೆ ಹಾಗು ಆ ರಹಸ್ಯ ಸ್ಥಳಕ್ಕೆ ಒನಕೆ ಕಿಂಡಿ ಎಂದು ಕರೆಯಲಾಗಿದೆ.